Oppanna.com

ಕಳ್ಳ ಮಾಣಿ

ಬರದೋರು :   ಗೋಪಾಲಣ್ಣ    on   27/02/2011    16 ಒಪ್ಪಂಗೊ

ಗೋಪಾಲಣ್ಣ

ಶಾಂತಕ್ಕಂಗೆ ಉಂಡಾತು, ಪಾತ್ರೆ ತೊಳೆದಾತು.
ಹೆರ ಬೆಶಿಲೋ ಬೆಶಿಲು. ರಜಾ ಕಣ್ಣು ಅಡ್ಡ ಆವುತ್ತೊ ಏನೊ ಹೇಳಿ ನೋಡುಲೆ ಮನುಗಿತ್ತು. ಆದರೆ ಮನಸ್ಸಿನ ಎಂತದೊ ಬೇನೆ ಹಿಂಡುತ್ತು – ಒರಕ್ಕು ಬತ್ತಿಲ್ಲೆ.

ತಟಕ್ಕನೆ ಎದ್ದು ಮನೆಗೆ ಬೀಗ ಹಾಕಿ, ಬೆಶಿಲಿಲಿ ಹೆರಟತ್ತು.
ತೋಟದ ತಂಪು ಅದರ ಮನಸ್ಸಿನ ತಂಪು ಮಾಡಿದ್ದಿಲ್ಲೆ. ತೋಟಲ್ಲಿ ಆರೂ ಇಲ್ಲೆ. ಆಚೆ ಕಟ್ಟಪ್ಪುಣಿಲೇ ನೆಡದತ್ತು.
ಅದರ ನೆರೆಕರೆಲಿ ಅದರ ಸಣ್ಣಮಾವನೋರು, ಸುಬ್ಬಣ್ಣಜ್ಜ ಇದ್ದವು. ಶಾಂತಕ್ಕನ ಗೆಂಡನ ಖಾಸ ಅಪ್ಪಚ್ಚಿ ಅವು.

ಅಲ್ಲೇ ಸುಬ್ಬಣ್ಣಜ್ಜನ ಮನೆ, ಆ ತೋಡಿನ ಆಚೆ ಹೊಡೆಲಿ. ಅಡಕ್ಕೆ ಮರದ ಸಂಕ ದಾಂಟಿ, ಅವರ ಜಾಲಿಂಗೆ ಎತ್ತಿ ಅಪ್ಪಗ ಶಾಂತಕ್ಕನ ಕಣ್ಣಿಲಿ ನೀರು ಹರಿವಲೆ ಸುರು ಆತು.
ಹೆರ ಜೆಗಲಿಲಿ ಸುಬ್ಬಣ್ಣಜ್ಜ ಬೆಂಚು ಹಾಕಿ ಮನಿಗಿದ್ದವು. ಶಾಂತಕ್ಕನ ನೋಡಿ-“ಎಂತ ಶಾಂತ,ಈ ಬೆಶಿಲಿಲೆ ಬಂದೆ?” ಹೇಳಿ ಕೇಳಿದವು.

ಶಾಂತಕ್ಕ ಅವರ ಬೆಂಚಿನ ಹತ್ತರೆ ಗೋಡೆಗೆ ಸಾಂಚಿ ಕೂದತ್ತು – ಮಾತಾಡುಲೆ ಎಡಿಯದ್ದೆ ಕಣ್ಣು ಮೂಗು ಉದ್ದುತ್ತಾ ಇದ್ದು.
ಎಂತಾತು?ಮಾಣಿ ಹುಶಾರಿದ್ದ ಅನ್ನೆ?

ಹೂ.ಮ್…

ಶಾಲೆಗೆ ಹೋಯಿದನೊ?

ಹೂ..ಮ್..

ಕೂಗುತ್ತೆಂತಗೆ? ಎನಗೆ ಒಂದೂ ಅರಡಿತ್ತಿಲ್ಲೆನ್ನೆ?

ಅಷ್ಟು ಹೊತ್ತಿಂಗೆ ಒಳಂದ ಸುಬ್ಬಣ್ಣಜ್ಜನ ಹೆಂಡತಿ ಸಂಕಮ್ಮಜ್ಜಿ ಹೆರ ಬಂದವು- “ಎಂತ ಶಾಂತ,ಎಂತಾತು? ಹೀಂಗೆ ಕೂಗಿರೆ ಮಾಡುದೆಂತ?ಹೋದವ ಹೋದ, ದೇವರು ಒಬ್ಬ ಮಾಣಿಯ ಕೊಟ್ಟಿದ ಅನ್ನೆ?ಮಾಣಿಯ ಮೋರೆ ಆದರೂ ನೋಡಿ ಸಮಾಧಾನ ಮಾಡೆಕ್ಕನ್ನೆ?

ಶಾಂತಕ್ಕನ ಗೆಂಡ ಕಳೆದ ವರ್ಷ ಬೈಕು ಅವಘಡಲ್ಲಿ ಈ ಲೋಕವನ್ನೆ ಬಿಟ್ಟು  ಹೋಯಿದ.
ವರ್ಷಾಂತ ಕಳುದ್ದಿಲ್ಲೆ. ಅದಕ್ಕೆ ಒಬ್ಬನೇ ಮಾಣಿ. ಹೆಸರು ಸುಧೀರ. ಐದನೇ ಕ್ಲಾಸು ಹತ್ತರಾಣ ಶಾಲೆಲಿ ಕಲಿತ್ತಾ ಇದ್ದ. ಭಾರೀ ಚೆಂದದ, ಚುರುಕಿನ ಮಾಣಿ.
ಶಾಂತಕ್ಕಂಗೆ ಅಪ್ಪನ ಮನೆಯ ಬಲ ಇಲ್ಲೆ. ಅಪ್ಪ-ಅಮ್ಮ ಇಲ್ಲೆ. ಅಣ್ಣಂದಿರು ಎಲ್ಲೆಲ್ಲೋ ಇದ್ದವು. ಗೆಂಡನ ಪಾಲಿಂಗೆ ಬಂದ ಆಸ್ತಿ ಇದ್ದು. ಅದರ ನೋಡಿಕೊಂಡಿತ್ತು.
ಇಬ್ಬರ ಜೀವನಕ್ಕೆ ತೊಂದರೆ ಇಲ್ಲೆ. ಆದರೆ ಹೆಮ್ಮಕ್ಕೊಗೆ ಅತ್ಯಂತ ಅಮೂಲ್ಯವಾದ ಸೌಭಾಗ್ಯ ಇಲ್ಲದ್ದು ಶಾಂತಕ್ಕನ ಮನಸ್ಸಿನ ಹಿಂಡಿ ಹೊಡಿ ಮಾಡುತ್ತಾ ಇದ್ದು – ಆದರೆ ಎಂತ ಮಾಡುದು?
ಸಂಕಮ್ಮಜ್ಜಿ ಹೇಳಿದ್ದು ಈ ವಿಷಯವನ್ನೇ.

ಸಂಕಮ್ಮಜ್ಜಿಯ ಮಾತು ಕೇಳಿ ಶಾಂತಕ್ಕನ ದುಃಖ ಹೆಚ್ಚಾತು,ರಜಾ ಹೊತ್ತು ಎಲ್ಲರೂ ಸುಮ್ಮನೆ ಕೂದವು.

ಶಾಂತಕ್ಕನೇ ಮಾತಾಡಿತ್ತು-“ಎಂತ ಹೇಳುದು ಅತ್ತೆ? ಹೋದವು,ಎನ್ನನ್ನೂ ಕರಕ್ಕೊಂಡು ಹೋಯಿದವಿಲ್ಲೆನ್ನೆ?ಇದರ ಎಲ್ಲಾ ಕಾಣೆಕ್ಕಾತನ್ನೆ?

ಎಂತಾತು ಈಗ?

“ನಿನ್ನೆ ಎಂಗಳ ಸುಧೀರ,ಶಾಲೆಂದ ಬಂದ-ಎಂತದೊ ಹುಗ್ಗಿಸುತ್ತದು ಕಂಡೆ.ಎಂತರ ಹೇಳಿ ನೋಡಿರೆ,ಬೇರೆ ಹುಡುಗನ ಒಳ್ಳೆ ಪೆನ್ನು  ಕದ್ದು ತಯಿಂದ.ಫಾರಿನ್ನಿನ ಪೆನ್ನು ಅಡ….

ಮಕ್ಕೊ ಹಾಂಗೆಲ್ಲಾ ಮಾಡುಗು,ಬುದ್ಧಿ ಹೇಳಿದರಾತು.

ಬುದ್ಧಿ ಸುಮಾರು ಸರ್ತಿ ಹೇಳಿದ್ದೆ.ಇದು ನಾಕನೇ  ಸರ್ತಿ ಇವ ಹೀಂಗೆ ಮಾಡುದು!ಆನು ಇವಂಗೆ ಎಂತ ಕಮ್ಮಿ ಮಾಡಿದ್ದೆ? ಅವ ಕೇಳಿದ್ದರ ಎಲ್ಲಾ ಕೊಡುತ್ತೆ-ಆದರೂ ಹೀಂಗಿಪ್ಪ ದುರ್ಬುದ್ಧಿ ಎಂತಗೆ ಬಂತು?

ಅವಂಗೆ ಅಪ್ಪ ಇಲ್ಲೆ-ಬಾಕಿದ್ದ ಮಕ್ಕೊಗೆ ಅಪ್ಪಂದ್ರು ತಂದು ಕೊಟ್ಟದು ಹೇಳಿ ಕಾಂಬಾಗ ಅವಂಗೆ  ಕೇಡು ಆವುತ್ತಾಯಿಕ್ಕು.ಕೆಲವು ಮಕ್ಕೊ ಹಾಂಗೂ ಮಾಡುಗು.ನೀನು ಸಮಾಧಾನಲ್ಲಿ ಬುದ್ಧಿ ಹೇಳು.ಬೇಕಾರೆ ಆನೂ ಹೇಳುವೆ.“-ಸಂಕಮ್ಮಜ್ಜಿ ಸಮಾಧಾನ ಹೇಳಿದವು.

ಈಗ ಮನಸ್ಸಿನ ಡಾಕ್ಟರು ಇದ್ದವು-ಅವು ಬುದ್ಧಿ ಹೇಳುಗು.ಅಲ್ಲಿಗೆ ಬೇಕಾದರೆ ಹೋಪೋ“-ಹೇಳಿದವು ಸುಬ್ಬಣ್ಣಜ್ಜ.

ಚ್ಹೀ…ಚೀ..ಅದೆಲ್ಲ ಎಂತಗೆ?ಮಾಣಿಗೆ ತಲೆ ಸರಿ ಇಲ್ಲೆಯೊ?“-ಸಂಕಮ್ಮಜ್ಜಿ ವಿರೋಧಿಸಿದವು.

ನಿನಗೆ ಎಂತ ಗೊಂತು?ಮನೋರೋಗದ ಡಾಕ್ಟರ ಹತ್ತರೆ ಹೋದರೆ ತಲೆ ಸರಿ ಇಲ್ಲೆ ಹೇಳಿ ಅರ್ಥ ಅಲ್ಲ…ಹೀಂಗಿಪ್ಪದಕ್ಕೆಲ್ಲ ಅದೇ ಸರಿ

ಎಂತಾದರೂ ಅಕ್ಕು ಮಾವ.ಎಂತಾರೂ ಮಾಡಿ-ಮರ್ಯಾದೆ ತೆಗೆತ್ತ ಬುದ್ಧಿ ಇವಂಗೆ ಬಾರದ್ದರೆ ಸಾಕು“ಶಾಂತಕ್ಕ ಬೇಡಿಕೊಂಡತ್ತು.

ನೋಡುವೊ,ಅವಂಗೆ ಸರಿ ಬುದ್ಧಿ ಆನು ಕೊಡುಸುತ್ತೆ,ಚಿಂತೆ ಮಾಡೆಡ-“ಸುಬ್ಬಣ್ಣಜ್ಜ ಹೇಳಿದವು.

* * * * *

ಎರಡು ದಿನ ಕಳುದತ್ತು.
ಶಾಂತಕ್ಕ ಆದಿತ್ಯವಾರ ಮನೆಲೇ ಇದ್ದ ಮಗನ ಹತ್ತರೆ-“ಮಗಾ,ಹೋಗು ಸುಬ್ಬಣ್ಣಜ್ಜನ ಗದ್ದೆಲಿ ಮುಳ್ಳು ಸೌತೆ ಆಯಿದು.ಆರಿಂಗೂ ಕಾಣದ್ದ ಹಾಂಗೆ ತಾ” ಹೇಳಿತ್ತು.
ಸುಧೀರಂಗೆ ಆಶ್ಚರ್ಯ ಆತು.”ಅಮ್ಮಾ,ಮೊನ್ನೆ  ಪೆನ್ನು ತಂದದಕ್ಕೆ ನೀನು ಎನಗೆ ಬಡಿದ್ದೆ,ಈಗ ಹೀಂಗೆಂತ ಹೇಳುತ್ತೆ?

ಅದು ಸಾರ ಇಲ್ಲೆ.ಸುಬ್ಬಣ್ಣಜ್ಜ ನೋಡು,ಅಷ್ಟು ಮುಳ್ಳುಸೌತೆ ಆದರೂ ಒಂದಾದರೂ ನೀನು ತಿನ್ನು ಹೇಳಿ ಕೊಟ್ಟಿದವೊ? ನೀನು ಮಾತಾಡದ್ದೆ ಹೋಗಿ ತಾ,,,

ಆತಮ್ಮ...”

ಸುಧೀರ ಮಧ್ಯಾನ್ನ ಮೂರು ಗಂಟೆ ಹೊತ್ತಿಂಗೆ ಹೋಗಿ ಮುಳ್ಳು ಸೌತೆ ತಂದ.ಶಾಂತಕ್ಕ ಇರುಳು  ಸಳ್ಳಿ ಮಾಡಿತ್ತು,ಮಗಂಗೆ ಬಡಿಸಿತ್ತು – ಒಂದು ತುಂಡು ಹಾಂಗೇ ತಿಂಬಲೆ ಕೊಟ್ಟತ್ತು.

* * * * *

ಮತ್ತಾಣ ಆದಿತ್ಯವಾರ, ಮಧ್ಯಾನ್ನ ಎರಡೂವರೆಗೆ ಸುಧೀರ ಸುಬ್ಬಣ್ಣಜ್ಜನ ಗದ್ದೆಗೆ ಹೋದ.
ಎರಡು ಮುಳ್ಳು ಸೌತೆ,ಒಂದು ಚೀನಿಕಾಯನ್ನೂ ಕೊಯ್ದ.
ಅಷ್ಟಪ್ಪಾಗ ಬಿದ್ದತ್ತು ಒಂದು ಪೊಳಿ!
ಎಲ್ಲಿಂದ ಬಿದ್ದತ್ತು ಹೇಳಿ ಗೊಂತಾತಿಲ್ಲೆ!

ತಟ, ಪಟ, ತಟ, ಪಟ -ಹೇಳಿ ಮತ್ತೂ ಬಿದ್ದತ್ತು ನಾಲ್ಕು ಪೆಟ್ಟು!

ಸುಧೀರಂಗೆ ಬೋಧ ತಪ್ಪಿತ್ತು.

ಎಚ್ಚರ ಅಪ್ಪಾಗ ಅವ ಮನೆಲಿ ಇತ್ತಿದ್ದ.ಗಾಯ ರಜಾ ಆಯಿದಷ್ಟೆ.

ಕಣ್ಣು ಬಿಡುವಾಗ ಸುಬ್ಬಣ್ಣಜ್ಜನ ನೋಡಿ ಅವ ಹೆದರಿ ನಡುಗಿದ.ಉಚ್ಚು ಬತ್ತೊ ಹೇಳಿ ತೋರಿತ್ತು ಅವಂಗೆ!

ಆಳಿನ ಕಯ್ಯಿಂದ ಅವಂಗೆ ಪೊಳಿ ಕೊಡಿಸಿದ್ದವು – ಇದೇ ಅಜ್ಜ!

ಬೇನೆ ಆತೊ ಮಾಣಿ? ಇನ್ನು ಹೀಂಗೆ ಇಪ್ಪ ಬುದ್ಧಿ ಬೇಡ-ಆತೊ? ನೀನು ಉಶಾರಿ ಆಯೆಕ್ಕು- ಅಷ್ಟಕ್ಕೇ ಬೇಕಾಗಿ ಹೀಂಗೆ ಮಾಡಿದೆ,ಈ ಅಜ್ಜನ ಮೇಲೆ ಕೋಪ ಇದ್ದೊ?“-

ಸುಬ್ಬಣ್ಣಜ್ಜನ ಕಣ್ಣಿಲಿ ನೀರು ನೋಡಿ ಸುಧೀರ ಜೋರು ಕೂಗಿದ – ಒಟ್ಟಿಂಗೆ ಅವನ ಅಮ್ಮನೂ ಕೂಗಿಂಡು ಸುಬ್ಬಣ್ಣಜ್ಜನ ಕಾಲಿಂಗೆ ಬಿದ್ದತ್ತು.”ಮಾವಾ,ನಿಂಗೊ ಮಾಡಿದ್ದಕ್ಕೆ ಎನ್ನ ಒಪ್ಪಿಗೆ ಇತ್ತನ್ನೆ? ನಿಂಗೊ ಬೇಜಾರ ಮಾಡೆಡಿ.ಹೇಂಗಾದರೂ ಸರಿ,ಮಾಣಿಗೆ ಒಳ್ಳೆ ಬುದ್ಧಿ ಬಂದರೆ  ಆತು,ನಿಂಗಳೇ ಅವನ ಗುರು,ಹಿರಿಯರು ಎಲ್ಲಾ…..” ಹೇಳಿತ್ತು ಶಾಂತಕ್ಕ.
ಸಂಕಮ್ಮಜ್ಜಿಯೂ ಕೂಗಿಂಡು ಸುಧೀರನ ತಲೆಲಿ ಕೈ ಮಡುಗಿದವು.

ಸುಧೀರ ಎದ್ದು ಅಜ್ಜನ ಕಾಲಿಂಗೆ ಬಿದ್ದ.
ಕಣ್ಣ ನೀರಿಲಿ ಅವನ ದುರ್ಬುದ್ಧಿ ಎಲ್ಲಾ ತೊಳದು ಹೋತು.

* * * * *

16 thoughts on “ಕಳ್ಳ ಮಾಣಿ

  1. ಮಕ್ಕಳ ತಿದ್ದುವದು ಅತಿರೇಕಕ್ಕೆ ಹೋದರೆ ಹೇಂಗಿಕ್ಕು ಹೇಳುವುದಕ್ಕೆ ಆನು ಬರೆದ ಈ ಕತೆಗೆ ಬಂದ ಪ್ರತಿಕ್ರಿಯೆ ಎನಗೆ ತುಂಬಾ ಕುಶಿ ಆಯಿದು.ಎಲ್ಲರೂ ವಿಮರ್ಶೆ ಮಾಡಿದ್ದಕ್ಕೆ ಎನ್ನ ಕತೆ ಸಾರ್ಥಕ ಆತು ಹೇಳಿ ಎನಗೆ ತೋರುತ್ತು.
    ಕೆಲವು ವರ್ಷ ಮೊದಲು ಒಂದು ಅಮ್ಮ ಮಗ ೪೦ ಹೇಳಿ ಅಕ್ಷರಲ್ಲಿ ಬರೆದ್ದು ತಪ್ಪಿದ್ದಕ್ಕೆ ಬಡುದ್ದದರಲ್ಲಿ ಹುಡುಗನ ಜೀವವೇ ಹೋಯಿದು ಹೇಳಿ ಪೇಪರಿಲಿ ಬಯಿಂದು-ನಿಂಗೊಗೆ ನೆಂಪಿಕ್ಕು.
    ಎಂತ ಹೇಳುದು?ಕತೆಗಾರ ಸಮಾಜದ ವಿಕೃತಿಯನ್ನೂ ಬರೆಯೆಕ್ಕಾವುತ್ತು.
    ಎಲ್ಲರಿಂಗೂ ಧನ್ಯವಾದ.

  2. ಗೋಪಾಲಣ್ಣ, ನಿಂಗೊ ಕತೆ ಬರವಗ ಸಮಾಜಕ್ಕೆ ಏನಾದರೂ ಒಂದು ಸಂದೇಶ ಮಡಿಗಿ ಕತೆ ಬರೆತ್ತಿ. ಅದು ತುಂಬಾ ಕೊಶಿ ಆವುತ್ತು ಎನಗೆ!! ಈ ಕತೆಲಿಯೂ ಸುಬ್ಬಣ್ಣಜ್ಜನ ಬಾಯಿಂದ ಹೇಳ್ಸಿದ್ದಿ.[ಮನೋರೋಗದ ಡಾಕ್ಟರ ಹತ್ತರೆ ಹೋದರೆ ತಲೆ ಸರಿ ಇಲ್ಲೆ ಹೇಳಿ ಅರ್ಥ ಅಲ್ಲ…ಹೀಂಗಿಪ್ಪದಕ್ಕೆಲ್ಲ ಅದೇ ಸರಿ”]

    ಸಮಸ್ಯೆಗ ಬಂದಪ್ಪಗ ಅದರ ನಿಭಾಯಿಸುದು ಹೇಂಗೆ ಹೇಳ್ಳೆ ಹಿರಿಯೋರು ಖಂಡಿತಾ ಬೇಕು. ಅವರ ಅನುಭವಲ್ಲಿ ಬಂದದರ ಮಕ್ಕಳ ತಿದ್ದುಲೆ ಉಪಯೋಗ ಮಾಡುತ್ತವು. ಅಪ್ಪ° ಇಲ್ಲದ್ದ ಮಾಣಿ ಹೇಳಿ ಕೊಂಡಾಟ ಮಾಡಿ ಅವ° ಮಾಡಿದ್ದದು ಸರಿ ಹೇಳಿ ಸುಬ್ಬಣ್ಣಜ್ಜ ಕೂಯಿದವಿಲ್ಲೆ. ಅದಕ್ಕಿಪ್ಪ ಯೋಚನೆ ಮಾಡಿದವು ಅವಕ್ಕೆ ಅರಡಿಗಾದ ರೀತಿಲಿ.
    ಮಾಣಿ ಐದನೇ ಕ್ಲಾಸಿನವ. ಜವ್ವನಿಗ° ಅಲ್ಲ. ನಾಕು ಪೆಟ್ಟು ಬಿದ್ದಪ್ಪಗಳೇ ನಿತ್ರಾಣ ಆಗಿಕ್ಕು!!! ಅವನ ತಪ್ಪು ಅವಂಗೆ ಅಂದಾಜು ಆಗಿ ಅವ° ತಿದ್ದಿಗೊಳ್ಳೆಕ್ಕಾದ್ದದು ಮುಖ್ಯ!!

    ಯಾವ ಮಕ್ಕೊಗೆ ಆದರೂ ಅವು ಮಾಡಿದ ತಪ್ಪಿನ ಅವಕ್ಕೆ ಮನದಟ್ಟು ಮಾಡಿದರೆ ಅವು ತಿದ್ದಿಗೊಂಗು. ತಪ್ಪು ಮಾಡದ್ದೇ ಬಡುದಿದ್ದರೆ ಮಾತ್ರ ಅವರ ಮನಸ್ಸಿಲಿ ಒಳಿಗು ಶಾಶ್ವತ ಆಗಿ!!!

    ಹೀಂಗಿಪ್ಪ ಕತೆಗೋ ಬರಲಿ ಗೋಪಾಲಣ್ಣ.

  3. ಗೋಪಾಲಣ್ಣ,
    ಸರಾಗವಾಗಿ,ಕಡೆಯವರೆಗೂ ಆಸಕ್ತಿಯ ಒಳುಶಿಗೊ೦ಡು,ಓದುಸುತ್ತ ಕತೆ.ಪೆಟ್ಟು ಬಿದ್ದದು ರಜಾ ಹೆಚ್ಚಾದರೂ ‘ಪೆಟ್ಟಿನ ಹೆದರಿಕೆ’ಯ ನುಡಿಗಟ್ತಿನ ನೆನಪ್ಪುಸಿತ್ತು.

  4. ಮನೋವೈಜ್ಞಾನಿಕ ತಳಹದಿಲಿ ಬರದ, ಓದುವವನ ಆತ್ಮ ವಿಮರ್ಶಗೆ ಬಿಟ್ಟ ಕಥೆ.

    ಮನೇಲಿ ಇಪ್ಪ ಹಿರಿಯೋರ ಮಾದರಿಯಾಗಿ(role model ) ತೆಕ್ಕೊಮ್ಬದು ಈ ಕಥೇಲಿ ಸರಿಯಾಗಿ ಗೊಂಥಾವುತ್ತು.

    ಅಪ್ಪ ಅಮ್ಮನ್ದ್ರು ಕಥೆ ಓದಿ ಅವರವರ ವ್ಯಕ್ಥಿಥ್ವವ ಸಿಂಹಾವಲೋಕನ ಮಾಡಿಗೊಲೆಕ್ಕು(.ಉದಾ : ಫೋನ್ ಬಪ್ಪಗ ”ಆನು ಇಲ್ಲೆ ಹೇಳಿ ಹೇಳು ಮಗ” ಹೇಳುವದು ಲೊಟ್ಟೆ ಹೆಳುಲೆ ಅಭ್ಯಾಸ ಮಾಡಿಕೊಡುದು )
    ಕದ್ದು ತಪ್ಪಲೆ ಹೇಳುವ ಅಮ್ಮಂಗೆ ಆನು ತಪ್ಪು ಮಾಡ್ತಾ ಇದ್ದೆ ಹೇಳಿ ಹೇಳುವ ಪರಿವೆಯೇ ಇಲ್ಲೆ !!( ignorance ) ಇದಕ್ಕೆ ಕಾರಣ ಎಂಥ? ಗೋಪಾಲಣ್ಣ ಹೇಳಿದ್ದವಿಲ್ಲೇ. ಆದರೂ ನಾವು ಅಂದಾಜಿ ಮಾಡುಲಕ್ಕು– ಅದಕ್ಕೆ ವಿದ್ಧ್ಯಾಭ್ಯಾಸ ಇತ್ತಿಲ್ಲೇ ಹೇಳಿ . ವಿಧ್ಯಾಭಾಸ ಸಿಕ್ಕಿದರೂ ಎಷ್ತು ಜನ ಆಲೋಚನೆ ಮಾಡ್ತ್ಹವು ?
    ಮಾನಸಿಕ ತಜ್ಞರ ಹತ್ತರೆ ಹೊಪಲೆಒಪ್ಪದ್ದ ಸಂಕ್ಕಮ್ಮಜ್ಜಿ ನಮ್ಮ ಭಾರತ ದೇಶದ representative ಹೇಳಿ ಹೆಳುಲಕ್ಕು. ಎಂಥಕೆ ಹೇಳಿದರೆ ಭಾರತ ದೇಶಲ್ಲಿ ಮನೋವಿಜ್ನಾಕ್ಕೆ ಮಹತ್ವ ಸಿಕ್ಕಿದು ತುಮ್ಬ ನಿಧಾನಲ್ಲಿ. ಈಗ ಶಾಲೆಗಳಲ್ಲಿದೆ ಸಲಹಾಕೆನ್ದ್ರನ್ಗೋ ಇದ್ದು . ಆದ್ರೆ ಅದು ಎಸ್ತ್ತು ಕಾರ್ಯ ನಡೆಶುತ್ತು,ಹೇಳಿ ನವಗೆ ಗೊಂತಿಲ್ಲೆ.ಮಾನಸಿಕ ತಜ್ಞರ ಹತ್ತರೆ ಹೋಪದು” ಮರುಳರು ಮಾತ್ರ” ಹೇಳುವ ಧೋರಣೆ ಹೋಯೆಕ್ಕು.ಅದು ಹೊಯೆಕ್ಕರೆ ತಾಯಿ ಬೇರಿನ್ಗೆ ಸರಿಯಾದ ಪೋಶಣೆ ಸಿಕ್ಕೆಕ್ಕು. ಅದಕ್ಕಾಗಿಯೇ ಈಗ ಸರಕಾರ ವಿಧ್ಯಾಭಾಸವ ಕಡ್ಡಾಯ ಮಾಡಿ ಕುಸುಗೊಕ್ಕೆ ಉಚಿತ ಪುಸ್ಥಕಂಗಳ ಕೊಟ್ಟೂ ಪ್ರೊಥ್ಸಾಹ ಮಾದುದು. ಕೂಸು ಕಲ್ಥರೆ ಕುಟುಂಬವೇ ಕಲ್ತ ಹಾಂಗೆ ಅವುತು ಹೇಳಿ .
    ಎನ್ನದೊಂದು ಸಲಹೆ ಎಂಥ ಹೇಳಿದರೆ ಹೀನ್ಗಿಪ್ಪ ಕಥಗೊಕ್ಕೆ, ಕಥೆ ಬರವಗ ಆದಸ್ತು positive ending ಕೊಟ್ಟರೆ ಒಳ್ಳೇದು ಹೇಳಿ
    ಉದಾ;೧) ಅಜ್ಜ ಬಡಿವಲೆ ಹೇಳುವಾಗ ಒಂದು ಮಿತಿಲಿ ಬಡಿವಲೇ ಹೇಳುದು, ಅಥವ ಆಳನ್ನೇ ಬ್ಹುದ್ದಿವಂಥ ಮಾಡಿ ” ಕೋಲು ಒಂಜಿ ಪೆಟ್ಟು ಕೊರುದನಗನೆ ಪೋಲಿನ್ದು ” ಹೇಳಿ ಹೇಳುದು ಹಿಂಗೆಥರು ಮಾಡಿ ಆ ಮಾಣಿಯ ಭೋದ ತಪ್ಪದದ ಹಾಂಗೆ ಮಾಡುಲವುಥಿತ್ತು

    ೨) ಸಂಕ್ಕಂಮ್ಮ ಅಜ್ಜಿಯೇ ಯಾವದೋ ಒಂದು ರೀತಿಲಿ ಜ್ಞಾನೋದಯ ಆಗಿ ಸೋಸಗೆ ಮರು ಮದುವೆ ಮಾಡುಸುದು ಇತ್ಯಾದಿ…

    ( kleptomania ಹೇಳಿ ಯಾವದೇ ಉದ್ದೇಶ ಇಲ್ಲದ್ದೆ ಕದ್ದುಗೊಮ್ಬ ಒನ್ದು ಮಾನಸಿಕ ಖಾಯಿಲೆ
    ಇದ್ದು )

  5. ಕಳ್ಳಮಾಣಿಯ ಕತೆಯ ಬರದ ಶೈಲಿ ಲಾಯಕಾಯಿದು. ಕತೆ ಓದುಸೆಂಡು ಹೋವ್ತು. ಮಕ್ಕೊಗೆ ಒಳ್ಳೆ ಯ ಬುದ್ದಿ ಕಲುಶೆಕಾದ್ದು ಹಿರಿಯರ ಕರ್ತ್ಯವ್ಯ. ನಿಜ. ಅದಕ್ಕೆ ದಂಡ ಪ್ರಯೋಗವೇ ಬೇಕಾತಿಲ್ಲೆ ಹೇಳಿ ಎನ್ನ ಅನಿಸಿಕೆ. ಅದಕ್ಕೆ ಬೇಕಾಗಿ ಅವನ ಅಮ್ಮ ಬೇಕು ಬೇಕು ಹೇಳಿಯೇ ಅವನ ಕಳ್ಳಲೆ ಕಳುಸುತ್ತದು ರಜಾ ಕೃತಕವಾಗಿ ಕಾಣುತ್ತಾ ಇದ್ದು.

    1. ಅದು ಸುಬ್ಬಣ್ಣಜ್ಜ ಹೇಳಿಯೇ ಹಾಂಗೆ ಮಾಡಿದ್ದಡ.
      {ಮಾವಾ,ನಿಂಗೊ ಮಾಡಿದ್ದಕ್ಕೆ ಎನ್ನ ಒಪ್ಪಿಗೆ ಇತ್ತನ್ನೆ]

  6. ಮಕ್ಕಳ ಸಮಾಧಾನಲ್ಲಿ ತಿದ್ದೆಕ್ಕಾದ್ದದು ಸರಿ.
    ಕೆ.ಜಿ.ಮಾವನ ಮತ್ತೆ ಉಳಿದವರ ಅಭಿಪ್ರಾಯ ಸರಿ.
    ಎನ್ನದೂ ಅದೆ ಅಭಿಪ್ರಾಯ.
    ಆದರೆ ಸಂಕಮ್ಮಜ್ಜಿ ವಿರೋಧಿಸಿ ಸುಬ್ಬಣ್ಣಜ್ಜನ ದಾರಿ ತಪ್ಪಿಸಿಬಿಟ್ಟವು.
    ಮಾಡುತ್ತೆಂತರ?

  7. ಗೋಪಾಲಣ್ಣನ ಕಾಲ್ಪನಿಕ ಕಥೆ ಇದು ಆಯ್ಕು ಗ್ರೆಶುತ್ತೆ . ನಿಜಕ್ಕೆ ಹೀಂಗೇ ನಡೆದಿರುತ್ತಿದ್ದರೆ! …ಯಪ್ಪೋ ಸಿನೇಮಾಲ್ಲೇ ನೋಡ್ಲೆ ಎಡಿಗಷ್ಟೆ. ಉಮ್ಮಪ್ಪ ., ನಿಜ ಅಲ್ಲ ಹೇಳಿ ಹೇಳಲೂ ಎಡಿಯ. ಟಿ.ವಿ.9 ನೆಂಪಾವ್ತು.

    1. ಇದು ಕಾಲ್ಪನಿಕ,ಆರನ್ನೂ ಉದ್ದೇಶಿಸಿದ್ದಲ್ಲ.
      ನಿಜ,ಕೆಲವು ಸತ್ಯ ಘಟನೆಗೊ ಕಟ್ಟುಕತೆಗಳಿಂದಲೂ ವಿಚಿತ್ರ ಇರುತ್ತವು.[ Some facts are stranger than fiction]

  8. ಎನಗು ಕಥೆ ಬರೆಯೆಕು ಅನಿಶುತ್ತಾ ಇದ್ದು….

  9. ಖಂಡಿತವಾಗಿಯೂ ಹೀಂಗಿಪ್ಪ ತಪ್ಪುಗಳ ಬಡುದು ತಿದ್ದುಲಾವುತ್ತಿಲ್ಲೆ.ಅದರಲ್ಲಿಯೊ ಮಾಣಿಗೆ ಬೋದ ತಪ್ಪುವ ಹಾಂಗೆ ಬಡುದು ಸರಿ ಮಾಡ್ಳಕ್ಕು ಹೇಳಿ ಆರಾರೂ ಗ್ರೇಶಿರೆ ಅದು ಹೆಡ್ಡುತನ ಅಕ್ಕು ಅಲ್ಲದ್ದೆ ಮಕ್ಕೊಗೆ ಬುದ್ಧಿ ಬಾರ.ಮಕ್ಕೊ ಖಂಡಿತವಾಗಿಯೂ ಶಾಲೆಲಿ ಬೇರೆ ಮಕ್ಕಳ ಹತ್ತರಿಪ್ಪ ಸಾಮಾನುಗಳ ನೋಡಿ ಅದು ತನಗೆ ಸಿಕ್ಕದ್ದರೆ ಕದ್ದುಗೊಂಬದೇನೂ ಅಪ್ರೂಪ ಅಲ್ಲ.ಅದಕ್ಕೆ ಕೌನ್ಸೆಲ್ಲಿಂಗ್ ಅಗತ್ಯ ವಿನಃ ಪೆಟ್ಟಲ್ಲ.

    1. ಕಥೆಯ ವಸ್ತು, ಬರದ ಶೈಲಿ ಲಾಯ್ಕ ಆಯಿದು ಗೋಪಾಲ ಭಾವಾ.. ಆದರೆ ಮಾಣಿಯ ಬುದ್ಧಿ ತಿದ್ದಲೆ ದೈಹಿಕ ದಂಡನೆಯ ಮಾಡೆಕ್ಕಾತಿಲ್ಲೆ. ಸಾಮ-ದಾನ-ಭೇದ ಈ ಮೂರು ಉಪಾಯಂಗಳಲ್ಲಿ ಫಲ ಸಿಕ್ಕದ್ರೆ ಮಾಂತ್ರ ಅಲ್ಲದೊ ನಾಲ್ಕನೆಯ ‘ದಂಡ’ವ ಪ್ರಯೋಗಿಸೆಕ್ಕಾದ್ದು?

      ಕೇಜಿ ಮಾವ ಹೇಳಿದಾಂಗೆ ಕೌಂನ್ಸೆಲ್ಲಿಂಗ್ ಮಾಡ್ಸಿದ್ದರೆ ನಾಕು ಜೆನವೂ ಕಣ್ಣೀರುಹಾಕುವ ಪ್ರಮೇಯ ಬತ್ತಿತ್ತಿಲ್ಲೆ ಅಪ್ಪೊ?

  10. ಕಥೆ ಕಥೆಯಾದರೂ ನಿಜ ಜೀವನಲ್ಲಿ ಕೆಲವು ಸರ್ತಿ ಕೆಲವು ದಿಕ್ಕೇ ಹೀಂಗೂ ಅವತು. ಅದಕ್ಕೆ ಮಕ್ಕಳ ಡೈರೆಕ್ಟ್ ಎಟಾಕ್ ಮಾಡಲಾಗ ಹೇಳೋದು ಎನ್ನ ಅಭಿಪ್ರಾಯ. ಸಮಧಾನಲ್ಲಿ ಮಾತಾಡಿಸಿ ಅವರ ಮನಸ್ಸು ಬದಳುಸೇಕು. ಸರಿ ದಾರಿ ಮನವರಿಕೆ ಮಾಡಿ ಕೊಡೆಕು. ಕಷ್ಟದ ಕೆಲಸವೇ. ಆದರೆ ನವಗೆ ತಾಳ್ಮೆ ಬೇಕು. ಇಲ್ಲದ್ರೆ ಹೆರಾಣ ೪ ಜೇನ ಬುದ್ದಿ ಹೇಳ್ತಾಂಗೆ ಅಕ್ಕು.

    ಅದೇ ರೀತಿ. ಈ ಹದಿಹರಯದ ವಯಸ್ಸಿಲ್ಲಿ ಮಕ್ಕೊ ದಾರಿ ತಪ್ಪೋದು ಬೇಗ. ಅದು ಇನ್ನೂ ಆಪತ್ತಾದ್ದು. ಶಾಲಗೆ ಮುಂದೆ ಹೋಪಲೆ ವಿದ್ಯಾಭ್ಯಾಸ ಹತ್ತುತ್ತಿಲ್ಲೇ. ಕಲಿವ ಮನಸ್ಸಿಲ್ಲೇ. ಎಂತದೋ ಕಿಟ್ಟನ್ಗಿಣಿ ಮಾಡಿ ೨ ಪೈಸೆ ಸಂಪಾದುಸಲೆ ಸುರುಮಾಡುತ್ತ ಎನ್ನದೂ ಸಂಪಾದನೆ ಸುರುವಾತು ಹೇದು ಅರೆ ಜೆಂಬ ಬೇರೆ.
    ಎಲ್ಲಿಗೆ ಸಾಕಾವ್ತು ಇದು. ಹೊಸ ಹೊಸ ಮೊಬೈಲ್ ತೆಗವಲೆ , ವಾಚ್ ಬದಲುಸುವುದು, ಬೈಕ್ ತೆಗವದು. ಸಣ್ಣ ಸಣ್ಣ ಕಚ್ಚೋಡ ಮಾಡುವದು ದಿನ ಹೊವುತ್ತು. ಪ್ರಾಯ ಏರುತ್ತು. ಅಪ್ಪಂಗೆ ಅಪ್ಪಚ್ಚಿಯೋಕ್ಕೆಮಾವಂದ್ರಿಗೊಕ್ಕೆ ಕೋಪ ಕೋಪ ಬತ್ತು. ತಿರುಗಾಡಿ ನಾಯಿ. ಉಪಯೋಗಕ್ಕೆ ಇಲ್ಲದ್ದು ಹೇಳಿ ಕಂಡ ಕಂಡಲ್ಲಿ ಬೈವಲೆ ಸುರುಮಾಡುತ್ತವು. ಇದಿದ ಮಹಾ ಆಪತ್ತಾದ್ದು. ದೊಡ್ಡವು ಗ್ರೆಶುತ್ಸು ಬುದ್ಧಿ ಹೇದ್ದವಂಗೆ ಹೇಳಿ. ಆದರೆ ಪರೋಕ್ಷವಾಗಿ ಜೆವ್ವನಿಗನ ಮನಸ್ಸು ಒಳ್ಳೆ ಬೇನೆ ಆವ್ತು – ‘ಆನೆಂತ ಅಷ್ಟೂ ಪಡಪ್ಪೋಸೋ’ ಹೇದು.
    ಅವರ ಕಣ್ಣಿಂಗೆ ಸಿಕ್ಕದ್ದೇ ಅವ್ವ ಅವನದ್ದೇ ದಾರೀಲಿ ಮುಂದೆ ಹೊವ್ತ. ‘ಬೈಗಳು ತಿಂಬಲೆ ಆನೆಂತಕೆ ಕಣ್ಣಿಂಗೆ ಬೀಳೆಕು’ . ಆನು ಹೇಳೋದು ಸಮಾಧಾನ ಮಾತಿಲ್ಲಿ ಹೀಂಗಿಪ್ಪವರ ತಿದ್ದಿ ಸರಿಮಾಡೆಕೆ ವಿನಃ ದಟ್ಟಿಸಿ ಅಲ್ಲ.

  11. ಗೊಂತಿದ್ದುಕೊಂಡೊ, ಗೊಂತಿಲ್ಲದ್ದೆಯೊ ಮಕ್ಕಳ ಕೆಟ್ಟ ಕೆಲಸಕ್ಕೆ ಪ್ರೇರೇಪಣೆ ಅಥವಾ ಬೆರೆಯವರ ಕೆಟ್ಟ ಕೆಲಸಂಗಳ ಬಗ್ಗೆ ಸಮರ್ಥಿಸಿ ನಾವಾಗಲೀ ಆರೇ ಮಾತಾಡಿರೂ ಕೇಳಿದ ಎಳೆ ಮನಸ್ಸುಗೊಕ್ಕೆ ಹೀಂಗಿಪ್ಪ ಕೆಲವು ಪೋಕೆನೆಟ್ಟು ಮಾಡುವ ಬುಧ್ಧಿ ಬಪ್ಪದು. ಶುದ್ದಿ ಮನೋಜ್ಞವಾಗಿ ಪೋಣಿಸಿದ್ದಿ ಭಾವ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×