ಇದು ಕಥೆಯಲ್ಲ…ಜೀವನ????????

March 30, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆ ದಿನ ಆಗಸ್ಟ್ ೧೬, ಆನು ಕೆಲಸಕ್ಕೆ ಸೇರಿದ ಎರಡನೇ ದಿನ…ಬಣ್ಣ ಬಣ್ಣದ ಕನಸು ನೋಡಿಯೊಂಡು ಕಣ್ಣು ಬಿಟ್ಟಪ್ಪಗ ೮.೦೦ ಗಂಟೆ ಆಗಿದ್ದತ್ತು…ಗಡಿ ಬಿಡಿ ಮಾಡಿ ಎದ್ದು…ಎಲ್ಲಾ ಕೆಲಸ ಅರ್ಧಂಭರ್ದ ಮಾಡಿ ಹೆರಟೆ…ಒಂಭತ್ತು ಗಂಟೆ ಒಳ ಆನು ಆಫೀಸಲ್ಲಿ ಇರೆಕಾಗಿದ್ದತ್ತು…ರೂಮಿಂದ ಆಫೀಸ್ ಗೆ ಬಸ್ಸಿಲ್ಲಿ ಹೋಪದಾದ್ರೆ ೧.೦೦ ಗಂಟೆ ದಾರಿ ಇದ್ದತ್ತು…ಈ ವಿಚಾರ ತಲೆಗೆ ಬಂದ ಕೂಡ್ಲೆ ತಿಂಡಿಯೂ ತಿನ್ನದ್ದೆ ಬಸ್ ಸ್ಟಾಪಿನತ್ರೆ ಓಡಿದೆ…

ಹಾಂಗೆ ಓಡ್ತಾ ಇಪ್ಪಗ ಯಾವುದೋ ಶಾಲಾ ವಾಹನ ಯಮ ವೇಗಲ್ಲಿ ಬಂದು ಗುಂಡಿಲಿಪ್ಪ  ಕೆಸರ ಪೂರಾ ಎತ್ತಿ ಎನ್ನ ಮೇಲೆ ಹಾಕಿ ಹೋಳಿ ಹಬ್ಬ ಮಾಡಿ ಹೋತು…ಎನಗೆ ಆಗ ಬಂದ ಕೋಪಲ್ಲಿ  ಅವನ ಗಾಡಿಯ ಗ್ಲಾಸು ಒಡೆಯೆಕು ಹೇಳಿ ಒಂದು ಕಲ್ಲು ಎತ್ತಿಯೊಂಡೆ…ಎತ್ತುವಷ್ಟರಲ್ಲೆ ಅದು ಮರೆಯಾಗಿದ್ದತ್ತು.

ಎನ್ನ ಪರಿಸ್ಥಿತಿ ಈಗ ಇಂಗು ತಿಂದ ಮಂಗನಾಂಗೆ  ಆಗಿದ್ದತ್ತು…ಕೂಡ್ಲೆ ಆಫೀಸಿಂಗೆ ಫೋನ್ ಮಾಡಿ ವಿಷಯ ತಿಳುಶಿದೆ…ಅವು ಅರ್ಥ ಮಾಡಿಯೊಂಡವು…ಹ್ಯಾಪು ಮೋರೆ ಹಾಕಿಯೊಂಡು ವಾಪಸ್ ಬತ್ತಾ ಇಪ್ಪಗ,ಎನ್ನ ಈ ಪರಿಸ್ಥಿತಿಗೆ  ಆರು ಕಾರಣ ಹೇಳಿ ಆಲೋಚನೆ ಮಾಡಿದೆ…ಆಗ ಎನ್ನ ಕಣ್ಣ ಮುಂದೆ ಬಂದ ೩ ಆರೋಪಿಗಳು…

೧.ಆಫೀಸಿಗೆ ಹೋಯೆಕು ಹೇಳಿ ಗೊಂತಿದ್ರೂ , ತಡವಾಗಿ ಎದ್ದ ಆನು….

೨.ಮಕ್ಕೊ ವ್ಯಾನಿಲ್ಲಿದ್ದರೂ , ವಾಯುವೇಗಲ್ಲಿ ಹೋದ ಡ್ರ್ಯೆವರ್….

೩.ಮಾರ್ಗಲ್ಲಿಪ್ಪ ಗುಂಡಿಗಳ ನೋಡಿಯೂ ನೋಡದ್ದೆ ತಮ್ಮ ಸ್ವಾರ್ಥ ಸಾಧನೆಗೇ ಬದುಕ್ಕುವ ರಾಜಕಾರಣಿಗೊ…

ಆನು ಬರದ್ದರ ಓದಿ ಅವು ತಿದ್ದಿಯೊಳ್ತವು ಹೇಳಿ ಎನಗೆ ಖಂಡಿತಾ ಭರವಸೆ ಇಲ್ಲೆ.ಆನ೦ತೂ ಎನ್ನನ್ನೇ ತಿದ್ದಿಗೊ೦ಡೆ.

ಎನ್ನ ಕೋಪ, ಈ  ಅನುಭವ  ಬರದಪ್ಪಗ ಕಮ್ಮಿ ಆತಿದಾ !.

ಇದು ಕಥೆಯಲ್ಲ...ಜೀವನ????????, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

  1. suhaa...s

    ಎಂಗಳದ್ದು ಖಾಸಗಿ ಕಂಪನಿ ಅಲ್ಲದೊ…ಆ ದಿನ ಎಂಗಗೆ ಸ್ವಾತಂತ್ರ್ಯ ಇದ್ದತ್ತಿಲ್ಲೆ….

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಡೈಮಂಡು ಭಾವಜಯಗೌರಿ ಅಕ್ಕ°ಚೆನ್ನೈ ಬಾವ°ಸಂಪಾದಕ°ಸುಭಗಹಳೆಮನೆ ಅಣ್ಣvreddhiಶೀಲಾಲಕ್ಷ್ಮೀ ಕಾಸರಗೋಡುಗಣೇಶ ಮಾವ°ಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ಕಜೆವಸಂತ°ರಾಜಣ್ಣಪೆರ್ಲದಣ್ಣಕೊಳಚ್ಚಿಪ್ಪು ಬಾವಮಾಲಕ್ಕ°ಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕಮುಳಿಯ ಭಾವಶರ್ಮಪ್ಪಚ್ಚಿಕೇಜಿಮಾವ°ಪುತ್ತೂರಿನ ಪುಟ್ಟಕ್ಕಡಾಗುಟ್ರಕ್ಕ°ವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ