ಋಣತ್ರಯ

September 24, 2010 ರ 3:19 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 ಮಾತೃಋಣ,ಪಿತೃಋಣ,ಋಷಿಋಣ  ಈ ಮೂರು ಋಣಂಗಳ ಋಣತ್ರಯ ಹೇಳಿ ಹೇಳ್ತವು. ಋಣ ಹೇಳಿರೆ ಸಾಲ.ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬನೂ ಋಣತ್ರಯಂದ ಮುಕ್ತ ಆಯೆಕ್ಕು.ಇಲ್ಲದ್ರೆ ಜನ್ಮ ಸಾರ್ಥಕತೆ ಸಿದ್ಧಿಸುತ್ತಿಲ್ಲೆ..ಮೊದಲಿಂಗೆ ಮಾತೃ ಋಣ ಹೇಳಿರೆ ಎಂತ ಹೇಳಿ ಹೇಳ್ತೆ, ನವಮಾಸ ತನ್ನ ದೇಹದೊಳದಿಕೆ ಮಡಿಕ್ಕೊಂಡು ಭಾರವ ಸಹಿಸಿ ರಕ್ತ ಮಾಂಸಾದಿಗಳ ಕೊಟ್ಟು ಜೀವ ಜಗತ್ತಿನ ತೋರ್ಸಿದ ಮತ್ತೊಂದು ಸೃಷ್ಟಿ ದೇವತೆ ನಮ್ಮ ಹೆತ್ತಬ್ಬೆ..~ಅಮ್ಮ,

            ನಮ್ಮ ಜನ್ಮಕಾರಣನಾಗಿ,ಪೋಷಕನಾಗಿ,ವಿದ್ಯೆ ಹೇಳ್ಸಿ,ಕಾಲಕ್ಕೆ ತಕ್ಕ ಹಾಂಗಿಪ್ಪ ಅವಶ್ಯಕತೆಗಳ ಪೂರೈಸಿ ಅಭಿವೃದ್ಧಿಯ ದಾರಿಗೆ ನಡೆಶಿ,ತನ್ನ ಪಿತೃಋಣವ ತೀರ್ಸುಲೆ ಮಕ್ಕೊಗೆ ಮದುವೆ ಮಾಡಿ,ಒಟ್ಟಿಲಿ ಹೇಳ್ತಾರೆ  ಸಮಾಜಲ್ಲಿ ಆದರ್ಶಪ್ರಾಯ ವ್ಯಕ್ತಿಯಾಗಿ ಬಾಳಿ ಬದುಕುಲೆ ಇಪ್ಪಂತಹ ಎಲ್ಲಾ ವೆವಸ್ಥೆಗೊಕ್ಕೆ ಬೇಕಾಗಿ ಅಹರ್ನಿಶಿ ನಮ್ಮ ಭವಿಷ್ಯದ ಉನ್ನತಿಗಾಗಿ ಶ್ರಮಿಸಿದ ಅಪ್ಪ~ಇದು ಪಿತೃಋಣ..

           ಅಪ್ಪ ಅಮ್ಮ ಜನ್ಮಕೊಟ್ಟರೆ ಜ್ಞಾನವ ಕೊಡುವದು ಗುರು.ನಾವು ಈಗ  ಆಚರಣೆ ಮಾಡುವ  ಸಂಪ್ರದಾಯ ಹೇಳುವದು ಯಾವ ರೀತಿಲಿ  ಮಾಡಿಗೊಂಡಿದ್ದೋ ಅದಕ್ಕೆ ಕಾರಣ ನಮ್ಮ ಗೋತ್ರದ ಋಷಿಗ.ನಾವು ಆಡುವಂತಹ ಭಾಷೆಗೆ ರೂಪುಕಲ್ಪನೆ ಕೊಟ್ಟು ಭಾಷೆಯ ಲಿಪಿರೂಪಕ್ಕೆ ಶಾಶ್ವತಗೊಳಿಸಿದವು ನಮ್ಮ ಋಷಿಮುನಿಗ..ಉತ್ತಮ ಬದುಕು ನಡೆಶುಲೆ ಪ್ರಯೋಗವಿಧಿ ಸಹಿತ ಅಪೂರ್ವ ಶಾಸ್ತ್ರಂಗಳ ಮೂಲಕ ಧರ್ಮಜ್ಞಾನವನ್ನೂ,ಪರಿಸರ ಪ್ರಜ್ಞೆಯನ್ನೂ ಗ್ರಂಥಂಗಳ ರೂಪಲ್ಲಿ ನವಗೆ ಇಂದು ವಿಜ್ಞಾನ ಧನರೂಪಲ್ಲಿ ಕೊಟ್ಟವು ನಮ್ಮ ಋಷಿ ಪರಂಪರೆ~ಇದು ಋಷಿಋಣ..

         ಈ ಋಣತ್ರಯ ವಿಮುಕ್ತಿಗಾಗಿ ನಾವು ಋಷಿಗ ಹೇಳಿದ ವಿಧಿಗೆ ಶರಣಾಯೆಕ್ಕು..ಅದರ ಶಾಸ್ತ್ರ ವಿಧಿಗ ಹಲವು ರೂಪಲ್ಲಿ ಇಕ್ಕು.ಆದರೆ ಅದರ ಸಂಕಲ್ಪ ಒಂದೇ ಆಗಿರ್ತು.ಉದಾ:ವೈದಿಕ ಕಾರ್ಯಕ್ರಮ,ಜ್ಯೋತಿಷ್ಯ ಪರಿಹಾರ,ಅಧ್ಯಯನ-ಅಧ್ಯಾಪನಾದಿ ಷಟ್ಕರ್ಮ ವಿಷಯಂಗ,ಆಯುರ್ವೇದ,ಇನ್ನೂ ಹಲವು ರೀತಿಲಿ ಹೇಳುಲಕ್ಕು.ಮಾತಾ ಪಿತೃಗಳ ಋಣ ಹೇಳಿರೆ ಅದೊಂದು ಧಾರ್ಮಿಕ ಋಣ.ಅದಕ್ಕೆ ಅನುಸರಿಸಿ ನಮ್ಮ ಆಚಾರ ವಿಚಾರ ಪದ್ಧತಿಗ ಇರ್ತು.ನಾವು ಹುಟ್ಟಿ ಬೆಳದ ಕೂಡ್ಲೆ ನಮ್ಮ ಜೀವನಲ್ಲಿ  ಕಣ್ಣಿನ ಮೇಲೆ ಕಣ್ಣು ಮಡುಗಿ ನಾವು ಸಮಾಜಲ್ಲಿ ವಿದ್ಯೆ ಬುದ್ಧಿ ಕಲ್ತು ಸಂಪಾದನೆಗೆ ಇಳಿವನ್ನಾರ ಹಲವಾರು ರೀತಿಲಿ ತಲೆಬೆಶಿ ಮಾಡಿಗೊಂಡಿರ್ತವು.ಇಂಥ  ಅಪ್ಪ ಅಮ್ಮಂದ್ರು ಮುದಿತನ ಬಪ್ಪಗ ಅವರ ಸೇವೆಯ ಮಾಡಿ,ಅವರ ಆಗು ಹೋಗುಗಳ ಸೂಕ್ತ ಸಮಯಲ್ಲಿ ವಿಚಾರ್ಸಿಗೊಂಡು,ಅವರ ಮನಸ್ಸಿಂಗೆ ಧೈರ್ಯ ತುಂಬಿ  ಮಾತಾಪಿತೃ  ಋಣಂದ ಮುಕ್ತಿಯಾಯೆಕ್ಕು…

        ನಮ್ಮ ಇಡೀ ಜಗತ್ತಿಂಗೆ ಜಗದ್ಗುರುಗ ಆಗಿಪ್ಪಂತಹ ನಮ್ಮ ಗುರುಗಳ ಸೇವೆ ಮಾಡಿಗೊಂಡು ಆ ಮೂಲಕ ನಮ್ಮ ಋಷಿ ಪರಂಪರೆಯ ನಮ್ಮ ಜೀವನಲ್ಲಿ ಅಳವಡಿಸಿಗೊಂಡು ಋಷಿಋಣ ಸಹಿತ ಋಣತ್ರಯಂಗಳ  ಮುಕ್ತಿ ಮಾಡ್ಲೆ  ಅವು ಹೇಳಿದ ರೀತಿಲಿ ಪದ್ಧತಿಗಳ ಅನುಸರಿಸಿಗೊಂಡು ಹೋಪ!!

       ಮಾತೃದೇವೋಭವ!ಪಿತೃದೇವೋಭವ!ಆಚಾರ್ಯದೇವೋಭವ!ಅತಿಥಿದೇವೋಭವ!

              ಹರೇರಾಮ

ಋಣತ್ರಯ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಒಪ್ಪಣ್ಣ

  ಋಣತ್ರಯಂಗಳ ಬಗ್ಗೆ ಭಾರೀ ಚೆಂದಲ್ಲಿ ಹೇಳಿಕೊಟ್ಟಿದಿ ಗಣೇಶಮಾವಾ..
  ತುಂಬಾ ಕೊಶಿ ಆತು.
  ಹೀಂಗಿರ್ತದು ಬೈಲಿಂಗೆ ಬತ್ತಾ ಇರಳಿ, ರಜಾ ಅಧ್ಯಾತ್ಮವನ್ನುದೇ ಕಲ್ತುಗೊಂಬ, ವಾನಪ್ರಸ್ಥದ ಮೊದಲು.
  ಅಲ್ಲದೋ? 😉

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆದೊಡ್ಡಭಾವಶಾ...ರೀಪುಣಚ ಡಾಕ್ಟ್ರುಶ್ಯಾಮಣ್ಣಗಣೇಶ ಮಾವ°ದೇವಸ್ಯ ಮಾಣಿಗೋಪಾಲಣ್ಣಸರ್ಪಮಲೆ ಮಾವ°ಸುಭಗಶ್ರೀಅಕ್ಕ°ಡೈಮಂಡು ಭಾವಒಪ್ಪಕ್ಕಚುಬ್ಬಣ್ಣಪುತ್ತೂರುಬಾವಕಜೆವಸಂತ°ಅನಿತಾ ನರೇಶ್, ಮಂಚಿಶೇಡಿಗುಮ್ಮೆ ಪುಳ್ಳಿಬೋಸ ಬಾವಪೆರ್ಲದಣ್ಣಕೆದೂರು ಡಾಕ್ಟ್ರುಬಾವ°ವೇಣಿಯಕ್ಕ°ಚೂರಿಬೈಲು ದೀಪಕ್ಕಉಡುಪುಮೂಲೆ ಅಪ್ಪಚ್ಚಿಕೇಜಿಮಾವ°ಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ