ಇದು ಒಂದು ‘ಅಜ್ಜಿ ಕಥೆ’; ಅಲ್ಲ, ಒಂದು ‘ಅಜ್ಜಿಯ’ ಕಥೆ..

ಮದಲಿಂಗೆ, ಒಂದಾನೊಂದು ಊರಿಲ್ಲಿ ಶ್ರೀ ಪರ್ವತಾ ಶಿಖರ ಪ್ರದೇಶ ಸಮೀಪ ಚಿತ್ರಪುರ ಹೇಳಿ ಒಂದು ಊರು ಇತ್ತಡಾ. ಆ ಶಿಖರಲ್ಲಿ ಘಂಟಾಕರ್ಣ ಹೇಳುವ ರಾಕ್ಷಸ ಇದ್ದು ಹೇಳಿ ಜನ ಪ್ರತೀತಿ. ಹೀಂಗಿಪ್ಪಗ ಒಂದಿನ ಕೆಲವು ಕಾಡು ಕಳ್ಳಂಗೊ ಊರಿಂಗೆ ನುಗ್ಗಿ ಆ ಊರಿನ ದೇವಸ್ಥಾನದ ಒಂದು ದೊಡ್ಡ ಘಂಟೆಯ ಕದ್ದೊಂಡು ಹೋದವಡ ಆ ಗುಡ್ಡೆ ಹೊಡೇಂಗೆ.

ಅಲ್ಲಿ ರಜಾ ಬೇಟೆಯಾಡಿ ಆಯಾಸ ಅಪ್ಪಗ, ಒಂದಿಕ್ಕೆ ಕೂದು ಆಯಾಸ ಪರಿಹರಿಸಿ, ಮತ್ತೆ ಎದ್ದಿಕ್ಕಿ ಅವರ ತಾಣದತ್ತ ಹೋದವಡ. (ಇದು ಆರಿಂಗೆ ಕಂಡದು ಇತ್ಯಾದಿ ಲಾಜಿಕ್ ಎನ್ನತ್ರ ಕೇಳ್ಳಾಗ).
ಹೋಪ ಗಡಿಬಿಡಿಲಿ, ಆ ಘಂಟೆಯ ಅಲ್ಲೇ ಮರದಿಕ್ಕಿ ಹೋದವಡಾ!. ಆ ಘಂಟೆ ಅಲ್ಲಿಪ್ಪ ಕೆಲವು ದೊಡ್ಡ ಮಂಗಂಗಳ ಕಣ್ಣಿಂಗೆ ಬಿದ್ದತ್ತು.
ಇದು ಎಂತರಪ್ಪಾ ಹೇಳಿ ಕೈಲಿ ನೆಗ್ಗಿ ನೋಡಿದವು , ಅತ್ತಿತ್ತೆ ಆಡಿಸಿದವು . ಮಣಿ ಹೆಟ್ಟಿ ಘಂಟೆ ಶಬ್ದ ಆತು. ಕೊಶೀ ಆತು ಮಂಗಂಗೊಕ್ಕೆ. ಎತ್ತಿಯೊಂಡು ಓಡಿದವಡ ಕುಶಾಲು ಮಾಡ್ಳೆ ಆತು ಹೇಳಿ.
ಈ ಘಂಟೆ ಹಿಡ್ಕೊಂಡು ಈ ಮಂಗಂಗೋ ಅಂಬಗಂಬಗ ಆಟ ಆಡಿಯೊಂಡು ಕುಶಾಲು ಮಾಡಿಯೊಂಡು ಆ ಘಂಟೆಯ ಮೋಜು ಮಾಡಿಯೊಂಡಿತ್ತವಡಾ.

ಈ ಘಂಟೆಯ ಶಬ್ದ ಕೇಳಿ ಆ ಊರ ಜನಂಗೊ ಹೆದರಿದವಡ. ಜನವಾಸ ಇಲ್ಲದ ಆ ಕಾಡಿಲ್ಲಿ ಒಬ್ಬ ರಾಕ್ಷಸ ಇದ್ದತ್ತು. ಅದು ಮನುಷ್ಯರನ್ನೂ ಸಿಕ್ಕಿರೆ ಹಿಡುದು ತಿಂತು.
ಅದಕ್ಕೆ ಉಲ್ಲಾಸ ಅಪ್ಪಲೆ ಮಣಿ ಆಡುಸುತ್ತು ಇತ್ಯಾದಿ ಕತೆ ಜೋರು ಹಬ್ಬಿತ್ತು. ಮನುಷ್ಯರು ಆ ಕಾಡಿಂಗೆ ಹೋಪಲೆ ಹೆದರಿದವು.
ಕೆಲವು ಜೆನ ಜೀವ ಭಯಂದ ಆ ಊರು ಬಿಟ್ಟಿಕ್ಕಿ ಹೋಪಲೆ ಸುರುಮಾಡಿದವಡ. ಆ ಊರಿನ ರಾಜಂಗೆ ತಲೆ ಬೆಷಿ ಸುರುವಾತು.

ಈ ರಾಕ್ಷಸ ಭಯಂದ ಹೇಂಗೆ ಮುಕ್ತಿ ಅಪ್ಪೋದು ಹೇಳಿ. ತನ್ನ ಮಂತ್ರಿ ಹತ್ತರೆ ಚರ್ಚಿಸಿ ಒಂದು ಘೋಷಣೆ ಮಾಡಿತ್ತು. ಆರು ಆ ಘಂಟಾಕರ್ಣ ರಾಕ್ಷಸನ ನಾಶ ಮಾಡುತ್ತನೋ ಅವಕ್ಕೆ ಲಕ್ಷ ಸುವರ್ಣ ಕೊಡುತ್ತೆ ಹೇಳಿ.
ಜೀವ ಭಯಲ್ಲಿ ಆ ಕಾಡಿಂಗೆ ಹೋಪಲೆ ಆರಿಂಗೂ ಬೆಟ್ರಿ ಇಲ್ಲೆ. ಹೀಂಗೆ ಇಪ್ಪಗ ಒಂದು ಅಜ್ಜಿ ಆ ಕಾಡಿಂಗೆ ಗುಟ್ಟಿಲ್ಲಿ ಹೋತಡ.
ಕಾಡಿಲ್ಲಿ ಒಂದಿಕ್ಕೆ ತಳೀಯದ್ದೆ ನಿಂದೊಂಡು ಎಂತ ನಡೆತ್ತಾ ಇದ್ದು ಹೇಳಿ ನೋಡಿಯೊಂಡಿತ್ತು.
ರಜಾ ಹೊತ್ತಪ್ಪಗ ಆ ಮಂಗಂಗೊ ಆ ಘಂಟೆಯ ಹಿಡ್ಕೊಂಡು ಆಟ ಆಡಿಗೊಂಡು ಮಣಿ ಶಬ್ದ ಮಾಡ್ಳೆ ಸುರುಮಾಡಿದ್ದು ಕಂಡತ್ತು ಈ ಅಜ್ಜಿಗೆ.

ಹತ್ರೆ ಇಪ್ಪ ಮರಂದ ರಜಾ ಹಣ್ಣುಗಳ ಕೊಯ್ದು ಅಜ್ಜಿ ಉಪಾಯಲ್ಲಿ ಆ ಮಂಗಗಳ ನಾಜೂಕಾಗಿ ಮಂಕಡಿಸಿ ಹಣ್ಣುಗಳ ಮಂಗಂಗಳ ಕೈಗೆ ಕೊಟ್ಟು , ಅವರ ಕೈಂದ ಘಂಟೆಯ ವಸೂಲು ಮಾಡಿಗೊಂಡು ಊರಿಂಗೆ ಬಂದು ರಾಜನತ್ರೆ ಘಂಟೆಯ ಕೊಟ್ಟಿಕ್ಕಿ , ಘಂಟಾಕರ್ಣ ರಾಕ್ಷಸನ ಆನು ಕೊಂದು ಮಣಿ ತೆಕ್ಕೊಂಡು ಬಂದೆ ಇದಾ ಹೇಳಿ ಹೇಳಿತ್ತಡಾ.
ರಾಜಂಗೂ ಖುಶೀ ಆತು. ಅಜ್ಜಿ ಕೈಲಿ ಲಕ್ಷ ಸುವರ್ಣ ಇನಾಮು ಕೊಟ್ಟು ಸನ್ಮಾನ ಮಾಡಿ ಕಳ್ಸಿತ್ತು. ಅದರಿಂದ ಮತ್ತೆ ಆ ಕಾಡಿಂದ ಘಂಟೆ ಶಬ್ದ ಕೇಳಿದ್ದಿಲ್ಲೇಡಾ.
ಊರು ಬಿಟ್ಟು ಹೋದ ಜನಂಗಳೂ ವಾಪಾಸು ತಮ್ಮ ತಮ್ಮ ಮನಗೆ ಬಂದು ಸೇರಿಗೊಂಡವಡಾ.

ಹೇಂಗೇ ನಮ್ಮಜ್ಜಿ ಕತೆ?!

~*~*~*~

ಒಪ್ಪ : ಉಪಾಯಲ್ಲಿ ಕೆಲವು ಸಂದರ್ಭಂಗಳ ಪಾರು ಮಾಡ್ಳೆ ಆವುತ್ತು.

ಓ.! ಹೇಳಿದಾಂಗೆ, ಈ ಕತೆ ಅಂತರ್ಜಾಲಂದ ಕದ್ದು ಇಲ್ಲಿ ಬರದದ್ದು ಆತೋ, ಸ್ವಂತ ಬರದದ್ದು ಅಲ್ಲ. ಹಾಂಗಾಗಿ ಎನಗೆ ಪ್ರೈಸು ಬೇಡ.
ನಿಂಗೊಗೆ ಕತೆ ಲಾಯಕ ಆಯ್ದು ಹೇಳಿ ತೋರಿರೆ ಲಾಯಕ ಆಯ್ದು ಹೇಳಿಕ್ಕಿ. ಇಲ್ಲದ್ರೆ ನಿನ್ನಜ್ಜಿ ಕತೆ ಹೇಳಿ ಬಿಟ್ಟಿಕ್ಕಿ. ಏ!?

ಚೆನ್ನೈ ಬಾವ°

   

You may also like...

16 Responses

  1. ಚೆನ್ನೈ ಭಾವ says:

    ಓದಿ ಇಷ್ಟ ಪಟ್ಟ ಎಲ್ಲೋರಿಂಗೂ ಧನ್ಯವಾದ.

  2. ಬೊಳುಂಬು ಕೃಷ್ಣಭಾವ° says:

    ಸುಮಾರು ಸರ್ತಿ ಶಕ್ತಿಗಿಂತ ಯುಕ್ತಿಯೇ ಮೇಲು ಹೇಳ್ತದು ಅನುಭವಕ್ಕೆ ಬತ್ತು. ಕತೆ ‘ಹೇಳಿದ್ದು’ ಲಾಯಕಾಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *