ಒಂದು ಪ್ರವಾಸದ ಅನುಭವ

ಅನ್ನಪೂರ್ಣ ಬೆಜಪ್ಪೆ ಇವು  ಬರದ ಸಣ್ಣ ಕತೆ ಇಲ್ಲಿದ್ದು. ಓದಿ  ಅಭಿಪ್ರಾಯ ಬರೆಯಿದು ಪ್ರೋತ್ಸಾಹ ಕೊಡಿ
-ಶರ್ಮಪ್ಪಚ್ಚಿ

ಒಂದು ಪ್ರವಾಸದ ಅನುಭವಅನ್ನಪೂರ್ಣ ಚಂದ್ರಶೇಖರ

ಇಪ್ಪತ್ತು ವರ್ಷ ಹಿಂದೆ ನೆಡದ ಒಂದು ಘಟನೆ.ಇಂದು ಉದಿ ಉದಿಯಪ್ಪಗಳೇ ಮನಸ್ಸಿನ ಒಳಾಂದ ಹಾರಿ ಬಂತಿದ.ಅದರ ನಿಂಗೊಳ ಒಟ್ಟಿಂಗೂ ರಜಾ ಹಂಚಿಯೊಂಡು ಖುಷಿ ಪಡುವ  ಹೇದು ತೋರಿತ್ತು. ಹಾಂಗೇ ಬರವಲೆ ಶುರು ಮಾಡಿದೆ.

 ಅಂಬಗ ಆನು ಕೋಲೇಜಿಂಗೆ ಹೋಗಿಯೊಂಡಿತ್ತಿದ್ದ ಸಮಯ.ಅಪ್ಪಂಗೆ ಎಂಗೊ ಐದು ಜನ ಮಕ್ಕೊ.ಅಪ್ಪ ಮೇಷ್ಟ್ರು.ಈಗಾಣವರ ಹಾಂಗೆ ದೊಡ್ಡ ಸಂಬಳ ಎಂತ್ಸೂ ಇದ್ದತ್ತಿಲ್ಲೆ ಅಂಬಗಾಣ ಕಾಲಲ್ಲಿ.ಎಲ್ಲ ಖರ್ಚುದೆ ಆಯೆಕನ್ನೆ.ಹಾಂಗಾಗಿ ಕೋಲೇಜಿಂಗೆ ಹೋಪಲೆ ಮೂರೇ ಪ್ರತಿ ಅಂಗಿ.ಒಂದು ಚೂಡಿದಾರ ಎರಡು ಉದ್ದಲಂಗರವಕ್ಕೆ .ಅಷ್ಟು ಸಿಕ್ಕಿದ್ದದೇ ಭಾಗ್ಯ.ಕೆಲವು ಜೆನಂಗಕ್ಕೆ ಅಷ್ಟುದೆ ಇದ್ದತ್ತಿಲ್ಲೆ.ತೋಟಕ್ಕೆ ನೀರು ಹಿಡಿವದು,ಬೀಜ ಹೆರುಕ್ಕುದು,ಅಡಕ್ಕೆ ಸೊಲಿವದು ಹೀಂಗೆಲ್ಲ ಕೆಲಸ ಮಾಡಿಯಪ್ಪಗ ಅಪ್ಪ ನಾಲ್ಕೋ ಐದೋ ರೂಪಾಯಿ ಕೊಡುಗು.ಅದರ ರಜ್ಜ ಖರ್ಚು ಮಾಡಿ ಉಳುದ್ದದರ ಹಾಂಗೆ ಗೆಂಟು ಕಟ್ಟಿ ಮಡಗುದು ಅಭ್ಯಾಸ.ಅರ್ಜೆಂಟಿಂಗೆ ಪುಸ್ತಕಕ್ಕೋ ಮಣ್ಣೊ ಬೇಕಾರಾತು ಹೇದು.ಹೋಗಲಿ ಬಿಡಿ ಇಷ್ಷ್ಟೆಲ್ಲಾ ಪುರಾಣ ಹೇದೊಂಡು ಕೂದರೆ ಆಗ.ಈಗ ವಿಷಯಕ್ಕೆ ಹೋಪ..

 ಒಂದಾರಿ ಎಂಗಳ ಕ್ಲಾಸಿನ ಮಕ್ಕೊ ಎಲ್ಲ ಸೇರಿ ಎಲ್ಲಿಗಾದರೂ ಪ್ರವಾಸ ಹೋಪ ಹೇಳ್ತ ಯೇಚನೆ ಬಂತದ. ಗಟ್ಟಿ ಕುಳದ ಮಕ್ಕೊಗೆಲ್ಲ ಕೊಶಿಯೋ ಕೊಶಿ.ಎಂಗಳಾಂಗಿಪ್ಪವಕ್ಕೆ ಮಾಂತ್ರ ಒಳ ಒಳಾಂದ ಬೇಜಾರು.ಮನೆಂದ ಅಪ್ಪ ಹೋಪಲೆ ಬಿಡವನ್ನೇಳಿ. ಅದು ಇದೂಳಿ ಚರ್ಚೆ ಮಾಡಿ ಅಕೇರಿಗೆ ಎಲ್ಲರಿಂಗೂ ರಜ ಅನುಕೂಲ ಅಪ್ಪಲಾತು ಹೇದು  ಒಂದು ದಿನದ ಪ್ರವಾಸ ರಾಣೀಪುರ ಗುಡ್ಡೆ ಹತ್ತುಲೆ ಹೋಪದೂಳಿ ತೀರ್ಮಾನ ಆತು.ಒಬ್ಬೊಬ್ಬಂಗೆ 200 ರೂ ಬೀಳುಗು ಖರ್ಚು.ಬಪ್ಪವು 2 ದಿನಲ್ಲಿ ಹೆಸರು ಕೊಡೆಕೂಳಿ ಆತು.

ಅದೇ ಯೇಚನೆಲ್ಲೇ ಮನೆಗೆ ಬಂದೆ. ಅಪ್ಪ ಮನೆಲೇ ಇತ್ತಿದ್ಜವು.ಈಗಾಣ ಮಕ್ಕೊಗಿಪ್ಪಷ್ಟು ಸಲಿಗೆ ಅಂಬಗ ಇಕ್ಕೋ.ವಿಷಯ ಹೇಳುಲೆ ಹೆದರಿಕೆ.ಅಬ್ಬೆಯತ್ರೆ ಹೇಳಿ ಕೇಳುಸುವದು.ಅಂದು ಕಾಪಿಯೂ ಬೇಡ ಎಂತದೂ ಬೇಡ.ದೇವರೇ ಅಪ್ಪ ಹೋಪಲೆ ಒಪ್ಪಿಗೆ ಕೊಡಲಿ ಹೇಳಿ ರಜ ಹೆಚ್ಚೇ ಹೊತ್ತು ಚಾಮಿ ಮಾಡಿದೆ.ಎಂತ ಉತ್ತರ ಸಿಕ್ಕಿದ್ದಿಲ್ಲೆ.ಅಬ್ಬೆಯ ಪುನ ಕುಟ್ಟಿ ಕೇಳುಸಿದೆ.ಇದಾ ನಾವು ಹಾಸಿಗೆ ಇದ್ದಷ್ಟೇ ಕಾಲು ಚಾಚೆಕ್ಕಷ್ಟೆ ಗೊಂತಿದ್ದನ್ನೇ…ಆತು ಎಂತಕ್ಕೂ ನೋಡುವ ಹೇದು ಅಪ್ಪ ಹೇಳುದು ಕೇಳಿತ್ತೆನ್ನ ಕೆಮಿಗೆ. ಎನಗೋ ಒಪ್ಪಿಗೆಯೇ ಕೊಟ್ಪಾಂಗೆ ಇನ್ನು ಸ್ವರ್ಗಕ್ಕೆ ಮೂರೇ ಗೇಣು ಹೇಳುವಷ಼್ಟು ಸಂತೋಷ.

 ರಾಣೀಪುರಂ ಗೆ ಕೋಲೇಜಿಂದ ಎರಡು ಗಂಟೆ ದಾರಿ. ಒಂದು ಮಿನಿ ಬಸ್ಸು.ಭಾರೀ ಕೊಶಿ.ಎಲ್ಲೋರೂ ಖರ್ಚು ಮಾಡುಗ ಆನೊಬ್ಬ ಸುಮ್ಮನೆ ಕೂಪ್ಪದೇಂಗೇಳಿ ಒಳುಶಿ ಮಡಗಿದ ಪೈಸೆಯನ್ನೂ ತೆಕ್ಕೊಂಡಿದೆ.ಎಲ್ಲ ಒಟ್ಟು ಪದ್ಯ ಬಂಡಿ ಆಡಿಗೊಂಡು ಜೋಕುಗ ಹೇಳಿಯೊಂಡು ಹೋದೆಯೊ.ಅಂತೂ ಅಲ್ಲಿಗೆ ಎತ್ತುಗ ಹನ್ನೊಂದು ಗಂಟೆ.ಮಾಣಿಯಂಗೊ ಎಲ್ಲ ಮುಂದೆ ಓಡಿದವು.ಆದಿನ ಹೆಚ್ಚೆಂತ ಬೆಶಿಲಿತ್ತಿಲ್ಲೆ ಪುಣ್ಯಕ್ಕೆ. ಎನಗೋ ಇದು ಸುರೂವಾಣ ಅನುಭವ.ಎಷ್ಟು ಕುಶಿ.ಹೋಪಗ ತೆಕ್ಕೊಂಡೋದ ಹೊರಿ ಕಡ್ಲೆ,ಅಬ್ಬೆ ಮಾಡಿಕೊಟ್ಟ ಚಿಪ್ಸು ಎಲ್ಲರಿಂಗೂ ಹಂಚಿದೆ. ಅಲ್ಲಿ ನೋಡು ಎಷ್ಟೊಳ್ಳೆ ಜಾಗೆ ಇಲ್ಲಿ ನೋಡಿ ಎಷ್ಟು ಚೆಂದ ಹೇಳಿಗೊಂಡು ಓಡುಗ ಎನ್ನ ನೋಡಿ ಕೆಲವು ಮಕ್ಕ ನೆಗೆ ಮಾಡಿರೂ ಆನು ಗುಮಾನ ಮಾಡಿದ್ದಿಲ್ಲೆ.

ಅಲ್ಲಲ್ಲಿ ಸಣ್ಣಸಣ್ಣ ಪೊದೆಲುಗ,ಹೂಗಿನ ಗಿಡಂಗ,ಚೆಂದ ಚೆಂದದ ಪರ್ಮಳದ ಹೂಗುಗ,ನೆಡೆತ್ತಾ ಹೋಪಗ ಕಾಂಬಲೆ ಸಿಕ್ಕುವ ಸಣ್ಣ ಪ್ರಾಣಿಗ, ತರತರದ ಹಕ್ಕಿಗ,ಜಲಪಾತದಾಂಗೆ ಮೇಲಂದ ಬೀಳುವ ಸಣ್ಣ ನೀರಿನ ಝರಿ,ಹಾಸಿಗೆ ಹಾಸಿದಾಂಗೆ ಬೆಳದ ಹುಲ್ಲುಗ…ಅಬ್ಬಾ..ಒಂದೋ ಎರಡೋ… ಹೇಳಿದಷ್ಟು ಮುಗಿಯ.ಎಷ್ಟೊಂದು ರಮಣೀಯ ಪ್ರಕೃತಿ!..ನಿಜ ಹೇಳೆಕ್ಕಾಧರೆ ಎನಗೆ ಸ್ವರ್ಗಕ್ಕೇ ಹೋದ ಅನುಭವ ಆತು.

  ಮಧ್ಯಾಹ್ನ ಆತು.ಅಲ್ಲಿ ಇಲ್ಲಿ ತಿರುಗಿ ಎಲ್ಲರಿಂಗೂ ಬಚ್ಚಿತ್ತು.ಒಂದಿಕೆ ಕೂದು ತಂದ ಬುತ್ತಿಯೂಟ ಮಾಡಿ ನೀರು ಕುಡುದು ಕೈ ತೊಳದಾತು.ಒಳ್ಳೆ ಗಾಳಿ ಬತ್ತಾ ಇದ್ದತ್ತು.ಅಲ್ಲೇ ರಜ ಹೊತ್ತು ಕೂದಿಕ್ಕಿ ಕೆಳ ಇಳುದೆಯೊಂ.ಐಸ್ಕ್ರೀಂ ಗಾಡಿ ಕಂಡತ್ತು.ಅದನ್ನೂ ತಿಂದಾತು.ಎಲ್ಲೋರೂ ಬಸ್ಸಿಂಗೆ ಹತ್ತಿಯಪ್ಪಗ ಬಸ್ಸು ಹೆರಟತ್ತು.ರಜ ಹೊತ್ತು ಹರಟೆ ಹೊಡದಪ್ಪಗ ಒರಕ್ಕು ತೂಗುಲೆ ಶುರುವಾತು.ಮನೆಗೆ ಹೋಗಿ ಎನಗಾದ ಕೊಶಿಯ ವರ್ಣಿಸಿ ಹೇಳೆಕ್ಕೂಳಿ ಗ್ರೈಶಿಯೊಂಡಿದ್ದಾಂಗೆ ಎಷ್ಟೊತ್ತಿಂಗೆ ಒರಕ್ಕು ಬಂದದೋ ಗೊಂತಿಲ್ಲೆ. ಆರೋ ಎನ್ನ ಏಳುಸಿದಾಂಗಾತು.ಇಳಿವ ಜಾಗೆ ಎತ್ತಿತ್ತಾಯಿಕೂಳಿ ದಿಗ್ಗನೆದ್ದು ಕೂದೆ.

  ಕಣ್ಣುದ್ದಿಗೊಂಡು ನೋಡಿರೆ ಅಬ್ಬೆ ದೆನಿಗೋಳಿಯೊಂಡಿತ್ತು.ಯಾವಗಳೂ ತಡವಾವ್ತು ಹೇದೊಂಡು ಅಂಬ್ರೇಪು ಮಾಡುವ ಜನ ಎಂತ ಏಳದ್ದದು ಇಂದು.ಕೋಲೇಜಿಂಗೆ ಹೋಪಲೆ ತಡವಾವ್ತಿಲ್ಲಿಯೋ.ಬೇಗ ಏಳು, ಬಸ್ಸು ಸಿಕ್ಕ ಹೇಳುದು ಕೇಳಿತ್ತು. ಈಗ ಗೊಂತಾತು.ಆನು ಎಲ್ಲಿಗೂ ಹೋಯಿದಿಲ್ಲೆ ಮನೆಲೇ ಇದ್ದೇಳಿ. ಇಷ್ಟೊತ್ತಿದ್ದ ಕೊಶಿ ಎಲ್ಲ ಠುಸ್ಸ… ಆದರೆ ಬೇಜಾರಲ್ಲೇ ಕೋಲೇಜಿಂಗೆ ಹೋದಪ್ಪಗ ಪ್ರವಾಸ ಹೋಪಲಿಲ್ಲೆಡ ಬಪ್ಪೊರುಷ ಹೋಪದಡ ಹೇದು ಎನ್ನ ದೋಸ್ತಿ ಹೇದಪ್ಪಗ ರಜಾ ಸಮಧಾನ ಆತಿದಾ…ಹೋಗದ್ದರೆಂತ ಎನಗೆ ಹೋಗಿಬಂದಾಂಗೇ ಅತು ಹೇದು ಕನಸಿನ ವಿಷಯ ಹೇದಪ್ಪಗ ಅದು ದೇವರೇ ಇಂದು ಎನಗುದೇ ಅದೇ ಕನಸು ಬೀಳಲಿ ಹೇದೊಂಡು ನೆಗೆಮಾಡಿತ್ತು.

 ಅಂತೂ ಈ ರಾಣಿಪುರ ಗುಡ್ಡೆ ಹೇಂಗಿದ್ದೂಳಿ ಎನಗೆ ಇಷ್ಟರವರೆಗೂ ಗೊಂತಿಲ್ಲದ್ದರೂ ಎನಗೆ ನಯಾಪೈಸೆ ಖರ್ಚಿಲ್ಲದ್ಧೆ ಪ್ರವಾಸ ಹೋಗಿ ಬಂದ ಅನುಭವ ಆದ್ದದರ  ಎಂದಿಂಗೂ ಮರವಲೆಡಿತ್ತಿಲ್ಲೆ.

~~~***~~~

 

 

 

ಶರ್ಮಪ್ಪಚ್ಚಿ

   

You may also like...

12 Responses

 1. ಧನ್ಯವಾದಂಗೊ ಶರ್ಮಣ್ಣಂಗೆ

 2. ಶ್ರೀಶ says:

  ನಯಾಪೈಸೆ ಖರ್ಚಿಲ್ಲದ್ದೆ ಪ್ರವಾಸ ಆತನ್ನೆ.
  ನಿರೂಪಣೆ ಲಾಯಿಕ ಆಯಿದು.

 3. ಚೆನ್ನೈ ಬಾವ says:

  ನಯಾ ಪೈಸೆ ಖರ್ಚಿಲ್ಲದ್ದೆ ಅಲ್ಲಿಲ್ಲದ್ದದೂ ಕಂಡಿಕ್ಕನ್ನೆ ನಿಂಗೊಗೆ !

  ಅಲ್ಲ ನವಗೆ ಟೂರ್ ಹೇದರೆ ಕನಸು…. ಈಗಾಣ ಪೇಟೆ ಮಕ್ಕಳತ್ತಾರೆ ಈ ಕತೆ ಹೇದರೆ ……ಎಂತ ಗ್ರೇಶುಗು ನಮ್ಮ! – ಏನ ಗ್ರೇಶಿ ಹೋದ್ದಪ್ಪಾ

  • ಕನಸಿಲ್ಲಿ ನವಗೆ ಎಂತ ಬೇಕಾರೂ ಕಾಂಗು.ಅಂಬಗಾಣ ಕಾಲ ಹಾಂಗೆ ಅಲ್ಲದೋ..ಟೂರು ಹೋಪದೂಳಿರೆ ಹಳ್ಳಿ ಮಕ್ಕೊಗೆ ಕನಸೇ..

 4. ಬೊಳುಂಬು ಗೋಪಾಲ says:

  ಪ್ರವಾಸ ಹೋದ್ದು ಶೋಕ್ ಆಯಿದು. ನಯಾ ಪೈಸೆ ಕೊಡದ್ದೆ ಕನಸಿಲ್ಲೇ ಕಾಶ್ಮೀರಕ್ಕೂ ಹೋಗಿಕ್ಕಿ ಬಪ್ಪಲಕ್ಕಲ್ಲದೊ ಅಕ್ಕಾ ? ಶುದ್ದಿ ಲಾಯಕಾತು.

  • ಧನ್ಯವಾದ.ಬೇರೆ ಎಷ್ಟೇ ಕಡೆಂಗೆ ಪ್ರವಾಸ ಹೋದರೂ ಈ ರಾಣಿಪುರಂ ನೋಡುಲೆ ಎಡಿಗಾಗಿತ್ತಿಲ್ಲೆ.ನಾಲ್ಕು ದಿನ ಹಿಂದೆ ಎಂಗೊ ಹೋಗಿ ಬಂದೆಯೋ.ಕನಸಿಲ್ಲಿತ್ತಾಂಗೆ ಇಲ್ಲದ್ದರೂ ತುಂಬಾ ಒಳ್ಳೆಯ ಜಾಗ ಅದುಸ
   .

 5. ಯಮ್.ಕೆ. says:

  ಆ ಕಾಲಕ್ಕೆ ಅಲ್ಲಿ ಐ ಕ್ರೀಮ್ ವ೦ಡಿ.
  ಪಾವಲಿ ಕೊಡದ್ದೆ ಗಡದ್ದು!
  ಆತು.
  ಇನ್ಯಾವತ್ತಾದರೂ ಹೋದರೆ
  ಮೂಡಲ ಭಾವ ಸಿಕ್ಕಿದರೆ ವಿಚಾರಿಸಿ.

  • ಧನ್ಯವಾದ
   ಹ.ಹ.ಮೊನ್ನೆ ಅಲ್ಲಿಗೆ ಹೋಗಿತ್ತೆಯೋ..ಅಲ್ಲಿ ಐಸ್ಕೀಂ ಈಗಲೂ ಇಲ್ಲೆ.. 🙂
   ಮೂಡಲ ಭಾವ ಹೇಳಿರೆ ಆರಪ್ಪಾ..

 6. ಒಳ್ಳೆ ಕನಸು!. ಅಲ್ಲಲ್ಲ ಪ್ರವಾಸ ಕಥನ!!…ಅನ್ನಪೂರ್ಣಾ, ಒಂದು ವಾರಂದ ಎನ್ನ ಇಂಟರ್ನೆಟ್ ಮೋಡಮ್ ಹಾಳಾಗಿಯೋ ಅಲ್ಲ, ಎಂತದೋ ಉದಿಯಪ್ಪಗ ಶ್ರೀಸೂಕ್ತಿ ಹಾಕುಲೆ ಗುರುಕೃಪೆಂದ ಸರಿಇರ್ತು. ಇಂಟರ್ನೆಟ್ ಓಪನ್ ಮಾಡಿರೆ ಬತ್ತೇಇಲ್ಲೆ.. ಮತ್ತೆ ನಿನ್ನಾಂಗೆ ದೇವರಿಂಗೆ ಕೈಮುಗುದು,ಕನಸು ಕಂಡೆ. ನಿನ್ನೆ ಸರಿಯಾತು.ಹಾಂಗೆ ಇಂದಿದಕ್ಕೆ ಒಪ್ಪ ಬಿದ್ದತ್ತು.

 7. ಧನ್ಯವಾದ ವಿಜಯಕ್ಕ.

 8. ಪ್ರಸನ್ನಾ ವಿ ಚೆಕ್ಕೆಮನೆ says:

  ಹಳೆ ಕನಸು ಈಗ ನನಸಾತನ್ನೇ..ನಿರೂಪಣೆ ಲಾಯ್ಕ ಆಯಿದು.ಓದಿಯಪ್ಪಗ ಎನಗೂ ಒಂದರಿ ಕನಸಿಲ್ಲಿ ಅಲ್ಲಿಗೆ ಹೋಯೆಕೂಳಿ ಆವ್ತು..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *