ರಾಜನ ಕೆಮಿ – ’ಕತ್ತೆ ಕೆಮಿ’

ಅರಸನ ಕೆಮಿ – ಕತ್ತೆ ಕೆಮಿ:

ಹಿಂದೊಂದು ಕಾಲಲ್ಲಿ ನಡೆದಂಥ ಸುದ್ದಿಯ ನಿಂಗೊಗೆ ಆನು ಹೇಳುತ್ತೆ
ಊರಿನ ರಾಜಂಗೆ ಕುಚ್ಚಿಯ ತೆಗವಲೆ ಕ್ಷೌರಿಕನೊಬ್ಬ ಇತ್ತಿದ್ದಡೊ.

ಊರಿನ ಜನರ ಕ್ಷೌರ ಮಾಡುಲೆ ರಾಜನ ಒಪ್ಪಿಗೆ ಇತ್ತಿದ್ದಿಲ್ಲೆಡೊ
ಉದಿಯಪ್ಪಗೆದ್ದು  ಅರಮನೆ ಸೇರಿ ರಾಜನ ಕ್ಷೌರ ಮಾಡೆಕ್ಕಿತ್ತಡೊ

ಉಳಿದೋರ ಕ್ಷೌರ ಮಾಡುಲಿಲ್ಲದ್ದೆ ಹಾಂಗೇ ತಿರಿಕ್ಕೊಂಡಿದ್ದನಡೊ
ರಾಜಂಗೆ ಮಾಂತ್ರ  ಕೆಮಿಯ ಮುಚ್ಚಿ ಮುಂಡಾಸು ಕಟ್ಟುವ ಕ್ರಮವಿತ್ತಡೊ

ರಾಜನ ಕೆಮಿ ಮಾಂತ್ರ ಕತ್ತೆ ಕೆಮಿ ಹಾಂಗೇಯೇ ಕಂಡುಗೊಂಡಿತ್ತಡೊ
ಜನಂಗೊಕ್ಕೆ ಗೊಂತಪ್ಪಲಾಗ ಹೇಳಿ, ಮುಂಡಾಸು ಕಟ್ಟಿಗೊಂಬದಡೋ.

ಕ್ಷೌರಿಕ  ತಲೆಕುಚ್ಚಿ ತೆಗೆವಗ ಮನಸ್ಸಿಲ್ಲೆ ನೆಗೆ ಮಾಡಿಗೊಂಡಿತ್ತನಡ
ಬೇರೆ ಆರಿಂಗು ಗೊಂತಿಲ್ಲದ್ದ ಸುದ್ದಿ ಅವಂಗೆ ಮಾಂತ್ರ ಗೊಂತಿತ್ತಡ

ರಾಣಿಗೊಕ್ಕುದೆ ಗುಟ್ಟು ಬಿಡದ್ದೆ ಗುಟ್ಟಾಗಿ ರಾಜ ಹೇಳಿತ್ತಿದ್ದನಡ
ಗುಟ್ಟಿನ ಸುದ್ದಿ ಆರಿಂಗಾರು ಹೇಳಿರೆ, ತಲೆದಂಡ ಕೊಡೆಕ್ಕೂ ಹೇಳಿದ್ದಡ

ರಾಜಂಗೆ ಹೆದರಿ, ಗುಟ್ಟಿನ ಹೇಳದ್ದೆ ತುಂಬ ದಿನವೆ ಕಳುದಿತ್ತಡ,
ಮನಸ್ಸಿಲ್ಲಿದ್ದ ಗುಟ್ಟಿನ ಆರಿಂಗು ಹೇಳದ್ದೆ ಇಪ್ಪಗ ಒಂದಿನ ಇರುಳು

ಹೆಂಡತಿ  ಮುಂದೆ ಕೂದಿಪ್ಪಗ ಫಕ್ಕನೆ ಸುದ್ದಿಯ ಗ್ರೇಶಿ ನೆಗೆ ಬಂತಡೊ.
ಹೆಂಡತಿ ಒತ್ತಾಯ ಸಹಿಸದ್ದೆ  ಫಕ್ಕನೆ ಕಾಡಿನ ಕಡೆಂಗೆ ಓಡಿದನಡ

ಗುಟ್ಟಿನ ಸುದ್ದಿಯ ಎಲ್ಲಾದ್ರು ಒದರಿ ಮನಸ್ಸು ಹಗುರ ಮಾಡೆಕ್ಕಿತ್ತಡ
ಕಾಡಿನ ನಡುಕೆ ದೊಡ್ಡದೊಂದು ಗೋಳೆ ಮರವ ನೋಡಿದನಡ.

ಗೋಳೆಲ್ಲಿ ಬಾಯಿಯ ಮಡಗಿಗೊಂಡು ಹೊಟ್ಟೆ ತುಂಬ ಹೇಳಿದನಡ
ಅರಸನ ಕಿವಿ ಕತ್ತೆ ಕಿವಿ,  ಕತ್ತೆ ಕಿವಿ ಹೇಳಿ ಬಚ್ಚುವಷ್ಟು ಹೇಳಿದನಡ

ಮನಸ್ಸಿಂಗೆ ಸಮಾಧಾನ ಆದ ಮೇಲೆ ಮನೆಯ ಕಡೆಂಗೆ ಬಂದಿತ್ತನಡ
ವರ್ಷ ಸುಮಾರು ಕಳುದ ಮೇಲೆ, ಊರಿನ ನಗಾರಿ ಹಾಳಾತಡೊ

ದೊಡ್ಡದೊಂದ ಮರವ ಹುಡುಕಿ ತಪ್ಪಲೆ ಕೆಲದೋವು ಹೋಗಿತ್ತವಡೊ
ಗೋಳೆ ಮರ ಕಂಡು ಕೊಶಿಯಾಗಿ ಮರ ಕಡುದು ತಂದವಡೊ

ಅದನ್ನೆ ಕೆತ್ತಿ ನಗಾರಿ ಮಾಡಿ ಬಾರುಸುಲೆ ಮುಹೂರ್ತ ನೋಡಿದವಡ
ಬಾರುಸಿದರೆ ಕೇಳುವ ಶಬ್ದವ ಕೇಳಿ ಎಲ್ಲೋರು ಬೆರಗಾದವಡೊ

ಅರಸನ ಕಿವಿ ಕತ್ತೆ ಕಿವಿ  ಹೇಳುವ ಶಬ್ದವೊಂದೇ ಕೇಳುತ್ತಿತ್ತಡ
ಗುಟ್ಟಾಗಿ ಮಡುಗಿದ್ದ ರಾಜನ ಗುಟ್ಟು ರಟ್ಟಾಗಿ ಹೋಗಿತ್ತಡೊ

~*~*~

ಮೂಲ: ಕನ್ನಡದ ಒಂದು ಜಾನಪದ ಕತೆ

ಸುಬ್ಬಣ್ಣ ಭಟ್ಟ, ಬಾಳಿಕೆ

   

You may also like...

7 Responses

 1. jayashree.neeramoole says:

  ಹರೇ ರಾಮ

 2. ಚೆನ್ನೈ ಭಾವ° says:

  ಕತ್ತೆ ಕೆಮಿ ಕತೆ ಲಾಯಕ ಆಯ್ದು. ಇನ್ನಾಣದ್ದು ಸುರುಮಾಡಿ ಮಾವ°.

 3. ಗೋಪಾಲ ಬೊಳುಂಬು says:

  ಕತೆ ಫಶ್ತಾಯಿದು. ಹೀಂಗಿಪ್ಪ ಬೇರೆ ಬೇರೆ ಕಥೆ ಇಪ್ಪ ಒಂದೊಂದೇ ಮರಂಗಳ ಕಡುದು ಇಡ್ಕುತ್ತವಾನೆ ಹೇಳಿ ಬೇಜಾರು ಆವ್ತಾನೆ.

 4. ರಘು ಮುಳಿಯ says:

  ಗೋಡೆಗೊಕ್ಕೆ ಮಾ೦ತ್ರ ಅಲ್ಲ ಕೆಮಿ ಇಪ್ಪದು,ಮರಕ್ಕೂ ಇದ್ದು ಹೇಳಿ ಆತು! ಒಳ್ಳೆ ನೀತಿ.

 5. ಎಮ್ ಬಿ says:

  ಆದರೆ, ಈಗ ರಾಣಿ,ಯುವ /ರಾಜ೦ಗೆ ಕೆಮಿಯೆ ಇಲ್ಲೆಡಾ, ಬರೀ ,ಪರ್ಸು ಇಪ್ಪದಡಾ?

 6. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಆರಿಂಗೂ ಗೊಂತಪ್ಪಲಾಗ ಹೇಳಿ ಒಬ್ಬನ ಹತ್ತರೆ ಹೇಳಿರೆ ಅದು ಎಲ್ಲರಿಂಗೂ ಪ್ರಚಾರ ಅಕ್ಕು-ಎಲ್ಲರಿಂಗೂ ಗೊಂತಾಯೆಕ್ಕು ಹೇಳಿ ಏನಾದರೂ ಗಟ್ಟಿಯಾಗಿ ಹೇಳಿರೆ ತುಂಬಾ ಜನಕ್ಕೆ ಅದು ಗೊಂತಾಗದ್ದೆ ಹೋಕು!

 7. ಮಾನೀರ್ ಮಾಣಿ says:

  ಹ್ಹೆ ಹ್ಹೆ.. ಕತ್ತೆ ಕೆಮಿ ಚೆ೦ದ ಇದ್ದು.. ಅಲ್ಲಾ ಯೆನಗೆ ಕ೦ಡಿದ್ದು ಎ೦ತರ ಹೇಳಿರೆ “ಸುಮಾರು ವರ್ಷ ಅಪ್ಪಾಗ ಅಲ್ಲದೋ ನಗಾರಿ ಹಾಳಾದ್ದು?? ಆಗ ಆ ಅರಸ ಇದ್ದಿದ್ದನೋ ಇಲ್ಯೋ?? ಪಾಪ ನಾಗಾರಿ ನುಡಿವಾಗ ಇದ್ದ ಅರಸನ ಕಿವಿ ನೆಟ್ಟಗಿದ್ದೂ ಕತ್ತೆ ಕಿವಿ ಹೇಳಿ ಪ್ರಚಾರ ಆತೋ ಹೆ೦ಗೇ ಹೇಳಿ..” 😉 ಎ೦ತದೇ ಆಗಲಿ ಕಥೆ ಬತ್ತದೇ ಇರಲಿ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *