ನಾಸಿಕಲ್ಲಿ ಸಂತ ವಾಣಿ ನೆಂಪಾತು !

March 26, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಂಗೊ ನಾಸಿಕಕ್ಕೆ ಹೋದ್ದದು ೨೦೦೫ನೇ ಇಸವಿಲಿ.ಅದರಿ೦ದ ಮದಲು ಸುಮಾರು ೨೦ ವರ್ಷ ಬೊಂಬಾಯಿಲಿ ಇತ್ತಿದ್ದೆಯ°. ಎನಗೆ ಅಲ್ಲಿಯೇ ತಕ್ಕಮಟ್ಟಿಂಗೆ ಒಂದು ಒಳ್ಳೆ ಕೆಲಸ ಇತ್ತಿದ್ದು. ಆದರೆ ಮನೆಯವಕ್ಕೆ ಸಮಾಧಾನ ಇತ್ತಿಲ್ಲೆ ಯೆಂತಕೆ ಕೇಳಿದರೆ ಊರಿಂಗೆ ಹೋಗಿ ಬಪ್ಪಲೆ ತುಂಬ ದೂರ ಆಯ್ಕ್ಕೊಂಡಿತ್ತಿದ್ದು. ಎನಗುದೇ ಹಲವು ವರ್ಷ ಒಂದೇ ದಿಕ್ಕೆ ಕೆಲಸ ಮಾಡಿ ಬೆಳವಣಿಗೆ ಆದ್ದದು ಸಾಲ ಹೇಳಿ ಕಂಡುಗೊಂಡಿತ್ತು.ಬೆಳವಣಿಗೆಗೆ ಬದಲಾವಣೆ ಅನಿವಾರ್ಯ (Change is Inevitble for growth) ಹೇಳ್ತ   ಹಾಂಗೆ ಆನು ಕೆಲಸ ಬದಲುಸುವ ಯೊಚನೆ ಮಾಡಿಗೊಂಡಿತ್ತಿದ್ದೆ. ಅಷ್ಟಪ್ಪಗ ನಾಸಿಕಲ್ಲಿ ಒಂದು ಕಂಪೆನಿಲಿ ಒಳ್ಳೆ ಅವಕಾಶವೂ ಬಂತು.ಊರಿಂಗೆ ಹೋಗಿ ಬಪ್ಪ ವಿಷಯಲ್ಲಿ ಹೆಂಡತ್ತಿ ಮಕ್ಕಳ ಸಮಸ್ಯೆ ಪರಿಹಾರ ಆಗದ್ದರೂ ಎನ್ನ ಔದ್ಯೋಗಿಕ ಬೆಳವಣಿಗೆಗೆ ಇದೊಂದು ಉತ್ತಮ ಅವಕಾಶ ಹೇಳಿಗೊಂಡು ಗ್ರೇಶಿ ನಾಸಿಕಕ್ಕೆ ಹೋಪ ತೀರ್ಮಾನ ತೆಕ್ಕೊಂಡೆ.

ಹೀಂಗೆ ಕೆಲಸ ಬದಲುಸುವ ಮದಲು ಅದರ ಹಿಂದಿಪ್ಪ ತಯಾರಿಗಳ ಬಗ್ಗೆ, ಮತ್ತಾಣ ವ್ಯವಸ್ತೆಗಳ ಬಗ್ಗೆ ಎನಗೆ ಸ್ಪಷ್ಟ ಆಲೊಚನೆ ಇತ್ತಿದ್ದು. ಮಕ್ಕಳ (ಆವಾಗ ಎನಗೆ ಶಾಲೆಗೆ ಹೋಪ ಒಬ್ಬ ಮಗ° , ಎರಡ್ನೆಯವಂಗೆ ಒಂದು ವರ್ಷ)ಶಾಲೆ ಬದಸುಲುದು ಎಲ್ಲ ದೊಡ್ಡ ಸಮಸ್ಯೆ. ಅದೂ ಬೇರೆ ಆನು ಹೋವುತ್ತಾ ಇಪ್ಪದು ಜುಲಾಯಿಲಿ. ಎಲ್ಲಾ ಶಾಲೆಗಳಲ್ಲಿ ಸೇರ್ಪಡೆ ಮುಗಿದಿರಿತ್ತು.ಪುಣ್ಯಕ್ಕೆ, ಹೊಸ ಕಂಪನಿಲಿ ಇದಕ್ಕೆ ಬೇಕಾದ ಸಹಕಾರ ಕೊಟ್ಟಿದವು. ಆದರೂ ಆನು ಮಾಡೆಕ್ಕಾದ ಕೆಲಸಂಗ ಸುಮಾರು ಇತ್ತಿದ್ದು, ಶಾಲೆಲಿ ಅಡ್ಮಿಶನ್ ಟೆಸ್ಟು,ಇಂಟರ್ವ್ಯೂ ಅಲ್ಲದ್ದೆ ಹೊಸ ಮನೆ ನೋಡುದು ಹೇಳಿಗೊಂಡು. . ಆನು ಇಲ್ಲಿ ಹೊಸ ಕಂಪನಿಗೆ ಬಂದು ಸೇರಿದ್ದು ಗುರುವಾರ.  ಮದಾಲು ಶಾಲೆಗ ಯಾವ್ಯಾವುದು ಇದ್ದು  ಎಂಬುದರ ಲಿಸ್ಟು ಮಾಡಿ, ಒಂದೊಂದೇ  ವಿಚಾರ್ಸಿಗೊಂಡು ಬಂದೆ. ಒಂದು ಶಾಲೆಲಿ “ಸೋಮವಾರ ಮಗನ ಕರ್ಕೊಂಡು ಬನ್ನಿ” ಹೇಳಿ ತಿಳಿಸಿದವು.ಬಾಕಿ ದಿಕ್ಕೆ ಬಂದದು “ಬ೦ದದು ಲೇಟಾಯಿತು ನೀವು “ಹೇಳಿ ಜಾರಿದವು. ಮಕ್ಕಳ ಕರಕ್ಕೊಂಡು ಹೆಂಡತ್ತಿ ನಾಸಿಕಕ್ಕೆ ಬಂತು.ಮಗನ ಟೆಸ್ಟು ಇಂಟರ್ವ್ಯೂ ಆಗಿ ಎಂಗಳ  ಇಂಟರ್ವ್ಯೂ ಕೂಡಾ ಮಾಡಿದವು. ಇದಾಗಿ ಮೂರು ದಿನಲ್ಲಿ ಎನ್ನ ದೆನುಗೇಳಿದವು, ಪ್ರಾ೦ಶುಪಾಲರ ಬಂದು ಕಾಣೆಕ್ಕು ಹೇಳಿಗೊಂಡು.

“ನಿನ್ನ ಮಗಂಗೆ ಅಡ್ಮಿಶನ್ನು ಕೊಡ್ಲಕ್ಕು, ಆದರೆ ನಾಡ್ತು ಸೋಮವಾರ ೨೬ಕ್ಕೆ ಅವನ ಸೇರ್ಸೆಕ್ಕು ”

ಎನಗೆ ಇದು ಎಡಿಯದ್ದ ಕೆಲಸ ಹೇಳಿ ಕಂಡತ್ತು. “ಹೆಂಡತ್ತಿ ಮಕ್ಕ ದೂರಲ್ಲಿ ಬೊಂಬಾಯಿಲಿಪ್ಪದು. ಇಲ್ಲಿ ಮನೆ ಎಲ್ಲೀಳಿಯೂ ನೋಡಿ ಆಯಿದಿಲ್ಲೆ ಅಲ್ಲದ್ದೆ ಮೂರೇ ದಿನ ಇಪ್ಪದು”

” ಅದೆಲ್ಲ ನೀನು ನೊಡೆಕ್ಕು. ಸೋಮವಾರ ಯುನಿಟ್ ಟೆಸ್ಟು ಇದ್ದು, ಅದರ ಖ೦ಡಿತವಾಗಿ ತೆಕ್ಕೊಳೆಕ್ಕು”

“ಮಾಣಿ ಬಂದು ಸೇರಿದ ಬೆನ್ನಿಂಗೇ  ಪರೀಕ್ಷೆ ಬರವದು ಹೇಂಗೆ..” ಆನು ಮೆಲ್ಲಂಗೆ ರಾಗ ತೆಗೆದೆ.

“ಅದೆಲ್ಲ ತೊಂದರೆ ಇಲ್ಲೆ. ಯೆಡಿಗಾದಷ್ಟು ಬರೆಯಲಿ. ಅಲ್ಲದ್ದರೆ ಅಡ್ಮಿಶನ್ನು ಕ್ಯಾನ್ಸೆಲ್ ಮಡೆಕ್ಕಾವುತ್ತು” ಹೇಳಿ ಹೆಡ್ಡುಮಾಷ್ಟ್ರು ಬೊಬ್ಬೆ ಹಾಕಿದವು.

ಈ ತಾರೀಕು ಎನ್ನ ಜನ್ಮಲ್ಲಿ ಮರೆಯ ! ಜುಲಾಯಿ ೨೬ಕ್ಕೆ ನಾಸಿಕಲ್ಲಿ ಮಗನ ಶಾಲೆಗೆ ಸೇರ್ಸುಲೆ ೨೨ಕ್ಕೆ ಎನಗೆ ತಿಳಿಸಿದರೆ ಎಂತ ಮಾಡ್ಲೆಡಿಗು.  ಆತು ಹೇಳಿಕ್ಕಿ ಆನು ಹೆರಟೆ.   ” ಇಲ್ಲಿ ಮನೆ ನಿಘ೦ಟು ಮಾಡಿ ಬೊಂಬಾಯಿಲಿ ಈಗಾಣ ಶಾಲೆಂದ ಶಾಲೆ ಬದಲ್ಸುಲೆ ಕಾಕದ(ಟಿ.ಸಿ.) ತೆಕ್ಕೊಂಡು ಸಾಮಾನು ಗೆ೦ಟುಮುಟ್ಟೆ ಮಾಡಿಸಿ ಸಾಗಿಸಿಗೊಂಡು ಮೂರು ದಿನಲ್ಲಿ ಎಡಿಗಾಗ. ಮಗಂದು ಒಂದು ವರುಷ ಹೋದರೆ ಹೋಗಲಿ, ಬಪ್ಪ ವರ್ಷಂದ ಶಾಲೆಗೆ ಸೇರ್ಸುವ ಆಗದಾ..?” ಹೇಳಿ ಹೆಂಡತ್ತಿಯತ್ರೆ ಹೇಳಿದೆ.

“ಛೇ..ಒಂದು ವರ್ಷ ಹಾಳಾವುತ್ತನ್ನೆ”

‘ಅಂಬಗ ಸದ್ಯ ಒಂದು ಹೋಟೇಲಿಲಿ ಇಪ್ಪ..ನಿಧಾನಕ್ಕೆ ಮನೆ ನೊಡಿಯಾದ ಮೇಲೆ ಹೋದರಾತು”

“ಬೇಡ , ನಾಳೆ ಆನು ಇಲ್ಯಾಣ ಶಾಲೆಂದ ಟಿಸಿ ತೆಕ್ಕೊತ್ತೆ. ನಿಂಗಳೂ ಮನ್ನೆ ಆದಿತ್ಯವಾರ ಕೆಲವು ಮನೆ ನೋಡಿ ಬಯಿಂದೆ ಹೇಳಿದ್ದಿ, ಇನ್ನು ಬೇರೆ ನೋಡುದು ಬೇಡ. ಅದರಲ್ಲಿ ಒಂದರ ಇಂದೇ ನಿಘಂಟು  ಮಾಡಿಕ್ಕಿ. ಸರಿಯಾಗದ್ದರೆ ಮತ್ತೆ ಬದಲುಸುಲೆ ಆವುತ್ತನ್ನೆ. ಮಗಂಗೆ ಒಂದು ವರ್ಷ ಹಾಳಪ್ಪದರಂದ ಅಕ್ಕನ್ನೆ.   ನಾಳೆ ಹೆರಟು ಬನ್ನಿ, ಆದಷ್ಟು ಸಾಮಾನು ತೆಕ್ಕೊ೦ಡು ಹೋಪ°… ಎಡಿಗಕ್ಕು” ಹೇಳಿತ್ತು ಯೆಜಮಾನ್ತಿ.

ಸರಿ ಹೇಳಿ ಕಂಡತ್ತು.  ಎಂತೆಲ್ಲ ಕೆಲಸಂಗ ಇದ್ದೋ ಎಲ್ಲ ಪಟ್ಟಿ ಮಾಡಿದೆ.ಆಫೀಸಿಲಿ ವಿಷಯ ಎಲ್ಲ ಹೇಳಿ ನಾಲ್ಕು ದಿನಾಣ ರಜೆ ತೆಕ್ಕೊಂಡು ಬಂದೆ. ಇರುಳು ಮನೆಯ ಬಗ್ಗೆ ಮು೦ಗಡಪೈಸೆ ಕೊಟ್ಟು ನಾಡ್ತು ಶನಿವಾರ ಬೇಕು ಹೇಳಿ ಎನ್ನ ತೊಂದರೆಯ ವಿವರಿಸಿದೆ ಅದು ಒಪ್ಪಿತ್ತು.

ಹಾಂಗೆ ಆನು ಮರದಿನ , ಶುಕ್ರವಾರ ಮಧ್ಯಾಹ್ನ ಬೊಂಬಾಯಿ ತಲಪಿ ಯೋಜನೆ ಮಾಡಿದ ಪ್ರಕಾರ ಒಂದೊಂದೇ ಕೆಲಸ ಮಾಡ್ಲೆ ಹೆರಟೆ. ಇರುಳು ಇಡೀ ಸಾಮಾನೆಲ್ಲ ಕಟ್ಟಿ ಮಡುಗಿ ಆತು. ಮಳೆಗಾಲ ಶುರುವಾದ ಲಕ್ಷಣ ಇತ್ತಿದ್ದು. ಹಾಂಗಾಗಿ  ಶನಿವಾರ ಉದಿಯಪ್ಪಗ ಬೇಗ ಹೆರಡುವ ಯೊಚನೆ ಮಾಡಿದೆಯ. ಹತ್ತು ಗಂಟೆಗೆ ಎಲ್ಲ ಸಾಮನು ಲೋರಿಗೆ ತುಂಬಿಸಿ ಹೆರಡುವಗ ಮುಗಿಲು ಕಪ್ಪು ಕಟ್ಟಿತ್ತಿದ್ದು. ಮಳೆ ಶುರುವಪ್ಪಗ ಎಂಗ ಹೆರಟು ಹೈವೇ ತಲಪಿ ಆಯಿದು. ಸಾಮಾನು ಚೆಂಡಿ ಅಪ್ಪ ಹೆದರಿಕೆ ಇತ್ತಿಲ್ಲೆ.  ಹೊತ್ತೋಪಗ ನಾಕು ಘಂಟೆಗೆಲ್ಲ ನಾಸಿಕ್ ತಲಪಿದೆಯ°  ಎಂತ ತೊಂದರೆ ಇಲ್ಲದ್ದೆ. ನಾಸಿಕಲ್ಲಿ ಬೊಂಬಾಯಿಲಿ ಬಪ್ಪಾಂಗೆ ಮಳೆ ಇಲ್ಲೆ. ಆದಿತ್ಯವಾರ ಹೇಂಗೂ ರಜೆ, ಹೊಸ ಮನೆಲಿ ಎಲ್ಲ ಸಜ್ಜಿ ಮಾಡ್ಲೆ ಅನುಕೂಲ ಆತು.

ಮರದಿನ, ಜುಲಾಯಿ ೨೬, ಹೆಡ್ಡುಮಾಷ್ಟ್ರು ಎನಗೆ ಕೊಟ್ಟ ಗಡುವು !

ಶಾಲೆಗೆ  ಹೋಗಿ ಹೆಡ್ಡುಮಾಷ್ಟ್ರ ಮುಂದೆ ಮಗನ ನಿಲ್ಲಿಸಿದೆ.  ದೊಡ್ಡ ಸಂತೃಪ್ತ ನೆಗೆ ಅವರ ಮೋರೆಲಿ. ಇಷ್ಟು ಬಂಗ ಬರಿಸಿದ್ದಕ್ಕೆ ನೆಗೆ ಮಾಡುದೋ ಹೇಳಿ ಎನಗೆ ಜೋರು ಪಿಸುರು ಬಂತು. ಸುಮ್ಮನೆ ಎಂತಾರು ಪೆದ೦ಬು ಮಾತಾಡಿರೆ ನವಗೇ ತೊ೦ದರೆ ಹೇಳಿ ತಳೀಯದ್ದೆ ಹೆರ ಬಂದು ಶಾಲೆಯ ಪೈಸೆ ಕಟ್ಟುದರ ಎಲ್ಲ ಕಟ್ಟಿಕ್ಕಿ ಮನೆಗೆ ಹೋಗಿ ದೊಡ್ಡ ಒರಕ್ಕು ಒರಗಿದೆ. ಮರದಿನ ಆಫೀಸಿಂಗೆ ಆನು ಹೋಪಾಗ ಎಲ್ಲೋರು ಎನ್ನ ವಿಚಿತ್ರಲ್ಲಿ ನೋಡಿದವು. ಎನಗೆ ಏವದೂ ಅರ್ಥ ಆಯಿದಿಲ್ಲೆ.

ನೀನು ಹೇಂಗೆ ಎತ್ತಿದೆ  ಮಾರಾಯ.. ಬೊಂಬಾಯಿ ಮಳೆ ಬಂದು ಪೂರ ಮುಂಗಿದ್ದಡ. ‘

“ಅದರಲ್ಲಿ ಎಂತ ವಿಶೇಷ ಇಲ್ಲೆ. ಪ್ರತಿ ವರ್ಷ ಒಂದರಿಯಾದುರೂ ಆವುತ್ತು. ಜೋರು ಮಳೆ ಬಪ್ಪಗ ಒಟ್ಟಿಂಗೆ “ಭರತ”(High Tide) ಇದ್ದರೆ ಬೆಳ್ಳ ಬಪ್ಪದು ಮಾಮೂಲೇ. ”

ಈ ಸರ್ತಿಯಾಣ ಮಳೆ ೧೦೦ ವರ್ಷಲ್ಲಿ ಇತ್ತಿಲ್ಲೆಡ. ರೈಲು, ರೋಡು ಎಲ್ಲ ಕಡುದ್ದು. ಫೋನು ಸಂಪರ್ಕವೂ ಇಲ್ಲೆ.

ಆನು ಕೂಡ್ಲೆ ಎನ್ನ ನೆರೆಕರೆಲಿಪ್ಪವಕ್ಕೆ ಫೋನು ಮಾಡ್ಲೆ ನೋಡಿದೆ. ಸಿಕ್ಕಿದ್ದಿಲ್ಲೆ. ಮತ್ತೆ ಹತ್ತು ದಿನ ಕಳುದು ಸಂಪರ್ಕ ಎಡಿಗಾತು. ಆನು ಇದ್ದ ಜಾಗೆಲಿ ಮಳೆ ನೀರು ಸುರುವಾಣ ಮಾಳಿಗೆ ವರೆಗೆ ಬಂದಿತ್ತದ. ನೀರು ಇಳಿಯೆಕ್ಕಾರೆ ಎರಡು ದಿನ ಆಯಿದಡ. ಎರಡು ದಿನವರೆಗೆ ಕುಡಿವಲೆ ನೀರು ಹಾಲು ಎಂತ ಇತ್ತಿಲ್ಲೆಡ. ಹತ್ತು ದಿನ ಹೋಪಲೆ ಬಪ್ಪಲೆ ರೈಲಾಗಲಿ ಬಸ್ಸಾಗಲಿ ಇತ್ತಿಲೆ. ಒಂದು ದ್ವೀಪಲ್ಲಿ ಸಿಕ್ಕಿಗೊಂಡ ನಮುನೆಲಿ ಇತ್ತಿದ್ದವಡ. ಹತ್ತು ದಿನ ಮನೆಲಿ ಇದ್ದದರ ತಿನ್ನೆಕ್ಕು. ಹೆರ ಎ೦ತದೂ ಸಿಕ್ಕಿಗೊಂಡಿತ್ತಿಲ್ಲೆ. ವಿಷಯ ಎಲ್ಲಾ ಕೇಳುವಗ ಮೈ ಜುಂ ಆತು. ಆನು ಉದಾಸೀನ ಮಾಡಿ ಹಂಡತ್ತಿ ಮಕ್ಕಳ ಅಲ್ಲೇ ಬಿಟ್ಟು ಆನೊಬ್ಬನೇ ನಾಸಿಕಲ್ಲಿ ಇತ್ತಿದ್ದರೆ ಹೇಂಗಾವುತಿತ್ತು ಅವರ ಪರಿಸ್ಥಿತಿ ! ಗ್ರೇಶಿದರೆ ಈಗಳೂ ಬೆಚ್ಛಿ ಬೀಳುವಾಂಗೆ ಆವುತ್ತು.

ಅಪ್ಪು ಜುಲೈ ೨೬, ಎಂಗೊ ಜನ್ಮಲ್ಲಿ ಮರವಲಿಲ್ಲೆ… ಎಂಗಳ ಅರ್ಜೆಂಟಿಲಿ ನಾಸಿಕಕ್ಕೆ ಎಳೆದ ಆ ಹೆಡ್ಡುಮಾಷ್ಟರನ್ನುದೇ…ಆವಾಗಳೆ ಕಬೀರ ದಾಸರ ಈ ವಾಣಿ ನೆಂಪಾದ್ದದು !

ಕಲ್ ಕರೇ ಸೊ ಆಜ್ ಕರ್ ಆಜ್ ಕರೇ ಸೊ ಅಬ್

ಫಲ್ ಮೆ ಪ್ರಳಯ್ ಹೋಯೇಗಿ ಬಾಹುರಿ ಕರೇಗಿ ಕಬ್ ॥

( ನಾಳೆ ಮಾಡ್ತದರ ಇಂದು ಮಾಡು, ಇಂದು ಮಾಡ್ತದರ ಈಗ, ಬಾಕಿ ಮಡಗಿದರೆ ಮಾಡ್ತದು ಏವಾಗ ….ಮತ್ತಂಗೆ ಕೈ ಮೀರಿ ಹೋಕ್ಕು..?)

ನಾಸಿಕಲ್ಲಿ ಸಂತ ವಾಣಿ ನೆಂಪಾತು !, 4.5 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಜಯಶ್ರೀ ನೀರಮೂಲೆ
  jayashree.neeramoole

  ಅದ್ಭುತ ಅನುಭವ… “ಆದದ್ದೆಲ್ಲ ಒಳಿತೆ ಆಗಿದೆ” .. ಕೆಲವು ಸರ್ತಿ ತಕ್ಷಣ ಅನುಭವಕ್ಕೆ ಬತ್ತು…. ಇನ್ನು ಕೆಲವು ಇನ್ಯಾವಾಗಲೋ ಅನುಭವಕ್ಕೆ ಬತ್ತು…. ಕೆಲವು ಒಳಿತಾದ್ದದು ನಮಗೆ ಜನ್ಮ ಪೂರ್ತಿ ಅರ್ಥವೇ ಆವುತ್ತಿಲೆ….ಅಂತೂ ವೇದಾಂತ ಎಲ್ಲ ಸುಮ್ಮನೆ ಅಲ್ಲ… ನಮ್ಮ ನಿಜ ಜೀವನವೇ…. ಆದರೆ ನಮಗೆ ಅರ್ಥ ಅಪ್ಪದಲ್ಲಿ ಇಪ್ಪದು ಹೇಳುದಕ್ಕೆ ಉತ್ತಮ ಉದಾಹರಣೆ……

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಪೆಂಗಣ್ಣ°ಪುಟ್ಟಬಾವ°ಅಡ್ಕತ್ತಿಮಾರುಮಾವ°ದೀಪಿಕಾಪವನಜಮಾವಚೂರಿಬೈಲು ದೀಪಕ್ಕಬೊಳುಂಬು ಮಾವ°ಬೋಸ ಬಾವಮಂಗ್ಳೂರ ಮಾಣಿಶೀಲಾಲಕ್ಷ್ಮೀ ಕಾಸರಗೋಡುಸಂಪಾದಕ°ಡಾಗುಟ್ರಕ್ಕ°ಕೆದೂರು ಡಾಕ್ಟ್ರುಬಾವ°ಜಯಶ್ರೀ ನೀರಮೂಲೆಚೆನ್ನೈ ಬಾವ°ನೆಗೆಗಾರ°ಕಜೆವಸಂತ°ಕಳಾಯಿ ಗೀತತ್ತೆಪುಣಚ ಡಾಕ್ಟ್ರುಕಾವಿನಮೂಲೆ ಮಾಣಿದೇವಸ್ಯ ಮಾಣಿಶಾಂತತ್ತೆಒಪ್ಪಕ್ಕಪಟಿಕಲ್ಲಪ್ಪಚ್ಚಿಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ