Oppanna.com

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…                  (ಭಾಗ-6)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   09/08/2016    9 ಒಪ್ಪಂಗೊ

ಅರುಂಧತಿ ಕತೆಯ ಪೂರ್ವ ಕಂತುಗೊ:
ಭಾಗ 1 : ಸಂಕೊಲೆ
ಭಾಗ 2 : ಸಂಕೊಲೆ
ಭಾಗ 3 : ಸಂಕೊಲೆ
ಭಾಗ 4 : ಸಂಕೊಲೆ
ಭಾಗ 5 : ಸಂಕೊಲೆ

ಸುರಭಿ ವತ್ಸಲಾ ಮೇಡಮ್ಮಿನ ಪಟ್ಟದ ಶಿಷ್ಯೆ ಹೇಳಿ ಗುರುತುಸಿಯೊಂಬಲೆ ಹೆಚ್ಚು ಸಮಯ ಬೇಕಾಯಿದಿಲ್ಲೆ. ಸುರಭಿಯ ಹಾಂಗಿದ್ದ ಹುಟ್ಟು ಪ್ರತಿಭೆ ಎನ್ನ ಮಡಿಲಿಂಗೆ ಬಿದ್ದದು ಎನ್ನ ಭಾಗ್ಯ ಹೇಳಿ ವತ್ಸಲಾ ರಂಗರಾಜನ್ ಒಂದ್ಸತರ್ಿ ಮೋಹನ, ಹರಿಣಿಯತ್ರೆ ಹೇಳಿಯಪ್ಪಾಗ ಅವಕ್ಕೆ ಕಣ್ಣು ತುಂಬಿ ಬಂತು. ನೃತ್ಯಕಲೆಯ ಒಳ, ಹೆರ, ಉದ್ದ ಅಗಲ,ಆಳವ ಅರೆದು ಕುಡುದತ್ತು ಸುರಭಿ. ಈಗೀಗ ಮೇಡಮ್ಮಿನ ನೃತ್ಯದೊಟ್ಟಿಂಗೆ ಬೇರೆಲ್ಲ ಶಿಷ್ಯೆಯರಿಂದ ಹೆಚ್ಚು ಸುರಭಿಯೇ ಸಾಥ್ ನೀಡ್ತದು. ಈಗ ಅವೆಲ್ಲೋರೂ ಶಾಕುಂತಲ ನಾಟಕಕ್ಕೆ ಸಂಬಂದಪಟ್ಟ ನೃತ್ಯ ರೂಪಕವೊಂದರ ಸಂಯೋಜನೆ ಮಾಡ್ತದ್ರಲ್ಲಿ ಮಗ್ನ ಆದ ಕಾರಣ ವಾರಲ್ಲಿ ಮೂರು ನಾಲ್ಕು ದಿನ ಸುರಭಿ ಬೆಂಗ್ಳೂರಿಲ್ಲೇ ಇರೇಕಾವುತ್ತು. ಮುಂದೆ ಆ ನೃತ್ಯ ರೂಪಕ ಎಷ್ಟು ಜನಪ್ರಿಯ ಆತು ಹೇಳಿದ್ರೆ ಅದರ ನೂರನೆಯ ಪ್ರದರ್ಶನಕ್ಕೆ ಸಾಕ್ಷಾತ್ ರಾಷ್ಟ್ರಪತಿಯೇ ವಿಷೇಶ ಅತಿಥಿಯಾಗಿ ಆಗಮಿಸಿದವು. ಆ ಶುದ್ದಿಯ ರಂಗು ರಂಗಿನ ಪಟಂಗಳೊಟ್ಟಿಂಗೆ ಎಲ್ಲಾ ಪತ್ರಿಕೆಗಳೂ ಅಚ್ಚು ಹಾಕಿದವು. ಅತಿ ಸಣ್ಣ ಪ್ರಾಯಲ್ಲಿ ಅತಿ ದೊಡ್ಡ ಸಾಧನೆ ಮಾಡಿದ ನಮ್ಮ ಒಪ್ಪಕ್ಕನ ಶುದ್ದಿ ಬ್ರೇಕಿಂಗ್ ನ್ಯೂಸ್ ಆಗಿ ಎಲ್ಲಾ ಟಿ.ವಿ.ವಾಹಿನಿಗಳಲ್ಲಿಯೂ ಬಂತು.

“ಹರಿಣೀ..,ನಾವೆಷ್ಟು ಪುಣ್ಯವಂತರು ನೋಡು…ಮಕ್ಕೊ ಇಲ್ಲೆ ಹೇದು ಕೊರಗಿದ್ದದು ಸಾರ್ಥಕ ಆತು. ನಮ್ಮ ಕಣ್ಣು ನೀರ ಬೇಡಿಕೆ ದೇವರಿಂಗೆ ಕೇಳಿಯೇ ಎರಡೂ ಕೈಲಿ ಬಾಚಿ ಕೊಡ್ತಾ ಇದ್ದ ನೋಡು…” ಒಂದು ದಿನ ಮೋಹನ ಸಂತೋಷಲ್ಲಿ ಬೀಗಿಯೊಂಡು ಹರಿಣಿಯ ಹತ್ರೆ ಹೇಳಿದ.
“ಹೂಂ…,ಅಪ್ಪು. ಆದರೆ ಬಾಚಿ ಕೊಡ್ತ ಹೇಳಿ ನಾವೂ ಹಾಂಗೇ ಬಾಚಿ ತೆಕ್ಕೊಂಡ್ರೆ ನವಗೆ ಅಜೀರ್ಣ ಆಗದೋ….,ಅಮೃತವೂ ಅತಿಯಾದ್ರೆ ವಿಷವೇ ಅಕ್ಕು ಹೇಳ್ತವಲ್ದೋ…?”
“ಹ್ಹ…ಹ್ಹ…ಹ್ಹ…ಒಳ್ಳೇ ಜೋಕು ಮಾರಾಯ್ತಿ ನಿನ್ನದು…ಅಲ್ಲಾ ಈಗೀಗ ನೀನೆಂತ ದೊಡ್ಡ ದೊಡ್ಡ ಮಾತುಗಳ ಹೇಳ್ಲೆ ಸುರುಮಾಡಿದ್ದದು…? ಅಲ್ಲದ್ರೆ ಮಗಳ ಒಂದೊಂದು ಕಾರ್ಯಕ್ರಮದ ಬಗ್ಗೆಯೂ ಟಿ.ವಿ. ವಾಹಿನಿಂದ ಹೆಚ್ಚು ನಿನ್ನ ಬಾಯಿಯೇ ಪ್ರಚಾರ ಮಾಡಿಯೊಂಡು ಇತ್ತಿದ್ದದು…ಈಗೆಂತ ಉಪ್ಪುಂಟೋ…ಉಪ್ಪಿನ ಕಲ್ಲುಂಟೋ ಹೇದೂ ಅದರ ಬಗ್ಗೆ ಮಾತಾಡ್ತು ಕೇಳ್ತಿಲ್ಲೆ…?”

“ಏ….ಯ್…ಹಾಂಗೆಂತ ಇಲ್ಲೆಪ್ಪಾ…ಆನು ಕೆಲವು ಸತರ್ಿ ಜಾನ್ಸಲಿದ್ದು…,ಏವದೇ ವಿಷಯವನ್ನೇ ಆದ್ರೂ ಅತಿಯಾಗಿ ಹಚ್ಚಿಯೋಂಡ್ರೆ ಅದು ಒಂದು ರಜ್ಜ ಅತ್ತಿತ್ತೆಯಾದ್ರೂ ನವಗೆ ತಾಳಿಯೋಂಬಲೆ ಎಡಿಗಾಗದೋ ಹೇಳಿ…”
“ಇದಾ ಮಾರಾಯ್ತೀ…,ನೀನು ಏವಾಗಳೂ ಇಪ್ಪ ಹಾಂಗೇ ಇದ್ರೆ ಸಾಕು ಮಿನಿಯಾ…,ತತ್ವ ಜ್ಞಾನಿಯ ಹಾಂಗೆ ಭಾಷಣ ಬಿಗಿಯೇಡ ಗೊಂತಾತಾ…? ಎನಗೆ ಮಂಡೆ ಬೆಶಿ ಅಪ್ಪಲೆ ಸುರುವಕ್ಕು…”ಮೋಹನ ನೆಗೆ ಮಾಡಿಯೊಂಡೇ ಹೇಳಿದ. ಹರಿಣಿಯೂ ನೆಗೆ ಮಾಡಿಯೊಂಡೇ ಮಾತು ಬದಲ್ಸಿತ್ತು,
“ಅಲ್ಲಾ..,ಆನು ಹೀಂಗೆ ಹೇಳ್ತೆ ಜಾನ್ಸೇಡಿ…ಮಗಳಿಂಗೆ ನಾಡಿದ್ದು ಇಪ್ಪತ್ತನೇ ತಾರೀಖಿಂಗೆ ಹತ್ತೊಂಭತ್ತು ವರ್ಷ ತುಂಬಿತ್ತಿಲ್ಲ್ಯೋ…? ಇನ್ನು ಮೆಲ್ಲಂಗೆ ಮಾಣಿ ಹುಡ್ಕಲೆ ಸುರು ಮಾಡೇಡದೋ…?”

“ಹೇಂ…? ಮಗಳು ಕಲಿತ್ತಷ್ಟು ಕಲ್ಶಿಕ್ಕಿಯೇ ಮದುವೆ ಮಾಡ್ತದು…,ಎನ್ನ ಹಾಂಗೆ ಕಲಿವಿಕೆ ಅರ್ಧಲ್ಲಿ ನಿಂಬಲೆ ಎಡಿಯ…ಹೇಳಿಯೆಲ್ಲ ಹೇದೊಂಡಿತ್ತಿದ್ದೋಳು ಈಗ ಎಂತ ಪ್ಲೇಟು ತಿರುಗಿಸಿದ್ದದು…?”
“ಅಲ್ಲಾ…ಹಾಂಗಲ್ಲ…ಎಂಜಿನಿಯರಿಂಗೋ ಮೆಡಿಕಲ್ಲೋ ಆದರೆ ಕಲಿವಿಕೆ ಮುಗಿಯದ್ದೆ ಮದುವೆ ಮಾಡೀರೆ ಸರಿ ಆಗ ಹೇಳುವೋಂ….ಇದು ಹಾಂಗಲ್ಲನ್ನೇ? ಅಭ್ಯಾಸ ಏವಾಗ ಬೇಕಾರೂ ಮಾಡ್ಲಕ್ಕು…,ಸಂಗೀತ, ಡ್ಯಾನ್ಸು ಹೀಂಗಿಪ್ಪ ಕಲೆಗೊ ಎಲ್ಲ ಕಲ್ತಷ್ಟೂ ಮುಗಿವಲೆ ಹೇಳಿ ಇದ್ದೊ….? ಅದು ಆವುತ್ತಾ ಇತರ್ು…ಅದರೆಡಕ್ಕಿಲ್ಲಿ ನವಗೆ ಬೇಕಾದ್ದದ್ರನ್ನೂ ಮಾಡಿಯೋಂಡ್ರೆ ಒಳ್ಳೇದಲ್ದೋ ಹೇಳಿ ಆನು ಜಾನ್ಸುತ್ತದು….”

“ಹರಿಣಿ…,ಈಗ ಕೆಲವು ಸಮಯಂದ ಆನು ನೋಡ್ತಾ ಇದ್ದೆ…ನಿನ್ನ ಮನಸ್ಥಿತಿಲಿ ಎಂತೋ ಬದಲಾವಣೆ ಕಾಣ್ತಾ ಇದ್ದು…,ಯಾವಾಗಲೂ ಎಂತೋ ಯೇಚನೆ ಮಾಡ್ತಾಂಗೆ ಕಾಣ್ತನ್ನೇ…?”
“ಇಲ್ಲೆಪ್ಪಾ…ಹಾಂಗೆಂತ ಇಲ್ಲೆ…ಸುರಭಿ ಡ್ಯಾನ್ಸು, ಅಭ್ಯಾಸ, ಬೆಂಗ್ಳೂರು….ಹೇಳಿ ಅದರದ್ದೇ ಒತ್ತಡಲ್ಲಿತರ್ು. ನಿಂಗೊಗೆ ನಿಂಗಳ ಆಪೀಸೇ ಮೊದ್ಲಾಣ ಹೆಂಡತ್ತಿಯನ್ನೇ…? ಅಂಬಗ ಆನು ಒತ್ತೆಪ್ಪೋಕಿ ಆದೆಯಲ್ದೋ…ಹಾಂಗಾಗಿ ರಜ್ಜ ಬೇಜಾರು ಅಷ್ಟೆ…”

“ಅಪ್ಪು ಹರಿಣಿ…,ನಿನ್ನನ್ನೂ ಸುರಭಿಯನ್ನೂ ಕರಕ್ಕೊಂಡು ಎಲ್ಲಿಗಾರೂ ಒಂದು ಹದಿನೈದು ದಿನ ತಿರುಗಲೆ ಹೋಪೋ ಹೇಳಿ ಆನೂದೆ ಜಾನ್ಸುತ್ತಾ ಇದ್ದೆ. ಬ್ಯಾಂಕಿಲ್ಲಿ ಮೇಗಾಣ ಹುದ್ದೆ ಹೇದರೆ ಸೆರಗಿಲ್ಲಿ ಕೆಂಡ ಕಟ್ಟಿಯೋಂಡ ಹಾಂಗೇ…ಒಂದು ದಿನಾದ್ರೂ ಸ್ವಸ್ಥತೆ ಇಲ್ಲೆ. ಆತು ಇನ್ನು ರಜ್ಜವೇ ಸಮಯ ಇಪ್ಪದು ಎನ್ನ ನಿವೃತ್ತಿಗೆ. ಮತ್ತೆ ನೋಡು, ನಮ್ಮ ಸಂಸಾರ…,ಆನಂದ ಸಾಗರಾ…” ಮೋಹನ ನಾಟಕೀಯವಾಗಿ ಹೇಳಿಯಪ್ಪದ್ದೆ ಹರಿಣಿ ಮನಸಾರೆ ನೆಗೆ ಮಾಡಿತ್ತು.

ಮೈಸೂರಿಲ್ಲಿ ಪ್ರತೀವರ್ಷವೂ ದಸರಾ ಸಂಬಂಧವಾಗಿ ಬಹುದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ಇರ್ತಲ್ದೋ? ದೇಶ, ವಿದೇಶಂದ ಲಕ್ಷಗಟ್ಲೆ ಜೆನಂಗೋ ಬತ್ತವನ್ನೇ? ಆ ವರ್ಷ ಪ್ರಮುಖ ವೇದಿಕೆಲಿ ವತ್ಸಲಾ ರಂಗರಾಜನ್ ಮತ್ತೆ ಅವರ ಬಳಗದವರದ್ದೇ ಮುಖ್ಯ ಕಾರ್ಯಕ್ರಮ. ಈಗಂತೂ ಸುರಭಿಗೆ ತಲೆ ತೊರ್ಸಲೆ ಪುರುಸೊತ್ತೇ ಇಲ್ಲದ್ದಷ್ಟು ಕೆಲಸಂಗೋ. ನಾಲ್ಕು ದಿನ ಮದಲೇ ದೊಡ್ಡಾ ಪೆಟ್ಟಿಗೆ ತೆಕ್ಕೊಂಡು ಸುರಭಿ ಬೆಂಗ್ಳೂರಿಂಗೆ ಹೋತು. ಹೆರಡುವ ಮದಲೇ ಕೇಳಿತ್ತು,
“ಅಬ್ಬೇ, ಈ ಸತರ್ಿ ನೀನು ಎನ್ನೊಟ್ಟಿಂಗೆ ಬಾರದ್ದದು ಬಲದ ಕೈಯ್ಯೇ ತುಂಡಾದ ಹಾಂಗಾಯಿದಿದ. ಮುನ್ನಾಣ ದಿನ ಆದ್ರೂ ಬಂದಿಕ್ಕಿ…ಮಿನಿಯಾ…?”

“ಛೆ…,ಛೆ…ಹೆರಾಡುವಾಗ ಎಂತಕೆ ಮಗಳೆ ಹಾಂಗಿದ್ದೆಲ್ಲ ಹೇಳ್ತೆ…? ಅಪ್ಪಂಗೆ ಬಿ.ಪಿ. ಅಷ್ಟು ಹೆಚ್ಚಿಪ್ಪಾಗ ಅವರ ಒಬ್ಬನನ್ನೇ ಬಿಟ್ಟಿಕ್ಕಿ ಬರೇಕನ್ನೇ ಹೇಳ್ತ ಕಾಳಜಿ ಅಷ್ಟೇ…,ಎಂಗೊ ಎಲ್ಲಿದ್ರೂ ಎಂಗಳ ಪೂರ್ಣ ಆಶೀವರ್ಾದ ನಿನ್ನೊಟ್ಟಿಂಗೆ ಇದ್ದು ಮಗಳೇ….” ಹೇಳಿ ಹರಿಣಿ ಹೇಳಿಯಪ್ಪಗ ಸುರಭಿಗೆ ಕಣ್ಣು ತುಂಬಿ ಬಂತು. ಅಬ್ಬೆಯ ಅಪ್ಪಿ ಹಿಡ್ಕೋಂಡು ಹರಿಣಿಯ ಕಾಟನ್ ಸೀರೆಯ ಸೆರಗಿನ ಮರ್ಮರಲ್ಲಿ ರಜ್ಜ ಹೊತ್ತು ಮೋರೆ ತಿಕ್ಕಿತ್ತು(ಹಾಂಗೆ ಮಾಡ್ತದು ಅದರ ಹಳೇ ಅಭ್ಯಾಸ…ಮಗಳು ಮತ್ತೆ ಹಳೇ ಅಭ್ಯಾಸಕ್ಕೆ ಮರಳಿದ್ದು ಕಂಡು ಹರಿಣಿಗೆ ಗಂಟಲುಬ್ಬಿ ಬಂತು). ಅಬ್ಬೆ, ಅಪ್ಪನ ಕಾಲು ಹಿಡಿದಿಕ್ಕಿ ಸುರಭಿ ಹೆರಟತ್ತು. ಹರಿಣಿಗೆ ಎಂತಾರು ಪೋಕು ಮುಟ್ಟಿಯಪ್ಪಗೆಲ್ಲ ಗಂಗಮ್ಮತ್ತೆ ಹೇಳ್ತ ಒಂದು ಹೆಮ್ಮಕ್ಕೊ ಅವರ ಮನೆಗೆ ಬತ್ತು. ಅದು ಸುರಭಿಯ ಭಾರೀ ಪ್ರೀತಿಯೂ ಮಾಡ್ತು. ಸುರಭಿ ಒಬ್ಬನೇ ಹೋವುತ್ತದಕ್ಕೆ ಅದರೊಟ್ಟಿಂಗೆ ಈ ಹೆಮ್ಮಕ್ಕಳನ್ನೂ ಹರಿಣಿ ಕಳ್ಸಿಕೊಟ್ಟತ್ತು. ಕಾರ್ಯಕ್ರಮದ ದಿನವೇ ಹರಿಣಿಯೂ ಮೋಹನನೂ ಕಾರು ಮಾಡಿಯೊಂಡು ಮೈಸೂರಿಂಗೆ ಹೋಗಿ ಬತ್ತದು ಹೇಳಿ ಮಾತಾಡಿಯೋಂಡವು.

ಈಗ ಪುನಃ ಮನೆ ಖಾಲಿ…ಸುರಭಿ ಬೆಂಗ್ಳೂರಿಂಗೆ ಹೋಯಿದನ್ನೇ? ಮೋಹನಂಗೆ ಬೇಕಾಗಿ ಹರಿಣಿ ಮಗಳೊಟ್ಟಿಂಗೆ ಹೋಗದ್ದೆ ಕೂದ್ದದಲ್ದೋ? ಅಂದರೆ ಸುರಭಿ ಹೋದ ಮರುದಿನವೇ ಮೋಹನಂಗೂ ಬೆಂಗ್ಳೂರಿಂಗೆ ಅನಿರೀಕ್ಷಿತವಾಗಿ ಹೆರಡೇಕಾಗಿ ಬಂತು. ಬ್ಯಾಂಕಿಲ್ಲಿ ಒಂದು ದೊಡ್ಡಾ ಹಗರಣ ಆದ್ದದು ಬೆಣಚ್ಚಿಂಗೆ ಬಂದದು ಮೊನ್ನೆ. ಒಂದು ಗಿರಾಕಿ ಅಡವು ಮಡುಗಿದ ಲಕ್ಷಗಟ್ಲೆ ಬೆಲೆಯ ಚಿನ್ನ ನಕಲಿಯಾಡ. ಮಡುಗಿದ ಜೆನವ ಹುಡ್ಕಲೆ ಹೋದರೆ ಅಡವು ಮಡುಗಿದ ಜೆನವೂ ಜಾಮೀನಿಂಗೆ ನಿಂದ ಜೆನವೂ ಇಬ್ರೂದೆ ನಾಪತ್ತೆ. ಬ್ಯಾಂಕು ಮೇನೇಜರು ಮೋಹನ. ಹೇಂಗಾಗೇಡ ಅವಂಗೆ…? ಮಯರ್ಾದಿ ಮೂವತ್ತೆರಡೂ ಹೋವುತ್ತಾಂಗಿದ್ದ ಸಂದರ್ಭ ಅಲ್ಲದೋ ಹೇಳಿ…,ಆ ವಿಷಯಕ್ಕೆ ಸಂಬಂಧಪಟ್ಟೇ ಹೆಡ್ಡಾಪೀಸಿಲ್ಲಿ ನಾಳೆ ಮೀಟಿಂಗು. ಅಲ್ಲಿಗೇ ಅಂವ ಹೋದ್ದದು, ಎಡಿಗಾದ್ರೆ ನಾಳಂಗೆ ಇರುಳೇ ಹೆರಡ್ತೆ, ಅಲ್ಲದ್ರೆ ನಾಡ್ದು ಬತ್ತೆ ಹೇಳಿ ಮೋಹನ ಹರಿಣಿಯತ್ರೆ ಹೇಳಿಯಪ್ಪಗ ಅದಕ್ಕೆ ದುಃಖ ತಡೆಯ. ಬಿ.ಪಿ.180/100 ಇಪ್ಪ ಮೋಹನ ಹೀಂಗಿದ್ದ ಬಲ್ಲೇಲಿ ಸಿಕ್ಕಿಬಿದ್ದು ಈಗ ಅದರ ಬಿಡ್ಸಲೆ ಹೊಣೆತ್ತಾ ಇದ್ದ…,ಆರೋಗ್ಯ ಇಷ್ಟು ನಾಜೂಕು ಇಪ್ಪಾಗ ಹೀಂಗಿದ್ದ ಕೆಲಸದ ಒತ್ತಡವ ನಿಭಾಯಿಸಲೆ ಎಡಿಗೋ ಇವಂಗೆ? ಅಂದರೆ ಮಾತಾಡ್ಲೆ ಗೊಂತಿಲ್ಲೆ. ಅವನ ಜವಾಬ್ದಾರಿಯ ಅಂವ ಪೂರೈಸಲೇ ಬೇಕಲ್ದೋ? ಹಾಂಗಾಗಿ ಹರಿಣಿ ಒಂದು ರಜ್ಜವೂ ಬೇಜಾರು ತೋರ್ಸದ್ದೆ ಅವನ ಚೀಲ ತುಂಬ್ಸಿತ್ತು. ಮದ್ದು ಮಾತ್ರೆಗಳೆಲ್ಲ ಮರೆಯದ್ದೆ ಅದರಲ್ಲಿ ಹಾಕಿ ಅವನ ಕಳ್ಸಿಕೊಟ್ಟತ್ತು.

ದೊಡ್ಡಾ ಮನೇಲಿ ಒಬ್ಬನೇ ಕುದೊಂಡಿಪ್ಪಾಗ ಹರಿಣಿಗೆ ದುಃಖ ಕುಟ್ಟಿ ಕುಟ್ಟಿ ಬಂತು. ಕಾರಣ ಎಂತ ಹೇಳಿ ಅದಕ್ಕೇ ಸ್ಪಷ್ಟತೆ ಇಲ್ಲೆ. ಅಂದರೆ ಇಂದು ಗೆಂಡನೋ ಮಗಳೋ ನೋಡುಗು ಹೇಳ್ತ ಹೆದರಿಕೆಯೇ ಇಲ್ಲದ್ದೆ ಕೂಗಲಕ್ಕನ್ನೇ…? ಬಿಕ್ಕಿ ಬಿಕ್ಕಿ ಕೂಗಿತ್ತು…,ಕೂಗಿ ಕೂಗಿ ಬಚ್ಚಿಯಪ್ಪಾಗ ಎರಡೂ ಕೈಯ್ಯ ಗೆಡ್ಡಕ್ಕೆ ಮಡುಗಿ ಸುಮ್ಮನೆ ಮೇಗೆ ನೋಡಿತ್ತು…,ಮತ್ತದೇ ಅಂದ್ರಾಣ ಅನುಭವ…ಮೈ ಝುಂ ಹೇಳಿತ್ತು. ವಿಷಯ ಎಂತರ ಹೇಳಿರೆ ಅದು ಕೂದೊಂಡಿಪ್ಪ ಕುಚರ್ಿಗೆ ಸರೀ ಎರುರಿಪ್ಪ ಗೋಡೆಲಿ ಮೂರ್ನಾಲ್ಕು ದೇವರ ಪಟಂಗೊ ಇದ್ದು. ಅದೆಲ್ಲದ್ರ ನೆಡೂಕೆ ನಮ್ಮ ಗುರುಗಳ ಪಟವೂ ಇದ್ದು. ಸುಮಾರು ತಿಂಗಳ ಹಿಂದೆ ಸುರಭಿ ಅಬ್ಬೆಯತ್ರೆ ಪೆರಟ್ಟು ಮಾತಾಡಿಕ್ಕಿ ಎದ್ದಿಕ್ಕಿ ಹೋದಪ್ಪಗ ಹರಿಣಿ ಸುಮಾರು ಹೊತ್ತು ಒಂಟಿಯಾಗಿ ಕೂದೊಂಡು ಕೂಗಿದ್ದಿಲ್ಲ್ಯೋ? ಅಂಬಾಗಳೂ ಅದಕ್ಕೆ ಇಂದು ಆದ ಅದೇ ಅನುಭವ ಆಗಿತ್ತಿದ್ದು.

ಉಳಿದ ಪಟಂಗಳಲ್ಲಿಪ್ಪ ದೇವರುಗಳ ದೃಷ್ಟಿ ಎಲ್ಲವೂ ಸಮಸ್ತ ಲೋಕದ ಕಡೇಂಗೆ…,ಅಂದರೆ ಗುರುಗಳ ದೃಷ್ಟಿ…? ಎದುರು ಕೂದವರ ಕಣ್ಣೀರಿನ ಕಡೇಂಗಾ..? ಹರಿಣಿಗೆ ಈ ಪ್ರಶ್ನೆ ಮತ್ತೆ ಮತ್ತೆ ಕಾಡಿತ್ತು. ಎದ್ದು ಇನ್ನೊಂದು ಕುಚರ್ಿಲಿ ಕೂದತ್ತು. ತಲೆ ಎತ್ತಿ ನೋಡೀರೆ ಅಂಬಾಗಳೂ ಗುರುಗಳು ಅದರ ಹೊಡೇಂಗೇ ನೋಡ್ತಾ ಇದ್ದವು…!? ಬಲ ಕೈಯ್ಯ ಅಭಯ ಸೂಚಕವಾಗಿಯೋ ಆಶೀವರ್ಾದ ಪೂರ್ವಕವಾಗಿಯೋ ಎತ್ತಿ ಹಿಡಿದ ನಗುಮುಖದ ಶ್ರೀಗುರುಗಳ ಪಟವ ಹರಿಣಿ ನೋಡಿಯೇ ನೋಡಿತ್ತು. ಇಷ್ಟ್ರವರೆಂಗೆ ಆರೂ ತನ್ನ ನೋಡ್ತವಿಲ್ಲೆ ಹೇಳ್ತ ಧೈರ್ಯ ಅದಕ್ಕೆ ಇದ್ದತ್ತು. ಅಂದರೆ ಈಗ…? ಪ್ರಶಾಂತ ಸಾಗರದ ಹಾಂಗಿಪ್ಪ ಅವರ ಕಣ್ಣುಗಳ ಆಳಂದ ಅನುಕಂಪದ ಅಲೆಯೊಂದು ಮೆಲ್ಲಂಗೆ ಮೇಗೆ ಬಂದ ಹಾಂಗೆ….ಅದು ನಿಧಾನಕೆ ತೇಲಿಯೋಂಡು ಹರಿಣಿಯತ್ರೆ ಬತ್ತಾಂಗೆ…ಅಂದೂ ಹರಿಣಿಗೆ ಇದೇ ಅನುಭವ ಆಗಿತ್ತಿದ್ದು. ಇಂದೂ ಅದರ ಪುರಾವರ್ತನೆ…,ಆ ಅಲೆ ಬಹು ಮೆಲ್ಲಂಗೆ ಹರಿಣಿಯ ಕಡು ಭಾರದ ಹೃದಯವ ನೇವರಸಿದ ಹಾಂಗೆ…ಮತ್ತೆ…?ಎಂತದೋ ಒಂದು ಹಗುರತೆ….ಒರತ್ತೆ ಹಾಂಗೆ ಹರುಕ್ಕೊಂಡಿತ್ತಿದ್ದ ಕಣ್ಣು ನೀರು ಇಂಗಿ ಹೋದ ಹಾಂಗೆ….ಮೈ ಇಡೀ ತುಂಬ ಹಗುರ ಹೇಳ್ತಾಂಗೆ…,ಕುಂಞಿ ಹಿಳ್ಳೆಯ ಮೈಗೆ ಹಂಸದ ಗರಿಲಿ ಬಹು ಮೆಲ್ಲಂಗೆ ನೇವರಿಸಿದ್ರೆ ಹೇಂಗಕ್ಕು…? ಅದೇ ರೀತಿಯ ಅನುಭವ ಆತು ಹರಿಣಿಗೂದೆ. ಹರಿಣಿಗೇ ಗೊಂತಾಗದ್ದ ಹಾಂಗೆ ಅದು ಅಲ್ಲೇ ಮೇಜಿನ ಮೇಗೆ ತಲೆ ಮಡುಗಿ ಕಣ್ಣು ಮುಚ್ಚಿತ್ತು. ಎಷ್ಟೋ ದಿನಂಗಳ ಮತ್ತೆ ಅದು ಅಲ್ಲಿಯೇ ಸುಖವಾಗಿ ಒರಗಿತ್ತು.

~*~*~

 

9 thoughts on “ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…                  (ಭಾಗ-6)

  1. ಧನ್ಯವಾದಂಗೊ ವಿಜಯಕ್ಕ. ನಿಂಗೊ ಹೇಳಿದ್ದರಿಂದ ಮೇಗೆ ಹೇಳುವಷ್ಟು ಎನಗೆ ತಿಳುವಳಿಕೆ ಸಾಲ. ಹಾಂಗಾದ ಕಾರಣ ನಿಂಗೊ ಹೇಳಿದ್ದದಕ್ಕೆ ಜೈ.

  2. ಹರೇರಾಮ,ಶೀಲ ಹಾಂಗೂ ಪಟ್ಟಾಜೆ ಶಿವರಾಮಣ್ಣ, ಏವ ಗಾದೆಯ ಬಗ್ಗೆ ಕೇಳಿದ್ದು?. ಒಂದು “ಅಮೃತವೂ ಹೆಚ್ಚಾದರೆ ವಿಷ ಅಕ್ಕು” ಇದರ ಹಿನ್ನೆಲೆ ನಮ್ಮ ಹೊಟ್ಟೇಲಿ ಜೀರ್ಣಿಸಿಗೊಂಬಲೆ ಎಡಿಗಾದಷ್ಟೇ ನಾವು ತಿಂಬಲಕ್ಕಷ್ಟೇ .ನವಗೆ ಅತಿ ಪ್ರೀತಿ ಇದ್ದ ಸ್ವೀಟುಳಿ ಹೆಚ್ಚಿಗೆ ತಿಂದರೆ ನಾಳೆ ದಾಕುದಾರನ ಕಾಂಬಲೆ ಹೋಯೆಕ್ಕಾಲ್ಲೋ . ಇನ್ನೊಂದು ಗಾದೆ ಕಾಂಬದು “ಉಪ್ಪುಉಂಟೊ ಉಪ್ಪಿನ ಕಲ್ಲುಂಟೋ” ಇದೇಂಗೇಳಿರೆ ನವಗೆ ಆಹಾರಲ್ಲಿ ಅತೀ ಅಗತ್ಯ ಉಪ್ಪು. ಅದೇ ಇಲ್ಲದ್ರೆ ಊಟ ಹೇಂಗಕ್ಕು?. ಇಲ್ಲಿ ಉಲ್ಲೇಖಿಸಿದ ಸಂದರ್ಭ ಅತೀ ಅಗತ್ಯದ ಮಾತೇ ಹರಿಣಿ ಬಾಯಿಂದ ಬತ್ತಿಲ್ಲೇಳಿ!. ಇದಿಷ್ಟು ಎನ ಗೊಂತಪ್ಪ ವಿಚಾರ. ಇನ್ನು ಕತೆ ಬರದ ಶೀಲ ಹೇಂಗೆ ಹೇಳ್ತ್ತೋ ಅದೇ ಹೇಳೆಕ್ಕಷ್ಟೆ.

  3. ಗುರುಗಳ ಕೃಪೆಂದ ಎಲ್ಲವುದೆ ಸರಿಯಕ್ಕು. ಎಲ್ಲೋರಿಂಗು ಒಳ್ಳೆದಕ್ಕು. ಮೋಹನ ಹೇಳಿದ ಹಾಂಗೆ “ನಮ್ಮ ಸಂಸಾರ ಆನಂದ ಸಾಗರ” ಆಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×