ನೀರುಳ್ಳಿ ಕಳ್ಳನ ಕಥೆ…

May 7, 2012 ರ 11:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿಂಗೊಗೆ ಜಾಣನ ಅರಡಿಗೋ? ಓ ಇಲ್ಲೇ, ಜಾಲ್ಸೂರಿನ ಹತ್ರೆ ಇಪ್ಪದಿದಾ!
ಜಾಲ್ಸೂರಿನ ಚರ ನೇ ನಮ್ಮ ಬೈಲಿಲಿ “ಜಾ-ಣ“.
ಮೂಡಬಿದ್ರೆ ಕೋಲೇಜಿಲಿ ಪೀಯೂಶ ಮಥನ ಮಾಡಿಂಡಿಪ್ಪ ಮಾಣಿ ಕಲಿಯಲೆ ಮಾಂತ್ರ ಉಶಾರಿ ಅಲ್ಲ; ಮಾತುಗಾರಿಕೆ, ಪಂಚಾತಿಗೆ, ಸುದರಿಕೆ – ಎಲ್ಲದರ್ಲಿಯೂ – ಅವನ ಅಪ್ಪನ ಹಾಂಗೇ!
ಓಯ್, ನಮ್ಮ ಸುಭಗಣ್ಣನ ಮಗನೇ ಈ ಜಾಣ ಮಾಣಿ, ಗೊಂತಾತೋ?

ಈಗ ರಜೆಲಿ ಬೈಲಿಂಗೆ ಬಪ್ಪ ಯೇಚನೆಲಿ ಇದ್ದ°! ಶಾಲೆ ಇಪ್ಪಗಳೂ ಎಡಡೇಲಿ ಪುರ್ಸೊತ್ತು ಮಾಡಿಗೊಂಡು ಬೈಲಿಂಗೆ ಬಕ್ಕಿದಾ.
ತಾನು ಕಲ್ತುಗೊಂಡ ಹಲವು ನೀತಿಕತೆ, ಲೊಟ್ಟೆಕತೆಗಳ ಬೈಲಿಂಗೆ ಹೇಳುಗು; ಎಲ್ಲೋರುದೇ ಕೇಳುವೊ°..
ಎಲ್ಲೋರುದೇ ಅವನ ಪ್ರೀತಿಲಿ ಮಾತಾಡುಸಿ, ಯುವ ಪ್ರತಿಭೆಯ ಬೆಳಗುಸಿ.
ಬೈಲಿನ ಹೆರಿಯೋರ ಮಾರ್ಗದರ್ಶನ, ಆಶೀರ್ವಾದ ಈ ಮಾಣಿಯ ಮೇಗೆ ಸದಾ ಇರಳಿ – ಹೇಳ್ತದು ನಮ್ಮ ಆಶಯ.
~
ಗುರಿಕ್ಕಾರ°

ನೀರುಳ್ಳಿ ಕಳ್ಳನ ಕಥೆ…

ಒ೦ದಾನೊಂದು ಕಾಲಲ್ಲಿ ಒಂದು ಮಹಾ ಸಾಮ್ರಾಜ್ಯ ಇತ್ತಿದಡ; ಅಲ್ಲಿಯಾಣ ರಾಜ ಜನ೦ಗಳ ಲಾಯ್ಕಲ್ಲಿ ನೊಡಿಗೊ೦ಡು ಇತ್ತಿದ್ದನಡ.
ಹಾಂಗಿಪ್ಪ ಕಾಲಲ್ಲಿ ಆ ರಾಜನ ನೀರುಳ್ಳಿ ಗೊದಾಮಿಂಗೆ ಒಂದು ಕಳ್ಳ° ಕನ್ನ ಕೊರದು ಅಲ್ಲಿದ್ದ ನೀರುಳ್ಳಿಗಳಗ ಗೋಣಿಲಿ ತುಂಬುಶಿಗೊಂಡು ಹೆರಟತ್ತಡ.
ಅದು  ಹೆರ ಬಂದಪ್ಪಗ ರಾಜ ಭಟರು ಈ ಜನರ ಹೆರ ಬಪ್ಪಲೆ ಕಾದುಗೊಂಡು ಇಪ್ಪಹಾಂಗೆ ನಿಂದುಗೊಂಡಿದ್ದವು.

ಕದ್ದ ಸಾಮಾನು ಸಮೇತ ಸಿಕ್ಕಿ ಬಿದ್ದ ಮೆಲೆ ಲೊಟ್ಟೆ ಹೇಳಿ ತಪ್ಪುಸಿಗೊಂಬಲೆ ಎಡಿಯ ಇದಾ…
ಆ ಕಳ್ಳನ ರಾಜನ ಎದುರಂಗೆ ತೆಕ್ಕೊಂಡು ಬಂದವು.  ರಾಜ ತುಂಬ ಬುಧ್ಧಿವಂತ, ಶಿಸ್ತಿನವ.

ರಜ್ಜ ಹೊತ್ತು ಆಲೋಚನೆ ಮಾಡಿಕ್ಕಿ ಆ ಕಳ್ಳಂಗೆ ಒಂದು ಶಿಕ್ಶೆ ಕೊಟ್ಟ.
ಶಿಕ್ಷೆ ಎಂತರ?
ಕಳ್ಳಂಗೆ ಮೂರು ಆಯ್ಕೆಗಳ ಕೊಟ್ಟ.

 • ಮೊದಲ್ನೆಯದು ಎಂತರ ಹೇದರೆ ಅವ ನೀರುಳ್ಳಿ ಕದ್ದದಕ್ಕಾಗಿ ನೂರು ನೀರುಳ್ಳಿ ಒಂದೇ ಸರ್ತಿಗೆ ತಿನ್ನೆಕ್ಕು.
 • ಇಲ್ಲದ್ರೆ ಸಪೂರ ಬಳ್ಳಿಯ ಹಾಂಗಿಪ್ಪ ಜಬ್ಕಿನ ಕೋಲಿಲಿ ನೂರು ಪೆಟ್ಟು ತಿನ್ನೆಕ್ಕು.
 • ಇದು ಎರಡೂ ಅಲ್ಲದ್ರೆ ನೂರು ಚಿನ್ನದ ವರಹಂಗಳ ದಂಡ ಆಗಿ ಕೊಡೆಕ್ಕೂದು ಹೇಳಿದ.

ಕಳ್ಳಂಗೆ ಮೊದಲ್ನೇದು ತುಂಬ ಸುಲಾಬ ಹೇದು ಕಂಡತ್ತು; ಅವ ನೀರುಳ್ಳಿ ತಪ್ಪಲೆ ಹೇಳಿದ.
ಸೈನಿಕರು ತಂದ ನೀರುಳ್ಳಿ ಬಯ೦ಕರ ಘಾಟಿ೦ದು- ಅದರ ಘಾಟಿಂಗೆ ಎಲ್ಲರ ಕಣ್ಣು, ಮೂಗಿಲಿ ನೀರು ಬಪ್ಪಲೆ ಸುರು ಆತು!
ಕಳ್ಳ ಮೊದಲು ಒ೦ದು ಹತ್ತು ಹೇಂಗಾರು ಮಾಡಿ ತಿಂದ. ಮತ್ತೆ ಎಡಿಗಾಗದ್ದೆ ಅಲ್ಲಿಯೆ ಬೋದ ತಪ್ಪಿ ಬಿದ್ದ! ನೀರು ತಳುದು ಏಳುಸಿಯಪ್ಪಗ “ಇನ್ನು ಎನಗೆ ನೀರುಳ್ಳಿ ತಿಂಬಲೆ ಎಡಿಯ ಆನು ಚಾಟಿ ಪೆಟ್ಟು ತಿಂಬಲೆ ತಯಾರಿದ್ದೆ“ಹೇದು ಹೇಳಿದನಡ.

ಕಳ್ಳ ಹೇಳಿದಾಂಗೆ ಅವ೦ಗೆ ಚಾಟಿ ಪೆಟ್ಟು ಕೊಡುವವು ಬಂದವು.
ಒಂದು ಇಪ್ಪತ್ತು ಪೆಟ್ಟು ತಿಂದಿದನೊ ಇಲ್ಲೆಯೊ “ಎನ್ನಂದೆಡಿಯ ಇನ್ನು ಪೆಟ್ಟು ತಿಂಬಲೆ. ಆನುಬೇಕಾರೆ ನಿಂಗ ಹೇಳಿದ ದಂಡವ ಪೂರ್ತಿಯಾಗಿ ಕೊಡ್ಲೆ ತಯ್ಯಾರಿದ್ದೆ” ಹೇಳಿದನಡ.
ರಾಜಭಟಂಗೊ ಕಳ್ಳನ ಕೈಂದ ಪೂರ್ತಿ ಪೈಸೆ ವಸೂಲಿ ಮಾಡಿದ ಮೇಲೆಯೇ ಕಳ್ಳನ ಬಿಟ್ಟವಶ್ಟೆ.

~

ತನಗೆ ಸಿಕ್ಕಿದ ಶಿಕ್ಶೆಲಿ ಮೂರು ಆಯ್ಕೆಗ ಇದ್ದರುದೆ ಎಲ್ಲಾ ಮೂರು ಶಿಕ್ಶೆಯ ಅನುಭವಿಸಿ ಆ ಸಾಮ್ರಾಜ್ಯಲ್ಲಿ ಎಲ್ಲರೂ ಅವನ ಅದರ ನೊಡಿ ನೆಗೆ ಮಾಡುವ ಹಾಂಗೆ ಆತು ಈ ಕಳ್ಳನ ಕತೆ.

ಈ ಕಥೆಯ ಒಪ್ಪ ನೀತಿ: ಯಾವುದೇ ಕೆಲಸ  ಮಾಡುವ ಮೊದಲು ನಮ್ಮ ಸಾಮರ್ಥ್ಯವ ನಾವು ತಿಳುಕ್ಕೊಳ್ಳಕ್ಕಾದ್ದು ಬಹು ಮುಖ್ಯ

ವಿ.ಸೂ:

ಇದಾನು ಬೈಲಿಲಿ ಬರದ ಮೊದಲ್ನೆ ಶುದ್ದಿ . ಎಂತಾರು ತಪ್ಪಾಗಿದ್ದರೆ ಎನಗೊ೦ದು ಒಪ್ಪಕೊಡಿ…..!
ಇನ್ನೊಂದು ವಿಶಯ  ಈ ಕಥೆ ಎನ್ನ ಸ್ವಂತದ್ದು ಅಲ್ಲ; ಸಣ್ಣ ಕ್ಲಾಸಿಲಿಪ್ಪಗ ಎಲ್ಲಿಯೊ ಓದಿದ ನೆನಪ್ಪು!

ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಚೆನ್ನಬೆಟ್ಟಣ್ಣ

  ನೀರುಳ್ಳಿ ಕದ್ದು ಎಲ್ಲರ ಎದುರು ಗೋಣ ಆದ ಕಳ್ಳನ ಕಥೆಯ ನಮ್ಮ ಜಾಣ ನೀತಿ ಸಮೇತ ಬರದ್ದು ಲಾಯಕ ಆಯ್ದು.

  [Reply]

  VN:F [1.9.22_1171]
  Rating: 0 (from 0 votes)
 2. ಸುವರ್ಣಿನೀ ಕೊಣಲೆ
  Suvarnini Konale

  ಜಾಣಂಗೆ ಸ್ವಾಗತ :)
  ಕಥೆ ಲಾಯ್ಕಾಯ್ದು, ಇನ್ನುದೇ ಹೀಂಗಿದ್ದ ಹಲವು ನೀತಿ ಕಥೆಗೊ ಬರಲಿ :)

  [Reply]

  VA:F [1.9.22_1171]
  Rating: +1 (from 1 vote)
 3. ಜಾಣ
  ಜಾಣ

  ಪ್ರೋತ್ಸಾಹಿಸಿದ ಎಲ್ಲೋರಿಂಗೂ ಧನ್ಯವಾದಂಗೊ°……

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಜಾಣನು ಹೇಳಿದ ಕತೆಗಳು.. ರೈಸಿದ್ದಯ್ಯಾ!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಮಾಷ್ಟ್ರುಮಾವ°ಶುದ್ದಿಕ್ಕಾರ°ವಿಜಯತ್ತೆವೇಣಿಯಕ್ಕ°ಶಾ...ರೀಯೇನಂಕೂಡ್ಳು ಅಣ್ಣಕೇಜಿಮಾವ°ನೀರ್ಕಜೆ ಮಹೇಶಚೂರಿಬೈಲು ದೀಪಕ್ಕಕೆದೂರು ಡಾಕ್ಟ್ರುಬಾವ°ಚೆನ್ನಬೆಟ್ಟಣ್ಣಅಜ್ಜಕಾನ ಭಾವವೇಣೂರಣ್ಣಡೈಮಂಡು ಭಾವಅನುಶ್ರೀ ಬಂಡಾಡಿಗೋಪಾಲಣ್ಣಬೊಳುಂಬು ಮಾವ°ಡಾಗುಟ್ರಕ್ಕ°ದೇವಸ್ಯ ಮಾಣಿಮಾಲಕ್ಕ°ಒಪ್ಪಕ್ಕಕಾವಿನಮೂಲೆ ಮಾಣಿಬಂಡಾಡಿ ಅಜ್ಜಿಸರ್ಪಮಲೆ ಮಾವ°ಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ