ಕಸ್ತಲೆ

ಕಸ್ತಲೆ

ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಮೊಬೈಲಿಲ್ಲಿ  ಕಳುಸಿದ ಸಣ್ಣ ಕತೆ ಇಲ್ಲಿದ್ದು. ನಿಂಗಳ ಒಪ್ಪ ಕೊಟ್ಟು ಪ್ರೋತ್ಸಾಹಿಸಿ
-ಶರ್ಮಪ್ಪಚ್ಚಿ

ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

“ಏ ಪುಟ್ಟಾ..ಆ ದೀಪ ಒಂದರಿ ಹೊತ್ಸಿ ತಾ..ಇಲ್ಲೆಲ್ಲ ಕಸ್ತಲೆ ಕಸ್ತಲೆ..ಎಂತದೂ ಕಾಣ್ತಿಲ್ಲೆ” ಜಲಜಕ್ಕ ಪುಳ್ಳಿಯ ದೆನಿಗೇಳಿದವು. ಉಹೂಂ ಮಾಣಿಯ   ಶುದ್ದಿಲ್ಲೆ.

“ಮೋಹನಾ..ನೀನೆಲ್ಲಿದ್ದೆಯೋ° ?ಇಲ್ಲಿ ಕರೆಂಟು ಹೋಗಿ ಎಂತದೂ ಕಾಣ್ತಿಲ್ಲೆ.ನೀನು ಕರೆಂಟಿಂಗೆ ಕುತ್ತಿ ಮಡುಗುವ ದೀಪಾದರೂ ಎಲ್ಲಿದ್ದೂ ಹೇಳೋ°” ಅವಕ್ಕೆ ಉತ್ತರ ಕೊಡ್ಲೆ ಅಲ್ಲಿ ಆರೂ ಇತ್ತಿದ್ದವಿಲ್ಲೆ.

ಜಲಜಕ್ಕಂಗೆ ಕೋಪ ಏವಗಳೂ ಮೂಗಿನ ಕೊಡಿಲೇ ಇಪ್ಪದು.ಈಗ ಕಸ್ತಲೆಲಿ ಎಂತದೂ ಕಾಣದ್ದಿಪ್ಪಗ ಮತ್ತೂ ಪಿಸ್ರು ಏರಿತ್ತು. “ಎಲ್ಲಿ ಹೋಯಿದಿದು ಮಾರಿ….ಮನೆಯೊಳ ಕಸ್ತಲೆ ಆದರೆ ಒಂದು ದೀಪ ಹೊತ್ಸಿ ಮಡ್ಗುಲೆ ಸಾನು ಅಪ್ಪನ ಮನೆಂದ ಹೇಳಿಕೊಟ್ಟಿದವಿಲ್ಲೆ..ಹಣೆಬಾರ ಕೆಟ್ಟದು….ಈ ದರಿದ್ರ ಎಲ್ಲಿ ಹೋಗಿ ಬಿದ್ದಿದೋ ಏನೋ..ಕುರುಡಿ..ಕಣ್ಣಿದ್ದರಲ್ಲದಾ ಕಾಂಬದು….’ಜಲಜಕ್ಕನ ಈ ಬೈಗಳೆಲ್ಲ ಅದರ ಸೊಸೆ ಮಾಲಂಗೇಳಿ ಬೇರೆ ಹೇಳೆಡನ್ನೆ!!

ಜಲಜಕ್ಕಂಗೆ ಮಾಲನ ಮದಲಿಂದಲೂ ಆಗ. ಅದರತ್ರೆ ಮಾತಾಡುವ ಕ್ರಮವೂ ಇಲ್ಲೆ. ಮೋಹನಾ..ಹೇಳಿಯೋ,ಪುಟ್ಟಾ ಹೇಳಿಯೋ ಅವು ದೆನಿಗೇಳಿದರೆ ಅದು ಸೊಸೆಯತ್ತರೇ ಹೇಳುದು ಗ್ರೇಶಿ ಅದು ಆ ಕೆಲಸ ಮಾಡೆಕೂಳಿ ಅರ್ಥ.ಮಾಲಂಗೆ ಅತ್ತೆ ಮಾತಾಡ್ತವಿಲ್ಲೇಳಿ ಮನಸಿಲ್ಲಿ ತುಂಬ ದು:ಖ ಇದ್ದರೂ ಎಷ್ಟಾದರೂ ಅವು ಹಿರಿಯರು ಹೇಳಿ ಗೌರವ. ಅದು ಏವ ಕೆಲಸ ಮಾಡೆಕ್ಕಾರೂ ಅತ್ತೆತ್ತರೆ ಕೇಳದ್ದೆ ಮಾಡ. ಸೊಸೆ ಏವ ಕೆಲಸವೂ ಮಾಡ್ತಿಲ್ಲೇಳಿ ಆಯೆಕೂಳಿ ಜಲಜಕ್ಕ ಅವಕ್ಕೆ ಎಡಿಯದ್ದ ಕೆಲಸಂಗಳನ್ನೇ ಹುಡ್ಕಿ ಹುಡ್ಕಿ ಮಾಡುಸುಗು.

“ಈಗಾಣ ಕಾಲದ ಕೂಸುಗೊಕ್ಕೆ ಅತ್ತೆ ಹೇಳಿರೆ ಏವ ಗೌರವ ವೂ ಇಲ್ಲೆ. ಎಲ್ಲ ಆನೇ ಮಾಡೆಕಷ್ಟೆ. ಎನಗೆ ಸೇರ್ಲೆ ಕೂಡ ಆರೂ ಇಲ್ಲೆ” ಳಿ ಬಂದವರ ಎದುರಂದ,ನೆರೆಕರೆಯವರ ಎದುರಂದ ಹೇಳುಗು. ಮಾಲ ಮಾಡಿದ ಏವ ಕೆಲಸವು ಅವಕ್ಕೆ ಹಿತಾಗ. ದಿನಕ್ಕೊಂದರಿಯಾದರೂ ಅದು ಕಣ್ಣೀರು ಹಾಕಿರೇ ಅವರ ಹೊಟ್ಟೆ ತಂಪಕ್ಕಷ್ಟೆ.

“ಛೇ..ಒಂದು ಗಾಳಿಲ್ಲೆ.ಮಳೆಯಿಲ್ಲೆ..ಈ ಹಾಳು ಕರೆಂಟೆಂತಕೆ ಹೋದ್ದಪ್ಪಾ..”ಪರಂಚಿಕೊಂಡೇ ಪರಡಿ ಪರಡಿ ಮೇಜಿಲ್ಲಿಪ್ಪ ಕರೆಂಟಿನ ಲೈಟು ತಂದವು. ಗ್ರಾಚಾರ!!ಅದೂದೆ ಹೊತ್ತುತ್ತಿಲ್ಲೆ.

” ಇದರ ಪ್ಲಗ್ಗಿಂಗೆ ಕುತ್ತಿ ಮಡ್ಗುಲೂ ಆನೇ ಅಯೆಕು.ಒಂದು ಕೆಲಸ ನೋಡಿ ಮಾಡ್ಲೆ ಕೂಡ ಆರಾರು ಹೇಳಿ ಕೊಡೆಕೂಳಿಯಾದರೆ….ಥತ್!!ಖರ್ಮ!!”ಅದರ ಅಲ್ಲೆ ಮಡ್ಗಿಕ್ಕಿ “ಎನ್ನ ಚಿಮಿಣಿ ದೀಪ ತತ್ತೆ. ಅದಕ್ಕೂ ಆನೇ ಎಣ್ಣೆ ಎರದು,ಅದರ ನೆಣೆ ಸರಿಮಾಡಿ ಮಡ್ಗೆಕಷ್ಟೆ..” ಹೇಳಿಂಡು ಹೋಪಗ ಕಾಲಿಂಗೆಂತೋ ತಡ್ಪಿತ್ತು. ಬೀಳುವಂದ ಮದ್ಲೆ ಆರೋ ಅವರ ಹಿಡ್ಕೊಂಡ ಕಾರಣ ಆತು.ಆರೋ ಹೇಳಿ ಅವರ ಭಾಶೆಲಿ ಬಪ್ಪ ಜೆನ ಅವರ ಸೊಸೆ ಮಾಲನೇ..”ಸಿಕ್ಕಿದ್ದರ ಪೂರ ಕಾಲಿಂಗೆ ತೊಡಂಕುವಾಂಗೆ ಮಡ್ಗಿಕ್ಕಿ ಈಗ ಹಿಡಿವಲೆ ಬತ್ತದು..ಅದರೆಡೆಲಿ ತಾಗಿತ್ತಾ ಅತ್ತೇಳಿ ಕೇಳುವ ಚಂದವೇ”

ಅಂದರೂ ಇಂದೇಕೋ ರಜ ಬೇಗ ಕಸ್ತಲೆ ಆದ್ದೇಕಪ್ಪಾಳಿ ಆತವಕ್ಕೆ. ಹೀಂಗಿದ್ದವೆಲ್ಲ ಮನೆಲಿದ್ದರೆ ನಟ್ಟಮದ್ಯಾನ ವೂ ಇರುಳಾಗದ್ದಿಕ್ಕಾ..ಳಿ ಗ್ರೇಶಿಂಡು ಪರಡಿ ಪರಡಿ ಹೋಪಗ ಮಗ° ಬಂದದು ಕಾಣದ್ದೆ ಅವಂಗೆ ಡಿಕ್ಕಿ ಹೊಡದವು.

“ಈ ಅಬ್ಬೆ ಇದೆಲ್ಲಿ ನೋಡಿ ನೆಡವದೂ?ಹಗಲೇ ಕಣ್ಣು ಕಾಣ್ತಿಲ್ಲೆಯಾ?” ಮಗ ಮೋಹನ ನ ದೆನಿ ಗುರ್ತ ಸಿಕ್ಕಿತ್ತವಕ್ಕೆ.

“ಆಗಳೇ ಕಸ್ತಲಾತು ದೀಪ ಹೊತ್ಸೀ ಆರಾರೂಳಿ ಬೊಬ್ಬೆ ಹರಿತ್ತಾಇದ್ದೆ. ಒಬ್ಬಂಗಾದರೂ ಕೇಳೆಕನ್ನೇ..ಇಲ್ಲಿಪ್ಪವೆಲ್ಲ ಚೆವುಡಿಗೊ ಹೇಳಿ ಕಾಣ್ತು..”. ಮೋಹನಂಗೆ ಆಶ್ಚರ್ಯ ಆತು.” ಇದೆಂತಬ್ಬೆ ನೀನು ಹೇಳುದು.ಈಗ ನಾಕು ಗಂಟೆ ಆತಷ್ಟೆ.ಇಷ್ಟೊಳ್ಳೆ ಬೆಣಚ್ಚಿದ್ದು.ನಿನಗೆಂತಾಯಿದು’?”

ಮಗ ಎದುರೇ ನಿಂದು ಮಾತಾಡುದೂಳಿ ಅಂದಾಜಾತವಕ್ಕೆ. ಅಂದರೂ ಎಂತದೂ ಕಾಣ್ತಿಲ್ಲೆ..ಈಗ ನಾಕು ಗಂಟೆ ಆತಷ್ಟೆಯ?ಆದಿಕ್ಕು. ಉಂಡಿಕ್ಕಿ ಮನುಗಿ ಎದ್ದಪ್ಪಗಲ್ದಾ ಕಸ್ತಲೆ ಆದ್ದದು. ಮಗ ಈಗ ತೋಟಂದ ಬಂದದಾ?

“ಎಂತಾತಬ್ಬೇ ನಿನಗೆಂತದೂ ಕಾಣ್ತಿಲ್ಲ್ಯಾ?ಎನ್ನ ಕಾಣ್ತ ನೋಡು” ಅವ° ಹೇಳುದಲ್ಲಿಗೆ ಕಣ್ಣರಳಿಸಿ ನೋಡಿರೂ ಎಂತದು ಕಂಡಿದಿಲ್ಲೆ ಅವಕ್ಕೆ.

“ಇದಾ..ಕೇಳಿತ್ತಾ..ಎನಗೆ ಚಾಯ ಮಾಡುಗ ಅಬ್ಬಗೂ ಒಟ್ಟಿಂಗೆ ಮಾಡು,ಅಬ್ಬಗೆಂತೋ ಕಣ್ಣು ಕಾಣ್ತಿಲ್ಲೆಡ.”

ಜಲಜಕ್ಕಂಗೆ ತಲಗೆ ಮರ ಬಿದ್ದಾಂಗಾತು..’ಎನ್ನ ಕಣ್ಣಿಂಗೆಂತಾತು?ಕುರುಡಿ ಹೇಳಿ ಸೊಸೆಯ ಬೈದ ಆನೇ ಕುರುಡಿಯಾದನಾ?ಇನ್ನೆನಗೆ ಎಂತದೂ ಕಾಣದಾ?ಅಯ್ಯೋ ದೇವರೇ ಇದೆಂತ ಮಾಡಿದೆ ನೀನು?’ಅವರ ಕಣ್ಣಿಂದ ನೀರು ದಿಳಿದಿಳಿ ಅರಿವಲೆ ಸುರುವಾತು….ಎನ್ನ ಕೆಲಸಂಗಳ ಮಾಡಿಕೊಡುದಾರು?ಮಾಲನ ಬೊಡಿಶಿದ್ದೆಲ್ಲ ನೆಂಪಾತು.ಅದರ ಕಣ್ಣೀರು ಹಾಕ್ಸಿದ ಕಾರಣ ಎನಗೆ ಹೀಂಗಾದ್ದು.ಅದು ಮಾಡಿದ್ದೆಂತದೂ ಎನಗೆ ಆಗಾಳಿ ಗೊಂತಿಪ್ಪಗ ಅದು ಹತ್ತರೆ ಬಕ್ಕೋ?ಅತ್ತಗೆ ಹಾಂಗಾಯೆಕು ಗ್ರೇಶುಗಷ್ಟೆ..’

“ನಿಂಗೊ ಕೂಗೆಡಿ ಅತ್ತೇ..ಈ ಚಾಯ ಕುಡೀರಿ..ಆನು ರಜ ರಜವೇ ಎರಶಿ ಕೊಡ್ತೆ.ನಾಳಂಗೆ ದೊಡ್ಡ ಕಣ್ಣಿನ ಡಾಕ್ಟರನಲ್ಲಿಗೆ ಹೋಪ..ನಿಂಗಳ ಕಣ್ಣು ಸರಿಯಪ್ಪ ವರೆಗೂ ನಿಂಗಳ ಎನ್ನ ಕಣ್ಣಿನ ಹಾಂಗೆ ನೋಡುವೆ ಅತ್ತೇ”ಜಲಜಕ್ಕನ ಕಣ್ಣೀರಿನ ಅದರ ಸೆರಗಿಲ್ಲಿ ಮೆಲ್ಲಂಗೆ ಉದ್ದಿಂಡು ಮಾಲ ಹೇಳಿಯಪ್ಪಗ ಅವಕ್ಕೆ ಮಾತಾಡ್ಲೇ ದೆನಿ ಹೆರಟಿದಿಲ್ಲೆ..ಆ ಕಸ್ತಲೆಲೂ ಸೊಸೆಯ ಕೈ ಹುಡ್ಕಿ ಅವರ ಕೈಲಿ ಹಿಡ್ಕೊಂಡು ಕಣ್ಣಿಂಗೊತ್ತಿದವು..

 

ಪ್ರಸನ್ನಾ ವಿ ಚೆಕ್ಕೆಮನೆ

ಶರ್ಮಪ್ಪಚ್ಚಿ

   

You may also like...

3 Responses

  1. ಕತೆ ಒಳ್ಳೆದಾಯಿದು ಪ್ರಸನ್ನಾ; ಆದರೂ ಅತ್ತಗೆ ಸೊಸೆಯ ಬೊಡುಶಿದ ಪಶ್ಚಾತ್ತಾಪವ ದಿಡೀರನೆ ಕೊಂಡೋಗದ್ದೆ (ಒಂದೆರಡು ಗೆರೆಯಷ್ಟು ಅನುಭವಿಸಿಕ್ಕಿ ) ರಜ್ಜ ನಿದಾನ ಮಾಡಿದ್ರೆ ಇನ್ನೂ ತೂಕ ಬತ್ತಿತೂಳಿ ಕಾಣುತ್ತು. ( ನಿಂಗಳ ಅನಿಸಿಕೆ ಹೇಳೆಕ್ಕು ಹೇಳಿದಕಾರಣ ಹೇಳಿದೆ)

  2. S.K.Gopalakrishna Bhat says:

    ಕತೆ ಒಳ್ಳೆದಿದ್ದು.ಚಿಕ್ಕಮ್ಮ ಹೇಳಿದ ಮಾತು ಸರಿ, ಸಾರ ಇಲ್ಲೇ. ಪ್ರಸನ್ನಕ್ಕಂಗೆ ಕತೆಯ ಸಂಕ್ಷೇಪ ಮಾಡಿ ಹೇಳೆಕು ಹೇಳುವ ಒತ್ತಡಲ್ಲಿ ಹಾಂಗೆ ಬಂದದಾದಿಕ್ಕು ವಿಜಯಚಿಕ್ಕಮ್ಮ..ನಿಂಗೊಗೆ ಗೊಂತಿದ್ದು,.ಕೆಲವು ಪತ್ರಿಕೆಗಳೂ ಹಾಂಗೆ, ನಾವು ದೊಡ್ಡ ಮಾಡಿ ಬರೆದರೆ ಎಲ್ಲೆಲ್ಲಿಯೋ ತುಂಡು ಮಾಡಿ ಹಾಳು ಮಾಡ್ತವು[ಇಲ್ಲಿ ಶರ್ಮಪ್ಪಚ್ಚಿ ಹಾಂಗೆ ಮಾಡಿದ್ದವಿಲ್ಲೆ..ಅವರ ದೂರಿದ್ದಲ್ಲ]..

  3. ಗೋಪಾಲ ಬೊಳುಂಬು says:

    ಕತೆ ಲಾಯಕಿತ್ತು. ಸೊಸೆಯ ಬೊಡುಶೆಂಡಿದ್ದ ಅತ್ತಗೆ ಕಡೆಂಗಾದರು ಬುದ್ದಿ ಬಂತಾನೆ. ಎಲ್ಲೋರು ಅತ್ಲಾಗಿತ್ಲಾಗಿ ಹೊಂದಾಣಿಕೆಲಿದ್ದರೆ ಜೀವನವೇ ಮಧುರ. ಅತ್ತೆಗೆಂತ ಶುಗರ್ ಎಂತಾರು ಇದ್ದತ್ತೊ ಹೇಳಿ ಅಂಬಗ !!
    ಒಪ್ಪಣ್ಣ ಬೈಲಿಂಗೆ ಕತೆ ಪದ್ಯ ನೆಗೆ ಶುದ್ದಿಗೊ ಬಂದೊಂಡಿರಲಿ. ಪ್ರಸನ್ನಕ್ಕಂಗು ಶರ್ಮಪ್ಪಚ್ಚಿಗು ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *