Oppanna.com

ಒಪ್ಪ ಕುಂಞ್ಞಿ ಪುಟ್ಟಂಗೆ ಅಜ್ಜಿ ಹೇಳುವ ಕಥೆಗೊ

ಬರದೋರು :   ಶರ್ಮಪ್ಪಚ್ಚಿ    on   24/07/2017    8 ಒಪ್ಪಂಗೊ

ಈ ಸರ್ತಿ ಬಡೆಕ್ಕಿಲ ಅತ್ತೆ ಮಕ್ಕೊಗೆ ಕಥೆ ಹೇಳ್ತಾ ಇದ್ದವು.
ದೊಡ್ಡಾದವು ಮೊದಲು ಸಣ್ಣ ಆಗಿಪ್ಪಾಗ ಅಜ್ಜಿಕ್ಕಳ ಕೈಲಿ ಹೇಳ್ಸಿಗೊಂಡ ಕತೆಯೇ ಆದರೂ, ಈಗಾಣ ಮಕ್ಕೊಗೆ ಇದರ ಓದಿ ಹೇಳಲಕ್ಕು. ನಿಂಗಳ ಪ್ರೋತ್ಸಾಹಂದ ಇನ್ನೂ ಹೆಚ್ಚಿನ ಕತೆಯನಿರೀಕ್ಷೆ ಮಾಡಲಕ್ಕು.

ಒಪ್ಪ ಕುಂಞ್ಞಿ ಪುಟ್ಟಂಗೆ ಅಜ್ಜಿ ಹೇಳುವ ಕಥೆಗೊಬಡೆಕ್ಕಿಲ ಸರಸ್ವತಿ

ಒಂದೂರಿಲ್ಲಿ ಕಾಕಣ್ಣನೂ ಒಂದು ಗುಬ್ಬಕ್ಕನೂ ಇತ್ತಿದ್ದವೊಡೊ. ಗುಬ್ಬಕ್ಕಂದು ಚೆಂದದ ಮನೆಡೊ. ಕಾಕಣ್ಣಂದು ಸಗಣದ ಮನೆಯೊಡೊ. ಒಂದು ದಿನ ಎರಡುದೇ ಒಪ್ಪೆ (ವಸ್ತ್ರ) ಒಗವಲೆ ಹೋದವೊಡೊ. ಹೊಳೆ ಕರೆಂಗೆ ಮುಟ್ಟಿ ಅಪ್ಪಗ ಆಕಾಶ ಕಪ್ಪಾತು. ರಜ ಹೊತ್ತಿಇಲಿ ಜೀಜಿ (ನೀರು) ಮಳೆ ಬಕ್ಕು ಹೇಳಿ ಗುಬ್ಬಕ್ಕಂಗೆ ಗೊಂತಾತು. ಗುಬ್ಬಕ್ಕಂದು ಬೆಳಿ ಒಪ್ಪೆ, ಕಾಕಣ್ಣಂದು ಕರಿ ಕರಿ ಕೆಸರು ಹಿಡ್ಕಟೆ ವಸ್ತ್ರಂಗೊ. ಗುಬ್ಬಕ್ಕ ಬೇಗ ಬೇಗ ವಸ್ತ್ರ ಒಗದಿಕ್ಕಿ ಮನಗೆ ಬಂದು ಬಾಗಿಲು ಹಾಕಿ ಕೂದತ್ತು. ಅಷ್ಟೊತ್ತಿಂಗೆ ದೊಡಾ ಮಳೆ ಬಂತೊಡೊ. ಕಾಕಣ್ಣಂಗೆ ಒಪ್ಪೆ ಒಗದೇ ಆಯಿದಿಲ್ಲೆಡೊ. ಅದು ಒಗಕ್ಕೊಂಡೇ ಇಪ್ಪಾಗ ಬೆಳ್ಳ ಮಳೆ ಜೋರಾಗಿ ಕಾಕಣ್ಣನೂ ಬೆಳ್ಳಲ್ಲಿ ಹೋತೊಡೊ. ಹೊಳೆ ನೀರಿಲಿ ಕಾಕಣ್ಣಾ ತೇಲಿಗೊಂಡು ಹೋಗಿ ಒಂದು ಮುಂಡೆಂಗಿ ಬಲ್ಲೆಲಿ ಸಿಕ್ಕಿಗೂಂಡತ್ತೊಡೊ. ಮಳೆ ಎಲ್ಲ ಕಮ್ಮಿ ಅಪ್ಪಗ ಕಾಕಣ್ಣ ಮೆಲ್ಲಂಗೆ ಬಲ್ಲೆಂದ ರೆಂಕೆ ಬಿಡಿಸಿಗೊಂಡು ಮೇಲಂಗೆ ಬಂದು ನೋಡ್ತು. ಅದರ ಸಗಣದ ಮನೆ ಇಲ್ಲಲೇ ಇಲ್ಲೆ!.  ಸಗಣದ ಗೋಡೆ ಮಾಡಲ್ಲದಾ? ನೀರಿಂಗೆ ಕರಗಿ ಬಿದ್ದು ಬೆಳ್ಳನೀರು ಮನೆಯನ್ನೇ ಎಳಕ್ಕೊಂಡು ಹೋಗಿಯೇ ಬಿಟ್ಟಿದು. ಕಾಕಣ್ಣ ’ಇನ್ನೆಂತ ಮಾಡುದು’? ಹೇಳಿ ಯೋಚನೆ ಮಾಡಿತ್ತು. ಅಷ್ಟಪ್ಪಗ ಗುಬ್ಬಕ್ಕನ ಮನೆ ಇದ್ದನ್ನೆ? ಹೇಳಿ ನೆನಪ್ಪಾತು. ಮುಂಡೆಂಗಿಯ ಮುಳ್ಳಿಂದಾಗಿ ಅದರ ರೆಂಕೆ ಹರುದು ಹೋದ ಕಾರಣ ಅದಕ್ಕೆ ಹಾರಲೂ ಎಡಿತ್ತಿಲ್ಲೆ. ಮಳೆ ನೀರಿಲಿ ಬೊದುಲಿ ಗಡಗಡ ನಡುಗಿಗೊಂಡು ಗುಬ್ಬಕ್ಕನ ಮನಗೆ ಬಂತು.
“ ಗುಬ್ಬಕ್ಕಾ ಗುಬ್ಬಕ್ಕಾ ಒಂದಾರಿ ಬಾಗಿಲು ತೆಗೇ! ಕುಂಡೆಲ್ಲಾ ಚಿರುಟಿತ್ತು, ಮಂಡೆಲ್ಲಾ ಬೋಳಾತು, ಒಂದಾರಿ ಬಾಗಿಲು ತೆಗೇ” ಹೇಳಿ ಕೂಗಿತ್ತು.
ಅದಕ್ಕೆ ಗುಬ್ಬಕ್ಕ ಒಳಂದವೇ “ ಆನು ಪುಟ್ಟು ಕುಂಞ್ಞಿಗೊಕ್ಕೆ ಹೆಜ್ಜೆ ಬೇಶುತ್ತಾ ಇದ್ದೆ” ಹೇಳಿತ್ತು.
ಒಂದು ರಜ ಹೊತ್ತು ಕಳುದು ತಿರುಗ ಕಾಕಣ್ಣ ಹೇಳಿತ್ತು “ ಗುಬ್ಬಕ್ಕಾ ಗುಬ್ಬಕ್ಕಾ ಒಂದಾರಿ ಬಾಗಿಲು ತೆಗೇ! ಕುಂಡೆಲ್ಲಾ ಚಿರುಟಿತ್ತು, ಮಂಡೆಲ್ಲಾ ಬೋಳಾತು, ಒಂದಾರಿ ಬಾಗಿಲು ತೆಗೇ!”
ಅದಕ್ಕೆ ಗುಬ್ಬಕ್ಕ  “ ಆನು ಎನ್ನ ಪುಟ್ಟ ಕುಂಞ್ಞಿಗೊಕ್ಕೆ ಉಂಬಲೆ ಜಾಯಿ ಕೊದುಶುತ್ತಾ ಇದ್ದೆ” ಹೇಳಿತ್ತು.
ರಜಾ ಕಳುದು ಕಾಕಣ್ಣ ಮದಲಾಣ ಹಾಂಗೆ ಕೂಗಿಗೊಂಡು ಹೇಳಿತ್ತು.
ಅದಕ್ಕೆ ಗುಬ್ಬಕ್ಕ “ಆನು ಎನ್ನ ಪುಟ್ಟ ಕುಞ್ಞಿಗೊಕ್ಕೆ ಹೆಜ್ಜೆ ಜಾಯಿ ಉಣ್ಸುತ್ತಾ ಇದ್ದೆ” ಹೇಳಿತ್ತು.
ಕಾಕಣ್ಣ ಮತ್ತೊಂದರಿ “ ಗುಬ್ಬಕ್ಕಾ ಗುಬ್ಬಕ್ಕಾ ಬಾಗಿಲು ತೆಗೆ” ಹೇಳಿತ್ತು.
ಗುಬ್ಬಕ್ಕ ಹೇಳಿತ್ತು “ ಅನು ಎನ್ನ ಪುಟ್ಟ ಕುಂಞ್ಞಿಗಳ ಉಚ್ಚಾಲ್ಲಿ ಮನುಶಿ ತೂಗುತ್ತಾ ಇದ್ದೇ”
ಕಾಕಣ್ಣ ತಿರುಗಿ ಕೂಗಿಗೊಂಡು “ ಬಾಗಿಲು ತೆಗೆ ಗುಬ್ಬಕ್ಕಾ, ಚಳಿ ತಡೆತ್ತಿಲ್ಲೆ, ಎನ್ನ ರೆಂಕೆಲ್ಲ ಹರುದು ಹೋಯಿದು, ಮಂಡೆಲ್ಲಾ ಬೋಳಾಯಿದು” ಹೇಳಿತ್ತು.
ಈಗ ಗುಬ್ಬಕ್ಕ ಬಾಗಿಲು ತೆಗದತ್ತು. ಕೂಡ್ಳೆ ಕಾಕಣ್ಣ ಒಳ ಬಂದು “ ಎನಗೊಂದು ಅಗ್ಗಿಷ್ಟಿಕೆ ಮಾಡಿಕೊಡು, ಚಳಿ ಕಾಸಿಗೊಳ್ತೆ” ಹೇಳಿತ್ತು.
ಗುಬ್ಬಕ್ಕ ಒಂದು ಅಳಗೆಲಿ ಒಂದಿಶ್ಟು ಉಜ್ಜಿ ಉಜ್ಜಿ ಕೆಂಪುಕೆಂಪು ಕೆಂಡ ಹಾಕಿ ಕಾಕಣ್ಣನ ಹತ್ತರೆ ತಂದು ಮಡುಗಿತ್ತು. ಕಾಕಣ್ಣ ಅದರ ರೆಂಕೆಯ ಪಟಪಟನೆ ಕುಡುಗಿ ಉಜ್ಜಿಕಾಯಿ ಮಾಡಿಗೊಂಡು ಚಳಿ ಕಾಸಿತ್ತು, ಆ ಮೇಲೆ ಎನಗೆ ಒರಗೆಕ್ಕು ಹೇಳಿತ್ತು. ಅದಕ್ಕೆ ಗುಬ್ಬಕ್ಕ ಹೇಳಿತ್ತು “ನಿನಗೆ ಎಲ್ಲಿ ಅಕ್ಕು? ಅಡಿಗೆಕೋಣೆಯ ಮೇಲಾಣ ಹಲಗೆ ಆಕ್ಕೋ?”,
“ಬೇಡಪ್ಪಾ, ಮಾಡು ಬೀಳುಗು ಎನ್ನ ಮೇಲೆ” ಹೇಳಿತ್ತು ಕಾಕಣ್ಣ.
“ಅಂಬಗ ಕೈಸಾಲೆ ಅಟ್ಟಲ್ಲಿ ಅಕ್ಕೋ”
“ಬೇಡಪ್ಪಾ! ಎನಗೆ ಅಲ್ಲಿಗೆ ಹತ್ತುಲೆಡಿಯ”
“ಹಾಂಗಾರೆ ತೊಟ್ಳ ಅಡಿಲಿ ರಜ ಜಾಗೆ ಇದ್ದು, ಅಲ್ಲಿ ಮನಿಕ್ಕೊ” ಹೇಳಿತ್ತು ಗುಬ್ಬಕ್ಕ
“ಬೇಡಪ್ಪಾ ತೊಟ್ಳು ತಲಗೆ ಬೀಳುಗು, ಆನು ತೊಟ್ಳಿಲಿಯಾದರೆ ಮನಿಕ್ಕೊಂಬೆ” ಹೇಳಿತ್ತು ಕಾಕಣ್ಣ.
ಗುಬ್ಬಕ್ಕ ಪಾಪದ್ದು. “ಅಕ್ಕಂಬಗ, ಎನಗೆ ಒರಕ್ಕು ಬತ್ತಾ ಇದ್ದು, ನೀನೂ ಮನುಗು, ಆನೂದೆ ಮನುಗುತ್ತೆ” ಹೇಳಿತ್ತು.

ಕಾಕಣ್ಣಂಗೆ ಖುಶೀ ಆತು. ತೊಟ್ಳಿಂಗೆ ಹತ್ತಿ ಮನಿಕ್ಕೊಂಡತ್ತು. ಒಂದು ಒರಕ್ಕಪ್ಪಗ ಅದಕ್ಕೆ ಜೋರು ಹಶು ಅಪ್ಪಲೆ ಸುರು ಆತು. ಗುಬ್ಬಕ್ಕನ ಕುಂಞ್ಞಿಗಳ  ನೋಡಿ ಅದಕ್ಕೆ ಬಾಯಿಲಿ ನೀರು ಬಪ್ಪಲೆ ಸುರು ಆತು. ಎಂತ ಮಾಡಿತ್ತು? ಒಂದು ಕುಂಞ್ಞಿಯ ತೆಗದು ಅಳಗೆಲಿಪ್ಪ ಉಜ್ಜಿಗೆ ಹಾಕಿತ್ತು. ಅದು ’ಡಾಬ್ ಡೀಬ್ಬನೆ’ ಹೊಟ್ಟಿತ್ತು. ಅಷ್ಟಪ್ಪಗ ಗುಬ್ಬಕ್ಕಂಗೆ ಎಚ್ಚರಿಗೆ ಆತು. “ ಡಾಬ್ ಡೀಬ್ ಎಂತ ಕಾಕಣ್ಣಾ?” ಹೇಳಿ ಕೇಳಿತ್ತು. ಅದಕ್ಕೆ ಕಾಕಣ್ಣ “ಅಂಗಾಡಿಗೆ ಹೋದೆ, ನಾಲ್ಕು ಬೇಳೆ ತಂದೆ, ಒಂದು ಬೇಳೆ ಸುಟ್ಟಾಕಿ ತಿಂದೆ, ಇನ್ನು ಮೂರುಬೇಳೆ ಬಾಕಿ ಇದ್ದು” ಹೇಳಿತ್ತು. ಗುಬ್ಬಕ್ಕ ಪಾಪ! ಅಪ್ಪಾಯಿಕ್ಕು ಹೇಳಿ ಗ್ರೇಶಿ ಒರಗಿತ್ತು. ಕಾಕಣ್ಣ ಇನ್ನೊಂದು ಕುಂಞ್ಞಿಯ ಉಜ್ಜಿಗೆ ಹಾಕಿತ್ತು. ಅದುದೆ ಡಾಬ್ ಡೀಬನೆ ಹೊಟ್ಟಿತ್ತು. ಗುಬ್ಬಕ್ಕಂಗೆ ತಿರುಗ ಎಚ್ಚರಿಕೆ ಆತು. “ಡಾಬ್ ಡೀಬ್ ಏನು ಕಾಕಣ್ಣಾ” ಹೇಳಿ ಕೇಳಿತ್ತು. ಕಾಕಣ್ಣ ಹೇಳಿತ್ತು “ಅಂಗಾಡಿಗೆ ಹೋದೆ, ನಾಲ್ಕು ಬೇಳೆ ತಂದೆ, ಎರಡು ಬೇಳೆ ಸುಟ್ಟಾಕಿ ತಿಂದೆ, ಇನ್ನು ಎರಡು ಬೇಳೆ ಬಾಕಿ ಇದ್ದು” ಹೇಳಿತ್ತು. ಗುಬ್ಬಕ್ಕ ಅಪ್ಪಾದಿಕ್ಕು ಹೇಳಿ ಗ್ರೇಶಿ  ಅದರಷ್ಟಕ್ಕೆ ಒರಗಿತ್ತು. ಕಾಕಣ್ಣ ಹೀಂಗೆ ಸುಟ್ಟಾಕಿ ಒಳುದೆರಡು ಕುಂಞ್ಞಿಗಳನ್ನೂ ನುಂಗಿಕ್ಕಿ ಉದಿಯಾಕ್ಕಾರೆ ಮದಲೇ ಬಾಗಿಲು ತೆಗದಿಕ್ಕಿ ಹಾರಿ ಹೋತು!. ಗುಬ್ಬಕ್ಕ ಎಲ್ಲಾ ಹಕ್ಕಿಗೊ ಚುಂ ಚುಂ ಹೇಳಿ ಏಳುವ ಹೊತ್ತಿಂಗೆ ಎದ್ದು ತೊಟ್ಳು ನೋಡ್ತು, ಒಂದೇ ಒಂದು ಕುಂಞ್ಞಿಯೂ ಇಲ್ಲೆ. ಅಯ್ಯೋ ದೇವರೇ ಎನ್ನ ಎಲ್ಲಾ ಕುಂಞ್ಞಿಗಳೆಲ್ಲಾ ಕಾಕಣ್ಣ ತಿಂದಿಕ್ಕಿ ಹೋತನ್ನೇ ಹೇಳಿ ಬಿದ್ದು ಬಿದ್ದು ಹೊರಳಿ ಕೂಗಿತ್ತು. ಆ ಮೇಲೆ ಹೊಳೆ ಕರೆಂಗೆ ಹೋಗಿ ಅಲ್ಲಿದ್ದ ಒಂದು ಹೊಂಗಾರೆ ಮರಲ್ಲಿ ಕೂದುಗೋಂಡು ಕೂಗಿಗೋಂಡಿತ್ತು.

ಅಲ್ಲಿ ಒಂದು ಕೆಂಪಜ್ಜಿ ಒಪ್ಪೆ ಒಗವಲೆ ಬಂತೊಡೊ. ಅದು ಗುಬ್ಬಕ್ಕ ಕೂಗುದರ ನೋಡಿ ಎಂತಗೆ ಮಗಾ ಕೂಗುತ್ತೆ? ಎಂತಾತು ನಿನಗೆ? ಹೇಳಿ ಕೇಳಿತ್ತು. ಅದಕ್ಕೆ ಗುಬ್ಬಕ್ಕ ಕಾಕಣ್ಣ ಮಾಡಿದ ಮೋಸವೆಲ್ಲ ಹೇಳಿತ್ತು. ಅವಗ ಅಜ್ಜಿ ಹೇಳಿತ್ತು-ನೀನು ಒಂದು ಸಮಾರಾಧನೆ ಮಾಡು. ಊರಿಲ್ಲಿದ್ದ ಎಲ್ಲ ಕಾಕೆಗಳ ಬಪ್ಪಲೆ ಹೇಳು. ಊಟ ಆದ ಮೇಲೆ ಅಖೇರಿಗೆ ರಜ ಬೆಣ್ಣೆಯ ಒಂದು ಸಟ್ಟುಗಿಲಿ ಬೆಶಿ ಮಾಡಿ “ಹಸಿ ಬೆಣ್ಣೆ ಬೇಕೋ ಬೆಶಿ ಬೆಣ್ಣೆ ಬೇಕೋ” ಹೇಳಿ ಕೇಳಿಗೊಂಡು ಬಾ. ಅವಗ ಕುಂಞ್ಞಿಗಳ ತಿಂದ ಕಾಕಣ್ಣ ಎನಗೆ ಬೆಶಿ ಬೆಣ್ಣೆ ಬೇಕು ಹೇಳುಗು. ಅವಗ ಅದರ ದೊಂಡಗೆ ಬೆಶಿಬೆಶಿ ಬೆಣ್ಣೆಯ ಹಾಕು.ನೋಡು ಮತ್ತೆ, ನಿನ್ನ ಕುಂಞ್ಞಿಗೊ ಎಲ್ಲ ನಿನಗೆ ಸಿಕ್ಕುತ್ತವು” ಹೀಂಗೆ ಉಪಾಯ ಹೇಳಿ ಕೊಟ್ಟತ್ತು.

ಗುಬ್ಬಕ್ಕ ಮನಗೆ ಬಂದು ಅಜ್ಜಿ ಹೇಳಿದ ಹಾಂಗೆ ಕಾಕಗಳೆಲ್ಲಾ ಬಪ್ಪಲೆ ಹೇಳಿ ಪಾಚ ನಾಞ್ಞಿ, ಸುಟ್ಟವು, ಒಡೆ ಎಲ್ಲ ಮಾಡಿ ಬಳ್ಸಿತ್ತು. ಕಾಕಗೊಕ್ಕೆಲ್ಲಾ ಗುಬ್ಬಕ್ಕನ ಹತ್ತರೆ ತುಂಬಾ ಪ್ರೀತಿ ಆತು. ಅಖೇರಿಗೆ ಒಂದು ಬೆಣ್ಣೆಮುದ್ದೆಯ ಸಟ್ಟುಗಿಲಿ ಕಾಸಿ “ಹಸಿ ಬೆಣ್ಣೆ ಬೇಕೋ ಬೆಶಿ ಬೆಣ್ಣೆ ಬೇಕೋ” ಹೇಳಿ ಕೇಳಿಗೊಂಡು ಬಂತು. ಅಷ್ಟಪ್ಪಗ ಕುಂಞ್ಞಿಗಳ ತಿಂದ ಕಾಕೆ , ಅದಕ್ಕೆ ಅಜೀರ್ಣ ಆಗಿರ್ತು, ಹಾಂಗಾಗಿ “ಎನಗೆ ಬೇಕು ಬೆಶಿಬೆಣ್ಣೇ” ಹೇಳಿತ್ತು. ಗುಬ್ಬಕ್ಕ ಅದರ ದೊಂಡಗೆ ಬೆಶಿಬೆಣ್ಣೆ ಹಾಕಿತ್ತದ! ಕಾಕಣ್ಣನ ದೊಂಡೆ ಕರಂಚಿ ಬೆಂದು ಹೋತು. ಅದು ಕಾ ಕಾ ಹೇಳುವಾಗ ಹೊಟ್ಟೆಂದ ತಿಂದದೆಲ್ಲಾ ಹೆರ ಬಂತು. ನಾಲ್ಕು ಕುಂಞ್ಞಿಗಳೂ ಹೊಟ್ಟೆಂದ ಬಿದ್ದವು. ಅದರ ನೋಡಿ ಗುಬ್ಬಕ್ಕ ಅಲ್ಲಿದ್ದ ಎಲ್ಲಾ ಕಾಕಗಳ ಹತ್ತರೆ “ಇದುವೇ ಎನ್ನ ಕುಂಞ್ಞಿಗಳ ತಿಂದದು” ಹೇಳಿಕೂಗಿತ್ತು. ಅಷ್ಟಪ್ಪಗ ಕಾಕಗೊಕ್ಕೆ ಕೋಪ ಬಂತು. ಕುಂಞ್ಞಿ ತಿಂದ ಕಾಕೆಯ ಎಲ್ಲ ಸೇರಿ ಕೊಡಪ್ಪಿ, ಕೊಚ್ಚಿ ಕೊಂದೇ ಹಾಕಿದವು. ಇಷ್ಟು ಒಪ್ಪ ಗುಬ್ಬಕ್ಕನ ಕುಂಞ್ಞಿಗಳ ತಿಂಬಲಕ್ಕಾ?

ಆ ಮೇಲೆ ಗುಬ್ಬಕ್ಕ ಆ ಕುಂಞ್ಞಿಗಳ ಹೊಳೆ ನೀರಿಲಿ ಚೆಂದಕ್ಕೆ ಮೀಶಿ, ಒಗದು ಮಡುಗಿದ ಬೆಳಿ ವಸ್ತ್ರಲ್ಲಿ ಉದ್ದಿ, ತೊಟ್ಳಿಲಿ ಮನಿಶಿ ತೂಗಿತ್ತು. ಅಷ್ಟಪ್ಪಗ ಚಾಮಿ ಬಂದು ಕುಂಞ್ಞಿಗಳ ಎಲ್ಲ ಜೀವ ಮಾಡಿದ. ಕುಂಞ್ಞಿಗೊ ಚೀಂ ಚೀಂ ಹೇಳಿಗೊಂಡು ಗುಬ್ಬಕ್ಕನ ನೋಡಿ ನೆಗೆ ಮಾಡಿದವು. ಆಮೇಲೆ ಗುಬ್ಬಕ್ಕನೂ ಕುಂಞ್ಞಿಗಳೂ ಸುಖಲ್ಲಿ ಇತ್ತಿದ್ದವೊಡೊ.

ಇನ್ನು ನೀನು ಒರಗು ಒಪ್ಪಕುಂಞ್ಞೀ ಅಕ್ಕೋ…?

~~***~~~

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ
ಮೈಸೂರು
9019274678

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

8 thoughts on “ಒಪ್ಪ ಕುಂಞ್ಞಿ ಪುಟ್ಟಂಗೆ ಅಜ್ಜಿ ಹೇಳುವ ಕಥೆಗೊ

  1. ಹಳೇ ಕತೆ ಆದರೂ ಎಷ್ಟು ಕೇಳಿರೂ ಹೊಸತನ ಮಾಸುತ್ತಿಲ್ಲೆ.ಆದರೆ ಕಾಕಣ್ಣ ತೊಟ್ಲಿಲ್ಲಿ ಮನುಗುದಲ್ಲ,ತೊಟ್ಲತ್ರಾಗಿ,ಒಲೆ ಹತ್ರಾಗಿ ಹಾಸಿ ಕೊಡು “ಹೇಳಿ ಕೇಳಿದ ನೆಂಪು.ಗೋಪಾಲಣ್ಣ ಹೇಳಿದಾಂಗೆ ಕಾಕಣ್ಣನ ಬಾಯಿಗೆ ಕೆಂಡ ಹಾಕಿದ್ದು….ತುಂಬಾ ಲಾಯ್ಕ ಕತೆ..

  2. ಕಾಕೆ ತಿಂದ ಕುಂಞಗ ಹೇಂಗೆ ಬದುಕಿದವು ಹೇದು ಒಂದು ಪ್ರಶ್ನೆ ಬಂತು..ಕಥೆಯ ಅಖೇರಿಯ ಪ್ಯಾರಾ ಕಂಡು ಸಂಶಯ ಪರಿಹಾರ ಅತತ್ತೇ

  3. ಈ ಕತೆಯ ನಿಂಗಳ ಮಗಳು ನಿಂಗಳ ಪುಳ್ಳಿಗೆ ಹೇಳೋದರ ಆನು ಕೇಳಿದ್ದೆ. ಬಾಯಿಂದ ಬಾಯಿಗೆ ಬಂದ ಕಥೆ ಇದು.ಜನರ ಮನೋಪಟಲದಲ್ಲಿ ಸದಾ ಇಪ್ಪ ಈ ಕಥಗೆ ಅದರದೇ ಚೆಂದ ಇದೆ ಅತ್ತೆ. ಶಿವರಾಮಂಗಗೂ ಈ ಕಥೆ ಇಷ್ಟ.

    1. ಶಿವರಾಮಂಗೂವೋ ಅಥವಾ ಶಿವರಾಮಮಂಗಂಗೂವೋ?

  4. ಕಾಕೆ ಗುಬ್ಬಕ್ಕನ ಕತೆ ಹಿಂದಾಣ ಕತೆಗಳ ಎಲ್ಲ ನೆಂಪು ಮಾಡಿತ್ತು. ಅಮ್ಮ/ಅಜ್ಜಿ ಕತೆ ಹೇಳ್ತಾ ಇಪ್ಪಗ ಸಿನೆಮಾಲ್ಲಿ ಕಂಡ ಹಾಂಗೇ ಕಂಡೊಂಡಿತ್ತು. ಆನು ಕೇಳಿದ ಕತೆಲಿ ಗುಬ್ಬಕ್ಕಂಗೆ ಹತ್ತು ಮರಿಗೊ ಇತ್ತು. ಬೆಶಿ ಬೆಣ್ಣೆ ಹೇಳಿ ಕೆಂಡವ ಬಾಯಿಗೆ ಹಾಕಿದ್ದು ಹೇಳಿ ಎನ್ನ ನೆಂಪು. ಅಂತೂ ತುಂಬಾ ಲಾಯ್ಕಾತು.

  5. ಸಣ್ಣದಿಪ್ಪಾಗ ನಾವೆಲ್ಲ ಕೇಳಿದ ಕತೆಯಾದರೂ ಇದು ಹಳತ್ತಾಗಿ ಹೋಪಲಿಲ್ಲೆ. ಓ ಮೊನ್ನೆ ಶಾಲೆಲಿ ಒಂದನೇ ಕ್ಲಾಸಿನವಕ್ಕೆ ಇದರ ಹೇಳಿದ್ದೆ.. ಅಂಗಾಡಿಗೆ ಹೋದೆ ಹತ್ತು ಬೇಳೆ ತಂದೆ,ಒಂದು ಸುಟ್ಟೆ ಹೇಳ್ತಲಿಂದ ಮಕ್ಕೊಗೆ ನೆಗೆ ಬಪ್ಪಲೆ ಸುರುವಾವುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×