ಎಂತಾರು ಇದೊಂದು ಬಗೆ ಇಲ್ಲದ್ರೆ ಆಗಪ್ಪ..!

September 20, 2011 ರ 11:15 pmಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮೊನ್ನೆ ಎಲೆತಟ್ಟಗೆ ಹಣ್ಣಡಕ್ಕೆ ಸುಲುದು ಕೆರಸಿ ಮಡುಗುವಾಗ ನಮ್ಮ ಸು.ಭಾವನ ಬಲದ ಕೈ ಹಬ್ಬಟೆ ಬೆರಳು ಕೆತ್ತಿ ಹೋತಡ. ನೆತ್ತರು ಪಚಕ್ಕನೆ ರಟ್ಟಿತ್ತಡ. ಗಾಯ ರಜಾ ಬಲ ಆತು ಹೇಳಿ ಬೆರಳಿಂಗೆ ಮುಂಡಾಸು ಕಟ್ಟಿಗೊಂಡವು. ಕೈ ಬೆರಳತ್ತೆ ಬೀಗಿತ್ತು. ಉಂಬಲೂ ಎಡಿಯ, ಹಲ್ಲು ತಿಕ್ಕಲೂ ಎಡಿಯ, ನೀರು ತಾಗಿರೆ ಬೇಗ ಗುಣ ಆಗ. ಛೆ., ಈ ಒಂದು ಹೆಬ್ಬಟೆ ಬೆರಳು ಒಂದು ಬಗೆ ಇಲ್ಲದ್ರೆ ಆಗಲೇ ಆಗಪ್ಪ! – ಹೇಳಿ ಮರುಗಿದವಡ ಸು.ಭಾವ.

ಓ ಅಂದು ಒಂದಿನ ಇಡೀ ದಿನ ಶ್ಯಾಮಣ್ಣನಲ್ಲಿ ಕರೆಂಟು ಇತ್ತಿಲ್ಲೆಡ. ಏವ ಶ್ಯಾಮಣ್ಣ ಹೇದು ಕೆಳ್ತೀರೋ..? ಚೆನ್ನೈ ಶಾಮಣ್ಣ ಅತೋ. ಇಲ್ಲದ್ರೆ ನೆಗೆಚಿತ್ರ ಶ್ಯಾಮಣ್ಣಂಗೆ ತಲೆ ಬೆಷಿ ಅಕ್ಕು ಇದೇವಾಗ ಎನ್ನಲ್ಲಿ ಹೀಂಗೆ ಆದ್ದು ಹೇದು. ಶ್ಯಾಮಣ್ಣನ ಮನೆ ಒಂದನೇ ಮಹಡಿ. ಇದಾ ಈ ಪೇಟೆಲಿ ಒಂದು ರಜ ಹೊತ್ತು ಕರೆಂಟು ಹೋದರೂ ಸಂಕಷ್ಟ ಹೇಳಿ ತೀರ. ಇದು ದಿನ ಇಡೀ. ಟಾಂಕಿಲಿ ತುಂಬಿಸಿದ ನೀರು ಮುಗುತ್ತು. ಉಂಡು ಕೈ ತೊಳವಲೂ ನೀರಿಲ್ಲೆ. ಮೋಟರ್ ಹಾಕೆಕ್ಕಾರೆ ಕರೆಂಟು ಬಂದರಲ್ಲದೋ. ಸೆಕೆಲಿ ತಡವಲಿಡಿಯ ಫಾನ್ ಕೂಡ ಇಲ್ಲದ್ದೆ. ಶ್ಯಾಮಣ್ಣ ಅಷ್ಟಪ್ಪಗ ಹೇಳಿದ್ದೆಂತರ ಗೊಂತಿದ್ದಾ…. ‘ಛೆ., ಈ ಕರೆಂಟು ಒಂದು ಬಗೆ ಇಲ್ಲದ್ರೆ ಆಗಪ್ಪ’!

ಓ ಆ ವಾರ ಒಂದಿನ ಶ್ರೀ ಅಕ್ಕನ ಮನೆಲಿ ಗೇಸು ಮುಗುತ್ತಡ. ಆಚ ಇನ್ನೊಂದು ಹಂಡೆ ಇದ್ದದೂ ಬುಕ್ ಮಾಡಿದ್ದು ಬೈಂದಿಲ್ಲೆ. ಕರೆಂಟು ಏವಾಗ ಬತ್ತು ಏವಾಗ ಹೋವ್ತು ಹೇಳಿ ನಂಬಲೆಡಿಯ ಇಲೆಕ್ಟ್ರಿಕ್ ಸ್ಟೌ ಉಪಯೋಗುಸುವೋ ಹೇಳಿರೆ. ಅಡಿಗೆ ಬೇಶಲೆ ಮಡಿಗಿದ್ದು ಅರ್ಧಲ್ಲಿ ಬಾಕಿ. ಮಧ್ಯಾಹ್ನಕ್ಕೆ ಎಂತ ಮಾಡ್ತದಿನ್ನು. ಹೋಟೆಲಿಂಗೆ ಹೋಪದು ಹೇಳಿ ಕಾನಾವಣ್ಣ ಹೇಳಿರೆ ಅಕ್ಕಂಗೆ ಬಕ್ಕು ಪಿಸುರು. ಬಸ್ಸಿಂಗೆ, ರೈಲಿಂಗೆ ಹೋವ್ತರೂ, ಕಾರಿಲ್ಲಿ ಹೋವ್ತರೂ ಮನೆಂದ ಮಾಡಿ ಕಟ್ಟಿಗೊಂಡೆ ಹೋಪದು ಅಕ್ಕನ ಕ್ರಮ. ಒಟ್ಟು ಈಗ ಗೇಸು ಮುಗುತ್ತನ್ನೇ. ಅಕ್ಕ ಹೇಳಿದ್ದು – ಛೆ., ಈ ಗೇಸು ಒಂದು ಬಗೆ ಇಲ್ಲದ್ರೆ ಆಗಪ್ಪ!.

ಓ ಕಳುದ ತಿಂಗಳು ಮುಳಿಯ ಭಾವನ ಆಪೀಸಿಲ್ಲಿ ಒಂದಿನ ಇಂಟರ್ನೆಟ್ ಏನೋ ತೊಂದರೆ ಆಗಿ ಒಂದಿನ ಇಡೀ ನೆಟ್ ಇತ್ತಿಲ್ಲೆಡ. ಭಾವನ ಆಪೀಸಿಲ್ಲಿ ಕೆಲಸ ಇಪ್ಪದೇ ನೆಟ್ಟಿಲ್ಲಿ . ಒಂದು ರಜ ಹೊತ್ತು ನೆಟ್ ಕಟ್ ಆದರೂ ಕೆಲಸ ಕೊಯಂಗ್ಕೋದೇ. ಇದು ಇಡೀ ದಿನ ಬೇರೆ ದ್ರೋಹ – ಉಪದ್ರ – ಬಾಧೆ. ಭಾವಂಗೆ ಅಂದು ಕಂಡದು – ಛೆ., ಈ ನೆಟ್ ಒಂದು ಬಗೆ ಇಲ್ಲದ್ರೆ ಆಗಪ್ಪ.!

ಓ ಅಂದು ಒಂದರಿ ಇದಾ, ನಮ್ಮ ನೆಗೆಗಾರ ಮಾಣಿಯ ಮೊಬೈಲ್ ಸಿಮ್ ಎಂತದೋ ಹಾಳಾಗಿತ್ತಡ. ಬೈಲಿಲಿ ನೆಗೆ ನೆಗೆ ಮಾಡಿಗೊಂಡು ಕಂಡು ಬತ್ತದಾದರೂ ಅವರ ಕೆಲಸಂಗೊ ಎಲ್ಲಾ ತುಂಬಾ ಮಹತ್ವದ್ದು. ಹೆಚ್ಚಿನ ವ್ಯವಹಾರವೂ ಮೊಬೈಲ್ಲೇ ಅಪ್ಪದು. ಅಂದು ಸಂದೇಶ ಕಳುಸಲೂ ಎಡಿಯ, ಕಾಲ್ ಮಾಡ್ಳೂ ಎಡಿಯ. ಒಟ್ಟಾರೆ ನೆಗೆಗಾರ ಹಲುಬಿದ್ದು – ಛೆ., ಈ ಮೊಬೈಲ್ ಒಂದು ಬಗೆ ಇಲ್ಲದ್ರೆ ಆಗಪ್ಪ!

ಓ ಇದಾ ಇಂದು ನಮ್ಮ ಬೈಲಿಲಿ ನಮ್ಮ ಸೈಟು ಓಪನ್ ಆಗದ್ದೆ ಹೋತು ಒಂದಾರಿಯಂಗೆ. ನಾವು ಶುದ್ದಿ ಹೇಳುತ್ತೋ , ಒಪ್ಪ ಬರತ್ತೋ ಅಲ್ಲ ವಿಷ್ಯ, ಆದರೇ, ಹೊಸತ್ತು ಶುದ್ದಿ ಆರದ್ದು, ಎಂತ ಬೈಂದು , ಹೊಸ ಒಪ್ಪ ಆರು, ಎಂತ ಬರದ್ದವು ಹೇಳಿ ನಮ್ಮ ಬೈಲಿಲಿ ಹಲವರಿಂಗೆ ಅಂಬಗಂಬಗ ನೋಡಿಕೊಂಡೇ ಬೇಕಾವ್ತು. ಇದೀಗ ಹೊತ್ತೋಪಗ ಹೋದ್ದು ಇರುಳು ಮಿಂದು ಉಂಡಿಕ್ಕಿ ಬಂದು ಕೂದರೂ ಸರಿ ಆಯ್ಡಿಲ್ಲೇ. ಅತ್ತಿತ್ತೆ ವಿಚಾರಿಸಿ ನೋಡಿಯಪ್ಪಗ ಗುರಿಕ್ಕಾರ್ರು ಸಮಜಾಯಿಸಿ ಕಳ್ಸಿದವು – ಸರ್ವರಂಗೆ ತೊಂದರೆ ಆಯ್ದು ಹೇಳಿ. ಅ. ಭಾವ ಎಡೆಲಿ ಹೇಳಿದವು ಶೇಖರಣೆಯ ಉಪದ್ರ ಆಯ್ದು ಹೇಳಿ. ಇದರ ಕೇಳಿಯಪ್ಪಗ ಬೋಚ ಭಾವಂಗೆ ತಡವಲೆಡಿಯದ್ದ ಕೋಪ ಬಂತು. ಕೇಳಿಯೇ ಬಿಟ್ಟವು – ಆರದು ಸರ್ವರ? ಆರದು ಶೇಖರಣ್ಣ ? ಅವ್ವು ಎಂತಕೆ ಇಲ್ಲೆ ಬಂದು ತಂಟಾಣುಸುವದು. ಅವರ ಆರು ಒಳ ಬಿಟ್ಟದು? ಬೇಗ ಓಡ್ಸಿ ಅದರ ಸರಿಮಾಡಿ ಹೇಳಿ. ತೆಕ್ಕುಂಜ ಮಾವಂಗೆ ಮನುಗುವಂದ ಮದಲೆ ಒಂದಾರಿ ಬೈಲಿಂಗೆ ಬಂದು ದಿನದ ಅಕೇರಿ ಶುದ್ದಿ ಏನಾರು ಇದ್ದೋ ಹೇದು ನೋಡದ್ದೆ ಒರಕ್ಕೇ ಬಾರ. ಕೊರಗಿದವಡಾ – ಛೆ., ಈ ಬೈಲು ಒಂದು ಬಗೆ ಇಲ್ಲದ್ರೆ ಆಗಲೇ ಆಗಪ್ಪ!!

ಅಕೇರಿಗೆ ಹತ್ತುಮುಕ್ಕಾಲಕ್ಕೆ ಎಲ್ಲಾ ಸಮ ಆತು ಹೇಳಿ ಗುರಿಕ್ಕಾರಿಂದ ಸೂಚನೆ ಬಂತು. ‘ಅಬ್ಬಾ., ಬಚಾವ್ ಜೀವವೇ’ ಹೇಳಿ ಎನಗೂ ಆತು ಬಿಡಿ.

‘ಚೆನ್ನೈವಾಣಿ’ – ಹೇಂಗೆ ನವಗೆ ನಮ್ಮ ಶರೀರಲ್ಲಿ ಪ್ರತಿಯೊಂದು ಅಂಗಾಂಗವೂ ಸರಿಯಾಗಿ ಇದ್ದರಷ್ಟೇ ಕ್ಷೇಮವೋ, ಹಾಂಗೆ, ನಾವು ಉಪಯೋಗುಸುತ್ತ ಪ್ರತಿಯೊಂದು ವಸ್ತುಗಳೂ ಅಷ್ಟೇ ಸರಿಯಾಗಿದ್ದರಷ್ಟೇ ನವಗೆ ನೆಮ್ಮದಿ.

ಎಂತಾರು ಇದೊಂದು ಬಗೆ ಇಲ್ಲದ್ರೆ ಆಗಪ್ಪ..!, 5.0 out of 10 based on 4 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ಲಾಯ್ಕಾಯಿದು ಚೆನ್ನೈ ಭಾವಾ.. ಹಲವು ದಿನ೦ದ ಮತ್ತೆ ಇ೦ದೇ ಇದ ಬೈಲಿ೦ಗೆ ಮೇವಲೆ ಇಳುದ್ದದು.. ಇನ್ನು ಒ೦ದೊ೦ದೇ ಓದೆಕ್ಕಷ್ಟೇ.. 😉

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಎಂತಾರು ಬಂದ ಹಾಂಗೆ ಬೈಲಿಂಗೆ ನುಗ್ಗಿದಿರನ್ನೆ. ಅದುವೇ ಎಂಗಳ ಹೆಮ್ಮೆ , ಸಂತೋಷ. ಪೆರ್ವ ಗಣೇಶಣ್ಣ ಅಪರೂಪ ಆಯ್ದವು ಹೇಳಿ ಮಾತಾಡ್ಳೆ ಸುರುಮಾಡಿದ್ದವುದೇ. ಬೈಲಿಲ್ಲಿ ಇದುವರೇಗೆ ವಾರದ ಶುದ್ದಿಗೆ ಕಾವದು ಹೇಳಿ ಇತ್ತಿದ್ದು. ಇದೀಗ ಪೆರ್ವದಣ್ಣಂಗೆ ಕಾವದು ಹೇಳಿಯೂ ಆಗಿ ಹೋತು.

  ನಿಂಗಳ ಲಾಯ್ಕದ ಒಪ್ಪಕ್ಕೆ ಧನ್ಯವಾದ ಹೇಳಿತ್ತು ಇತ್ಲಾಗಿಂದ.

  [Reply]

  VN:F [1.9.22_1171]
  Rating: 0 (from 0 votes)
 2. ನೆಗೆಗಾರ°

  ಚೆ, ಎಂತಾರೂ – ಈ ಡಿಕಿಶ್ನರಿ ಇಲ್ಲದ್ದೆ ಆಗಪ್ಪ.
  ಓದುವಗ ಅರ್ತವೇ ಆಗದ್ದರೆ ಅದು ಇರೇಕು ಕೈ ಹತ್ತರೆ. ಅದು ಇಪ್ಪಗ ನವಗೆ ಅದರ ಬೆಲೆ ಅರಡಿಯಲೆ ಇಲ್ಲೆ; ಮೊನ್ನೆ ಮಳಗೆ ಚೆಂಡಿ ಆದ ಮತ್ತೆ ಈಗ ಅದು ಬೇಕೂದು ಆವುತ್ತು! :-(
  😉

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಪೆಂಗಣ್ಣ°ಶ್ರೀಅಕ್ಕ°ಶುದ್ದಿಕ್ಕಾರ°ಪುತ್ತೂರುಬಾವಶೀಲಾಲಕ್ಷ್ಮೀ ಕಾಸರಗೋಡುತೆಕ್ಕುಂಜ ಕುಮಾರ ಮಾವ°ಬೊಳುಂಬು ಮಾವ°ಕಾವಿನಮೂಲೆ ಮಾಣಿಪುತ್ತೂರಿನ ಪುಟ್ಟಕ್ಕಶಾ...ರೀಡೈಮಂಡು ಭಾವದೀಪಿಕಾವಾಣಿ ಚಿಕ್ಕಮ್ಮಪ್ರಕಾಶಪ್ಪಚ್ಚಿದೊಡ್ಡಮಾವ°ಪುಣಚ ಡಾಕ್ಟ್ರುಸರ್ಪಮಲೆ ಮಾವ°ರಾಜಣ್ಣಪುಟ್ಟಬಾವ°ಮಾಷ್ಟ್ರುಮಾವ°ದೊಡ್ಡಭಾವಅಕ್ಷರ°ಕೇಜಿಮಾವ°ವಿದ್ವಾನಣ್ಣಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ