Oppanna.com

ಅಜ್ಜಿ ಹೇಳಿದ ಕಥೆ-೨

ಬರದೋರು :   ಶರ್ಮಪ್ಪಚ್ಚಿ    on   31/07/2017    9 ಒಪ್ಪಂಗೊ

ಅಜ್ಜಿ ಹೇಳಿದ ಕಥೆ
ಬಡೆಕ್ಕಿಲ ಸರಸ್ವತಿ

ಒಂದು ಗುಡ್ಡ ಇತ್ತೊಡೊ. ಇನ್ನೊಂದು ಗುಡ್ಡಿ ಇತ್ತೊಡೊ. ಎರಡೂ ಒಟ್ಟಿಂಗೆ ಜಾಲು ಉಡುಗಿದವೊಡೋ. ಗುಡ್ಡಂಗೆ ಒಂದು ಅಕ್ಕಿ ಸಿಕ್ಕಿತ್ತೊಡೊ.ಗುಡ್ಡಿಗೆ ಒಂದು ಉದ್ದು ಸಿಕ್ಕಿತ್ತೊಡೊ. “ನಾವಿದರ ಕೊಟ್ಟಿಗೆ ಮಾಡುವೊ°” ಹೇಳಿತ್ತೊಡೊ ಗುಡ್ಡಿ. ಅಕ್ಕಂಬಗ ಗುಡ್ಡ° ಹೇಳಿತ್ತು. ಎರಡನ್ನೂ ಬೊದುಲಲೆ ಹಾಕಿದವು. ಆ ಮೇಲೆ ಗುಡ್ಡ ಗುಡ್ಡಿ ಎರಡೂ ಸೇರಿ ಕಡದವೊಡೊ. ಹೇಂಗೆ ಕಡದವು ಹೇಳು ಒಪ್ಪಣ್ಣಾ? ಅಕ್ಕಿ ಕಚಾ ಕಚಾ ಉದ್ದು ಗುದೂ ಗುದೂ, ಅಕ್ಕಿ ಕಚಾ ಕಚಾ ಉದ್ದು ಗುದೂ ಗುದೂ. ಎರಡೂ ಹಿಟ್ಟಿನ ದೊಡಾ ಮಂಡಗೆಲಿ ಹಾಕಿ ಹುಳಿ ಬಪ್ಪಲೆ ಮುಚ್ಚಿ ಮಡುಗಿದವೊಡೊ. ಆ ಮೇಲೆ ಮೂಡೆ ಕಟ್ಟುದೆಂತರಲ್ಲಿ? ನೆಲ್ಲಿ ಸೊಪ್ಪಿಲಿ. ಎರಡೂ ಸೇರಿ ನೆಲ್ಲಿ ಸೊಪ್ಪಿಂಗೆ ಹೋದವು. ಎಲ್ಲಿ ಹುಡ್ಕಿದರೂ ಸೊಪ್ಪಿಲ್ಲೆ. ಹೋದವು ಹೋದವು, ಕಾಡ ಕರೇಂಗೆ ಹೋದವು. ಅಲ್ಲಿ ದಣೀಯ ಸೊಪ್ಪಿತ್ತು. ಗುಡ್ಡ° ಸೊಪ್ಪು ಕೊಯ್ತಾ ಇಪ್ಪಾಗ ಅಲ್ಲೊಂದು ದೊಡಾ ಹುಲಿ ಬಂದು ಗುಡ್ಡನ ಅಡ್ಡಕಟ್ಟಿ “ನಿನ್ನ ಈಗ ತಿಂತೇ!” ಹೇಳಿ ಹೆದರ್ಸಿತ್ತು. ಗುಡ್ಡ ಇದಕ್ಕೆಲ್ಲಾ ಹೆದರುಗಾ? ಗುಡ್ಡ ಹೇಳಿತ್ತು “ನೀನೆನ್ನ ತಿನ್ನೆಡಾ, ಆನು ಕೊಟ್ಟಿಗೆ ಮಾಡ್ಲೆ ಸೊಪ್ಪಿಂಗೆ ಬಂದದು, ನಾಳೆ ಉದಿಯಪ್ಪಗ ಬಾ, ನಿನಗೆ ಕೊಟ್ಟಿಗೆ ಕಾಯ್ಹಾಲು ಹೊಟ್ಟೆ ತುಂಬ ಕೊಡುವೆ”. ಕೊಟ್ಟಿಗೆ ಕಾಯ್ಹಾಲಿನ ಹೆಸರು ಹೇಳ್ವಾಗಲೇ ಹುಲಿಯ ಬಾಯಿಲಿ ನೀರು ಬಂತೊಡೊ. “ಅಕ್ಕಂಬಗ, ನಾಳೆ ಉದಿ ಆಯ್ಕೊಂಡು ಬಪ್ಪಾಗ ಆನು ನಿನ್ನ ಮನೆಲಿರ್ತೆ, ನೆಂಪಿರಲಿ” ಹೇಳಿಕ್ಕಿ ಹುಲಿ ಕಾಡಿನೊಳಂಗೆ ಹೋತು.

ಇತ್ಲಾಗಿ ಗುಡ್ಡಿಯನ್ನುದೇ ಒಂದು ಕುದ್ಕ ಅಡ್ಡ ಕಟ್ಟಿದ್ದು, “ನಿನ್ನ ಈಗ ತಿಂತೇ!” ಹೇಳಿತ್ತು. ಅದಕ್ಕೆ ಗುಡ್ಡಿ-“ಎನ್ನ ತಿನ್ನೆಡಾ, ನಿನಗೆ ಕೊಟ್ಟಿಗೆ ಕಾಯ್ಹಾಲು ಕೊಡ್ತೆ, ನಾಳೆ ಉದಿಯಪ್ಪಗ ಬಾ” ಹೇಳಿತ್ತು. ಕುದ್ಕಂಗೆ ಖುಶೀ ಆತು. “ಅಂಬಗ ಈಗ ನೀನು ಹೋಗಿ  ಕೊಟ್ಟಿಗೆ ಮಾಡಿ ಮಡುಗು, ನಾಳೆ ಉದಿಯಪ್ಪಗ ಬತ್ತೆ. ಮತ್ತೆ ನೀನು ಕೊಟ್ಟಿಗೆ ಕೊಡದ್ದರೆ ನಿನ್ನನ್ನೇ ತಿಂಬೆ, ನೆಂಪಿರಲಿ” ಹೇಳಿಕ್ಕಿ ಗುಡ್ಡಿಯ ಬಿಟ್ಟಿಕ್ಕಿ ಕಾಡಿನೊಳಂಗೆ ಹೋತು. ಆ ಮೇಲೆ ಗುಡ್ಡ ಗುಡ್ಡಿ ನೆಲ್ಲಿ ಸೊಪ್ಪಿನ ಕಟ್ಟಿ ಕಟ್ಟಿ ಹೊತ್ತುಗೊಂಡು ಮನಗೆ ಬಂದು ನೆಲ್ಲಿ ಸೊಪ್ಪಿನ ಮೂಡೆ ಕಟ್ಟಿ ಅದರೊಳಂಗೆ ಹಿಟ್ಟಿನ ಎರದು ಅಟ್ಟಿನಳಗೆಲಿ ಬೇವಲೆ ಮಡುಗಿದವು. ಗುಡ್ಡಿ ಕಾಯಿಕಡದು ಕಾಯ್ಹಾಲು ಮಾಡಿತ್ತು. ಕೊಟ್ಟಿಗೆ ಬೇವಾಗ ಘಮಘಮ ಪರಿಮಳ ಬಂತು. ಗುಡ್ಡ°ಗುಡ್ಡಿ ಕಾಯ್ಹಾಲು ಹಾಯ್ಕೊಂಡು ಕೊಟ್ಟಿಗೆ ತಿಂದವಯ್ಯಾ ತಿಂದವು. ಮೂಗಿಂಗೆ ವರೇಗೆ ತಿಂದವು. ಅಷ್ಟಪ್ಪಗ ಕೊಟ್ಟಿಗೆ ಇಲ್ಲಾ ಖಾಲಿ. “ಹೋ ಇನ್ನೀಗ ನಾಳಂಗೆ ಹುಲಿಗೆಂತರ ಕೊಡುದು? ಕುದ್ಕಂಗೆಂತರ ಕೊಡುದು?” ಎರಡುದೇ ಪೆಚ್ಚಾದವು. ಎಂತಾರೂ ಮಾಡೆಕ್ಕೀಗ. ಬೂದಿಯನ್ನೂ ಮಣ್ಣನ್ನೂ ಕಲಸಿ, ನೆಲ್ಲಿ ಸೊಪ್ಪಿನ ಮೂಡೆಲಿ ತುಂಬಿಸಿ ಅಟ್ಟಿನಳಗೆಲಿ ಬೇಶಿದವು. ಕಾಯ್ಹಾಲಿಂಗೆಂತ ಮಾಡುದು? ಒಂದು ಕಠಾರಲ್ಲಿ ನೀರು ತುಂಬ್ಸಿ ಅದರಲ್ಲಿ ಸುಣ್ಣ ಕರಡಿಸಿ ಮಡುಗಿದವು. ಇನ್ನೊಂದು ಕಠಾರಲ್ಲಿ ಉಪ್ಪು ನೀರು ಮಾಡಿ ಮಡುಗಿಕ್ಕಿ ’ಎರು’ವಿನ ಕುಡೆಲಿ ಹುಗ್ಗಿ ಕೂದವು. ಅಷ್ಟು ಹೊತ್ತಿಂಗೆ ಉದಿ ಆಯ್ಕೊಂಡು ಬಂತು. ಹುಲಿವುದೇ ದೂರಲ್ಲಿ ಬಪ್ಪದು ಕಂಡತ್ತು. “ಗುಡ್ಡಾ ಗುಡ್ಡೀ ಎಲ್ಲಿದ್ದು ನಾಞ್ಞೀ” ಹೇಳಿ ಗರ್ಜನೆ ಮಾಡಿಗೊಂಡೇ ಬಂತು. ಗುಡ್ಡ ಕುಡೆ ಒಳಂದವೇ “ಓ ಅಲ್ಲಿ” ಹೇಳಿ ಬೆರಳು ತೋರ್ಸಿತ್ತು. ಹುಲಿ ಅಲ್ಲಿ ದಬಕ್ಕನೆ ಹಾರಿ ಅಟ್ಟಿನಳಗೆಲಿದ್ದ ಕೊಟ್ಟಿಗೆ ತಿಂಬಲೆ ಸುರುಮಾಡಿತ್ತು. ಅಷ್ಟಪ್ಪಗ ಹುಲಿಗೆ ಗೆಂಟ್ಳು ಕಟ್ಟಲೆ ಸುರುವಾತು ಒಪ್ಪಕುಟ್ಟೀ. ಅದು ಘೊರಂ ಘೊರಂ ಹೇಳಿ ಬೊಬ್ಬೆ ಹಾಕುಲೆ ನೋಡ್ತೂ ,ಸ್ವರವೇ ಬತ್ತಿಲ್ಲೆ. ಹೇಂಗೋ ಮಾಡಿ ಹೇಳಿತ್ತು “ಗುಡ್ಡಾ ಗುಡ್ಡೀ, ಎಲ್ಲಿದ್ದು ಜಾಯಿ?” ’ಓ ಅಲ್ಲಿ’ ಹೇಳಿ ಗುಡ್ಡ ಸುಣ್ಣನೀರಿನ ಕಠಾರವ ತೋರ್ಸಿತ್ತು. ಹುಲಿ ಅದರ ಗುಳುಗುಳುನೆ ಕುಡುದತ್ತು. ಗೆಂಟ್ಳು ಸರಿ ಅಕ್ಕೋ ಹೇಳಿ ಗ್ರೇಶಿಗೊಂಡು. ಸುಣ್ಣ ನೀರಲ್ಲದಾ? ಅದರ ಬಾಯಿ, ಗೆಂಟ್ಳು, ಹೊಟ್ಟೆ ಎಲ್ಲ ಬೆಂದು ಹೋತು. ಒಂದು ದೊಡ್ಡ ಘರ್ಜನೆ ಹೆರಟತ್ತದರ ಬಾಯಿಂದ. ಅಲ್ಲಿಗೆ ಹುಲಿ ಪಡ್ಚ. ಗುಡ್ಡ ಗುಡ್ಡಿ ಎರುವಿನ ಕುಡೆಂದ ಹೆರ ಬಂದು ಎರಡೂ ಜೆನ ಸೇರಿ ಮನೆ ಹಿಂದಾಣ ಹಳ್ಳಕ್ಕೆ ನೂಕಿ ಹಾಕಿಕ್ಕಿ ತಿರುಗ ಎರುವಿನ ಕುಡೆಲಿ ಹುಗ್ಗಿ ಕೂದವು ಪುಟ್ಟಾ!. ಎಷ್ಟು ಹುಷಾರಿ ಇದ್ದವಲ್ಲದಾ?

ರಜ ಹೊತ್ತಪ್ಪಗ ಕುದ್ಕ ಬಂತು. “ ಗುಡ್ಡಾ ಗುಡ್ಡೀ ಎಲ್ಲಿದ್ದು ನಾಞ್ಞಿ” ಹೇಳಿ ಆರ್ಭಟೆ ಕೊಟ್ಟತ್ತು!. ಗುಡ್ಡಿ ಕುಡೆ ಒಳಂದಲೇ ತಲೆ ಮಾತ್ರ ಹೆರೆ ಹಾಕಿ ’ಓ ಅಲ್ಲಿ” ಹೇಳಿ ಬೆರಳು ತೋರ್ಸಿತ್ತು. ಕುದ್ಕಂಗೆ ಕಂಡಾಬಟ್ಟೆ ಹಶು ಆಯಿಕೊಂಡಿತ್ತು. ಬೂದಿ ಮಣ್ಣಿನ ಕೊಟ್ಟಿಗೆಯ ಕಣ್ಣುಮೋರೆ ಇಲ್ಲದ್ದ ಹಾಂಗೆ ಗಬಗಬನೆ ಗಬಳ್ಸಿತ್ತು. ಅದಕ್ಕೂದೆ ಹುಲಿಯ ಹಾಂಗೆ ಗೆಂಟ್ಳು ಬಾಯಿ ಒಣಗಿತ್ತು. ಹಾಂಗಾದರೂ ಅಲ್ಲಿಂದಲೇ “ಗುಡ್ಡಾ ಗುಡ್ಡೀ ಎಲ್ಲಿದ್ದು ಜೀಜಿ” ಹೇಳಿ ಕೇಳಿತ್ತು. ಗುಡ್ಡಿ ’ಓ ಅಲ್ಲಿ’ ಹೇಳಿ ಬೆರಳು ತೋರ್ಸಿತ್ತು. ಕುದ್ಕ ಅಲ್ಲಿದ್ದ ಉಪ್ಪುನೀರಿನ ಬುರುಬುರುನೆ ಕುಡ್ತದಾ! ಅದರ ಗೆಂಟ್ಳು ಕಟ್ಟಿ ಹೊಟ್ಟೆ ಕರಂಚಿ ವೌವೌ ಹೇಳಿ ಬೊಬ್ಬೆ ಹೊಡದು ಕುದ್ಕನೂದೆ ಪಡ್ಚ. ಹುಲಿಯ ಎಳಕ್ಕೊಂಡು ಹೋದ ಹಾಂಗೆ ಕುದ್ಕನನ್ನೂ ಗುಡ್ಡ ಗುಡ್ಡಿಗೊ ಎಳಕ್ಕೊಂಡು ಹೋಗಿ ಮನೆಹಿಂದಾಣ ತೋಡಿಂಗೆ ನೂ……ಕಿ  ಬಿಟ್ಟವು. ಆಮೇಲೆ ಗುಡ್ಡ° ಗುಡ್ಡಿಗಳ ತಿಂಬಲೆ ಯಾವ ಹುಲಿಯೂ ಕುದ್ಕನೂ ಬಯಿಂದವೇ ಇಲ್ಲೆ. ಕೆಟ್ಟಪ್ರಾಣಿಗಳ ಹೀಂಗೆ ಉಪಾಯಲ್ಲಿ ಸೋಲ್ಸೆಕ್ಕಲ್ಲದಾ ಒಪ್ಪಕುಞ್ಞಿ?

~~~***~~~

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ,
ನಂ: 1566, 19th ಕ್ರಾಸ್
ರೂಪಾನಗರ
ಭೋಗಾದಿ ಪೋಸ್ಟ್
ಮೈಸೂರು 570026

9019274678

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

9 thoughts on “ಅಜ್ಜಿ ಹೇಳಿದ ಕಥೆ-೨

  1. ಗುಡ್ಡ ಗುಡ್ಡಿಯ ಕತೆ ಲಾಯಕಿತ್ತು. ಅವು ಮಾಡಿದ ಕೆಣಿ ಸೂಪರ್.
    ನೆಲ್ಲಿ ಸೊಪ್ಪು ಸಣ್ಣ ಸಣ್ಣ ಸೊಪ್ಪಲ್ಲದೊ ? ಅದರಲ್ಲಿ ಕೊಟ್ಟಿಗೆ ಮಾಡ್ಳೆಡಿತ್ತೊ ?

  2. ಎನ್ನ ಮೈದುನನ ಮಗ ಕತೆ ಹೇಳು ದೊಡ್ಡಮ್ಮಾ”ಹೇಳುಗ ಆನು ಹೀಂಗಿದ್ದ ಹಳೇ ಕತೆಗಳನ್ನೇ ಹೇಳುದು.ಸುಟ್ಟವಿನ ಕತೆ,ಮಂಗ ಬೆಣ್ಣೆ ಪಾಲು ಮಾಡಿ ಕತೆ….ಈ ಕತೆಗೊ ಎಲ್ಲ ಹಳತ್ತಪ್ಪಲಿಲ್ಲೆ.ನಿತ್ಯ ನೂತನ.. ಬಡೆಕ್ಕಿಲ ಅತ್ತೆಯ ಕತೆ ಇನ್ನೂದೆ ಬರಲಿ.ಕಾಯ್ತಾ ಇದ್ದೆ….

  3. ಒಳ್ಳೆ ಕತೆ.ಈ ಕತೆ ಮತ್ತೆ ನೆಂಪಾತು

  4. ಈಗಣ ಮಕ್ಕೊಗೆ ಅಜ್ಜಿ ಕಥೆ ಗೊಂತೇ ಇರ
    ಕಾಗಕ್ಕ ಗುಬ್ಬಕ್ಕ ಕಥೆ ಸುಟ್ಟವಿನ ಕಥೆ ಎಷ್ಟೋ ಇತ್ತು

    ಹಳೆಯ ನೆನಪುಗೊಕ್ಕೆ ಜೀವ ಕೊಡುವ ಸರಸ್ವತಿ ಅಕ್ಕಂಗೆ ಹಾರ್ದಿಕ ನಮನ

  5. ಇದು ಒಳ್ಳೆ ಕತೆ . ಶಾಲೆಲಿ “ಕತೆ ಹೇಳಿ ಮಾತಾಶ್ರೀ” ಹೇಳ್ಯೊಂಡು ಗಿರ್ಗಾಣುಸುತ್ತ ಮಕ್ಕಳ ಬಡೆಕ್ಕಿಲ ಅಕ್ಕನತ್ರೆ ಕಳುಸಿರೆ ಹೇಂಗೆ!! ಹೇಳಿ ಒಂದು ಯೋಚನೆ ಆವುತ್ತಾ ಇದ್ದೆನಗೆ!!!.ಅವಕ್ಕೆ ರಾಮಾಯಣ ಕತೆ ಬೇಡ. ಮನ್ನೆ ಹೇಳಿದ ಕೋಳಿಕತೆ ಹೇಳಿ. ವರಾತ ಮಾಡೆಂಡಿತ್ತವು,ಕುಂಞಿ ಮಕ್ಕೊ

    1. ಅಂಬಗ ವಿಜಯಕ್ಕ ಟೀಚೆರೊ ಏವ ಶಾಲೆಲಿ.

      1. ಆನು ಟೀಚರಲ್ಲ, ಶಿವರಾಮಣ್ಣ. ನಮ್ಮ ಶ್ರೀಗುರುಗಳ ವಿದ್ಯಾಸಂಸ್ಥೆಯಾದ ,ಶ್ರೀಭಾರತೀ ವಿದ್ಯಾಪೀಠ ಮುಜುಂಗಾವು, ಇಲ್ಲಿ ಗ್ರಂಥಪಾಲಿಕೆ. ಒಂದನೆ,ಎರಡನೆ, ಮಕ್ಕೊಗೂ ಲೈಬ್ರೆರಿ ಫಿರೆಡ್ ಇದ್ದು. ಆ ಸಮಯಲ್ಲಿ ಅವಕ್ಕೆ,ಕತೆ,ಪದ್ಯ, ಮಗ್ಗಿ,ಕೋಷ್ಟಕ, ನಿತ್ಯನಕ್ಷತ್ರದಹೆಸರು, ತಿಥಿಗಳಹೆಸರು, ಸಂವತ್ಸರ ಹೆಸರು,ಹೀಂಗಿದ್ದೆಲ್ಲ ಒಂದೊಂದಾರಿ ಒಂದೊಂದು ಹೇಳಿಕೊಡುವದು.

        1. ಅಂಬಗ ಧರ್ಮ ಭಾರತಿಲಿ ವಿಜಯ ಸುಬ್ರಮಣ್ಯ ಹೇಳಿ ಕೆಲವು ವರದಿ ಬರವದು ನಿಂಗಳೆಯ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×