ಇಲ್ಲಿ ಮೂತ್ರಿಸಬಾರದು…

March 23, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲಾ ದೇಶಂಗಳಲ್ಲಿಯೂ ಕಾನೂನು ಹೇಳಿ ಒಂದು ಇದ್ದು. ನಮ್ಮ ದೇಶಲ್ಲಿ ನಾವೂ ಮಾಡಿದ ಕಾನೂನು. ನಮ್ಮ ಮನೇಲಿ ಮನೆ ಯಜಮಾನ ಹಾಕಿದ್ದು ಕಾನೂನು. ಯಾವುದೇ ಸಂಘ ಸಂಸ್ಥೆ ತೆಕ್ಕೊಂಡ್ರೂ ಅಲ್ಲಿಯೂ ಕಾನೂನು. ನಮ್ಮ ವೈಯುಕ್ತಿಕ ಜೀವನಕ್ಕೆ ನಮ್ಮದೇ ಕಾನೂನು ಇದ್ದು ಅಲ್ಲದೋ. ಎಂತರ ಕಾನೂನು ಹೇಳಿರೆ?. ಸರಳವಾಗಿ ಹೇಳ್ತರೆ ‘ಶಿಸ್ತು’, ಅಷ್ಟೇ. ನಮ್ಮ ಜೀವನ , ನಮ್ಮ ಕ್ರಮ ,  ನಡವಳಿಕೆ ಸಭ್ಯ ರೀತಿಲ್ಲ್ಯೂ ಇತರರಿಂಗೆ ಉಪದ್ರವೂ ಆಗದ್ದಾಂಗೆ ಇಪ್ಪಲೆ ಅಪ್ಪೋ. ಆದರೇ ಸ್ವಾರ್ಥಕ್ಕಾಗಿ ಡೆಲ್ಲಿಲಿ ಟೋಪಿ ಹಾಕಿದ್ದವನ ಲಾಗಾಯ್ತು ಕನ್ಯಾಕುಮಾರಿಲಿ ಕೊಡಿ ಹಿಡಿತ್ತವನೂ ಸಹ ಕಾನೂನು ಉಲ್ಲಂಘನೆ ಮಾಡುತ್ತು ನಾವೂ ನಿತ್ಯ ಟಿವಿ, ಪೇಪರ್ಲಿ ಕಾಣುತ್ತು. ಅದು ದೊಡ್ಡ ಸಮಾಚಾರ. ನಾವೂ ನಮ್ಮ ಸುತ್ತ ಮುತ್ತ ಇಪ್ಪ ಸಣ್ಣ ಸಣ್ಣ ಸಂಗತಿ ಒಂದರಿ ಕಣ್ಣು ಹಾಯಿಸುವೋ.

ಇಲ್ಲಿ ಮೂತ್ರಿಸಬಾರದು : ಎಷ್ಟೋ ದಿಕ್ಕೆ ನಾವೂ ಈ ಫಲಕ ಕಂಡಿದು . ಸ್ವಚ್ಚವಾಗಿ ಆ ಪರಿಸರ ಬೇಕು ಹೇಳಿ ಅಲ್ಲದೋ ಜನ ಜಾಗೃತಿ ಮಾಡ್ಳೆ ಅಲ್ಲದೋ ಅಲ್ಲಿ ಬೋರ್ಡ್ ಹಾಕಿದ್ದು. ಆದರೆ, ಬಹಳಷ್ಟು ಜನಕ್ಕೆ ಅದರ ಕಂಡಪ್ಪಗಷ್ಟೇ ಅವಂಗೂ ಓ ಒಂದರಿ ಹೊಯೇಕು ಹೇಳಿ ಕಾಂಬೊದು. ! ಬಸ್ಸಿಲ್ಲಿ ಹೋಪಗ ನೋಡೆಕದಾ ಸರೀ ಅದಕ್ಕಿಪ್ಪ ವ್ಯವಸ್ಥೆ ಇಪ್ಪ ಜಾಗೆಲಿ ಹೋಗಿ ಬಸ್ಸು ನಿಂದರೂ ಹಲವು ಜನಕ್ಕೆ ಪ್ರಕೃತಿ ಎದುರು ಸರ್ತ ನಿಲ್ಲದ್ದೆ ಆವ್ತೆ ಇಲ್ಲೆ. ಮರುದಿನ ಅಲ್ಲದೋ ಆ ಪರಿಸರ ನಾರಿ ಹೊಟ್ಟುದು.

ಇಲ್ಲಿ ಕಸ ಬಿಸಾಕಬಾರದು: ಬೋರ್ಡ್ ಇಕ್ಕು , ಕಸ ಹಾಕಲೇ ಹೇಳಿಯೇ ಪ್ರತ್ಯೇಕ ತೊಟ್ಟಿ ಒಂದು ಇಕ್ಕು ಅಂದರೂ ಕಸ ತೊಟ್ಟಿಗೆ ಹಾಕಿಕ್ಕ. ದೂರಂದ ಬಲ್ಗಿ ಬೀಸಿರಾತು. ತಿರುಗಿ ಕೂಡ ನೋಡ ಗ್ರಾಕಿ. ಅದು ಬೀಳೋದು ತೊಟ್ಟಿ ಹತ್ರೆ ಹೊರತು ತೊಟ್ಟಿಗಲ್ಲ. ೪ ಜನ ಹೀಂಗೇ ಮಾಡಿಯಪ್ಪಗ ಅಲ್ಲಿ ಸೇರಿತ್ತದಾ ರಾಶಿ. ನೆಳವು,ನೊಣ ನುಸಿ ಬಪ್ಪಲಾಗ ಹೇಳ್ತು ಆದರೆ ಹೀಂಗಿರ್ತು ಮಾಡ್ಳಾಗ ಹೇಳಿ ತೋರ.

ಧೂಮ ಪಾನ ನಿಷೇಧ : ಓ ಬರದ್ದವದಾ ಹೇಳಿಗೊಂಡೆ ಸುರುಮಾಡುತ್ತವಯ್ಯ ಕೆಲವು. ಬಸ್ಸಿಲ್ಲಾಗಲಿ , ಹೋಟ್ಲುಗಳಲ್ಲಾಗಲೀ , ಬಸ್ ಸ್ಟ್ಯಾಂಡ್ ಆಗಲಿ ಬಲುಗುತ್ತವಕ್ಕೆ ಅದರ ನೋಡಿಯಪ್ಪಗದಾ ನೆಂಪು ಅಪ್ಪೋದು ಒಂದು ಎಳದೀಕೀತೆ ಹೇಳಿ. ಹತ್ರ ಇಪ್ಪವಂಗೆ ನಾರುತ್ತು , ಸ್ವಾಸ್ಥ್ಯ ಉಪದ್ರ ಅವ್ತು – ಒಂದೂ ಯೇಚನೆ ಇಲ್ಲೆ. ಹಾಂಗೇ ವಾಹನಲ್ಲಿ ಹೋಪಗ ನಡಕ್ಕೊಂಡು ಹೋಪಗ ಎಲೆ ಜಕ್ಕೊಂಡು ಹಿಂದೆ ಮುಂದೆ ನೋಡದ್ದೇ ಪಿಚಿಕ್ಕನೆ ಇನ್ನೂ ಕೆಲವು ಪುರುಕ್ಕನೆ ತುಪ್ಪಿಕ್ಕುವದು. ಆಚವನ ಮೈಗೆ ಬಿದ್ದರೂ ಊಹುಂ ಒಂದಿಷ್ಟು ನಾಚಿಕೆ ಕೂಡ ಇಲ್ಲೆ.! ಎಲ್ಯಾರು ವಾಹನಲ್ಲಿ ಹೋಪಗ ಹಾಂಗೆ ತಲೆ ಹೆರ ಹಾಕಿ ಬಗ್ಗಿಯಪ್ಪಗ ಆಚೀಚಂದ ಇನ್ನೊಂದು ವಾಹನ ಬಂದು ಬಡುದರೋ..?!! ಕೈಲಾಸಕ್ಕೆ ಹೀಂಗೂ ಹೊಪಲಾವ್ತು ಹೇಳಿ ತೋರ್ಸಲೋ  !!

ಅಂಗಿ ಬನಿಯನ್ ತೆಗದು ಮಾತ್ರ ಒಳ ಪ್ರವೇಶ : ಎಷ್ಟೋ ದೇವಸ್ಥಾನಂಗಳಲ್ಲಿ ಇದ್ದು. ತೆಗವಲೆ ಅಲ್ಲದೋ ಹೇಳಿದ್ದು , ಹೇಳಿತ್ತು , ತೆಗದು ಹಿಂದಾಣ ಹೊಡೆಲಿ ಎರಡೂ ಕೈಗೆ ನೆಲ್ಸಿತ್ತು. ಯೇ ಗ್ರಾಚರವೇ! ಆರು ದೃಷ್ಟಿ ಹಾಕುತ್ತವಪ್ಪ ಇವರ ಚಂದದ ಮೈ ಕಂಡು.!! ಒಂದು ಶಾಲು ಹೆಗಲಿಂಗೆ ಹಾಕಿಯೊಂಬಲೆ ಎಡಿತ್ತಿಲ್ಯೋಪ. ಎಡಿತ್ತಿಲ್ಲೆ ಹೇಳ್ಳೆ ಕಾರಣ ಹಲವು ಇಕ್ಕು , ಎಡಿಗು , ಬೇಕು ಹೇಳಿ ಇಪ್ಪವಂಗೆ ಕಾರಣ ಒಂದು ಸಾಕು ಅಪ್ಪೋ.

ಮೊಬೈಲ್ ಬಳಸಬಾರದು: ಇಂದ್ರಾಣ ಮೊಬೈಲ್ ಪ್ರಹಸನ ಈಗಷ್ಟೇ ಚುಬ್ಬಣ್ಣ ಇಲ್ಲಿ ಹೇಳಿದ್ದು. ಆನು ಸಣ್ಣಕ್ಕೆ ಮಡಿಗಿದ್ದೆ, ಸೈಲೆಂಟ್ ಮಾಡಿದ್ದೆ, ಹೇಳಿ ಹೆಗ್ಗಳಿಕನ ಸಮಜಾಯಿಸಿ ಬೇರೇ. ಒಳ ಎತ್ತಿಯಪ್ಪಗದಾ ಸುರುವಾತು – ಮಿಸ್ ಕಾಲ್, ಮೆಸೇಜು, ಇನ್ನು ಕೆಲವರದ್ದು ಸೈಲೆಂಟ್ ಮಾಡಿದ್ದೆ ಹೇಳಿದ್ದವರದ್ದೂ ಕ್ರೀಂಗ್ ಕ್ರೀಂಗ್ , ಸಣ್ಣಕೆ ಮಾತಾಡೋದು. ಆಚವನ ಮನಸ್ಥಿಮಿತಕ್ಕೆ ಅಡ್ಡಿ ಆವ್ತು ಹೇಳ್ವ ಗೊಡವೆಯೇ ಇಲ್ಲೆಪ್ಪೋ ಈ ದೊಡ್ಡ ಮನುಷ್ಯರಿಂಗೆ. ಒಂದು ಅಷ್ಟೊತ್ತು ಅದು ಇಲ್ಲದ್ದೆ ಕಳೀಯದಪ್ಪ?! ಅಂಬಗ ಒರಗುವಾಗ ಹೇಂಗೆ ಸುಧಾರ್ಸುತ್ತವೋಪ.! . ಇದಕ್ಕೆ ಬೇಕಾಗಿಯೇ ಕೆಲವು ದೇವಸ್ಥಾನಂಗಳಲ್ಲಿ ಒಳ ಪ್ರವೇಶ ಇಲ್ಲ ಹೇಳಿ ಮಾಡಿದ್ದು. ಅದೂ ಕಷ್ಟ ಆತಿದಾ – ‘ಅವ ಬಂದು ಒಳ ಬಪ್ಪವರನ್ನೂ ತಡಶಿದ’ ಹೇದು. !!

ವಾಹನ ನಿಲುಗಡೆ ನಿಷೇಧ : ಹಲವು ದಿಕ್ಕೆ ನಾವು ಕಾಣುತ್ತು. ಅಂದರೂ ಅದರ ಬುಡಲ್ಲೇ ಗಾಡಿ ನಿಲ್ಸಿಕ್ಕಿ ಈಗ ಬರ್ತೇನೆ ಹೇಳಿ ಗ್ರೇಶ್ಯೊಂಡು ಬಿಟ್ಟಿಕ್ಕಿ ಹೋಪದು . ತಿರುಗಿ ಬಪ್ಪಗ ವಾಹನ ಎತ್ತೆಕಾದಲ್ಯಂಗೆ ಎತ್ತಿಕ್ಕುಗು! . ಹಾಂಗೆ ಸಿಗ್ನಲ್ ಮೀರೋದು. ಏನೂ ಆಗಪ್ಪ ಹೇಳಿ ಗ್ರೇಶೋದು ಮತ್ತೆ ಅದರಿಂದಲೇ ತೊಂದರಗೊಳಗಪ್ಪದು. ಬೇಕೋ?!

ಹೀಂಗೇ ನಮ್ಮ ದಿನ ನಿತ್ಯದ ಚಟುವಟಿಕೆಲಿ ಹಲವಾರು ನಿಯಮಂಗಳ ನಾವೂ ಅವಶ್ಯ ಪಾಲುಸೆಕು. ಹೆರಾಣ ದೇಶಂಗಳಲ್ಲಿ ಇಪ್ಪವೂ ನಮ್ಮ ಹಾಂಗೆ ಇಪ್ಪ ಮನುಷ್ಯರೇ ಅಲ್ಲದೋ. ಅಲ್ಲಿ ಅವಕ್ಕೆ ಹೇಂಗೆ ಪರಿಸರ ಮಾಲಿನ್ಯ ಮಾಡ್ಲಾಗ ಹೇಳಿ ತೋರುತ್ತು. ರೈಲ್ವೇ ಸ್ಟೇಷನ್ ನಿಂದ ಏರ್ಪೋರ್ಟ್ ವರೇಗೆ ಕ್ಲೀನ್ ಕ್ಲೀನ್ ಕ್ಲೀನ್ ಹೇಳಿ ಚಿತ್ರಲ್ಲಿ ನೋಡುತ್ತು. ಬರೇ ಚಿತ್ರಲ್ಲಿ ಮಾತ್ರವೋ ಅಂಬಗ? – ಡಾ. ಮಹೇಶಣ್ಣ ಹೇಳೆಕ್ಕಷ್ಟೆ ಇದಕ್ಕೆ ಉತ್ತರ. ನವಗೂ ಉಪದ್ರ ಅಪ್ಪಲಾಗ ಇನ್ನೊಬ್ಬಂಗೂ ಉಪದ್ರ ಅಪ್ಪಲಾಗ, ನಾವೂ , ನಮ್ಮದು , ಶುಚಿ  ಹೇಳ್ವ ಪ್ರಜ್ಞೆ ಪ್ರತಿಯೊಬ್ಬಂಗೂ ಇರಲಿ ಹೇಳಿ ಎಲ್ಲೋರಿಂಗೂ ಒಳ್ಳೆದಾಗಲಿ ಹೇಳಿ ಬಯಸುವೋ ಆಗದೋ.

ವಿ.ಸೂ : ಬೋಸ ಭಾವ ., ‘ಆತು, ಮೇಗೆ ಹೇಳಿದ ಯಾವುದನ್ನೂ ಮಾಡುತ್ತಿಲ್ಲೆ ಆನಿನ್ನು’ ಹೇಳಿ ಕೂದಿಕ್ಕೆಡಿನ್ನು. ಅಕೇರಿಯಾಣ ಗೆರೆಯನ್ನೂ ಓದಿಕ್ಕಿ.

ಇಲ್ಲಿ ಮೂತ್ರಿಸಬಾರದು..., 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. suhaa...s

  ನಾವು ಬೇರೆಯವರ ತಿದ್ದುಲೆ ಹೋಪಲಾಗ…ಅವು ನಮ್ಮ ನೋಡಿ ಕಲಿವಂಗೆ ಮಾಡೆಕು ಅಲ್ದ?

  [Reply]

  VN:F [1.9.22_1171]
  Rating: +1 (from 1 vote)
 2. ಪ್ರಶಾಂತ ಕುವೈತ್

  ಕೊಷಿ ಆತು ಸುಹಾಸ ನಿನ್ನ ಒಪ್ಪ ನೋಡಿ, ನೀನು ಹೇಳಿದ್ದು ನೆಜ,ಸುರುವಿಂಗೆ ನಾವೇ ಸರಿ ಅಪ್ಪೋ, ಮತ್ತೆ ಇನ್ನೊಬ್ಬನ ಹೇಳುವೋ.

  ಎಲ್ಲೋರ ಒಪ್ಪಿಗೆ ಇಕ್ಕಾಯಿಕ್ಕು.. ಏ..!!

  [Reply]

  VA:F [1.9.22_1171]
  Rating: 0 (from 0 votes)
 3. ಅರ್ಗೆ೦ಟು ಮಾಣಿ
  ಅರ್ಗೆ೦ಟು ಮಾಣಿ

  ಹಾ,
  ಅವು ನಮ್ಮ ನೋಡಿ ಕಲಿವ೦ಗೆ ಅಪ್ಪಲೆ ನಾವು ಸರಿ ಅಪ್ಪ ಅಲ್ದೊ ಅರ್ಥ? ಸರಿ ಸರಿ….
  :)

  [Reply]

  VA:F [1.9.22_1171]
  Rating: +1 (from 1 vote)
 4. ಭೂಪಣ್ಣ
  ಭೂಪಣ್ಣ

  ಚೆನ್ನೈ ಭ್ಹಾವಯ್ಯಾ..

  ಒ೦ದು ಒಳ್ಲೆ ಲೇಖನ.ನಮ್ಮಲ್ಲಿಪ್ಪ ಪೌರ ಪ್ರಜ್ನೆ ಎಚ್ಚರ ಗೊಳಿಸುವ೦ತಹ ಲೇಖನ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಕಾವಿನಮೂಲೆ ಮಾಣಿಅಜ್ಜಕಾನ ಭಾವಕಳಾಯಿ ಗೀತತ್ತೆಡಾಗುಟ್ರಕ್ಕ°ರಾಜಣ್ಣಬೋಸ ಬಾವದೇವಸ್ಯ ಮಾಣಿಕಜೆವಸಂತ°ಪುಣಚ ಡಾಕ್ಟ್ರುಗೋಪಾಲಣ್ಣಒಪ್ಪಕ್ಕಪುತ್ತೂರಿನ ಪುಟ್ಟಕ್ಕಪೆರ್ಲದಣ್ಣವಸಂತರಾಜ್ ಹಳೆಮನೆಶೀಲಾಲಕ್ಷ್ಮೀ ಕಾಸರಗೋಡುಚೆನ್ನಬೆಟ್ಟಣ್ಣಅನಿತಾ ನರೇಶ್, ಮಂಚಿಅನು ಉಡುಪುಮೂಲೆಮಾಲಕ್ಕ°ಮಂಗ್ಳೂರ ಮಾಣಿದೀಪಿಕಾವಾಣಿ ಚಿಕ್ಕಮ್ಮದೊಡ್ಮನೆ ಭಾವvreddhiಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ