Oppanna.com

ಅಬ್ಬೇ…, ಎನಗೆ ಅರುಂಧತಿಯ ಕಂಡಿದೇ ಇಲ್ಲೆ… (ಭಾಗ-10)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   06/09/2016    6 ಒಪ್ಪಂಗೊ

ಅರುಂಧತಿ ಕತೆಯ ಪೂರ್ವ ಕಂತುಗೊ:
ಭಾಗ 1 : ಸಂಕೊಲೆ
ಭಾಗ 2 : ಸಂಕೊಲೆ
ಭಾಗ 3 : ಸಂಕೊಲೆ
ಭಾಗ 4 : ಸಂಕೊಲೆ
ಭಾಗ 5 : ಸಂಕೊಲೆ
ಭಾಗ 6 : ಸಂಕೊಲೆ
ಭಾಗ 7 : ಸಂಕೊಲೆ
ಭಾಗ 8 : ಸಂಕೊಲೆ
ಭಾಗ 9 : ಸಂಕೊಲೆ

“ಹರಿಣೀ…,ಹರಿಣೀ…,”

ತೀರಾ ಪರಿಚಿತ ಸ್ವರ ಕೇಳಿದ ಹಾಂಗಾಗಿ ಹರಿಣಿ ತಿರುಗಿ ನೋಡಿತ್ತು. ದೂರಂದ ಅದರ ಹಿರಿಯ ಅಣ್ಣ, ನಚ್ಚಣ್ಣ(ನರಸಿಂಹ) ಇದರ ದಿನಿಗೋಳಿಯೋಂಡು ಅದು ಇಪ್ಪಲ್ಲಿಂಗೇ ಬೇಗ ಬೇಗ ಬಪ್ಪದು ಕಂಡತ್ತು. “ಹೇ…,ನಚ್ಚಣ್ಣ…, ನೀನೆಂತ ಇಲ್ಲಿ…?” ಅಂವನ ಅಲ್ಲಿ ನೋಡಿ ಹರಿಣಿಗೆ ಆಶ್ಚರ್ಯ ಆತು.

“ಹೇಂ…ಅಂಬಗ ನೀನೆಂತ ಮಾರಾಯ್ತಿ ಇಲ್ಲಿ…? ಇದೆಂತ ನಿನ್ನ ಮೋರೆ ಹದ್ನೈದು ದಿನಂದ ತೆಳಿ ಕಾಣದ್ದವರ ಹಾಂಗೆ…?”

ಹರಿಣಿಯ ಹತ್ರೆ ಆಸ್ಪತ್ರೆಯ ಸಿಸ್ಟರು ಮೋಹನಂಗಿಪ್ಪ ಒಂದು ಮದ್ದು ತಪ್ಪಲೆ ಹೇಳಿತ್ತಿದ್ದು. ಅದು ಆ ಆಸ್ಪತ್ರೆಯ ಮದ್ದಿನ ವಿಭಾಗಲ್ಲಿ ಸಿಕ್ಕದ್ದ ಕಾರಣ ಅಲ್ಲೇ ಹೆರ ಇಪ್ಪ ಇನ್ನೊಂದು ಮದ್ದಿನ ಅಂಗ್ಡಿಗೆ ಹರಿಣಿ ಹೋಗಿಯೊಂಡಿಪ್ಪಾಗ ಹಿಂದಂದ ನರಸಿಂಹ ದಿನೊಗೋಂಡದು. ಆ ಜಾಗೇಲಿ ಇಬ್ರೂ ಪರಸ್ಪರ ಭೇಟಿ ಅಪ್ಪ ನಿರೀಕ್ಷೆಯೇ ಇಲ್ಲದ್ದ ಕಾರಣ ಎರಡು ಜೆನವೂ ಒಂದು ಕ್ಷಣ ಗೆಬ್ಬಾಯ್ಸುವ ಹಾಂಗಾತು. ಪ್ರತಿ ಹೆಮ್ಮಕ್ಕಳಲ್ಲಿಯೂ ಒಂದು ಗುಣ ವಿಶೇಷತೆ ಇದ್ದು. ಎಂತ ಹೇಳಿದ್ರೆ ಎಂತದೇ ಕಡು ಕಷ್ಟ ಬಂದ್ರೂ ಊರವರೆದುರು ಅದರ ಮುಚ್ಚಿ ಮಡುಗಿ ಎಂಗೊ ಸ್ವರ್ಗ ಲೋಕಲ್ಲಿಯೇ ವಿಹರಿಸುತ್ತಾ ಇದ್ದೆಯೋಂ ಹೇಳ್ತ ರೀತಿಲಿ ನೆಗೆ ನೆಗೆ ಮಾಡಿ ಮಾತಾಡುಗು. ಯೇವ ಕ್ಷಣಲ್ಲಿ ಅಪ್ಪನ ಮನೆಯರ ತಲೆ ಕೊಡಿ ಕಂಡತ್ತೋ ಅಂಬಗ ಅವರ ಕಣ್ಣಿಲ್ಲಿ ಬಳ ಬಳ ನೀರು ಹರಿವಲೆ ಸುರುವಕ್ಕದ. ಅಬ್ಬೆ, ಅಪ್ಪಂ, ಒಡಹುಟ್ಟುಗೊ ಕಷ್ಟ ಸುಖ ವಿಚಾಸರ್ಿರೂ ವಿಚಾರ್ಸದ್ರೂ ಮನಸ್ಸಿಲ್ಲಿಪ್ಪ ಭಾರವ ಅವರೊಟ್ಟಿಂಗೆ ಹಂಚಿಯೋಂಡಪ್ಪಾಗಳೇ ಇವಕ್ಕೆ ಸಮಾಧಾನ ಅಪ್ಪದು. ಹರಿಣಿಯೂ ಇದಕ್ಕೆ ಹೊರತಲ್ಲದ್ರೂ ಅಷ್ಟು ಬೇಗ ಮನಸ್ಸಿನೊಳಾಣ ಭಾವನೆಯ ಬಿಟ್ಟುಕೊಡ್ತ ಜಾತಿಯಲ್ಲ ಅದು. ಅಷ್ಟಾಗಿಯೂ ಅಣ್ಣನ ಕಂಡಪ್ಪಗ ಅದರ ಕಣ್ಣಿಲ್ಲಿ ನೀರು ಉಕ್ಕಿತ್ತು.

“ಛೆ…ಛೆ…ಎಂತ ಪುಟ್ಟಕ್ಕೋ ಇದು…? ಮಾರ್ಗಲ್ಲಿ ಎಂತಕೆ ಕಣ್ಣೀರು ಹಾಕುತ್ತೆ…? ಬಾ…,ನಾವು ಕ್ಯಾಂಟೀನಿಂಗೆ ಹೋಪೋಂ…ಅಲ್ಲಿ ಮಾತಾಡುವೋಂ….”

“ಅಣ್ಣಾ, ಇದಾ ಈ ಒಂದು ಮದ್ದಿನ ತೆಗದು ಸಿಸ್ಟರಿನ ಕೈಲಿ ಕೊಟ್ಟಿಕ್ಕಿತೆ ಆಗದೋ…? ಮತ್ತೆ ಅಲ್ಲಿಗೆ ಹೋಪೋಂ…”

“ಮದ್ದೋ…? ಆರಿಂಗೆ ಪುಟ್ಟಕ್ಕೋ….?”

“ಈಗ ಬತ್ತೆ…, ಒಂದು ನಿಮಿಷ…” ಕಣ್ಣು ಮೂಗು ಉದ್ದಿಯೊಂಡೇ ಹರಿಣಿ ಬೇಗ ಬೇಗ ಮದ್ದು ತೆಗದಿಕ್ಕಿ ಆಸ್ಪತ್ರೆಯೊಳಾಂಗೆ ಹೋತು. ನರಸಿಂಹನೂ ಅದರ ಹಿಂಬಾಲಿಸಿದಂ. ಅದಾದಿಕ್ಕಿ ಇಬ್ರೂ ಆಸ್ಪತ್ರೆಯ ಕ್ಯಾಂಟಿನಿಲ್ಲಿ ಕೂದವು.

“ಅಣ್ಣಾ…,ಎನಗೆ ಇಲ್ಲಿ ಹೆಚ್ಚು ಹೊತ್ತು ಕೂಬಲೆ ಎಡಿಯ….,ಭಾವ ಐ.ಸಿ.ಯೂ. ಒಳ ಇದ್ದವು…” ಹರಿಣಿ ಉಕ್ಕಿ ಬಪ್ಪ ದುಃಖವ ತಡಕ್ಕೊಂಡು ಚುಟುಕಾಗಿ ನೆಡದ ಸಂಗತಿಗಳೆಲ್ಲಾ ಹೇಳಿತ್ತು.

ನರಸಿಂಹ ತಲೆಗೆ ಕೈ ಮಡುಗಿಯೊಂಡು ಹೇಳಿದ,

“ಅಲ್ಲ ಪುಟ್ಟಕ್ಕೋ…,ಇಷ್ಟು ಬಂಙ ಬಪ್ಪಾಗ ಒಡಹುಟ್ಟುಗೊ ಇದ್ದವು, ಅವಕ್ಕೊಂದು ಮಾತು ತಿಳುಶೇಕು ಹೇಳಿಯೂ ನಿನಗೆ ಕಂಡಿದಿಲ್ಲೆನ್ನೇ…? ಎಂಗೊ ಎಲ್ಲಾ ಜೀವಂತ ಇದ್ದೂ ಉಪಯೋಗ ಇಲ್ಲೆ ಹೇದು ಆಗಿ ಹೋತು….”

“ಅಯ್ಯೋ…,ಅಣ್ಣಾ…,ನೀನು ಹಾಂಗೆ ಜಾನ್ಸಲಾಗ ಮಿನಿಯಾ….,ಸುರಭಿಯ ನಡವಳಿಕೆ, ಇವರ ಅಸೌಖ್ಯ, ಊರವರ ಕುಚ್ಚಣಿಕೆ….ಇದೆಲ್ಲಾ ಒಟ್ಟು ಸೇರಿಯಪ್ಪಗ ಎನಗೆ ಇಡೀ ಲೋಕದ ಬಗ್ಗೇ ಎಂತೋ ಒಂದು ನಮೂನೆ ಜಿಗುಪ್ಸೆ ಬಂದ ಹಾಂಗಾಗಿ ಹೋತು….,ಆರೂ ಬೇಡ…ಒಂದಾರಿ ಇವಕ್ಕೆ ಸರಿ ಆದರೆ ಸಾಕು…ಬೇರೆಂತದೂ ಬೇಡ ಹೇಳಿ ಕಾಣ್ತಾ ಇದ್ದಿದಾ…ಹಾಂಗಾಗಿಯೇ ಆನು ಆರತ್ರೂ ಎಂತದೂ ಹೇಳ್ಲೆ ಹೋಯಿದಿಲ್ಲೆ….”

ಹರಿಣಿಯ ಅಪ್ಪನ ಮನೆಯವರ ಕೆಮಿಗೂ ಸುರಭಿಯ ಬಗ್ಗೆ ಆಡಕ್ಕಾಡ ಹೇಳ್ತಾಂಗೆ ಒಡಕು ಶುದ್ಧಿಗೊ ಬಿದ್ದಿತ್ತಿದ್ದು. ಅಂದ್ರೆ ಅವು ಅದರ ಬಗ್ಗೆ ತಂಗೆಗಾಗಲೀ ಭಾವಂಗಾಗಲೀ ಫೋನು ಮಾಡಿ ಕೇಳ್ಲೆ ಹೋಯಿದವಿಲ್ಲೆ. ಸಂತೋಷದ ಶುದ್ಧಿಯಾದ್ರೆ ಕೇಳುವದಕ್ಕೂ ಸಂತೋಷವೇ. ಹೀಂಗಿಪ್ಪದ್ರ ತೊಳಚ್ಚಿ ಎಂತ ಪ್ರಯೋಜನ ಹೇಳಿ ಅವು ಅದರ ಬಗ್ಗೆ ಮೌನವಾಗಿಯೇ ಇತ್ತಿದ್ದವು. ಹಾಂಗಿಪ್ಪ ಒಂದು ವಿಷಯ ನೆಡದ್ದದು ಗೊಂತೇ ಇಲ್ಲೆ ಹೇಳ್ತ ಹಾಂಗೆಯೇ ನರಸಿಂಹ ನಟನೆ ಮಾಡಿದ. ಜೀವನಲ್ಲಿ ಸುಮಾರು ಸತರ್ಿ ಅನುಕೂಲ ಶಾಸ್ತ್ರವ ಆಚರಣೆಗೆ ತರೇಕಾವುತ್ತಲ್ದೋ…? ಒಟ್ಟಿಂಗಿಪ್ಪವಕ್ಕೆ ಅದರಿಂದಾಗಿ ಬೇನೆಂದ ಹೆಚ್ಚು ಸಮಾಧಾನವೇ ಅಕ್ಕು ಹೇಳಿ ಕಂಡ್ರೆ ಅದುವೇ ಸರ್ವಸಮ್ಮತ ಅಲ್ದೋ…? ಹಾಂಗಾಗಿಯೇ ನರಸಿಂಹ ಪ್ರತಿಕ್ರಿಯೆ ವ್ಯಕ್ತ ಪಡ್ಸುವಾಗ ಮಾತುಗಳ ತುಂಬಾ ಜಾಗ್ರತೆಂದ ಆಯ್ಕೆ ಮಾಡಿದ,

“ಹೂಂ…,ಹೀಂಗಿಪ್ಪ ಸನ್ನಿವೇಶಲ್ಲಿ ಆರಿಂಗಾದ್ರೂ ಹಾಂಗೇ ಕಾಂಬದು ಸಹಜ ಹೇಳುವೋಂ….ಆದ್ದದು ಆತನ್ನೇ….ಇನ್ನು ಮುಂದಾಣದ್ದರ ಬಗ್ಗೆ ಯೋಚನೆ ಮಾಡೇಕೋ ಬೇಡದೋ ಹೇಳು….? ಕೂಸುಗೊಕ್ಕೆ ಅಣ್ಣ, ತಮ್ಮಂದ್ರು ಬೇಕು ಹೇಳ್ತದು ಎಂತಕೆ ಗೊಂತಿದ್ದೋ….?ಹೀಂಗಿದ್ದ ಸಂದರ್ಭಂಗಳಲ್ಲಿ ತಾಂಗಿ ನಿಂಬಲೆ….,ಜವಾಬ್ದಾರಿ ಹೊತ್ತೋಂಬಲೆ….,ಅಕ್ಕ ತಂಗೆಕ್ಕಳ ಬಾಳು ಹಸನು ಮಾಡ್ಲೆ…,ನಮ್ಮ ಅಪ್ಪಂ ನವಗೆ ಅದರನ್ನೇ ಅಲ್ದೋ ಹೇಳಿ ಕೊಟ್ಟದು….ನೀನು ಇದ್ರೆಲ್ಲ ಮರದ್ರೆ ಹೇಂಗೆ ಪುಟ್ಟಕ್ಕೋ….? ಇನ್ನು ಕಣ್ಣು ನೀರು ಹಾಕೇಡ…ಭಾವ ಉಶಾರಾಗಿ ಮನೆಗೆ ಎತ್ತುವನ್ನಾರ ಎಂಗೊ ನಿನ್ನೊಟ್ಟಿಂಗೇ ಇಪ್ಪೆಯೋಂ ಮಿನಿಯಾ…? ಸುರಭಿದೂ ಎಲ್ಲ ಸರಿ ಅಕ್ಕು….,ನೋಡುವೋಂ…ಆ ಶ್ರೀರಾಮನ ನಂಬಿ ಕೆಟ್ಟವಿಲ್ಲೆ ಹೇದು ನಿನಗೂ ಗೊಂತಿಪ್ಪದೇ…,ಕಷ್ಟ ಕಾಲಲ್ಲಿ ಗುರುಗಳ ಅಭಯ ಹಸ್ತ ಒದಗಿ ಬಪ್ಪದು ಮೊದ್ಲಿಂದಲೂ ನಮ್ಮ ಕುಟುಂಬಲ್ಲಿ ಕಾಣ್ತಾ ಇಪ್ಪ ಸತ್ಯವೇ ಅಲ್ದೋ….? ಹಾಂಗಾಗಿ ಎಂತ ಮಂಡೆ ಬೆಶಿ ಮಾಡೇಕಾದ್ದಿಲ್ಲೆ….ಎಂತೋ ದೊಡ್ಡಾ ಪರೀಕ್ಷೆಯ ಸಮಯ ಇದು ಹೇಳಿ ತಿಳ್ಕೋ ಮಿನಿಯಾ…? ಮಾಕರ್ು ಹಾಕುತ್ತವಂ ಮೇಲಂದ ನೋಡಿಯೋಂಡೇ ಇದ್ದಂ ಹೇಳುವ ನೆಂಪು ಮಡಿಕ್ಕೊಂಡು ಬಂದ ಕಷ್ಟವ ಎದುರ್ಸಲೆ ಕಲಿಯೇಕಬ್ಬೋ…, ಇದಾ…..,ಮತ್ತೊಂದು ವಿಷಯ ಎಂತಾ ಹೇದರೆ ನಮ್ಮ ತೋಟಕ್ಕೆ ಮದ್ದು ಬಿಡ್ಲೆ ಬಪ್ಪ ಚನಿಯ ನಿನ್ನೆ ಮರಂದ ಬಿದ್ದತ್ತು ಮಾರಾಯ್ತಿ….ನಮ್ಮ ಹಿರಿಯವು ಮಾಡಿದ ಪುಣ್ಯ ಒಳ್ಳೇತ ಇತ್ತಿದ್ದು ಕಾಣ್ತು…,ಸೊಂಟ ಮುರುದೋ, ಕೊರಳು ಮುರುದೋ ಆಗದ್ದೆ ಬರೇ ಕಾಲಿಂಗೆ, ಕೈಗೆ ಪೆಟ್ಟಾಯಿದಷ್ಟೆ….,ಅಂದರೂ ರಿಸ್ಕು ತೆಕ್ಕೋಂಬದು ಬೇಡ ಹೇದು ದೊಡ್ಡಾಸ್ಪತ್ರೇಲೇ ಚಿಕಿತ್ಸೆ ಕೊಡ್ಸಿಕ್ಕುವೋಂ ಹೇದು ಇಲ್ಲಿಗೇ ಕರಕ್ಕೊಂಡು ಬಂದೆ….,ಮತ್ತೇ ಈ ಆಸ್ಪತ್ರೆಲಿ ನಮ್ಮ ಶಂಕರಿ ದೊಡ್ಡಬ್ಬೆಯ ಮೈದನನ ಮಗ ಹರೀಶ ಎಲುಬಿನ ಸ್ಪೆಶಲಿಸ್ಟ್ ಆಗಿ ಇದ್ದಾನೇ….ಅವಂಗೆ ಒಳ್ಳೆ ದಾಕುದಾರ ಹೇಳ್ತ ಹೆಸರೂ ಇದ್ದು…ಹಾಂಗಾಗಿ ಅಂವಂಗೇ ತೋರ್ಸಲಕ್ಕು ಹೇದು ಚನಿಯನ ಕರಕ್ಕೊಂಡು ಬಂದದು….ಎಲುಬಿಲ್ಲಿ ಸಣ್ಣಕೆ ಸೆರೆ ಬಯಿಂದಷ್ಟೆ…ಓಪ್ರೇಷನು ಬೇಡ ಹೇಳಿದಂ. ಪ್ಲೇಸ್ಟರು ಹಾಕಿ ಬಿಟ್ಟಿದಂ. ಮೂರು ವಾರ ರೆಸ್ಟಿಲ್ಲಿರೇಕು ಹೇಳಿದ್ದಂ….ಒಂದು ಲೆಕ್ಕಲ್ಲಿ ಚನಿಯ ಬಿದ್ದದು ಒಳ್ಳೇದಾತು….ತಂಗೆ ಕಷ್ಟಲ್ಲಿದ್ದು, ಹೋಗಿ ನೋಡು ಹೇದು ದೇವರು ಹೀಂಗೊಂದು ಕಾರಣ ಸೃಷ್ಟಿ ಮಾಡಿದನೋ ಏನೋ…?”

“ಅಯ್ಯೋ…ಆನು ನಿಂಗೋಗೆ ಹೇಳಿದ್ದಿಲ್ಲೆ ಹೇದು ಹೀಂಗೆ ಬೇಜಾರು ಮಾಡಿಯೋಂಬದಾ ನಚ್ಚಣ್ಣಾ…? ಇನ್ನು ಮುಂದೆ ಹಾಂಗೆ ಮಾಡ್ತಿಲ್ಲೆ ಆತೋ…? ನಿನ್ನ ಇಲ್ಲಿ ಕಂಡಪ್ಪಾಗಳೇ ಎನಗೆ ನೂರಾನೆ ಬಲ ಬಂತದಾ….,ಇನ್ನು ಆನು ಯೇವದಕ್ಕೂ ಹೆದರೆ ಮಿನಿಯಾ…, ಮತ್ತೇ….ನೀನೀಗ ಹೇಳಿದ ಹರೀಶ ಡಾಕ್ಟ್ರು ಆರು ನಚ್ಚಣ್ಣಾ….? ನಾವು ಸಣ್ಣಾಗಿಪ್ಪಾಗ ನಮ್ಮೊಟ್ಟಿಂಗೆ ಅಜ್ಜನ ಮನೆ ಜಾತ್ರೆಗೆ ಬಂದೊಂಡಿತ್ತಿದ್ದ ಆ ಮೂಸರೆ ಸುರುಕನೋ…?”

“ಹೂಂ…,ಅವಾನೇ….,ಈಗ ಎಷ್ಟು ಉಶಾರಿದ್ದ ಗೊಂತಿದ್ದೋ…? ಎಮ್.ಬಿ.ಬಿ.ಯೆಸ್., ಎಮ್.ಡಿ. ಇತ್ಯಾದಿಗೆಳೆಲ್ಲ ಮೆರಿಟ್ಟಿಲ್ಲೇ ಓದಿದವಂ. ರೋಗ ಪತ್ತೇಲಿ ಭಾರೀ ಉಶಾರಿದ್ದಂ….,ನಮ್ಮ ಊರಿಲ್ಲಿ ಆರಿಂಗೆ ಎಂತದೇ ಅಸೌಖ್ಯ ಆದರೂ ಎಲ್ಲರಿಂಗೂ ಮದಾಲು ನೆಂಪಪ್ಪದು ಅವನನ್ನೇ….ಅಂವ ಹೇಳಿದ ದಾಕುದಾರಕ್ಕಳತ್ರೇ ಪ್ರತಿಯೊಬ್ಬನೂ ಹೋಪದು….”

“ಓ…ಅಪ್ಪೋ…?ಎನಗೆ ಅಂವ ಇಲ್ಲಿದ್ದ ಹೇದು ಗೊಂತಿದ್ದತ್ತಿಲ್ಲೆ….”

“ಅಂಬಗ ನಾವೊಂದು ಕೆಲಸ ಮಾಡುವೋಂ ಪುಟ್ಟಕ್ಕೋ…,ಅಂವನ ಒಂದಾರಿ ಕಂಡು ಭಾವನ ವಿಷಯ ಎಲ್ಲ ಮಾತಾಡುವೋಂ….ಆಗದೋ…? ಅಷ್ಟು ದೊಡ್ಡ ಕಲಿವಿಕೆ ಇದ್ರೂ ಒಂದು ರಜ್ಜವೂ ತಲೆಗೆ ಏರಿದ್ದಿಲ್ಲೆ ಅವಂಗೆ…,ಮನೆ ಮಾಣಿಯ ಹಾಂಗೇ ಇದ್ದ ಈಗಳೂ…., ಬಾ…ಹೋಪೋಂ…,ಪರಿಚಯದ ದಾಕುದಾರಕ್ಕೊ ಆಸ್ಪತ್ರೆಲಿ ಇದ್ದವು ಹೇಳಿಯಾದ್ರೆ ಬಾಕಿಪ್ಪ ದಾಕುದಾರಕ್ಕೋ, ಸಿಸ್ಟರುಗೋ ಎಲ್ಲ ನವಗೆ ಕೊಡ್ತ ಬೆಲೆ ರಜಾ ಹೆಚ್ಚ ಆವುತ್ತು…,ಬಿಲ್ಲು ಬಪ್ಪಾಗ ಪೈಸೆ ರಜ್ಜ ಕಡಮ್ಮೆಯೂ ಮಾಡುಗದಾ….,

ಅಪ್ಪೋ ಪುಟ್ಟಕ್ಕೋ…,ಅಂಬಾಗ ಸುರಭಿಗೂ ಭಾವನ ವಿಷಯ ತಿಳ್ಸಿದ್ದಿಲ್ಯೋ….?” ಕ್ಯಾಂಟೀನಿಂದ ಆಸ್ಪತ್ರೆಗೆ ಹೋವುತ್ತಾ ಇದ್ದ ಹಾಂಗೆ ನರಸಿಂಹ ಹರಿಣಿಯತ್ರೆ ಕೇಳಿದಂ.

“ಇಲ್ಲೆ ಅಣ್ಣಾ…” ಹರಿಣಿಯ ಸ್ವರ ನೆಡುಗಿತ್ತು, ಒಣಗಿತ್ತಿದ್ದ ಕಣ್ಣು ಪುನಃ ತುಂಬಿತ್ತು.

“ಇದ ಪುಟ್ಟಕ್ಕೋ…,ನಮ್ಮ ಮಕ್ಕೊ ಎಂತ ಮಾಡಿರೂ ಹೇಂಗಿದ್ರೂ ಅವು ನಮ್ಮ ಮಕ್ಕಳೇ….,ಸುರಭಿಯ ಅಬ್ಬೆ ಅಪ್ಪಂ ಮೋಹನ ಮತ್ತೆ ಹರಿಣಿ ಹೇದೇ ಹೇಳುಗಷ್ಟೆ ಹೊರತಾಗಿ ಬೇರೆ ಆರದ್ದೋ ಮಗಳದು ಹೇದು ಸಮಾಜ ಒಪ್ಪಿಯೋಂಬಲೆ ತಯಾರಿದ್ದೋ….? ಇಲ್ಲೆನ್ನೇ…? ಹಿಳ್ಳೆ ತೊಡೆಲಿ ಹೇತತ್ತು ಹೇದು ತೊಡೆಯನ್ನೇ ಕಡುದು ಇಡ್ಕೀರೆ ಹೇಂಗಕ್ಕು…..? ಅಂಬಗ ಎಂತ ಮಾಡೇಕು? ಹಿಳ್ಳೆಯ ಮದಾಲು ಸ್ವಚ್ಛ ಮಾಡೇಕು…,ಮತ್ತೆ ನಮ್ಮ ತೊಡೆಯ ತೊಳಕ್ಕೋಳೇಕು….,ಅದೆಲ್ಲ ನಮ್ಮ ಕರ್ತವ್ಯದ ಭಾಗಂಗೋ ಅಲ್ಲದೋ ಹೇಳಿ….? ನಾಯಿ ನಮ್ಮ ಕಚ್ಚಿತ್ತು ಹೇದು ನಾವು ನಾಯಿಯ ಕಚ್ಚಲೆ ಹೋವುತ್ತೋ…? ಇದೆಲ್ಲ ನಿನಗೆ ಗೊಂತಿಲ್ಲದ್ದಲ್ಲ. ಅಂದ್ರೂ ಆನು ನೆಂಪು ಮಾಡ್ಸಿದ್ದಷ್ಟೆ. ಹಾಂಗಾಗಿ ಸುರಭಿಗೆ ಭಾವನ ವಿಷಯ ಹೇಳೇಕಾದ್ದದು ನಮ್ಮ ಕರ್ತವ್ಯ. ಅದು ಬಪ್ಪದು ಬಿಡುವದು ಅದಕ್ಕೆ ಬಿಟ್ಟದು….,ಎನ್ನತ್ರೆ ಅದರ ನಂಬರು ಇದ್ದು. ನೀನು ಅದರ ಬಗ್ಗೆ ಚಿಂತೆ ಮಾಡೇಡ….ಬಾ…,ಈಗ ಭಾವ ಐ.ಸಿ.ಯೂ. ಲ್ಲಿ ಇಪ್ಪ ಕಾರಣ ಎನಗೆ ನೋಡ್ಲೆ ಎಡಿಯಾನ್ನೇ…? ಹರೀಶನತ್ರೆ ಮಾತಾಡೀರೆ ಭಾವಂಗೆ ಆದ ತೊಂದರೆ ಎಂತರ ಹೇದೂ….ಎಷ್ಟರ ಮಟ್ಟಿಂಗೆ ಗುಣ ಅಕ್ಕು ಹೇದೂ ಗೊಂತಕ್ಕು. ಮನಸ್ಸಿಂಗೂ ಸಮಾಧಾನ ಅಕ್ಕು….”

“ಓ….ಬನ್ನಿ ನಚ್ಚಣ್ಣ…,ಕೂದುಗೋಳಿ…ಎಂತಾಡ ಮತ್ತೆ ವಿಶೇಷ…?” ಶಂಕರಿ ದೊಡ್ಡಬ್ಬೆಯ ಮೈದುನನ ಮಗ ಡಾ.ಹರೀಶ ಅಂವನ ಕ್ಲಿನಿಕ್ಕಿನೊಳಾಂಗೆ ಬಂದ ನರಸಿಂಹನನ್ನೂ ಹರಿಣಿಯನ್ನೂ ನೋಡಿ ಸ್ವಾಗತಿಸಿದ.

“ಇದರ ನೆಂಪಿದ್ದೋ ಹರಿ?” ನಚ್ಚಣ್ಣ ಹರಿಣಿಯ ತೋಸರ್ಿ ಕೇಳಿದ.

“ಇದು ನಮ್ಮ ಹರಿಣಿ ಅಕ್ಕ ಅಲ್ದೋ…? ಅಂದು ನಾವು ಸಣ್ಣಾದಿಪ್ಪಾಗ ಕುಂಟಾಂಗಿಲ ಹಣ್ಣು ಕೊಯಿದು ಪಾಲು ಮಾಡುವಾಗ ನಿಂಗೊ ಎಲ್ಲ ಕೆಣಿ ಮಾಡಿ ಎನಗೆ ಸಣ್ಣ ಪಾಲು ಕೊಟ್ಟಪ್ಪಾಗೆಲ್ಲಾ ಇದೇ ಹರಿಣಿಯಕ್ಕನೇ ಅಲ್ದೋ ಅದರ ಪಾಲಿಂದ ರಜಾ ಹಣ್ಣಿನ ತೆಗದು ಎನಗೆ ಕೊಟ್ಟೊಂಡಿತ್ತಿದ್ದದು…? ಅದರೆಲ್ಲ ಮರವಲೆ ಎಡಿಗೋ….ಅಲ್ದೋ ಹರಿಣಿಯಕ್ಕ?”

“ಯೋ…,ನೀನು ಇನ್ನೂ ಅದರೆಲ್ಲ ಮರದ್ದಿಲ್ಲ್ಯೋ ಮಾರಾಯಾ….ಹೆರ ನಿನ್ನ ಹೆಸರಿನ ಬೋಡರ್ಿಲಿಪ್ಪ ಉದ್ದುದ್ದ ಡಿಗ್ರಿಗಳ ನೋಡಿ ಒಳ ಬಪ್ಪಲೇ ರಜಾ ಹೆದರಿಕೆ ಆತಿದಾ…ನಿನ್ನ ಮಾತು ಕೇಳಿ ಎಷ್ಟು ಸಂತೋಷ ಆತು ಗೊಂತಿದ್ದೋ….?” ಸುಮಾರು ದಿನಂದ ಮತ್ತೆ ಹರಿಣಿ ಇಷ್ಟು ಮನತುಂಬಿ ಮಾತಾಡಿದ್ದದೇ ಈಗ. ನಚ್ಚಣ್ಣನ ಭೇಟಿಂದಾಗಿ ಅದರ ಮನಸ್ಸು ರಜಾ ಸ್ತಿಮಿತಕ್ಕೆ ಬಂದು ಹೆರಾಣ ಜಗತ್ತಿನ ಆಗು ಹೋಗುಗಳ ಗಮನಿಸಲೆ ಸುರು ಮಾಡಿತ್ತು ಹೇಳ್ಲಕ್ಕು.

“ಜೀವನ ಇಪ್ಪದೇ ಸಂತೋಷ ಕೊಟ್ಟು ತೆಕ್ಕೋಂಬದ್ರಲ್ಲಿ ಅಲ್ಲದೋ ಹರಿಣಿಯಕ್ಕಾ…ಆನು ಅಷ್ಟು ಹೇಳಿಯಪ್ಪಗ ನಿಂಗೋಗೆ ಎಷ್ಟು ಖುಷಿಯಾತು ನೋಡಿ….,ನಿಂಗಳ ಖುಷಿಯ ನೋಡಿ ಎನಗೆ ನಿಂಗಳತ್ರೆ ಮಾತಾಡ್ಲೆ ಇನ್ನಷ್ಟು ಉತ್ಸಾಹ ಬಂತು ನೋಡಿ….ಡಿಗ್ರಿ,ವೃತ್ತಿ…ಅದೆಲ್ಲ ಹೊಟ್ಟೆ ಪಾಡಿಂಗೆ ಅಲ್ದೋ ಹೇಳಿ….ಮನುಷ್ಯತ್ವ, ಸಂಬಂಧ….ಇದೆಲ್ಲ ಬೇರೆಯೇ….ಈಗ ಹೇಳಿ ಎಂತ ಇತ್ಲಾಗಿ ಬಂದದು…?” ಹರೀಶನ ಮಾತು ಕೇಳಿದ ಅಣ್ಣ ತಂಗೆಯಿಬ್ರೂ ದಾಕುದಾರ ಹೇಳಿದ್ರೆ ಹೀಂಗಿರೇಕು ಹೇಳಿ ಜಾನ್ಸಿಯೋಂಡವು.

ಹರಿಣಿ ಮೋಹನನ ವಿಷಯವೆಲ್ಲಾ ವಿವರಿಸಿ ಹೇಳಿತ್ತು. ಮುಂದಿನ ಹತ್ತು ನಿಮಿಷಲ್ಲಿ ಮೊಹನನ ಕೇಸ್ ರಿಪೋಟರ್ು, ಚಿಕಿತ್ಸಾ ವಿಧಾನ, ದಾಕುದಾರಕ್ಕೊ ಬರದ ಮದ್ದುಗಳ ಪಟ್ಟಿ…,ಈ ಎಲ್ಲಾ ವಿಷಯಂಗೊ ಇಪ್ಪ ದಾಖಲೆಗೊ ಹರೀಶನ ಮೇಜಿನ ಮೇಗೆ ಬಂದು ಕೂದತ್ತು. ಅಂವ ಅದರ ಕೂಲಂಕಷವಾಗಿ ಓದಿ ನೋಡಿದ. ಸಿಸ್ಟರಿನ ದಿನುಗೋಳಿ ಈಗ ಈ ಕ್ಷಣಲ್ಲಿ ರೋಗಿ ಚಿಕಿತ್ಸೆಗೆ ಹೇಂಗೆ ಸ್ಪಂದಿಸುತ್ತಾ ಇದ್ದ ಹೇಳಿ ಕೇಳಿ ತಿಳ್ಕೊಂಡ. ಮೋಹನನ ಮೆದುಳು ಆಪರೇಷನ್ ಮಾಡಿದ ನರ ರೋಗ ತಜ್ಙಂಗೆ ಫೋನು ಮಾಡಿ ಮೋಹನನ ದೈಹಿಕ, ಮಾನಸಿಕ ಸ್ಥಿತಿ ಗತಿ, ರೋಗದ ಚರಿತ್ರೆ, ಭವಿಷ್ಯಲ್ಲಿ ಅದರ ನಿಭಾವಣೆ ಈ ಎಲ್ಲಾ ಸಂಗತಿಗಳ ವಿಸ್ತಾರವಾಗಿ ಚಚರ್ಿಸಿದ. ಫೋನು ಮಡುಗಿಕ್ಕಿ ಹರಿಣಿಯತ್ರೆ ಹೇಳಿದಂ,

“ಹರಿಣಿಯಕ್ಕಾ…,ದಾಕುದಾರಕ್ಕೊ ಯೇವಾಗಳೂ ರೋಗಿಗಳ ಮನೆಯವಕ್ಕೆ ಧನಾತ್ಮಕ ಆಶ್ವಾಸನೆ ಕೊಟ್ಟೇ ಮಾತಾಡ್ತ ಕ್ರಮ. ಸತ್ಯ ಸಂಗತಿ ವಿಪರೀತ ಇದ್ರೂ `ಎಂತದೂ ಆಗ..,ಎಲ್ಲವೂ ಸರಿ ಆವುತ್ತು…’ ಹೇಳಿಯೇ ಹೇಳುವದು. ಅಂದ್ರೆ ಆನು ಈಗ ರೋಗಿಗಳ ಮನೆಯವರತ್ರೆ ಮಾತಾಡ್ತ ದಾಕುದಾರ ಆಗಿ ಅಲ್ಲ, ಹರಿಣಿಯಕ್ಕನ ತಮ್ಮ ಆಗಿ ಮಾತಾಡ್ತಾ ಇದ್ದೆ ಮಿನಿಯಾ…?”

ಹರಿಣಿಯ ಎದೆ ಧಸಕ್ ಹೇಳಿತ್ತು. ನಚ್ಚಣ್ಣಂಗೂ `ಛೇ..’ ಹೇಳಿ ಆಗಿ ಹೋತು. ಅಂದರೆ ಹರೀಶನ ಮೋರೇಲಿ ಅದೇ ಪ್ರಸನ್ನತೆ!

“ನಚ್ಚಣ್ಣಾ…ನಿಂಗಳ ಮೋರೆ ಎಂತ ಹಾಂಗಾದ್ದು…? ಹರಿಣಿಯಕ್ಕಾ, ಈಗ ನಿಂಗಳೇ ಅಣ್ಣಂಗೆ ಧೈರ್ಯ ಹೇಳ್ಲಕ್ಕು…ಮೋಹನ ಭಾವಯ್ಯನ ದೇವರೇ ಕಾದ್ದದು ಹೇಳ್ಲಕ್ಕು ಹರಿಣಿಯಕ್ಕ. ಅವಕ್ಕೆ ಅಷ್ಟು ಬಿ.ಪಿ. ಇದ್ದರೂ ಬ್ರೈನ್ ಅನ್ಯೂರಿಸಮ್ ಬಹಳ ಸಣ್ಣ ಮಟ್ಟಿಂಗೆ ಆದ್ದದು, ಮಾಂತ್ರ ಅಲ್ಲ…,ಬಿ.ಪಿ. ಕಂಟ್ರೋಲಿಲ್ಲಿ ಇಲ್ಲದ್ದಿಪ್ಪಾಗ ಮೆದುಳಿನ ಆ ಜಾಗೇಲಿ ರಕ್ತಸ್ರಾವ ಕಂಡಾಬಟ್ಟೆ ಆವುತ್ತು. ಕೆಲವು ಸತರ್ಿ ಅದು ಜೀವವನ್ನೇ ಬಲಿ ತಕ್ಕೋಂಬ ಸಾಧ್ಯತೆಗಳೂ ಇತರ್ು. ಅಂದರೆ ಭಾವಯ್ಯನ ವಿಚಾರಲ್ಲಿ ಪವಾಡವೇ ನೆಡದ್ದದು ಹೇಳೇಕಷ್ಟೆ. ಬಹಳ ರಜ್ಜ ರಕ್ತ ಸ್ರಾವ ಆದ್ದದು. ಹಾಂಗಾದ ಕಾರಣ ಆಪರೇಷನ್ ಕೂಡಾ ತುಂಬಾ ಯಶಸ್ವಿಯಾಯಿದು. ಈ ತೊಂದರೆ ಆದವಕ್ಕೆ ಶರೀರದ ಒಂದು ಭಾಗ ಅಥವಾ ಸೊಂಟಂದ ಕೆಳ ಪಕ್ಷವಾತಕ್ಕೆ ಗುರಿಯಪ್ಪದು ಬಹಳ ಸಾಮಾನ್ಯ. ನೆನಪಿನ ಶಕ್ತಿ ಇಲ್ಲದ್ದೆ ಅಪ್ಪದೂ ಇದ್ದು. ಸುಲಭಲ್ಲಿ ಅರ್ಥ ಅಪ್ಪ ಹಾಂಗೆ ಹೇಳ್ತರೆ ಬೈನ್ ಅನ್ಯೂರಿಸಮ್ ಆದವು ಕ್ಯಾಬೇಜ್ (ತಿರುಳಿಲ್ಲದ್ದೆ ಹಾಕಿದಲ್ಲೇ ಬಿದ್ದೊಂಡಿಪ್ಪ ತರಕಾರಿ ಹೇಳುವ ಅರ್ಥ) ಆದವು ಹೇಳಿಯೇ ಹೇಳ್ಲಕ್ಕು. ಹರಿಣಿಯಕ್ಕಾ, ನಿಂಗೊ ನಂಬಿಯೊಂಡು ಬಂದ ಆ ದೇವರೇ ನಿಂಗಳನ್ನೂ ನಿಂಗಳ ಗೆಂಡನನ್ನೂ ಕಾಪಾಡಿದ್ದದು ಹೇಳೇಕಷ್ಟೆ. ಎಂಗೊ ದಾಕುದಾರಕ್ಕೊ ಮನುಷ್ಯನ ಶರೀರಲ್ಲಿ ಕಾಂಬ ಅರೆಕೊರೆಗಳ ಸರಿಪಡ್ಸಲೆ ಎಡಿಗಷ್ಟೆ ಹೊರತಾಗಿ ಅದರಿಂದ ಮೀರಿದ ಒಂದು ಶಕ್ತಿ ಎಂಗಳಿಂದಲೂ ಮೇಲೆ ನಿಂದೊಂಡು ಕೆಲಸ ಮಾಡ್ತಾ ಇತರ್ು ಹೇಳ್ತದ್ರ ಎಂಗಳ ವೃತ್ತಿಲಿ ಎಷ್ಟೋ ಸತರ್ಿ ಎಂಗೊಗೆ ಅನುಭವಕ್ಕೆ ಬಯಿಂದು. ಮೋಹನ ಭಾವಯ್ಯನ ವಿಷಯಲ್ಲಿಯೂ ಆದ್ದದು ಅದುವೇ. ಶರೀರದ ಯಾವ ಬಾಗಂಗಳೂ ಪ್ಯಾರಲೈಸ್ ಆಯಿದಿಲ್ಲೆಯದಾ…,ಎಡದ ಹೊಡೆ ಒಂದು ರಜಾ ದುರ್ಬಲ ಆಯಿದು. ಅದು ಫಿಸಿಯೋಥೆರೆಪಿ(ಕ್ರಮಬದ್ಧವಾದ ವ್ಯಾಯಾಮ) ಮಾಡಿರೆ ಸರಿ ಅಕ್ಕು. ಎಲ್ಲ ಉಶಾರಾದ ಮತ್ತೆಯೂ ಕಾರು ಡೈವಿಂಗ್ ಮಾತ್ರ ರಜ್ಜ ಸಮಯಕ್ಕೆ ಮಾಡ್ತದು ಬೇಡ. ಯೋಗವ ಅಭ್ಯಾಸ ಮಾಡಿಯೋಂಡ್ರೆ ಹೀಂಗಿಪ್ಪದಕ್ಕೆಲ್ಲ ಭಾರೀ ಒಳ್ಳೆದಾವುತ್ತು. ಮನಸ್ಸೂ ಸಂತೋಷಲ್ಲಿತರ್ು….”

“ಅಂಬಗ ಡಯಾಬೆಟೀಸ್ ಖಾಯಿಲೆ ಇದಕ್ಕೆ ಎಂತ ತೊಂದರೆ ಕೊಡದೋ ಹರಿ…?” ಹರಿಣಿ ಕೇಳಿತ್ತು

“ಇಲ್ಲೆ ಹರಿಣಿಯಕ್ಕ…,ಈ ತೊಂದರೆಲಿ ಬಿ.ಪಿ. ಯೇ ದೊಡ್ಡ ಪಾತ್ರಧಾರಿ….ಈಗೀಗ ಅದು ಇಲ್ಲದ್ದವೂ ಈ ತೊಂದರೆಗೆ ಸಿಕ್ಕಿದ ಕೇಸುಗೊ ಎಂಗೋಗೆ ಬತ್ತಾ ಇದ್ದು. ಒಟ್ಟಾರೆ ಒತ್ತಡದ ಜೀವನ ಶೈಲಿ ಹೇಳ್ತದು ಇದ್ದನ್ನೇ…, ಸರ್ವರೋಗದ ಜನ್ಮದಾತ ಹೇಳ್ಲಕ್ಕು…., ಹಾಂಗಾಗಿಯೇ ಆನು ಹೇಳಿದ್ದದು, ಯೋಗಾಭ್ಯಾಸವ ದಿನಚರಿ ಮಾಡಿಯೋಳಿ ಹೇದು….”

“ಹರೀ…,ನಿನ್ನ ಉಪಕಾರವ ಈ ಜನ್ಮಲ್ಲಿ ಮರೆಯೆ ಮಿನಿಯಾ…, ನೀನು ಹೇಳಿದ ಹಾಂಗೇ ಮಾಡ್ತೆಯೋಂ…,ಎದೆ ಮೇಗಂಗೆ ಹೊತ್ತು ಹಾಕಿದ ಬಂಡೆಕಲ್ಲಿನ ಎತ್ತಿ ಕರೆಂಗೆ ಮಡುಗಿದ ಹಾಂಗಾತು ನಿನ್ನ ಮಾತುಗಳ ಕೇಳಿ…” ಕಣ್ಣಿರು ಹರಿವದ್ರ ಹರಿಣಿಗೆ ತಡಕ್ಕೋಂಬಲೆ ಎಡಿಗಾತಿಲ್ಲೆ.

“ಹ್ಹ…ಹ್ಹ…ಹರಿಣಿಯಕ್ಕ…ಎನ್ನ ನಿಂಗೊ ಎಲ್ಲೋರೂ ಮೂಸರೆ ಸುರುಕ ಹೇಳಿ ನೆಗೆ ಮಾಡಿಯೊಂಡಿತ್ತಿದ್ದಿ ಅಲ್ದೋ….ನಿಂಗೋ ಈ ನಮೂನೆ ಕೂಗೀರೆ ನಿಂಗಳನ್ನೂ ಆನು ಅದೇ ಹೆಸರಿಂದ ದಿನುಗೋಳೇಕಾವುತ್ತಿದಾ….”

ಹರಿಣಿ ಕಣ್ಣಿಲ್ಲಿ ನೀರು ತುಂಬ್ಸಿಯೊಂಡೇ ಬಾಯಿಲಿ ಸಶಬ್ಧವಾಗಿ ನೆಗೆ ಮಾಡಿತ್ತು. “ನಿನ್ನತ್ರೆ ಮಾತಾಡಿರೇ ರೋಗ ಅರ್ಧಕ್ಕರ್ಧವೂ ಓಡಿ ಹೋಕು ಮಾರಾಯಾ…” ಹರಿಣಿಯ ಮೆಚ್ಚಿಗೆಯ ನುಡಿಗೋ ಕೇಳಿದ್ದೇ ಇಲ್ಲೆ ಹೇಳ್ತ ಹಾಂಗೆ ಅಂವ ಮಾತಾಡಿದ,

“ನಚ್ಚಣ್ಣಾ, ನಿಂಗೋ ಇಲ್ಲಿ ಉಳ್ಕೋಂಡದು ಎಲ್ಲಿ?”

“ಅಯ್ಯೋ ಮಾರಾಯಾ…ಎನಗೆ ಸಂಗತಿ ಗೊಂತಾದ್ದೇ ಈಗ…ಇನ್ನು ಅದರ ಬಗ್ಗೆ ಆಲೋಚನೆ ಮಾಡೇಕಷ್ಟೆ…”ನಚ್ಚಣ್ಣ ದಾಕ್ಷಿಣ್ಯಂದ ಹೇಳಿದ. ಸ್ವಂತ ತಂಗೆಯ ವಿಷಯ ಮೊದಲೆ ಗೊಂತಿತ್ತಿದ್ದಿಲ್ಲೆ ಹೇಳ್ತದು ನಾಚಿಗೆಯ ವಿಷಯವೇ ಅಲ್ದೋ?

“ಹಾಂಗಾರೆ ನಾವು ಒಂದು ಕೆಲಸ ಮಾಡುವೋಂ…,ಭಾವಯ್ಯನೊಟ್ಟಿಂಗೆ ಹರಿಣಿಯಕ್ಕ ಇಲ್ಲೇ ಬೇಕಾವುತ್ತಲ್ದೋ? ಐ.ಸಿ.ಯೂ. ವಿಭಾಗದ ಹಿಂದೆಯೇ ನಾಲ್ಕು ಸ್ಪೆಷಲ್ ರೂಮುಗೋ ಇದ್ದು. ಆರಾರು ವಿ.ಐ.ಪಿ. ಜೆನಂಗೊ ಐ.ಸಿ.ಯೂ. ಲ್ಲಿ ಇದ್ದರೆ ಅವರ ಸಂಬಂಧಿಕರಿಂಗೆ ಉಳ್ಕೋಂಬಲೆ ಹೇಳಿ ಇಪ್ಪದದು. ಅಲ್ಲಿಪ್ಪ ಒಂದು ರೂಮಿಲ್ಲಿ ಹರಿಣಿಯಕ್ಕಂಗೆ ವ್ಯವಸ್ಥೆ ಮಾಡಿ ಕೊಡ್ಲೆ ಹೇಳ್ತೆ ಆಗದೋ…?ಇಲ್ಲ್ಯಾಣ ಕ್ಯಾಂಟೀನು ಊಟ ಉಂಡ್ರೆ ಎರಡೇ ದಿನಲ್ಲಿ ನಿಂಗಳೂ ಎಡ್ಮಿಟ್ ಆಯೇಕಕ್ಕು. ಅಷ್ಟೂ ಖಾರ. ನಿಂಗೊ ಎನ್ನ ಮನೆಗೆ ಬಪ್ಪಲಕ್ಕು….ಎನ್ನ ಮನೆ ಇಲ್ಲಿಂದ ಹೆಚ್ಚು ದೂರ ಇಲ್ಲೆ. ಇಂದು ನಿಂಗೊ ಎನ್ನೊಟ್ಟಿಂಗೆ ಕಾರಿಲ್ಲಿ ಬನ್ನಿ. ದಾರಿ ಗೊಂತಾದ ಮತ್ತೆ ದಿನಾಗ್ಲೂ ನಿಂಗಳ ಹೊತ್ತಿಂಗೆ ಹೋಗಿ ಮಿಂದು, ಉಂಡು ಎಲ್ಲ ಮಾಡಿಕ್ಕಿ ಬಪ್ಪಲಕ್ಕು. ನಚ್ಚಣ್ಣಾ…,ನಿಂಗಳೂ ತಂಗೆಯೊಟ್ಟಿಂಗೆ ನಿಂಬದಾ ಹೇಂಗೆ…?”

“ಅಯ್ಯೋ ಮಾರಾಯಾ…,ನೀನು ಸುಮ್ಮನೇ ತೊಂದರೆ ತೆಕ್ಕೋಳ್ತಾ ಇದ್ದೆಯನ್ನೇ…?”

“ಹಾಂಗಿಪ್ಪ ಫಾಮರ್ಾಲಿಟೀಸ್ ಎಲ್ಲ ನಮ್ಮ ನೆಡೂಕೆ ಬೇಡ….ನಿಂಗೊ ಹರಿಣಿಯಕ್ಕಂಗೆ ಅಣ್ಣ ಆದ್ರೆ ಆನು ತಮ್ಮ ಅಷ್ಟೆ…ಈಗ ನಿಂಗೊ ಇಲ್ಲಿ ನಿಂಬವನೋ….?ಅದರ ಹೇಳು ಮದಾಲು…”

“ಇಲ್ಲೆ ಹರಿ..,ಆಳಿನ ಮನೆಗೆ ಎತ್ಸುವ ಜವಾಬ್ದಾರಿ ಇದ್ದನ್ನೇ? ಆನು ಮನೆಗೆ ಹೋಗಿ ಪುಟ್ಟಣ್ಣನ ಕಳ್ಸುತ್ತೆ…”

“ಹೂಂ…ಅಕ್ಕು. ಆ ರೂಮಿಲ್ಲಿ ಇಬ್ರಿಂಗೆ ಆರಾಮಲ್ಲಿ ಇಪ್ಪಲಕ್ಕು. ಸರಿ ಹಾಂಗಾರೆ…ಎಂತ ಚಿಂತೆಯೂ ಬೇಡ…,ಹರಿಣಿಯಕ್ಕ..,ಕುಂಟಾಂಗಿಲ ಹಣ್ಣು ಅಪ್ಪ ಸಮಯಲ್ಲಿ ಅಪ್ಪನ ಮನೆಗೆ ಹೋದ್ರೆ ಎನ್ನ ಮರೇಡಿ ಮಿನಿಯಾ…?”

(ಇನ್ನೂ ಇದ್ದು)

6 thoughts on “ಅಬ್ಬೇ…, ಎನಗೆ ಅರುಂಧತಿಯ ಕಂಡಿದೇ ಇಲ್ಲೆ… (ಭಾಗ-10)

  1. ಹೂಂ ವಿಜಯಕ್ಕ…,ನಿಂಗಳ ಹಾರೈಕೆ ಸದಾ ಇರಲಿ.

  2. ಡಾ.ಹರೀಶ ಸಿಕ್ಕಿದ್ದು ಒಳ್ಳೆದಾತದ. ಒಂದು ಆಶಾಕಿರಣ ಕಾಣ್ತಾ ಇದ್ದು. ಕತೆಯ ಎಡಕ್ಕಿಲ್ಲಿ ಬಪ್ಪ
    “ಮೋರೆ ಹದ್ನೈದು ದಿನಂದ ತೆಳಿ ಕಾಣದ್ದವರ ಹಾಂಗೆ. ಹಿಳ್ಳೆ ತೊಡೆಲಿ ಹೇತತ್ತು ಹೇದು ತೊಡೆಯನ್ನೇ ಕಡುದು ಇಡ್ಕೀರೆ ಹೇಂಗಕ್ಕು……ನಾಯಿ ನಮ್ಮ ಕಚ್ಚಿತ್ತು ಹೇದು ನಾವು ನಾಯಿಯ ಕಚ್ಚಲೆ ಹೋವುತ್ತೋ. ” ಎಲ್ಲವುದೆ ಒಳ್ಳೆ ಅರ್ಥವತ್ತಾಗಿದ್ದು.
    ಶೀಲಕ್ಕನ ಕಥಾ ಶೈಲಿ ಅದ್ಭುತ.

    1. ಹೋ…,ಅಪ್ಪೋ…? ಛೆ, ಆದರೆ ಕಣ್ಣೀರು ಉದ್ದಿಯೊಂಬ ದಿನ ದೂರ ಇಲ್ಲೇ ಮಿನಿಯಾ…?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×