ಇದಾ ಇವ – ‘ದೇವಭಕ್ತ’.

ಕಳುದ ವಾರ ಅಜ್ಜಿ ಕಥೆ, ಅಲ್ಲ…, ಅಜ್ಜಿಯ ಕಥೆ ಓದಿದಿ ಅಪ್ಪೋ.
ಹಾಂಗೇ ಇಪ್ಪದು…, ಅಲ್ಲಾ., ಬೇರೊಂದು ಸಿಕ್ಕಿದ್ದು ಈಗ. ನಿಂಗಳತ್ರೆ ಹಂಚಿಗೊಳ್ಳದ್ದೆ ಮನಸ್ಸೇ ಕೇಳಿತ್ತಿಲ್ಲೆ ಇದಾ.

ಎಲ್ಲಾ ಹಳೇ ಕಥೆಗಳ ಹಾಂಗೇ ನಮ್ಮ ಈ ಕಥೆಯೂ ಸುರುವಪ್ಪದು ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ ಹೇಳಿಯೇ.
ಸಮಾಧಾನಕ್ಕೆ ಓದಿಗೊಂಡು ಹೋಗಿ.
ಒಂದಾನೊಂದು ಕಾಲಲ್ಲಿ ಒಂದಾನೊಂದು ಊರಿಲ್ಲಿ ‘ದೇವಭಕ್ತ’ ಹೇಳ್ವ ಒಬ್ಬ ಮನುಷ್ಯ ಇತ್ತಿದ್ದನಡ. ಬರೀ ಸಾಧು. ಒಳ್ಳೆತ ಆತ್ಮಾಭಿಮಾನಿ ಕೂಡ.
ಏವುದಕ್ಕೂ ಇನ್ನೊಬ್ಬನ ಓಂಗಿಯೊಂಡು ಹೋಗ. ದಿನಾ ತನ್ನ ನಿತ್ಯಾನುಷ್ಟಾನ ಜಪ, ಪೂಜೆ, ಪ್ರಾರ್ಥನೆ ತಪ್ಪದೆ ಮಾಡುಗು.
ದೇವರತ್ರೆ ದಿನಾ ಬೇಡುಗು – “ದೇವರೇ, ಎನಗೆ ಒಳ್ಳೆ ಆರೋಗ್ಯ ಕೊಡು. ಒಳ್ಳೆ ಭಾಗ್ಯ, ಐಶ್ವರ್ಯ ಕೊಡು”. ದಿನಾ ಇದೇ ರೀತಿ ದೇವತಾ ಪ್ರಾರ್ಥನೆ, ಭಕ್ತಿ, ನಂಬಿಕೆಗಳಲ್ಲಿ ಇಪ್ಪ ಇವಂಗೆ ಬೇರೆ ಕೆಲಸ ಮಾಡ್ಳೆ ಸಮಯವೂ ಇಲ್ಲೇ, ಮನಸ್ಸೂ ಇಲ್ಲೇ, ಅಗತ್ಯವೂ ಕಂಡಿದಿಲ್ಲೆ.
ಭಕ್ತನಾದ ತನ್ನ ಆ ದೇವರೇ ಸದಾ ಕಾಪಾಡುತ್ತ ಹೇಳಿ ದೃಢ ನಂಬಿಕೆ ಅವಂಗೆ.

ಇಂತಿರಲು ಒಂದಿನ ಅವನ ಎತ್ತಿನ ಗಾಡಿಲಿ ಎಲ್ಲಿಗೋ ಹೆರಟು ಹೋಗಿಯೊಂಡಿತ್ತಿದ್ದ.
ಈಗಾಣ ಕಾಲದ ಹೊಂಡಗುಳಿ ಡಾಮಾರು ಮಾರ್ಗವೂ ಇತ್ತಿಲ್ಲೆ ಅದಾ ಆಗಾಣ ಕಾಲಲ್ಲಿ. ಬರೇ ಕಲ್ಲು ಮಣ್ಣಿನ ಮಾರ್ಗ. ಸುಮಾರು ಅರ್ಧ ದಾರಿ ಕಳುದು ಹೋಗಿಯೊಂಡಿಪ್ಪಗ ಒಂದಿಕ್ಕೆ ಒಂದು ಸಂಧು ಮಾರ್ಗಲ್ಲಿ ಹೋವುತ್ತಾ ಇದ್ದಿದಾ ಗಾಡಿ ಎಬ್ಬಿಯೊಂಡು.
ಅಲ್ಲಲ್ಲಿ ಹೊಂಡಗುಳಿ. ದಿಡೀರನೆ ಮುಗಿಲು ಹಾಕಿತ್ತು, ಕತ್ತಲು ಕಪ್ಪಟೆ ಕಟ್ಟಿತ್ತು, ರಫ ರಫನೆ ಮಿಂಚಲೆ ಸುರುವಾತು. ಆಕಾಶವೇ ಮುರುದು ಬೀಳುತ್ತಾಂಗೇ ಡಬ ಡಬನೆ ಸೆಡ್ಳು (ಗುಡುಗು) ಎದೆ ಬಿರಿವಂತೆ ಸುರುವಾತು.
ಅದಾ, ಸೊಯ್ಪಿತ್ತಯ್ಯ ಮಳೆ ಏನಾರು – ಎಡೆಬಿಡದ್ದೆ, ಹನಿ ಕಡಿಯದ್ದೆ ಮೂರು ಗಂಟೆಂದಲೂ ಮೇಲು. ಮದಲೇ ಹುಡಿ ಧೂಳ ಜಾರುಕಟೆ ಮಾರ್ಗ ಅದು. ಅಲ್ಲಲ್ಲಿ ಹೊಂಡಂಗಳೂ.

ಎತ್ತಿನ ಗಾಡಿಯ ಒಂದು ಹೊಡೆ ಚಕ್ರ, ಮಾರ್ಗದ ಒಂದು ದೊಡ್ಡ ಹೊಂಡಕ್ಕೆ ಬಿದ್ದತ್ತು. ನಮ್ಮ ಜನಕ್ಕೆ ಎಂತ ಮಾಡುತ್ತದೀಗ ಹೇಳಿ ಗೊಂತಾತಿಲ್ಲೆ. ಮಂಡೆಬೆಶಿ ಸುರುವಾತು.
ಜಡಿಗುಟ್ಟಿ ಮಳಗೆ ಅಲ್ಲೇ ಕೂದೊಂಡು,“ದೇವರೇ, ಆನು ನಿನ್ನ ಪರಮ ಭಕ್ತ, ನಿನ್ನ ನಿತ್ಯ ಪ್ರಾರ್ಥನೆ ಪೂಜೆ ಭಕ್ತಿಂದ ಮಾಡುತ್ತಾ ಇದ್ದೆ. ಎನ್ನ ಈಗ ಇಲ್ಲಿಂದ ಪಾರು ಮಾಡು, ಸಹಾಯ ಮಾಡು” ಹೇಳಿ ಬೇಡಿಗೊಂಡ.
ಅಷ್ಟಪ್ಪಗ ಆ ಮಾರ್ಗಲ್ಲಾಗಿ ಒಂದು ಮನುಷ್ಯ ನಡಕ್ಕೊಂಡು ಬಪ್ಪವ ಇವನ ಕಷ್ಟವ ನೋಡಿ, ‘ಸಾಕಾಯ ಮಾಡೆಕೋ’ ಹೇಳಿ ಕೇಳಿದ.
ಅದಕ್ಕೆ ಇವ, ಈ ಗುರ್ತವೇ ಇಲ್ಲದ್ದವ ಎನಗೆಂತರ, ಎನಗೆಂತಕ್ಕೆ ಸಹಾಯ ಮಾಡುತ್ಸು. ‘ಬೇಡ, ಹೋಗು, ಎನಗೆ ಎನ್ನ ದೇವರಿದ್ದ ಸಹಾಯ ಮಾಡ್ಳೆ’ ಹೇದು ಹೇಳಿ ಬಿಟ್ಟ. ಆತಂಬಗ ಹೇಳಿ ಆ ವ್ಯಕ್ತಿ ಅವನ ದಾರಿ ಹಿಡ್ಕೊಂಡು ಮುಂದೆ ಹೋದ.

ಮಳೆ ಧಾರಾಕಾರ ಬತ್ತಾ ಇದ್ದು. ಚರಂಡಿಲಿ ನೀರು ಹೋಪಲೆ ಎಡಿಯದ್ದೆ ಮಾರ್ಗಲ್ಲಿ ಹೋಪಲೆ ಸುರುವಾತು.
ಸೊಂಟದ ವರೇಗೆ ನೀರು ಹರ್ಕೊಂಡು ಹೋಪಲೆ ಸುರುವಾತು. ರಜಾ ಹೊತ್ತಪ್ಪಗ ಆ ದಾರೀಲಿ ಮತ್ತೊಬ್ಬ ಬಂದ. ಇವನ ಅವಸ್ಥೆ ಕಂಡು ಸಾಕಾಯ ಮಾಡೆಕೋ ಕೇಳಿದ. “ಬೇಡ, ಎನ್ನ ದೇವರಿದ್ದ ಎನಗೆ ಸಹಾಯ ಮಾಡ್ಳೆ” ಹೇಳಿ ಹೇಳಿದ ಅವನತ್ರೆಯೂ ಇವ.
ಆತು ಅಂಬಗ ಹೇಳಿ ಅವನೂ ಅವನ ದಾರೀಲಿ ಮುಂದೆ ನಡದ.
ಇದಾ, ಮಳೆ ಜೋರು ಜೋರು ಸುರುವಾತು. ಗಾಳಿ – ಮಳೆ, ಮಿಂಚು – ಗುಡುಗು. ಹೊಂಡಲ್ಲಿ ಚಕ್ರದ ಹತ್ರೆ ನಿಂದು ದೇವರೇ ನೀ ಎನಗೆ ಸಹಾಯ ಮಾಡು ಹೇಳಿ ಪ್ರಾರ್ಥನೆ ಮಾಡಿಯೊಂಡ. ಧಾರಾಕಾರ ಸತತ ಮಳೆ ಬಂದುಗೊಂಡಿದ್ದರಿಂದ ಮಾರ್ಗಲ್ಲಿ ನೀರು ಎರ್ಕಿ ಇವನ ಕೊರಳಷ್ಟತ್ತರಕ್ಕೆ ತುಂಬಿತ್ತು. ಅಷ್ಟಪ್ಪಗ ಮಗುದೊಬ್ಬ ಅಲ್ಲೆ ಬಂದ. ‘ನಿನಗೆ ಸಹಾಯ ಮಾಡೆಕೋ ಗೆಳೆಯಾ’ ಹೇಳಿ ಕೇಳಿದ ಕೂಡ. ಆದರೆ ಈ ನಮ್ಮ ಜನಕ್ಕೆ ಸ್ವಾಭಿಮಾನ. ಆರು ಹೇಳಿ ಗೊಂತಿಲ್ಲದ್ದ ಇವ ಗೆಳೆಯಾ ಹೇಳಿ ಸಾಕಾಯ ಮಾಡುತ್ತದು ಎಂತ ಅಗತ್ಯ.

ಇದರೆಲ್ಲ ನಂಬಿರಾಗ ಹೇಳಿ ಭಾವಿಸಿ, ‘ಬೇಡ, ಎನ್ನ ದೇವರಿದ್ದ. ಅವ ಎನ್ನ ಕಾಪಾಡುಗು’ ಹೇಳಿ ಹೇಳಿಬಿಟ್ಟ. ಆತು ಅಂಬಗ ಹೇಳಿ ಆಚವ ಮುಂದೆ ಹೋದ.
ಮಳೆ ಜೋರಾತು. ನೀರು ಮೇಲೆ ಮೇಲೆ ಏರಿತ್ತು. ಇವ ಆ ನೀರಿಲ್ಲಿ ಮುಳುಗಿ ಸತ್ತು ಹೋದ.

ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ದೇವರತ್ರೆ ಕೇಳಿದ – “ದೇವರೇ, ಆನು ನಿನ್ನ ನಿತ್ಯ ಅತೀ ಭಕ್ತಿ ವಿನಯಂದ ಪೂಜೆ ಮಾಡ್ತಾ ಬಯಿಂದೆ. ಮಾರ್ಗ ಮಧ್ಯಲ್ಲಿ ಎನಗೆ ಸಂಕಷ್ಟ ಬಂದಿಪ್ಪಗ ರಜವೂ ಕೂಡ ಏಕೆ ಎನಗೆ ಸಹಾಯ ಮಾಡದ್ದು? ಬೇಡ, ಒಂದರಿ ನೋಡ್ಳೂ ಕೂಡ ಏಕೆ ಬಾರದ್ದು?”.
ಅಷ್ಟಪ್ಪಗ ದೇವರು ಹೇಳಿದ – “ಹೇ., ಭಕ್ತ, ಆರೇಳಿದ್ದು ಆನು ಸಹಾಯಕ್ಕೆ ಬಯಿಂದಿಲ್ಲೇದು?. ಆನು ಮೂರು ಸರ್ತಿ ಬಂದಿತ್ತೆ. ಸಹಾಯ ಮಾಡೆಕೋ ಹೇಳಿ ಕೂಡ ಕೇಳಿದ್ದೆ. ಆದರೆ ನೀನಲ್ಲದೋ ಬೇಡಲೇ ಬೇಡ ಹೇಳಿ ತಿರಸ್ಕರಿಸಿದ್ದು. ನೀನು ಸ್ವೀಕರಿಸುವ ಪ್ರಯತ್ನವನ್ನೂ ಕೂಡ ಮಾಡದ್ದೆ ಇಪ್ಪಗ ಆನು ಹೇಂಗೆ ನಿನಗೆ ಸಹಾಯ ಮಾಡುತ್ಸು?”
ಅಷ್ಟಪ್ಪಗ ಈ ದೇವಭಕ್ತಂಗೆ ಜ್ಞಾನೋದಯ ಆತು. ‘ಯಾವಾಗ ನಾವು ಪ್ರಯತ್ನವನ್ನೂ ಕೂಡ ಮಾಡದ್ದೆ ಇರುತ್ತೋ ಅಂಬಗ ದೇವರೂ ಕೂಡ ಸಹಾಯ ಮಾಡುತ್ತಾ ಇಲ್ಲೆ, ನಾವು ಪ್ರಯತ್ನ ಮಾಡಿರೆ ಮಾತ್ರವೇ ದೇವರೂ ಕೂಡ ಸಹಾಯ ಮಾಡುತ್ತಾ’ ಹೇಳಿ.

ಒಪ್ಪ :
ಉದ್ಯಮಂ ಸಾಹಸಂ ಧೈರ್ಯಂ ಬುದ್ಧಿಃ ಶಕ್ತಿಃ ಪರಾಕ್ರಮಃ ।
ಷಡೇತೇ ಯತ್ರ ವರ್ತಂತೆ ತತ್ರ ದೇವಃ ಸಾಹಾಯ್ಯಕೃತ್ ||
[ಪ್ರಯತ್ನ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮ ಇವ್ವು ಆರು ಎಲ್ಲಿ ಇರುತ್ತೋ ಅಲ್ಲಿ ದೈವ ಸಹಾಯವೂ ಇರುತ್ತು.]

(ಮೂಲ:  ಅಂತರ್ಜಾಲಂದ )

ಚೆನ್ನೈ ಬಾವ°

   

You may also like...

22 Responses

 1. ಶಾಮ ಪ್ರಸಾದ್ says:

  ಹಳೆ ಕಥೆ. ಆದರೆ ಅರ್ಥ ಒಳ್ಲೆದಿದ್ದು. ಧನ್ಯವಾದಂಗೊ ಭಾವಯ್ಯ.

  • ಓದಿ ಒಪ್ಪ ಕೊಟ್ಟದಕ್ಕೆ ಧನ್ಯವಾದ ಚೆನ್ನೈ ಶಾಮಣ್ಣ. ನಮ್ಮ ಬೈಲಿಂಗೆ ನಿಂಗಳ ಶುದ್ದಿ ಏವಾಗ ಬಕ್ಕು ಹೇಳಿ ಕೇಳ್ತವು ಗುರಿಕ್ಕಾರ್ರು. ಹಾಂಗೇ ಒಂದು ನಿಂಗಳ ಚಂದದ ಮೋರೆ ಕಾಂಬ ಹಾಂಗೆ ಪಟವೂ ಹಾಕಿಕ್ಕಿ ಶಾಮಣ್ಣ.

 2. SKGKB says:

  ಮನುಷ್ಯ ರೂಪಲ್ಲಿ ಬಂದು ಸಹಾಯ ಮಾಡುತ್ತವಕ್ಕೆ ದೈವಾಂಶ ಇದ್ದು….ಲಾಯ್ಕ ಆಯಿದು.

 3. ಪ್ರಸಾದ್ says:

  ಚೆನೈ ಭಾವಯ್ಯನ ಇನ್ನು ಚೆನೈ ಅಜ್ಜ ಹೇಳಿ ಹೇಳೆಕಾವುತ್ತೋ ಹೇಂಗೆ………ಹೆ ಹೆ ಹೆ …..ಕೋಪಮಾಡೆಡಿ ಆತೋ ಕತೆ ಹೇಳ್ತ ಚೆನೈ ಅಜ್ಜಯ್ಯ………………ಕತೆ ಪಷ್ಟಾಯಿದು.

  • ಚೆನ್ನೈ ಭಾವ says:

   ಏ ಇದಾ .., ಎನ ಇಪ್ಪತ್ತೊಂದು ಕಳುದು ದಣಿಯ ವರ್ಷ ಕಳುದ್ದಿಲ್ಲೆ ಆತೋ. ಎಪ್ಪತ್ತೊಂದು ಹೇಳಿ ಗ್ರೇಶೋದು ಬೇಡ ಹಾಂ.

   ಕತೆ ಪಷ್ಟಾಯಿದು ಹೇಳಿದ್ದಕ್ಕೆ ಧನ್ಯವಾದ ಇದ್ದು ಆತೋ.

   • ಪ್ರಸಾದ್ says:

    ಏ ಭಾವಾ (ಇಪ್ಪತ್ತೊಂದು ಕಳದು ದಣಿಯ ವರ್ಶ ಕಳುದ್ದಿಲ್ಲೆ) ಈ ಇಪ್ಪತ್ತೊಂದರ ಎಷ್ಟರಿಂದ ಕಳದ್ದದು ಗೊಂತಾಯಿದಿಲ್ಲೆನ್ನೆ………ಅಲ್ಲ, ನಿಂಗಳ ಅಜ್ಜ ಮಾಡುಲೆ ಕೇಳಿದ್ದು ಅಲ್ಲ ಆತೋ….

 4. ಒಂದು ವೇಳೆ ದೇವರು ಬಂದಿದ್ದರೆ, “ನೀನು ಎನ್ನ ದೇವರಲ್ಲ, ಆನು ಪೂಜೆ ಮಾಡುದು ಬೇರೆ ದೇವರ ನೀನು ಹೋಗು” ಹೇಳ್ತಿತ್ತನೋ ಏನೋ?

 5. ಶ್ಯಾಮಣ್ಣ says:

  ಆದರೆ ಆ ಗಾಡಿಯ ಎತ್ತುಗೊಕ್ಕೆ ಎಂತಾತು ಭಾವ?… ಪಾಪ ಅಲ್ಲದಾ?

  • ಚೆನ್ನೈ ಭಾವ says:

   ಅದರ ಇದಾ ಶ್ಯಾಮಣ್ಣ, ಮಳೆ ಬಿಟ್ಟ ಮತ್ತೆ ಆ ಪ್ರಸಾದ ಗಾಡಿಂದ ಬಿಡುಸಿ ಕೊಂಡೋಗ್ಯೊಂಡು ಇತ್ತ. ದಾರಿಲಿ ಅಡ್ಕತ್ತಿಮಾರು ಮಾವ ಕಂಡು ನಿನಗೆ ಅದರ ಮೀಶಲೂ ಅರಡಿಯ ಮೇಪಲೂ ಅರಡಿಯ ಹೇಳಿದ್ದಕ್ಕೆ ನಮ್ಮ ಗುರುಗಳ ಗೋಶಾಲೆಲಿ ಬಿಟ್ಟಿಕ್ಕಿ ಬಂದ್ಸು . ಈಗ ಏನಾರು ಹೇಳಿಗೊಂಡು ನೆಗೆ ಮಾಡ್ತಾ ಇದ್ದ ಕಂಡತ್ತೋ.

   • ಶ್ಯಾಮಣ್ಣ says:

    ನೀರು ಮೇಲೆ ಮೇಲೆ ಏರಿ, ನೀರಿಲಿ ಮುಳುಗಿ ದೇವಭಕ್ತ ಸಾಯ್ತಡ… ಅಂಬಗ ಎತ್ತುಗೊ ಮಳೆ ಬಿಡುವನ್ನಾರ ಒಳುದ್ದು ಹೇಂಗೆ?:(

    • ಚೆನ್ನೈ ಭಾವ says:

     ಏ ಶ್ಯಾಮಣ್ಣ , ಹಾಂಗಿರ್ತ ಲಾಜಿಕ್ ಎಲ್ಲಾ ಕತೆಲಿ ವಿಮರ್ಶೆ ಮಾಡ್ಳಾಗ ಆತೋ. ಇದು ದೇವಭಕ್ತನ ಆಧರಿಸಿ ಅವನ ಸ್ವಾಭಿಮಾನ ದೈವ ನಂಬಿಕೆ ಕೇಂದ್ರೀಕರಿಸಿ ಕೊನೆ ಒಪ್ಪಕ್ಕೆ ಮಹತ್ವ ಕೊಟ್ಟು ತಯಾರಾದ ಕತೆ. ದೇವಭಕ್ತ ಚಕ್ರ ಹುಗುದ ಹೊಂಡಲ್ಲಿ ನಿಂದುಗೊಂಡಿದ್ದದು. ಗಾಡಿಯ ಒಂದು ಹೊಡೆ ಚಕ್ರ ಹೊಂಡಕ್ಕೆ ಬಿದ್ದದು. (ಎಷ್ಟು ದೊಡ್ಡ ಹೊಂಡ ಹೇಳಿ ಕೇಳ್ಳಾಗ!) ಎತ್ತುಗೊಕ್ಕೆ ಎಂತೂ ಆಯ್ದಿಲ್ಲೆ. ಆತನ್ನೇ. ಎತ್ತುಗೋ ಮುಂಗಿದ್ದಿಲ್ಲೆ. ಇದರೆಲ್ಲ ಚಿತ್ರ ತೆಗದು, ಸಿನೇಮಾ ತೆಗದು ತೋರ್ಸಲೇಡಿಯ ಎನಗೆ. ಆದಕ್ಕೆ ನಿಂಗಳೇ ಆಯೆಕ್ಕಷ್ಟೇ ಶ್ಯಾಮಣ್ಣ.

     • ಶ್ಯಾಮಣ್ಣ says:

      ನಿಂಗ ಹೇಳುದು ಸರಿ… ಕತೆಲಿ ಲಾಜಿಕ್ ಇರ್ತಿಲ್ಲೆ… ಆದರೂ ಎನಗೆ ಸಂಶಯ ಎಂತ ಹೇಳಿರೆ ಅಷ್ಟು ಮಳೆ ಬಪ್ಪಗ ಎತ್ತುಗೊ ಮುಂಗಿದ್ದಿಲ್ಲೆ ಹೇಳಿರೆ ನಂಬುದು ಹೇಂಗಪ್ಪಾ?

     • ಪ್ರಸಾದ್ says:

      ಏ ಶಾಮಣ್ಣಾ ಇದಾ ನಮ್ಮ ಚೆನ್ನೈ ಭಾವಯ್ಯ ಆ ಎತ್ತುಗಳ ಕಳುದ ಬೇಸಗೆಲಿ ಸಮ್ಮರ್ ಕೇಂಪಿಂಗೆ ಕಳುಸಿ ಮೀಸುಲೆ(ಈಜುಲೆ ) ಕಲುಶಿತ್ತಿದ್ದವಡ………..

     • ಚೆನ್ನೈ ಭಾವ says:

      ಅದಪ್ಪು. ಬಪ್ಪ ಬೇಸಗೆಲಿ ಪ್ರಸಾದನ ಸಮ್ಮರ್ ಕೇಂಪಿಂಗೆ ಕಳ್ಸಿ ಎತ್ತುಗಳ ಮೇಪುತ್ತೇಂಗೇದು ಟ್ರೈನಿಂಗ್ ಕೊಡ್ಳೆ ಇದ್ದು ಹೇಳಿ ಗುರುಗಳು ನೆಗೆಗಾರಣ್ಣನತ್ರೆ ಹೇಳಿದ್ದವಡಪ್ಪ!!

     • ಪ್ರಸಾದ್ says:

      ಚೆ,,,, ಮಳೆಗಾಲಲ್ಲಿಯೇ ನಮ್ಮ ಭಾವಯ್ಯನ ಬಯಲು ಅರ್ಧ ಕಾಲಿ ಕಾಣ್ತು ಬೇಸಗೆಲಿ ಹೇಂಗಪ್ಪಾ.. ಎತ್ತುಗೊ ಬಿಟ್ರೆ ಯಾರದ್ದಾರು ತೋಟಕ್ಕೆ ಹೋಗಿ ಉಪದ್ರ ಕೊಡುಗಷ್ಟೇ ಅಲ್ಲದೋ……

 6. ತೆಕ್ಕುಂಜ ಕುಮಾರ ಮಾವ° says:

  { ಇಪ್ಪತ್ತೊಂದು ಕಳುದು ದಣಿಯ ವರ್ಷ ..} ಹೇಳಿರೆ – ಇಪ್ಪತೊಂದರಿಂದ ಎಷ್ಟು ಕಳೆಯೆಕ್ಕು..? ಭಾವ…

 7. venuperva says:

  ಒಳ್ಳೆದಾಯಿದು ಬಾವಯ್ಯ…. ಕನ್ನಡ type ಮಾಡಿ ಅಷ್ಟು ಅಭ್ಯಾಸ ಇಲ್ಲೆ…

  • ಚೆನ್ನೈ ಭಾವ says:

   ಹೋ.. ಪೆರ್ವದವರು… ಬನ್ನಿ ಹೇಳಿತ್ತಿದಾ ಗುರಿಕ್ಕಾರ್ರ ಪರವಾಗಿ.

   ಧನ್ಯವಾದ ವೇಣು ಅಣ್ಣಾ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *