ಜೆಂಬ್ರದ ಊಟ

October 17, 2010 ರ 5:54 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮಊಟದ ಬಗ್ಗೆ ಎಷ್ಟು ಬರದರೂ ಮುಗಿಯದ್ದ ಕಥೆ.ಎನ್ನ ಮೂವತ್ತು ವರ್ಷದ ವೃತ್ತಿ ಜೀವನಲ್ಲಿ ನೋಡಿದ ಜೀವನಶೈಲಿ ಆಧಾರಿತ ಕಾಯಿಲೆಗೊ ಜಾಸ್ತಿಯಪ್ಪದು ನೋಡಿರೆ ಆಶ್ಚರ್ಯವೂ ಆವುತ್ತು,ಹೆದರಿಕೆಯೂ ಆವುತ್ತು.ನಮ್ಮ ಮಕ್ಕಳ ಕಾಲಕ್ಕಪ್ಪಗ ಎಂತಕ್ಕಪ್ಪಾ ಹೇಳುವ ಯೊಚನೆ ತುಂಬಾ ದಿನಂದ ಕೊರೆತ್ತಾ ಇದ್ದು.ಸೀಮೂತ್ರವೂ ರಕ್ತದೊತ್ತಡವೂ ಇಪ್ಪವರ ಸಂಖ್ಯೆ ಇಷ್ಟೇ ಜಾಸ್ತಿ ಆಯಿದು ಹೇಳಿ ಲೆಕ್ಕ ಮಡಿಕ್ಕೊಂಡಿದಿಲ್ಲೆ,ತಪ್ಪಾತು ತೋರ್ತು.
ಹವ್ಯಕ ಆಹಾರ ಆ ಮಟ್ಟಿಂಗೆ ತುಂಬಾ ವೈಜ್ಞಾನಿಕವಾಗಿದ್ದು.ಆನು ಯೇವಗಳೂ ನೆಗೆ ಮಾಡುವ ಕ್ರಮ ಇದ್ದು.ನಮ್ಮ ಆಹಾರ ಕ್ರಮಲ್ಲೇ ಉಂಡೊಂಡಿದ್ದವಕ್ಕೆ ಯಾವದೇ ಪಥ್ಯ ಬೇಡ ಹೇಳಿ,ಅಲ್ಲದೋ ಭಾವ?
ಇಂದು ಮಾಂತ್ರ ಭಾವಂದ್ರೆಲ್ಲ ಸೇರಿ ನಮ್ಮ ಊಟದ ಕ್ರಮದ ದಾರಿಯೇ ತಪ್ಸಿದ್ದವನ್ನೇ!
ಕ್ರಮದ ಬಗ್ಗೆ ಮಾತು ಸುರುವಾದರೆ ಮುನ್ನಾಣ ದಿನದ ಮೇಲಾರಕ್ಕೆ ಕೊರವದರಿಂದಲೇ ಸುರು ಮಾಡೆಕ್ಕಲ್ಲದೋ.ಗುರಿಕ್ಕಾರನ ಮೇಲ್ವಿಚಾರಣೆಲಿ ನೆರೆಕರೆಯವೆಲ್ಲ ಸೇರಿ ಕೊರವದೆಂತಕೆ?ಸಂಬಳಕ್ಕೆ ಜೆನ ಸಿಕ್ಕವು ಹೇಳಿ ಅಲ್ಲ.ಅಕಸ್ಮಾತ್ ಏನಾರೂ ಕಮ್ಮಿ ಆಗಿದ್ದರೆ ಎಲ್ಲೊರೂ ಸೇರಿ ಹೊಂದ್ಸಿಗೊಂಡು ಹೋಯೆಕ್ಕು ಹೇಳ್ತದು.ಈಗಾಣ ಹಾಂಗೆ ಪೈಸ ಕೊಟ್ರೆ ಮದಲು ಎಂತದೂ ಸಿಕ್ಕುಗು ಹೇಳುತ್ತ ಧೈರ್ಯ ಇದ್ದದಿಲ್ಲೆ.ನೆರೆಕರೆಯಕ್ಕೂ ಗುರಿಕ್ಕಾರಂಗೂ ಅಷ್ಟು ಜವಾಬ್ದಾರಿ ಇತ್ತದಾ.ಜೆಂಬ್ರಕ್ಕೆ ಕೊರತ್ತೆ ಆಗದ್ದ ಹಾಂಗೆ ವ್ಯವಸ್ತೆ ಪರಸ್ಪರ ಸಹಕಾರಲ್ಲಿಯೇ.ಮನೆಲಿದ್ದ ಹಾಲೋ ಮಜ್ಜಿಗೆಯೋ ಕೊಟ್ಟು ಸುಧರಿಕೆ ಆಗಿಯೊಂಡಿತ್ತು.
ಮುನ್ನಾಣ ದಿನ ಮೇಲಾರಕ್ಕೆ ಕೊರವದರಿಂದ ಸುರು ಮಾಡಿ ಮೂರ್ನೇ ಹಂತಿಗೆ ಬಳುಸಿಕ್ಕಿ ಹೋಕು.ಈಗಾಣ ಹಾಂಗೆ ಕೈ ತೊಳವಲೆ ಅವರವರ ಮನಗೆ ಎತ್ತುವ ಕ್ರಮವೂ ಇತ್ತಿಲ್ಲೆ.
ಈಗ ಮರದಿನದ ಊಟಕ್ಕೆಂತರ ಹೇಳುದು ಯಜಮಾನನ ಪ್ರತಿಷ್ಟೆಯ ಸಂಗತಿಯಗಿ ಹೋಯಿದು.
ನಿಜ ಸ್ತಿತಿ ಎಂತ ಹೇಳಿ ನೋಡುವೊ°.
ಎರಡು ಸಾಲು ಹಸೆ ಹಾಕಿ ಜೆಂಬ್ರಕ್ಕೆ ತಕ್ಕ,ಹತ್ತೋ ಇಪ್ಪತ್ತೋ ಜೆನ ಎರಡು ಹಂತಿ ಹಾಕಿ ಕೂದವು.ಎದುರಂಗೊಂದು ಮಣೆಯೂ ಬಂತು.ಹೆಚ್ಚಿನ ದಿಕ್ಕಿಲ್ಲಿಯೂ ಕೊರವಲೆ ಉಪಯೋಗ ಮಾಡುವ ಮಣೆ ಸ್ವಚ್ಚ ಇರ್ತು ಹೇಳಿ ಧೈರ್ಯ ಇಲ್ಲೆ.
ತಾಳಿಂಗೆ ತೊಂಡೆ ಕಾಯಿಯೋ,ಅಳತ್ತಂಡೆಯೋ ಆದರೆ ಕಥೆ ಬೇರೆಯೇ,ಒಂದರಿ ನೀರಿಲ್ಲಿ ಮುಳುಗುಸಿ ತೆಗದರೆ ತೊಳದ ಶಾಸ್ತ್ರ ಆದ ಹಾಂಗೇ.ಹಾಂಗೇ ಕೊರವಲೆ ಕೂಪವು ಸಾಬೂನು ಹಾಕಿ ಕೈ ತೊಳದ್ದದು ಆರಾರೂ ನೋಡಿದ್ದಿದ್ದೋ?ಎಲೆ ತಿಂಬವಿದ್ದರೆ ಬಾಯಿಲಿದ್ದದು ಕೊರದ ಬಾಗಕ್ಕೆ ಬಿದ್ದರೂ ಬಿದ್ದತ್ತೇ.ಅಂಗಿ ತೆಗದು ಅಡಿಗೆ ಮಾಡುವಗ ಅಡಿಗೆಯೋರ ನೋಡಿರೆ ಅಭ್ಯಾಸ ಇಲ್ಲದ್ದವಕ್ಕೆ ಮೆಚ್ಚುಗೋ?.ಉಪ್ಪು ಕಮ್ಮಿ ಆದರೆ ಬೆಗರು ಬಿದ್ದು ಸರಿಯಕ್ಕು ಹೇಳಿ ತಮಾಶೆ ಮಾಡುದಕ್ಕೂ ಕಮ್ಮಿ ಇಲ್ಲೆ,ಬಿಡಿ.
ನಡೂಕೆ ಕೊರವಲಿಪ್ಪದರ ತಂದು ಹಾಕುವವು ನೆಡವಗ ಸಗಣ ಉಡುಗಿದ ನೆಲ ಆದರೆ ಧೂಳು ಹಾರಿಯೊಂಡಿಕ್ಕು.ನಮ್ಮ ಜೆಂಬ್ರದ ಊಟ ಉಂಡು ಆರಿಂಗೂ ವಾಂತಿ ಭೇದಿ ಸುರುವಾದ್ದಿಲ್ಲೆ ಹೇಳಿ ಒಬ್ಬ ಬೈಲಿಲ್ಲಿ ಹೇಳಿದ್ದಿದ್ದು.ಎನ್ನ ಹತ್ತರೆ ಕೇಳಿ.
ಸರಿ ನಾಲ್ಕು ಬಗೆ ತಾಳು ಅವಿಲು ಕೋಸಂಬ್ರಿ,ಇದೆಲ್ಲಾ ಬಾಳೆ ಎಲೆ ಅಲಂಕಾರಕ್ಕೆ ಮಾಡುವ ಹಾಂಗೆ ಕಾಣ್ತಷ್ಟೆ ಅಲ್ಲದ್ದೆ ಸರಿಯಾದ ಆಹಾರ ಹೊಟ್ಟೆಗೆ ಹೋಯೆಕ್ಕು ಹೇಳ್ತದು ತೋರ್ತಿಲ್ಲೆ ಅದಾ.ನಾಲ್ಕು ಬಗೆ ಇದ್ದಲ್ಲದೋ,ರಜ ರಜ ಬಳುಸಿರೆ ಸಾಕು,ಸುಧರಿಕೆ ಮಾಡುವಗ ಜಾಗೃತೆ ಮಾಡಿಯೊಂಡ್ರಾತು ಹೇಳುದು ಸಾಕಷ್ಟು ಕೇಳ್ತು.ಅಶನ ರಜ ಜಾಸ್ತಿ ಮಾಡಿರಾತು ಹೇಳುದೂ ಇಲ್ಲದ್ದಿಲ್ಲೆ.
ತಾಳು ರಜ ರಜ ಬಳುಸಿ ಅಶನ ಜಾಸ್ತಿ ಬಳುಸಿರೆ ಅಶನ ಕಮ್ಮಿ ತಿನ್ನೆಕ್ಕಾದವಂಗೆ ದೇವರೇ ಗತಿಯಲ್ಲದೋ?ಅವ° ಜವ್ವನಿಗ,ಇನ್ನೊಂದು ಹೋಳಿಗೆ ಎನ್ನ ಲೆಕ್ಕಲ್ಲಿ ಹಾಕಿ ಭಾವಾ ಹೇಳಿದ್ದು ಕೇಳಿದ್ದು ವಿನಹಾ ರಜ ತಾಳು ಬಳುಸಿ ಹೇಳಿರೆ ಸೌಟಿಂದ ಬೀಳುದೇ ಕಷ್ಟ.ತರಕಾರಿ ತಿಂಬದು ಒಳ್ಳೆದು,ರಜ ಜಾಸ್ತಿ ಬಳ್ಸಿ ಹೇಳುದು ಕೇಳಿದ್ದಿಲ್ಲೆ.(ಆನು ಹೇಳ್ತ ಕ್ರಮ ಇದ್ದು).
ಹಸರಿಂದೋ ಕಡ್ಳೆದೋ ಕೋಸಂಬ್ರಿ ಮಾಡ್ತವು.ಬಹುಷಃ ನಮ್ಮ ಆಹಾರಲ್ಲಿ ಪ್ರೋಟೀನ್ ಸಿಕ್ಕುವ ಮುಖ್ಯ ವಸ್ತು ಅದು,ಉದ್ದು ಇನ್ನೊಂದು.ಉಪ್ಪಿನ ಕಾಯಿಯಾದರೂ ಜಾಸ್ತಿ ಬಳುಸಿಕ್ಕುಗು,ಕೋಸಂಬ್ರಿ ಇಲ್ಲೆ.ಹಸರು ಪಾಯಸ ತಿಂಬಲೆ ಒತ್ತಾಯ ಮಾಡುವವು ಕೋಸಂಬ್ರಿ ತಿಂಬಲೆ ಮಾಡುದು ಒಳ್ಳೆದು.(ಕೈ ಹಾಕಿ ಬಳುಸದ್ದರೆ).
ಇನ್ನು ಬಫೆ ಬೇಕೋ ಬೇಡದೋ ಹೇಳಿಯೂ ಚರ್ಚೆ ಇದ್ದದ.
ಕೂದು ಉಂಬದು ಒಳ್ಳೆದೇ,ಪುರುಸೊತ್ತು ಇದ್ದು ಬಳುಸಲೆ ಜೆನ ಇದ್ದರೆ.ಹಂತಿ ಹಾಕಿ ಕೂದಪ್ಪಾಗ ಬಳುಸಲೆ ಜೆನ ಇಲ್ಲದ್ದರೆ ನಿಧಾನ ಆವುತ್ತು.ನಿಧಾನಲ್ಲಿ ಉಣ್ಣೆಕ್ಕಾದ್ದು ಸರಿಯೇ.ವಾಸ್ತವಿಕವಾಗಿ ಎಂತಾವುತ್ತು ಗೊಂತಿದ್ದೋ?
ಉಂಬಲೆ ಕೂಪಗ ತಡವಾಗಿರ್ತು.ಸುರುವಾಣ ಹಂತಿ ಒಂದೂವರೆಗೆ ಕೂದರೆ ಎರಡ್ಣೇ ಹಂತಿಗಪ್ಪಗ ಎರಡೂವರೆ.
ಉಂಬಲೆ ಕೂದ ಮೇಲೆಂತಾವುತ್ತು,ತಡವಾದರೆ ಹೊಟ್ಟೆಲಿಪ್ಪ ಜೀರ್ಣ ರಸ ಖಾಲಿ ಆಗಿರ್ತು.ಜೀರ್ಣ ಹೇಂಗಕ್ಕು?
ಸಮಯಕ್ಕೆ ಸರಿಯಾಗಿಯೇ ಆದರೂ ರಜ ತಾಳು ಅಶನ ಉಂಡು ಸಾರಿಂಗೆ ೫ ನಿಮಿಷ ಕಾಯೆಕ್ಕಕ್ಕು,ಇದೇ ಮುಂದುವರುದು,ತಾಳು ವಿಚಾರಣೆ,ಸಾರು ,ಕೊದಿಲು,ಮೆಣಸುಕಾಯಿ,ಹುಳಿ ಮೇಲಾರದ ವರೆಗೆ ಎತ್ತುವಾಗ ಹೊಟ್ಟೆ ತುಂಬಿರ್ತು,ಮಧ್ಯಲ್ಲಿ ಐದೈದು ನಿಮಿಷ ಕಾಯಿವದು ಬೇರೆ..ಈಗ ನೋಡಿ ನಿಜವಾದ ಕಥೆ ಸುರುವಪ್ಪದು.
ಒಂದರಿ ಪಾಯಸ ಹಾಕಿಯೊಂಡ°.ಕಥೆ ಮುಗ್ತು.ಇನ್ನೊಂದು ಹಾಯ್ಕೊಳೆಕ್ಕಲ್ಲದೊ?ಒಟ್ಟಿಂಗೆ ಬಂತದಾ,ಹೋಳಿಗೆ(ಇದ್ದದರಲ್ಲಿ ಒಳ್ಳೇ ಭಕ್ಷ ಹೋಳಿಗೆ ಆದರೂ),ತುಪ್ಪ ಹಾಕಿ ಒಂದು ಹಾಲು ಹಾಕಿ ಇನ್ನೊಂದು ತಿಂದರೆ ಯೆಜಮಾನಂಗೆ ಸಂತೋಷ,ಆಯೆಕ್ಕಾದ್ದೇ.ಅಖೇರಿಗೆ ಮಜ್ಜಿಗೆ ಅಶನ ಉಣ್ಣೆಕ್ಕಲ್ಲದೋ,(ಮಸರು ಬಳುಸಿಕ್ಕವು,ದ್ರಾಕ್ಷೆ ಪಾಯ್ಸ ಮಾಡಿರೂ)
ಅದೊಂದು ಎನಗೆ ಇನ್ನೂ ಅರ್ಥ ಆಗದ್ದ ವಿಷಯ,ಮಸರು ಬಳುಸದ್ದದು,ಈಗೀಗ ಸುರುವವುತ್ತಾ ಇದ್ದು.ಮಜ್ಜಿಗೆ ನೀರು ಬಳುಸಿರೆ ನಮ್ಮ ಹಾಂಗಿಪ್ಪವಕ್ಕೆ ಸರಿ,ಈಗಾಣ ಮಕ್ಕಗೆ ಬೆಂಗ್ಳೂರಿಂದ ಸ್ನೇಹಿತರ ಬಪ್ಪಲೆ ಹೇಳುದು ಅನಿವಾರ್ಯ ಆದ ಮೇಲೆ ಅವರ ಎದುರು ಕಷ್ಟ ಆವುತ್ತು.ಹವಿಕರಿಂಗೆ ಬಿಟ್ಟು ಮಜ್ಜಿಗೆ ನೀರಿಲ್ಲಿ ಉಂಬ ಅಭ್ಯಾಸ ಆರಿಂಗೂ ಇಲ್ಲೆ.ಅದಿರ್ಲಿ.ನಮ್ಮ ಕ್ರಮ ನವಗೆ,ಆದರೆ ಬಪ್ಪಲೆ ಹೇಳಿದ ಮೇಲೆ ಊಟಕ್ಕೆಂತ ನಿರೀಕ್ಷೆ ಮಾಡುದು ಹೇಳಿ ಗೊಂತಿಲ್ಲದ್ದವಕ್ಕೆ ಕಷ್ಟ ಅಪ್ಪಲಾಗ,ಅಲ್ಲದೋ?
ಯೋಚನೆ ಮಾಡೆಕ್ಕದ ವಿಷಯ ಎಂತ ಗೊಂತಿದ್ದೋ,ಬೆಣ್ತೆಕ್ಕಿ ಅಶನ ಉಂಡು ಹೊಟ್ಟೆ ಹಾಳಾತು ಹೇಳ್ತದು ಸಾಮಾನ್ಯ.ಕಾರಣ ಬೆಣ್ತೆಕ್ಕಿ ಅಲ್ಲ ನಮ್ಮ ಉಂಬ ಕ್ರಮ,ರಜಾ ಯೋಚನೆ ಮಾಡಿ,ಅಶನ,ತಾಳು,ಹಪ್ಪಳ,ಸಾರು,ಕೊದಿಲು,ಅವಿಲು,ಪಾಯ್ಸ,ಹೋಳಿಗೆ,ಮಜ್ಜಿಗೆ ಅಥವಾ ಮಸರು,ಇದೆಲ್ಲಾ ಮಿಶ್ರ ಮಾಡಿರೆ ಹೇಂಗೆ ಕಾಂಗು?ಅದೇ ಸ್ತಿತಿಲಿ ನಾವು ತಿಂದ ಆಹಾರ,ತಡವಾಗಿ ಉಂಡ ಪರಿಣಾಮ ಜೀರ್ಣ ರಸವೂ ಇಲ್ಲದ್ದ ಪರಿಸ್ತಿತಿಲಿ,ಹೊಟ್ಟೆಗೆ ಹೋದರೆ?
ನಾವಿಂದು ಒಂದು ಘಟ್ಟಕ್ಕೆ ಬಯಿಂದು,ಹೆಚ್ಚಿನವಕ್ಕೂ ಆರೋಗ್ಯದ ಬಗ್ಗೆ ಗಂಭೀರ ಚಿಂತನೆ ಮಾಡೆಕ್ಕಾಗಿ ಬಯಿಂದು.ಬೇರೆ ಬೇರೆ ಬಗೆ ಮಾಡುದು ಒಂದು ಇಷ್ಟ ಇಲ್ಲದ್ದವ° ಇನ್ನೊಂದರಲ್ಲಿ ಉಣ್ಣೆಕ್ಕು ಹೇಳ್ತದಲ್ಲದ್ದೆ,ಎಲ್ಲೊರೂ ಎಲ್ಲವನ್ನೂ ಉಣ್ಣೆಕ್ಕು ಹೇಳಿ ಅಲ್ಲ.ಎರಡು ತಾಳು/ಒಂದು ತಾಳು,ಅವಿಲು,ಸಾರು ಬೇಡ(ನೀರು ನೀರಾಗಿ ಉಂಡರೆ ಮತ್ತೆ ಅದೇ ತೇಗು ಬಂದು ಎದೆ ಉರಿ ಸುರುವಕ್ಕು),ಕೊದಿಲು,ಮೇಲಾರ,ಒಂದು ಬಗೆ ಪಾಯ್ಸ,ಒಂದು ಭಕ್ಷ,ಅಖೇರಿಗೆ ಮಸರೂ ಅಶನ.ಇದು ಸಾಕು ನಮ್ಮ ಜೆಂಬ್ರಂಗಳಲ್ಲಿ.ಕನಿಷ್ಟ ಪಕ್ಷ ಒತ್ತಾಯ ಮಾಡುದಾದರೂ ಬೇಡ.ಪಲಾವ್,ಚಿರೋಟಿ,ಪೂರಿ,ಚಪಾತಿ-ನಮ್ಮ ಊಟಂಗೊಕ್ಕೆ ಆವುತ್ತಿಲ್ಲೆ.
ಮತ್ತೆ ಬಫೆ ಮಾಡುದೂ ಬಿಡುದೂ ಅವರವರ ಅಗತ್ಯಕ್ಕೆ ಸರಿಯಾಗಿ,ಅಲ್ಲದೋ?

ಜೆಂಬ್ರದ ಊಟ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  “ವೈಜ್ನ್ಹಾನಿಕವಾಗಿ ಇರುಳು ಮೊಸರು ಉ೦ಬಲಾಗ ಹೇಳಿ ಇಲ್ಲೆ”? !!! ಮೊಸರಿಲ್ಲಿ ಕೊಬ್ಬಿನ ಅ೦ಶ ಜಾಸ್ತಿ ಇಪ್ಪ ಕಾರಣ ಮತ್ತು ಇರುಳು ಸಾಮಾನ್ಯವಾಗಿ ನಾವು ದೈಹಿಕ ವ್ಯಾಯಾಮ ಇಲ್ಲದ್ದೆ ವಿಶ್ರಾ೦ತಿ ತೆಕ್ಕೊ೦ಬ ಕಾರಣ ಇರುಳು ಮೊಸರು ಉ೦ಬಲಾಗ ಹೇಳುವದು ಆನು ಹಲವು ದಿಕ್ಕೆ ಕೇಳಿದ್ದೆ. ಮಜ್ಜಿಗೆ ಆದರೆ ತೊ೦ದರೆ ಇರ್ತಿಲ್ಲೆ. ಮೊಸರಿ೦ದ ಬೆಣ್ಣೆ ಬೇರ್ಪಡಿಸಿ ಆಗಿರ್ತಲ್ಲದಾ.. ಆದರೆ ಮಧ್ಯಾಹ್ನ ಮೊಸರು ಉ೦ಬಲಾಗ ಹೇಳುವದರ ಆನು ಸುರುವಿ೦ಗೆ ಕೇಳ್ತಾ ಇಪ್ಪದು. “ರಾತ್ರೌ ದಧಿಮಾನಯ” ಹೇಳುವದು ಮೊದಲಿ೦ದಲೇ ಕೇಳಿದ್ದೆ ಹೊರತು “ಮಧ್ಯಾಹ್ನೌ ದಧಿಮಾನಯ” ಹೇಳಿ ಕೇಳಿದ ನೆ೦ಪಿಲ್ಲೆ..

  [Reply]

  ಕೇಜಿಮಾವ°

  ಡಾ.ಕೆ.ಜಿ.ಭಟ್. Reply:

  ಮೊಸರಿಲ್ಲಿ ಕೊಬ್ಬಿನ ಅಂಶ ಎಷ್ಟಿದ್ದು ಗೊಂತಿದ್ದಾ?೪-೫%.ಅದರಿಂದ ಹೆಚ್ಚು ಕೊಬ್ಬು ಅಶನಲ್ಲಿ ನಮ್ಮ ಹೊತ್ತೆಗೆ ಹೋವುತ್ತು.ಅಶ್ಟಕ್ಕೂ ಮಸರಲ್ಲದ್ದೆ ಜೆಂಬ್ರಲ್ಲಿ ಕೊಬ್ಬು ಇರುಳಾಗಲೀ ಹಗಲಾಗಲೀ ನಾವು ತಿಂತಿಲ್ಲೆಯೋ?ಒಂದು ಹೋಳಿಗೆಲಿ ಎಷ್ಟು ಕೊಬ್ಬು ಇದ್ದು ಹೇಳಿ ಏನಾರೂ ಅಂದಾಜಿದ್ದಾ?ನಾವು ತಿಂಬ ಮಸರು ಇರುಳಾದರೂ ಮಧ್ಯಾಹ್ನ ಆದರೂ ಆರೋಗ್ಯಕ್ಕೇನೂ ತೊಂದರೆ ಇಲ್ಲೆ.ದಿನಕ್ಕೆ ೩೦೦ ಎಮ್ ಎಲ್ ಹಾಲು ಮತ್ತು ಅದರ ಉತ್ಪನ್ನ ತಿಂಬಲಕ್ಕು.ಇರುಳು ಜಂಬ್ರಲ್ಲಿ ತುಪ್ಪ ಬಳುಸುದರ ಆರಾದರೂ ಬೇಡ ಹೇಳಿದ್ದರ ಕೇಳಿದ್ದಿರಾ?ವೈಜ್ನಾನಿಕವಾಗಿ ಇರುಳಾಗಲೀ ಮೊಸರು ತಿಂಬಲೆ ತೊಂದರೆ ಇಲ್ಲೆ.ಮಿತಿ ಮೀರಿರೆ ಯಾವದೇ ಹೊತ್ತಾದರೂ ಒಂದೇ.ಮಧ್ಯಾಹ್ನ ಉಂಡಿಕ್ಕಿ ಎಷ್ಟು ಕೆಲಸ ಮಾಡ್ತಣ್ಣೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಶ್ಯಾಮಣ್ಣಡಾಮಹೇಶಣ್ಣಒಪ್ಪಕ್ಕಅಕ್ಷರ°ಡಾಗುಟ್ರಕ್ಕ°ಪ್ರಕಾಶಪ್ಪಚ್ಚಿಮಾಲಕ್ಕ°ಚೆನ್ನಬೆಟ್ಟಣ್ಣಕಜೆವಸಂತ°ಅಡ್ಕತ್ತಿಮಾರುಮಾವ°ಚುಬ್ಬಣ್ಣಶಾ...ರೀಪಟಿಕಲ್ಲಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಶೀಲಾಲಕ್ಷ್ಮೀ ಕಾಸರಗೋಡುದೇವಸ್ಯ ಮಾಣಿವಾಣಿ ಚಿಕ್ಕಮ್ಮವಿದ್ವಾನಣ್ಣಪುಟ್ಟಬಾವ°ಬಟ್ಟಮಾವ°ಪೆರ್ಲದಣ್ಣಸುವರ್ಣಿನೀ ಕೊಣಲೆಶ್ರೀಅಕ್ಕ°ಶೇಡಿಗುಮ್ಮೆ ಪುಳ್ಳಿಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ