ಅಬ್ಬೆಯ GST

ಅಬ್ಬೆಯ GSTಪ್ರಸನ್ನಾ ವಿ.ಚೆಕ್ಕೆಮನೆ

ಮನ್ನೆ ತಮ್ಮನ ಬರ್ತುಡೇ….ಅಬ್ಬೆ ಎಂತಾರು ಗಮ್ಮತ್ತು ಮಾಡುಗು ಹೇದು ಎನಗೆ ಗೊಂತಿದ್ದು. ಹಾಂಗೇದು ತಿಂಬಲೆ ಬೇಕಾಗಿ ಅಪ್ಪನಮನಗೆ ಹೋದ್ದೂಳಿ ಆರಿಂಗೂ ಗೊಂತ್ತಪ್ಪಲಾಗ ಇದಾ..

ತಮ್ಮಂಗೊಂದು” ಹೇಪ್ಪಿ ಬರ್ತುಡೇ”ಹೇಳದ್ರೆ ಹೇಂಗಕ್ಕು?ಹಾಂಗೆ ಮರುದಿನ  ಉದಿಯಪ್ಪಗ ಹೋಪದು ಹೇದು ಅಟ್ಟಣೆ ಕಟ್ಟಿ ಒರಗಿದ್ದು.

ಉದಿಯಪ್ಪಗ ಏಳುಗಳೇ ಎಂಥಾ ಮಳೆ ದೇವರೇ….!!!!
“ಈ ಮಳಗೆ ನೀನು ಹೋಗದ್ರಕ್ಕು ” ಹೇದು ಪತಿದೇವರು ಉವಾಚ..ದೇವರ ಮಾತು ಮೀರ್ಲಾಗ ಇದಾ..ಸಣ್ಣ ಸಣ್ಣ ವಿಶಯಲ್ಲಿ ಅವು ಹೇಳಿದಾಂಗೆ ಕೇಳಿರೆ ಮುಂದಂಗೆ ನಮಗೆಂತಾರು ದೊಡ್ಡ ಕೆಲಸ ಇದ್ದರೆ “ಅಂದೆಲ್ಲ ನಿಂಗೊ ಹೇದಾಂಗೆ ಕೇಳಿದ್ದೆ, ಇದೊಂದಕ್ಕಾದರೂ ಎನ್ನ ಮಾತು ಕೇಳಿ” ಹೇದರೆ ಬೇಗ ಒಪ್ಪಿಗೆ ಕೊಡುಗಲ್ಲದಾ..

ಆತಂಬಗ..ಹೋಯೆಕು ಹೇದು ಗ್ರೇಶಿದ ಆಶೆ ಪುಸ್ಕ ಆತು.ಇನ್ನೆಂತ ಮಾಡುದು?
ಅಂಬಗ ಒಂದರಿ ಪೋನಿಲ್ಲಾದರೂ ಮಾತಾಡೀತೆ ಹೇದು ಹೆರಟೆ.

ಅಬ್ಬೆ ಹತ್ರೆ ಮಾತಾಡುದು ಹೇದರೆ ಅಷ್ಟು ಬೇಗ ಮಾತು ಮುಗುಶುಲೆಡಿತ್ತೋ..ಮಾತಾಡುಗ ರಜಾ ಮಾತಾಡಿ ಅಂಬ್ರೆಪ್ಪಿಲ್ಲಿ ಮಡುಗಿರೆ ಏವ ಶುದ್ದಿಯೂ ಗೊಂತಾವ್ತಿಲ್ಲೆ.

ಆಚಮನೆ ಅತ್ತೆಯ ಸೊಸೆ ಅಪ್ಪನಮನಗೆ ಹೋಯಿದೋ ಹೇದು ಗೊಂತಾಯೆಕು. ಈಚಮನೆ ಅಕ್ಕ ಎಷ್ಟು ಉಪ್ಪುಸೊಳೆ ಹಾಕಿದ್ದು, ಕಳುದ ತಿಂಗಳು ಅಪ್ಪ ತಂದ ರೇಶನ್ ಅಕ್ಕಿ ತೆಳ್ಳವು ಮಾಡಿರೆ  ಅಂಟುತ್ತಿಲ್ಲೆ ಹೇಳಿದ್ದು.ಅದರ್ಲಿ ಗುಗ್ಗುರು ಇರ್ತಾ ಕೇಳ್ಲೆ ಮರದ್ದು.

ಇಷ್ಟು ಮಾತ್ರ ಅಲ್ಲ‌‌….ಇನ್ನೂ ಎಷ್ಟಿದ್ದು ಗೊಂತಿದ್ದಾ?ಅದರ ಬರಕ್ಕೊಂಡು ಕೂದರೆ ಅದು ಮಾತ್ರ ಬರವಲಿಕ್ಕಟ್ಟೇ..

“ದೊಡ್ಡ ಗೌಜಿ ಕಟ್ಟಿ ಬರವಲೆ ಹೆರಟಿದು.ಪೋಂಡು ಪೋ…..ಇದರ್ಲಿ ಏವ ಪೊದುಂಕುಳೂ ಇಲ್ಲೆ ಹೇದು ನಾಕು ಜೆನ ಓದುವವು ನೆಗೆ ಮಾಡ್ಲಾಗ ಇದಾ..

ಹಾಂಗೂ ಹೀಂಗೂ ಕಾಪಿ ತಿಂಡಿ ಸಮರಾಧನೆ ಮಾಡಿ ಮುಗುಶಿಕ್ಕಿ ,ಹೆಜ್ಜೆ ಅಳಗೆ ಒಲೆಲಿ ಮಡುಗಿ ಅಕ್ಕಿ ಹಾಕಿಕ್ಕಿ ಪೋನು ಕೈಲಿ ಹಿಡುದೆ. ಅಬ್ಬೆ ಹತ್ರೆ ಮಾತಾಡಿಯಪ್ಪಗ ಹೆಜ್ಜೆ ಬೇಯಿಗು….

ಈಗ ಮೊಬೈಲು ಬಂದ ಮತ್ತೆ ಪೋನು ಮಾಡ್ಲೆ ನಂಬ್ರ ಎಲ್ಲ ಒತ್ತೆಕೂಳಿಯೇ ಇಲ್ಲೆ ಇದಾ..ಹಾಂಗೆಯೋ ಏನೋ ಅಪ್ಪನಮನೆ ಪೋನು ನಂಬ್ರವೇ ಮರದ್ದು. ಅದರ್ಲಿ ಅಬ್ಬೆ ಹೇದು ಕೊಟ್ರೆ ಅಲ್ಲಿಗೇ ಪೋನು ಹೋಕಟ್ಟೇ..

ಪೋನು ಎಷ್ಟು ರಿಂಗಾದರೂ ಅಬ್ಬೆ ತೆಗೆತ್ತೆಯಿಲ್ಲೆ. ಮತ್ತೆ ನೆಂಪಾತು.. ಅಬ್ಬೆ ಎಂತ ಗಮ್ಮತ್ತು ಮಾಡ್ತರೂ ಉದಿಯಪ್ಪಗ ಬೇಗ ಮಾಡುದು ಹಾಂಗೇ ಆದಿಕ್ಕು ಗ್ರೇಶಿ ಪೋನು ಹಿಡ್ಕೊಂಡು ಒಳ ಬಂದೆ.

ಅಟ್ಟಪ್ಪಗ ಅಬ್ಬೆ ಇತ್ಲಾಗಿಮಾಡಿತ್ತು..ಕೊಶಿಯಾತು.. ಪಾಚ ಉಣ್ಣದ್ರೂ ಉಂಡಟ್ಟೇ ಸಂತೋಷ..ಎನ್ನ ಮೊಬೈಲಿಂದ ಪೈಸೆ ಮುಗಿತ್ತಿಲ್ಲೇ ಹೇದು..

ಭಾರೀ ಕೊಶಿಲಿ ಮಾತಾಡ್ಲೆ ಸುರು ಮಾಡಿದೆ..
” ಇಂದೆಂತೆಲ್ಲ ಗಮ್ಮತ್ತು ಮಾಡಿದ್ದೆ”ಕೇಳಿದೆ. ಅಬ್ಬೆ ನೆಗೆ ಮಾಡಿಂಡು GST ಹೇಳುದು ಕೇಟಪ್ಪಗ ಎನಗೆ ನಿಜವಾಗಿಯೂ ಪಿಸ್ರು ಬಂತು.”ಈ GST ಎಂತರಾ ಹೇದು ಗೊಂತಿದ್ದಾ.. ಬರೇ ಪೇಪರೋದುದು ಹೇದು ಸಿನೆಮಾ ಶುದ್ದಿಯೋ,ಸತ್ತ ಶುದ್ದಿಯೋ ಓದುದಲ್ಲ..ಇದುದೆ ಎಂತರಾ ಹೇದು ತಿಳ್ಕೊಳೆಕು ಹೇದು ಕೆಲವು ದಿನಂದಲೇ ಇವು ಎನ್ನ ತಲೆ ತಿಂಬಲೆ ಸುರು ಮಾಡಿದ್ದವು.

ಸಾಲದ್ದಕ್ಕೆ ಶ್ರೀಮತಿಯಕ್ಕ, ಪುರುಷೋತ್ತಮಣ್ಣ, ಅಡಿಗೆ ಸತ್ಯಣ್ಣ, ಭಟ್ಟ ಮಾವ ….ಈಗ ಇದಾ ಪುಟ್ಟ ಕೂಡ GST ಹೇದರೆ ಎಂತರಾ ಹೇದು ಹೇಳುಗ ಆನು ಮಾತ್ರ ಬೋಸು ಬೆಪ್ಪಿ ಹಾಂಗೆ ಇದರ್ಲಿ ಸರಿಯಾದ GST ಯೇವದೂ ಹೇದು ತಲೆ ಬೆಶಿ ಮಾಡಿಂಡಿಪ್ಪಗ ಈ ಅಬ್ಬೆದೂದೆ ಅದೇ ರಾಗ…..

ಇಟ್ಟೆಲ್ಲ ಹೇಳುಗ ಎನ್ನ ಅಬ್ಬೆಯ ಗುರ್ತ ಮಾಡೆಡದೋ ನಿಂಗೊಗೆ.. ಎನ್ನ ಅಬ್ಬೆ ಕಲಿವಲೆ ಭಾರೀ ಉಶಾರಿ ಇದ್ದತ್ತು ಹೇದು ಹೇಳೆಕಾದ ಅಗತ್ಯವೇಯಿಲ್ಲೆ.ಎನಗೆ ಕಂಪ್ಯೂಟರು ಒತ್ತಲೆ,ಈ ಪೇಸು ಬುಕ್ಕು ಗುರುಟ್ಲೆ ಎಲ್ಲ ಈಗಲೂ ಗೊಂತಿಲ್ಲೆ. ಆದರೆ ಎನ್ನ ಅಬ್ಬೆ ಹಾಂಗಲ್ಲ.. ಅಬ್ಬಗೆ ಎಲ್ಲಾ ಗೊಂತಿದ್ದು.ಅಬ್ಬೆ ಅದರ ಗುರುಟುಗ ಆನು ಮೇಲೆ ಕೆಳ ನೋಡಿಂಡು ಬಟ್ಲು ಬಾಯಿ ಮಂಗನ ಹಾಂಗೆ ಬಾಯಿ ಬಿಡುದಟ್ಟೇ..

ಹೀಂಗಿದ್ದ ಅಬ್ಬೆ ಬಾಯಿಂದಲೂ GST !!!!!
ಹಾಂಗೇದರೆ ಎಂತರ ಕೇಳಿರೆ ಅಬ್ಬೆ ಪೋನಿಲ್ಲೇ ಅದರ ಪಾಠ ಮಾಡುಗು ಹೇದು ಗೊಂತಿದ್ದೆನಗೆ.ಅಬ್ಬೆ ಯೇವಗಳೂ ಪೇಪರು ನೋಡುವ ಜೆನ.ಇಂಗ್ಲೀಷ್ ಪೇಪರೂ ಓದುಗು,ಹಿಂದಿಯೂ ಓದುಗು..

ಅದರ ವಿವರ ಕೇಳಿರೆ ಎನ್ನ ಪೊಟ್ಟು ತಲಗೆ ರೆಜವೂ ಅರ್ಥಾಗದ್ದಿಪ್ಪಗ ಅಂತೇ ಎಂತರ ಮಾತಾಡುದು ಹೇಳಿ ಉದಾಸೀನ ಆತು.

ಅಟ್ಟಪ್ಪಗ ಅಬ್ಬೆ ನೆಗೆ ಮಾಡಿಂಡು ಹಾಂಗೇದರೆ ಎಂತರಾ ಹೇದು ಗೊಂತಿದ್ದಾ ಕೇಳಿತ್ತು.ಎನಗೆ ನಿಜವಾಗಿಯೂ ಅಡಕ್ಕೆ ಕತ್ತರಿ ಎಡೆಲಿ ಸಿಕ್ಕಿ ಹಾಕ್ಯೊಂಡ ಹಾಂಗಾತು.ಗೊಂತಿಲ್ಲೆ ಹೇದರೆ ಅಬ್ಬೆ ಪಾಠ ಮಾಡುಗು. ಗೊಂತಿದ್ದು ಹೇದರೆ ಪ್ರಶ್ನೆ ಕೇಳುಗು..

“ಇದೆಂತರ ಅಬ್ಬೆ.. ಈ GST GST ಹೇದು ನೋಡಿ ಕೇಳಿ ಬೊಡುದತ್ತು.ಇನ್ನೂದೆ ಅದೇ ವಿಶಯವ ನಿನ್ನತ್ರೆ ಮಾತಾಡೆಕಾ?ಎಲ್ಲಾ ಗೊಂತಿಪ್ಪವರ ಹಾಂಗೆ ದೆನಿ ರೆಜಾ ಬದಲ್ಸಿ ಮಾತಾಡಿದೆ..

ಎಟ್ಟಾದರೂ ಎನ್ನ ಅಬ್ಬೆ ಅಲ್ಲದಾ?ಎನ್ನ ಹಾಂಗೆ ಬರೇ ಪಾಪ ಇದಾ….” ಆತಪ್ಪಾ..ಆನಂತೇ ಕೇಟದಟ್ಟೇ..ಮನೆಯೊಳ ಇಪ್ಪ ಹೆಮ್ಮಕ್ಕ ಆದರೂ ಪ್ರಪಂಚಲ್ಲಿ ಏನೆಲ್ಲಾ ನೆಡೆತ್ತು ಹೇದು ತಿಳ್ಕೊಳೆಕು. ಹಾಂಗೆ ಕೇಟದಟ್ಟೆ ಒಪ್ಪಕ್ಕಾ..ಹೇದಪ್ಪಗ ಎನಗೂ ಸಮದಾನ ಆತು.ಇನ್ನೆಂತ ಪ್ರಶ್ನೆ ಕೇಳ.

ಅಟ್ಟು ಮಾತಾಡಿಯಪ್ಪಗ ಎನಗೆ ಇನ್ನೆಂತ ಮಾತಾಡುದು ಹೇದು ಅಂದಾಜಾಯಿದೇಯಿಲ್ಲೇತ.
“ವಿಶೇಶ ಎಂತಾರು ಇದ್ದಾ?ತಮ್ಮಂಗೆ ಎನ್ನ ಲೆಕ್ಕದ ಶುಭಾಶಯ ಹೇಳಿಕ್ಕು.ಇವು ದೆನಿಗೇಳ್ತವು. ಪೋನು ಮಡುಗೆಕಾ” ಕೇಳಿದೆ.

ಪೋನಿಲ್ಲಿ ಹೆಚ್ಚು ಮಾತಾಡ್ಲೆ ಮನಸಿಲ್ಲದ್ರೆ ಹೆಮ್ಮಕ್ಕೊ ಮಾಡುವ ಸುಲಭ ಉಪಾಯ ಇದು.”ಇವು ದೆನಿಗೇಳ್ತವು”ಅಲ್ಲಿಗೇ ಆಚ ಹೊಡೇಲಿಪ್ಪವು ಪೋನು ಮಡುಗುತ್ತವು.ಈ ಇವು ಹೇದರೆ ಹೆಮ್ಮಕ್ಕೊ ಅಟ್ಟು ಗೌರವ ಕೊಡ್ತವು ಹೇದು ಗ್ರೇಶಿ ಆದಿಪ್ಪಲೂ ಸಾಕು. ಆನುದೆ ಈಗ ಅದೇ ಪ್ರಯೋಗ ಮಾಡಿದೆ..

ಅಬ್ಬೆ ಜೋರು ನೆಗೆ ಮಾಡಿತ್ತು. “ಅಂವ ಇಲ್ಲಿ ತಮ್ಮನತ್ರೆ ಪೋನಿಲ್ಲಿ ಮಾತಾಡುದು ಕೇಳ್ತು”
ಆತನ್ನೇ….
ಇನ್ನೆಂತ ದಾರಿಯೂ ಇಲ್ಲೆ.
ಮತ್ತೆ ಅಬ್ಬೆಯೇ ಹೇಳಿತ್ತು..ಆನು ಮಾಡಿದ GST ತಿಂಬಲೆ ಬತ್ತಿಲ್ಲೆಯಾ ಹಾಂಗಾರೆ..
ಈ ಮಳಗೆ ಹೇಂಗೆ ಬಪ್ಪದು?ಅದೆಂತರ ನಿನ್ನ GST ..ಗುಗ್ಗುರು ಆದ ಸಜ್ಜಿಗೆಯಾ?ಗೋಳಿಬಜೆಯಾ?..ಎನಗೆ ಸ್ವೀಟ್ ಇಷ್ಟ ಅಲ್ಲದೋ ಅಬ್ಬೇ..ಈ ಗುಗ್ಗುರು ಆದ ಸಜ್ಜಿಗೆ ಅವನ ಬರ್ತುಡೇ ದಿನವೇ ಮಾಡಿದ್ದಾ ನೀನು?ಅವಂಗೆ ಪ್ರೀತಿ ಇಪ್ಪ ಸೇಮಗೆ ಮಾಡ್ಲಾವ್ತಿತು”ಹೇದೆ..

“ಅದನ್ನೇ ಮಾಡಿದ್ದು ಮಾರಾಯ್ತೀ..ಗೆಣಂಗು ಸೀವುದೆ,ಸೇಮಗೆಯೂ,ತೆಂಗಿನಕಾಯಿ ಬರ್ಫಿಯೂ ಮಾಡಿದ್ದೆ….ನಿನಗೆ ಬಪ್ಪಲೆಡಿಯದ್ರೆ ತಮ್ಮನತ್ರೆ ಕೊಟ್ಟು ಕಳುಗುತ್ತೇ…..” ಅಬ್ಬೆಯ ಈ ಮಾತು ಕೇಳಿಯಪ್ಪಗ ಎನಗೆ ಎಲ್ಲಾ GST ಯೂ ಮರದು ಹೋಗಿ ಗೆಣಂಗು ಸೀವು,ಸೇಮಗೆ,ತೆಂಗಿನಕಾಯಿ ಬರ್ಪಿ ಮಾತ್ರ ತಲೆಲಿ ಒಳ್ದದು.

ಪ್ರಸನ್ನಾ ವಿ ಚೆಕ್ಕೆಮನೆ

 

 

 

 

 

ಶರ್ಮಪ್ಪಚ್ಚಿ

   

You may also like...

30 Responses

 1. ಎನಗುದೆ ಈ GST ಹೇದರೆ ಎಂತರ ಹೇಳಿ ಇನ್ನೂ ಪೂರ ತಲೆಗೆ ಹೊಕ್ಕೆಕ್ಕಟ್ಟೆ.. ಎಂತದೇ ಇರಲಿ..ಲೇಖನ ಸೂಪರ್ ಆಯಿದು…

 2. ಬೇರೆ ಬೇರೆ ತೆರಿಗೆಗಳ ಒಟ್ಟು ಮಾಡಿ ಒಂದೇ ತೆರಿಗೆ ಮಾಡಿದ್ದವು‌ . ಬೇರೆ ಬೇರೆ ಸಾಮಾನಿಂಗೆ ಬೇರೆ ಬೇರೆ ತೆರಿಗೆ. ಎಲ್ಲಾ ರಾಜ್ಯ ಗಳಲ್ಲಿ ಇದು ಒಂದೇ. ಇದು ಗೂಡ್ಸ್ ಏಂಡ್ ಸರ್ವಿಸ್ ಟೇಕ್ಸ್‌ ‌.ಇದು GST ತಿಳುಶುಲೆ ಸಣ್ಣ ಪ್ರಯತ್ನ ಅನ್ನಪೂರ್ಣ ಅಕ್ಕ.

 3. S.K.Gopalakrishna Bhat says:

  ಗುಣಭರಿತವೂ ಸಾರವತ್ತೂ ತಾತ್ಪರ್ಯಸಹಿತವೂ [ಜಿ ಎಸ್ ಟಿ ] ಆದ ಲೇಖನ

  • ಪ್ರಸನ್ನಾ ವಿ ಚೆಕ್ಕೆಮನೆ says:

   ಲೇಖನ ಮೆಚ್ಚಿದ್ದಕ್ಕೆ ಧನ್ಯವಾದ ಅಣ್ಣಾ..

 4. K.Narasimha Bhat Yethadka says:

  ಈ GST ಹುಳು ತಲಗೆ ಹೊಕ್ಕದರಲ್ಲಿ ಮೂರು ದಿನ ಕಳ್ದದೇ ಗೊಂತಾಯಿದಿಲ್ಲೆ.ಮೂರು ಬಗೆಯೂ ಹೊಸ ರುಚಿಯಾಗದ್ದೆ ಸವಿ ರುಚಿ ಆಗಿತ್ತಿದ್ದು.

  • ಪ್ರಸನ್ನಾ ವಿ ಚೆಕ್ಕೆಮನೆ says:

   ಧನ್ಯವಾದ ಅಣ್ಣಾ….ಲೇಖನ ಮೆಚ್ಚಿದ್ದು ಕೊಶಿಯಾತು

 5. pattaje shivarama bhat says:

  gst ಗೆ ಒಂದು ಹೆಡಗೆ ಒಪ್ಪಂಗ ಬೈಂದು.

 6. ಶರ್ಮಣ್ಣ , ಕಥೆ ಬರವದು ಎಲ್ಲಿ ? ಜಿ ಮೆಯಿಲ್ ಲ್ಲಿ ಬರೆಕೊ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *