Oppanna.com

ಕಂಕಣ ಬಲ-೨೦೧೨ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಥಮ ಪ್ರಶಸ್ತಿ ವಿಜೇತ ಕಥೆ.-ಭಾಗ ೨

ಬರದೋರು :   ವಿಜಯತ್ತೆ    on   21/07/2013    7 ಒಪ್ಪಂಗೊ

ಕಂಕಣ ಬಲ-ಗೌರಮ್ಮ ಪ್ರಶಸ್ತಿ ವಿಜೇತ ಕತೆ ಮುಂದುವರಿದ ಭಾಗ,,,
 
(ಇದರ ಸುರುವಾಣ ಕಂತು ಇಲ್ಲಿದ್ದು.)
 ಕಾಲೇಜು ಸುರುವಾಗಿ ಮಕ್ಕೊ ಹೋದ ಮತ್ತೆ ಕೈಲಾಗದ್ದವ ಮೈ ಪರಚಿಗೊಂಡ ಹೇಳುವಾಂಗೆ ಇದೆಲ್ಲಾ ನಿನ್ನದೇ ಕಿತಾಪತಿ ಹೇಳಿ ಗೊಂತಿದ್ದೆನಗೆ, ಈಗೀಗ ನಿನ್ನ ಆರ್ವಾಡು ಹೆಚ್ಹಾವುತ್ತು. ಎನಗೆ ಎದುರು ಮಾತಾಡುವಷ್ಟು  ಮುಂದುವರುದ್ದೆ ನೀನು. ನಿನ್ನ ಕೈಲಿ ಆಗದ್ದಕ್ಕೆ ಮಕ್ಕಳ ಏಪ್ಸಿ ಬಿಟ್ಟೆ ನೋಡು!ಇದೆಲ್ಲ ಹೆಚ್ಹು ದಿನ ನೆಡಗು ಜಾನ್ಸೆಡ! ಹೇಳಿ ಕಣ್ಣು ಹೊಡಚ್ಚಿ ದುರು ದುರು ನೋಡಿದ ರಾಮಣ್ಣ ಎಂತಾದರೂ ಮಗಳ ಮದುವೆ ಬೇಗ ಮಾಡಿ ಮುಗುಶೆಕ್ಕು ಹೇಳ್ತ ಆಲೋಚನೆಲಿ ಇತ್ತಿದ್ದ°. ಊರವು ರಾಮಣ್ಣನ ಬಗ್ಗೆ ವರ್ಣ ರಂಜಿತವಾಗಿ ಗುಣಗಾನ ಮಾಡುವಾಗ, ಕೇಳಿದವು ನವಗೆ ಬರೀ ಉಪ್ಪೆಜ್ಜೆ ಉಂಬವರ ಸಂಬಂಧವಾದರೂ ಅಕ್ಕು. ಇಂತವರ ಸಹವಾಸ ಬೇಡಪ್ಪ. ಹೇಳಿ ಅಲ್ಲಿಂದಲೇ ತಿರುಗಿ  ಹೋಪಲೆ ಸುರು ಮಾಡಿದವು. ನಾಯಿ ಮೈಲಿದ್ದ ರೋಮದ ಹಾಂಗೆ ಇವನತ್ರೆ ಉಪಯೋಗಕ್ಕೆ ಬಾರದ್ದ ಪೈಸೆ ಎಷ್ಟಿದ್ದರೆಂತ? ಪೈಸೆ ನೋಡಿ ಆರೂ ಬೈಂದವಿಲ್ಲೆ. ರಾಮಣ್ಣಂಗೆ ಮದುವೆಪ್ಪಗ ಹಾಂಗಿದ್ದಕಾಲ ಆಗಿದ್ದರಿಂದಲೇ ಅವಂಗೆಸೀತಕ್ಕ ಸಿಕ್ಕಿದ್ದದು . ಆದರೆ ಈಗ ಕಾಲ ಹಾಂಗಲ್ಲ.
ಮಗಳಿಂಗೆ ಕುಳವಾರು ಹುಡುಕ್ಕುವ ಗೌಜಿಲಿ ಮೂರು ವರ್ಶ ಉರುಳಿ ಹೋದ್ದೇಗೊಂತಾಯಿದಿಲ್ಲೆ ಅಪ್ಪಂಗೆ! ಅದು ಪರೀಕ್ಷೆ ಕಳುದು ಮನಗೆ ಬಂದೂ ಆತು. . ಈಗ ಮಗಳಿಂಗೆ ವರಾನ್ವೇಶಣೆ ಕೆಲಸ ಜೋರಾತು. ಗುರ್ತ ಇಪ್ಪ ದಲಾಲಿಗಳತ್ರೆಲ್ಲ ಹೇಳಿದ. ಆದರೂ ಸಿಕ್ಕಿ ಸಿಕ್ಕಿದ ಹಾಕು ಜೋಕುಗಳ ಕರಕ್ಕೊಂಡು ಬಪ್ಪದು ಬೇಡ ಹೇಳ್ಲೆ ಮರದ್ದಾಯಿಲ್ಲೆ. ಎಷ್ಟೇತಾಕೀತು  ಮಾಡೀರೂ ಬಂದ ಒಂದೆರಡು ಸಂಬಂದಂಗೊ ಕಣ್ಣಿಂಗೆ ಹಿಡುಸಿದ್ದಿಲ್ಲೆ ಈ ಮನುಷ್ಯಂಗೆ ಇರುಳು ಹುಟ್ಟಿದ್ದು ಆಗ ಹಗಲು ಹುಟ್ಟಿದ್ದೂ ಆಗ ಹೇಳಿ ತಳಿಯದ್ದೆಕೂದವು ದಲಾಲಿಗೊ.
ರಾಮಣ್ಣ ಎಷ್ಟೆ ಪ್ರಯತ್ನ ಪಟ್ಟೂ ಖಾರಾಣ ಕುತ್ತ ಲಾಗ ತೆಗದರೂ ಪಲಿತಾಂಶ ಮಾಂತ್ರ ಸೊನ್ನೆಯೇ. ಬರೀ ನೀರಿಲ್ಲಿ ಹೋಮ ಮಾಡಿದ ಹಾಂಗಾತು ವಿನಾ ಬೇರೇನೂ ಪ್ರಯೋಜನ ಆಯಿದಿಲ್ಲೆ. ಮತ್ತೆ ಮತ್ತೆ ಮುಂಡಾಸುತಾಯೆ ಬರ್ಪಿಜ್ಜಿ ಮುಟ್ಟಾಳೆತಾಯಗ್ ಕೊರ್ಪುಜ್ಜಿ ಹೇಳಿ ತುಳುಗಾದೆ ಮಾತಿನ ಹಾಂಗಾತು ರಾಮಣ್ಣನ ಕತೆಯುದೆ!. ಶುಂಠಿಕೊಂಬಿನಾಂಗೆ ಒಂದೇಕೂಸು. ತನ್ನ ಶ್ರೀಮಂತಿಕೆ ನೋಡಿ ಮಾಣ್ಯಂಗೊ ಆನು ಮುಂದು ತಾನು ಮಂದು ಹೇಳಿ ಸಾಲು ಕಟ್ಟಿ ನಿಂಗು , ಕಾಕೆ ಕಚ್ಚಿ ಕೊಡುಹೋದ ಹಾಂಗೆ ಮಗಳ ಮದುವೆ ಅಕ್ಕು. ಜಾನ್ಸಿಸವಂಗೀಗ  ತೀರಾ ನಿರಾಶೆ ಆತು!
ಮತ್ತೆ ಕಾಲೇಜು ಸುರುವಪ್ಪಲಾತು.ಈಗ ತಂಗೆಯ ಮನಃಸ್ತಿತಿ ಅರ್ತು ಗೊಂಡ ಅಣ್ಣಂದ್ರು ಅಪ್ಪಾ, ತಂಗೆ ಅಂತೇ ಮನೆಲಿ ಕೂದರೆ ಮದುವೆಪ್ಪಲೆ  ಇನ್ನೂ ಕಷ್ಟ ಇದ್ದು. ಮದುವೆಪ್ಪಲ್ಲಿ ವರೆಗಾದರೂ ಕಲಿಯಲಿ. ನಾವು ನಮ್ಮ ಪ್ರಯತ್ನ ಮಾಡಿಗೊಂಡಿದ್ದರಾತು ಹೇಳುವಗ ರಾಮಣ್ಣ ಒಪ್ಪುವದು ಅನಿವಾರ್ಯ ಆತು..ಅಂತೂ-ಇಂತೂ ಕೀರ್ತಿಗೆ ಕಲಿವ ಯೋಗ ಇದ್ದತ್ತು. ಮತ್ತೆ ಮೂರು ವರ್ಷ ಕಳುದತ್ತು.. ಎ೦ ಎಸ್.ಸಿ ಆತು. ಮಗಳ ಮನದಾಶೆ ಈಡೇರಿತ್ತು. ಅಪ್ಪಂಗೆ ಮಾಂತ್ರ ಮಗಳ ಮೋರೆ ನೋಡುವಗ ತಾತ್ಸಾರ ಭಾವನೆ ಮೂಡ್ಲೆ ಸುರುವಾತು.ಎದುರೆದುರಂದಲೇ ಇದೊಂದು ಗತಿಕೆಟ್ಟದು.ಎಷ್ಟು ನೋಡಿರೂ ಆವುತ್ತಿಲ್ಲೆ.ಕೂಸಪ್ಪದು ಮಾಣಿ ಆಗಿದ್ರೆ ಆಚವರಹಾಂಗೆ ಮೆಡಿಕಲಿಂಗೆ ಕಳುಸುತಿತೆ  ಹೇಳಿ ಕುಚ್ಚಣುಸಲೆ ಸುರು ಮಾಡಿದ. ಅದರಲ್ಲದ್ದ ತಪ್ಪಿನ ಹೇಳುವಗ ಎಂತಕಾರು ಈಮನೆಲಿ ಹುಟ್ಟಿದೆಪ್ಪಾ..ಹೇದು ಬೇಜಾರಪ್ಪಲೆ ಸುರುವಾತು ಕೀರ್ತಿಗೆ.
ರಾಮಣ್ಣಾಂಗೀಗ ಸತ್ವ ಪರೀಕ್ಶೆಯಕಾಲ.ಹೇಳ್ಲಕ್ಕು. ಒಂದರಿಯೇ ಮಾರಿ ಬಡುದಾಂಗೆ ಬಿರುಗಾಳಿ ಬಂದೆರಗಿತ್ತು. ಗಾಳಿಗೆ ಸುಮಾರು ಅರ್ದಕ್ಕರ್ದ ಹೇಳುವಾಂಗೆ ಅಡಕ್ಕೆ ಮರಮುರುದತ್ತು. ರಾಮಣ್ಣ ತಲೆಬೆಶಿಲಿ ತೋಟಕ್ಕಿಳ್ದನೇಇಲ್ಲೆ. ಆಳುಗಕ್ಕಂತೂ ಆ ಲಾಗಾಯ್ತು ಹಸಿಅಡಕ್ಕೆ   ತಂದು ತಂದು  ಹಾಕುವದೇಕೆಲ್ಸ. ಬರೇ ತಂದು ಹಾಕೀರೆ ಸಾಕೊ? ಮತ್ತೆ ಉರುವೆಡಕ್ಕೆಯ ಸೊಲ್ದು ಕೊರದು ಒಣಗುಸುವ ಕೆಲಸವೂ ಆಯೆಕು. ಎಷ್ಟು ಕೆಲ್ಸ ಮಾಡ್ಸಿರೂ ಅದಲ್ಲಿ ಬಪ್ಪ ಪೈಸೆ ಅವಕ್ಕೆ ಸಂಬಳ ಕೊಡುಲೇ ಸಾಕಾಗ! ಜಾಲಿಲಿ ರಾಶಿ ರಾಶಿ ಗುಡ್ಡೆ ಹಾಕಿದ ಉರುವೆಡಕೆಯ ಕಾಂಬಾಗ ಹೊಟ್ಟೆ ಬಾಯಿ ಬೇವಲೆ ಶುರುವಾದ ರಾಮಣ್ಣಂಗೆ ಮನಗಿರೆ ವರಕ್ಕು ಬಾರ. ಉಂಡ ಅಶನ ಗಂಟ್ಲಿಂದ ಇಳಿಯದ್ದ ಪರಿಸ್ಥಿತಿ!!! ಏನೊಂದೂ ತೋಚದ್ದೆ ಗೆಂಡ ತಲೆಗೆ ಕೈ ಮಡಗಿ ಕೂದ್ದು ಕಾಂಬಾಗ ಸೀತಕ್ಕಂಗೆ ಅಯ್ಯೋ ಪಾಪವೇ ಹೇಳಿ ಕಂಡತ್ತು. ಕುಂಬಾರಂಗೆ ವರುಷ ದೊಣ್ಣೆಗೆ ನಿಮಿಷ ಹೇಳುವ ಹಾಂಗೆ ಕೈಗೆ ಬಂದ ತುತ್ತು ಬಾಯಿಗೆ ಎತ್ತಿದ್ದಿಲ್ಲೆ ಹೇಳಿ ಬೇಜಾರಿದ್ದರೂ ಊರಿಲ್ಲಿ ಎಲ್ಲಿಯೂ ಬಾರದ್ದ ಗಾಳಿ ಇಲ್ಲಿಗೆ ಬರೆಕಾದರೆ. . . ಇದು ಕೇನಗೆ ಕಲ್ಲು ಮಡಗಿದ ಹಾಂಗೆ. ಗೆಂಡನ ದರ್ಪ, ಅಹಂಭಾವ, ದುಷ್ಟಪ್ರವೃತ್ತಿ ಅಡಗಿಸುವ ಸಲುವಾಗಿಯೇ ಹೀಂಗಿದ್ದ ಪ್ರಕೃತಿ ವಿಕೋಪಂಗ ಅಪ್ಪದು! ಹೆಂಡತಿ ಮಕ್ಕಯಾದರೆ ಹೆದರಿಸಿ ಬಾಯಿ ಮುಚ್ಚುಸಲೆ ಎಡಿಗು. ಆದರೆ ಪ್ರಕೃತಿಯೇ ಮುನಿದು ಶಪಿಸಿರೆ ಆರಿಂಗೆ ಎಂತ ಮಾಡುಲೆ ಎಡಿಗು ?!?! ಗೆಂಡ ಸರಿ ಆವುತ್ತರೆ ಇದುವೇ ಸಕಾಲ. ಕಾದಿಪ್ಪಗಲೇ ಕಬ್ಬಿಣವ ಬಡಿಯಕಷ್ಟೇ ಹೇಳಿ ಜಾನ್ಸಿ. . . .
ಗೆಂಡನ ಹತ್ರ ಮನಸಿಲಿಪ್ಪದರ ಎಲ್ಲಾ ಬಡಬಡನೆ ಹೇಳಿ ಮುಗಿಸಿತು. ಮದಲಾದರೆ ಹೆಂಡತಿ ಮಾತಿಂಗೆ ಎಂತ ಹೇಳ್ತಿತನೋ..? ಆದರೆ ಈಗ ಅದರ ಮಾತಿಲ್ಲಿಯೂ ಸತ್ಯಾಂಶ ಇದ್ದು ಹೇಳಿ ಕಂಡತ್ತೋ ಏನೋ. ಏನೂ ಪ್ರತಿಕ್ರಿಯೆ ಬಾರದ್ದೆ ಅಪ್ಪಾಗ ಸೀತಕ್ಕ ಧೈರ್ಯ ಮಾಡಿ ಎಷ್ಟೋ ದಿನಂದ ಮನಸ್ಸಿನೊಳವೇ ಇದ್ದ ವಿಚಾರವ ಹೆರ ಹಾಕಿತ್ತು. ಇದಾ. . . ನಾವಿಷ್ಟೊಂದು ಪ್ರಯತ್ನ ಮಾಡಿರೂ ಮಗಳಿಂಗೆಲ್ಲಿಯೂ ಆವುತ್ತಿಲ್ಲೆ. ಅದರ ಜಾತಕಲ್ಲಿ ಏನಾದರೂ ದೋಷವಿದ್ದೋ ಏನೋ. ಒಂದರಿ ಆರತ್ರರೂ ಒಳ್ಳೆ ಜೋಯಿಸರ ಹತ್ರೆ ತೋರಿಸಲಾವುತ್ತಿತು. ರಾಮಣ್ಣಂಗೆ ಎಂತಕಂಡತ್ತೋ. . ಇನ್ನು ಅದೊಂದು ಬಾಕಿ ಆದ್ದದು. ಅದೂ ಆಗಲಿ ಹೇಳಿ ಶಾಲು ಕುಡುಗಿ ಹೆಗಲಿಂಗೇರಿಸಿಗೊಂಡು ಹೆರಟೇ ಬಿಟ್ಟ. ಈಗ ಸೀತಕ್ಕನ ಮೋರೆಲಿ ಗೆಲುವಿನ ನೆಗೆ ಮೂಡಿ ಬಂತು.
ಜೋಯಿಸರು ಹೇಳಿದ ಪ್ರಕಾರ ದಂಪತಿಗ ಮಗಳನ್ನೂ ಕರಕೊಂಡು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೆರಟವು. ಅಲ್ಲಿ ನಿವೃತ್ತಿ ಎಲ್ಲ ಮಾಡ್ಸಿಕ್ಕಿ ಹೆರಡುವಾಗ ಹೊತ್ತು ಕಂತಿತ್ತು. ಅಷ್ಟೊತ್ತಿಂಗೆ ಮಳೆ ಮುಗಿಲು ಕಪ್ಪರಕಟ್ಟಿತು. ನೋಡಿಗೊಂಡಿದ್ದಂಗೆ ಮಳೆ ಸೊಯ್ಪಲೆ ಸುರುವಾತು. ಕಾರಿನತ್ರಂಗೆ ಬರೆಕನ್ನೆ. ಹೆಚ್ಚೆಚ್ಚೇ ಆಗಿಯೊಂಡು ಹೋತೇ ಹೊರತು, ಕಮ್ಮಿಯಪ್ಪ ಲಕ್ಷಣವೇ ಕಂಡತ್ತಿಲ್ಲೆ. ಈಗ ಸೀತಕ್ಕಂಗೆ ರಜ ಗಾಬರಿ ಆತು. ಮಾರಿ ಮಳೆಗೆ ಹೋಪದಾದರೂ ಹೇಂಗಪ್ಪ? ಮನೆಲಿ ಹೇಂಗಾರೂ ಮಕ್ಕವಿದ್ದವನ್ನೆ ಇಂದಿಲ್ಲೇ ಇದ್ದು ನಾಳೆ ಬೇಗ ಹೋದರಾಗದ ಕೇಳಿತು ಗೆಂಡನತ್ರೆ. ಅದೆಲ್ಲ ಆಗ ಹೇಂಗಾರೂ ಡ್ರೈವರುದೆ ಇದ್ದನನ್ನೆ. ಎಷ್ಟು ಹೊತ್ತಾದರೂ ಸರಿ ಇಂದೇ ಹೋಪದು ಹೇಳಿದ ರಾಮಣ್ಣ. ರಜ ಹೊತ್ತು ಕಾದಪ್ಪಗ ಮಳೆ ರಜ ಕಮ್ಮಿ ಆದಂಗೆ ಕಂಡತ್ತು.
ಅರ್ಧ ದಾರಿಗೆಲ್ಲಿಯಾರೂ ಎತ್ತಿದ್ದವೋ ಏನೋ ಪುನ ಜೆಡಿ ಕುಟ್ಟಿ ಮಳೆ ಸುರಿವಲೆ ಸುರುವಾಯೆಕೋ? ಅದು ಬರೀ ಮಳೆ ಮಾತ್ರ ಆದರಕ್ಕನ್ನೆ? ಗಾಳಿ ಸೆಡ್ಲಿನ ಆರ್ಭಟ ಬೇರೆ.. ಹಿಂದೆ ಹೋಪಲೂ ಅಲ್ಲ, ಮುಂದೆ ಹೋಪಲೂ ಅಲ್ಲ ಹೆಳುವ ಪರಿಸ್ಥಿತಿ.! ಇವರ ಗ್ರಹಚಾರವೋ ಹೇಳುವಾಂಗೆ ಆ ಹೊತ್ತಿಂಗೆ ಕಾರುದೆ ಕೈ ಕೊಡೆಕೊ.! ಏನೇನು ಪ್ರಯತ್ನ ಮಾಡಿರು ಕಾರು ಹಂದಿದ್ದಿಲ್ಲೆ. ದೆನಿ ಮುನಿ ಇಲ್ಲದ್ದ ಜಾಗ ಬೇರೆ. ಹತ್ತರೆ ಒಂದೇ ಒಂದು ಮನೆ ಕೂಡ ಕಂಡತ್ತಿಲ್ಲೆ ಅಲ್ಲಿ. ಒಂದೇ ಒಂದು ವಾಹನ ಬಂದರೂ ನಿಲ್ಲದ್ದೆ ಹೋತು. ಗಾಳಿಯ ರಭಸಕ್ಕೆ ಒಂದಕ್ಕೊಂದು ತಿಕ್ಕುವ ಬೆದುರು ಹಿಂಡಿನ ಅಜನೆಯೊಟ್ಟಿಂಗೆ ಛಟ್ ಛಟೀಲ್ ಎನ್ನುವ ಸೆಡ್ಲಿನ ಹೊಡೆತ ಬೇರೆ. ರಾಮಣ್ಣಂಗೀಗ ಹೆದರಿ ತೆಗಲೆ ಬಡಬಡ ಹೇಳ್ಲೆ ಸುರು ಆತು. ದೊಂಡೆ ಪಸೆ ಆರಿತ್ತು. ಜೀವನಲ್ಲಿ ಮೊದಲ ಸರ್ತಿ “ಸಂಕಟ ಬಂದಾಗ ವೆಂಕಟರಮಣ” ಹೇಳುವಂಗೆ ಅತೀವ ಭಯಭಕ್ತಿಂದ ಈ ಸಂಕಟಂದ ಬಚಾವ್ ಮಾಡು ದೇವರೇಹೇಳಿ ದೇವರಿಂಗೆ ಮೊರೆ ಹೊಕ್ಕ ನಾಸ್ತಿಕ ರಾಮಣ್ಣ. ಈವರೆಗೆ ದಾನಧರ್ಮ ಮಾಡದ್ದೆ ಸದ್ವಿನಿಯೋಗ ಮಾಡದ್ದೆ ಕೂಡಿ ಮಡಗಿದ ಏವದೇ ಸಂಪತ್ತು! ಗೆಂಟು ಈಗವನ ಸಹಾಯಕ್ಕಾಯ್ದಿಲ್ಲೆ! ಅದೆಷ್ಟೇ ಕೆಟ್ಟ ವ್ಯಕ್ತಿಯೇ ಆಗಿದ್ದರೂ ವಿನಾಶ ಆಯೆಕ್ಕರೆ ಮೊದಲು ಸರಿ ಅಪ್ಪಲೆ ಒಂದೇ ಒಂದು ಸರ್ತಿ ಸುವರ್ಣಾವಕಾಶ ಸಿಕ್ಕಿತು ಹೇಳುವಂಗೆ. . . ಎಷ್ಟೋ ಹೊತ್ತಾಪ್ಪಾಗ ಜೀಪೊಂದು ನಿಧಾನಕ್ಕೆ ಬಂದು ನಿಂದತ್ತು. ಯಬ್ಬಾ.! ಹೇಳಿ ರಾಮಣ್ಣ ಒಂದು ಸೊರಂಕು ತೆಗದ. ಆರನ್ನೂ ಸಾಧಾರಣಕ್ಕೆ ನಂಬದ್ದವಂಗೀಗ ಪುಕು ಪುಕು ಹೇಳ್ಲೆ ಸುರು ಆತು.
ಈಗ ಯೋಚನೆ ಮಾಡುವಷ್ಟು ಪುರುಸೊತ್ತಾದರೂ ಎಲ್ಲಿದ್ದು. ಒಬ್ಬ ಜವ್ವನಿಗ ಜೀಪಿಂದಿಳಿದು ಬಂದು ವಿಚಾರ್ಸುವಾಗ ಎರಡೇ ವಾಕ್ಯಲ್ಲಿ ಹೇಳಿ ಮುಗುಶಿದ ರಾಮಣ್ಣಾ. ಕಾರಿನೊಳಂದ ಕುಣುಕುಣುನೆ ಹೆಮ್ಮಕ್ಕ ಮಾತಾಡುದುರ ಕೇಳಿಸಿಕೊಂಡ ಆಗಂತುಕ ನಿಂಗ ಹವ್ಯಕರೇ ಹೇಳಿ ಗೊಂತಾತೆನಗೆ. ಹೀಂಗಿರ್ತ ಜಾಗೆಲಿ ಹೊತ್ತಲ್ಲದ ಹೊತ್ತಿಂಗೆ ಹೆಮ್ಮಕ್ಕ ಮಕ್ಕ ಇಪ್ಪಗ ಹೀಂಗೆ ಸಿಕ್ಕಿ ಹಾಕಿಯೊಂಡರೆ ಕತೆ ಗೋವಿಂದ. ಮದಲೊಂದರಿ ಇದೇ ಜಾಗೆಲಿ ಎಂತಾಯ್ದು ಹೆಳಿ ಗೊಂತಿದ್ದ? ಮಾಧ್ಯಮಂಗಳಲ್ಲಿ ನೋಡಿಪ್ಪಲೂ ಸಾಕು, ಅದೆಲ್ಲ ಈಗ ಬೇಡ. ಇಂದೇನೋ ಆನು ಬಂದೆ ಇನ್ನು ನಿಂಗ ಹೆದರೆಕಾದ್ದದಿಲ್ಲೆ. ಇಲ್ಲೇ ರಜ ದೂರಲ್ಲಿ ಎನ್ನ ಮನೆ ಇದ್ದು. ಇಂದೀಗ ಎನ್ನೊಟ್ಟಿಂಗೆ ಬಾರದ್ದೆ ಬೇರೆ ದಾರಿ ಇಲ್ಲೆ ನಿಂಗಗೆ. ಬನ್ನಿ ಹೋಪ ಹೇಳ್ವಲ್ಲೀಗ ರಾಮಣ್ಣಂಗೆ ಉಭಯ ಸಂಕಟ ಆತು. ಒಂದು ನಮೂನೆಗೆ ಆರನ್ನೂ ನಂಬದ್ದವಂಗೆ ಆ ಅಂತುಗೊಂತಿಲ್ಲದ್ದವನೊಟ್ಟಿಂಗೆ ಹೇಂಗಪ್ಪ ಹೋಪದು ಹೇಳುವ ಅನುಮಾನ ಸುರುವಾತು. ನಿಂಗಗೆ ಎನ್ನ ಮೇಲೆ ಅನುಮಾನ ಬೇಡ. ಇಲ್ಲಿ ಏವ ಹೊತ್ತಿಂಗೆ ಎಂತಕ್ಕೂ ಹೇಳಲೆಡಿಯ.ಹೇಳುವಾಗ ದೇವರ ಮೇಲೆ ಭಾರ ಹಾಕಿ ಹೆರಟವು.ಅವನಲ್ಲಿಗೆತ್ತುವಗ ಕೆಲಸದ್ದು ಬಂದು ಗೇಟು ತೆಗದತ್ತು.
ಒಳಹೋಗಿಕೂಪದ್ದೆ ಎಲ್ಲೋರಿಂಗೂ ಬೈರ್ವಾಸು ಕೊಟ್ಟು ಬಾತ್ರೂಮಿಂಗೆ ಕಳುಗಿ ಮತ್ತೆ ಬಂದಪ್ಪಗ ಸೊಳೆ ಹೊರ್ದದು, ಕಾಪಿಯೂ ಕೊಟ್ಟಿಕ್ಕಿ ಒಳಹೋಗಿ ಅಡಿಗೆ ಮಾಡ್ಲೆ  ಸುರುಮಾಡಿದ, ಸೀತಕ್ಕ   ಒಳಹೋಗಿ ನೋಡುವಾಗ ತರಕಾರಿ ಕೊಚ್ಚಿ ಅಡಿಗೆ ಮಾಡ್ತ ಕೈ ಚಳಕ ಕಂಡು ಆಶ್ಚರ್ಯ ಆತು.ಮನೆಯೂ ನಿರ್ಮಲವಾಗಿತ್ತು.
ಮತ್ತೆಲ್ಲರಿಂಗೂ ಊಟ ಆಗಿ ಹೆರ ಬಂದು ಕೂದ ಮೇಲೆ ಅವನೇ ಮಾತಿಂಗಿಳುದ. ಅವ ಹೇಳಿದ ಪ್ರಕಾರ ಅಲ್ಲಿ ಅವ° ಒಬ್ಬನೇ. ಒಟ್ಟಿಂಗೆ ಕೆಲಸದಾಳು. ಸೀತಕ್ಕ ಕುತೂಹಲ ತಡೆಯದ್ದೆ ಅಂಬಗ , ನಿಂಗಳ ಹೆಂಡತ್ತಿ, ಮಕ್ಕೊ? ಹೇಳಿಪ್ರಶ್ನೆ ಹಾಕುವಾಗ ಹೆಂಡತ್ತಿಯೂ ಇಲ್ಲೆ ಗಿಂಡತ್ತಿಯೂಇಲ್ಲೆ ಮದುವೆ ಆಗದ್ದಮೇಲೆ ಮಕ್ಕಳ ಪ್ರಶ್ನೆ ಇಲ್ಲೆನ್ನೆ ಹೇಳಿ ಪಕ ಪಕನೆ ನೆಗೆ ಮಾಡಿದ. ತಾನು ಹೆರಿಮಗ, ಅಬ್ಬೆ-ಅಪ್ಪತೀರಿ ಹೋಯಿದವು. ತಮ್ಮಂದ್ರು, ತ೦ಗೆಕ್ಕಳ ಜವಾಬ್ದಾರಿ ಹೊತ್ತು ತಂಗೆಕ್ಕೊಗೆ ಮದುವೆ ಆತು. ಹೇಳಿಗೊಂಡಪ್ಪಗ ಸೀತಕ್ಕನೆ ಎಲ್ಲ ವಿಚಾರ ಹೇಳಿತ್ತು. ಹಿಂಗೆ ಅತ್ತಿತ್ತ ಮಾತು ಮುಗುದ ಮೇಲೆ ರವಿ, ಈಗ ಬಂದೆ ಹೇಳಿಕ್ಕಿ ಒಳಹೋದವ ಅವಕ್ಕೆಲ್ಲ ಮನುಗಲೆ ಏರ್ಪಾಡು ಮಾಡಿದ. ಗಂಡುಸರಿಂಗೆ ಹೆರ ಚಾವಡಿಲಿಯೂ ಹೆಮ್ಮಕ್ಕೆಗೆ ಒಳವೂ ಮಲುಗುಲೆ ಏರ್ಪಾಡು ಮಾಡಿದ. ರಾಮಣ್ಣ ಮಾತ್ರ ಇರುಳಿಡಿ ವರಗಿದ್ದನೇ ಇಲ್ಲೆ. ಈ ಆಪದ್ಭಾಂಧವ ರವಿಯನ್ನೂ ತನ್ನನ್ನು ಹೋಲಿಸಿಕೊಂಡು ಮನಸಿಲ್ಲೇ ಚಿಂತನ ಮಂಥನ ಮಾಡಿಗೊಂಡು ಉದಿ ಮಾಡಿದ. ಉದಿಯಪ್ಪಗ ಮನಸಿಲಿ ಒಂದು ಸ್ಫಷ್ಟ ನಿರ್ಧಾರಕ್ಕೆ ಬಂದು ಮುಂದೆ ಹೀಂಗೀಂಗೆ ಹೇಳಿ ಸ್ಕೆಚ್ ಹಾಕಿಗೊಂಡು ರವಿ ಏಳುವಾಗ ಅವನೊಟ್ಟಿಂಗೇ ಎದ್ದು ಪ್ರಾತಃವಿಧಿ ಮುಗುಸಿಕ್ಕಿ ಹೆರ ಬಂದು ಪೇಪರ್ ಹಿಡಕೊಂಡು ಕೂದ. ಈಗ ಅವನ ಮನಸ್ಸಿನ ಒದ್ದಾಟ ರಜ ಕಮ್ಮಿ ಆತು.
ಅಬ್ಬೆ ಮಗಳು ಎದ್ದು ಬಪ್ಪಗ ಅಡಿಗೆ ಮಾಣಿ ಬಂದು ತಿಂಡಿಕಾಫಿಗೆ ಅಟ್ಟಣೆಗೆ ಹೆರಟಾಯ್ದು. ರಜ ಹೊತ್ತಿಲ್ಲೆ ತಿಂಡಿಕಾಫಿ ತಯಾರಾತು. ಎಲ್ಲರೊಟ್ಟಿಂಗೆ ಹರಟೆ ಹೊಡಕೊಂಡು ಬಿಸಿ ಬಿಸಿ ಕಾಫಿ, ತೆಳ್ಳವು ಚಟ್ನಿ, ಬೆಲ್ಲಸೂಳಿ ಕೂಡಿ ತಿಂದವು. ಸುಮಾರು ದಿನಂದ ತಲೆ ಬೆಶಿಲಿ ಸರಿಯಾಗಿ ಊಟತಿಂಡಿ ಮಾಡದ್ದ ರಾಮಣ್ಣ ಇಂದು ತೃಪ್ತಿಯಾಗಿ ಹೊಟ್ಟೆತುಂಬ ಗಡ್ದಿಂಗೆ ತಿಂದಿಕಿ ಡರ್ ಹೇಳಿ ತೇಗಿಯೊಂಡು ಎಲ್ಲ ಬಗೆಯೂ ರುಚಿಯಾಯ್ದು. ಹೊಟ್ಟೆ ತುಂಬಿದ್ದೇ ಗೊಂತಾಯ್ದಿಲ್ಲೆ ಮಾರಾಯ್ರೆ… ಸಮಾಕೆ ಹೊಡದೆ. ಅಂತು ಕಾರು ಹಾಳಾದ ಹೆಳೆಲಿ ನಿಂಗಳಲ್ಲಿಗೆ ಬಂದು ನಿಂಗಳ ಸತ್ಕಾರ ಕೈ ಅಡಿಗೆ ಉಂಬ ಯೋಗ ಇದ್ದೆಂಗಗೆ. ನಿಂಗೊಗೆಷ್ಟು ಕೃತಜ್ಞತೆ ಹೇಳಿರೂ ಕಮ್ಮಿಯೇ. ನಿಂಗಳೂ ಎಂಗಳಲ್ಲಿಗೆ ಬರೆಕು ಹೇಳಿ ಮನೆ ವಿಳಾಸ ಪೋನ್ ನಂಬ್ರ ಕೊಟ್ಟ ರಾಮಣ್ಣ. ಗೆಂಡ ಹಿಂದೆಂದೂ ಹೀಂಗೆ ಹರಟೆ ಹೊಡಕೊಂಡು ಕೊಶಿಲಿಪ್ಪದರ ಕಾಣದ್ದ ಸೀತಕ್ಕಂಗೀಗ ಪರಮಾಶ್ಚರ್ಯವೇ ಆತು.
ಹೆರ ಬಂದು ಅವರೊಟ್ಟಿಂಗೆ ಕೂದ ರವಿ ಈಗೆಂತ ಮಾಡುದು ಹೇಳಿ ನಿಂಗಳೇ ಹೇಳಿ ಯಜಮಾನರೇ ಕಾರು ರಿಪೇರಿ ಆದ ಮತ್ತೆ ಹೋದರೂ ಅಭ್ಯಂತರವಿಲ್ಲೆ ಅಥವಾ ನಿಂಗೊಗೆ ಈಗಲೇ ಹೋಯೆಕು ಹೇಳಿ ಆದರೆ ಆನೇ ನಿಂಗಳ ಮನೆಗೆ ಬಿಡುವೆ ಹೇಳುವಾಗ ರಾಮಣ್ಣ ಛೆ, ಛೆ ಅದೆಂತೂ ಬೇಡಪ್ಪ, ಎಂಗಳ ಮಾರ್ಗದ ಕರೆಂಗೆ ಬಿಟ್ಟರೆ ಸಾಕು. ಅಲ್ಲಿಂದ ಏನಾರೂ ಸಿಕ್ಕುಗು ಹೇಳುವಾಗ ಹೀಂಗಿರ್ತ ಎಡೆ ದಾರಿಲಿ ವಾಹನ ಸಿಕ್ಕುದು ಕಮ್ಮಿ ಆನು ನಿಂಗಳ ಮುಂದಾಣ ಸ್ಟಾಪಿಂಗೊರೆಗೆ ಬಿಡ್ತೆ. ಡ್ರೈವರು ಕಾರು ರಿಪೇರಿ ಮಾಡಿಕಿ ಬಕ್ಕು. ಅದಕ್ಕೆಲ್ಲ ಒಂದು ವ್ಯವಸ್ಥೆ ಮಾಡ್ತೆ. ಆನೆಂತಕೂ ಮಿಂದು ದೇವರಿಂಗೆರಡು ಹೂವು ಹಾಕಿ ಬತ್ತೆ ಹೇಳಿಕ್ಕಿ ಒಳ ಹೋದ. ರಜ ಹೊತ್ತಿಲೆ ಮಂತ್ರ ಹೇಳುದು ಕೇಳಿ ಬಂತು. ಕರ್ಪೂರ ಊದುಬತ್ತಿಯ ಪರಿಮಳವೂ ಮೂಗಿಂಗೆ ಬಡದತ್ತು. ಒಂದು ರೀತಿ ಒಳ್ಳೆ ವಾತಾವರಣ ಮೂಡಿ ಬಂತು. ಪೂಜೆ ಆಗಿ ಎಲ್ಲೋರಿಂಗೂ ಪ್ರಸಾದ ತಂದುಕೊಟ್ಟು ಸೀತಕ್ಕ ರಾಮಣ್ಣಂಗೆ ನಮಸ್ಕಾರ ಮಾಡಿದ ಸಂಪ್ರದಾಯವಂತ ರವಿ. ರಾಮಣ್ಣನೂ ರವಿಯೂ ಕಾರಿದ್ದಲ್ಲಿಂಗೆ ಹೋಗಿ ರವಿ ಕಾರು ಸ್ಟಾರ್ಟ ಮಾಡುಲೆ ನೋಡಿದ್ದೇ ತಡ, ಒಂದೇ ಸರ್ತಿಗೆ ಕಾರು ಸ್ಟಾರ್ಟಾಗಿಯೇ ಬಿಟ್ಟತ್ತು.!! ಒಂದು ರೌಂಡು ನೋಡಿ ಇನ್ನೆಂತು ತೊಂದರೆ ಆಗ ಕಾಣ್ತು ಎನಗೆ. ನಿಂಗ ಏವುದಕ್ಕೂ ಹೋಪ ದಾರಿಲೆಲ್ಲಾರು ಗ್ಯಾರೇಜಿಲಿ ತೋರ್ಸಿ ಹೇಳಿದ ರವಿ.
ಈಗಂತೂ ಸೀತಕ್ಕಂಗೆ ಭಾವೋದ್ವೇಗಲ್ಲಿ ದುಃಖ ಉಮ್ಮಳಿಸಿ ಬಂತು. ಆತ್ಮೀಯತೆಯಿಂದ ಒಂದರಿಯೇ ಬಹುವಚನಂದ ಏಕವಚನಕ್ಕಿಳಿದು ನೋಡು ರವಿ.. ಆನು ನಿನ್ನ ಒಡಹುಟ್ಟಿದ ಅಕ್ಕನ ಹಾಂಗೆಯೇ ಜಾನ್ಸಿಗ. ನೀನೆಷ್ಟು ದಿನ ಹೀಂಗೇ ಒಂಟಿಯಾಗಿರ್ತೆ ಹೇಳು. ನೀ ಆದಷ್ಟು ಬೇಗನೆ ಮದುವೆ ಆಯೆಕು. ಎಂಗಗೆ ಹೇಳಲೆ ಮರೆದಿಕ್ಕೆಡ. ಒಳ್ಳೆ ಕೂಸು ಸಿಕ್ಕಲಿ ಹೇಳಿ ಮನಸಾರೆ ಹಾರೈಸುತ್ತೆ ಹೇಳಿತು. ಹೋ.. ಅದಾ ವಿಷಯ? ಅದೆಲ್ಲ ಆಗದ್ದ ಹೋಗದ್ದ ವಿಚಾರ.. ಅಬ್ಬೆ ಇಪ್ಪಗಲೇ ಆ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಿಯೂ ಆಯಿದಿಲ್ಲೆಕ್ಕ°. ಹಳ್ಳಿಲಿ ಮಣ್ಣು ಪುರುಂಚುವ ಎನ್ನ ಹಾಂಗಿದ್ದ ಮಾಣಿಯಂಗಳ ಏವ ಕೂಸುಗ ಮದುವೆಯಾವುತ್ತವು ಹೇಳಿ ನೋಡಿ. ಒಂದು ಸರ್ತಿ ಹಳ್ಳಿ ಮಾಣಿ ಹೇಳುವ ಹಣೆಪಟ್ಟಿ ಅಂಟಿಯೊಂಡರೆ ಅಲ್ಲಿಯೇ ಮುಗದತ್ತು ಕತೆ. ಎನಗೀಗ ೩೬ ವರ್ಷಾತು. ಎನ್ನ ಜೀವನಲ್ಲಿ ಮದುವೆ ಹೇಳುವ ಅಂಕಣವನ್ನೇ ಅಳಿಸಿ ಹಾಕಿದ್ದೆ! ಹೇಳಿಯೊಂಡು ನೆಗೆ ಮಾಡಿ ಕೈ ಬೀಸಿ ಬೀಳ್ಕೊಟ್ಟ.
ಹಾಂಗೆ ಹೋಗಿ ಬಂದ ಮೇಲೆ ರಾಮಣ್ಣನ ನಡವಳಿಕೆಲಿ ತುಂಬಾ ಬದಲಾವಣೆ ಕಂಡತ್ತು. ಈಗವನ ಕೋಪ ತಾಪ ರೌದ್ರಾವತಾರ ಎಲ್ಲ ಗುಡ್ಡೆ ಹತ್ತಿತ್ತು! ಈಗ ಹೆಂಡತಿ ಮಕ್ಕಳ ಹತ್ರೂ ಮುಕ್ತವಾಗಿ ಮನ ಬಿಚ್ಚಿ ಮಾತಾಡ್ಲೆ ಸುರುಮಾಡಿದ. ಹಾಂಗೆಯೇ ಅವನನ್ನೇ ಅವಲಂಬಿಸಿದ ಕೆಲಸದಾಳುಗಕ್ಕೂ ಒಳ್ಳೆ ಕಾಲ ಬಂತು. ಹೆಂಡತಿಗೆ ಬಂಙ ಆವುತ್ತು ಹೇಳಿ ಮನೆಕೆಲಸಕ್ಕೊಂದು ಜೆನ ಮಾಡಿದ. ಅವನಲ್ಲಿದ್ದ ರಾಕ್ಷಸತ್ವ ಮರೆಯಾಗಿ ಮಾನವತ್ವ ಮನೆಮಾಡಿ ಈಗ ಹೆಸರಿಂಗೆ ತಕ್ಕ ಹಾಂಗೆ ಒಳ್ಳೇ ಮನುಷ್ಯನೇ ಆದ. ಮದುವೆಯಾಗಿ ಇಷ್ಟು ವರ್ಷ ಆದರೂ ಗೆಂಡನ ಕೆಟ್ಟ ವರ್ತನೆಯ ತನಗೇ ಬದಲಾಯಿಸಲೆಡಿಗಾಯ್ದಿಲ್ಲೆ. ಹಾಂಗಿಪ್ಪದರಲ್ಲಿ ಒಂದೇ ಒಂದು ಇರುಳಿಲ್ಲಿ ಬದಲ್ಸಿದ ಈ ರವಿ ಸಾಧಾರಣ ವ್ಯಕ್ತಿಯಲ್ಲ. ಅವ° ಬಾಯಿಲಿ ಎಂತ ಹೇಳದ್ರೂ ಅವನ ವ್ಯಕ್ತಿತ್ವ ಹೃದಯಸ್ಪರ್ಶಿ ಮಾತು ಇದಕ್ಕೆಲ್ಲ ಕಾರಣ ಹೇಳಿ ಸೀತಕ್ಕಂಗವನ ಮೇಲೆ ಮತ್ತಷ್ಟು ಅಭಿಮಾನ ಮೂಡಿಬಂತು. ಲೋಕಕ್ಕೆ ಸೂರ್ಯ ಮೂಡಿ ಉದಿ ಆವುತ್ತರೆ, ಸೀತಕ್ಕಂಗಂತೂ ರವಿಯ ನೆನಸಿಗೊಂಡೇ ಉದಿಯಕ್ಕಷ್ಟೆ. ಸೀತಕ್ಕಂಗೆ ರವಿ ಪ್ರಾತಃಸ್ಮರಣೀಯ ಆದ! ಅವನ ಪ್ರಭಾವವೇ ಅಂತಹದ್ದು ಹೇಳಲಕ್ಕು.
ಹೀಗೆ ರಜ ಸಮಯ ಕಳಿವಾಗ ಕೀರ್ತಿಗೆ ಒಳ್ಳೆ ಸಂಬಂಧ ಬಂತು. ಆ ಬಗ್ಗೆ ಅಬ್ಬೆ ಅಪ್ಪ° ಕೂದೊಂಡು ಮಾತಾಡುದರ ಕೇಳ್ಸಿಗೊಂಡ ಮಗಳು ಅಬ್ಬೆ ಹತ್ರ ಕೂದು ಇದುವರೆಗೆ ಆನು ನಿಂಗಳತ್ರೆ ಎನಗಾಗಿ ಏನೂ ಕೇಳಿದ್ದಿಲ್ಲೆ. ಆದರೆ ಈಗ ಎನ್ನ ಒಂದೇ ಒಂದು ಮಾತಿನ ನಿಂಗ ನೆಡೆಸಿಕೊಡ್ಲೇ ಬೇಕು. ನಿಂಗ ಎನಗಾಗಿ ಮಾಣಿ ಹುಡುಕುವ ಕೆಲಸ ಮಾಡೆಡಿ. ಎಷ್ಟೇ ಪ್ರಯತ್ನ ಮಾಡಿರೂ ಎನಗೆ ರವಿಯ ಮರೆವಲೆಡಿತಿಲ್ಲೆ. ಮದುವೆ ಆವುತ್ತರೆ ಅವನನ್ನೇ ಹೇಳಿ ಒಂದೇ ಮಾತಿಲಿ ಹೇಳಿ ಮುಗಿಶಿತ್ತು. ಅಬ್ಬೆ ಅಪ್ಪಂಗೆ ಆಶ್ಚರ್ಯವೇ ಆತು. ಬೇರೆ ಏವ ವಿಚಾರಲ್ಲಿಯೂ ಎರಡು ಮಾತಿಲ್ಲೆ. ಮಗಳೆ ಅವಂಗೆ ವರ್ಷ ಮೂವತ್ತಾರಾತು. ಅಲ್ಲದ್ದೆ ನಿನ್ನಷ್ಟು ಕಲಿವಿಕೆಯೂ ಇಲ್ಲೆ. ಆತುರದ ನಿರ್ಧಾರ ಮಾಡಿ ಮತ್ತೆ ಪಶ್ಚಾತ್ತಾಪ ಅಪ್ಪಲಾಗದ ಹೇಳಿದ ರಾಮಣ್ಣನ ಮಾತಿಂಗೆ ಅಪ್ಪ ಎನಗದೆಲ್ಲ ವಿಚಾರವೂ ಗೊಂತಿಪ್ಪದೇ. ಎಷ್ಟು ಜನ ಕಲ್ತು ಕೆಲಸಲ್ಲಿಪ್ಪ ಕೈ ತುಂಬಾ ಸಂಪಾದನೆ ಮಾಡುವ ಶ್ರೀಮಂತ ಮಾಣಿಯಂಗಳಲ್ಲಿ ಅವನಲ್ಲಿಪ್ಪಂತ ಸಂಸ್ಕಾರ ಹೃದಯವಂತಿಕೆ ಕಾಂಬಲಿಡಿಗು?
ಅದೇ ಇಷ್ಟ ಪಟ್ಟ ಮೇಲೆ ಮುಗದತ್ತಲ್ಲಿಗೆ. ಮತ್ತೆ ತಡವಲೆ ನಾವಾರು? ಇನ್ನು ಸುಮ್ಮನೆ ಮೀನ ಮೆಷ ಎಣುಸುದು ಬೇಡ. ಶುಭಸ್ಯ ಶೀಘ್ರಂ ಹೇಳುವ ಹಾಂಗೆ ನಾವು ಉದಿಯಪ್ಪಗೆ ಬೆಣಚ್ಚಿ ಬಿಡೆಕಾರೆ ಇಲ್ಲಿಂದ ಹೆರಡೆಕ್ಕು. ಅವನಲ್ಲಿ ಹೋಗಿ ಮಾತಾಡೆಕ್ಕು ಹೇಳಿತ್ತು ಸೀತಕ್ಕ ಅತೀವ ಉತ್ಸಾಹಂದ.
ಮಾರನೆ ದಿನ ಇವಲ್ಲಿಗೆ ಎತ್ತುವಾಗ ಎಲ್ಲಿಗೋ ಹೆರಟಿತ್ತಿದ್ದ ರವಿ. ಇವರ ಕಾಂಬದ್ದೇ ನೆಗೆ ಮಾಡಿಯೊಂಡು ಕಾರಿಂದಿಳಿದು ಬಂದು ಬನ್ನಿ ಬನ್ನಿ ಹೇಳಿಯೊಂಡು ಇಂದು ಉದಿಯಪ್ಪಗಳೇ ದಂಪತಿಗಳ ದರ್ಶನ ಆತು. ಹೆರಟ ಕೆಲಸ ಆದ ಹಾಂಗೆ ಇಂದುದೆ ಅಂದ್ರಾಣ ಹಾಂಗೆ ಕಾರು ಕೆಟ್ಟತ್ತೋ ಹೇಂಗೆ ಹೇಳಿದ ತಮಾಷೆಯಾಗಿ. ಎಂತಕೂ ಒಳಹೋಗಿ ಕಾಪಿ ಕುಡಿವ ಹೆಳಿ ಒಳ ಕರಕ್ಕೊಂಡೋಗಿ ಉಂಡೆ ಚಟ್ನಿ ಕಾಫಿ ಎಲ್ಲ ಆತು. ಈಗ ವಿಷಯಕ್ಕೆ ಬಪ್ಪ°. ಎಂಗಳ ಪೈಕಿ ಒಬ್ಬ ಮಾಣಿ ಇದ್ದ ಬೆಂಗಳೂರಿಲ್ಲಿ, ಒಳ್ಳೆ ಕೆಲಸಲ್ಲಿದ್ದ. ಎಲದರಲ್ಲು ನಿಂಗಳ ಮಗಳಿಂಗೆ ಹೇಳಿ ಮಾಡ್ಸಿದ ಯೋಗ್ಯ ಮಾಣಿ. ಎನ್ನ ತಂಗೆಯ ಮೈದುನನೇ ಹೇಳಿದ ರವಿ. ಅಷ್ಟಪ್ಪಗ ಸೀತಕ್ಕ ಅದೆಲ್ಲ ಹಾಂಗಿರಲಿ ರವಿ ಮೊದಾಲು ನಿನ್ನ ಮದುವೆ ವಿಷಯ ಎಂತಾತು ಹೇಳು. ಅದರ ಬಗ್ಗೆ ಮಾತಾಡುಲೇ ಇಂದಿಲ್ಲಿಗೆ ಬಂದದು. ಈ ಕೂಸು ಹೇಂಗಿದ್ದು ನೊಡು ಹೇಳಿ ಕೈಚೀಲಂದ ಒಂದು ಫೋಟೋ ತೆಗದು ಕೊಟ್ಟತ್ತು. ಅದರ ನೋಡಿದ ರವಿ ಇದು ರಜ ನಿಂಗಳ ಮಗಳ ಹೋಲಿಕೆ ಇದ್ದಂಗೆ ಕಾಣ್ತು. ನಿಂಗಳ ಅಕ್ಕತಂಗೆಕ್ಕಳ ಪೈಕಿ ಆಗಿಕ್ಕ ಕೇಳಿದ. ಈಗ ಸೀತಕ್ಕ ನೆಗೆ ಮಾಡಿಯೊಂಡು ಇದು ಎಂಗಳ ಮಗಳು ಕೀರ್ತಿದೇ ಫೋಟೋ ಅನುಮಾನವೇ ಇಲ್ಲೆ ಹೇಳುವಾಗ ಅಚ್ಚರಿ ಪಡುವ ಸರದಿ ರವಿದಾತು. ಎಂ.ಎಸ್ಸಿ ಕಲ್ತ ನಿಂಗಳ ಮಗಳೆಲ್ಲಿ ಆನೆಲ್ಲಿ? ಆನು ಹೇಳಿ ಕೇಳಿ ಹಳ್ಳಿ ಮುಕ್ಕ. ಇನ್ನು ಒಂದು ವಿಚಾರ ಎನ್ನ ಪ್ರಾಯದ ಬಗ್ಗೆ ಯೋಚಿಸಿದ್ದೀರ ಹೇಳುವಾಗ ಸುಮ್ಮನೆ ಕೂತ ರಾಮಣ್ಣ ಮಾತಾಡುಲೆ ಸುರುಮಾಡಿದ.
ಎಂಗಳ ಮಗಳು ನಿಂಗಳ ಮನಸಾರೆ ಮೆಚ್ಹಿದ್ದು ರವಿ, ಹೇಳಿಕ್ಕಿ ಈಗ ಹಣ್ಣು ಕತ್ತಿಯೂ ನಿನ ಕೈಲೇ ಇದ್ದು ಎಂತ ಮಾಡ್ತಿಯೋ ಮಾಡು. ಜಾತಕ ತೋರ್ಸೆಕ್ಕಾದರೆ ತೋರ್ಸಿಗೊ. ಹೇಳ್ಳುವಗ ಎನಗೆ ಜಾತಕಲ್ಲೆಲ್ಲ ಹೆಚ್ಚಿನ ನಂಬಿಕೆ ಇಲ್ಲೆ  ನಿಂಗೊಗೆಲ್ಲರಿಂಗೂ ಸಂಪೂರ್ಣ ಒಪ್ಪಿಗೆ ಆದರೆ ಎನ್ನ ಅಭ್ಯಂತರ ಇಲ್ಲೆ . ನಿಜ ಹೇಳೆಕ್ಕಾರೆ ಆನದರ ಆ  ರೀತಿಲಿ ನೋಡಿದ್ದೇ ಇಲ್ಲೆ.
ಋಣಾನುಬಂಧರೂಪೇಣ ಪಶುಪತ್ನಿಸುತಾಲಯ ಹೇಳುವಾಂಗೆ ಎನ್ನ ಹಣೆಬರಹ ಇದ್ದ ಹಾಂಗಾಗಲಿ ಹೇಳಿ ಮದುವಗೆ ಒಪ್ಪಿಗೆ ಕೊಟ್ಟ.  ರವಿಯ ಪಾಲಿಂಗದು ಯೋಚಿಸದ್ದೆ ಬಂದ ಭಾಗ್ಯ ಹೇಳ್ಲಕ್ಕು.
ಹೋಗಿ ಬಂದ ಅಬ್ಬೆಪ್ಪನ ಮೋರೆಲಿ  ಗೆಲವು ಕಂಡಪ್ಪದ್ದೆ ಮಗಳಿಂಗೆ ಎಲ್ಲವೂ ಅರ್ತ ಆತು. ಮಗಳ ಮೋರೆಲಿ ಹಿಂದೆ ಕಾಣದ್ದ ನಾಚಿಕೆ ಕಾಂಬಗ ಅವಕ್ಕೂ ಸಮಧಾನ ಆತು. ಹಳ್ಳಿಮಾಣಿಯ ಒಪ್ಪಿದ ತಂಗೆಯ ಬಗ್ಗೆ ಅಣ್ಣಂದ್ರಿಂಗೊಂದಾರಿ ಬೇಜಾರಾದರೂ ಬದ್ದ ದಿನ ಭಾವನ ನೋಡಿಯಪ್ಪಗ ತಂಗೆಯ ಆಯ್ಕೆ ಸರಿ ಕಡತ್ತು.
ಹೂಗೆತ್ತಿದ ಹಾಂಗೆ ರವಿ+ಕೀರ್ತಿ ಮದುವೆ  ಚೆಂದಕೆ ಒಟ್ಟಿಲ್ಲಿ ಕಳಾತು. ರಾಮಣ್ಣನೂ ಕೈ ಕುಂಟು ಮಾಡದ್ದೆ ಖರ್ಚು ಮಾಡಿದ. ಈಗ ಸೀತಕ್ಕಂಗೂ ನೆಮ್ಮದಿ ಆತು.ರಜದಿನಲ್ಲೇ ಕೀರ್ತಿ ತಾನು ಮೆಚ್ಹಿ ಮದುವೆಯಾದವನ ಮನಗೆದ್ದತ್ತು. ಅಂದು ಅಕಾಲಲ್ಲಿ ಮಳೆ ಬಂದು ಅರ್ಧ ದಾರಿಲಿ ಕಾರು ಹಾಳಾದ್ದು, ಮತ್ತೆ ನಿಂಗೊ ಸಿಕ್ಕಿ , ಇಲ್ಲಿಗೆ ಬಪ್ಪಾಂಗಾದ್ದದು, ಮರುದಿನ ನಿಂಗೊ ಮುಟ್ಟಿಯಪ್ಪಗ ಕಾರು ಸ್ಟಾರ್ಟ್ ಆದ್ದದು!!ಇದರೆಲ್ಲ ನೋಡುವಗ  ನಮ್ಮಿಬ್ರ ಸೇರ್ಸಲೆ ದೇವರ ತಂತ್ರ ಹೇಳಿ ಕಾಣುತ್ತಿಲ್ಲಿಯೊ? ಹೇಳುವಾಗ ರವಿ ಒಟ್ಟಿಲ್ಲಿ ನವಗೆ ಕಂಕಣ ಬಲ ಸೇರಿ ಬಯಿಂದು ಹೇಳಿಗೊಡು ಬಾಳಸಂಗಾತಿಯ ಪ್ರೀತಿಂದ ಆಲಿಂಗಿಸಿಗೊಂಡ.

 ~~~***~~~

 ಲೇ: ಶ್ರೀಮತಿ ಜಯಲಕ್ಷ್ಮಿ ಟಿ ಭಟ್ ಹೊಸಮನೆ
 ಮುಕ್ವೆ, ಪುತೂರು.

7 thoughts on “ಕಂಕಣ ಬಲ-೨೦೧೨ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಥಮ ಪ್ರಶಸ್ತಿ ವಿಜೇತ ಕಥೆ.-ಭಾಗ ೨

  1. ಕಥೆ ತುಮ್ಬಾ ಲಾಯಿಕ ಆಯ್ಧು. ಆದರೆ ಲೀಖಕಿಯ ಭಾವಚಿತ್ರ ಹಾಕಿಧರೆ, ನವಗೆ ಎಲ್ಲರಿನ್ಗು ಅವರ ಕಾಮ್ಬ ಅವಕಾಶ ಸಿಕ್ಕುತ್ತಿತ್ತು ಅಲ್ಲದಾ??

  2. ಕಥೆ ಲಾಯಕಿತ್ತು. ಕೀರ್ತಿಯ ರೀತಿಲಿ ಕೆಲವು ಕೂಸುಗೊ ಆದರೂ ಏಕೆ ಆಲೋಚನೆ ಮಾಡ್ಳಾಗ ?

  3. ಬಹು ಲಾಯಕ ಆಯ್ದು ಕತೆ. ಪ್ರಥಮಾರ್ಧಲ್ಲಿ ಅಲ್ಪ ಗಾದೆಗಳೂ ತುಂಬಿ ನಸುನಗೆಮಾಡಿಗೊಂಡೇ ಓದ್ವಾಂಗೆ ಇದ್ದು. ಕೀರ್ತಿಯ ಸರದಿ ಬಂದಪ್ಪಗ ವಿಷಯ ರಜಾ ಗಂಭೀರವಾಗಿ ಹೋವ್ತೋದು ಕಂಡತ್ತು. ಅಕೇರಿಗೆ ಶುಭಮುಕ್ತಾಯ. ಶ್ಲಾಘನೀಯ.

  4. ಒಳ್ಳೇ ನೀತಿ ಇಪ್ಪ ಕಥಾಶೈಲಿ ನಿಜಕ್ಕೂ ಅಭಿನಂದನೀಯ….

  5. ಕಥೆ ತುಂಬ ಚೆನ್ನಾಗಿ ಮೂಡೀ ಬಂದಿದೆ….

  6. ಕಥೆ ಪಸ್ಟ್ ಕ್ಲಾಸ್ ಇದ್ದು…. ಆದರೆ ರಜ ಫಾಸ್ಟ್ ಆಗಿ ಓಡಿದ ಹಾಂಗಾತು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×