ನನಸಾದ ಕನಸು – ಕಥೆ : ಅನ್ನಪೂರ್ಣ ಬೆಜಪ್ಪೆ

ನನಸಾದ ಕನಸುಅನ್ನಪೂರ್ಣ ಚಂದ್ರಶೇಖರ

-ಅನ್ನಪೂರ್ಣ ಬೆಜಪ್ಪೆ


ಓ ಮೊನ್ನೆ ಒಂದರಿ ಎನ್ನ ಹಳೇ ಪರಿಚಯದ ಕಮಲಮ್ಮನ ಮನೆಗೆ ಹೋಗಿತ್ತಿದ್ದೆ. ಹೋಗಿ ಆಸರಿಂಗೆ ಕುಡುದಾದಿಕ್ಕಿ ಅವರತ್ರೆ ನಿಂಗಳ ಮಗಳೆಲ್ಲಿದ್ದು ಹೇದು ಕೇಳಿಯಪ್ಪಗ ಒಳ ಎಲ್ಲಿಯಾದರೂ ಇಕ್ಕು ನಿಂಗೊ ಬಂದದು ಗೊಂತಾಯಿದಿಲ್ಲೆ ಆಯಿಕ್ಕು ಹೇಳಿದವು . ಅಂಬಗ ಆನು ದಿನಿಗೋಳ್ತೆ ಹೇಳಿ ಜಾನಕೀ..ಜಾನಕೀ…ಎಲ್ಲಿದ್ದೆ…ಎಂತಮಾಡ್ತಾ ಇದ್ದೆ…ಹೇದುಗೊಂಡು ಒಳ ಹೋದಪ್ಪಗ ಎಂತದೋ ಯೋಚಿಸಿಗೊಂಡು ಕೂದ ಜಾನಕಿಗೆ ಫಕ್ಕ ಎಚ್ಚರಿಕೆ ಆಗಿ ವಾಸ್ತವಕ್ಕೆ ಬಂತು.ಅದರ ಮೋರೆಲ್ಲಿ ಒಂದು ಗೆದ್ದ ಭಾವನೆ ಕಂಡುಗೊಂಡಿತ್ತು. 

 ಈ ಜಾನಕಿ ಹೇಳಿರೆ ಕೃಷ್ಣಪ್ಪ ಮತ್ತೆ ಕಮಲಮ್ಮನ ಒಂದೇ ಒಂದು ಮಗಳು. ಕೃಷ್ಣಪ್ಪ ಒಬ್ಬ ಕೃಷಿಕ. ಕಮಲಮ್ಮನುದೆ ಒಳ್ಳೆ ಉದಾರ ಗುಣದ ಕೆಲಸಲ್ಲಿ ಆಲಸ್ಯ ಇಲ್ಲದ್ದ ಗೃಹಿಣಿ. ಇವರೊಟ್ಟಿಂಗೇ ತೋಟ,ಗುಡ್ಡೆ,ದನ ಹೇದೊಂಡು ಬೆಳದ ಜಾನಕಿಯೂ ಅಪ್ಪ ಅಬ್ಬೆಯ ಹಾಂಗೆ ಒಳ್ಳೆ ಗುಣದ ಜಾನಕಿ ಒಳ್ಳೆ ಕಲ್ತ ಕೂಸು. ಕಾಂಬಲುದೆ ಚೆಂದ ಇದ್ದು. ಬೇಕಾದಷ್ಟು ಜಮೀನು ಇದ್ದು. ತೋಟದ ಕೃಷಿಯೊಟ್ಟಿಂಗೆ ಗೆದ್ದೆ ಬೇಸಾಯವೂ ಮಾಡ್ತವು.ದನಗಳನ್ನೂ  ಸಾಂಕುತ್ತವು.

ಕೃಷಿಗೆ ಬೇಕಾದಷ್ಟು ನೀರು ಇದ್ದ ಕಾರಣ ಗೆದ್ದೆ ತೋಟಲ್ಲಿ ಒಳ್ಳೆ ಲಾಯಿಕಕೆ ಬೆಳೆಯುದೆ ಬತ್ತು. ಆದರೆ  ಸರಿಕಟ್ಟು ಆಳುಗೊ ಸಿಕ್ಕದ್ದ ಕಾರಣ ಕೆಲಸ ಇವರ ಮೇಲುದೆ ಬೀಳ್ತಾ ಇಪ್ಪದು ಇವಕ್ಕೆ ರಜಾ ಕಷ್ಟ ಆವುತ್ತಾ ಇದ್ದತ್ತು.

 ಜಾನಕೀ ನೀ ಎಂತರ ಯೋಚನೆ ಮಾಡಿಗೊಂಡಿತ್ತದು ಕೇಳಿಯಪ್ಪಗ ಎಂತ ಇಲ್ಲೆ ಎನ್ನದೇ ವಿಷಯ ಹೇಳಿತ್ತು. ಎನಗೆ ಸುಮ್ಮನೆ ಕೂಬ್ಬಲೆ ಅರಡಿಯ. ಎಂತ ಎನ್ನತ್ರೆ ಹೇಳುಲಾಗದೋ ಕೇಳಿದೆ. ಹಾಂಗೆಂತ ಇಲ್ಲೆಪ್ಪ ನಿಂಗೊಗೆ ಆಸಕ್ತಿ ಇದ್ದರೆ ಹೇಳ್ತೆ ಹೇಳಿ ವಿಷಯಕ್ಕೆ ಬಂತು. ಇದಾ ಅತ್ತೆ.. ಆನು ಎಗ್ರಿಕಲ್ಚರಲ್ ಬಿಎಸ್ಸಿ ,ಎಂಎಸ್ಸಿ ಮಾಡಿದ್ದು.ಇನ್ನು ಪಿ.ಹೆಚ್.ಡಿ ಮಾಡೆಕ್ಕು ಹೇಳುದು ಎನ್ನ ಯೋಚನೆ. ಅಪ್ಪಂಗೆ ಎನ್ನ ಮದುವೆಯ ಯೋಚನೆ. ಆನಂತೂ ಈಗಲೇ ಮದುವೆ ಬೇಡಾಳಿ ಎಂತ ಹೇಳಿದ್ದಿಲ್ಲೆ. ಇಲ್ಲಿ ನಡದ ವಿಷಯ ಎಂತರ ಹೇದರೆ ಅಪ್ಪಂಗೆ ಕೃಷಿಯ ಕಷ್ಟ ಗೊಂತಿದ್ದ ಕಾರಣ ಆರಾದರೂ ಪೇಟೆ ಮಾಣಿ ಆಯೆಕ್ಕೂಳಿ ಇದ್ದರೆ ಎನಗೆ ಪೇಟೆಲಿಪ್ಪ ಮಾಣಿಗಿಂತ ಕೃಷಿ ಮಾಡಿಗೊಂಡು ಉದ್ಯೋಗ ಮಾಡುವವನೋ ಅಥವಾ ಬರೇ ಕೃಷಿ ಮಾಡುವವ ಆದರೂ ಅಕ್ಕು ಕಲಿಯುವಿಕೆ ಇದ್ದೊಂಡು ಒಳ್ಳೆ ಗುಣ ಇಪ್ಪ ಮಾಣಿ ಆದರೆ ಅಕ್ಕು ಹೇಳ್ತ ಅಭಿಪ್ರಾಯ. ಕೃಷಿ ಹೇಳಿರೆ ಎನಗೆ ಕೊಶಿಯೇ. ಅದರಲ್ಲೇ ಹೆಚ್ಚು  ಸಂಶೋಧನೆ ಮಾಡಿ ಸಾಧನೆ ಮಾಡಿ ಎಲ್ಲರಿಂಗೂ ಮಾದರಿ ಆಯೆಕ್ಕು ಹೇಳುವ ಕನಸು. ಅಬ್ಬೆಗುದೆ ಹಾಂಗೆ ಎನ್ನದೇ ಮನಸ್ಸು. ಎಂಗಳ ಅಭಿಪ್ರಾಯ ವ್ಯತ್ಯಾಸಂದಾಗಿ ಬಂದ ಪುದುಗೊ ಯಾವುದುದೆ ಸರಿಯಾಗಿಯೊಂಡಿತ್ತಿಲ್ಲೆ. ನೀ ಹೀಂಗೇ ಮಾಡಿಗೊಂಡು ಕೂದರಾಗ. ಪ್ರಾಯ ೨೩ ಕಳುದತ್ತು. ಮತ್ತೆ ಮಾಣಿ ಸಿಕ್ಕ ಹೇಳಿ ತಲೆಬೆಶಿಲಿ ಅಪ್ಪ ಪರಂಚುಲೆ ಶುರುಮಾಡಿದವು..

ಆನು ಎಡೇಲಿ ಬಾಯಿ ಹಾಕಿದೆ…. ಅಲ್ಲದಾ ಮೋಳೆ ಮತ್ತೆ. ಪ್ರಾಯ ಆದಂಗೆ ಮಾಣಿ ಸಿಕ್ಕುಲೆ ಕಷ್ಟ ಅಪ್ಪದು. ಈಗಾಣ ಕಾಲಲ್ಲಿಯೂ ಹೀಂಗೆ ಹೇಳ್ತ ಕೂಸುಗೊ ಇದ್ದವೋ.. ಎನಗೆ ಗೊಂತಿಲ್ಲೆಪ್ಪ ಹೇಳಿ ತಲೆಗೆ ಕೈ ಮಡಗಿದೆ.

ಅದೆಂತ ಅತ್ತೆ ನಿಂಗೊ ಹಾಂಗೆ ಹೇಳುದು.. ಕಲ್ತವೆಲ್ಲ ಪೇಟೆಗೇ ಹೋಗಿ ಕೂರೆಕ್ಕು ಹೇದಿದ್ದೋ… ಹಳ್ಳಿಲಿ ಆದರೆ ನಮ್ಮದೇ ಜಾಗೆಲ್ಲಿ ಆರಾಮಕೆ ನವಗೆ ಬೇಕಾದಂಗೆ ಇಪ್ಪಲಕ್ಕು.ಈಗ ಇಂಟರ್ನೆಟ್ಟುದೆ ಇದ್ದಕಾರಣ ನವಗೆ ಮನೆಲಿಯೇ ಕೂದೊಂಡು ಎಂತ ಕೆಲಸ ಬೇಕಾದರೂ ಮಾಡ್ಳಾವುತ್ತನ್ನೆ. ಮತ್ತೆಂತಕೆ ಪೇಟೆಲಿ ಆ ಪೆಟ್ಟಿಗೆಯಾಂಗಿಪ್ಪ ಮನೆಲಿ ಕೂದೊಂಡು ಕಷ್ಟ ಬಪ್ಪದು ಹೇಳಿತ್ತು. ಅಪ್ಪು ನೀ ಹೇಳುದೇ ಸರಿ. ಎಲ್ಲೋರೂ ಪೇಟೆ ಪೇಟೆ ಹೇದೊಂಡು ಕೂದರೆ ಕೃಷಿ ಮಾಡುದಾರು. ಉಂಬಲೆ ಅಶನವೇ ಆಗೆಡದೋ.. ಪೈಸೆಯ ತಿಂಬಲೆಡಿಯನ್ನೆ.. ನಿನ್ನ ನಿರ್ಧಾರವೇ ಸರಿ ಹೇಳಿ ಒಪ್ಪಿಗೊಂಡೆ. ನಿಲ್ಲಿ ಅತ್ತೇ ಆನು ಒಂದ್ರಜಾ ನೀರು ಕುಡುದಿಕ್ಕಿ ಬತ್ತೆ ಹೇಳಿ ಒಳ ಹೋತು. ಎಷ್ಟೊಳ್ಳೆ ಕೂಸು.ಆರಾದರೂ ಅದಕ್ಕಪ್ಪಾಂಗಿಪ್ಪ  ಮಾಣಿಯಂಗೊ ಇದ್ದವಾ ಹೇದು ಯೋಚಿಸಿಗೊಂಡು ಕೂದೆ. ಅಷ್ಟೊತ್ತಿಂಗೆ ಅತ್ತೆಗೆ ಈಗ ಎನಗೆ ಮಾಣಿ ಹುಡುಕ್ಕುದು ಯೋಚನೆ ಆಯಿಕಲ್ಲದಾ ಹೇದು ನೆಗೆ ಮಾಡಿಗೊಂಡು ಬಂತು. ಹೂಂ.. ಅದೆಲ್ಲಾ ಬಿಡು ನಿನ್ನ ವಿಷಯ ಇನ್ನೂ ಮುಗುದ್ದಿಲ್ಲೆ ಸುರು ಮಾಡು ಹೇಳುಲೆ ಹೇಳಿ ಕೈ ಕಟ್ಟಿ ಕೂದೆ.

 ಅಪ್ಪ ಒಂದರಿ ಎಂಜಿನಿರಿಂಗ್ ಮಾಡಿ ಬೆಂಗ್ಳೂರಿಲ್ಲಿ ಒಳ್ಳೆ ಕಂಪನಿಲ್ಲಿ ಉದ್ಯೋಗಲ್ಲಿಪ್ಪ ಮಾಣಿ ನಿನಗೆ ಅಕ್ಕೋ ನೋಡು ಹೇದು ಮಾಣಿಯ ಪಟ ತೋರುಸಿದವು. ಎನ್ನ ದೋಸ್ತಿ ಜಾತಕ ತರುಸಿ ಕೊಟ್ಟದು. ಜಾತಕಲ್ಲಿ ಎಂತ ತೊಂದರೆ ಇಲ್ಲೆ ಹೇಳೀಯಪ್ಪಗ ಎನಗೆ ಎಂತ ಮಾಡೆಕ್ಕೂಳಿ ಗೊಂತಾಗ. ಮಾಣೀ ಕಾಂಬಲೆ ಯೋಗ್ಯನಂಗೆ ಕಂಡ್ರೂ ಏಕೋ ಎನಗೆ ಇಷ್ಟಾಯಿದಿಲ್ಲೆ. ಆದರೆ ಅಪ್ಪನ ಎಷ್ಟೂಳಿ ಬೊಡುಶುದು ಗ್ರೈಶಿ ಮನಸ್ಸಿಲ್ಲದ್ದ ಮನಸ್ಸಿಂದ ಹೂಂ ಹೇಳಿದೆ. ಮತ್ತೆ ಅವರತ್ರೆ ಇವರತ್ರೆ ಹೇಳಿ ಮಾತಾಡಿ ಕಡೇಂಗೂ ಮದುವೆ ಬದ್ದದ ದಿನವೂ ನಿಘೆಂಟು ಆತು. ಮತ್ತೆಂತಾತೂಳಿ ಗೊಂತಿಲ್ಲೆ,ಎರಡು ದಿನ ಕಳುದಪ್ಪಗ ಈ ಸಂಬಂಧ ಬೇಡಾ ಹೇಳಿ ಅಲ್ಲಿಂದ ಫೋನು ಬಂತದಾ.ಅಪ್ಪಂಗೆ ಒಟ್ಟಾರೆ ತಲೆಬೆಶಿ. ಎನಗೆ ಕೊಶಿ.ಆನು ಅಪ್ಪನ ಸಮಾಧಾನ ಮಾಡಿದೆ. ಅದರೆಡೇಲಿ ಒಂದು ದಿನ ಆನು ಅಪ್ಪನೊಟ್ಟಿಂಗೆ ಒಂದು ಮದುವೆಗೆ ಹೋಗಿತ್ತಿದ್ದೆ, ಎನಗೆ ಹೆಚ್ಚು ಪರಿಚಯ ಇಲ್ಲದ್ದ ಕಾರಣ ಅಪ್ಪನೊಟ್ಟಿಂಗೇ ಇತ್ತಿದ್ದೆ. ಅಲ್ಲಿ ಅಪ್ಪ ಅವರ ಒಬ್ಬ ಗುರ್ತದ ಮಾಣಿಯೊಟ್ಟಿಂಗೆ ಮಾತಾಡಿಗೊಂಡಿತ್ತವು. ಅವ ಕಲ್ತದು ಎಂ.ಬಿ,ಎ ಅಡ. ಆದರೆ ಈಗ ಅಪ್ಪಂಗೆ ಕಷ್ಟ ಆವ್ತೂಳಿ ಕೆಲಸ ಬಿಟ್ಟು ಕೃಷಿ ಮಾಡ್ಳೆ ಮನೆಲೇ ಇದ್ದೆ ಹೇಳಿದ°. ಕೃಷಿ ಮಾಡಿಗೊಂಡು ಎಂತಾರೂ ಕೆಲಸ ಮಾಡ್ಲೆಡಿಗಾದರೆ ಮಾಡುದು.ಇಲ್ಲದ್ದರೆ ಇಲ್ಲೆ. ನವಗೆ ಜಾಗೆ ಇಪ್ಪಗ ಕೃಷಿ ಅಲ್ಲದೋ ಮುಖ್ಯ ಹೇಳಿದ°. ಅವನ ಮಾತು ಕೇಳಿ ಎನಗೆ ಕೊಶಿ ಆತು. ಅವ ಎನ್ನತ್ರೂ ಮಾತಾಡಿದ°. ಎಂಗೊ ಮಾತಡಿಗೊಂಡಿಪ್ಪಗ ಅಪ್ಪ ಆರೋ ದಿನಿಗೋಳಿದವೂಳಿ ಅತ್ಲಾಗಿ ಹೋದವು. ಅವಂಗೂ ಎನ್ನ ಕೊಶಿ ಆತೂಳಿ ಕಾಣ್ತು. ಅಕೇರಿಗೆ ಎನಗೆ ಮದುವೆ ಆಯಿದಿಲ್ಲೆ, ಇಷ್ಟ ಆದರೆ ಆನು ನಿನ್ನ ಮದುವೆ ಆವುತ್ತೆ ಹೇದು ನೇರವಾಗಿ ಹೇಳಿದ. ಎನ್ನ ಬಗ್ಗೆ ಮೊದಲೇ ಅವ ಅಪ್ಪನತ್ರೆ ಕೇಳಿ ತಿಳುದ್ದ ಕಾಣುತ್ತು. ಆನು ಅಂಬಗ ಎಂತ ಹೇಳದ್ದೆ ಮಾತು ಬದಲಿಸಿ ಅಲ್ಲಿಂದ ಹೋದೆ. ಮನೆಗೆ ಬಂದಮತ್ತೂ ಅದೇ ಯೋಚನೆ ಬಂದುಗೊಂಡಿತ್ತು. ಆದರೆ ಅಪ್ಪನತ್ರೆ ಹೇಳುಲೆ ಧೈರ್ಯ ಸಾಲ. ಹಾಂಗೆ ಅದೇ ಯೋಚನೆಲ್ಲಿಯೇ ದಿನ ಸುಮಾರು ಕಳುದತ್ತು. ಅದರೆಡೇಲಿ ಎಂಗ ಒಂದು ಸರ್ತಿಯೂ ಭೇಟಿ ಆಯಿದೂ ಇಲ್ಲೆ. ಪೋನು ನಂಬರು ತೆಕ್ಕೊಳದ್ದ ಕಾರಣ ಫೋನು ಕೂಡಾ ಮಾಡಿ ಮಾತಾಡಿದ್ದಿಲ್ಲೆ.

“ಛೆ ನೀ ಎಂತ ಕೂಸೆ ಹೀಂಗೆ, ಆರತ್ರಾದರೂ ನಂಬರು ಕೇಳಿಯಾದರೂ ಮಾತಾಡುಲಾವುತಿತ್ತನ್ನೆ” ಹೇಳಿದೆ ನೆಗೆಮಾಡಿಗೊಂಡು. ಅದೆಲ್ಲಾ ಎಂತಕೆ ಅತ್ತೆ, ಎನಗೆ ಅದೆಲ್ಲಾ ಇಷ್ಟ ಇಲ್ಲೆ ಹೇಳಿತ್ತು.

ಸರಿ ಬಿಡು ಆ ವಿಷಯ. ಮತ್ತೆಂತಾತು ಹೇಳು. ಅಲ್ಲಿಗೆ ನಿಂದತ್ತೋ ನಿಂಗಳ ಮಾತುಕತೆ ಎಲ್ಲಾ.. ಕೇಳಿದೆ. ಇಲ್ಲೆ ಅತ್ತೆ ಇನ್ನು ಇದಾ ವಿಷಯ ಇಪ್ಪದು. ಹೇಳುದರ ಕೇಳಿ ಮೊದಾಲು ಹೇಳಿತ್ತು. ಒಂದು ದಿನ ಅಪ್ಪ ಯಾವುದೋ ಒಂದು ಜೆಂಬ್ರಕ್ಕೆ ಹೋಗಿತ್ತಿದ್ದವು. ಆ ದಿನ ಅಪ್ಪ ಬೇಗ ಮನೆಗೆ ಬಂದವೇ ಎಂತೋ ತಲೆಬೆಶಿ ಮಾಡಿಗೊಂಡು ಅಂಗಿ ತೆಗದು ಈಸಿಚೇರಿಲ್ಲಿ ಕೂದ್ದದು ಕಂಡತ್ತು. ಆನು ಹೋಗಿ ಎಂತಪ್ಪ ಉಷಾರಿಲ್ಲೆಯಾ…ಎಂತಾತು..ಕೇಳಿದೆ. ಅಷ್ಟು ಕೇಳಿದ್ದೇ ತಡ ಅಪ್ಪನ ಕಣ್ಣಿಂದ ನೀರು ಬಂತು. ಎನ್ನ ಕ್ಷಮಿಸಿ ಬಿಡು ಮೋಳೇ..ಆನು ಇಷ್ಟುದಿನ ತಪ್ಪು ಮಾಡಿದೆ..ಹೇಳಿಯಪ್ಪಗ ಆನು ಅಪ್ಪನ ಸಮಾಧಾನ ಮಾಡಿ ಎಂತಾತಪ್ಪ…ವಿಷಯ ಎಂತರ ಹೇಳಿಕ್ಕಿ ಹೇಳಿದೆ. ಅದು ಮೋಳೇ…ಕಳುದ ವಾರ ಒಬ್ಬ ಮಾಣಿಯ ಪಟ ತೋರಿಸಿಯಪ್ಪಗ ನೀ ಬೇಡ ಹೇಳಿದ್ದಿಲ್ಲೆಯಾ.. ಆ ಮಾಣಿಗೆ ಅಲ್ಲಿ ಅಮೇರಿಕಲ್ಲಿ ಪ್ಪಗ ಬೇರೆ ಮದುವೆ ಆಗಿ ಅದು ಸರಿ ಆಗದ್ದೆ ಬಿಟ್ಟು ಎಲ್ಲ ಆಯಿದಡ..ಅವನ ವರ್ತನೆದೆ ಸರಿ ಇಲ್ಲೆ ಹೇಳಿ ಅಲ್ಲಿ ಒಬ್ಬರು ಬೇರೆಯವರತ್ರೆ ಹೇಳುದು ಕೇಳಿತ್ತು. ಎನಗೆ ಒಂದಾರಿ ಮೈ ಜುಂ ಹೇಳಿತ್ತು. ಎಲ್ಲಿಯಾದರೂ ನೀ ಒಪ್ಪಿ ಮದುವೆ ನಿಘಂಟು ಮಾಡಿತ್ತಿದ್ದರೆ ಹೇಳೀ ಗ್ರೈಶಿಯೇ ಎನಗೆ ತಲೆ ತೆರುಗಿದಾಂಗೆ ಆತು. ದೇವರು ದೊಡ್ಡವ.. ಹೇಳಿಗೊಂಡು ಸೀತಾ ಮನೆಗೆ ಬಂದದಿದ.. ಹೇಳಿದವು. ಅದಕ್ಕೆಲ್ಲಾ ಅಷ್ಟು ಗಾಬರಿ ಅಪ್ಪಲೆ ಎಂತ ಇದ್ದು.ಈಗ ಎಂತ ಮದುವೆ ಆಯಿದಿಲ್ಲೆನ್ನೆ ಹೇಳಿ ಹೇಳಿದೆ. ಅಷ್ಟಪ್ಪಗ ಆನು ಪುನಾ ಅಪ್ಪೋ ಮೋಳೆ ನಿನ್ನ ಯೋಗ ಒಳ್ಳೆದಿದ್ದತ್ತು.ಆದ್ದದೆಲ್ಲಾ ಒಳ್ಳೆದಕ್ಕೇ ..ಮತ್ತೆಂತಾತು ಹೇಳು ಹೇಳಿ ಶುರುಮಾಡಿದೆ ರಾಗ.

ಮತ್ತೆಂತರ ಅಪ್ಪದು.ಇದಾ ಮೋಳೇ “ದೂರದ ಬೆಟ್ಟ ನುಣ್ಣಗೆ” ಹೇಳುದು ಈಗ ಅರ್ಥ ಆತಿದಾ..ಇನ್ನು ಆನು ನಿನ್ನ ಮದುವೆ ಬಗ್ಗೆ ಎಂತೂ ಹೇಳುತ್ತಿಲ್ಲೆ. ನಿನಗೆ ಇಷ್ಟ ಇಪ್ಪ ಮಾಣಿಯನ್ನೇ ಮದುವೆ ಆಗಿಗೋ ಹೇಳಿದವು. ನಿನ್ನ ಮನಸ್ಸಿಲ್ಲಿ ಆರಾದರೂ ಇದ್ದರೆ ಹೇಳು ಹೇಳಿದ್ದೇ ತಡ ಎನಗೆ ಸ್ವರ್ಗವೇ ಸಿಕ್ಕಿದಾಂಗೆ ಆತು ಒಂದಾರಿ. ಮತ್ತೆ ಪುನಾ ಚಿಂತೆ ಆತು. ಅಂದು ಕಂಡ ಆ ಮಾಣಿಗೆ ಮದುವೆ ಆದಿಕ್ಕೋ ಏನೋ ಹೇದು. ಆದರೂ ಧೈರ್ಯ ಮಾಡಿ ಅಪ್ಪನತ್ರೆ ಆ ವಿಷಯ ಹೇಳಿಯಪ್ಪಗ ಈಗ ಅಪ್ಪಂಗುದೆ ಕೊಶಿ ಆತು. ಅವನ ಬಗ್ಗೆ ಅಪ್ಪಂಗುದೆ ಒಳ್ಳೆ ಅಭಿಪ್ರಾಯ ಇತ್ತು. ಆನು ಈಗಲೇ ಕೇಳಿ ತಿಳಿತ್ತೆ ಹೇಳಿದವು ಆರಿಂಗೋ ಫೋನು ಮಾಡಿದವು. ಮಾತಾಡುವಗಳೇ ಅವಂಗೆ ಮದುವೆ ಆಯಿದಿಲ್ಲೆ ಹೇಳೂದು ಎನಗೆ ಗೊಂತಾತು.ಎನ್ನ ಕೊಶಿಗೆ ಎಣೆಯೇ ಇಲ್ಲೆ ನೋಡಿ ಅತ್ತೆ .. ಅಪ್ಪನ ಗಟ್ಟಿ ತಬ್ಬಿ ಹಿಡ್ಕೊಂಡೆ. ಅಪ್ಪಂಗೂ ಕೊಶಿ ಆತು. ಇದರೆಲ್ಲಾ ಕೇಳೀಗೊಂಡು ಅಲ್ಲೇ ಕರೇಲಿ ನಿಂದೊಂಡಿತ್ತ ಅಬ್ಬೆಗೂ ಕೊಶಿ ಆತು. ಇನ್ನು ಮುಂದೆ ಹೇಳೇಕ್ಕೂಳಿ ಇಲ್ಲೆನ್ನೆ…. ಅದು ಇದು ಹೇಳಿ ಮಾತು ಕತೆ ಎಲ್ಲಾ ಆಗಿ ಈಗ ಎಂಗಳ ಮದುವೆ ನಿಶ್ಚಯವುದೆ ಆಯಿದಿದಾ…ಕಾಗದ ಕಳುಸುತ್ತೆಯೋ ಎಲ್ಲರೂ ಬರೆಕು ಹೇಳುಗ ಅದರ ಕಣ್ಣಿಲ್ಲಿ ನೀರು ಹನಿವದು ಕಂಡತ್ತು. ಹೀಂಗಿಪ್ಪ ಕೂಸುಗ ಇದ್ದರೆ ಮಾಂತ್ರ ಈ ದೇಶ ಉದ್ಧಾರಕ್ಕಷ್ಟೆ ಹೇದು ಎನ್ನಷ್ಟಕೆ ವಿಚಾರ ಮಾಡಿಗೊಂಡಿಪ್ಪಗ ಕಮಲಮ್ಮ ಕಾಫಿ ಮಾಡಿ ತೆಕ್ಕೊಂಡು ಬಂತು. ಇದಾ ಪಾರ್ವತಿ ಎಂಗಳ ಮಗಳ ಮದುವೆ ನಿಘೆಂಟಾಯಿದು. ಎಲ್ಲರೂ ಬಂದು ಸುಧಾರುಸಿ ಕೊಡೆಕು ಹೇಳಿತ್ತು. ಅಕ್ಕು ಕಮಲ.. ಎಲ್ಲಾ ಜಾನಕಿ ಹೇಳಿತ್ತಿದಾ..ಖಂಡಿತ ಬತ್ತೆಯೋ°..ನಿನಗೆ ಒಳ್ಳೆದಾಗಲಿ ಅಬ್ಬೋ ಹೇಳಿ ಆಶೀರ್ವಾದ ಮಾಡಿಕ್ಕಿ ಕಾಫಿ ಕುಡುದು ಮುಗುಶಿಕ್ಕಿ ಆನಿನ್ನು ಬತ್ತೆ ಆಗದೋ ಹೇಳಿ ಮನೆಗೆ ಬಂದೆ.ಆ ಮನೆಲ್ಲಿ ಈಗ ಹಬ್ಬದ ವಾತಾವರಣ.

~~***~~

-ಅನ್ನಪೂರ್ಣ ಬೆಜಪ್ಪೆ

ಶರ್ಮಪ್ಪಚ್ಚಿ

   

You may also like...

18 Responses

 1. ಚೆನ್ನೈ ಬಾವ says:

  ಒಪ್ಪ ಆಯಿದು ಕತೆ .

  • ಅನ್ನಪೂರ್ಣ says:

   ಕಥೆ ಮೆಚ್ಚಿ ಕಥೆಗೊಂದು ಒಪ್ಪ ಕೊಟ್ಟ ನಿಂಗಗೆ ಅನಂತ ಧನ್ಯವಾದಂಗ..

 2. ಪ್ರಸನ್ನಾ ವಿ ಚೆಕ್ಕೆಮನೆ says:

  ಒಪ್ಪೊಪ್ಪ ಕತೆ.ಜಾನಕಿ ಹಾಂಗಿದ್ದ ಕೂಸುಗೊ ನಮ್ಮ ಕತೆಗಳಲ್ಲಿ ಮಾತ್ರ ಇಪ್ಪದಾ ಹೇದು ಕಾಣ್ತೆನಗೆ.
  ಕತೆಯ ವಿಷಯದ ಆಯ್ಕೆ, ನಿರೂಪಣೆ ಎರಡೂ ಲಾಯ್ಕ ಆಯಿದು. ಅಭಿನಂದನೆ ಅನ್ನಪೂರ್ಣಂಗೆ

  • ಅನ್ನಪೂರ್ಣ says:

   ಮೆಚ್ಚುಗೆಯ ಪ್ರೋತ್ಸಾಹ ದ ನುಡಿಂದ ತುಂಬಾ ಖುಷಿ ಆತು ಪ್ರಸನ್ನಾ.. ಹೃದಯಾಂತರಾಳಂದ ಧನ್ಯವಾದಂಗ..

 3. ಪಂಕಜ ರಾಮ ಭಟ್ says:

  ಕಥೆ ಲಾಯಿಕಿದ್ದು ಜಾನಕಿ ಹಾಂಗಿದ್ದ ಕೂಸು ಈಗ ಇಕ್ಕ ಎಲ್ಲೋರಿಂಗೂ ಪೇಟೆಯೇ ಅಯಕ್ಕು ಹಳ್ಳಿ ಹಳ್ಳಿಮಾಣಿ ಆರಿಂಗೂ ಬೇಡ

  • ಅನ್ನಪೂರ್ಣ says:

   ಮೆಚ್ಚುಗೆ ಯ ನುಡಿಗೆ ಧನ್ಯವಾದಂಗ ಪಂಕಜ ಅಕ್ಕಾ..
   ಈಗಾಣ ಮಕ್ಕೊ ಪೇಟೆ ಇಷ್ಟಪಡುಲೆ ಕೆಲವೊಂದರಿ ಹೆತ್ತವುದೆ ಕಾರಣ ಆವುತ್ತವು ಹೇಳಿ ಎನ್ನ ಭಾವನೆ.ಅಲ್ಲದಾ..

 4. ಅನ್ನಪೂರ್ಣ says:

  ಆನು ಬರದ ಕಥೆಯ ಮೆಚ್ಚಿ ಇಲ್ಲಿ ಪ್ರಕಟಿಸಿದ ಶರ್ಮಣ್ಣಂಗೆ ಹೃನ್ಮನ ಪೂರ್ವಕ ಧನ್ಯವಾದಂಗ

 5. ಶಂಕರಿ ಶರ್ಮ says:

  ಕತೆ ಲಾಯಿಕ ಆಯಿದು.ಎನ್ನ ಪರಿಚಯದೋರ ಮಗಳು ಅಳಿಯ..ಇಬ್ರೂ ಬೆಂಗಳೂರಿನ ಕೆಲಸ ಬಿಟ್ಟಿಕ್ಕಿ ಊರಿಲ್ಲಿ ಕೃಷಿ ಮಾಡಿಗೊಂಡಿದ್ದವು…ಸುರುವಿಂಗೆ ಎನಗೂ ನಂಬುಲಾಯಿದಿಲ್ಲೆ !ಈಗಳೂ ಹೀಂಗಿಪ್ಪ ಜನ ಇದ್ದವು ಹೇಳಿದರೆ ಖುಷಿ ಆವುತ್ತು… ಆಲ್ಲದಾ

  • ಅನ್ನಪೂರ್ಣ says:

   ಓಹ್..ಅಪ್ಪಾ..ಖುಷಿ ಆತು..ನಿಜ ನಿಂಗ ಹೇಳಿದ್ದು.ಒಂದೆರಡು ಹೀಂಗಿಪ್ಪ ನಡೆದ ವಿಚಾರಂವ ಓದಿತ್ತೆ ಅದರ ಕಥೆಯ ರೂಪಲ್ಲಿ ಬರದೆ..ಮೆಚ್ಚುಗೆ ಕಟ್ಟದು ಖುಷಿ ಆತು.ಧನ್ಯವಾದಂಗ ಶಂಕರಿ ಅಕ್ಕ

 6. ಗಣೇಶಪ್ಸಸಾದಪಾಂಡೇಲು says:

  ಅನ್ನಪೂರ್ಣಾ ಬೆಜಪ್ಪೆ ಅವರ
  ಕಥೆ ತುಂಬಾ ಲಾಯಿಕ್ಕಿದ್ದುಓದಿಖುಷಿ ಆತು

 7. Madhurakanana ganapathi bhat says:

  ಒಪ್ಪಕ್ಕನ ಬರಹ ಕಥೆ ಒಪ್ಪ ಇದ್ದು ,ಇನ್ನೂದೆ ಬರೆತ್ತಾ ಇರು

 8. ಹವ್ಯಕ ಹೆಮ್ಮಕ್ಕಳ ಮಾತುಕತೆ,ನೇರ ನಿರೂಪಣೆ ಹಾಂಗೂ ಕತೆಯ ಸಾರ ,ಲೇಖಕಿಯ ಮನೋಭೂಮಿಕೆ ಬಿಂಬಿತ. ,ಒಪ್ಪತಕ್ಕಂತದ್ದು.ಬರೆತ್ತಾ ಇರು. ಶುಭವಾಗಲಿ.

  • ಅನ್ನಪೂರ್ಣ says:

   ಒದಿ ಮೆಚ್ಚುಗೆ ಹೇಳಿದ ನಿಂಗಗೆ ಧನ್ಯವಾದಂಗ ವಿಜಯಕ್ಕ

 9. ಬೊಳುಂಬು ಗೋಪಾಲ says:

  ಬಹಳ ನೈಜವಾಗಿ ಬಯಿಂದು ಕಥೆ. ನಿಜ ಜೀವನಲ್ಲಿ ನೆಡವ ಹಾಂಗಿಪ್ಪ ಕತೆಯೇ. ಈ ರೀತಿಲಿ ಈಗಾಣ ಕೂಸುಗೊ ಆಲೋಚನೆ ಮಾಡಿರೆ, ಖಂಡಿತಾ ಒಳ್ಳೆದಕ್ಕು. ಅಭಿನಂದನೆಗೊ ಅನ್ನಪೂರ್ಣಕ್ಕ.

  ಒಪ್ಪಣ್ಣ ಬೈಲಿಲ್ಲಿ ಪುನ : ಸಾಹಿತ್ಯ ಕೃಷಿ ಸುರು ಮಾಡಿದ್ದದು ಕಂಡು ತುಂಬಾ ತುಂಬ ಕೊಶಿಯಾತು. ಕತೆ ಲೇಖನಂಗೊ ಬತ್ತಾ ಇರಳಿ.

  • ಅನ್ನಪೂರ್ಣ says:

   ಕಥೆಯ ಓದಿ ಮೆಚ್ಚಿ ಪ್ರೋತ್ಸಾಹ ಕೊಡುವ ನಿಂಗಗೆ ಅನಂತ ಧನ್ಯವಾದಂಗ ಗೋಪಾಲಣ್ಣ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *