Oppanna.com

 ಅಬ್ಬೇ.., ಎನಗೆ ಅರುಂಧತಿಯ ಕಂಡಿದೇ ಇಲ್ಲೆ.., (ಭಾಗ-11)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   13/09/2016    4 ಒಪ್ಪಂಗೊ

ಅರುಂಧತಿ ಕತೆಯ ಪೂರ್ವ ಕಂತುಗೊ:
ಭಾಗ 1 : ಸಂಕೊಲೆ
ಭಾಗ 2 : ಸಂಕೊಲೆ
ಭಾಗ 3 : ಸಂಕೊಲೆ
ಭಾಗ 4 : ಸಂಕೊಲೆ
ಭಾಗ 5 : ಸಂಕೊಲೆ
ಭಾಗ 6 : ಸಂಕೊಲೆ
ಭಾಗ 7 : ಸಂಕೊಲೆ
ಭಾಗ 8 : ಸಂಕೊಲೆ
ಭಾಗ 9 : ಸಂಕೊಲೆ
ಭಾಗ 10 : ಸಂಕೊಲೆ

ಅಬ್ಬೇ.., ಎನಗೆ ಅರುಂಧತಿಯ ಕಂಡಿದೇ ಇಲ್ಲೆ.., (ಭಾಗ-11)

ಹರಿಣಿ ಮನಸ್ಸಿಲ್ಲೇ ಗುರುಗಳಿಂಗೆ ಸಾಷ್ಟಾಂಗ ಅಡ್ಡ ಬಿದ್ದತ್ತು. ಬೇರೆಂತ ಮಾಡ್ಲೆ ಎಡಿಗು ಅದಕ್ಕೆ?
ಹರಿಣಿ ಆ ರೂಮಿಲ್ಲಿ ಮೌನವಾಗಿ ಕೂದೊಂಡು ನಚ್ಚಣ್ಣನ ಭೇಟಿಯಾದ ಲಾಗಾಯ್ತಿಂದ ಈ ಕ್ಷಣದವರೇಂಗೆ ನೆಡದ ಘಟನೆಗಳ ಮೆಲುಕು ಹಾಕಲೆ ಸುರು ಮಾಡಿತ್ತು.
ಒಂದು ಇರುಳೂ ಒಂದು ಹಗಲೂ ಐ.ಸಿ.ಯೂ ಎದುರು ಕುಚರ್ಿಲಿ ಕೂದೇ ಹೊತ್ತು ಕಳವಾಗ ಹೀಂಗಿದ್ದ ಸಕಲ ಸೌಕರ್ಯ ಇಪ್ಪ ರೂಮಿಲ್ಲಿ ಎನಗೆ ಇಪ್ಪಲೆ ಅವಕಾಶ ಸಿಕ್ಕುಗು ಹೇಳ್ತ ಕಲ್ಪನೆಯಾದ್ರೂ ಇತ್ತಿದ್ದಾ…? ಹರೀಶಂಗೆ ಮೋಹನನ ಬಗ್ಗೆ ಅಷ್ಟು ಕಾಳಜಿ ತೆಕ್ಕೋಳೇಕಾದ ಅಗತ್ಯ ಆದ್ರೂ ಎಂತ ಇತ್ತಿದ್ದು…? ಹರಿಣಿಯಕ್ಕಾ…ಹರಿಣಿಯಕ್ಕಾ…ಹೇಳಿ ಸ್ವಂತ ತಮ್ಮಂದ ಹೆಚ್ಚಿಗೆ ಅಂವ ಎನ್ನ ಬಗ್ಗೆ ಆಸ್ಥೆ ವಹಿಸಿದಂ ಅಲ್ದೋ…? ಅಂವನ ಮನೇಲಿಯಾದ್ರೂ ಅಷ್ಟೆ…,ಅಂವನ ಹೆಂಡತ್ತಿ ಎಷ್ಟು ಪ್ರೀತಿಲಿ ಮಾತಾಡ್ಸಿತ್ತು. ಊಟ, ಉಪಚಾರಲ್ಲಿ ಎಷ್ಟೊಳ್ಳೆ ಸೌಜನ್ಯತೆ….,ಅವರ ಒಡನಾಟಂದಾಗಿ ಗೆಂಡನ ಬಗ್ಗೆ ಇತ್ತಿದ್ದ ಚಿಂತೆ ಅರ್ಧಕ್ಕರ್ಧ ಕಡಮ್ಮೆ ಆಗಿ ಹೋತಲ್ದೋ….? ನಚ್ಚಣ್ಣ, ಪುಟ್ಟಣ್ಣ, ಅತ್ತಿಗೆಕ್ಕೋ, ಮೋಹನನ ತಮ್ಮ…., ಎಲ್ಲೋರೂ ಅಂಬಗಂಬಗ ಬಂದು ಬೇಕುಬೇಕಾದ ವ್ಯವಸ್ಥೆ ಎಲ್ಲ ಮಾಡಿ ಕೊಟ್ಟಿಕ್ಕಿ ಹೋವುತ್ತಾ ಇದ್ದವು. ಸಾಲದ್ದಕ್ಕೆ ಮನಸ್ಸಿಂಗೆ ಹಿತ ಅಪ್ಪ ಹಾಂಗಿಪ್ಪ ಸಮಾಧಾನದ ಮಾತುಗೋ…ಸುರಭಿಗೆ ಹಳೇ ಕ್ರಮಂಗೊ ಹಿತ ಆವುತ್ತಿಲ್ಲೆ ಹೇದು ಆನು ಅಪ್ಪನ ಮನೆಯ ರಜ್ಜ ದೂರವೇ ಮಡುಗಿತ್ತಿದ್ದೆ ಅಲ್ದೋ…? ಆದರೆ ಇಂದು ಎನಗೆ ಹಿತ ಸಿಕ್ಕಿದ್ದು ಆರಿಂದ…? ಇರುಳು ಇದ್ರೇ ಹಗಲಿನ ಬೆಲೆ ಗೊಂತಪ್ಪದು ಹೇಳ್ತದು ಇದಕ್ಕೆಯೋ ಏನೋ…? ಆಸರಿಂಗೆ ಹೇಳ್ತದ್ರ ನಿಜವಾದ ಬೆಲೆ ಗೊಂತಪ್ಪದು ದೊಂಡೆ ಕಟ್ಟುತ್ತ ಹಾಂಗೆ ಆಸರಾಗಿಯಪ್ಪಗಳೇ…., ಒಡಹುಟ್ಟುಗಳ, ಹಿತೈಷಿಗಳ ನಿಜ ಪ್ರೀತಿ ಹೇಳಿದ್ರೆ ಎಂತರ ಹೇಳ್ತದು ಈಗ ಅನುಭವಕ್ಕೆ ಬಂತು. ಕಡು ಕಷ್ಟದ ಬೆಂಗಾಡಿಲ್ಲಿ ಇವರೆಲ್ಲರ ಪ್ರೀತಿ ಎನಗೆ ಜೀವಜಲ ಆತಲ್ದೋ…? ಸುರಭಿ ಮನೆ ಬಿಟ್ಟ ಲಾಗಾಯ್ತಿಂದ ಮೊನ್ನೆ ನಚ್ಚಣ್ಣನ ಕಾಂಬವರೆಂಗೆ ಜೀವನ ಹೇಳಿದ್ರೆ ಬಿಡುಸಲೇ ಎಡಿಯದ್ದ ಹಾಂಗಿಪ್ಪ ಕಗ್ಗಂಟು ಹೇಳಿ ಕಂಡೊಡಿತ್ತಿದ್ದು. ಆದರೆ ಈಗ….? ಸಂದರ್ಭಕ್ಕೆ ಪೂರಕವಾಗಿ ಒಬ್ಬೊಬ್ಬನೂ ಬಂದೊದಗಿದ ರೀತಿ…? ಸನ್ನಿವೇಶಂಗೋ ಒಂದೊಂದಾಗಿ ಅನುಕೂಲಕರವಾಗಿ ಮಾಪರ್ಾಡಾದ ರೀತಿ…? ಇನ್ನೂ ಸುಮಾರು ದಿನ ಆಸ್ಪತ್ರೆಲೇ ಇರೇಕಕ್ಕು ಹೇಳಿ ಮಾತಿನ ಮಧ್ಯೆ ಸಿಸ್ಟರುಗೊ ಹೇಳಿಯಪ್ಪಾಗಳೂ ಆನು ಎದೆಗುಂದದ್ದಿಪ್ಪಲೆ ಎಂತ ಕಾರಣ…? ಗುರುಗಳಿಂಗೆ ಎನ್ನ ಬೇಡಿಕೆ ಕೇಳಿತ್ತು ಹೇಳ್ತ ಆತ್ಮ ವಿಶ್ವಾಸವೋ…? ಅಥವಾ ಎನ್ನ ದುಃಖವ ಹಂಚಿಯೋಂಬಲೆ ಜೆನ ಇದ್ದವು ಹೇಳ್ತ ಧೈರ್ಯವೋ…?

ನಚ್ಚಣ್ಣ ಹೇಳಿದ ಹಾಂಗೆ ಇದೆಲ್ಲ ಜೀವನ ಪರೀಕ್ಷೆಯ ಬೇರೆ ಬೇರೆ ವಿಧಾನಂಗೊ ಆದಿಕ್ಕೊ…? ಅಥವಾ ಪ್ರತಿಯೊಂದು ಘಟನೆಯೂ ಪೂರ್ವ ನಿಧರ್ಾರಿತವೋ…? ಒಂದು ನಾಟಕಲ್ಲಿ ಶೃಂಗಾರ ಕನ್ಯೆಯ ಪಾತ್ರ ಮಾಡಿದ ಅದೇ ಹೆಂಗಸು ಇನ್ನೊಂದ್ರಲ್ಲಿ ಕುಷ್ಠ ರೋಗಿಯ ಪಾತ್ರ ಮಾಡೇಕಾಗಿ ಬಕ್ಕು. ಸೊಗಸುಗಾತಿ ಕನ್ಯೆಯ ಪಾತ್ರದ ಥಳಕು, ಬಳಕು ರೋಗಿಯ ಪಾತ್ರಕ್ಕಪ್ಪಾಗ ದುಃಖದ ಮೂಟೆಯಾಯೇಕು, ಅಜ್ಜಿಯ ಪಾತ್ರಕ್ಕಪ್ಪಾಗ ಬೆನ್ನು ಬಗ್ಗೇಕು, ಸ್ವರ ನೆಡುಗೇಕು….ಅಂದರೆ ಆ ಹೆಮ್ಮಕ್ಕಳ ಮನಸ್ಸಿಂಗೆ ಗೊಂತಿತರ್ು, ತಾನು ಇದು ಯಾವುದೂ ಅಲ್ಲ….ಇದೆಲ್ಲ ತಾತ್ಕಾಲಿಕವಾಗಿ ತಾನು ಅಭಿನಯಿಸಿ ತೋಸರ್ೇಕಾದ ಪಾತ್ರಂಗೋ ಹೇಳಿ. ಅಂಬಗ ಅದದು ಪಾತ್ರದ ಬಗ್ಗೆ ಪ್ರೇಕ್ಷಕರು ಕೈಚಪ್ಪಾಳೆ ಹೊಡದೋ, ಕಣ್ಣೀರು ಹಾಕಿಯೋ ಸಹಜ ಪ್ರತಿಕ್ರಿಯೆ ತೋಸರ್ೇಕು ಹೇಳಿಯಾದ್ರೆ ಪಾತ್ರದಾರಿ ಆಯಾಯ ಪಾತ್ರಲ್ಲಿ ಪರಕಾಯ ಪ್ರವೇಶ ಮಾಡ್ಲೇ ಬೇಕು. ಪರಕಾಯ ಪ್ರವೇಶ ಹೇಳುವಂತಾದ್ದು ತಾತ್ಕಾಲಿಕ ಹೇಳ್ತದು ಪಾತ್ರಧಾರಿ, ಪ್ರೇಕ್ಷಕ ಇಬ್ರಿಂಗೂ ಗೊಂತಿದ್ರೂ ನಾಟಕ ನೆಡೆತ್ತಾ ಇಪ್ಪಷ್ಟೂ ಹೊತ್ತು ಇಬ್ರಿಂಗೂ ಅದು ಸತ್ಯವೇ ಹೇಳಿ ತೋರ್ತು ಅಲ್ದೋ…? ಹಾಂಗೇ ಜೀವನವೂ….ಪರಕಾಯ ಪ್ರವೇಶ ಹೇಳ್ತದ್ರ ಆನು ಮರದ್ದದೇ ದೊಡ್ಡ ಸಮಸ್ಯೆ ಆಗಿ ಹೋದ್ದದೋ…? ಅಥವಾ ಆ ಮರೆವಿನ ಮಾಯೆಯ ಮುಸುಕಿಂದ ಆನು ಹೆರ ಬರೇಕು ಹೇದೇ ಹೀಂಗೆಲ್ಲ ಆದ್ದದೋ…? ಈ ಎಲ್ಲ ಬದಲಪ್ಪ ಸನ್ನಿವೇಶಂಗೋ, ಅದಕ್ಕೆ ಹೊಂದಿಯೋಂಬ ಹಾಂಗೆ ಆನು ನಿರ್ವಹಿಸಿದ ಪಾತ್ರಂಗೋ, ಆ ಪಾತ್ರಕ್ಕೆ ತಕ್ಕ ಬದಲಾದ ಬಾಕಿಪ್ಪ ಪಾತ್ರಂಗೋ (ವ್ಯಕ್ತಿಗೋ), ಅವರ ನಡವಳಿಕೆಗೋ….,ಈ ಎಲ್ಲದ್ರ ಎಡೇಲಿ ಇಷ್ಟ್ರವರೆಂಗೂ ಬದಲಾಗದ್ದೆ ಹಾಂಗೇ ಇತ್ತಿದ್ದದು ಯಾವುದು…? ಗುರುಗಳ ಮೇಲಾಣ ಎನ್ನ ವಿಶ್ವಾಸ. ಅವರ ಆ ಅನುಕಂಪದ ನೋಟಲ್ಲಿ ಒಂದು ದಿನವೂ ಒಂದು ರಜ್ಜವೂ ವ್ಯತ್ಯಾಸ ಕಂಡಿದಿಲ್ಲೆ ಅಲ್ದೋ….?ಎನ್ನ ಕೈ ಹಿಡಿದು ನಡೆಶಿದ್ದು ಅದುವೇಯೋ…? ಅಂಬಗ ಗಳಿಗೆಗೆ ಒಂದಾರಿ ಬಣ್ಣ ಬದಲಾಯಿಸುವ ಈ ಸಂಸಾರ ಒಳ್ಳೇದೋ…ಯಾವುದೇ ಕಾಲಕ್ಕೂ ಬದಲಾಗದ್ದೇ ಇಪ್ಪ ಆ ವಿಶ್ವಾಸ, ಭಕ್ತಿ ಒಳ್ಳೇದೋ…? ಯೋಚನೆ ಮಾಡ್ತಾ ಮಾಡ್ತಾ ಹರಿಣಿಗೆ ರಜ್ಜ ಕಣ್ಣು ಅಡ್ಡಾದ ಹಾಂಗೆ ಆತು. ಫೋನಿನ ಸಂಗೀತದ ಕರೆ ಕೇಳಿ ಅದರ ತೆಗದು ಕೆಮಿಗೆ ಮಡುಗಿತ್ತು….,`ಹರಿಣೀ…,ಯೋಚ್ಸೇಡ…,ಎಲ್ಲ ಸರಿ ಆವುತ್ತು….ಶ್ರೀರಾಮ ಇದ್ದಂ…ಅಂವ ನೋಡಿಗೋಳ್ತಂ….,ನಿನ್ನ ಚಿಂತೆಯೆಲ್ಲ ನವಗೆ ಬಿಡು…. ಹಾಯಾಗಿ ಒರಗು…’ ಹರಿಣಿಗೆ ಫೋನಿಲ್ಲಿ ಕೇಳಿದ ಆ ಸ್ವರ ಎಲ್ಲಿಯೋ ಕೇಳಿದ್ದೆ….ಎಲ್ಲಿಯೋ ಕೇಳಿದ್ದೆ ಹೇಳಿ ಆತು….ಎಲ್ಲಿ…ಎಲ್ಲಿ…? ಛೆ…,ನೆಂಪಾವುತ್ತಿಲ್ಲೆಯನ್ನೇ…ಹೇಳಿ ತಲೆಗೆ ಕೈಲಿ ಕುಟ್ಟಿಯೋಂಡತ್ತು.

“ಪುಟ್ಟಕ್ಕೋ….ಪುಟ್ಟಕ್ಕೋ…ಇದಾ ಭಾವ ನಿನ್ನ ಕೇಳ್ತಾ ಇದ್ದಂ….ಬಾ ಅಲ್ಲಿಗೆ ಹೋಪೋಂ….” ಪುಟ್ಟಣ್ಣ ದಿನುಗೋಂಡಪ್ಪಗ ಹರಿಣಿಗೆ ಸಂಭ್ರಮಾಶ್ಚರ್ಯ! ರಪ್ಪನೆ ಎದ್ದಿಕ್ಕಿ ಹೋತು. ಅಂದು ಮನೆಲಿ ಬಿದ್ದ ಲಾಗಾಯ್ತಿಂದ ಮೋಹನ ಈಗ ಸುರೂ ಮಾತಾಡಿದ್ದದು! ಆರಿಂಗಾರೂ ಸಂತೋಷ ಆಗದ್ದಿಕ್ಕೋ…? ಮೋಹನನ ಚೇತರಿಕೆ ನೋಡಿ ಎರಡು ಕುಟುಂಬವೂ ಸಮಾಧಾನದ ನಿಟ್ಟುಸಿರು ಬಿಡುವ ಹಾಂಗಾತು. ಹರೀಶ ಮೋಹನ ಹರಿಣಿಯರ ಯೋಗಕ್ಷೇಮದ ಪೂತರ್ಿ ಜವಾಬ್ದಾರಿಯ ಹೊತ್ತೋಂಡ. ಹಾಂಗಾದ ಕಾರಣ ಚಿಕಿತ್ಸೆಯ ವಿಷಯಲ್ಲಿಯಾಗಲೀ ಬಾಕಿಪ್ಪ ವಿಷಯಲ್ಲಿಯಾಗಲೀ ಹರಿಣಿಗೆ ಯಾವುದೇ ಸಮಸ್ಯೆಯೂ ಬಯಿಂದಿಲ್ಲೆ. ಮೋಹನನ ಐ.ಸಿ.ಯೂ ವಿಭಾಗಂದ ಸ್ಪೆಷಲ್ ರೂಮಿಂಗೆ ತಂದು ಮನುಶಿದವು. ಇನ್ನು ಹರಿಣಿಯೂ ಅಂವನೊಟ್ಟಿಂಗೆ ಇಪ್ಪಲಕ್ಕು ಹೇಳಿ ದಾಕುದಾರಕ್ಕೊ ಹೇಳಿದವು.

ಈಗ ಮೋಹನನ ತಲೆಲಿ ದೊಡ್ಡ ಬ್ಯಾಂಡೇಜು, ಕೈಗೆ ಗ್ಲೂಕೋಸಿನ ಉದ್ದದ ನಳಿಗೆ ಎಲ್ಲ ಇದ್ದರೂ ಸಾವಕಾಶಲ್ಲಿ ಮಾತಾಡ್ತಂ.

“ಹರಿಣಿ…,ನಿನ್ನ ಕೈ ಅಡಿಗೆ ತಿನ್ನದ್ದೆ ಸುಮಾರು ದಿನ ಆತಲ್ದೋ…?” ಮೋಹನ ಮನುಗಿಯೊಂಡೇ ಹೀಂಗೆ ಹೇಳಿಯಪ್ಪಗ ಹರಿಣಿ ನೆಗೆ ಮಾಡಿಯೊಂಡೇ ಹೇಳಿತ್ತು,

“ಆತು ಇನ್ನು ರಜ್ಜವೇ ದಿನ…,ಮತ್ತೆ ಮನೆಗೆ ಹೋಪಲಕ್ಕು ಹೇಳಿ ಹರೀಶ ಹೇಳಿದ್ದಂ…”

“ಛೇ…ಅಂವ ಒಬ್ಬ ನವಗೆ ಬೇಕಾಗಿ ಎಷ್ಟು ಅಸಬಡಿತ್ತಾ ಇದ್ದಂ….ಯಾವ ಜನ್ಮದ ಋಣವೋ….” ಮೋಹನ ಹೇಳ್ತಾ ಇದ್ದ ಹಾಂಗೇ ಹರೀಶ ಒಳ ಬಂದಂ.

“ಹರಿಣಿಯಕ್ಕಾ…ಹೇಂಗಿದ್ದವು ನಮ್ಮ ಭಾವಯ್ಯ…?”

“ನೀನೇ ನೋಡಿ ಹೇಳು…”

“ಹರೀಶ…,ನಿನ್ನ ಉಪಕಾರವ ಏಳೇಳು ಜನ್ಮಕ್ಕೂ ಎಂಗೋಗೆ ತೀರ್ಸಲೆ ಎಡಿಯ ಮಿನಿಯಾ…?” ಮೋಹನ ಹೇಳಿಯಪ್ಪಾಗ ಹರೀಶ ಮೋಹನನ ಹತ್ರೆ ಬಂದು ಹೇಳಿದಂ,

“ಭಾವಯ್ಯ….ಏಳು ಜನ್ಮದ ವಿಷಯ ಮತ್ತೆ ನೋಡುವೋಂ….ಈಗ ಸದ್ಯಕ್ಕೆ ಈ ಜನ್ಮಲ್ಲಿ ಎಂತಾಯೇಕಾದ್ದು ನೋಡುವೋಂ…,ಇದಾ…ಇಲ್ಲಿಗೆ ಈಗ ಒಬ್ಬ ಅತಿ ವಿಶಿಷ್ಟ ವ್ಯಕ್ತಿ

ಬಂದರೆ ನಿಂಗೋಗೆ ಎಂತ ಅಭ್ಯಂತರ ಇಲ್ಲೇನ್ನೇ…?”

“ಅದಾರಪ್ಪಾ ಹಾಂಗಿದ್ದ ವ್ಯಕ್ತಿ…?ಆನೊಬ್ಬ ಅತಿ ಸಾಮಾನ್ಯ ಮನುಷ್ಯ….ಎನ್ನ ನೋಡ್ಲೆ ಬಪ್ಪ ಹಾಂಗಿಪ್ಪ ಅತಿ ವಿಶಿಷ್ಟ ವ್ಯಕ್ತಿಯ ಎನಗೆ ಗೊಂತೇ ಇಲ್ಲೆನ್ನೇ…?”

“ಹ್ಹ…ನಿಂಗೋಗೆ ಅಂವನ ಗೊಂತಿರ…,ಅಂದರೆ ಅವಂಗೆ ನಿಂಗಳ ಸರೀ ಗೊಂತಿದ್ದು…,ನಿಂಗೋ `ಹೂಂ’ ಹೇದರೆ ಅಂವ ಇಲ್ಲಿಗೆ ಬಕ್ಕು….”

“ಬಪ್ಪದಕ್ಕೆ ಎಂತ ಅಭ್ಯಂತರವೂ ಇಲ್ಲೆ ಹರೀಶ….ಅಂದರೆ ಸೂರುವಾಣ ಸತರ್ಿ ನೋಡುವಾಗ ಎನ್ನ ಈ ಅವತಾರಲ್ಲಿ….?” ಮೋಹನ ಮಾತು ಮುಗಿಶಿದ್ದನೋ ಇಲ್ಲ್ಯೋ….ಚೆಂದದ ಜವ್ವನಿಗ ಒಬ್ಬ ಒಳ ಬಂದಂವ ನಸುನೆಗೆ ಮಾಡಿಯೊಂಡು ಹೇಳಿದಂ,

“ಮಾವಾ…ನಾನು ನಿಮ್ಮ ಅಳಿಯ…ಆದಿತ್ಯ…, ಸುರಭಿಯ ಗಂಡ…”

ಹರಿಣಿ, ಮೋಹನ ಇಬ್ರೂ ಒಟ್ಟಿಂಗೇ ಕೇಳಿದವು,

“ಯಾರೂ…?”

(ಇನ್ನೂ ಇದ್ದು)

4 thoughts on “ ಅಬ್ಬೇ.., ಎನಗೆ ಅರುಂಧತಿಯ ಕಂಡಿದೇ ಇಲ್ಲೆ.., (ಭಾಗ-11)

  1. ಗೋಪಾಲಣ್ಣ, ಅಳಿಯ ಬೆಂಗಳೂರಿಲ್ಲಿ ಕೆಲಸಲ್ಲಿಪ್ಪದು ಹೇದು ಬರೆದ್ದೇ ಅಲ್ಡೋ….? ಅಲ್ಲಿಯಾಣ ಕನ್ನಡಿಗರಿಂಗೆ ಕನ್ನಡ ಬೇಡದ್ರೂ ಹೆರಾಂದ ಬಂದವು ಒಂದಷ್ಟು ಜೆನಂಗಾದರೂ ಕನ್ನಡ ಕಲಿವಲೆ ಆಸಕ್ತಿ ತೋರ್ಸಿ ಕಲ್ತು ಚೆಂದಕೆ ಮಾತಾಡ್ತರ ನೋಡಿದ್ದೆ. ಅದೇ ಅಂಶ ಕಥೇಲಿ ಬಂತು. ಪ್ರತಿ ವಾರ ಬಪ್ಪ ನಿಂಗಳ ಫ್ರೋತ್ಸಾಹಕರ ನೋಡಿಗೊಕ್ಕೆ ಧನ್ಯವಾದಂಗೊ.

  2. ಕಲ್ಕತ್ತದ ಅಳಿಯಂಗೆ ಕನ್ನಡ ಬತ್ತೋ ಅಂಬಗ. ಆರೋ ಬ್ರಾಮ್ಮರೇ ಅಲ್ಲಿಗೆ ಹೋಗಿ ನೆಲೆಸಿದವಾಯ್ಕು. ಅಂತೂ ಶುಭದ ಸೂಚನೆ ಸಿಕ್ಕಿತ್ತು. ಕತೆಯಂತೂ ಒಳ್ಳೆ ರೈಸಿತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×