ಅಜ್ಜನ ಸಿನೆಮಾ ಕಥೆ

ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಮೊಬೈಲಿಲ್ಲಿ  ಕಳುಸಿದ  ಕತೆ ಇಲ್ಲಿದ್ದು. ನಿಂಗಳ ಒಪ್ಪ ಕೊಟ್ಟು ಪ್ರೋತ್ಸಾಹಿಸಿ
-ಶರ್ಮಪ್ಪಚ್ಚಿ

ಅಜ್ಜನ ಸಿನೆಮಾ ಕಥೆಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

ಹೆಸರು ನೋಡಿಯಪ್ಪಗ ಆರೂದೆ ಅಜ್ಜ ಸಿನೆಮಾಕ್ಕೆ ಕಥೆ ಬರದವಾ ಗ್ರೇಶೆಡಿ.ಹಾಂಗೆಂತಲ್ಲ.ಇದು ಅಜ್ಜ ಅವರ ಮಕ್ಕಳ ಸಿನೆಮಾ ತೋರ್ಸಲೆ ಕರಕ್ಕೊಂಡೋದ ಕಥೆ. ಈಗ ನಡದ್ದೆಲ್ಲ ಅಲ್ಲಪ್ಪಾ….ಹಾಂಗೇದು ತುಂಬಾ ಪ್ರಾಕಿಲ್ಲಿ ನಡದ್ದದೂ ಅಲ್ಲ.

ಇದು ಯೇವಗ ಹೇದರೆ ಕಾಸ್ರೋಡಿಂದ ಪುತ್ತೂರಿಂಗೆ ಒಂದು ಕೆ.ಬಿ.ಟಿ.ಬಸ್ಸು, ಪುತ್ತೂರಿಂದ ಕಾಸ್ರೋಡಿಂಗೊಂದು ಕೃಷ್ಣ ಬಸ್ಸು ಹೋಪ ಕಾಲಲ್ಲಿ ನಡದ ಕಥೆ. ಅಂಬಗ ಕುಂಬ್ಳೆ ಹೇದರೆ ಆರಿಂಗೂ ಗೊಂತಿಲ್ಲೆ. ಕಣ್ಯಾರ ಹೇದರೆ ಮಾತ್ರ ಗೊಂತಿಪ್ಪ ಕಾಲ ಅದು. ಆ ಕಣ್ಯಾರ ಪೇಟೆಲೊಂದು ಸಿನೆಮಾ ಥಿಯೇಟರ್ ಬಂತಾಡ.ಅದರ್ಲಿ ಚೆಂದ ಚೆಂದದ ಸಿನೆಮಾ ತೋರ್ಸುತ್ತವೂದು ಈ ಅಜ್ಜನ ಅಕ್ಕನ ಮಕ್ಕೊ ಅವರ ಅಜ್ಜನಮನಗೆ ಬಂದಪ್ಪಗ ಹೇಳುದು ಕೇಳಿ ಈ ಅಜ್ಜನ ಮಕ್ಕೊಗೆ ಸಿನೆಮಾ ನೋಡೇಕೂದು ಆತಾಡ.

ಅವು ಅಜ್ಜ ಎನಗೆ ಅಷ್ಟೇ ಹೊರತು ಅವರ ಮಕ್ಕೊಗಲ್ಲನ್ನೇ….ಅಂಬಗ ಅವರ ತಲೆ ಹಣ್ಣಾಯಿದಿಲ್ಲೆ.ಎಲೆ ತಿಂಬ ಕಾರಣ ಬಾಯಿ ಕೆಂಪಾದರೂ ಅವರ ಎಲ್ಲೋರೂ ಭಾವಾ , ಮಾವಾ  ಹೇಳಿಂಡಿದ್ದ ಕಾಲ ಇದಾ.

ಆ ಅಜ್ಜನ ಮಕ್ಕೊ ಅಪ್ಪನತ್ರೆ ಕೇಟವಾಡ.” ಎಂಗಳನ್ನೂ ಸಿನೆಮಾಕ್ಕೆ ಕರ್ಕೊಂಡೋಯೆಕು ಅಪ್ಪಾ”ಹೇದು. ಸುರುವಿಂಗೆ ಅಜ್ಜಂಗೆ ಪಿಸ್ರು ಬಂತಾಡ.”ಸಿನೆಮಾ ವಾ?ಹಾಂಗೇದರೆಂತಾಳಿ ನಿಂಗೊಗೆ ಗೊಂತಿದ್ದಾ” ಕೇಳಿದವಾಡ.

ಅಜ್ಜನ ಮಕ್ಕೊಗೆ ಅಬ್ಬೆಯಿಲ್ಲೆ.ಎರಡು ಕೂಸುಗೊ ಮಾಂತ್ರ ಅಜ್ಜಂಗಿಪ್ಪದು. ಸಣ್ಣ ಮಗಳಿಂಗೆ ಮೂರೊರಿಶ ಅಪ್ಪಗಳೇ ಅಜ್ಜನ ಯಜಮಾಂತಿ ತೀರಿ ಹೋಯಿದಾಡ. ಅಂದಿಂದ ಲಾಗಾಯ್ತು ಅಜ್ಜನೇ ಮಗಳಕ್ಕಳ ಕೊಂಡಾಟಲ್ಲಿ ಬೆಳೆಶಿದ್ದಾಡ. ಅವುದೆ ಅಷ್ಟೇ. ಅಪ್ಪ ಹೇದ್ದಕ್ಕೆ ಯೇವದಕ್ಕೂ ಕೂಡಾ ಆಗ  ಬೇಡ ‘ ಹೇಳಿದ ಮಕ್ಕಳೇ ಅಲ್ಲಾಡ. ದೊಡ್ಡ ಮಗಳು ಆರನೇ ಕಲಿವಗ ಸಣ್ಣ ಮಗಳು ಮೂರನೇ ಆಡ.ಆ ಕಾಲಲ್ಲಿ ಈಗಾಣಾಂಗೆ ಮನೆ ಹತ್ತರೆ ಶಾಲೆಯಿಲ್ಲೆ.ಮಕ್ಕಳ ಕರಕ್ಕೊಂಡು ಹೋಪಲೆ ಬಸ್ಸು,ವೇನು ಬಪ್ಪ ಕಾಲವು ಅಲ್ಲ ಇದಾ..ಶಾಲೆ ಮಾಸ್ಟರಕ್ಕಳೂ ಸರೀ ಕಲಿಯದ್ರೆ ಅತ್ಲಾಗಿತ್ಲಾಗಿ ಲಡಾಯಿ ಮಾಡ್ಯೊಂಡರೆ ಎಲ್ಲ ಹುಳಿ ಅಡರಿಲ್ಲಿ ಹೊಳಿವ ಕಾಲ ಅದು .ಮಕ್ಕೊಗೆ ಶಾಲೆ ಹೇದರೆ ಒರಕ್ಕಿಲ್ಲಿ ಕೂಡ ಬೆಚ್ಚಿ ಬಿದ್ದುಕೊಂಡಿತ್ತಿದ್ದವಾಡ.

ಈ ಅಜ್ಜನ ಮಗಳುದೆ ಆ ಕಾಲದ್ದೇ ಅಲ್ಲದಾ? ಒಂದು ದಿನ ಅದರ ಕ್ಲಾಸಿಲ್ಲಿ ಕಲಿವ ಈಚ ಮಾವನ ಮಗಳು ಅದಕ್ಕೆ ಪುಳಿಂಕಟೆ ತೋರ್ಸಿ ತೋರ್ಸಿ ತಿಂದರೂ ಇದಕ್ಕೊಂದೂ ಕೊಟ್ಟಿದಿಲ್ಲೇಡ.ಇದಕ್ಕೆ ಕೊಡದ್ದೆ ತಿಂದಿದೂಳಿ ಅದರತ್ರೆ ಕೋಪ ಮಾಡಿದ ಅಜ್ಜನ ಮಗಳು ಶಾಲೆಲಿ ಜೋರಿನ ಮಾಸ್ಟರ ಹೇದೇ ಹೆಸರಿಪ್ಪ ಒಪ್ಪ ಕುಞ್ಞಿ ಅಜ್ಜನ ಮಗ ಶಂಭಟ್ಟ ಮಾಸ್ಟರನತ್ರೆ ದೂರು ಹೇಳಿತ್ತಾಡ. ಮಕ್ಕೊಗೆ ಪೆಟ್ಟು ಕೊಟ್ರೆ  ಅವು ಒಳ್ಳೆ ಬುದ್ದಿ ಕಲಿಗಷ್ಟೇದು ಶಂಭಟ್ಟ ಮಾಸ್ಟರ ಅದಕ್ಕೆರಡು ಜೆಪ್ಪಿದಾಡ.ಅಜ್ಜನ ಮಗಳಿಂಗೆ ಸಮದಾನ ಆದರೂ ಆ ಕೂಸಿನ ಮರ್ಯಾದೆ ಹೋತಿಲ್ಯಾ?ಅದು ಅದರಪ್ಪನತ್ರೆ ದೂರು ಹೇಳಿ ವಿಶಯ ಅಜ್ಜನ ಕೆಮಿಗೂ ಗೊಂತಾತಾಡ.

ಆತನ್ನೇ….ಅಜ್ಜ ಮಗಳತ್ರೆ ಹೇದವಾಡ “ನೀನು ಶಾಲೆ ಕಲ್ತದು ಸಾಕು ಮೋಳೇ..ಹೀಂಗಿದ್ದ ರಗಳೆ ಎಲ್ಲ ಮಾಡ್ತರೆ ಶಾಲಗೋಪದೇ ಬೇಡ.”

ಮಗಳಿಂಗೂ ಆಯೆಕಾದ್ದದು ಅದುವೇ….ಕೊಶಿಯಾತು. ಶಾಲಗೋಗಿ ಮಾಸ್ಟರಕ್ಕಳ ಕೈಯಿಂದ ಬೈಗಳು ಪೆಟ್ಟು ತಿನ್ನೆಡನ್ನೇ..ಅಕ್ಕ ಹೋಗದ್ದಿಪ್ಪಗ ಮತ್ತೆ ತಂಗೆ ಹೋಪದೇಂಗೆ? ಹಾಂಗೆ ಇಬ್ರೂ ಮನೇಲೇ ಕೂದು ಮನೆಕೆಲಸ ಎಲ್ಲ ಕಲ್ತವು. ಅಜ್ಜಂಗೂ ಕೊಶಿಯಾತು. ಕೂಸುಗಳ ಮನೆಂದ ಕಳ್ಸಿಕ್ಕಿ ಅವು ಬಪ್ಪನ್ನಾರ ಕಾದು ಕೂಪದೂಳಿರೆ ಅಜ್ಜಂಗೆ ಮನಸಿಂಗೆ ಸಮದಾನಾತಾಡ.

ಈಗ ಸಿನೆಮಾ ದ ಕತೆ ಬಿಟ್ಟು ಬೇರೆಲ್ಲಿಗೋ ಹೋತು ಗ್ರೇಶೆಡಿ. ಇಟ್ಟು ವಿವರ ಹೇಳದ್ರೆ ಕತೆ ರೆಜಾ ಉದ್ದಾಗೆಡದೋ? ಇಲ್ಲದ್ರೆ ಓದುವವೆಲ್ಲ “ಇದಿಟ್ಟೆಯಾ ಪೋಂಡು ಪೋ ” ಹೇದು ನೆಗೆ ಮಾಡುಗು.

ಸಿನೆಮಾ ಕ್ಕೆ ಹೋಯೆಕ್ಕು ಹೇದಪ್ಪಗ ಅಜ್ಜಂಗೆ ಒಂದರಿ ಪಿಸ್ರು ಬಂದರೂ ಮಕ್ಕಳತ್ರೆ ತೋರ್ಸಿಕೊಂಡಿದಾಯಿಲ್ಲೇಡ.

“ಅದೆಂತರ ಈ ಸಿನೆಮಾ ಹೇದರೆ ನಿಂಗೊಗೆ ಗೊಂತಿದ್ದಾ? ಕೇಟಾಡ .ಸಣ್ಣ ಮಗಳು ಕೊಶೀಲಿ ಹೇಳಿತ್ತಾಡ ” ದೊಡ್ಡತ್ತೆ,ಅತ್ತಿಗೆ ಎಲ್ಲ ಹೋಯಿದವಾಡ ಅಪ್ಪಾ..ಬಣ್ಣ ಬಣ್ಣದ ಚಿತ್ರ ಕಾಣ್ತಾಡ. ಪದ್ಯ ಕೇಳ್ತಾಡ ಎಂಗೊಗೂ ನೋಡೆಕಪ್ಪಾ ..ಕಣ್ಯಾರಲ್ಲಿದ್ದಾಡ. ಕರ್ಕೊಂಡೋಗಿ”

ಅಟ್ಟಪ್ಪಗ ದೊಡ್ಡದೂದೆ ಸಿನೆಮಲ್ಲಿ ಚೆಂದ ಚೆಂದದ ಹೆಣ್ಣುಗೊ ಎಲ್ಲ ಇದ್ದವಾಡ ಅಪ್ಪ..ಒಂದರಿ ತೋರ್ಸಿ ಅಪ್ಪಾ ಹೇಳಿಯಪ್ಪಗ ಅಜ್ಜಂಗೂ ಅಕ್ಕು ಹೇದಾತಾಡ.

ಆನು ನಾಳಂಗೆ ನೋಡಿಕ್ಕಿ ಬತ್ತೆ. ಆ ಹೆಣ್ಣು ಗೊ ಅಲ್ಲಿ ಇಲ್ಲದ್ರೆ ನಾವು ಹೋದ್ದು ದರ್ಮದಂಡ ಅಕ್ಕು. ಹೇದು ಮಕ್ಕಳ ಸುಮ್ಮನೆ ಕೂರ್ಸಿದವಾಡ.

ಮರುದಿನ ಉದಿಯಪ್ಪಗ ಅಜ್ಜ ಬೇಗ ಎದ್ದು ಜೆಪ ಮಾಡಿ ಕಾಪಿ ಕುಡುದು ಕಣ್ಯಾರ ಪೇಟಗೆ ಹೆರಟವಾಡ.

“ಸಿನೆಮಾ ಸಿಕ್ಕುತ್ತರೆ ಇಲ್ಲಿಗೇ ತೆಕ್ಕೊಂಡು ಬತ್ತೆ. ನಿಂಗಳ ಅಷ್ಟು ದೂರ ನಡಶಿಂಡು ಹೋಪ ಕೆಲಸ ಒಳಿಗು” ಹೇಳಿಂಡು ಎಲೆ ಅಡಕ್ಕೆ ಚೀಲವ ದೊಡ್ಡ ಚೀಲಕ್ಕೆ ತುಂಬುಸಿಕ್ಕಿ  ,ಜಿಂಕೆಯ ಕೊಂಬಿನ ಹಿಡಿ ಇಪ್ಪ ಪೀಶಾತಿಯ ಸೊಂಟಲ್ಲಿ ಮಡುಸಿ ಕುತ್ತಿಕ್ಕಿ ನೆಡದವಾಡ.

ಮಕ್ಕೊಗೆ ಬಾರೀ ಕೊಶಿಯಾತಾಡ. ಅಪ್ಪ ಸಿನೆಮಾ ತಕ್ಕೂದು ಕಾದು ಕೂದವಾಡ. ಕತ್ತಲೆ ಕತ್ತಲಪ್ಪಗ ಅಜ್ಜ ಬಂದವಾಡ. ಮಕ್ಕೊ ಬಾಗಿಲೆಡೆಂದಲೇ ಓಂಗಿ ನೋಡಿದವಾಡ.ಉಹ್ಹುಂ!! ಎಂತದೂ ಇಲ್ಲೆ. ಇಬ್ರಿಂಗೂ ಬೇಜಾರಾತು.ಆದರೆಂತ ಮಾಡುದು? ಅಜ್ಜ ಹೋಪಗ ಸಿನೆಮಾ ಮುಗುದರೆ ಅದರ ತಪ್ಪಲೆಡಿಗೋ?

ಅಜ್ಜ ಹಾಂಗೇ ಹೇದಪ್ಪಗ ಮಕ್ಕೊ ನಂಬಿದವಾಡ.

.ಆ ಸರ್ತಿಯಾಣದ್ದು ಹಾಂಗೆ ಹೋದರೂ ಕಣ್ಯಾರ ಕ್ಕೆ ಸಿನೆಮಾ ನೋಡ್ಲೆ ಊರಿಂದಲೂ ಕೆಲವು ಜೆನ ಹೋಗದ್ದಿರ್ತವಾ? ಒಪ್ಪಕ್ಕಜ್ಜಿ ಮನೆಲಿ ತಿಥಿಗೋಗಿ ಬಂದ ಮಕ್ಕೊ ಪುನಾ ಸಿನೆಮಾ ಹೇಳ್ಲೆ ಸುರು ಮಾಡಿದವಾಡ. ಮಕ್ಕಳ ಹಟಕ್ಕೆ ಅಜ್ಜ ಒಪ್ಪಿದವಾಡ.

ಹಾಂಗೆ ಒಂದು ಶುಕ್ರವಾರ ಅಜ್ಜನೂ ಮಕ್ಕಳೂ ಕಣ್ಯಾರ ಪೇಟೆಗೆ ಹೆರಟವು. ಸಿನೆಮಾ ದವು ನೋಡುಗ ನಾವುದೆ ಚೆಂದ ಕಾಣೆಡದಾದು ಚೆಂದದ ಅಂಗಿ ಹಾಕಿದವಾಡ.ಅಂಗಿ ಹೇದರೆ ಈಗಾಣ ಪೇಂಟಂಗಿ ಅಲ್ಲ. ಚೂಡೀದಾರವೂ ಅಲ್ಲ. ಉದ್ದಲಂಗವುದೆ ರವಕ್ಕೆವುದೆ‌ ಹಾಕಿ ಎರಡು ಜೆಡೆ ಕಟ್ಟಿ ,ತೋಟದ ಬೇಲಿ ಕರೇಲಿಪ್ಪ ಲಂಬನ ಹೂಗಿನ ಮುಕ್ಕೆಯ ತಂದು ಕಟ್ಟಿ ಮುನ್ನಾಳ ದಿನವೇ ಮಣೆ ಅಡೀಲಿ ಮಡುಗಿದ್ದರ  ಚೆಂದಕೆ ಸೂಡಿ ಕಿಸ್ಕಾರ ಹೂಗು ಕಾಸಿ ಮಾಡಿದ ಕುಳ ವ ಬೊಟ್ಟಾಕಿ ಮಕ್ಕೊ ಸಿನೆಮಾ ಕ್ಕೆ ಹೆರಟವು.

ಮನೆಂದ ಹೆರಟಪ್ಪಗ ಇದ್ದ ಕೊಶಿ ಸುಮಾರು ದೂರ ನೆಡದಪ್ಪಗ ಕಮ್ಮಿಯಾತು. ಈಗಾಣಾಂಗೆ ಬಣ್ಣ ಬಣ್ಣದ ಪ್ಲೇಸ್ಟಿಕ್ಕು ಕುಪ್ಪಿಗಳಲ್ಲಿ ನೀರು ಕಟ್ಯೊಂಡೋಪ ಕಾಲ ಅಲ್ಲನ್ನೇ ಅದು. ಎಂತ ಇದ್ದರೂ ಮನೆಂದ ಹೆರಟ್ರೆ ಮತ್ತೆ ಓಪಾಸು ಮನಗೆತ್ತಿ ಆಯೆಕು. ನೆಡದೂ ನೆಡದೂ ಬಚ್ಚಿತ್ತು. ಹಾಂಗೇದು ಕಣ್ಯಾರ ಪೇಟೆ ಅವರ ಮನೆಂದ ಹೆಚ್ಚು ದೂರಯಿಲ್ಲೆ.ಒಂದು ಹತ್ತು ಮೈಲಿಕ್ಕಷ್ಟೆ. ಸೀತಾಂಗೋಳಿಲೊಂದು ಹೆಬ್ಬಾರಜ್ಜನ ಹೋಟ್ಲೊಂದು ಇದ್ದತ್ತಾಡ. ಅಜ್ಜ ಮಕ್ಕಳತ್ರೆ ಹೇದವಾಡ ” ನಿಂಗೊ ಬೇಗ ಸಿನೆಮಾ ನೋಡಿಕ್ಕಿ ಬಂದರೆ ಬಪ್ಪಗ ಹೆಬ್ಬಾರಜ್ಜನ ಹೋಟ್ಲಿಲ್ಲಿ ಗೋಳಿಬಜೆ ತೆಗದು ಕೊಡುವೇದು.

“ಅಕ್ಕಾ ಅಂಬಗ ನಾವು ಎಲ್ಲೋರಿಂದಲೂ ಬೇಗ ನೋಡಿ ಮುಗುಶುವ ಸಿನೆಮಾವ” ಹೇಳಿತ್ತಾಡ ಸಣ್ಣದು. ಹೇಂಗಾರು ಕಣ್ಯಾರ ಪೇಟೆಲಿಪ್ಪ ಗೋಪಾಲಕೃಷ್ಣ ಥಿಯೆಟರೋ, ಅಲ್ಲ ದೇವೀ ಥಿಯೇಟರೋಳಿಯೆಲ್ಲ ಎನ್ನತ್ರೆ ಕೇಳೆಡಿ ಅದೆಲ್ಲ. ಎನಗೊಂತಿಲ್ಲೆ..ಯೇವದೋ ಒಂದರ ಬುಡಕ್ಕೆತ್ತಿದವು.

ಅಲ್ಲೆಲ್ಲ ತುಂಬ ಜೆನಂಗೊ ನಿಂದೊಂಡಿಪ್ಪದು ಕಾಂಬಗ ಮಕ್ಕೊಗೆ ಎಂತ ಮಾಡುದೂಳಿ ಗೊಂತಾಗದ್ದೆ “ಬೆಣಚ್ಚಿಂಗೆ ಬಿಟ್ಟ ಹೆಗ್ಳಂಗಳಾಂಗೆ ಅತ್ತಿತ್ತೆ ನೋಡಿಂಡು ನಿಂದವಾಡ.

ಅಲ್ಲೆ ಹತ್ತರೆ ಒಂದು ಸಿಮೆಂಟಿನ ಕಲ್ಲಿಲ್ಲಿ ಕೂದಿಕ್ಕಿ ಅಜ್ಜ ಎಲೆ ಅಡಕ್ಕೆ ಚೀಲ ಬಿಡ್ಸಿಕ್ಕಿ ಅಲ್ಲೆಲ್ಲ ಅಂಟಿಸಿಂಡಿಪ್ಪ ಸಿನೆಮಾದ ಚಿತ್ರಂಗೊ ಈಗಾಣ ಭಾಶೆಲಿ ಹೇಳ್ತರೆ ಪೋಸ್ಟರು ಅದರ ತೋರ್ಸಿ ಅಕ್ಕಿ ಮಕ್ಕಳತ್ರೆ ಹೇದವಾಡ “ಇದಾ ಇದುವೇ ಸಿನೆಮಾ….ಇಲ್ಲೆಲ್ಲ ಇದ್ದಿದಾ ಹೀಂಗಿದ್ದ ಚಿತ್ರಂಗೊ ಎಲ್ಲ ಬೇಗ ನೋಡಿಕ್ಕಿ ಬನ್ನೀದು”

ಅಷ್ಟಪ್ಪಗ ಸಣ್ಣ ಮಗಳು ಕೇಳಿತ್ತಾಡ “ಅಪ್ಪಾ….ಸಿನೆಮಲ್ಲಿ ಪದ್ಯ ಬತ್ತಾಡ ಎಲ್ಲಿದ್ದೂಳಿ.

ಅದು ಕೇಳಿದ್ದದೂದೆ ಸಿನೆಮಾ ಥಿಯೇಟರಿನ ಒಳಾಂದ ಪದ್ಯ ಕೇಳ್ಲೆ ಸುರುವಾತಾಡ.

ಈಗ ಕೇಳಿತ್ತಾದು ಕೇಟವಾಡ ಅಜ್ಜ..ಹ್ಹೂಂ  ಹೇಳಿ ಇಬ್ರೂದೆ ಥಿಯೇಟರಿನ ಆಚೊಡೆಲಿ ಈಚೊಡೆಲಿ ಇಪ್ಪ ಚಿತ್ರಂಗಳೆಲ್ಲ ನೋಡಿದವಾಡ.ಅಲ್ಲೆಲ್ಲ ಇಪ್ಪ ಜೆನಂಗೊ ಕಾಲಿಯಪ್ಪಗ ಅಜ್ಜ ಮಕ್ಕಳತ್ರೆ ಸಿನೆಮಾ ನೋಡಿಯಾತಾ ಕೇಳಿದವಾಡ.ಇಬ್ರಿಂಗು ಕೊಶಿಯೋ ಕೊಶಿಯಾತಾಡ. ರೆಜ್ಜೊತ್ತಪ್ಪಗ ಪದ್ಯವೂ ನಿಂದಪ್ಪಗ ಅಜ್ಜ ಮಕ್ಕಳತ್ರೆ ಮನಗೋಪ ಹೇಳಿದವಾಡ.

ಇಬ್ರೂ ಕೊಶೀಲಿ ನಡದು ಸೀತಂಗೋಳಿ ಹೆಬ್ಬಾರಜ್ಜನಲ್ಲಿ ಕಾಪಿ ಎಲ್ಲ ಕುಡುದು ಮನಗೆತ್ತಿದವಾಡ. ಸಿನೆಮಾ ಕ್ಕೋದ ಶುದ್ದಿ ಎಲ್ಲರತ್ರೂ ಸಂಭ್ರಮ ಲ್ಲಿ ಹೇಳಿದವಾಡ. ಅದರ ಕೇಳುಗ ಅಲ್ಲಿಯೂ ಒಬ್ಬ ಆಚಕರೆ ಮಾಣಿ ಇತ್ತಿದ್ದಾಡ. ಕೊಡೆಯಾಲ ಪೇಟೆಲಿ ಕೋಲೇಜಿಂಗೋಪವ. ಅಜ್ಜನ ಮಕ್ಕೊಗೆ ಅಣ್ಣ ಆಯೆಕಾಡ ಅಂವ. ಅವಂಗೆ ಸಂಶಯ ಬಂತಾಡ.

ಇದೆಂತರ ದೊಡ್ಡಪ್ಪಾ ಇವು ಹೇಳುದು ನಿಂಗೊ ಸಿನೆಮಾ ಕ್ಕೇ ಕರಕ್ಕೊಂಡೊದ್ದಾ ಅಲ್ಲ ಅಂತೇ ಅವರ ಡೋಂಗಿ ಮಾಡಿದ್ದಾ ಕೇಳಿದಾಡ.

” ಅಲ್ಲ ಮತ್ತೇ ಈ ಕೂಸುಗಳ ಎಲ್ಲ ಸಿನೆಮಾಕ್ಕೆ ಕರಕ್ಕೊಂಡು ಹೋದರೆ ಎಂತಕ್ಕು ಗೊಂತಿದ್ದಾ…. ಅಲ್ಲಿ ಒಳ ಹೋಯೆಕಾರೆ ಪೈಸೆ ಕೊಡೆಕು. ಅಂತೇ ಆವ್ತೋ? ಇಲ್ಲದ್ರೂ ಆ ಸಿನೆಮಾ ಲ್ಲಿ ಎಂತ ಮಣ್ಣೂ ಇಲ್ಲೆ. ಆನು ಸುರು ನೋಡಿಕ್ಕಿ ಬಂದ ಮತ್ತೆ ಇವರ ಕರಕ್ಕೊಂಡೋದ್ದು. ಸಿನೆಮಾ ಸುರುವಪ್ಪಗ ಬೆಣಚ್ಚು ಕೂಡಾ ಇರ್ತಿಲ್ಲೆ. ಎಲ್ಲಿಗೆ ಈ ಕೂಸುಗಳ ಕರಕ್ಕೊಂಡು ಸಿನೆಮಾಡ ಸಿನೆಮಾ”

ಇದಿಷ್ಟು ಆನು ಕೇಳಿದ ಕಥೆ. ಮತ್ತೆ ಅವು ಯೇವಗಾದರು ಸರಿಯಾಗಿ ಸಿನೆಮಾ ನೋಡಿಪ್ಪಲೂ ಸಾಕು. ಆದರೂ ಸಿನೆಮಾ ಹೇಳುಗ ಎನ್ನ ಮನಸಿಂಗೆ ಬಪ್ಪದು ಇದೇ ಕಥೆ. ಅಜ್ಜ ಪಾಪವಾ? ಮಕ್ಕೊ ಪಾಪವಾಳಿಯೆಲ್ಲ ಎನ್ನತ್ರೆ ಕೇಳೆಡಿ .ಅಜ್ಜನ ಗುರ್ತ ಗೊಂತಪ್ಪಲೆ ಅಜ್ಜನ ಅಜ್ಜನ ಮನೆ ಅಲ್ಲಿಯಾ? ಅಜ್ಜನ ಪುಳ್ಳಿ ಯ ಕೊಟ್ಟದು ಇಲ್ಲಿಗಾಳೀಯೆಲ್ಲ ಕೇಳ್ಲಾಗ….

~~***~~

 

 

 

ಶರ್ಮಪ್ಪಚ್ಚಿ

   

You may also like...

11 Responses

 1. ಪ್ರಸನ್ನಾ ವಿ ಚೆಕ್ಕೆಮನೆ says:

  ಎನ್ನ ಕಥೆಯ ಒಪ್ಪಣ್ಣ ಬೈಲಿಂಗೆ ಹಾಕಿದ ಶರ್ಮಣ್ಣಂಗೆ ತುಂಬು ಹೃದಯದ ಧನ್ಯವಾದ.. ನಿಂಗಳ ಮೂಲಕವೇ ಆನು ಮತ್ತೆ ಮತ್ತೆ ಬೈಲಿಂಗೆ ಬತ್ತಾ ಇಪ್ಪದೂ ಹೇಳ್ಲೆ ಕೊಶಿ.

 2. Shyam... says:

  Kathe laayakaayidu. Ajjana miss maadtha idde.
  Heenge ondu Ajja…
  E kaalalli Ajja heenge cheppudi maadire pulliyinda poli sikkugu…

  • ಪ್ರಸನ್ನಾ ವಿ ಚೆಕ್ಕೆಮನೆ says:

   ಇವು ಎಷ್ಟಾದರು ಹಳೆ ಅಜ್ಜನೂ ಅವರ ಮಕ್ಕಳು ಅಲ್ಲದಾ?ಮಕ್ಕಳುದೆ ಅಜ್ಜನ ಚೆಪ್ಡಿ ಗೊಂತಾಗದ್ದಷ್ಟು ಪಾಪ ಆಗಿಹೋದವಿದಾ….ಕತೆ ಓದಿ ಒಪ್ಪ ಕೊಟ್ಟದು ಕೊಶಿಯಾತು.

 3. ನಿಂಗ ಅಲ್ಲಿ ಕೃಷ್ಣವುದೆ ಕೇಬಿಟಿಯು ಹೇದಪ್ಪಗ ಎನಗಿಲ್ಲಿ ಶಂಕರವಿಟ್ಳವುದೇ ಸಿ ಪಿ ಸಿ ಯುದೆ ನೆಂಪಾತಿಲ್ಲಿ.

  ಹ್ಹ.. ಅಜ್ಜ° ಸಿನೇಮಾ ತೋರ್ಸಿದ್ದು ಪಷ್ಟಾಯ್ದು! ಎಲ ಅಜ್ಜನೇ !! ನವಗಾವ್ತಪ್ಪೋ. ಆದರೆ ಅಂದ್ರಾಣ ಕಾಲಲ್ಲಿ ಎಲ ಅಜ್ಜನೇ! ಸಿನೆಮಾಕ್ಕೋದ್ದೇ !! ಆಯಿಕ್ಕಪ್ಪೋ. ಕತಗೊಂದೊಪ್ಪ

  • ಪ್ರಸನ್ನಾ ವಿ ಚೆಕ್ಕೆಮನೆ says:

   ಮಕ್ಕೊ ಹೇಳಿಯಪ್ಪಗ ಅಜ್ಜಂಗೂ ಸಿನೆಮಾ ನೋಡೆಕೂಳಿ ಆಗದ್ದಿಕ್ಕೋ..ಆರಿಂಗೂ ಗೊಂತಾಗ ಗ್ರೇಶಿತ್ತಿದ್ದವು.ಅದು ಆ ಆಚಕರೆ ಮಾಣಿಂದಾಗಿ ಎಲ್ಲೋರಿಂಗೂ ಗೊಂತಾಗಿ ಆನು ಕತೆ ಬರವ ಹಾಂಗಾದ್ದದು.ಒಪ್ಪ ಕೊಟ್ಟದಕ್ಕೆ ಧನ್ಯವಾದ.

 4. ಬೊಳುಂಬು ಗೋಪಾಲ says:

  ಅಜ್ಜನ ಕೆಟ್ಟುಂಕೆಣಿ ಲಾಯ್ಕಾಯಿದು. ಅಂತೂ ಪೈಸೆ ಕೊಡದ್ದೆ, ಸಿನೆಮಾ ಚಿತ್ರ ನೋಡಿ ಆತಾನೆ.
  ಕತೆಯ ಉದ್ದ ಎಳವಲೆ ಬೇಕಾಗಿ ಸುರುವಿಂಗೆ ಆಟಲ್ಲಿ ಚೆಂಡೆ ಕುಟ್ಟಿದ ಹಾಂಗೆ ಕುಟ್ಟಿದ್ದುದೆ ರೈಸಿತ್ತು. ಮಗಳಕ್ಕಳ ಹೆರಪ್ಪಯಣ ಮನಸ್ಸಿಲ್ಲೇ ಗ್ರೇಶಿ ನೆಗೆ ಬಂತು. ಎಲ್ಲವುದೆ ಆ ಕಾಲಕ್ಕೆ ನೈಜವಾಗಿ ಇದ್ದು. ಈಗ ಆ ಕೂಸುಗೊ ಗೆಂಡನನ್ನು ಮಕ್ಕಳನ್ನು ಹೆರಡುಸಿಯೊಂಡು ಸಿನೆಮಾ ನೋಡ್ಳೆ ಹೋವ್ತವಾಯ್ಕು.

  • ಪ್ರಸನ್ನಾ ವಿ ಚೆಕ್ಕೆಮನೆ says:

   ಅಜ್ಜ ಹೇದರೆ ಅಜ್ಜನೇ ಅವು.ಮಕ್ಕೊ ಈಗ ಅವರ ಮಕ್ಜಳೊಟ್ಟಿಂಗೆ ಕೂಡಾ ಸಿನೆಮಾ ನೋಡ್ಲೆ ಹೋವ್ತವಾದಿಕ್ಕು.ಆದರೂ ಅಂದು ಎರಡು ಜೆಡೆ ಕಟ್ಟಿ ಲಂಬನ ಹೂಗು ಸೂಡಿ ,ಕುಳದ ಬೊಟ್ಟಾಕಿ ಇನ್ನು ಹೆರಡ್ಲೆಡಿಯ….ಈ ಕತೆ ಅವುದೆ ಓದಿಪ್ಪಲೂ ಸಾಕು.ಅಜ್ಜನ ಸಿನೆಮಾ ವ ಮೆಚ್ಚಿ ಒಪ್ಪ ಕೊಟ್ಟದು ಕೊಶಿಯಾತು.

 5. ಅಜ್ಜನ ಬುದ್ಧಿವಂತಿಕೆ ಭಯಂಕರನ್ನೆ.ಅಜ್ಜನ ಕಥೆ ಪಷ್ಟಾಯಿದಾತ ಪ್ರಸನ್ನ.

  • ಪ್ರಸನ್ನಾ ವಿ ಚೆಕ್ಕೆಮನೆ says:

   ಅಪ್ಪು…. ಅಜ್ಜ ಉಶಾರು ಹೇಳಿದೆಯಾ?ಕೊಶಿಯಾತು.. ಧನ್ಯವಾದ

 6. ಅಶ್ವಿನಿ says:

  ಅಜ್ಜನ ಬುದ್ಧಿವಂತಿಕೆಗೆ ಮೆಚ್ಚೆಕ್ಕು… ಕಥೆ ಭಾರಿ ಲಾಯ್ಕ ಆಯಿದು..

  • ಪ್ರಸನ್ನಾ ವಿ ಚೆಕ್ಕೆಮನೆ says:

   ಕತೆ ಓದಿ ಒಪ್ಪ ಕೊಟ್ಟದು ಇಷ್ಟಾತು ಅಶ್ವಿನೀ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *