Oppanna.com

ಗ್ರೇಶಿದ್ದರಲ್ಲಿ ಆದ ತಪ್ಪು

ಬರದೋರು :   ಗೋಪಾಲಣ್ಣ    on   27/06/2011    19 ಒಪ್ಪಂಗೊ

ಗೋಪಾಲಣ್ಣ

ತಿಮ್ಮಣ್ಣ ಸಣ್ಣ ಪ್ರಾಯದವ.

ಅವಂಗೆ ನಾಲ್ಕು ಜನ ತಮ್ಮಂದಿರು.

ಅವನ ಅಪ್ಪ ದೊಡ್ಡ ಆಸ್ತಿವಂತ.ಆಸ್ತಿ ಇಪ್ಪವಕ್ಕೆ ವಿರೋಧಿಗಳೂ ಹೆಚ್ಚು.ಕೆಲವು ಜನ ಅವನ ಕೆಮಿ ತುಂಬಿಸಿದವು.”ನೋಡು ತಿಮ್ಮಣ್ಣ,ನಿನ್ನ ತಮ್ಮಂದಿರು ಸಣ್ಣವು-ನೀನು ಈಗ ಕೆಲಸ ಮಾಡೆಕ್ಕು,ತಮ್ಮಂದಿರು ಕಲ್ತು ಮೇಲೆ  ಹೋಕು,ಮತ್ತೆ ನಿನಗೆ ಎಂತ ಸಿಕ್ಕುಗು ಮಣ್ಣಾಂಗಟ್ಟಿ?ನೀನು ಮಣ್ಣೇ ತಿನ್ನೆಕ್ಕಷ್ಟೆ.”

“ಆನು ಎಂತ ಮಾಡೆಕ್ಕು?”ತಿಮ್ಮಣ್ಣ ಕೇಳಿದ.

“ನೀನು ಸೀದಾ ಸೀದಾ ಕೇಳು ಅಪ್ಪನ ಹತ್ತರೆ-ನಿನ್ನ ಪಾಲು ತೆಕ್ಕೊ,ಮತ್ತೆ ನೀನೇ  ರಾಜ.”

ಆಗದ್ದವು ಹಾಕಿದ ವಿಷದ ಬಿತ್ತು ಅವನ ಮಂಡೆಲಿ ಬೆಳೆದತ್ತು.

ಸುರು ಆತು ಅಸಹಕಾರ.

ಅಪ್ಪ ಹೇಳಿದ್ದರ ಮಾಡುಲಿಲ್ಲೆ,ಅವು ಹೇಳಿದ ಕಡೆಂಗೆ ಹೋಪಲೆ ಇಲ್ಲೆ.ತೋಟಕ್ಕೆ ಇಳಿವಲೇ ಇಲ್ಲೆ. ಎಲ್ಲಿಗಾದರೂ ತಿರುಗಲೆ ಹೋಪದು.ಮನೆಂದ ಬೇಕಾಷ್ಟು ಪೈಸೆ ತೆಕ್ಕೊಂಬದು.

ಮದುವೆ ಮಾಡಿರೆ ಮಗ ಸರಿ ಅಕ್ಕು ಹೇಳಿ ತಿಮ್ಮಣ್ಣನ ಅಪ್ಪ ಶಂಕರ ಭಟ್ರಿಂಗೆ ಊರವರ ಬಿಟ್ಟಿ ಸಲಹೆ ಸಿಕ್ಕಿತ್ತು.

ಸರಿ,ಕೂಸು ಹುಡುಕ್ಕಿದವು.ಪಾಪದವರ ಮನೆಯ ಕೂಸು ಶಾರದೆ ತಿಮ್ಮಣ್ಣನ ಕೈ ಹಿಡುದತ್ತು.ತಿಮ್ಮಣ್ಣ ರಜಾ ಸರಿ ಆದ-ಹೇಳಿ ಎಲ್ಲರಿಂಗೂ ಕಂಡತ್ತು. ಆದರೆ ಅದು ಬರೀ ಆರು ತಿಂಗಳು ಮಾತ್ರ.

ಮತ್ತೆ ಅದೇ ಕ್ರಮ ಸುರು ಆತು.ಅಪ್ಪ,ಅಮ್ಮ ಇದು ಸೊಸೆಯದ್ದೇ ತಪ್ಪು ಹೇಳಿ ಗ್ರೇಶಿದವು.ಶಾರದೆಯ ಜೀವನವೂ ಕಷ್ಟ ಅಪ್ಪಲೆ ಸುರು ಆತು.ಅದೂ ತಿಮ್ಮಣ್ಣನ ಮಾತಿಂಗೆ ತಾಳ ಹಾಕಿತ್ತು.ಸರಿ,ಮನೆ ಒಂದಾಗಿ ಒಳುದ್ದಿಲ್ಲೆ.

ಶಂಕರ ಭಟ್ರು ಮನಸ್ಸಿಲ್ಲದ್ದ ಮನಸ್ಸಿಂದ ಮಗಂಗೆ ಪಾಲು ಕೊಟ್ಟವು.ಮೋಸ ಮಾಡಿದ್ದವಿಲ್ಲೆ.ಸರಿಯಾಗಿ ಮೂರು ಎಕ್ರೆ ತೋಟ ,ಕಾಡು,ಗುಡ್ಡೆ ಎಲ್ಲಾ ಕೊಟ್ಟವು.ಒಂದು ಮನೆ ಕಟ್ಟಿಸಿ ಕೊಟ್ಟವು.

ತಿಮ್ಮಣ್ಣ ,ಶಾರದೆಯ ಹೊಸ ಸಂಸಾರ ಸುರು ಆತು.

ತೋಟದ ಕೆಲಸಲ್ಲಿ ತಿಮ್ಮಣ್ಣಂಗೆ ಶ್ರದ್ಧೆ ಕಮ್ಮಿ.ಶಾರದೆಯ ಒತ್ತಾಯಕ್ಕೆ ಮಾಡಿಕೊಂಡಿತ್ತಿದ್ದ.ಆಳುಗೊ ಇತ್ತಿದ್ದವು.ಕೆಲಸ ಸರಿಯಾಗಿ ನಡಕ್ಕೊಂಡಿತ್ತಿದ್ದು.ಎರಡು ವರ್ಷ ಒಳ್ಳೆ ಬೆಳೆ ಬಂದು ತಿಮ್ಮಣ್ಣನೂ ಊರಿಲಿ ಒಂದು ಜೆನ ಆದ.

ನಾಕು ವರ್ಷ ಕಳಾತು. ಶಾರದೆ ಹೆರಿಗೆಗೆ ಅಪ್ಪನ ಮನೆಗೆ ಹೋಯೆಕ್ಕಾಗಿ ಬಂತು. ಹೆರಿಗೆಲಿ ತೊಂದರೆ ಆಗಿ , ಶಸ್ತ್ರ ಚಿಕಿತ್ಸೆ ಮಾಡಿ ಮಗುವಿನ ತೆಗೆಕ್ಕಾತು.ಹಾಂಗಾಗಿ ಅದು ನಾಕು ತಿಂಗಳು ಅಲ್ಲಿಯೇ ಇತ್ತು.

ಮನೆಲಿ ತಿಮ್ಮಣ್ಣನದ್ದೇ ಕಾರ್ಬಾರು.ಶಾರದೆ ಬಪ್ಪಾಗ ಮನೆಯ ಅವಸ್ಥೆ ನೋಡಲೆ ಎಡಿಯ.ಕಸವು,ಬಲೆ ತುಂಬಿಕೊಂಡಿತ್ತು.ಅದಾದರೂ ಸಾರ ಇಲ್ಲೆ.ತೋಟಲ್ಲಿ? ಹುಲ್ಲು ,ಬಲ್ಲೆ ಬೆಳದ್ದು.ಗೊಬ್ಬರ ಹಾಕಿ ಆಯಿದಿಲ್ಲೆ. ನೀರು ಹಾಕಿದ್ದನೂ ಇಲ್ಲೆ.”ನಿಂಗೊ ಎಂತ ಮಾಡಿದಿ ಇಷ್ಟು ದಿನ?ಹೀಂಗೊ ತೋಟ ನೋಡುದು?”ಶಾರದೆ ಬಾಯಿ ಮಾಡಿತ್ತು.

ತಿಮ್ಮಣ್ಣ ಹುಳಿ ನೆಗೆ ಮಾಡಿದ-“ನವಗೆ ಎಷ್ಟು ಬೇಕು? ಈಗ ಆಳುಗೊಕ್ಕೆ ಸಂಬಳ ಹೆಚ್ಚಾಯಿದು. ಕೊಟ್ಟು ಪೂರೈಸ. ಕೆಲಸ ಮಾಡಿಸಿರೆ ಹನ್ನೆರಡು ಖಂಡಿ ಅಡಕ್ಕೆ ಅಕ್ಕು.ಏನೂ ಮಾಡಿಸದ್ದರೆ ನಾಕು ಖಂಡಿ ಸಿಕ್ಕುಗು.ಎನಗೆ,ನಿನಗೆ,ಮಗಂಗೆ ಎಷ್ಟು ಬೇಕು? ಸಾಲದೊ ಅದು?”

ಶಾರದೆಗೆ ಮೈ ಹರುಂಕಿಯೊಂಬ ಹಾಂಗೆ ಆತು.ಕೋಪಲ್ಲಿ ಗಂಡನ ಬೈದು ಬಿಟ್ಟತ್ತು.ತಿಮ್ಮಣ್ಣಂಗೆ ಎಂತದೂ ಅನಿಸಿದ್ದಿಲ್ಲೆ.ನೆಗೆ ಮೋರೆಲೇ ಎದ್ದು ಹೋದ ಹತ್ತರಾಣ ಮನೆಗೆ-ಇಪ್ಪತ್ತೆಂಟು ಆಡುಲೆ!

ಇನ್ನು ಇವರ ನಂಬಿರೆ ಆಗ-ಹೇಳಿ ಶಾರದೆಯೇ ಆಳುಗೊಕ್ಕೆ ಹೇಳಿ ಕಳಿಸಿತ್ತು,ಮೈದುನನ ಮೂಲಕ.

ಆಳುಗೊ ಬಂದವು-ಹೀಂಗೆ ಕೆಲಸ ಆತು ನಾಕು ವರ್ಷ. ಮತ್ತೆ ಕಾಲ ಬದಲಾತು.ಆಳುಗೊ ಸಿಕ್ಕುದು ಕಮ್ಮಿ ಆತು.ಶಾರದೆಗೆ ಮತ್ತೆ ಒಂದು ಹೆರಿಗೆ,ನಿತ್ರಾಣ ಎಲ್ಲಾ ಆಗಿ ಅದಕ್ಕೂ ನೋಡಿಯೊಂಬಲೆ ಎಡಿಯ.

ತೋಟ ಅರೂಪ ಆತು.ಸಿಕ್ಕಿದ್ದರ ಕೊಯಿಕ್ಕೊಂಬದು,ತಿಂಬದು- ಹೀಂಗೆ ಮಾಡಿದರೆ ಹೇಂಗೆ?ಶಾರದೆ ಪರಂಚುತ್ತು-ತಿಮ್ಮಣ್ಣ  ಅದರೆದುರು ಬರೀ ಕೆಪ್ಪ.ಅವಂಗೆ ಮೈ ಬಗ್ಗುಸಲೆ ಎಡಿತ್ತಿಲ್ಲೆ.ಕೆಲಸಕ್ಕೆ ಆರೂ ಇಲ್ಲೆ.ಬೀಡಿ ಎಳೆವದು ಜಾಸ್ತಿ ಆಗಿ ಉಬ್ಬಸವೂ ಸುರು ಆಯಿದು.ಅಪ್ಪನ ಹತ್ತರೆ ಪೈಸೆ ಕೇಳುಲೆ ಎಡಿಯ-ಅವ ಆ ಹಕ್ಕಿನ ಎಂದೋ ಕಳಕ್ಕೊಂಡಿದ.

ಒಂದು ದಿನ ಪೇಟೆಲಿ ಅಂಗಡಿ ಬಾಗಿಲಿಲಿ ಬೀಡಿ ಎಳಕ್ಕೊಂಡು ನಿಂದ ತಿಮ್ಮಣ್ಣನ ಒಂದು ಹುಡುಗನ ಬೈಕು ಬಂದು ಗುದ್ದಿ ನೂಕಿ ಹಾಕಿತ್ತು.ಹತ್ತು ದಿನ ಆಸ್ಪತ್ರೆಲಿ ಇದ್ದ ತಿಮ್ಮಣ್ಣ ಹೆಂಡತಿಯನ್ನೂ ಮಕ್ಕಳನ್ನೂ ನಡುನೀರಿಲಿ ಕೈಬಿಟ್ಟು ಹೋದ ಹಾಂಗೆ ಹೋದ.

ಶಾರದೆಯ ಅಪ್ಪನ ಮನೆಯವು ಬಂದವು.ಬೊಜ್ಜ ಆತು.

ಇನ್ನು ಈ ಜಾಗೆಯ ರೂಢಿಕೆ ಕಷ್ಟ  ಹೇಳಿ ತೀರ್ಮಾನಿಸಿದವು.ತೋಟವ ತಿಮ್ಮಣ್ಣನ ಒಬ್ಬ ತಮ್ಮಂಗೇ ಕ್ರಯ ಚೀಟು ಮಾಡಿ ಕೊಟ್ಟತ್ತು-ಶಾರದೆ.ಅವನೂ ಮೋಸ ಮಾಡಿದ್ದ ಇಲ್ಲೆ.ಸರಿಯಾದ ಕ್ರಯವನ್ನೇ ಕೊಟ್ಟ.ಸ್ಪ್ರಿಂಕ್ಲರ್ ಹಾಕಿಸಿ ತೋಟಕ್ಕೆ ಮರು ಜೀವ ಕೊಟ್ಟ.ಸತ್ತು ಹೋದ ಸೆಸಿಗಳ ಕಡುದು ಮಂಗಳ ಸೆಸಿ ಹಾಕಿಸಿದ.

ಶಾರದೆ ಅಪ್ಪನ ಮನೆಗೆ ಹೋತು.ಅದರ ಮಕ್ಕೊ ಕಲಿವಲೆ ಉಶಾರಿ ಇದ್ದ ಕಾರಣ ಅದಕ್ಕೆ ಮತ್ತೆ ರಜಾ ನೆಮ್ಮದಿಯ ಜೀವನ ಸಿಕ್ಕಿತ್ತು.”ಅಪ್ಪನ ಹಾಂಗೆ ತಪ್ಪು ಗ್ರಹಿಕೆಲಿ ಯಾವ ವ್ಯಾಪಾರ,ಕೆಲಸವನ್ನೂ ಮಾಡೆಡಿ…..”ಹೇಳಿ ಅದು ಮಕ್ಕೊಗೆ ಹೇಳಿಕೊಂಡೇ ಇದ್ದತ್ತು.

19 thoughts on “ಗ್ರೇಶಿದ್ದರಲ್ಲಿ ಆದ ತಪ್ಪು

  1. ಧನ್ಯವಾದ. ನಿಂಗಳ ಬೆಂಬಲ ಹೀಂಗೆಯೇ ಇರಲಿ.

  2. ಗೋಪಾಲಣ್ಣ ಬರೆದ ಕವನ ಸಂಕಲನ ಈ ಹಿಂದೆ ಓದಿದ್ದೆ. ಕಥೆಯೂ ಹಾಂಗೇ ಉತ್ತಮವಾಗಿದ್ದು. ಊರಿಂದ ದೂರ ಇಪ್ಪ ಎನಗೆ ಊರಿಲ್ಲಿ ನಡೆವ ಸಾಮಾನ್ಯ ಘಟನೆಗೊ ನೆಂಪಾತು. ನಿಂಗಳಿಂದ ಹೀಂಗೆ ನೈಜ ಸಾಹಿತ್ಯ ರಚನೆ ಮುಂದುವರಿಯಲಿ.

  3. ಗೋಪಾಲಣ್ಣ ಬರೆದ ಕವನ ಸಂಕಲನ ಈ ಹಿಂದೆ ಓದಿದ್ದೆ. ಕಥೆಯೂ ಹಾಂಗೇ ಉತ್ತಮವಾಗ್ದ್ದು. ಊರಿಂದ ದೂರ ಇಪ್ಪ ಎನಗೆ ಊರಿಲ್ಲಿ ನಡೆವ ಸಾಮಾನ್ಯ ಘಟನೆಗೊ ನೆಂಪಾತು. ನಿಂಗಳಿಂದ ಹೀಂಗೆ ನೈಜ ಸಾಹಿತ್ಯ ರಚನೆ ಮುಂದುವರಿಯಲಿ.

  4. ಎಷ್ಟೋ ಕಡೆ ಆದಂತ ಘಟನೆ ..ಲಾಯ್ಕ ಬರದ್ದಿ ..

    1. ಧನ್ಯವಾದ.
      ಇಂತದ್ದು ಕೆಲವರ ಮಾತಿಲಿ ಕಂಡುಬತ್ತು.

    1. ಧನ್ಯವಾದ .ನಿಂಗಳ ಪ್ರೋತ್ಸಾಹ ನಿರಂತರ ಇರಲಿ.

  5. ಆರು ಯಾವ ಸಲಹೆ ಕೊಟ್ಟರೂ ಅದರ ಎಲ್ಲವನ್ನುದೆ ಕೇಳಿಯೋಳೆಕಾಡ, ಆದರೆ ತೀರ್ಮಾನ ಮಾ೦ತ್ರ ನಮ್ಮದೇ ಆಗಿರೆಕಾಡ.
    ಹಾ೦ಗಲ್ಲದ್ದರೆ ಹೇ೦ಗಕ್ಕು ಹೇಳುವದರ ತಿಳಿಸಿದ ಕತೆ ಲಾಯ್ಕಾಯಿದು. ಒಪ್ಪ೦ಗೊ.

  6. ಒಳ್ಳೆ ನೀತಿ ಹೇಳ್ತ ಒಪ್ಪ ಕಥೆ. ಕಥೆಲಿ ತಿಮ್ಮಣ್ಣನ ಕತೆ ಕೇಳಿ ಬೇಜಾರು ಅನಿಸಿತ್ತು. ಬೇರೆಯವು ಹೇಳಿದ್ದು ಕೇಳ್ಲಾಗ ಹೇಳಿ ಅಲ್ಲ. ಅದರಲ್ಲಿ ಒಳ್ಳೆದು ಏವದು, ಕೆಟ್ಟದು ಏವದು ಹೇಳ್ತರ ವಿಮರ್ಶೆ ಮಾಡದ್ರೆ ಹೀಂಗೇ ಅಪ್ಪದು. ಅಂತೂ, ಹೆಂಡತ್ತಿಯ ಕಾರ್ಬಾರಿಲ್ಲಿ ಅಷ್ಟಾದರು ನೆಡೆಶಿದನಾನೆ ಹೇಳಿ ಒಂದು ಸಮಾಧಾನ. ಗೋಪಾಲಣ್ಣಂಗೆ, ಮತ್ತೊಂದರಿ ಧನ್ಯವಾದ.

  7. ಸರಳ,ಸು೦ದರ ನೀತಿ.
    ಸ್ವ೦ತ ಯೋಚನೆ ಇಲ್ಲದ್ದೆ ಇನ್ನೊಬ್ಬನ ಮಾತು ಕೇಳಿ ಯೇನಕ್ಕೇನು ಮಾಡಿರೆ ಲಗಾಡಿ ಹೋಪದು ಖ೦ಡಿತಾ.ಅಪ್ಪ ಮಾಡಿದ್ದರ ಬೆಳೆಶುಲೆ ಯೋಜನೆ ಮಾಡೆಕ್ಕೇ ಹೊರತು ವಿಭಜನೆಗೆ ಅಲ್ಲ.
    ಧನ್ಯವಾದ ಗೋಪಾಲಣ್ಣ.

    1. ರೂಢಿಸಿಕೊಂಡು ಹೋಗದ್ದೇ ತಪ್ಪಾದ್ದು.ಈ ಕತೆಲಿ ತಿಮ್ಮಣ್ಣ ಪಾಲು ತೆಕ್ಕೋಂಡು ಸುಧಾರಿಸುವ ಸಾಮರ್ಥ್ಯ ಇಲ್ಲದ್ದೆಯೂ ತೆಕ್ಕೊಂಡದು ಚೂರು ಬೇಗ ಆತು.ಅಪ್ಪಂಗೆ ಸಹಾಯ ಮಾಡೆಕ್ಕಾದ್ದು ಅವನ ಕರ್ತವ್ಯ ಆಗಿತ್ತು.
      ಕತೆಯ ಆಂತರಿಕ ನೀತಿಯ ಕಂಡ ರಘು ಭಾವಂಗೆ ಅಭಿನಂದನೆ,ಧನ್ಯವಾದ.

  8. ಸಿಂಪುಲ್ ಕತೆ, ಆದರೆ ನವಗೆ ಒಂದು ಘಟ್ಟಿ ಸಂದೇಶ- ಇದು ಗೋಪಾಲಣ್ಣನ ಸ್ಟೈಲು.
    ಈ ಸರ್ತಿಯೂ ಕತೆ ಖುಶಿ ಆತು ಹೇಳಿ ಒಪ್ಪ.

    1. ಎಲ್ಲಾ ಕತೆ ಓದಿ ಅಭಿಪ್ರಾಯ ಬರೆತ್ತದಕ್ಕೆ ಸಂತೋಷ ಆತು.

  9. ಏವ ಅತಿ ವರ್ಣನೆ , ಮೋಜು ಇಲ್ಲದ್ದೆ ಇಪ್ಪದರ ಇದ್ದ ಹಾಂಗೇ ಹೇಳಿದ ಒಂದು ನಿಜ ಕತೆ ಹಾಂಗೇ ಇತ್ತು. ಕಲ್ಪನೆಯೋ ವಾಸ್ತವಿಕವೋ ಎಂತದೇ ಆದರೂ ಕತೆ ಲಾಯಕ್ಕ ಆಯ್ದು. ಹೀಂಗಪ್ಪಲಾಗ , ಅಯ್ಯೋ ಪಾಪ ಅನಿಸಿತು. ಆದರೂ ವಾಸ್ತವಿಕ ಕಾಲಲ್ಲಿ ಒಬ್ಬ ಇದ್ದರೆ ಸಾಕಾವ್ತಿಲ್ಲೇ ಇಬ್ಬರು ಇದ್ರೆ ಹೆಚ್ಚಿಗೆ ಆವ್ತು ಹೇಳಿಗೊಂಡಿಪ್ಪ ಕಾಲಲ್ಲಿ ‘ಪಾಲು’ ಹೇಳ್ವದು ತಪ್ಪುಸಲೆಡಿಯ, ಪಾಲು ಮಾಡಿರೆ ಜೀವನಕ್ಕೆ ಸಾಕಪ್ಪಲೂ ಸಾಲ. ಈ ಪರಿಸ್ಥಿತಿಗೆ ಎಂಥಾ ಪರಿಹಾರ?.

    ತಪ್ಪು ಗ್ರಹಿಕೆಲಿ ಯಾವ ವ್ಯಾಪಾರ,ಕೆಲಸವನ್ನೂ ಮಾಡೆಡಿ….. ಇದುವೇ ನಮ್ಮ ಒಪ್ಪವೂ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×