Oppanna.com

ಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ – 2013

ಬರದೋರು :   ವಿಜಯತ್ತೆ    on   13/11/2013    13 ಒಪ್ಪಂಗೊ

ಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ- 2013

ಕುಂಬಳೆ:
ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾ ಮಂಡಲ ಸಹಯೋಗಲ್ಲಿ ಅಖಿಲ ಭಾರತ ಮಟ್ಟದ ವ್ಯಾಪ್ತಿಲಿ  ಪ್ರತಿವರ್ಷ ನಡದು ಬಪ್ಪ ಕಥಾಸ್ಪರ್ಧೆಯ 2013 ನೇ ಸಾಲಿನ ಫಲಿತಾಂಶ ಬಯಿಂದು.
ಈ ಸ್ಪರ್ಧೆಲಿ  ಪ್ರಥಮ ಬಹುಮಾನ  ಶ್ರೀಮತಿ ಅನಿತಾ ನರೇಶ್ಬರದ  “ದಾರಿ” ಕತೆ ಗೆದ್ದುಕೊಂಡಿದು.
ಇವು ವಕೀಲರಾದ ರಾಮ್ ನರೇಶ್, ಮಂಚಿ ಯವರ  ಪತ್ನಿಯಾಗಿ ಗೃಹಿಣಿಯಾಗಿದ್ದರೂ  ಕನ್ನ್ಡಡದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಿಗೊಂಡಿದವು..
ಇವು ಬರದ “ ಬಣ್ಣದ ಕಡ್ಡಿ” ಹೇಳ್ತ ಲಘು ಬರಹಗಳ  ಸಂಕಲನ ವೂ  ಒಂದು ಕಥಾಸಂಕಲನವೂ ಪ್ರಕಟ ಆಯಿದು.
ಅಂತರ್ಜಾಲಲ್ಲಿ “ಮಹತಿ” ಹೇಳುವ ಹೆಸರಿನ ಬ್ಲಾಗಿಲ್ಲಿಯೂ ಒಪ್ಪಣ್ಣ ಬಯಲಿಲ್ಲಿಯೂ ಇವು ಬರೆತ್ತೊವು.
ಅಲ್ಲದ್ದೆ ಬೆಂಗಳೂರಿನ ಕಾಲೇಜೊಂದರ  ಪ ಠ್ಯಲ್ಲಿ   ಇವರ ಲಘು ಬರಹ ಸೇರ್ಪಡೆಯಾಯಿದು.

ಇನ್ನು ದ್ವಿತೀಯ ಬಹುಮಾನ ಶಿರಸಿತಾಲೂಕಿನ ಹೊಸಳ್ಳಿಯ ಉಷಾನಾರಾಯಣ ಹೆಗಡೆಬರದ “ತಿಥಿ” ಕತಗೆ ಬಯಿಂದು.
ಇವು ಮಲೆನಾಡಿನ  ಕೃಷಿ ಕುಟುಂಬಲ್ಲಿಪ್ಪ ಗೃಹಿಣಿ. ಪ್ರಮುಖ ಪತ್ರಿಕೆಲಿ ಇವರ ಬರವಣಿಗೆ ಬಯಿಂದು. ನಮ್ಮ ಒಪ್ಪಣ್ಣ ಬಯಲಿನ ಕಥಾಸ್ಪರ್ಧೆಗೂ ಬರದ್ದವು.
ಇವರ “ನವಿಲುಗರಿ” ಹೇಳುವ ಕಥಾಸಂಕಲನ ಪ್ರಕಟಗೊಂಡಿದು.
ಹಾಂಗೇ  ತೃತೀಯ  ಬಹುಮಾನ  ನಮ್ಮ ಡಾ| ಲಕ್ಶ್ಮಿ ಜೆ ಪ್ರಸಾದ್ ಬರದ “ಹೊಂಗಿರಣ” ಕ್ಕೆ ಬಯಿಂದು.
ಬೆಳ್ಳಾರೆ ಪದವಿಪೂರ್ವ ಕಾಲೇಜಿಲ್ಲಿ ಉಪನ್ಯಾಸಕಿಯಾಗಿಪ್ಪ ಡಾ! ಲಕ್ಶ್ಮಿ ಒಳ್ಳೆ ಸಾಹಿತ್ಯ ಸಂಶೋಧಕಿಯೂ ಅಪ್ಪು.
ಸಂಸ್ಕೃತ  ಕನ್ನಡ, ಹಿಂದಿ ಈ ಮೂರರಲ್ಲೂ ಎಮ್.ಎ. ಮಾಡಿ, ಸಂಸ್ಕೃತಲ್ಲಿ  ಪ್ರಥಮ  ರೇಂಕ್ ಪಡದ್ದವು. ಇಪ್ಪತ್ತು ಕೃತಿಗಳನ್ನೂ ಪ್ರಕಟ ಮಾಡಿದ್ದವು.
ಇವಕ್ಕೆ ಮಹಿಳಾರತ್ನ, ಕರ್ನಾಟಕ ವಿಭೂಷಣ, ಕಲಾಜ್ಯೋತಿ, ಕಾವ್ಯಶ್ರೀ  ಹೀಂಗಿದ್ದ ಪುರಸ್ಕಾರಂಗಳೂ ಬಯಿಂದು.
ವಾಹ್…. ನಮ್ಮ ಹವ್ಯ್ಕಕ ಹೆಮ್ಮಕ್ಕಳ ಪೈಕಿ ಸಾಹಿತ್ಯಲ್ಲಿ ಹೀಂಗೆ ಇಷ್ಟೊಂದು ಪುರಸ್ಕಾರ  ಸಿಕ್ಕಿದ್ದದು ಬೇರೆ ಎನ ಗೊಂತಿಲ್ಲೆ.   ಅಸಾಧಾರಣ ಪ್ರತಿಭೆ!
ಇದೆಲ್ಲ ಗೊಂತಾಗಿಯಪ್ಪಗ ಸಂತೋಷಾತು.
ಈ ವರ್ಷ ಮೂಡಬಿದಿರೆ ಆಳ್ವಾಸ್ ನುಡಿಸಿರಿಗೆ ಪ್ರಕಟ ಆವುತ್ತ ವಿಶ್ವಕೋಶಕ್ಕೆ  ಸಂಶೋಧನಾತ್ಮಕ ಬರಹಕ್ಕೆ ಇವರನ್ನೇ  ಆಯ್ಕೆ ಮಾಡಿದ್ದವು. ಲಕ್ಶ್ಮಿಗೆ ಅಭಿನಂದನಗೊ.
~
ನಮ್ಮ ಕಥಾಸ್ಪರ್ಧೆಲಿ ತೀರ್ಪುಗಾರರಾಗಿ  ಸಕಾಯ ಮಾಡಿದವು
೧. ಈ ಹಿಂದೆ ಗೌರಮ್ಮ ಪ್ರಶಸ್ತಿ ವಿಜೇತೆಯೂ ಪ್ರಸ್ತುತ ಕಾಲೇಜೊಂದರ ಉಪನ್ಯಾಸಕಿಯೂ ಬರಹಗಾರ್ತಿಯೂ ಆದ ಶ್ರೀಮತಿ ಲಲಿತಾ ಲಕ್ಶ್ಮಿ ,ಸಿದ್ದಾಪುರ,
೨. ನಿವೃತ್ತ ಕನ್ನಡ ವಿಭಾಗದ ಪ್ರೊಫೆಸರ್ ಹಾಂಗೂಹೆಸರಾಂತ ಸಾಹಿತಿಗಳೂ ಆದ  ಡಾ| ಹರಿಕೃಷ್ಣ  ಭರಣ್ಯ,
೩. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆಯೂ ಖ್ಯಾತ ಲೇಖಕಿಯೂ ಆದ ಡಾ| ಮಹೇಶ್ವರಿ, ಯು.
ಇವು ಮೂರು ಜೆನ  ನವಗೆ  ಸ್ಪರ್ಧೆಲಿ  ಮಾರ್ಕು ಹಾಕ್ಲೆ  ಸಹಕರಿಸಿದೋರು.
~

 
~~~

13 thoughts on “ಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ – 2013

  1. ವಿಜೇತರಿಂಗೆ ಅಭಿನಂದನೆಗೊ.

  2. ಹೆಮ್ಮಕ್ಕ ಮುನ್ದೆ ಬರೆಕು. ಆಭಿನನ್ದನೆಗೊ.

  3. ಒಪ್ಪ ಕೊಟ್ಟವಕ್ಕೆ, ಬಹುಮಾನ ಬಂದವಕ್ಕೆ, ಹಾಂಗೇ ಕಥೆ ಬರದ ಇಪ್ಪತ್ತನಾಲ್ಕು ಅಕ್ಕ-ತಂಗೆಯಕ್ಕೊಗೂ ಮನದಾಳದ ಧನ್ಯವಾದಂಗೊ. ಬಂದ ಕತಗಳಲ್ಲಿ, ಈ ಮೂರು ಅಲ್ಲದ್ದೆ ಇನ್ನೂ ಕೆಲವು ಒಳ್ಲೆ ಕತಗೊ ಇದ್ದು. ಎಲ್ಲದಕ್ಕೂ ಬಹುಮಾನ ಬಾರನ್ನೆ! ಈ ಹದಿನೆಂಟು ವರ್ಷಲ್ಲಿ , ಹತ್ತು ವರ್ಷ ಅಪ್ಪಗ ದಶಮಾನೋತ್ಸವ ಮುಜುಂಗಾವಿಲ್ಲಿ ವಿಜೃಂಭಣೆಂದ ಮಾಡಿ, “ಹತ್ತೆಸಳು” ಹೇದು ಅಷ್ಟರವರೆಗಾಣ ಪ್ರಶಸ್ತಿ[ಪ್ರಥಮ ಬಹುಮಾನಿತ] ವಿಜೇತ ಕಥಾ ಸಂಕಲನವನ್ನೂ ಪ್ರಕಟ ಮಾಡ್ಸಿದ್ದಿಯೊ. ಇನ್ನೀಗ ಒಳ್ಲೆ ಕಥಗಳ ಹೆರ್ಕಿ [ಸದಾರಣ ೩೫ ] ಜೆರಾಕ್ಸ್ ಮಾದ್ಸಿ ಮಡ ಗಿದ್ದೆ. ಹೇಂಗೆ ಮುದ್ರಣ ಮಾಡ್ಸ್ವದು ಹೇಳಿ[ಆರ್ಥಿಕ ] ಯೋಚನೆ ಮಾಡಿಗೊಂಡಿದ್ದೆ ,ಇನ್ನೀಗ ಈ ಸರ್ತಿಯಾಣದ್ದನ್ನೂ ಸೇರ್ಸಿ ಮಾಡ್ಲಕ್ಕು. ಹೇಳಿ ಆವುತ್ತಾ ಇದ್ದು. ಎಲ್ಲರೂ ಸೇರಿ ಕೈ ಗೂಡ್ಸುವದಿದ್ದರೆ, ಆನು ರೆಡಿ. ಎಂತ ಹೇಳ್ತಿ?

  4. ಶುದ್ದಿ ಓದಿ ಕೊಶಿಯಾತು. ಬೈಲಿಂಗೆ ಹೆಮ್ಮೆ. ಅಕ್ಕಂದ್ರಿಂಗೆ ಅಭಿನಂದನೆಗೊ. ಶುದ್ದಿ ಹೇದ ವಿಜಯತ್ತಗೆ ಹರೇ ರಾಮ

  5. “ಹವ್ಯ್ಕಕ ಹೆಮ್ಮಕ್ಕಳ ಪೈಕಿ ಸಾಹಿತ್ಯಲ್ಲಿ ಹೀಂಗೆ ಇಷ್ಟೊಂದು ಪುರಸ್ಕಾರ ಸಿಕ್ಕಿದ್ದದು ಬೇರೆ ಎನ ಗೊಂತಿಲ್ಲೆ. ಅಸಾಧಾರಣ ಪ್ರತಿಭೆ”
    ನಿಂಗಳ ಅಭಿಮಾನ ಪ್ರೋತ್ಸಾಹ ಮತ್ತು ಗುರುತಿಸುವಿಕೆಗೆ ಆನು ಋಣಿ ವಿಜಯಕ್ಕ .
    ಆನು ಶಾಲಾ ಕಾಲೇಜುಗಳಲ್ಲಿ ಓದಿಗೊಂದು ಇಪ್ಪಗ ಕಥೆ ಬರೆತ್ತಾ ಇತ್ತಿದೆ .ಸುಮಾರು ಹೊಸ ದಿಗಂತ ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಅಮ್ಬಗ ಪ್ರಕಟ ಆಗಿತ್ತು ಅದರೆಲ್ಲರ ಸೇರ್ಸಿ ೨೦೦೫ ರಲ್ಲಿ ಮನೆಯಂಗಳದಿ ಹೂ ಹೇಳುವ ಕಥಾ ಸಂಕಲನ ಬಿಡುಗಡೆ ಆಗಿತ್ತು ಅದು ಬಿಟ್ರೆ
    11-12 ವರ್ಷದ ನಂತರ, ಒಪ್ಪಣ್ಣನ ಬೈಲಿಲಿ ಗೌರಮ್ಮ ಸ್ಮಾರಕ ಕಥಾ ಸ್ಪರ್ಧೆಗೆ ಕಥೆಗಳ ಕಳುಸುಲೇ ಹೇಳಿದ್ದರ ನೋಡಿ, ಆನು ಈ ಕಥೆ ಬರದ್ದು !ಇಷ್ಟರ ತನಕ ಆನು ಯಾವುದೇ ಸ್ಪರ್ಧೆಗೊಕ್ಕೆ ಕಥೆಯ ಕಳುಸಿದ್ದಿಲ್ಲೆ.ಹಾಂಗಾಗಿ ಈ ಬಾರಿ ಬಹುಮಾನ ಬಂದದು ಕುಶಿ ಆತು ಎನಗೆ !
    ಆನು ಕಥೆ ಬರವದರ ಮುಂದುವರಿಸುವ ಅಂದಾಜಿಲಿ ಇತ್ತಿಲ್ಲೆ ಆದರೆ ಮುಂದೆ ಕೂಡಾ ಕಥೆ ಸಾಹಿತ್ಯ ರಚನೆ ಮಾಡುವ ಹವ್ಯಾಸವ ಮುಂದುವರಿಸುಲೇ ಪ್ರೋತ್ಸಾಹ ನೀಡಿದ್ದಿ .ನಿಂಗೊಗೆ ಮತ್ತು ಪ್ರೋತ್ಸ್ಸಾಹಿಸಿದ ಎಲ್ಲೋರಿಂಗು ಧನ್ಯವಾದಂಗ

  6. ಬಹುಮಾನ ವಿಜೇತರಿಂಗೂ ಸ್ಪರ್ಧೆಲಿ ಭಾಗವಹಿಸಿ ಯಶಸ್ವಿಗೊಳುಸಿದವಕ್ಕೂಅಭಿನಂದನೆಗೊ.

    1. ಬಹುಮಾನ ವಿಜೇತರಿ೦ಗೆ ಹಾ೦ಗೂ ಪ್ರತಿವರ್ಷ ಉತ್ಸಹಲ್ಲಿ ಇದರ ನಡೆಶಿಗೊ೦ಡಿಪ್ಪ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರತಿಷ್ಠಾನದ ಸರ್ವ ಸದಸ್ಯರಿ೦ಗೂ,ವಿಶೇಷತಃ ವಿಜಯಕ್ಕ೦ಗೂ ಹಾರ್ದಿಕ ಧನ್ಯವಾದ೦ಗೊ. ಬಹುಮಾನ ಪುರಸ್ಕೃತರಿ೦ಗೆಲ್ಲರಿ೦ಗೂ ಅಭಿನ೦ದನಗೊ.

    2. ಪ್ರತಿವರ್ಷ ಉತ್ಸಹಲ್ಲಿ ಇದರ ನಡೆಶಿಗೊ೦ಡಿಪ್ಪ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರತಿಷ್ಠಾನದ ಸರ್ವ ಸದಸ್ಯರಿ೦ಗೂ,ವಿಶೇಷತಃ ವಿಜಯಕ್ಕ೦ಗೂ ಹಾರ್ದಿಕ ಧನ್ಯವಾದ೦ಗೊ. ಬಹುಮಾನ ಪುರಸ್ಕೃತರಿ೦ಗೆಲ್ಲರಿ೦ಗೂ ಅಭಿನ೦ದನಗೊ.

  7. ಅನಿತ, ಉಷ ಮತ್ತೆ ಲಕ್ಷ್ಮಿ ಈ ಮೂರೂ ಜನಕ್ಕೂ ಹೃತ್ಪೂರ್ವಕ ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×