Oppanna.com

ಸತ್ತು ಬದುಕಿ ಬಂದ ಕೈಸರ್.

ಬರದೋರು :   ಶರ್ಮಪ್ಪಚ್ಚಿ    on   30/04/2017    16 ಒಪ್ಪಂಗೊ

ಅನ್ನಪೂರ್ಣ ಚಂದ್ರಶೇಖರ

ಶ್ರೀಮತಿ ಅನ್ನಪೂರ್ಣ, ಇವು ನಿಜ ಜೀವನಲ್ಲಿ ನಡದ ಒಂದು ಘಟನೆಯ ಇಲ್ಲಿ ಕೊಟ್ಟಿದವು.
ಇವು ಮಡ್ವ ಜ್ಯೋತಿಷಿ ಚಂದ್ರಶೇಖರ ಇವರ ಧರ್ಮಪತ್ನಿ, ಕುಂಬಳೆ ಹತ್ರೆ ಕಿದೂರು ಗ್ರಾಮದ ಬೆಜಪ್ಪೆ ಹೇಳ್ತಲ್ಲಿ ವಾಸ್ತವ್ಯ.  ಈ ಹಿಂದೆ ನಮ್ಮ ಬೈಲಿಲ್ಲಿ ಮಡ್ವ ಡಾ|ಶ್ಯಾಮ ಭಟ್ ಇವರ ಲೇಖನಂಗಳ ಪ್ರಕಟ ಮಾಡಿದ್ದು ನಿಂಗೊಗೆ ನೆಂಪಿಕ್ಕು. ಅವರ ಅಕೇರಿಯಾಣ ತಮ್ಮನ ಹೆಂಡತಿ.

ಜ್ಯೋತಿಷಿ ಚಂದ್ರಶೇಖರ- ಇವು ಜ್ಯೋತಿಷ್ಯ ಶಾಸ್ತ್ರವ ಗಣಕ ಯಂತ್ರಕ್ಕೆ ಅಳವಡಿಸಿ ತನ್ನದೇ ಆದ ವೆಬ್ ಸೈಟ್ ಮಡ್ಕೊಂಡಿದವು. http://www.astrolite.in/astro/website/en/home

ಕತೆಯ ಓದಿ ನಿಂಗಳ ಅಭಿಪ್ರಾಯ ಕೊಟ್ಟು ಪ್ರೋತ್ಸಾಹ ನೀಡಿ 

ಸತ್ತು ಬದುಕಿ ಬಂದ ಕೈಸರ್.

ಕೈಸರ್ ಹೇಳಿರೆ ಎಂಗಳ ಮನೆಯ ಮುದ್ದಾದ ನಾಯಿ. ನಾಯಿ ಹೇಳುದಕ್ಕಿಂತ ಮನೆಯ ಸದಸ್ಯ ಹೇಳುದೇ ಒಳ್ಳೆದು ಹೇಳಿ ಕಾಣ್ತು. ಅದರ ಕೊಂಡಾಟಲ್ಲಿ ದೆನಿಗೋಳುದು ಕೈಸೂ ಹೇಳಿ. ಅದು ಪೇಟೆ ನಾಯಿಗಳ ಹಾಂಗಿಪ್ಪ ದೊಡ್ಡ ನಾಯಿ ಎಂತಲ್ಲ. ದೇಶೀ ತಳಿ ಅಷ್ಟೆ. ಕೆಲವು ಜನ ಕಾಟು ನಾಯಿ ಹೇಳ್ತವು. ನೋಡಿದರೆ ಬರೇ ಪಾಪ. ಹಾಂಗೆ ಹೇಳಿ ದಡ್ಡ ಅಲ್ಲ. ಎಷ್ಟು ಬೇಕೋ ಅಷ್ಟೇ ಕೊರಪ್ಪುಗು. ಕಚ್ಚುವ ಅಭ್ಯಾಸ ಅಂತೂ ಇಲ್ಲಲೇ ಇಲ್ಲೆ. ಮನೆ ಸದಸ್ಯರತ್ರೆ ಅದಕ್ಕೂ ತುಂಬಾ ಪ್ರೀತಿ.ಬಿಟ್ಟುಗೊಂಡಿದ್ದರೆ ತೋಟಕ್ಕೋ,ಗುಡ್ಡೆಗೋ,ವಾಯು ವಿಹಾರಕ್ಕೋ ಎಲ್ಲೇ ಹೋವುತ್ತರೂ ಒಟ್ಟಿಂಗೇ ಬಕ್ಕು. ಬಿಡದ್ದರೆ ಬೊಬ್ಬೆ ಹಾಕುವುದರಲ್ಲಿ ಕೆಮಿ ಮಡಗಿ ಕೂಬ್ಬಲೆ ಬಿಡ. ಪೇಟೆ ಗೋ ಎಲ್ಲಿಯಾದರೂ ಹೆರಟರೆ ಬಸ್ಸಿನ ಹತ್ತರಂಗೆ ವರೆಗೂ ಬಂದು ಬಸ್ಸು ಹತ್ತಿ ‌ಹೋದ ಮತ್ತೆಯೇ ಅದು ಮನೆಗೆ ವಾಪಾಸು ಹೋಕಷ್ಟೆ. ಮನೆಗೆ ಬೀಗ ಹಾಕಿ ಅದರ ಬಿಟ್ಟಿಕ್ಕಿ ಹೋಪದಕ್ಕೆ ಎಂತ ತೊಂದರೆಯೂ ಇಲ್ಲೆ.ಮನೆಯವು ಆರೂ ಇಲ್ಲದ್ದ ಸಮಯಲ್ಲಿ ಬೇರೆ ಆರನ್ನೂ ಪಡಿ ದಾಂಟಿ ಒಳ ಬಪ್ಪಲೆ ಬಿಡ. ಅಂತೂ ಒಂಥರ ಬೋಡಿಗಾರ್ಡ್ ಇದ್ದಾಂಗೆ. ಊಟ ತಿಂಡಿಲ್ಲಿಯೂ ಸರಳತೆ. ಇರುಳು ಒಂದು ಗಾಚು ಹಾಲು ಕೊಡದ್ದೆ ಮನುಗಲೂ ಬಿಡ.

 ಇಷ್ಟೆಲ್ಲ ಎಂತಕೆ ಹೇಳ್ತಾ ಇದ್ದೆ ಗ್ರೈಶೆಡಿ. ಅದು ಒಂದರಿ ಸತ್ತು ಬದುಕಿ ಬಂದ ಘಟನೆ ನೆಂಪಾತು.

ಅದರ ಬಗ್ಗೆ ಬರವಲೆ ಹೆರಟದು.

 ಒಂದರಿ ಎಂತಾತು ಹೇಳಿರೆ ಆನು ಪೇಟೆಗೆ ಹೆರಟಪ್ಪಗ ಈ ಕೈಸ ಎನ್ನ ಹಿಂದಾಂದಲೇ ಬತ್ತಾ ಇದ್ದತ್ತು. ರಜಾ ಮುಂದೆ ಹೋದಪ್ಪಗ ನಾಲ್ಕೈದು ತಿರುಗಾಡಿ ನಾಯಿಗೊ ಎನ್ನ ನೋಡಿ ಕೊರಪ್ಪಿಗೊಂಡು ಹತ್ರಂಗೇ ಬಪ್ಪಲೆ ಶುರುಮಾಡಿಯಪ್ಪಗ ಆನು ಹೆದರಿ ಕಂಗಾಲು. ಹುಚ್ಚು ನಾಯಿ ಕಾಟ ಬೇರೆ ಆ ಸಮಯಲ್ಲಿ ಜೋರು ಇತ್ತುದೆ.  ಎನ್ನ ರಕ್ಷಣೆಗೆ ಬೇಕಾಗಿ ಕೈಸು ಅವರ ಓಡುಸುಲೆ ಹೋತು. ಪಾಪ ಎಡಿಗಾದಷ್ಟು ಲಡಾಯಿ ಮಾಡಿತ್ತು. ಆ ಧಡಿಯ ನಾಯಿಗೊ ಇದರ ಕೆಮಿ ಕಚ್ಚಿ ಹರುದಿಕ್ಕಿ ಓಡಿ ಹೋದವು. ಕೆಮಿಂದ ನೆತ್ತರು ಹರುಶಿಗೊಂಡು ಕುಯಿಂ ಕುಯಿಂ ಹೇಳಿ ಕೂಗಿಯೊಂಡು ಎನ್ನತ್ರೆ ಬಂತು. ಅದರ ನೋಡಿ ಕರುಳೇ ಕಿತ್ತು ಬಂದಾಂಗಾತು. ಪೇಟೆಗೆ ಹೋಪ ಕೆಲಸ ಬಿಟ್ಟು ಅದರ ಕರಕ್ಕೊಂಡು ಮನೆಗೆ ಬಂದು ಗಾಯವ ತೊಳದು ನೋಡಿದರೆ ದೊಡ್ಡ ಗಾಯ.ಡಾಕ್ಟ್ರಂಗೆ ಫೋನು ಮಾಡಿ ಬಪ್ಪಲೆ ಹೇಳುವಾಳಿರೆ ಆರುದೆ ಸಿಕ್ಕಿದ್ದವಿಲ್ಲೆ. ಮತ್ತೆ ನೆಳವು ಕೂರದ್ದ ಹಾಂಗೆ ಮುಲಾಮು ಉದ್ದಿ ಮಡಗಿದೆ. ಎರಡು ದಿನ ಕಳುದು ಕಡಮ್ಮೆ ಆದಾಂಗೆ ಕಂಡತ್ತು. ಆದರೆ ಆದ್ದದೇ ಬೇರೆ. ಹೆರಾಣ ಗಾಯ ಒಣಗಿದ್ದದಷ್ಟೆ.

ಒಳಾಂದ ನೀರು ಹರಿವಲೆ ಶುರುವಾತು.ಲೈಟು ಹಾಕಿ ನೋಡಿರೆ ಹುಳ ಆಗಿತ್ತು .ಪಾಪ ಯಮ ಯಾತನೆ ಆವ್ತಾ ಇದ್ದತ್ತಾಯಿಕು. ಡಾಕ್ಟ್ರನತ್ತರೆ ಕೇಳಿರೆ ನೀಲಗಿರಿ ಎಣ್ಣೆ ಹಾಕುಲೆ ಹೇಳಿದವು. ಅದರ ತಂದಾತು. ಹಾಕುಲೆ ಎನಗೆ ಒಬ್ಬಂಗೆ ಎಡಿತ್ತೋ. ಕಷ್ಟಪಟ್ಟು ಹೇಂಗೋ ಹಾಕಿ ಆತು .ಆದರೆ ಎಂತ ಗುಣ ಇಲ್ಲೆ. ಕೇಳಿರೆ ಅದು ನಿಜವಾದ ಎಣ್ಣೆ ಆಗಿರ ಹೇಳಿದವು. ಒಟ್ಟಾರೆ ಈ ಕೈಸು ಉಂಡು ತಿಂದು ಮಾಡದ್ದೆ ದಿನ ನಾಲಕ್ಕಾತು. ಸ್ವರ ಹೆರಡುಸಲೂ ಎಡಿಯದ್ದಷ್ಟು ನಿತ್ರಾಣ. ಎನ್ನ ಕಂಡು ಅದು  ಕಣ್ಣುನೀರು ಹಾಕುದರ ನೋಡಿಗೊಂಡು ಉಂಬಲೆ ತಿಂಬಲಾದರೂ ಹೇಂಗೆ ಎಡಿಗು?. ಹೊಟ್ಟೆ ಕಿವುಚಿದಹಾಂಗೆ ಆಗಿಯೊಂಡಿತ್ತು.

  ಇನ್ನು ಎನ್ನ ಕೈಸನ ಉಳುಸುಲೆ ಒಂದೇ ದಾರಿ. ಪುನಃ ಸರಿಯಾದ ನೀಲಗಿರಿ ಎಣ್ಣೆ ತಂದು ಹಾಕಿ ನೋಡುದು. ಯಜಮಾನರು ಮನೆಲಿ ಇಲ್ಲೆ. ಸರಿ ಮನೆಯ ಬಾಕಿ ಕೆಲಸಂಗಳೆಲ್ಲಾ ಕರೇಂಗೆ ಮಡಗಿ ‌ಸ್ವತಃ ಆನೇ ಪೇಟೆಗೆ ಹೋದೆ. ಮೂರುನಾಲ್ಕು ದಿಕೆ ಕೇಳಿರೂ ಎನಗೆ ಬೇಕದ್ದು ಸಿಕ್ಕಿದ್ದಿಲ್ಲೆ. ಸುತ್ತಾಕಿ ಬೊಡುದತ್ತು. ಆದರೂ ಮತ್ತೆ ಛಲ ಬಿಡದೆ ಮುಂದುವರಿಸಿದ ಪ್ರಯತ್ನಂದ ಅಕೇರಿಗೂ ಒಂದು ಕಡೆ ಎಣ್ಣೆ ಸಿಕ್ಕಿತ್ತು. ಎನ್ನ ಖುಷಿಗೆ ಲೆಕ್ಕವೇ ಇಲ್ಲೆ. ಒಂದು ಕ್ಷಣ ಹಾಳುಮಾಡದ್ದೆ ಸೀದಾ ಮನೆಗೆ ಬಂದೆ.

  ಕೈಸೂ..ಬಾ ಪುಟ್ಟಾ..ನಿನಗೆ  ಮದ್ದು ತಯಿಂದೆ. ಇನ್ನು ಬೇಗ ಗು ಅಕ್ಕು ನಿನಗೆ ಹೇಳಿಗೊಂಡು ಬಂದರೆ ಅದರ ಸುದ್ದಿಯೇ ಇಲ್ಲೆ. ಹೋಗಿ ನೋಡಿರೆಅಡ್ಡ ತಲೆ ಹಾಕಿ ಮನುಗಿದ್ದು. ಎನಗೆ ಕೂಗುಲೇ ಬಂತು. ಮುಟ್ಟಿ ನೋಡಿದೆ.ಉಸಿರು ಮಾಂತ್ರ ಇದ್ದು. ಇನ್ನು ತಡ ಮಾಡಿರಾಗ ಹೇಳಿ ಅದರ ಕೆಮಿಗೆ ಎಣ್ಣೆ ಎರವಲೆ ತಲೆ ನೆಗ್ಗಿ ಹಿಡಿವಲೆ ಬೇಕಾಗಿ ಕೆಲಸದ ಹೆಣ್ಣಿನ ದೆನಿಗೋಳಿದೆ. ಅದಕ್ಕೆ ಹೇಸಿಗೆ ಆತೂಳಿ ಕಾಣುತ್ತು. ಅದು ಇನ್ನು ಬದುಕ್ಕುಲೆ ಇಲ್ಲೆ ಅಕ್ಕ. ಎಂತಕೆ ಸುಮ್ಮನೇ ಬಂಙ ಬಪ್ಪದು ಹೇಳಿತ್ತು. ಎನಗೆ ಕೋಪ ನೆತ್ತಿಗೇರಿತ್ತು .ನಿನಗೆ ಎಡಿಯದ್ದರೆ ಬೇಡ ಆನು ಮಾಡಿಗೊಂಬೆ. ಎನ್ನ ಕೈಸನ ಬದುಕ್ಕ ಹೇಳಿ ಮಾಂತ್ರ ಹೇಳೆಡ. ನಿನಗೆ ಎಲ್ಲಿಯಾದರೂ ಹೀಂಗಿಪ್ಪ ಸ್ಥಿತಿ ಬಂದರೆ ಎಂತಾವುತಿತ್ತು ಹೇಳಿ ಯೋಚನೆ ಮಾಡು. ಆರುದೆ ನಿನ್ನ ಹತ್ರಂಗೆ ಬಾರದ್ದರೆ ಎಂತಾವುತಿತ್ತು ಹೇಳಿದೆ.

ಅದು ದುರುದುರು ಪರಂಚಿಗೊಂಡು ಹೋತು. ಮತ್ತೆ ದೇವರ ಮೇಲೆ ಭಾರ ಹಾಕಿ  ಹೇಂಗೋ ಅದರ ಎತ್ತಿ ಹಿಡುದು ಕೆಮಿಯೊಳಾಂಗೆ ಎಣ್ಣೆ ಎರದೆ. ಈಗ ಗೊಂತಾತದ ನಿಜವಾದ ನೀಲಗಿರಿ ಎಣ್ಣೆಯ ಸ್ವರೂಪ. ಹುಳುಗೊ ಎಲ್ಲ ಉರಿಲಿ ಪೆಡಚ್ಚುಲೆ ಶುರುಮಾಡಿದವು. ಕೈಸ ಬೇನೆ ತಡವಲೆಡಿಯದ್ದೆ ಓಡುಲೆ ನೋಡಿರೂ ಗಟ್ಟಿ ಹಿಡುಕ್ಕೊಂಡೆ. ಪಾಪ ಆನು ಅದರ ಕೊಲ್ಲುತ್ತಾ ಇದ್ದೇಳಿ ಗ್ರೈಶಿತ್ತೋ ಏನೋ. ರಜ ಹೊತ್ತಿಲ್ಲಿ ಸುಮಾರು ಇಪ್ಪತ್ತು ಹುಳಂಗೊ ಹೆರ ಬಿದ್ದವು. ಆದರೂ ಮುಗುದ್ದಿಲ್ಲೆ. ಪುನಃ ಎಣ್ಣೆ ಹಾಕಿದೆ. ಒಳಾದಿಕೆ ಇತ್ತ ಕಾರಣ ಹೆರ ಬತ್ತಾ ಇತ್ತಿಲ್ಲೆ. ಮತ್ತೆ ಒಂದು ಕಡ್ಡಿ ತೆಕ್ಕೊಂಡು ಅರ್ಧ ಗಂಟೆ ಕೂದು ಒಕ್ಕಿ ಒಕ್ಕಿ ಹೆರ ಹಾಕಿದೆ. ಹತ್ತು ಹುಳ ಬಂತು. ಈಗ ಲೈಟು ಹಾಕಿ ನೋಡಿದೆ. ಮುಗುದಾಂಗೆ ಕಂಡತ್ತು.ಈಗ ಕೈಸಂಗೂ ಸಮಾಧಾನ ಆದಾಂಗೆ ಕಂಡತ್ತು. ಹುಳ ಬಾಕಿ ಇದ್ದರೆ ಸಾಯಲಿ ಹೇಳಿ ಪುನಃ ರಜಾ ಮದ್ದೆರದು ಒಂದು ವಸ್ತ್ರ ತಂದು ಕೆಮಿಯ ಸುತ್ತ ಉದ್ದಿ ಒಪ್ಪ ಮಾಡಿದೆ. ಅದಕ್ಕೆ ಕುಡಿವಲೆ ನೀರು ತಂದು ಕೊಟ್ಟೆ. ಈಗ ಮೆಲ್ಲಂಗೆ ಎದ್ದು ನೀರು ಕುಡುದು ಎನ್ನ ನಕ್ಕಿ ಕೊಂಡಾಟ ಮಾಡಿತ್ತು. ಇದಕ್ಕಿಂತ ಹೆಚ್ಚಿನ ಖೊಷಿ ಬೇರೆಲ್ಲಿ ಸಿಕ್ಕುಗು? ಎನ್ನ ಕಣ್ಣಿಲ್ಲಿ ಆನಂದ ಭಾಷ್ಪ!. ಪ್ರೀತಿಂದ ಮೈನೇವರುಸಿಗೊಂಡು ಕೂದೆ. ಅದಕ್ಕೆ ಓಳ್ಳೆ ಒರಕ್ಕು ಬಂತು. ಈಗ ನೆಮ್ಮದಿ ಆತು.ಹೋಗಿ ಮಿಂದಿಕ್ಕಿ ಬಂದು ದೇವರಿಂಗೆ ಅಡ್ಡ ಬಿದ್ದೆ. ಮತ್ತೆ ಊಟ ಮುಗುಶಿ ಏಳುಗ ಗಂಟೆ ನಾಲ್ಕು.!

 ಕಸ್ತಲೆ ಅಪ್ಪಗ ಮನೆಯವು ಬಂದ ಕೂಡ್ಲೆ ಮೊದಾಲು ಹೇಳಿದ್ದು ಈ ವಿಷಯವ. ಅದರ ನೋಡಿ ಅವಕ್ಕೂ ಆಶ್ಚರ್ಯ ಆತು. ನೀ ಭಯಂಕರ ಡಾಕ್ಟ್ರನೇಪ್ಪ . ನಿನ್ನ ನಂಬಿಕೆ ಪ್ರೀತಿ ವಿಶ್ವಾಸವೇ ಅದರ ಗೆಲ್ಲುಸಿದ್ದದು ಹೇಳಿದವು. ಈ ದಿನ ಇರುಳು ಒಳ್ಳೆ ಒರಕ್ಕು ಬಂತು. ಎರಡೇ ದಿನಲ್ಲಿ ಅದು ಮೊದ್ಲಾಣ ಹಾಂಗೆ ಉಷಾರಾತು. ಎಲ್ಲರಿಂಗೂ ನೆಮ್ಮದಿ. ಈಗ ಅದಕ್ಕೆ ಎನ್ನತ್ರೆ ರಜಾ ಪ್ರೀತಿ ಜಾಸ್ತಿ. ಉಪಕಾರ ಮಾಡಿದವರನ್ನೂ ರಜ ಸಮಯಲ್ಲಿ ಮರತು ಬಿಡುವ ಮನುಷ್ಯರಿಗಿಂತ ಉಪಕಾರ ಮಾಡಿದವರ ಜೀವಮಾನ ಇಡೀ ನೆಂಪು ಮಡಗಿ ಪ್ರೀತಿ ತೋರುಸುವ ಮೂಕ ಪ್ರಾಣಿಗಳೇ ವಾಸಿ ಅಲ್ಲದೋ.

 ಇಷ್ಟೆಲ್ಲಾ ಕಷ್ಟ ಬಂದದು ಅದರ ನಾಲ್ಕನೇ ವರ್ಷ ಪ್ರಾಯಲ್ಲಿ.ಈಗ ಬರೋಬ್ಬರಿ ಹತ್ತು ವರ್ಷ.ಈಗಳೂ ಒಳ್ಳೆ ಆರೋಗ್ಯಲ್ಲಿ ಇದ್ದು.ಅದು ಇಪ್ಪಲ್ಲಿವರೆಗ ಹೀಂಗ ಸೌಖ್ಯಲ್ಲಿ ಇರಲಿ ಹೇಳುದು ಎನ್ನ ಪ್ರಾರ್ಥನೆ.

~~~***~~~

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

16 thoughts on “ಸತ್ತು ಬದುಕಿ ಬಂದ ಕೈಸರ್.

  1. ಮೂಕ ಪ್ರಾಣಿಗಳ ಮೇಗೆ ಪ್ರೀತಿ ಇಪ್ಪವಕ್ಕೇ ಅದರ ಸಂಕಟ ಅರ್ಥ ಅಕ್ಕಷ್ಟೆ. ಯೋ…ಆ ಕೆಲಸದ್ದರ ಕಣ್ಣಿಲ್ಲಿ ನೆತ್ತರಿಲ್ಲದ್ದ ಮಾತುಗಳೇ…!
    ಒಳ್ಳೆ ಚೆಂದಕೆ ಬರದ್ದೆ ಅನ್ನಪೂರ್ಣ…

  2. ಅನ್ನಪೂರ್ಣ ನಮ್ಮ ಬಯಲಿನ ಸದಸ್ಯೆ ಆದ್ದು ಭಾರೀ ಸಂತೋಷಾತು. ಇನ್ನು ಈ ನಿಜ ಕತೆಯ ಬಗ್ಗೆ….., ಕತೆ ಓದಿ ಸಂತಾಪವೂ ಮತ್ತೆ ಸಂತೋಷವೂ ಆತು. ಎನ್ನ ವೈಫೈ ಮೋಡಮ್ ಕೆಟ್ಟು ಹೋಗಿ ಐದಾರು ದಿನಾತು. ಶ್ರೀ ಸೂಕ್ತಿಯ ಉದಿಯಪ್ಪಗ ಕರೆನ್ಸಿಲಿ ಹಾಕುದು. ಇಂದೀಗ ಈ ಪ್ರದೇಶಕ್ಕೆ ಎನ್ನ ತಮ್ಮ ಪ್ರಕಾಶ ಬಯಿಂದ. ಅವ ವಾಪಾಸು ಬಪ್ಪನ್ನಾರ ಇದರ ಉಪಯೋಗಿಸು (ಜೀಯೊ ಸಿಮ್) ಹೇಳಿಕ್ಕಿ ಹೋದಕಾರಣ ಅದರ ಪ್ರಯೋಜನ ಪಡೆತ್ತಾ ಇದ್ದೆ.

  3. ಯಬ್ಬಾ ಮೂವತ್ತು ಹುಳುಗೊ!! ಕೈಸರನ ಸ್ಥಿತಿ ಗ್ರೇಶಿಯೇ ಬೇಜಾರಾತು. ಅನ್ನಪೂರ್ಣಕ್ಕ ಬರದ ಶೈಲಿ ಲಾಯಕಿತ್ತು. ಒಳ್ಳೆ ಓದುಸೆಂಡು ಹೋತು. ನಿಜ, ಮೂಕ ಪ್ರಾಣಿಗವಕ್ಕೆ ಮನುಷ್ಯರಿಂದ ಖಂಡಿತಾ ಹೆಚ್ಚಿನ ಉಪಕಾರ ಸ್ಮರಣೆ ಇದ್ದು.

  4. “ಉಪಕಾರ ಮಾಡಿದವರನ್ನೂ ರಜ ಸಮಯಲ್ಲಿ ಮರತು ಬಿಡುವ ಮನುಷ್ಯರಿಗಿಂತ ಉಪಕಾರ ಮಾಡಿದವರ ಜೀವಮಾನ ಇಡೀ ನೆಂಪು ಮಡಗಿ ಪ್ರೀತಿ ತೋರುಸುವ ಮೂಕ ಪ್ರಾಣಿಗಳೇ ವಾಸಿ ಅಲ್ಲದೋ.”….,
    Khandita nooru paalu Sathya. Kaisuvina kathe laayakalli niroopisidde. Keep going, All d best.

  5. ಊರ ನಾಯಿಗೆ ದಾಸು ಬೊಗ್ಗ ಹಾಂಗೆಂತಾರು ಹೆಸರ ಬಿಟ್ಟಿಕ್ಕಿ ಕೈಸರ್ ಹೇದು ಹೆಸರು ಮಡಿಗೆದ್ಸದಕ್ಕೆಪ್ಪ!!! ಊರವಕ್ಕೆ ದೊಡಾ ಜಾತಿಯ ವಿದೇಶಿ ನಾಯಿ ಆಯಿಕ್ಕು ಹೇದು ಹೆದರ್ಸಲೋ?! ಮತ್ತಾದ ಕೈಸ° ಕೈಸು ಆತದು !

    ಕೆಲಸದ ಹೆಣ್ಣಿಂಗೆ ಹಾಂಕಾರ ನೋಡಿ!! ನಿಂಗೊಗೆ ಪಿಸುರು ಬಂದ್ಸು ನೈಜತೆಯ ತೋರ್ಸಿತ್ತು. ಅಬ್ಬ ಹುಳು ಒಕ್ಕಿ ಹಾಕಲೆ ಬಂಙ , ತಾಳ್ಮೆ…. ಅದಕ್ಕೆಲ್ಲ ದೃಢ ಮನಸ್ಸು ಬೇಕಪ್ಪ.

    ಬಹುಶಃ ಕೈಸಂಗೇ ಗೊಂತಾಯಿಕ್ಕು ನಿಂಗಳಿಂದಾಗಿ ಅದು ಸತ್ತುಬದುಕ್ಕಿತ್ತು ಹೇದಪ್ಪೊ. ಒಂದೊಪ್ಪ

    1. ಆನು ಸಣ್ಣಾಗಿಪ್ಪಗ ಬಾಲಮಂಗಳಲ್ಲಿ ಒಂದು ನಾಯಿಯ ಕಥೆ ಧಾರವಾಹಿ ರೂಪಲ್ಲಿ ಬಂದುಗೊಂಡಿತ್ತು.ಒಳ್ಳೆ ಸಾಹಸ,ಶೌರ್ಯದ ನಾಯಿಯಾಗಿ ಇಪ್ಪ ಕಥೆ.ಅದರಲ್ಲಿ ನಾಯಿಯ ಹೆಸರು ಕೈಸರ್ ಹೇಳಿ.ಎನಗೆ ತುಂಬಾ ಇಷ್ಟ ಆಗಿದ್ದತ್ತು ಕಥೆ.ಹಾಂಗೆ ಎನ್ನ ನಾಯಿಗೂ ಹಾಂಗೇ ಹೆಸರು ಮಡಗಿದ್ದದು.☺

  6. ನಿಜವಾದ ಘಟನೆಯ ಚೆಂದದ ನಿರೂಪಣೆ. ಸಾಕುಪ್ರಾಣಿಗಳ ಮೇಲೆ ನಮಗೆಷ್ಟು ಪ್ರೀತಿ ಇದ್ದೋ ಅದರ ನಾಕು ಪಟ್ಟು ಹೆಚ್ಚು ಪ್ರೀತಿ ಅವಕ್ಕೆ ನಮ್ಮತ್ರೆ ಇರ್ತು. ನಿನ್ನ ಸಾಧನೆಂದಾಗಿ ನಾಯಿ ಬದ್ಕಿದ್ದು ಕೊಶಿಯಾತು. ಇನ್ನೂ ಹೀಂಗೇ ಬರೆತ್ತಾಯಿರು.

  7. ಆನು ಬರದ ಪ್ರಥಮ ಲೇಖನವ ಮೆಚ್ಚಿ ಇಲ್ಲಿ ಪ್ರಕಟಿಸಿದ್ದಕ್ಕೆತುಂಬು ಹೃದಯದ ಧನ್ಯವಾದಂಗೊ ಶರ್ಮಣ್ಣಾ..

  8. ಒಳ್ಳೆ ಕುತೂಹಲ ಮೂಡಿಸಿಗೊಂಡು ಹೋವ್ತು. ನಿರೂಪಣೆ ಲಾಯಿಕ ಆಯಿದು. ಇನ್ನೂದೆ ಹೀಂಗೇ ಬರೆತ್ತಾ ಇರು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×