Oppanna.com

೨೦೦೩ ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ

ಬರದೋರು :   ಅನಿತಾ ನರೇಶ್, ಮಂಚಿ    on   16/03/2014    13 ಒಪ್ಪಂಗೊ

ಅನಿತಾ ನರೇಶ್, ಮಂಚಿ
Latest posts by ಅನಿತಾ ನರೇಶ್, ಮಂಚಿ (see all)

ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾ ಮಂಡಲ ಸಹಯೋಗಲ್ಲಿ ಅಖಿಲ ಭಾರತ ಮಟ್ಟದ ವ್ಯಾಪ್ತಿಲಿ  ಪ್ರತಿವರ್ಷ ನಡದು ಬಪ್ಪ ಕಥಾಸ್ಪರ್ಧೆಯ 2013 ನೇ ಸಾಲಿನ  ಸ್ಪರ್ಧೆಲಿ  ಪ್ರಥಮ ಬಹುಮಾನ  ಶ್ರೀಮತಿ ಅನಿತಾ ನರೇಶ್ಬರದ ದಾರಿಕತೆ ಗೆದ್ದುಕೊಂಡಿದು.
ಇವು ವಕೀಲರಾದ ರಾಮ್ ನರೇಶ್, ಮಂಚಿ ಯವರ  ಪತ್ನಿಯಾಗಿ ಗೃಹಿಣಿಯಾಗಿದ್ದರೂ  ಕನ್ನ್ಡಡದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಿಗೊಂಡಿದವು..
ಇವು ಬರದ ಬಣ್ಣದ ಕಡ್ಡಿ ಹೇಳ್ತ ಲಘು ಬರಹಗಳ  ಸಂಕಲನ ವೂ  ಒಂದು ಕಥಾಸಂಕಲನವೂ ಪ್ರಕಟ ಆಯಿದು.
ಅಂತರ್ಜಾಲಲ್ಲಿ ಮಹತಿ ಹೇಳುವ ಹೆಸರಿನ ಬ್ಲಾಗಿಲ್ಲಿಯೂ, ಒಪ್ಪಣ್ಣ ಬಯಲಿಲ್ಲಿಯೂ ಇವು ಬರೆತ್ತೊವು.
ಅಲ್ಲದ್ದೆ ಬೆಂಗಳೂರಿನ ಕಾಲೇಜೊಂದರ  ಪ ಠ್ಯಲ್ಲಿ   ಇವರ ಲಘು ಬರಹ ಸೇರ್ಪಡೆಯಾಯಿದು.
ಶ್ರೀಮತಿ, ವಿಜಯಾಸುಬ್ರಹ್ಮಣ್ಯ
ಕಾರ್ಯದರ್ಶಿ, ಕೊಡಗಿನ ಗೌರಮ್ಮ ಕಥಾಸ್ಪರ್ದೆ
~~~**~~~

ದಾರಿ

‘ಸುರೇಶಾ.. ಸುರೇಶಾ..’ ಅಮ್ಮ ಬೊಬ್ಬೆ ಹಾಕಿ ದಿನಿಗೇಳುದು ಕೇಳ್ತಾ ಇತ್ತು. ಅದಲ್ಲಿ ಹಲಸಿನ ಕಾಯಿ ಕೊರೆತ್ತಾ ಇದ್ದು ಹೇಳಿ ಕಾಣ್ತು. ಸೊಳೆ ಅಜಪ್ಪುಲೆ ಬಾ ಹೇಳಿ ಎನ್ನ ದಿನಿಗೇಳುದು ಹೇಳಿ ಎನಗೆ ಗೊಂತಿದ್ದು. ಶನಿವಾರ ಬಂದ ಕೂಡ್ಲೇ ಇವರದ್ದೊಂದು ಹಪ್ಪಳ ಹಾಕುವ ರಾಮಾಯಣ. ಅಲ್ಲಾ ಪೇಟೆಲಿ ಪೈಸೆ ಕೊಟ್ರೆ ಎಷ್ಟುದೇ ಸಿಕ್ಕುತ್ತು ಇಲ್ಲಿ ನರಕ್ಕ ಬಪ್ಪದೆಂತಕೆ ಹೇಳಿರೆ ಅರ್ಥ ಆವ್ತಿಲ್ಲೆ. ಈಗ ಅದರ ಬುಡಲ್ಲಿ ಕೂದರೆ ಎನ್ನ ಕೆಲಸ ಕೆಟ್ಟ ಹಾಂಗೆ. ಹಾಂಗಾಗಿ ಅಮ್ಮನ ಸ್ವರ  ಕೇಳಿರೂ ಕೇಳದ್ದ ಹಾಂಗೆ ಮಾಡಿ ಬ್ಯಾಗಿಂಗೆ  ಪ್ಯಾಂಟು, ಅಂಗಿ ತುಂಬ್ಸಿದೆ. ಇಪ್ಪದರಲ್ಲಿ ದೊಡ್ಡಕ್ಕೆ ಕಾಂಬ ಮ್ಯಾತ್ಸ್, ಪಿಸಿಕ್ಸ್ ಟೆಕ್ಸ್ಟ್ ಪುಸ್ತಕಗಳನ್ನು ತುರ್ಕಿಕೊಂಡೆ. ಇನ್ನೆಂತ ಬೇಕಪ್ಪದಪ್ಪಾ.. ಹೇಂಗೂ ಇಂದು ನಾಳೆ ಎರಡು ದಿನ ಅಲ್ಲಿಯೇ ಒಳಿವ ಪ್ಲಾನ್ ಎಂಗಳದ್ದು. ಹಾಂಗಾಗಿ ಹಲ್ಲು ತಿಕ್ಕುವ ಬ್ರಶ್, ಮೀವಲೆ ಬೈರಾಸು ಕೂಡಾ ಬೇಕಾವ್ತು. ಅದರ ತರೆಕ್ಕಾರೆ ಅಬ್ಬಿ ಕೊಟ್ಟಗೆಗೆ ಹೋಯೆಕ್ಕಷ್ಟೆ. ಮೆಲ್ಲಂಗೆ ಹೆರ ನಿಲ್ಕಿದೆ. ಆರನ್ನೂ ಕಂಡತ್ತಿಲ್ಲೆ. ಬೇಗ ಹೋಗಿ ಅದರ ತೆಕ್ಕೊಂಡು ಬಂದು ಬ್ಯಾಗಿನ ಒಳ ಹಾಕ್ಯೊಂಡೆ.ಹಾಸಿಗೆ ಅಡಿಲಿ ಮಡುಗಿದ ಮೊಬೈಲ್ ತೆಗದು ಜಾಗೃತೆಲಿ ಹಾಯ್ಕೊಂಡೇ. ಎಲ್ಲಾ ರೆಡಿ ಆದ ಹಾಂಗಾತು. ಮಂಚದಡಿಗೆ ಬ್ಯಾಗಿನ ತಳ್ಳಿ ಹೆರ ಬಂದೆ. ಇನ್ನು ಆಮ್ಮನ ಹತ್ರೆ ಕೇಳಿದ ಹಾಂಗೆ ಮಾಡಿ ಹೆರಡೆಕ್ಕು. ಅಮ್ಮನ ಒಪ್ಸುದು ಹೇಳಿರೆ ಅಷ್ಟೆಂತ ಸುಲಭದ ಕೆಲಸ ಅಲ್ಲ. ಆದರೆ ಈಗ ಗಂಟ್ಲು ರಜ್ಜ ಏರ್ಸಿ ಮಾತಾಡ್ಲಕ್ಕು. ಎಂತಕೆ ಹೇಳಿರೆ ಅಪ್ಪ ಈಗ ಮನೇಲಿಲ್ಲೆ ಹೇಳುವ ಧೈರ್ಯ ಎನಗೆ.

“ಅಮ್ಮಾ.. ಆನು ಇಂದು ಎನ್ನ ಫ್ರೆಂಡಿನ ಮನೆಗೆ ಹೋವ್ತೆ. ಅಲ್ಲಿ ಎಂಗ ಎಲ್ಲರೂ ಸೇರಿ ಕಂಬೈನ್ಡ್ ಸ್ಟಡಿ ಮಾಡುದು ಹೇಳಿ ನಿಘಂಟು ಮಾಡಿದ್ದೆಯ. ಇಂದು ಹೋಗಿ ನಾಳೆ ಹೊತ್ತೋಪ್ಪಗ ವಾಪಾಸ್ ಬತ್ತೆ” ಹೇಳಿ ಹೇಳಿದೆ.
ಅಷ್ಟಪ್ಪಗ ಅಮ್ಮ ರಜ್ಜ ಜೋರಿಲಿ ” ಮೊನ್ನೆಯೇ ಹೇಳಿದ್ದೆ ನಿನಗೆ ಈ ಸರ್ತಿ ಶನಿವಾರ ಹೊತ್ತೋಪ್ಪಗ ಅಜ್ಜಿ ಮನೆಗೆ ಹೋಪದು ಹೇಳಿ. ಅಜ್ಜಿಗೆ ಉಷಾರಿಲ್ಲೆ ನಿನ್ನ ನೋಡೆಕ್ಕು ಹೇಳಿ ಆಸೆಲಿ ಇದ್ದು ಹೇಳಿ ಗೊಂತಿದ್ದನ್ನೆ.. ಮತ್ತೆ ಆರಾರಲ್ಲಿ ಹೋಗಿ ಓದುಲೆಂತ ಇದ್ದು? ಅಲ್ಲಿ ಓದುದನ್ನೆ ಮನೆಲೇ ಓದು. ಎಂತ ತಲೆಗೆ ಹೊಗ್ಗುತ್ತಿಲ್ಲೆ ಹೇಳ್ತಾ ಅದು..” ಹೇಳಿ ಶುರು ಮಾಡಿತ್ತು.
“ನಿಂಗೊಗೆಂತ ಗೊಂತು ಎನಗೆಷ್ಟು ಓದುಲಿದ್ದು ಹೇಳಿ, ನಿಂಗೊಗಿಲ್ಲಿ ಕೂದುಕೊಂಡು ಹಪ್ಪಳ ಹಾಕುದೇ ದೊಡ್ದ ಕೆಲಸ. ಎನ್ನ ಬಂಗ ಎನಗೇ ಗೊಂತು. ಮತ್ತೆ ಕ್ಲಾಸಿಲಿ ಮಾರ್ಕು ಕಮ್ಮಿ ಬಂದರೆ ಬೊಬ್ಬೆ ಹೊಡದರಾತನ್ನೆ ನಿಂಗೊಗೆ..” ಹೇಳಿ ಕಿರ್ಚಿದೆ.
ಅಮ್ಮ ಅಷ್ಟಪ್ಪಗ ” ಎನಗೆ ಗೊಂತಿಲ್ಲೆ. ಅಪ್ಪನತ್ರೆ ಕೇಳಿ ಹೋಗು ಹೋಪದಾದರೆ.. ಮತ್ತೆ ಎನ್ನ ಪರಂಚುತ್ತವು ಅಪ್ಪ.. ಕಳ್ಸಿದ್ದೆಂತಕೆ ಹೇಳಿ..”
ಅಪ್ಪ ಜನ್ಮೇತಿಗೆ ಹೋಪಲೆ ಬಿಡ ಹೇಳಿ ಎನಗೆ ಗೊಂತಿದ್ದು. ಎಂತ ವಯ್ವಾಟು ಮಾಡ್ತರು ಅಮ್ಮನತ್ರೆ ಆಯೆಕ್ಕಷ್ಟೆ.. ಅದಕ್ಕೆ ಪುನಃ ಜೋರಿಲಿ ಹೇಳಿದೆ. “ಇನ್ನು ಕಾಲು ಗಂಟೆಲಿ ಆನಿಲ್ಲಿಂದ ಹೆರಡೆಕ್ಕು.. ಅಪ್ಪ ಮನೆಗೆ ಬಪ್ಪಗಳೇ ಹೊತ್ತಾವ್ತು. ಇಂದು ಬೇರೆ ತೋಟಕ್ಕೆ ಮದ್ದು ಬಿಡುವವು ಇದ್ದವು. ಇನ್ನು ಅವರ ಲೆಕ್ಕ ಎಲ್ಲಾ ಆಗಿ ಅಪ್ಪ ಮಾತಾಡ್ಲೆ ಸಿಕ್ಕುವಾಗ ಊರು ಉದಿ ಆವ್ತು. ಅಷ್ಟೆಂತ ಹೆದರಿಕೆ ನಿನಗೆ. ಆನೆಂತ ಮನೆ ಬಿಟ್ಟು ಹೋಪದಲ್ಲ. ನಾಳೆ ಬತ್ತೆನ್ನೆ ..”
“ಆದರೆ ಇಂದು ಅಜ್ಜಿಯ ನೋಡ್ಲೆ ಹೋಪಗ ನೀನಿಲ್ಲದ್ರೆ ಅಪ್ಪಂಗೆ ಕೋಪ ಬಕ್ಕು. ಎನ್ನಂದೆಡಿಯ ಅಪ್ಪನತ್ರೆ ವಾದ ಮಾಡ್ಲೆ.. ಮತ್ತೆ ನೀನೇ ಆಲೋಚನೆ ಮಾಡು. ಅಜ್ಜಿಗೆ ಅಷ್ಟು ಉಷಾರಿಲ್ಲೆ. ಅಲ್ಲಿ ದೊಡ್ಡಮ್ಮ ದೊಡ್ಡಪ್ಪ, ನಿನ್ನ ಮಾನಸಕ್ಕ ಎಲ್ಲರೂ ಇಂದು ನಾವು ಬಕ್ಕು ಹೇಳಿ ಕಾದುಕೊಂಡಿಪ್ಪಗ ಹೀಂಗೆ ಮಾಡಿರಕ್ಕ ನೀನು.. ಎಂತ ಈಗ ಇಂದು ಹೋಗದ್ದರೆ ನಿನಗೆ. ಬಪ್ಪ ವಾರ ಬತ್ತೆ ಹೇಳು. ಆನು ಅಪ್ಪನತ್ತರೆಯೂ ಹೇಳಿ ಮಡುಗುತ್ತೆ. ಆಗದಾ ಮಗ..” ಅಮ್ಮ ರಜ್ಜ ಸಣ್ಣಕ್ಕೆ ಕೇಳಿತ್ತು.
ಒಂದರಿ ಅಮ್ಮ ಹೇಳಿದಾಂಗೆ ಕೇಳುವನಾ ಹೇಳಿ ಆತು. ಆದರೆ ಫ್ರೆಂಡ್ಸ್ನ ಎದುರು ಎನ್ನ ಮರ್ಯಾದೆ ಪ್ರಶ್ನೆ. ‘ನೀನು ಬಪ್ಪಲಿಲ್ಲೆ ಬೇಕಾರೆ ಬರದು ಕೊಡ್ತೆ’ ಹೇಳಿ ನೆಗೆ ಮಾಡಿದವರೆದುರು ಆನು ತಲೆ ತಗ್ಸೆಕ್ಕಾವ್ತು. ಅದೂ ಇಂದು ತಪ್ಪಿರೆ ಆ ಚಾನ್ಸ್ ಇನ್ನು ಸಿಕ್ಕೆಕ್ಕಾರೂ ಕಷ್ಟ ಇದ್ದು.
” ನಿಂಗೊಗೆಂತ .. ಎಲ್ಲಾ ನಿಂಗ ಹೇಳಿದ ಹಾಂಗೆಯೇ ಆಯೆಕ್ಕು ಹೇಳಿ ಹಠ.. ಒಂದು  ದಿನ ಕೂಡಾ ಆನು ಹೇಳಿದಾಂಗೆ ಅಪ್ಪಲಿಲ್ಲೆ. ಎಂತ ಬೇಕಾರು ಮಾಡಿಕೊಳ್ಳಿ.. ಆನೀಗ ಹೋವ್ತೆ..” ಹೇಳಿ ರಪಕ್ಕನೆ ತುಂಬಿಸಿ ಮಡುಗಿದ ಚೀಲ ಹಿಡ್ಕೊಂಡು ಓಡುವ ಹಾಂಗೆ ಹೆರ ಬಂದೆ. ಅಮ್ಮ, ಸುರೇಶಾ.. ಸುರೇಶಾ ಹೇಳುದು ಕೇಳ್ತಾ ಇತ್ತು. ಹಿಂದೆ ತಿರುಗಿ ಅಮ್ಮನ ನೋಡ್ಲೆ ಧೈರ್ಯ ಸಾಕಾತಿಲ್ಲೆ.ಬೀಸ ಬಸ್ ಸ್ಟ್ಯಾಂಡಿನ ಕಡೆಂಗೆ ನಡದೆ.  ಈಗ ಪೂರ್ತಿ ಸ್ವಾತಂತ್ರ್ಯ ಸಿಕ್ಕಿದ ಅನುಭವ.
ಅಲ್ಲ ಆನೆಂತ ಸಣ್ಣ ಶಿಶುವಾ… ಎಲ್ಲಾ ಇವು ಹೇಳಿದ ಹಾಂಗೆ ಇರೆಕ್ಕು ಹೇಳಿರೆ. ಈಗಳುದೇ ಉದ್ಯಪ್ಪಗ ಎದ್ದು ಮಿಂದು ಜಪ ಮಾಡಿ ರಜ ಪುಸ್ತಕ ಬಿಡ್ಸು. ಮತ್ತೆ ಒಂದು ಸುತ್ತು ತೋಟಕ್ಕೆ ಹೋಗಿಬಾ, ನಿನ್ನ ಕಾಲೇಜು ಎಂತ ದೂರ ಇಲ್ಲೆ ಸೈಕಲ್ಲಿಲಿ ಹತ್ತು ನಿಮಿಷಲ್ಲಿ ಎತ್ತುತ್ತು. ಒಂಬತ್ತು ಗಂಟೆಂದ ಮತ್ತೆ ಮನೆ ಬಿಟ್ರೆ ಸಾಕು, ಹೊತ್ತೋಪ್ಪಗ ಐದಾಯೆಕ್ಕಾರೆ ಮನೆಲಿರೆಕ್ಕು. ತಿಂಡಿ ತಿಂದು ಆಡ್ಲೆ ಹೋಗಿ ಕತ್ಸಲೆ ಆಯೆಕ್ಕಾರೆ ಮನೆಗೆತ್ತೆಕ್ಕು. ಮಿಂದು ಓದ್ಲೆ ಕೂರೆಕ್ಕು. ಟಿವಿ ಎಲ್ಲಾ ನ್ಯೂಸ್ ಮಾತ್ರ ನೋಡ್ಲಿಪ್ಪದು. ಇಪ್ಪಲೆ ಮನೆಲಿ ಕಂಪ್ಯೂಟರ್ ಕೂಡಾ ಇದ್ದು. ಆದರೆ ಅದರ ನೋಡುವಾಗಲೂ ಹಿಂದಂದ ಅಪ್ಪ ಬೇತಾಳನ ಹಾಂಗೆ ಬಂದು  ನಿಂಬದು. ಅಲ್ಲಾ.. ಆನೆಂತ ಜೈಲಿಲಿಪ್ಪದಾ..?
ಹಾಂಗೇಳಿ ಎಂತಾರು ಬೇಕು  ಹೇಳಿರೆ  ತೆಗದು ಕೊಡ್ತವು, ಇಲ್ಲೆ ಹೇಳ್ತಿಲ್ಲೆ. ಆದರೆ ಅದರೊಟ್ಟಿಂಗೆ ಅವರ ಉಪದೇಶವೂ ಕೇಳೆಕ್ಕಾವ್ತು. ಅಂದು  ಮೊಬೈಲ್ ಬೇಕು ಹೇಳಿದ್ದಕ್ಕೆ ಅಪ್ಪನೇ ತಂದು ಕೊಟ್ಟದು. ಅದರಲ್ಲಿ ಫೋನ್ ಮಾಡ್ಲೂ, ಬಂದರೆ ತೆಗವಲೂ ಮತ್ತೆ ಮೆಸೇಜು ಮಾಡ್ಲೂ ಎಡಿವದು. ಎನಗೆ ಪದ್ಯ ಕೇಳುವ ಹಾಂಗಿಪ್ಪ, ವೀಡಿಯೋ ಪ್ಲೇ ಅಪ್ಪಾಂಗಿಪ್ಪ ಮೊಬೈಲ್ ಬೇಕು ಹೇಳಿರೆ  ‘ಅದೆಲ್ಲ ಇಷ್ಟು ಬೇಗ ಬೇಕು ಹೇಳಿ ಇಲ್ಲೆ. ಕಲ್ತು ನಿನ್ನ ಕಾಲ ಮೇಲೆ ನಿಂದುಕೋ.. ಮತ್ತೆ ನಿನಗೆ ಬೇಕಾದ್ದರೆ ತೆಕ್ಕ. ಎಂಗಳ ಕಾಲಲ್ಲಿ ಶಾಲೆಗೆ ಕಳ್ಸುದೇ ಭಾಗ್ಯ ಹೇಳಿ ಗ್ರೇಶಿಕೊಂಡಿತ್ತಿದ್ದೆಯಾ.. ನಿಂಗೊಗೆ ಶಾಲೆಗೆ ಹೋಪದು ಹೇಳಿರೆ ಸಸಾರ. ವಿದ್ಯೆ ಕಲಿವದರಿಂದ ಹೆಚ್ಚಿಗೆ ಬೇಡಂಗಟ್ಟೆಯೇ ತಲೆಯೊಳ’ ಹೇಳಿ ಶುರು ಆತು.  ಅಲ್ಲಾ ರಜ್ಜಾರು ಗಮ್ಮತ್ತು ಮಾಡದ್ದರೆ ಕಾಲೇಜಿಂಗೆ ಸೇರಿದ್ದೆಂತಕೆ ನೋಡುವಾ..
ಅದರಲ್ಲಿ  ಎನ್ನ ಫ್ರೆಂಡ್ ರಾಹುಲ್ ಹೇಳಿ ಇದ್ದ ಅವಂದೇ ಗಮ್ಮತ್ತಪ್ಪದು. ಅವ° ಈ ವರ್ಷ ಬೇರೆ ಊರಿಂದ ಬಂದು ಎಂಗಳ ಕಾಲೇಜಿಂಗೆ ಸೇರಿದ್ದು. ಅಬ್ಬಾ ಅವನತ್ರೆ ನೋಡೆಕ್ಕು ಎಂತೆಲ್ಲ ಇದ್ದು ಗೊಂತಿದ್ದಾ.. ಎರಡೆರಡು ಲಾಯ್ಕದ ಮೊಬೈಲ್, ಬ್ಯಾಗಿಲೊಂದು ಲ್ಯಾಪ್ಟಾಪ್, ಕಾಲೇಜಿಂಗೆ ಬಪ್ಪಲೆ ಕಾರು. ಹಾಂಗಾಗಿ  ಕ್ಲಾಸಿನ ಎಲ್ಲಾ ಮಕ್ಕಳೂ ಅವನ ಹಿಂದೆಯೇ..
ಎನಗೆ ರಜ್ಜ ಸಂಕೋಚ ಜಾಸ್ತಿ. ಶುರು ಶುರುವಿಂಗೆ ಆನಾಗಿಯೇ ಅವನತ್ರೆ ಮಾತಾಡಿಕೊಂಡು ಹೋಪ ಕ್ರಮ ಇತ್ತಿಲ್ಲೆ. ಹಾಂಗಾಗಿ ಅವ ಅಷ್ಟೆಲ್ಲ ಎನಗೆ ಕ್ಲೋಸ್ ಹೇಳಿ ಆಗಿತಿದ್ದಾ ಇಲ್ಲೆ. ಅವ ಹೇಳಿ ಅಲ್ಲ. ಕ್ಲಾಸಿಲ್ಲಿ ಆರುದೇ ಎನ್ನತ್ರೆ ಹೆಚ್ಚು ಮಾತಾಡುದು ಹೇಳಿಯೇ ಇತ್ತಿಲ್ಲೆ. ಆನಾಗಿ ಮಾತಾಡ್ಸಿರುದೇ ಅವಕ್ಕೆ ಎನ್ನತ್ರೆ ಮಾತಾಡ್ಲೆ ಬೋರ್ ಆದ ಹಾಂಗೆ ಮಾಡಿಕೊಂಡಿತ್ತಿದ್ದವು. ಈ ಸರ್ತಿ ಪರೀಕ್ಷೆಲಿ ಎನ್ನ ಬೆಂಚಿಲೇ ರಾಹುಲ್  ಇದ್ದದು. ಸುಮ್ಮನೆ ಪೆನ್ನು ಕಚ್ಚಿಕೊಂಡು ಕೂದಿತ್ತಿದ್ದ. ಎಂತದೂ ಬರದ್ದಾ ಇಲ್ಲೆ. ಎನಗೇ ಪಾಪ ಹೇಳಿ ಕಂಡು ಎನ್ನ ಆನ್ಸರ್ ಶೀಟ್ ಅವಂಗೆ ಕಾಂಬ ಹಾಂಗೆ ಮಡುಗಿದೆ. ಎಲ್ಲಾ ಪರೀಕ್ಷೆಲೂ ಎನ್ನದರ ನೋಡಿಯೇ ಬರದು ಹೇಂಗೋ ಪಾಸಾದ. ಅದಾದ ಮತ್ತೆಯೇ ಅವಂದೆ ಅವನ ಪಟ್ಲಾಮುಗಳು ಎನಗೆ ಫ್ರೆಂಡುಗ ಆದ್ದು. ಅಬ್ಬಾ ಎಷ್ಟು ಗೌಜಿ ಮಾಡ್ತವವು.
ಒಂದೊಂದರಿ ಕ್ಲಾಸ್ ತಪ್ಸಿ ಸಿನೆಮಾ ನೋಡ್ಲೂ ಹೋವ್ತವು. ಎನಗೆ ಅಷ್ಟೆಲ್ಲಾ ಧೈರ್ಯ ಇಲ್ಲೆ. ಆದರೂ ಹೊತ್ತೋಪ್ಪಗ ಅವರೊಟ್ಟಿಂಗೆ ಪಟ್ಟಾಂಗ ಹಾಕಿ ತಡ ಆದರೆ ಅಮ್ಮನತ್ರೆ ಕ್ಲಾಸ್ ಲೇಟ್ ಆತು ಹೇಳಿ ಸುಳ್ಳು ಹೇಳಿಕೊಂಡಿತ್ತಿದ್ದೆ. ಅಲ್ಲಾ ಎಂತ ಪ್ರಪಂಚ ಮುಳುಗುತ್ತಾ ರಜ್ಜ ತಡವಾಗಿ ಮನೆಗೆ ಹೋದರೆ..
ಮೊನ್ನೆ ರಾಹುಲ್‌ನ ಅಪ್ಪ ಕಾಲೇಜಿಂಗೆ ಬಂದಿತ್ತಿದ್ದವು. ಆಗ ಅವು ನಿನ್ನ ಫ್ರೆಂಡುಗ ಆರು ಹೇಳಿ ಅವನತ್ರೆ ಕೇಳಿದ್ದಕ್ಕೆ ಎನ್ನ ಕಡೆ ಕೈ ತೋರ್ಸಿದ. ಅಲ್ಲಾ ಅವಂಗೆ ಆನು ಮೊನ್ನೆ ಮೊನ್ನೆಯಷ್ಟೇ ಫ್ರೆಂಡ್ ಆದ್ದು. ಅವ ಎನ್ನನ್ನೇ ತೋರ್ಸಿದ್ದಕ್ಕೆ ಖುಶಿ ಆತೆನಗೆ. ಅವು ಹತ್ತರೆ ಬಂದು ಹೇಂಗೆ ಮಾಡಿದ್ದೆ, ಪರೀಕ್ಷೆಲಿ ಎಷ್ಟು ಪರ್ಸೆಂಟ್ ಮಾರ್ಕು ನಿನಗೆ ಹೇಳಿ ಕೇಳಿದವು. ಎನ್ನ ಮಾರ್ಕು ಯಾವಾಗಳೂ ಹೆಚ್ಚಿರ್ತು. ಕ್ಲಾಸಿಲಿದೇ ಆನು ಫಸ್ಟೊ, ಸೆಕೆಂಡೋ ಬತ್ತಾ ಇರ್ತೆ. ಅದನ್ನೇ ಹೇಳಿದೆ. ಅವು ರಾಹುಲ್‌ನ ಕಡೆಗೆ ತಿರುಗಿ ‘ಒಳ್ಳೇ ಫ್ರೆಂಡ್ ಸಿಕ್ಕಿದ್ದ ನಿನಗೆ. ಅವನ ಹಾಂಗೆ ನೀನುದೇ ಒಳ್ಳೇ ಮಾರ್ಕು ತೆಗದರೆ ಎಂಗೊಗೆಲ್ಲಾ ಎಷ್ಟು ಖುಶಿ ಆವ್ತು ಗೊಂತಿದ್ದಾ’ ಹೇಳಿ ಹೇಳಿದವು. ಅವ ಲಾಯ್ಕಲ್ಲಿ ತಲೆ ಆಡ್ಸಿದ.  ಅವನಪ್ಪ ಹೋಪಲ್ಲಿವರೆಗೆ ಅಲ್ಲಿ ಇಲ್ಲಿ ಹುಗ್ಗಿದ ಹಾಂಗೆ ಮಾಡಿಕೊಂಡಿದ್ದ ಬಾಕಿದ್ದವು ಅವು  ಹೋದ ಕೂಡ್ಲೇ ಹತ್ತರೆ ಬಂದು ‘ಎಂತ ಹೇಳಿದವಾ ನಿನ್ನ ಅಪ್ಪ’ ಹೇಳಿ ಕೇಳಿದವು. ‘ಎಂತ ಇಲ್ಲೆಯಾ.. ಈ ನಾಲಾಯಕ್ಕಿನ ಹಾಂಗೆ ಆಯೆಕ್ಕು ಹೇಳಿ ಆಶೀರ್ವಾದ ಮಾಡಿದವು’ ಹೇಳಿದ. ಎಲ್ಲರೂ ನೆಗೆ ಮಾಡಿದವು. ಆನುದೇ ಸೇರಿಕೊಂಡೆ.
ಮಾರನೇ ದಿನ ರಾಹುಲ್ ಎನಗೆ ಒಂದು ಮೊಬೈಲ್ ತಂದುಕೊಟ್ಟ. ಆನು ಬೇಡ್ಲೇ ಬೇಡ ಎನ್ನ ಮನೇಲಿ ಬಯ್ತವು ಹೇಳಿದೆ. ಅದಕ್ಕೆ ಅವ ಎನ್ನ ಫ್ರೆಂಡ್ ಶಿಪ್ ಬೇಕು ಹೇಳಿ ಆದರೆ ಇದರ ಮಡಿಕ್ಕೊಳ್ಳೆಕ್ಕು ಹೇಳಿ ಒತ್ತಾಯ ಮಾಡಿ ಎನ್ನ ಕೈಲಿ ಹಿಡಿಶಿದ. ಯಬ್ಬಾ ಅದು ಬಾರೀ ಲಾಯ್ಕದ ಮೊಬೈಲ್. ಅದರಲ್ಲಿ  ಹೊಸ ಹೊಸಾ ಸಿನೆಮಾ ಇತ್ತು. ಗಂಟೆಗಟ್ಲೆ ನೋಡ್ಲಾವ್ತಿತ್ತು.ಆದರೆ  ಮನೇಲಿ ಆರಿಂಗಾರು  ಇದು ಗೊಂತಾದರೆ ಎನ್ನ ಹುಗುದೇ ಹಾಕುಗು. ಅದಕ್ಕೇ ಆನದರ ಎಲ್ಲರೂ ವರಗಿದ ಮೇಲೆ ಓದುವ ಪುಸ್ತಕದ ಎಡಕ್ಕಿಲಿ ಮಡುಗಿ ನೋಡುದು. ಆದರೂ ಹೆದರಿ ಪುಕು ಪುಕು ಆವ್ತು. ನೋಡಿ ಆತು ಹೇಳಿ ಅಪ್ಪಗ ಅವನೇ ಕೊಂಡೋಗಿ ಬೇರೆ ಸಿನೆಮಾ ಹಾಕ್ಸಿ ತತ್ತ. ಈಗೀಗ ಓದುವ ಹೊತ್ತಿಲಿದೇ ಅದನ್ನೇ ನೋಡುದು ಹೇಳಿ ಆಯ್ದು.ಈ ಸರ್ತಿ ಪರೀಕ್ಷೆಯೂ ರಜ್ಜ ಕಷ್ಟ ಇದ್ದಾಂಗಾತಪ್ಪ..ಮಾರ್ಕು ಹೆಚ್ಚಿರೆಕ್ಕು ಹೇಳಿಯೇ ಇದ್ದೋ.. ಪಾಸಾದರಾತಿಲ್ಲೆಯಾ..?
ಅವನೊಟ್ಟಿಂಗೆ ಬರೀ ಮಾಣಿಯಂಗ ಮಾತ್ರ ಫ್ರೆಂಡ್ಸ್ ಅಲ್ಲ. ಕೂಸುಗಳೂ ಇದ್ದವು. ಅದರಿಂದಾಗಿಯೇ ಇಂದು ಅಮ್ಮನತ್ರೆ ಲಡಾಯಿ ಮಾಡಿ ಹೆರಡೆಕ್ಕಾದ್ದು. ಮೊನ್ನೆ ಎಂಗಳ ಕೆಮೆಸ್ಟ್ರಿ ಸರ್ ರಜೆ ಮಾಡಿತ್ತಿದ್ದವು. ಅವರ ಕ್ಲಾಸ್ ಆರುದೇ ತೆಕ್ಕೊಳ್ಳದ್ದೇ ಎಲ್ಲಾ ಲೈಬ್ರರಿಗೆ ಹೋಗಿ ಹೇಳಿದವು. ಎನಗೂ ರಜ್ಜ ನೋಟ್ಸ್ ಬರವಲಿತ್ತು ಹೇಳಿ ಅತ್ಲಾಗಿ ಹೆರಟೆ. ಅಷ್ಟಪ್ಪಗ ರಾಹುಲ್ ” ಹೇ ಬಾರಾ ಇಲ್ಲಿ.. ಎಂತದೋ ಹೇಳುಲಿದ್ದು ನಿನಗೆ” ಹೇಳಿ ಹೇಳಿದ. ಅವ ದಿನಿಗೇಳಿಯಪ್ಪಗ ನೋಟ್ಸ್ ಎಲ್ಲಾ ಮರತ್ತತ್ತು. ಅವನ ಹಿಂದೆಯೇ ಹೋದೆ. ಕ್ಯಾಂಟೀನಿನ ಹಿಂದೆ ಇಪ್ಪ ಲೆಕ್ಚರುಗಳ ಕಾರ್ ಶೆಡ್ಡಿನ ಹಿಂದೆ ಎಲ್ಲರೂ ಇತ್ತಿದ್ದವು. ಒಬ್ಬನ ಕೈಲಿ ಸಿಗರೇಟಿತ್ತು. ಅದನ್ನೇ ಒಬ್ಬಂದೊಬ್ಬಂಗೆ ಪಾಸ್ ಮಾಡಿ ಎಲ್ಲರೂ ಎಳಕ್ಕೊಂಡಿತ್ತಿದ್ದವು. ಎಂಗಳ ಕ್ಲಾಸಿನ ಕೂಸುದೇ ಒಂದು ಅದರ ಎಳದತ್ತು ಹೇಳಿ.. ಎನಗೆ ನೋಡಿಯೇ ಹೆದರಿಕೆ ಆತು. ಅಪ್ಪು ಆರಿಂಗಾರು ಗೊಂತಾದರೆ ಮರ್ಯಾದೆ ಹೋಪದು ಮಾತ್ರ ಅಲ್ಲ. ಕಾಲೇಜಿಂದಲೇ ಹೆರ ಹಾಕುಗು ಹೇಳಿ ಆತೆನಗೆ. ಆನು ಹಾಂಗೆ ಹೇಳಿದ್ದಕ್ಕೆ ಅವ್ವೆಲ್ಲ ಎನ್ನ ನೋಡಿ ” ಇಲ್ಲೊಂದು ಸಣ್ಣ ಬಾಬೆ ಇದ್ದು ನೋಡಿ, ಇದಕ್ಕೊಂದು ಲೋಟ ಜಾಯಿ ಕೊಡಿ” ಹೇಳಿ ನೆಗೆ ಮಾಡಿದವು. ರಾಹುಲ್ ಕೂಡಾ “ಎಂತ ಮಾರಾಯ ನೀನು ಕೂಸುಗಳಿಂದಲೂ ಕಡೆ ಆದೆನ್ನೆ.. ತಾಕತ್ತಿದ್ದರೆ ನೀನುದೇ ಸಿಗರೇಟು ಎಳದು ತೋರ್ಸು. ಆಗ ನೀನು ಆಣುಮಗ ಹೇಳಿ ಒಪ್ಪಿಕೊಳ್ತೆ ಆನು” ಹೇಳಿದ.
ಎನಗೆ ನಾಚಿಕೆ ಆತು. ಅದಕ್ಕೆ ರಾಹುಲ್ ” ನಾಳೆ ಹೊತ್ತೋಪ್ಪಗ ಎಲ್ಲರೂ ಒಂದು ಸಣ್ಣ ಟೂರ್ ಹೆರಡುವ. ಇರುಳು ಹಾಲ್ಟ್. ಅಲ್ಲಿ ಎಂಗಳ ಈ ಬಾಬೆ, ಅವ ಮಾಣಿ ಹೇಳಿ ತೋರ್ಸಿಕೊಳ್ತ ನೋಡಿ.ಖರ್ಚೆಲ್ಲಾ ಎನ್ನದು ಹೇಳಿ ಹೇಳಿದ. ಆನು ಒಪ್ಪಿದ್ದೇ ಇಲ್ಲೆ.ಅದಕ್ಕೆ ಆ ಸಿಗರೇಟು ಎಳದ ಕೂಸು ಎನ್ನ ನೋಡಿ ನೆಗೆ ಮಾಡಿ ‘ನೀ ಎಂತ ಮಾರಾಯ ಎನ್ನಷ್ಟು ಧೈರ್ಯ ಇಲ್ಲೆಯಾ ನಿನಗೆ.. ನಾಳೆ ಆನುದೇ ಬತ್ತೆ ಟೂರಿಂಗೆ ..’ ಹೇಳಿ  ಹಂಗ್ಸಿತ್ತು. ಎನಗೂ ರಜ್ಜ ಕೋಪ ಬಂತು. ಇವು ಎನ್ನ ಅಷ್ಟು ನಿಕೃಷ್ಟ ಮಾಡ್ಲೆಂತ ಇದ್ದು. ಸಿಗರೇಟು ಎಳವಲೆಂತ ಎನಗೂ ಎಡಿಯದಾ..?ಮೊದಲೆಲ್ಲಾ ಮನೆಲಿ ಅಪ್ಪನ ಅಪ್ಪಚ್ಚಿ  ಪುಟ್ಟಜ್ಜ ಹೇಳಿತ್ತಿದ್ದ. ಅವು ಎಷ್ಟೊತ್ತಿಂಗೂ ರೈಲು ಬಂಡಿಯ ಹಾಂಗೆ ಹೊಗೆ ಬಿಟ್ಟುಕೊಂಡೇ ಇದ್ದದು. ಅದು ಎಳವದರ್ಲೂ ಕ್ರಮ ಇತ್ತು. ಎಲ್ಲೋರ ಹಾಂಗೆ ಬೆರಳಿನ ನಡುಗೆ ಮಡುಗುದಲ್ಲ. ಬೀಡಿಯ ಎರಡು ಕೈಯ ಒಳ ಮಡಿಕ್ಕೊಂಡು ಜೋರಾಗಿ ಎಳದು ಮೂಗಿಲಿ ಹೊಗೆಯ ಬುಸ್ಸನೆ ಹೆರ ಹಾಕುದು. ಅವು ಮಳೆಗಾಲಲ್ಲಿ ಬೀಡಿ ಸರಿ ಹೊತ್ತದ್ದರೆ ಎನ್ನತ್ರೆ “ಇದಾ ಪುಳ್ಳಿ ಒಂದರಿ ಈ ಬೀಡಿಯ ಒಲೆಯ ಕೆಂಡಲ್ಲಿ ಹೊತ್ಸಿ ತಾ ನೋಡಾ..” ಹೇಳಿ ಹೇಳಿಕೊಂಡಿತ್ತಿದ್ದ. ಆಗೊಂದರಿ ಆನುದೇ ಅದರ ಪುಟ್ಟಜ್ಜನ ಹಾಂಗೆ ಎಳವಲೆ ಹೆರಟು ಜೋರು ಸೆಮ್ಮಿತ್ತಿದ್ದೆ. ಅಪ್ಪಂಗೆ ಗೊಂತಾಗಿ ಅಪ್ಪ ಹುಣ್ಸೇ ಅಡರಿಲಿ ಎನಗೆರಡು ಬಾರ್ಸಿದ. ಮತ್ತೆ ಪುಟ್ಟಜ್ಜಂಗೂ ಬೈದ. ಆಗ ಆನು ಸಣ್ಣ ಇತ್ತಿದ್ದೆ. ಹಾಂಗಾಗಿ ಸೆಮ್ಮ ಬಂದದಾದಿಕ್ಕು. ಈಗ ಹಾಂಗೆಂತಾಗ ಅಲ್ಲದಾ. ಅಬ್ಬಾ ಎನ್ನ ಎಷ್ಟು ಸಸಾರ ಮಾಡುದಿವು. ಇವಕ್ಕೆ ನಾಳೆ ತೋರ್ಸುತ್ತೆ  ಆನಾರು ಹೇಳಿ. “ಆತು ನಾಳೆ ಎಷ್ಟು ಗಂಟೆಗೆ ಸಿಕ್ಕೆಕ್ಕು ಹೇಳಿ, ಆನು ಬತ್ತೆ” ಹೇಳಿದೆ. ಅದರ ಕೇಳಿ ಎಲ್ಲವಕ್ಕೂ ಖುಷಿ ಆತು. ರಾಹುಲ್ ಆಂತೂ ಎನ್ನ ಗಟ್ಟಿ ಹಿಡ್ಕೊಂಡು “ಈಗ ನಿನ್ನ ಬಗ್ಗೆ ಹೆಮ್ಮೆ ಆವ್ತೆನಗೆ” ಹೇಳಿದ.ಹೆರಡುವಾಗ ಮೊಬೈಲಿಂಗೆ ಹೊಸ ವೀಡಿಯೋ ಹಾಕಿ ಕೊಡ್ತೆ ಕೊಡು ಹೇಳಿ ತೆಕ್ಕೊಂಡು ಹೊತ್ತೋಪ್ಪಗ ಕೊಟ್ಟ.
ಅಬ್ಬಾ.. ಹೇಂಗಿತ್ತು ಆ ಸಿನೆಮಾ.. ನೋಡಿ ಮೈಯೆಲ್ಲಾ ಬೆಶಿ ಬೆಶಿ  ಆಗಿತ್ತು. ಇಂದು ಕ್ಲಾಸಿಲಿ ಸಿಕ್ಕಿ “ಹೇಂಗಿತ್ತು ವೀಡಿಯೋ .. ಅದರ ಅನುಭವ ಆಯೆಕ್ಕಾರೆ ಇಂದು ಆವ್ತು ನೋಡು.. ಎಷ್ಟನ್ನಾರಕ್ಕೂ ನೀನು ತಪ್ಸುಲಾಗ” ಹೇಳಿದ. ಎನಗೂ ಅದರ ನೋಡಿ ಎಂತದೋ ಆದ ಹಾಂಗೆ ಆಗಿತ್ತು. ಅಪ್ಪ ಅಮ್ಮ ಒಪ್ಪವು ಹೇಳಿ ಇತ್ತು. ಆದರೂ ತಲೆ ಆಡ್ಸಿದೆ. ಅಲ್ಲಾ.. ಒಂದು ದಿನ ಎನ್ನಷ್ಟಕ್ಕೆ ಆನು ಇದ್ದರೆಂತ ಪ್ರಪಂಚ ಮುಳುಗುಗಾ.. ?
ಎದುರಂದ ಒಂದು ಬಸ್ಸು ಜೋರಾಗಿ ಹಾರ್ನ್ ಮಾಡಿಕೊಂಡು ಬಂತು.
ಓಹ್..ಆನು ಆಲೋಚನೆ ಮಾಡಿಕೊಂಡು ನಿಂದಿದೆ. ಈ ಬಸ್ಸಿಂಗೇ ಆನು ಹತ್ತೆಕ್ಕಪ್ಪದನ್ನೆ. ಅತ್ತಿತ್ತ ನೋಡಿ ಹತ್ತಿದೆ. ಹೆಚ್ಚು ಜನ ಇತ್ತಿಲ್ಲೆ. ಕಿಟಕಿ ಕರೇಲಿ ಕೂದೆ. ಎನ್ನ ಬಾಕಿ ಫ್ರೆಂಡ್ಸೆಲ್ಲ ಇನ್ನು ನಾಲ್ಕು ಮೈಲು ಕಳುದ ಮೇಲೆ ಸಿಕ್ಕುಗು. ಅವ್ವೆಲ್ಲ ಅಲ್ಲಿ  ಎನ್ನ ಕಾದುಕೊಂಡು ಇರ್ತವು.ಮತ್ತೆಲ್ಲರೂ ಒಟ್ಟಿಂಗೆ ಎರಡು ಕಾರಿಲಿ ಹೋಪದು. ಆ ಕೂಸು ಬಂದಿಕ್ಕಾ.. ಸುಮ್ಮನೆ ಹೇಳಿದ್ದೋ.. ಗೊಂತಾಯೆಕ್ಕಾರೆ ಇನ್ನು ರಜ್ಜ ಹೊತ್ತು ಬೇಕು.. ಇದು ಹೆರಡೆಕ್ಕನ್ನೇ ಎಂತದಕ್ಕೂ..
ಸುಮಾರು ಹೊತ್ತು ಕೂದನಾ ಹೇಳಿ.ಡ್ರೈವರ್ ಕಂಡೆಕ್ಟರಂದೇ ಹತ್ತಿದ್ದವಿಲ್ಲೆ ಬಸ್ಸಿಂಗೆ. ಕರ್ಮದ್ದು ಹೆರಡ್ತಿಲ್ಲೆ ಎಂತಕೆ? ಗಂಟೆ ಆಯ್ಕೊಂಡು ಬಂತು ಹೇಳಿ ಅತ್ತಿತ್ತ ನೋಡಿದೆ. ಕೆಳ ಕೆಲವು ಜನ ನಿಂದುಕೊಂಡು ಬಸ್ಸಿನ ಕಡೆಯೇ ನೋಡಿಕೊಂಡಿತ್ತಿದ್ದವು. ಎಂತಾತಪ್ಪ ಹೇಳಿ ಆನು ಬ್ಯಾಗಿನ ಸೀಟಿಲೇ ಮಡುಗಿ ಇಳುದು ನೋಡಿರೆ ಬಸ್ಸಿನ ಟಯರ್ ಪಂಕ್ಚರ್ ಆಗಿತ್ತು. ಇನ್ನು ಕಾಲು ಗಂಟೆಲಿ ಹೆರಡ್ತು ಹೇಳಿದ ಕಂಡೆಕ್ಟರ್. ಅಲ್ಲಿ ಹೆರ ನಿಂದು ಆರಿಂದಾರು ಕಣ್ಣಿಂಗೆ ಬೀಳುದು ಬೇಡ ಇನ್ನು ಹೇಳಿ ಎನ್ನ ಸೀಟಿಂಗೆ ಬಂದೆ. ಅಷ್ಟು ಪಕ್ಕ ಆನು ಕೂದ ಜಾಗೆಲಿ ಎನ್ನ ಬ್ಯಾಗಿನ ಮೇಲಂದಲೆ ಒಂದು ನ್ಯೂಸ್ ಪೇಪರ್ ಇತ್ತು. ಹೆರಂದ ಆರೋ ಸೀಟು ಮಡುಗುಲೆ ಹೇಳಿ ಇಡ್ಕಿದ್ದಾದಿಕ್ಕು. ಆನದರ ತೆಗದು ಎನ್ನ ಹತ್ತರಾಣ ಖಾಲಿ ಸೀಟಿಲಿ ಮಡುಗಿದೆ.
ಕಾಲು ಗಂಟೆ ಹೇಳಿದ್ದು ಕಳುದರೂ ಹೆರಡುವ ಅಂದಾಜು ಇಲ್ಲೆ ಬಸ್ಸು. ಕೇಳಿರೆ ಸ್ಟೆಪ್ನಿ ಟಯರ್ಲಿದೇ ಗಾಳಿ ಇಲ್ಲೆಡ್ಡ. ಈಗ ಸರಿ ಮಾಡ್ಸಿ ತಂದು ಹಾಕಿ ಹೆರಡ್ತು ಹೇಳಿದ. ಬೇರೆ ಬಸ್ಸಿಲಿ ಹೋಪ ಹೇಳಿರೆ ಬಸ್ಸಿಲ್ಲೆ. ರಿಕ್ಷಾ ಎಲ್ಲಾ ಮಾಡಿಕೊಂಡು ಹೋಪಲೆ ಹೆರಟ್ರೆ ಕಂಡಾಬಟ್ಟೆ ಬಾಡಿಗೆ ಹೇಳುಗು ಅವು. ಮುಳ್ಳಿನ ಮೇಲೆ ಕೂದ ಹಾಂಗೆ ಆಯ್ಕೊಂಡಿತ್ತು ಎನಗೆ. ಹೊತ್ತು ಹೋಗದ್ದೆ ಹತ್ತರಾಣ ಪೇಪರ್ ಬಿಡ್ಸಿದೆ. ಅಲ್ಲಾ ಈ ಪೇಪರಿಲಿ  ಎಂತ ಇರ್ತು ಕರ್ಮ.. ಸುಮ್ಮನೆ ಕಣ್ಣಾಡ್ಸಿದೆ. ಆರೋ ಒಂದು ಹೆಮ್ಮಕ್ಕ ಅದರ ಜೀವನ ಚರಿತ್ರೆಯ ಸಂಕ್ಷಿಪ್ತವಾಗಿ ಬರದ್ದಿತ್ತು. ಓದಿದೆ. ಓದುತ್ತಾ ಹೋದ ಹಾಂಗೆ ಮೈಯೆಲ್ಲಾ ಬೆಗರುಲೆ ಶುರು ಆತು. ಕೈಕಾಲೆಲ್ಲ ನಡುಗುವ ಹಾಂಗೆ ಆತು. ಯಬ್ಬಾ.. ಯಮ ಯಾತನೆ ಅದರ ಜೀವನ. ಶರೀರ ಹೇಳಿರೆ ಕಾಯಿಲೆಗಳ ಗೂಡು.  ಒಂದು ತಪ್ಪು ಹೆಜ್ಜೆ ಮಡುಗಿದ್ದು ಅದು ಜೀವನಲ್ಲಿ. ಏಡ್ಸ್ ಮಾರಿ ಅಂಟಿಕೊಂಡು ಇಡೀ ಬದುಕಿನ ನುಂಗಿದ್ದು..
ಓಹ್.. ದೇವಾ.. ಆನುದೇ ಅದೇ ತಪ್ಪು ಮಾಡ್ತಾ ಇದ್ದೆನ್ನೆ.. ಎಂತಾಗಿತ್ತು ಎನಗೆ.. ಎಂತಕೆ ಸರಿ ತಪ್ಪುಗಳ ಆಲೋಚನೆ ಮಾಡುದ್ದನ್ನೇ ಬಿಟ್ಟದು ಆನು.. ಅಯ್ಯೋ .. ಎಲ್ಲಿಯಾದರು ಎನಗೆ ಇದೇ ಸ್ಥಿತಿ ಬಂದರೆ ..  ಅಬ್ಬಾ ಎನ್ನ ಶತ್ರುವಿಂಗೂ ಬೇಡ ಈ ಅವಸ್ಥೆ. ಎಷ್ಟು ನಂಬಿಕೆ ಇದ್ದು ಎನ್ನ ಅಪ್ಪ ಅಮ್ಮಂಗೆ ಎನ್ನ ಮೇಲೆ. ಆನು ಹಾಳಾದರೆ ಅವರ ಜೀವನವೂ ಹಾಳಾದ ಹಾಂಗೆಯೇ ಅಲ್ಲದ.ಇಲ್ಲೆ.. ಆನು ಹೀಂಗಿಪ್ಪ ಕೆಟ್ಟ ಕೆಲಸಂಗಳ ಮಾಡ್ಲಾಗ. ಆನು ಮಾತ್ರ ಸರಿ ಆದರೆ ಸಾಲ.  ಎನ್ನ ಫ್ರೆಂಡ್ ಹೇಳಿ ಆನು ನಂಬಿದ ರಾಹುಲ್, ಅವನೊಟ್ಟಿಂಗೆ ಇಪ್ಪವು ಆರುದೇ ಇದರ ಬಲೆಲಿ ಬೀಳುಲಾಗ. ಕಿಸೆಂದ ಮೊಬೈಲ್ ತೆಗದೆ. ರಾಹುಲ್‌ನ ನಂಬರ್  ಒತ್ತಿದೆ. “ಎಲ್ಲಿದ್ದೆ ಮಾರಾಯ.. ಕಾಯ್ತಾ ಇದ್ದೆಯ ಎಂಗ ನಿನ್ನ..ಸರಿಯಾದ ಬಸ್ಸಿಂಗೆ ಹತ್ತಿದ್ದೆಯಾ ಇಲ್ಲೆಯಾ? ದಾರಿ ಗೊಂತಾದನ್ನೆ..” ಹೇಳಿ ಬೊಬ್ಬೆ ಹೊಡದ. ಆನು ಸ್ವರ ಗಟ್ಟಿ ಮಾಡಿಕೊಂಡೆ. ” ಹಾಂ.. ಈಗ ಸರಿಯಾದ ದಾರಿ ಸಿಕ್ಕಿತ್ತು. ಹಾಂಗಾಗಿ ಆನು ನಿಂಗಳೊಟ್ಟಿಂಗೆ ಬತ್ತಿಲ್ಲೆ. ಮಾತ್ರ ಅಲ್ಲ ನಿಂಗಳೂ ಹೋಪಲೆಡಿಯ. ಎನ್ನ ಮಾತು ಮೀರಿ ಹೆರಟರೆ ಈ ವಿಶಯವ ನಿನ್ನ ಅಪ್ಪಂಗೆ ಆನೇ ಹೇಳ್ತೆ. ನಮ್ಮ ಮೇಲೆ ಅವ್ವೆಲ್ಲ ತುಂಬಾ ಭರವಸೆ ಮಡುಗಿದ್ದವು. ಅವರ ಆ ನಂಬಿಕೆಗೆ, ಪ್ರೀತಿಗೆ ನಾವು ಹೀಂಗೆ ಮೋಸ ಮಾಡ್ಲಾಗ. ನಾವು ಹೋವ್ತಾ ಇಪ್ಪ ದಾರಿ ಸರಿ ಇಲ್ಲೆ. ತಿರುಗಿ ಬಪ್ಪಲೆ ಈಗ ಅವಕಾಶ ಇದ್ದು. ಎಂತಕೆ ಈ ಮಾತು ಹೇಳ್ತಾ ಇದ್ದೆ ಹೇಳಿ ಇಲ್ಲಿ ವಿವರ್ಸುಲೆ ಎಡಿಯ. ಎಲ್ಲಾ ನಾಳ್ತು ಕಾಲೇಜಿಲಿ ಹೇಳ್ತೆ.  ಈಗ  ನಾವಾರು ಹೋಪಲಿಲ್ಲೆ ಇದೇ ಕೊನೆ ಮಾತು” ಹೇಳಿ ಧೈರ್ಯಲ್ಲಿ ಹೇಳಿದೆ. ಅಲ್ಲೆಂತದೋ ಗುಜು ಗುಜು ಅಪ್ಪದು ಕೇಳಿಕೊಂಡಿದ್ದತು. ಅವ್ವು ಎನ್ನ ಈ ಮಾತು ಕೇಳಿ ಗಲಿಬಿಲಿ ಆದ ಹಾಂಗಿತ್ತು. ಇಂದಿನ್ನು ಹೋಗವು ಹೇಳಿ ಫೋನ್ ಕಟ್ ಮಾಡಿದೆ.
ಇಷ್ಟೆಲ್ಲ ಅಪ್ಪಗ ಬಸ್ಸು ಸ್ಟಾರ್ಟ್ ಆಗಿತ್ತು. ಆನೆದ್ದು ನಿಂದು “ಆನು ಇಳಿತ್ತೆ. ಆನು ಹತ್ತೆಕ್ಕಾದ ಬಸ್ಸು ಇದಲ್ಲ” ಹೇಳಿ ಇಳುದೆ. “ಇಷ್ಟೊತ್ತು ಗೊಂತಾದಿಲ್ಲೆಯಾ ನಿನಗೆ” ಹೇಳಿ ಹತ್ತರೆ ಕೂದ ಒಂದು ಜನ ನೆಗೆ ಮಾಡಿತ್ತು. ” ಈಗಾರೂ ಗೊಂತಾತನ್ನೆ ಹೇಳಿ ಖುಷಿ ಆಗಲಿ ನಿಂಗೊಗೆ” ಹೇಳಿ ಹೇಳಿದೆ. ಅದಕ್ಕೆ ಅರ್ಥ ಆಗದ್ದೇ ಎನ್ನ ಮೋರೆಯ ಪೆದ್ದನ ಹಾಂಗೆ ನೋಡಿತ್ತು.ಆದರೆ ಆ ಮಾತಿನ ಅರ್ಥ ಎನಗೆ ಹಗಲಿನ ಹಾಂಗೆ ಸ್ಪಷ್ಟವಾಗಿ ಕಂಡುಕೊಂಡಿತ್ತು. ಎನ್ನ ಮನಸ್ಸೀಗ ಹಾರುವ ಹಕ್ಕಿಯ ಹಾಂಗೆ ಆಗಿತ್ತು.
ಮನೆಯ ದಾರಿ ಹಿಡುದು ನಡದೆ.  ಛೆ.. ಅಮ್ಮಂಗೆ ಆಗ ಬೇಜಾರು ಮಾಡಿದೆ. ಆದರೂ ಅದಕ್ಕೀಗ  ಮನಸ್ಸು ಬದಲಿಸಿ ಬಪ್ಪ ಎನ್ನ ಕಂಡು ಕುಷಿ ಅಕ್ಕು. ಅಪ್ಪ ಇನ್ನೂ ಮನೆಗೆತ್ತುಲೆ ಆಯಿದಿಲ್ಲೆ. ಅಜ್ಜಿಯ ಬೇರೆ ನೋಡ್ಲೆ ಹೋಪಲಿದ್ದು. ಅಮ್ಮಂಗೆಂತಾರು ಸಹಾಯ ಬೇಕಾತೇನೋ..
ಎನ್ನ ಹೆಜ್ಜೆಗ ನಡವ ಬದಲು ಓಡುಲೆ ಶುರು ಮಾಡಿತ್ತು. ಎನಗೀಗ ಎನ್ನ ಮೇಲೆ ಭರವಸೆ ಇತ್ತು. ಹೋಪಗ ಇದ್ದ ಪಾಪಪ್ರಜ್ಞೆ ಈಗಿತ್ತಿಲ್ಲೆ. ಯಾವ ಅಳುಕೂ ಇತ್ತಿಲ್ಲೆ. ಸರಿಯಾದ ದಾರಿಯ ಕಡೆಗೇ ಆನು ಮೋರೆ ಹಾಕಿದ್ದೆ ಹೇಳುವ ಆ ನಂಬಿಕೆಯೇ ಸುಖಾ ಹೇಳಿ ಆತು. ಇನ್ನೆಂದೂ ದಾರಿ ತಪ್ಪುಲಾಗ ಹೇಳುವ ಎಚ್ಚರಿಕೆಯ ಗಂಟೆಯ ಹಾಂಗೆ ಎನ್ನ ಎದೆ ಬಡಿತ ಎನಗೆ ಕೇಳ್ತಾ ಇತ್ತು.

~~***~~

13 thoughts on “೨೦೦೩ ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ

  1. ಕಥೆ ಓದಿ ಖುಷಿ ಆತು… ಅಭಿನಂದನೆಗ… ಹರೇ ರಾಮ…

  2. ಹರೇರಾಮ, ತೃತೀಯ ವಿಜೇತೆ ತಂಗೆ, ಲಕ್ಶ್ಮಿಯ ಕತೆಯೂ ಒಳ್ಲೆದಿದ್ದು. ಬೇಗನೆ ಒಪ್ಪಣ್ಣ ಬಯಲಿಂಗೆ ಬತ್ತು.. ಓದುಗರು ನಿರೀಕ್ಷಿಸಿ

  3. ಅನಿತಕ್ಕನ ಕಥೆಯ ಓದುಲೆ ಆನೂ ಕುತೂಹಲಂದ ಕಾದುಗೊಂಡು ಇತ್ತಿದೆ.ಕಥೆಯ ವಸ್ತು ,ನಿರೂಪಣೆ ಮತ್ತೆ ಭಾಷಾ ಶೈಲಿ ಎಲ್ಲವೂ ಲಾಯಕ ಇದ್ದು .ಅಭಿನಂದನೆಗ

  4. ಹರೇರಾಮ, ಕಥಾಲೇಖಿಕೆ ಅನಿತಂಗೆ ಮತ್ತೊಂದರಿ ಅಭಿನಂದನಗೊ.ಈ ಸರ್ತಿ ಇಪ್ಪತ್ತನಾಲ್ಕು ತಂಗೆಕ್ಕೊ ಭಾಗವಹಿಸಿದ್ದವು. ಅವಕ್ಕೆಲ್ಲರಿಂಗೂ ಮುಂದಾಣ ಸಾಲಿಂಗೆ ಈ ಸಂದರ್ಭಲ್ಲಿಯೂ ಶುಭಹಾರೈಕೆ ಹೇಳ್ತಾಇದ್ದೆ. ಹಾಂಗೇ ಈ ಕತಾವೇದಿಕೆಗೆ ಸಂಬಂಧ ಪಟ್ಟ ಎಲ್ಲದರನ್ನೂ ಆನು ಕೊಟ್ಟ ಕೂಡ್ಲೇ [ಫೋಂಟ್ ವೆತ್ಯಾಸ ಆದರೂ ಪ್ರಯತ್ನಪೂರ್ವಕ ] ಹಾಕುತ್ತಿಪ್ಪ ಒಪ್ಪಣ್ಣ ಬಯಲಿನ ಸಂಪಾದಕರಾದ ಶರ್ಮಭಾವಂಗೆ ಅನಂತಾನಂತ ಸ್ಮರಣಗೊ. ಈ ವರೆಗೆ ಪ್ರಥಮವಿಜೇತರ ಹೊರತಾಗಿ ಮತ್ತೆಲ್ಲೆ ಅಕ್ಕ-ತಂಗೆಕ್ಕಳೂ ೨೦೧೪ನೇ ಸಾಲಿಂಗೆ ಈಗಲೇ ಬರವಲೆ ಸುರುಮಾಡಿ ೩೦/೮/೨೦೧೪ ರವರೆಗೆ ಸಮಯೈದ್ದು ಉಪಯೋಗಿಸಿಯೊಳಿ ಹೇಳ್ತಾ ಹರೇರಾಮ.

  5. ಭ್ಹರೇರಾಮ, ಕಥಾಲೇಖಿಕೆ ಅನಿತಂಗೆ ಮತ್ತೊಂದರಿ ಅಭಿನಂದನಗೊ.ಈ ಸರ್ತಿ ಇಪ್ಪತ್ತನಾಲ್ಕು ತಂಗೆಕ್ಕೊ ಭಾಗವಹಿಸಿದ್ದವು. ಅವಕ್ಕೆಲ್ಲರಿಂಗೂ ಮುಂದಾಣ ಸಾಲಿಂಗೆ ಈ ಸಂದರ್ಭಲ್ಲಿಯೂ ಶುಭಹಾರೈಕೆ ಹೇಳ್ತಾಇದ್ದೆ. ಹಾಂಗೇ ಈ ಕತಾವೇದಿಕೆಗೆ ಸಂಬಂಧ ಪಟ್ಟ ಎಲ್ಲದರನ್ನೂ ಆನು ಕೊಟ್ಟ ಕೂಡ್ಲೇ [ಫೋಂಟ್ ವೆತ್ಯಾಸ ಆದರೂ ಪ್ರಯತ್ನಪೂರ್ವಕ ] ಹಾಕುತ್ತಿಪ್ಪ ಒಪ್ಪಣ್ಣ ಬಯಲಿನ ಸಂಪಾದಕರಾದ ಶರ್ಮಭಾವಂಗೆ ಅನಂತಾನಂತ ಸ್ಮರಣಗೊ. ಈ ವರೆಗೆ ಪ್ರಥಮವಿಜೇತರ ಹೊರತಾಗಿ ಮತ್ತೆಲ್ಲೆ ಅಕ್ಕ-ತಂಗೆಕ್ಕಳೂ ೨೦೧೪ನೇ ಸಾಲಿಂಗೆ ಈಗಲೇ ಬರವಲೆ ಸುರುಮಾಡಿ ೩೦/೮/೨೦೧೪ ರವರೆಗೆ ಸಮಯೈದ್ದು ಉಪಯೋಗಿಸಿಯೊಳಿ ಹೇಳ್ತಾ ಹರೇರಾಮ.

  6. ನಮ್ಮ ಬೆಳಶಿದ ಸಂಸ್ಕೃತಿ, ಹಿರಿಯೋರ ಸಂಸ್ಕಾರ ಎಡವುವಗ ಎಚ್ಚರಿಸಿ ಕಾಪಾಡುತ್ತು ಹೇಳುವ ಆಶಯದ ಕತೆ ಬರದ ಶೈಲಿಯೂ ಸೂಪರ್… ಅನಿತಕ್ಕಂಗೆ ಅಭಿನಂದನೆಗೋ…

  7. ಬದುಕಿನ ಒಂದೊಂದು ಘಟ್ಟಲ್ಲೂ ದಾರಿಯ ಕುರಿತು ಸ್ಪಷ್ಟ ಕಲ್ಪನೆ ಬೇಕು.ಹದಿಹರೆಯ ದಾರಿ ತಪ್ಪುವ ಅಪಾಯ ಇಪ್ಪ ಘಟ್ಟ.ಇಲ್ಲಿ ಕಥಾನಾಯಕ ಮಾಣಿ ದಾರಿ ತಪ್ಪುವ ಹಾಂಗೆ ಆದರೂ ಸಮಯಕ್ಕಪ್ಪಾಗ ಸರಿಯಾದ ನಿರ್ಧಾರ ತೆಕ್ಕೊಂಡ.ಕತೆ ಲಾಯ್ಕ ಆಯಿದು.ಅಭಿನಂದನೆಗೊ.

  8. ಬದುಕಿನ ಒಂದೊಂದು ಘಟ್ಟಲ್ಲೂ ದಾರಿಯ ಕುರಿತು ಸ್ಪಷ್ಟ ಕಲ್ಪನೆ ಬೇಕು.ಹದಿಹರೆಯ ದಾರಿ ತಪ್ಪುವ ಅಪಾಯ ಇಪ್ಪ ಘಟ್ತ.ಇಲ್ಲಿ ಕಥಾನಾಯಕ ಮಾಣಿ ದಾರಿ ತಪ್ಪುವ ಹಾಂಗೆ ಆದರೂ ಸಮಯಕ್ಕಪ್ಪಾಗ ಸರಿಯಾದ ನಿರ್ಧಾರ ತೆಕ್ಕೊಂಡ.ಕತೆ ಲಾಯ್ಕ ಆಯಿದು.ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×