ಜಂಬ್ರಂದ ಶುರುವಾತು….

March 21, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಎನಗೆ ಒಂದು ಮದುವೆ ಜಂಬ್ರಕ್ಕೆ ಹೊಪಲೆ ಅವಕಾಶ ಸಿಕ್ಕಿತ್ತು. ಸೊಸೆಯ ಮದುವೆ, ಆದ್ದದು ಸುಳ್ಯ ಶಿವಕೃಪಲ್ಲಿ. ಎನಗೆ ಮುನ್ನಾಣ ದಿನಂದಲೇ ಡ್ಯೂಟಿ ಶುರುವಾಗಿತ್ತಿದ್ದು,ಅತ್ತಾಳ ಮುಗಿಶಿ ಇರುಳು ೧೨ಕ್ಕೆ ಒರಗಿದ್ದು. ಮರದಿನ ಉದಿಯಪ್ಪಗ ೭ ಗಂಟೆಗೆ ದಿಬ್ಬಾಣದವು ಯೆತ್ತಕ್ಕಾರೆ ಯೆಂಗೊಗೆ ಕಾಪಿ ತಿಂಡಿ ಮುಗಿಯೆಕ್ಕು ಹೇಳಿ ತಾಕೀತು ಆಗಿತ್ತು. ಶಿವಕೃಪಲ್ಲಿ ಮನುಗಿದರೆ ನುಸಿಗ ಹೊತ್ತುಗೊಂಡು ಹೋಕು ಹೇಳಿ ಭಾವ° ಎಚ್ಚರಿಕೆ ಕೊಟ್ಟ ಕಾರಣ,ನಾವು ಮನೆಗೆ ಹೋಗಿ ಮರದಿನ ೫.೩೦ ಗೆ ವಾಪಸು ಬಂದದು, ಮದುವೆಗೆ ಹಾಜರು ಇರೆಕ್ಕನ್ನೇ !ನುಸಿಗೊ ಮಡಿಕೇರಿಲಿ ಇಳುಶಿರೆ ಬಪ್ಪಲೆ ಬಸ್ಸೂ ಸರಿಕಟ್ಟುಇಲ್ಲೆ,ಮಾರ್ಗವೂ ಇಲ್ಲೆ.

ಜಂಬ್ರಲ್ಲಿ ನಾಕು ಸರ್ತಿ ಅತ್ತಿತ್ತ ಓಡಿದರೆ ಸಾಕು, ಬೆಶಿಲು ಏರುವಗ ಬಚ್ಚೆಲು ಶುರುವಾವ್ತು,ಪ್ರಾಯದೋಷವೋ ಎ೦ತ ಕರ್ಮವೋ?.ಮುಹೂರ್ತ ೧೦.೪೫ ಕ್ಕೆ, ಮುಗಿವಲಪ್ಪಗ ಎನಗೆ ರಜ ಕೂರೆಕ್ಕು ಹೇಳಿ ಕಂಡತ್ತು,ಒಂದು ಮೂಲೆಲಿ ಕುರ್ಚಿ ಹಿಡಿದು ಕೂದೆ ಅತ್ತಿತ್ತ ನೋಡಿಗೊಂಡು. ಒಬ್ಬ ಬೆಳಿ ತಲೆಯವ° ಎನ್ನತ್ರೆ ಬಂದು    ” ನನ್ನ ಗುರ್ತ ಉಂಟಾ..?”  ಹೇಳಿ ಕೇಳಿಗೊಂಡು ಬಂದ. ” ಛೇ.. ನಿಮ್ಮನ್ನು ಮರಿಲಿಕ್ಕುಂಟಾ ವಿಶ್ವಣ್ಣ ”  ಎಂಗ ಹೀಂಗೆ ಪಟ್ಟಾಂಗ ಶುರು ಮಾಡುವಾಗ ಎನ್ನ ಹೆಂಡತ್ತಿಯೂ ಸೇರಿತ್ತು,  ಆರು..? ಯೆಂತ..? ಹೇಳಿಗೊಂಡು. “ಇವ° ಇಡ್ಯಡ್ಕ ವಿಶ್ವಣ್ಣ, ನವಗೆ ನೆರೆಕರೆಯೆ” ಹೇಳಿ ಗುರ್ತ ಮಾಡಿಯಪ್ಪಗ ಹೆಂಡತ್ತಿ ಹಾಂ..ಹಾಂ.. ಹೇಳಿ ತಲೆ ಆಡಿಸಿತ್ತು, ಸರಿ ಗೊಂತಾಯಿದಿಲ್ಲೆ ಹೇಳಿ ವಿಶ್ವಣ್ಣಂಗೆ ಕಂಡತ್ತು. ” ಗಿರೀಶ್ ಭಾರದ್ವಾಜರ ಪರಿಚಯ ಉಂಟಾ..ಅವರ ತಮ್ಮ ನಾನು” ಹೇಳಿಯಪ್ಪಗ ” ಹೋ..ಗೊತ್ತಾಯ್ತು ” ಹೇಳಿ ಹೇಳಿತ್ತು. “ಇವು ಒಳ್ಳೆ ಕೃಷಿಕರು. ಈಗಳೂ ಗೆದ್ದೆ ಬೇಸಾಯ ಮಾಡಿಗೊಂಡಿದ್ದವು. ರಾಜ್ಯ ಪ್ರಷಸ್ತಿಯೂ ಸಿಕ್ಕಿದ್ದು ಇವಕ್ಕೆ” ಅನು ಸೇರ್ಸಿದೆ.

” ನಂದು ಎಂತ ಇಲ್ಲ ಮಾರಾಯ.. ತಂದೆಯವರು ಮಾಡಿದ್ದನ್ನು ಮುಂದುವರಿಸಿದ್ದು ಅಷ್ಟೆ..” ವಿಶ್ವಣ್ಣ ಹೇಳಿದ. ಇಷ್ಟೆಲ್ಲ ಮಾತುಕತೆ ಅಪ್ಪಗೆ ವಿಶ್ವಣ್ಣನ ತಮ್ಮಂದ್ರು ಬಂದು ಸೇರಿಗೊಂಡವು. ಸಣ್ಣಾಗಿಪ್ಪಗ ದೊಡ್ರಜೆಲಿ ಯೆವಾಗಳೂ ಒಟ್ಟಿಂಗೆ ಕ್ರಿಕೆಟ್ಟು ಆಡಿಗೊಂಡಿದ್ದದು ಎಲ್ಲ ನೆಂಪು ಮಾಡಿಗೊಂಡೆಯ°.

ವಿಶ್ವಣ್ಣನ ಅಪ್ಪ ಬಿ.ಕೆ. ಭಟ್ ಆನು ಸಣ್ಣಾಗಿಪ್ಪಳೇ ರೆಟೈರ್ ಆಗಿ ಇಡ್ಯಡ್ಕಲ್ಲಿ ಹೊಳೆ ಕರೆಲಿ ದೊಡ್ಡ ಜಾಗೆಲಿ ಇದ್ದುಗೊಂಡು ಕೃಷಿ ಮಾಡಿಗೊಂಡಿತ್ತಿದ್ದವು. ಅಡಕ್ಕೆ, ಕಾಯಿ ಅಲ್ಲದೆ ಬತ್ತ ಬೇಸಾಯದೇ ಮಾಡುಗು. ಒಟ್ಟಿಂಗೆ ಕಬ್ಬುದೇ ಬೆಳೆಸುಗು. ವರ್ಷಕ್ಕೊಂದರಿ ಕಬ್ಬು ಕಡುದು “ಆಲೆಮನೆ”ಯಾಂಗೆ ಬೆಲ್ಲ ಕಾಸುಗು. ಆವಾಗ ನೆರೆಕರೆಯವಕ್ಕೆಲ್ಲ ಹೇಳುಗು, ಒಂದು ದೊಡ್ಡ ಜಂಬ್ರದಾಂಗೆ ಮಾಡುಗು. ಆನುದೇ ಹೋಯಿದೆ. ಕಬ್ಬಿನ ಹಾಲು, ರವೆ, ಬೆಲ್ಲ ಹೊಟ್ಟೆ ತುಂಬ ತಿಂದ ನೆಂಪು ಎನಗೆ ಮರೆಯ.ಆಸುಪಾಸಿಂದ ಜನಂಗ ಅವರಲ್ಲಿಗೆ ಅನುಭವ ಕೇಳಿಗೊಂಡು ಬಕ್ಕು. ಆದರ್ಶ ಕೃಷಿಕ ಹೇಳುದರಲ್ಲಿ ಸಂಶಯವೇ ಇಲ್ಲೆ. ಇಷ್ಟೇ ಅಲ್ಲ, ಅವು ಒಳ್ಳೆ ಇಂಜಿನಿಯರ್ ಆಗಿಯೂ ಹೆಸರು ಮಾಡಿತ್ತಿದ್ದವು. ಸ್ವಾತಂತ್ರ್ಯಾ ನಂತರ ಉತ್ತರ, ದಕ್ಶಿಣ ಕನ್ನಡ ಜಿಲ್ಲೆಲಿ ಎಲ್ಲ ಸಿವಿಲ್ ಕಾಮಗಾರಿ ಕೆಲಸಂಗಳ ಇವು ಮಾಡಿಸಿದ್ದವಡ. ಕಟೀಲು ದೇವಸ್ಥಾನ ಮದಲು ಪೂರ ಮುಂಗಿಪ್ಪಗ ಈಗಿಪ್ಪದರ(ದೋಣಿಯಾಕರಲ್ಲಿಪ್ಪ ಪಂಚಾಂಗ) ಇವೇ ಮಾಡಿಸಿದ್ದಡ. ಅವರ ದೊಡ್ಡ ಮಗ ಗಿರೀಶಣ್ಣ ನಮ್ಮ ಜಿಲ್ಲೆಲಿ ತೂಗು ಸಂಕ ಕಟ್ಟಿಸಿ ” ತೂಗು ಸೇತುವೆ ಸರದಾರ” ಹೇಳಿ ಹೆಸರು ಮಾಡಿದ್ದವು. ಅಪ್ಪಂಗೆ ಸಿಕ್ಕದ್ದ ಪ್ರಶಸ್ತಿ ಸಮ್ಮಾನಂಗಳ ಮಕ್ಕ ಪಡದ್ದವು. ಎಲ್ಲೋರು (ಗಿರೀಶಣ್ಣನ ಬಿಟ್ಟು)ಈಗ ಕೃಷಿ ಮಾಡಿಗೊಂಡು ಸಂತೋಷಲ್ಲಿದ್ದವು.

ಮದುವೆ ಚೆಂದಲ್ಲಿ ಕಳಾತು. ಮರದಿನ ಮಾಣಿ ಮನೆಲಿ ಕನ್ಯಾಸಮರ್ಪಣೆಗೆ ಬರೆಕ್ಕು ಹೇಳಿ ಅತು. ಸರಿ ಹೆರಟದೇ. ಅಲ್ಲಿ ಎನಗೆ ಎಂತ ಕೆಲಸ ಇತ್ತಿಲ್ಲೆ, ಅಂತೆ ಅತ್ತಿತ್ತ ಓಂಗಿಗೊಂಡು ಇತ್ತಿದ್ದೆ. ಮೂಲೆಲಿ ಒಂದಿಕ್ಕೆ ಹಳೇ ಪುಸ್ತಕ ಕಂಡತ್ತು. ” ಜಂಬ್ರಂದ ನಂಬ್ರಕ್ಕೆ” ಹೇಳ್ತ ಹವಿಗನ್ನಡಲ್ಲಿಪ್ಪ ನಾಟಕ ಅದು. ಪಡಾರು ಮಾಪಣ್ಣ ಮಾವ ಬರದ್ದದು.ನಮ್ಮದೇ ಸಮಾಜದ ಒಂದೈವತ್ತು ವರ್ಷ ಮೊದಲಾಣ ಕತೆ. ಓದುಲೆ ಶುರು ಮಾಡಿದರೆ ಓದಿಸಿಗೊಂಡು ಹೋತು. . ನಮ್ಮವಕ್ಕೆ ಕೃಷಿಯೇ ಪ್ರಧಾನ ಆಗಿಪ್ಪ ಆ ಕಾಲಲ್ಲಿ ಮನೆ ಮಕ್ಕ ಹೆರ ಹೋಗಿ ಓದಿ ಕೆಲಸಕ್ಕೆ ಸೇರುವ ಕ್ರಮ ಇತ್ತಿಲ್ಲೆಡ. ಹಾಂಗೆ ಹೋಪದು ಒಂದು ಸಮಸ್ಯೆ ಹೇಳಿ ಗ್ರೇಶುಗು. ಇಂಥಾ ಸಮಸ್ಯೆಯ ಸುತ್ತ ಹೆಣೆದ ಕತೆ.ಎನಗೆ ಸಮಯ ಹೋದ್ದದೇ ಗೊಂತಾಯಿದಿಲ್ಲೆ. ಊಟಕ್ಕಾತು ಹೇಳುವಗ ಓದಾಣ ಮುಗುದು ಎನ್ನ ಉಪ್ಪರಿಗೆ ತು೦ಬಿದ್ದು,ಹೊಟ್ಟೆ ತಾಳ ಹಾಕಿದ್ದು ಗೊ೦ತೇ ಆಯಿದಿಲ್ಲೆ. ಊಟ ಎಲ್ಲ ಮುಗುಶಿ ಮನೆಗೆ ಬಂದು ಉಸ್ಸಪ್ಪ ಹೇಳಿ ಮನುಗಿದೆ.

ಆದರೆ ತಲೆಲಿ ಒಂದು ವಿಷಯ ಕೊರವಲೆ ಶುರುವಾತು. ಈಗ ನಮ್ಮ ಸಮಾಜಲ್ಲಿ ಮಕ್ಕ ಕಲ್ತು ಹೆರ ಕೆಲಸಕ್ಕೆ ಹೋಪದು ಮಾಮೂಲಾಯ್ದು. ಕೆಲವು ದಿಕ್ಕೆ ಒಬ್ಬ ಮಾಣಿ ಮನೇಲೆ ಇದ್ದುಗೊಂಡು ಕೃಷಿ ಮಾಡಿಗೊಂಡು ಇದ್ದವು. ಹೀಂಗಿಪ್ಪ ಮಾಣ್ಯ೦ಗೊಕ್ಕೆ ಈಗ ಮದುವೆಗೆ ಯೆವ ಕೂಸೂ ಸಿಕ್ಕುತ್ತಿಲ್ಲೆ ಹೇಳಿ ಅಯಿದು. ರಜ ಕಲ್ತ ಕೂಸುಗ ಪೇಟೆಲಿಪ್ಪ ಮಾಣಿಯ ಬಿಟ್ಟು ಬೇರೆ ನೋಡುತ್ತಾವಿಲ್ಲೆ.ಕೆಲವಕ್ಕೆಮಾಣಿಯೊಟ್ಟಿ೦ಗೆ ಅಬ್ಬೆ ಅಪ್ಪ° ಇದ್ದರೆ ಆಗ.

ಅ೦ತೂ ಪರ್ದೇಶಿಯೂ,ಅನಾಥನೂ ಆದ ಮಾಣಿಯ೦ಗೊಕ್ಕೆ ಕಾಯ್ಸು ಹೆಚ್ಚು ಹೇಳಿ ಹೆರಿಯೋರು ಹೇಳುವಾ೦ಗಾತು! ಹೀಂಗಾಗಿ ಕೆಲವು ಮಾಣಿಯಂಗ ಮದುವೆ ಆಗದ್ದೆ ಬಾಕಿ ಒಳುದ್ದವು. ಹಾಂಗೇಳಿ ಹೆರಿಯವು ಸುಮ್ಮನೆ ಕೂಪಲೆ ಎಡಿಗಾ..? ಇದೊಂದು ದೊಡ್ಡ ಸಮಸ್ಯೆಯೇ ಅಯ್ದು.ಈಗೀಗ ಹೆರ ಸಮುದಾಯಂದ ಕೂಸಿನ ತಂದು ಮದುವೆ ಮಾಡ್ಸುಲೆ ಸುರುಮಾಡಿದ್ದವು. ಬೇರೆ ಉಪಾಯ ಇಲ್ಲೆ ಹೇಳ್ತ ಪರಿಸ್ಟಿತಿ.ಅಂಬಗ ಈ ಸಮಸ್ಯೆಗೆ ಬೇರೆ ಪರಿಹಾರ ಇಲ್ಲೆಯ..?

ಒಂದಿಕ್ಕೆ ಅಪ್ಪ ಹಾಕಿಕೊಟ್ಟ ದಾರಿಲಿ ನಡದು ಕೆಲಸ ಮುಂದುವರಿಸಿಗೊಂದು ಹೋದ ಮಕ್ಕ ಜೀವನಲ್ಲಿ ಯಶಸ್ಸು ಕಂಡವು, ಮತ್ತೊಂದಿಕ್ಕೆ ಅಪ್ಪನೊಟ್ಟಿಂಗೆ ಕೃಷಿ ಮುಂದುವರಿಸಿಗೊಂಡು ಇಪ್ಪ ಮಕ್ಕೊ ಸಂಸಾರ ಮುಂದುವರುಸುಲೆ ಒಪ್ಪಂದ ಮಾಡೆಕ್ಕಾಗಿ ಬಪ್ಪದರ ಕಾಣುತ್ತು. ಈ ದ್ವಂದ್ವಲ್ಲಿ ಎನ್ನ ಮನಸ್ಸು ಕೆಲ ಸಮಯ ಸಂಕಟಲ್ಲಿದ್ದದು ಸುಳ್ಳಲ್ಲ.

ಪರಿಹಾರಕ್ಕೆ ಕಾಲವನ್ನೇ ಕಾಯುವನೋ?

ಜಂಬ್ರಂದ ಶುರುವಾತು...., 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಪುತ್ತೂರುಬಾವದೇವಸ್ಯ ಮಾಣಿಅಕ್ಷರದಣ್ಣಮಂಗ್ಳೂರ ಮಾಣಿಪ್ರಕಾಶಪ್ಪಚ್ಚಿಬೊಳುಂಬು ಮಾವ°ದೀಪಿಕಾಶಾ...ರೀಅಜ್ಜಕಾನ ಭಾವಮಾಷ್ಟ್ರುಮಾವ°ವಿಜಯತ್ತೆವೇಣೂರಣ್ಣಪಟಿಕಲ್ಲಪ್ಪಚ್ಚಿಯೇನಂಕೂಡ್ಳು ಅಣ್ಣಬಂಡಾಡಿ ಅಜ್ಜಿಕಜೆವಸಂತ°ಮುಳಿಯ ಭಾವಎರುಂಬು ಅಪ್ಪಚ್ಚಿಜಯಗೌರಿ ಅಕ್ಕ°ದೊಡ್ಡಮಾವ°ಶಾಂತತ್ತೆಕಳಾಯಿ ಗೀತತ್ತೆಅನು ಉಡುಪುಮೂಲೆಸರ್ಪಮಲೆ ಮಾವ°ಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ