ಪ್ಲಾಸ್ಟಿಕ್ ಸರ್ಜರಿ – ಸೌಂದರ್ಯ ವರ್ಧಕ ಚಿಕಿತ್ಸೆ ಮಾಂತ್ರವೊ ?

ನಮ್ಮ ಪುರಾಣ ಕಾಲಲ್ಲಿಯೂ “ಪ್ಲಾಸ್ಟಿಕ್ ಸರ್ಜರಿ” ಬಗ್ಗೆ ಗೊಂತಿದ್ದತ್ತಾಡ.
ಶಿವ ದೇವರು ಇದೇ ರೀತಿ   ಪ್ಲಾಸ್ಟಿಕ್ ಸರ್ಜರಿಯ ಮಾಡಿ (!) ಅವನ ಮಗ,  ನಮ್ಮೆಲ್ಲರ ಪ್ರೀತಿಯ ಗಣಪತಿ ದೇವರ  ತುಂಡಾದ  ತಲೆಯ ಬದಲಿಂಗೆ ಆನೆಯ ತಲೆಯ ಜೋಡುಸಿದ ಕತೆ ನವಗೆಲ್ಲ ಗೊಂತಿದ್ದು.
ಮಂಗಳೂರಿಲ್ಲಿ ಇಪ್ಪ ನಮ್ಮವೇ ಆದ ಒಬ್ಬ ಡಾಕ್ಟ್ರು ಈ ಪ್ಲಾಸ್ಟಿಕ್ ಸರ್ಜರಿಯ ಮೂಲಕ ಹಲವು ದಾಖಲೆಗಳ ಮಾಡಿದ್ದವು ಹೇಳ್ಲೆ ನವಗೆಲ್ಲ ಹೆಮ್ಮೆ ಆಯೆಕು.
ಅವೇ,  ಬಾಯಾರಿನ ಪೆಲತ್ತಡ್ಕದ ಡಾ.ಪಿ.ಸತೀಶ್ ಭಟ್.  ಮಂಗಳೂರಿನ ಯನಪೋಯ ಸ್ಪೆಷಾಲಿಟಿ ಆಸ್ಪತ್ರೆಲಿ, ಪ್ಲಾಸ್ಟಿಕ್ ಸರ್ಜರಿ ವಿಭಾಗದ  ಅಸ್ಸೋಸಿಯೇಟ್ ಪ್ರೊಫೆಸರ್  ಆಗಿದ್ದವು.

ಡಾ.ಪೆಲತ್ತಡ್ಕ ಸತೀಶ್ ಭಟ್ ಅವರ ಭಾಷಣ

ನಿನ್ನೆ ಕತ್ಲೆಪ್ಪಗ ನಂತೂರು ಭಾರತೀ ಕಾಲೇಜಿನ “ಶಂಕರ ಶ್ರೀ” ಸಭಾಂಗಣಲ್ಲಿ ಮಂಗಳೂರು ಹವ್ಯಕ ಸಭಾದ ಲೆಕ್ಕಲ್ಲಿ  ನೆಡದ ಜನವರಿ ತಿಂಗಳ ಕಾರ್ಯಕ್ರಮದ ಸಭೆಲಿ ಪ್ಲಾಸ್ಟಿಕ್ ಸರ್ಜರಿ ವಿಷಯದ ಬಗ್ಗೆ ಅವು  ಭಾರೀ ಲಾಯಕಿಲ್ಲಿ ಮಾತಾಡಿದವು.

ಪ್ಲಾಸ್ಟಿಕ್ ಸರ್ಜರಿಗು ನಮ್ಮ  ಬಹೂಪಯೋಗಿ, ಬಹೂ ಉಪದ್ರವಕಾರಿ ಪ್ಲಾಸ್ಟಿಕ್ಕಿಂಗು ಏವದೇ ಸಂಬಂಧ ಇಲ್ಲೆ.
ಪ್ಲಾಸ್ಟಿಕ್ ಸರ್ಜರಿ ಹೇಳಿರೆ ಬರೇ ಸೌಂದರ್ಯವರ್ಧನೆಗೆ ಬೇಕಾಗಿ ಹೇಳಿ ಜೆನರಲ್ಲಿ ತಪ್ಪು ಕಲ್ಪನೆ ಇದ್ದು.  ಅದು ಕೇವಲ ಸಿನೆಮಾ ನಟಿಗಳ/ನಟಂಗಳ/ಮೋಡೆಲುಗಳ ಮೋರೆ, ಶರೀರವ ಚೆಂದ ಮಾಡ್ಳೆ ಹೇಳಿ ಎಲ್ಲೋರು ಗ್ರೇಶಿದ್ದವು.
ಆದರೆ ಅದು ಹಾಂಗಲ್ಲ.
ಹುಟ್ಟುವಾಗಲೆ,  ಅಥವಾ ಬೆಂಕಿ ಇನ್ನಿತರ ಅವಘಡಂದ, ಬೇರೆ ಬೇರೆ ರೀತಿಲ್ಲಿ ಬತ್ತ , ಶರೀರದ   ಅಂಗ ವೈಕಲ್ಯತೆಯ, ಕುಂದು ಕೊರತೆಗಳ ನೀಗುಸಲೆ,  ಅಗಲವಾಗಿ  ಚರ್ಮ ಕಿತ್ತು ಹೋಗಿದ್ದರೆ (ಬೇರೆ ಕಡೆಂದ ಚರ್ಮವ ಕಶಿ ಮಾಡಿ) ಗಾಯವ ಬೇಗನೆ ಗುಣ ಪಡುಸಲೆ ಎಲ್ಲ ಪ್ಲಾಸ್ಟಿಕ್ ಸರ್ಜರಿ ಉಪಯೋಗಕ್ಕೆ ಬತ್ತು.   ಸಿರಿಬಾಯಿಯ ಸರಿ ಮಾಡುತ್ತದು,  ಬೆರಳು ಜೋಡೆಂಡು ಇದ್ದರೆ ಬೇರೆ ಬೇರೆ ಮಾಡುತ್ತದು,  ಚಾಣೆ  ಮಂಡೆಗೆ ತಲೆ ಕಸವು ನೆಡುತ್ತದು,  ಕೆತ್ತಿ ಹೋದ ಚರ್ಮದ ಜಾಗೆಲಿ ಬೇರೆ ಚರ್ಮದ ಕಶಿ,  ಕೈ, ಇನ್ನಿತರ ಅಂಗಂದೊ ತುಂಡಾಗಿ ಬೇರೆ ಆದ್ದರೆ ಮರು ಜೋಡಣೆ ಎಲ್ಲವೂ ಇದರಲ್ಲಿ ಸಾಧ್ಯ.   ಕೆಲವೊಂದರಿ ಮನಸ್ಸಿಲ್ಲೇ  ಆನು ಚೆಂದ ಇಲ್ಲೆ ಹೇಳಿ ಗ್ರಹಿಸುತ್ತವರ ಮನಸ್ಸಿಂಗುದೆ ಸಮಾಧಾನ ಹೇಳಿ ಅವರ ಕೊಶಿಲಿ ಮಡಗೆಕಾದ ಕರ್ತವ್ಯ ಡಾಕ್ಟ್ರ ಮೇಲೆ ಇರುತ್ತು.
ಇದಕ್ಕೆ ಮಾನಸಿಕ ತಜ್ಞರ ಅವಶ್ಯಕತೆಯುದೆ ಇರುತ್ತು ಹೇಳಿ ಅವು ಹೇಳಿದವು.
ಪ್ಲಾಸ್ಟಿಕ್ ಸರ್ಜರಿ ಬರೇ ಸೌಂದರ್ಯ ವರ್ಧಕ ಚಿಕಿತ್ಸೆ ಮಾಂತ್ರ ಅಲ್ಲ, ಅದಕ್ಕಿಂತಲೂ ಹೆಚ್ಚಿನದ್ದು ಹೇಳಿ ಅವು ಹೇಳಿದವು.
ಪ್ರೊಜೆಕ್ಟರಿಲ್ಲಿ ಬೇರೆ ಬೇರೆ ರೋಗ, ವೈಕಲ್ಯಂಗಳ, ಸರ್ಜರಿ ಮೂಲಕ ಅದರ ಸರಿ ಮಾಡಿದ್ದರ ಸ್ಲೈಡುಗಳ  ತೋರುಸಿ  ಅಪ್ಪಗ ಎಲ್ಲೋರಿಂಗು ಸರಿ ಅರ್ಥ ಆತದ.

ತಲೆ ತುಂಡಾದರೆ (ಗಣಪತಿಯ ಹಾಂಗೆ) ಮಾಂತ್ರ ಎಂಗಳಿಂದ ಎಂತ ಮಾಡ್ಳೂ ಎಡಿಯ !
ಬಾಕಿ ಎಲ್ಲ ಹೇಂಗಾರೂ ಸುಧಾರಿಸಲೆ ಅಕ್ಕು ಹೇಳಿ ತಮಾಷೆ ಮಾಡಿದವು.

ಡಾಕ್ಟ್ರು ಚರ್ಮದ ಕಶಿ ಮಾಡುತ್ತ, ಸರ್ಜರಿ ಮಾಡಿ ಚೆಂದ ಮಾಡ್ತ ವಿಷಯ ತಿಳುಸಿ ಅಪ್ಪಗ, ಎನಗೆ ತೋರಿತ್ತು.
ಎಂಗೊ ಫೊಟೊಗ್ರಾಫರುಗೊ ಎಲ್ಲ, ಕೆಲವೊಂದರಿ ಕಂಪ್ಯೂಟರಿಲ್ಲಿ (ಫೋಟೊಶಾಪಿಲ್ಲಿ) ಎಂತೆಂತಾರು ಕೆಟ್ಟುಂಕೆಣಿ* ಮಾಡಿ,  ಮೋರೆ ಚೆಂದ ಮಾಡ್ತದು,  ಸಪೂರ ಇದ್ದವರ ತೋರ ಮಾಡುತ್ತದು,  ತೋರ ಇದ್ದವರ ಸಪೂರ ಮಾಡ್ತದು, ಬೆಳಿ ಇದ್ದವರ ಕಪ್ಪು ಮಾಡ್ತದು, ಕಪ್ಪು ಇದ್ದವರ ಬೆಳಿ ಮಾಡ್ತದು, ಮೋರೆಯ ಕಲೆಯ ಕಲಾತ್ಮಕವಾಗಿ ಬದಲುಸುತ್ತದು ಎಲ್ಲ ನೆಂಪಾತು.  (ಇದು ಫೊಟೊಗ್ರಾಫರುಗಳ ಗುಟ್ಟು, ರಟ್ಟು ಮಾಡಿಕ್ಕೆಡಿ ಆತೊ ?!)
ಜಾತಕದೊಟ್ಟಿಂಗೆ ಪಟ ಕೊಡುವಗ ಕೆಲವೊಂದರಿ ಹೀಗ್ರುತ್ತೆಲ್ಲ ಬೇಕಾವುತ್ತಾಡ !   😉
ಗ್ರಾಹಕರ ಕೊಶಿಯೇ ನಮ್ಮ ಕೊಶಿ ಹೇಳಿ ನಾವೆಲ್ಲ ನಂಬೆಂಡು ಬಂದದಲ್ಲದೊ ?    ಸರ್ಜರಿ ಮಾಡ್ತ ಡಾಕ್ಟ್ರಿಂಗುದೆ  ಈ ವಿಷಯಲ್ಲಿ  ರಜಾ ಕಲಾ ನೈಪುಣ್ಯತೆ ಬೇಕಪ್ಪಾ.

ಪ್ಲಾಸ್ಟಿಕ್ ಸರ್ಜರಿ ಹೇಳಿರೆ ತುಂಬಾ ಪೈಸೆ ಖರ್ಚಿನ ಬಾಬ್ತು ಹೇಳಿ ಎಲ್ಲೋರ ಅಭಿಪ್ರಾಯ.  ಇದುದೆ ಲೊಟ್ಟೆಯೇ.
ಮಂಗಳೂರಿಲ್ಲಿ ಬೇರೆ ಸರ್ಜರಿಗೆ ಎಷ್ಟು ಖರ್ಚು ಆವ್ತೋ ಅಷ್ಟೆ ಬೇಕಾದ್ದದಾಡ ಇದಕ್ಕುದೆ.  ಸಿನೆಮಾದವು, ಬೊಂಬಾಯಿಲಿ, ಬೆಂಗಳೂರಿಲ್ಲಿ  ಇಂತ ಸರ್ಜರಿ ಮಾಡುಸೆಳ್ತ ಕಾರಣ ಅವಕ್ಕೆ ಖರ್ಚು  ಜಾಸ್ತಿ ಆವ್ತದು.

ಅಂತೂ ಹವ್ಯಕ ಸಭೆಯ ನೇತೃತ್ವಲ್ಲಿ ಒಂದು ಒಳ್ಳೆ ಲಾಯಕಿನ ಕಾರ್ಯಕ್ರಮ ನೆಡದತ್ತು.

ಹವ್ಯಕ ಸಭಾಧ್ಯಕ್ಷರಿಂದ ಡಾಕ್ಟ್ರಿಂಗೆ ಕಿರುಕಾಣಿಕೆ.

ಅಧ್ಯಕ್ಷ ಪಳ್ಳ ಪದ್ಮನಾಭ ಭಟ್ರಿಂಗು ಡಾಕ್ಟ್ರ ಮಾತು ಭಾರಿ ಕೊಶಿ ಕೊಟ್ಟತ್ತು.

ಈ ಸಮೆಲಿ ಎನಗೆ ಒಂದು ಜೋಕು ನೆಂಪಾತು.  ಆನು ಇದರ ಸತೀಶ ಡಾಕ್ಟ್ರ ಹತ್ರೆ /ಸಭೆಲಿ ಹೇಳ್ಲೆ ಹೋಯಿದಿಲ್ಲೆ.
ಗಂಭೀರ ಸಭೆಲಿ ಎಂಗಳ ಬೋಸು ತಮಾಷೆ ಎಲ್ಲ ಎಂತಕೆ ಹೇಳಿ ತೋರಿತ್ತು.

ಆದರೆಂತ ? ನಮ್ಮ ಬೈಲಿಂಗೆ ಹೇಳ್ಲಕ್ಕಾನೆ:
ನಿಂಗೊಗಿದು ಗೊಂತಿಪ್ಪಲೂ ಸಾಕು.  ಪ್ಲಾಸ್ಟಿಕ್ ಸರ್ಜರಿ ಮಾಡುಸೆಂಬಲೆ ಒಬ್ಬ ಡಾಕ್ಟ್ರ ಹತ್ರಂಗೆ ಬಂದನಾಡ.
ಡಾಕ್ಟ್ರೆ, ಈ ಓಪ್ರೇಶನ್ನಿಂಗೆ  ಎಷ್ಟು ಖರ್ಚು ಅಕ್ಕು ?” ಹೇಳಿ ಕೇಳಿದನಾಡ.    ಅಪ್ಪಪ್ಪಾ. ಈ ಖರ್ಚಿನ ವಿಷಯ ಎಲ್ಲ ಸುರುವಿಂಗೆ ಕೇಳ್ಯೊಳೆಕು.   ದೊಡ್ಡ ಮೊತ್ತ ಆದರೆ,  ಲೋನು ಎಲ್ಲ ತೆಗೆಕಾಗಿ ಬಕ್ಕು.  ಪೈಸೆ ಏರ್ಪಾಡು ಆಯೆಕೋ ಬೇಡದೊ ?   ಡಾಕ್ಟ್ರು ಹೇಳಿದವಾಡ.
ಎನ್ನ ಚಾರ್ಚು, ಆಸ್ಪತ್ರೆ ಖರ್ಚು, ಎಲ್ಲ ಸೇರಿ ಒಂದು ನಲುವತ್ತು ಸಾವಿರ ಅಕ್ಕು” ಹೇಳಿ.
ಅಂಬಗ ಇವ ಕೇಳಿದ, “ಡಾಕ್ಟ್ರೆ, ಇದರಲ್ಲಿ ಪ್ಲಾಸ್ಟಿಕ್ಕಿನ ಖರ್ಚು ಬಂತೊ? ಪ್ಲಾಶ್ಟಿಕ್ಕು ಆನು ಕೊಟ್ಟರೆ,  ಖರ್ಚು ಎಷ್ಟಕ್ಕು ? ಅದರಲ್ಲಿ ಎಷ್ಟು  ಕಡಮ್ಮೆ ಅಕ್ಕು ?!!!” ಹೇಳಿ.

ಅಕ್ಕಂಬಗ ಕಾಂಬೊ.

ಡಾಕ್ಟ್ರು ಅಕ್ಕಂದ್ರಿಂಗೆ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಇನ್ನೂ  ಎಂತಾರು ಹೇಳಲೆ ಇದ್ದರೆ ಹೇಳಲಕ್ಕು.
ಬೈಲಿಂಗೆ ಎಂತಾರು ಬೇಕಾರೆ, ಡಾಕುಟ್ರನ ವಿಳಾಸ ಇರಳಿ.

ಡಾ.ಪಿ.ಸತೀಶ್ ಭಟ್,
Mch, DNB -Plastic Surgery, MS, DNB, MRCS (UK)  Gen surgery,
Associate Professor – Plastic surgery,
Yenepoya Hospital & Arogya Speciality Clinic, Falnir, Mangalore.

~

ಬೊಳುಂಬು  ಗೋಪಾಲ ಮಾವ.

ಸೂ:

 • *ಕೆಟ್ಟುಂಕೆಣಿ = ಉಪಾಯದ ಉಪಾಯಂಗೊ!

ಬೊಳುಂಬು ಮಾವ°

   

You may also like...

27 Responses

 1. bolumbu maavana lekhana plastic surgery bagge odi thumba khushi aathu. managaluru havyaka sabhada karyakramada vishaya haange namma havyaka samajalli hengegidda prathibhaga eddavu heli elloringe gonthadange aathu. Plastic surgery bagge naavu yavagalu paparili oduthu. aadare e bagge ella mahithiya dr sathish bhat kottidavu. bolumbu mava helidange photova beli madodu, chenda madodu, haruda angi eddare kotu-tye hakodu ella madodu gonthiddu. aadare edu entha maraya, thundada kaiya jodusodu, vikarava aakara madodu edella “navu kalthadakke kannille” heli helthavallada, haange. naavu keliddallada, Huli Gaya aada jagage ennondu jagenda mamsa thegadu madugodu, thiruga alli aada gayakke ennondu kadenda maamsa thegadu madugodu heli, haange. entha prathibhe marayre avu. aadarude avu estu simple. thumba social aagi estu chenda mathaduthavu. avara e prathibhege ella kadenda prothsaha sikkali haange daktringe ujwala bhavishyava haraisuthe.
  m.t. bhat, secretary M.H. Sabha

  • ಬೊಳುಂಬು ಮಾವ says:

   ಮೆದು ತಿರುಮಲೇಶ್ವರ ಅಣ್ಣನ ಬೈಲಿಲ್ಲಿ ಕಂಡು ಕೊಶಿ ಆತು. ಒಪ್ಪಣ್ಣನ ಬೈಲಿಂಗೆ ಸ್ವಾಗತ. ನಿಂಗಳ ಮನಸ್ಸಿಲ್ಲಿ ಬಂದರ ಎಲ್ಲ ಒಪ್ಪದ ರೂಪಲ್ಲಿ ಕೊಟ್ಟಿದಿ, ಧನ್ಯವಾದಂಗೊ. ಹೇಳಿದ ಹಾಂಗೆ, ನಮ್ಮ ಬೈಲಿಲ್ಲಿ ಈಗ ಬಹಳ ಸುಲಭಲ್ಲಿ ಕನ್ನಡಲ್ಲಿ ಟೈಪು ಮಾಡ್ಳಾವುತ್ತು. ಬೈಲಿನ ಮೇಲಾಣ ಬಲದ ಹೊಡೆಲಿ ಒಂದು ಸಣ್ಣ ಪೆಟ್ಟಿಗೆ ಇದ್ದಲ್ಲದೊ. ಅಲ್ಲಿ ಕನ್ನಡವ ಆಯ್ಕೆ ಮಾಡಿದರೆ ಕನ್ನಡ ಅಕ್ಷರಂಗೊ ರೆಡಿ. ಒಂದು ಸರ್ತಿ ಪ್ರಯತ್ನಿಸಿ ನೋಡಿ. ಸುರುವಿಂಗೆ ರಜಾ ತಪ್ಪು ಆದರೂ ಕ್ರಮೇಣ ಎಲ್ಲ ಸರಿ ಆವುತ್ತು. ಬೈಲಿಲ್ಲಿ ಒಳ್ಳೊಳ್ಳೆ ಲೇಖನಂಗೊ, ಕಥೆಗೊ, ಪದ್ಯಂಗೊ, ಪಟಂಗೊ, ಮುಳಿಯ ಭಾವನ ಭಾಮಿನಿಗೊ ಎಲ್ಲವೂ ಇದ್ದು. ಬೈಲಿನ ಎಲ್ಲಾ ಲೇಖನಂಗಳನ್ನೂ ಓದಿ, ನಿಂಗಳ ಅಭಿಪ್ರಾಯವ ಕೊಡಿ.

 2. Mohananna says:

  ಒ೦ದು ದಿನ ತಲೆ ತು೦ಡಾದರೂ ಜೋಡುಸವು ಹೇಳಿ ನ೦ಬೇಡಿ.ಡಾಕ್ಟ್ರೆ ಆಶಾವಾದಿಗೊ ಆಗಿರಿ.ಬೊಳು೦ಬು ಮಾವ೦ಗೆ ಒ೦ದು ದೊಡ್ಡಾ ಧನ್ಯವಾದ.ಬಾಯಾರಿ೦ಗೆಲ್ಲ ಹಳೆ ಕಾಲಲ್ಲಿ ಅ೦ಬಗ೦ಬಗ ಬ೦ದೊ೦ಡಿತ್ತಿದ್ದೆ.ಅದರೆ ಡಾಕ್ಟ್ರ ಕ೦ಡ ನೊಪಿಲ್ಲೆ.ಒಪ್ಪ೦ಗಳೊಟ್ಟಿ೦ಗೆ

 3. ಹರೆ ರಾಮ
  ninne bailinge eluddaste. alli neera moole, palla, p.kunja estu gonthippora kandu bhari khoshi aathu. bolumbu mava helida kaarana e oppannana detail nodle aathu. keli gonthithu. nodle hogithille. ennu kannadalli type maduva vishayavude gonthiddu. aadare kannadalli ondu shabda type madoga englishili 2 line type madi aavuthu. hangagi englishili baretha edde. purusothippaga kannada sari kalthu barethe. ennu naale kamba.
  m.t. bhat

  • ಬೊಳುಂಬು ಮಾವ says:

   ಅಕ್ಕಂಬಗ ನಾಳಂಗೆ ಕಾಂಬೊ. ನಾಳಂಗೆ ನಿಂಗಳ ಕನ್ನಡ ಅಕ್ಷರದ ಒಪ್ಪದ ನಿರೀಕ್ಷೆಲಿ ಇದ್ದೆ.

 4. ಬೊಳುಂಬು ಮಾವ°, ಡಾಕ್ಟ್ರು ಮಾತಾಡಿದ್ದದರ ಕೇಳಿಯೇ ಇಷ್ಟು ವಿಷಯ ಎಂಗೊಗೆ ಕೊಟ್ಟದಾ? ಮಾವ°, ತುಂಬಾ ಚೆಂದಲ್ಲಿ ಬರದ್ದಿ ಎಲ್ಲಾ ವಿಷಯ ಹೇಳಿ!!! ಧನ್ಯ್ವಾದಂಗೋ..

  ನಿಂಗೋ ಹೇಳಿದ ಹಾಂಗೆ ಪಟಲ್ಲಿ ಕೆಟ್ಟುಂಕೆಣಿ ಮಾಡ್ಲೆ ಸುಲಾಬ!! ಆದರೆ ಒಬ್ಬನ ಶರೀರದ ತೊಡಕಿನ, ಶಾರೀರಿಕ ತೊಂದರೆಯ ರಜ್ಜವೂ ಗೊಂತಾಗದ್ದ ಹಾಂಗೆ, ಕಲೆ ಒಳಿಯದ್ದ ಹಾಂಗೆ ಮಾಡೆಕ್ಕಾದರೆ ಕಲಾನೈಪುಣ್ಯತೆ ಖಂಡಿತಾ ಬೇಕು. ಈ ಡಾಕ್ಟ್ರಕ್ಕೊ ಎಷ್ಟೊ ಜೆನಂಗಳ ಜೀವನಲ್ಲಿ ಪುನಾ ನೆಗೆ, ಕೊಶಿ ತಪ್ಪ ಒಳ್ಳೆಯ ಕೆಲಸ ಮಾಡ್ತವು.

  ಏನಾದರೂ ಅವಗಢಂಗ ಆಗಿ ಶಾರೀರಿಕ ತೊಂದರೆಗ ಬಂದಪ್ಪಗ ಅದರಲ್ಲಿಯೇ ಕೊರಗಿ ಕೂಪ ಬದಲು, ಈ ರೀತಿ ಸರಿಯಾಗಿ ಕಲ್ತ ಡಾಕ್ಟ್ರಕ್ಕಳ ಹತ್ತರೆ ಹೋಗಿ ಬೇಕಾದ ವೆವಸ್ಥೆ ಮಾಡಿಗೊಂಬದು ಒಳ್ಳೆದು ಅಲ್ಲದಾ ಮಾವ°?

 5. ಬೊಳುಂಬು ಮಾವ says:

  ಸರಿಯಾಗಿಯೇ ಹೇಳಿದೆ ಅಕ್ಕ. ಜೆನ ಸಾಮಾನ್ಯರಿಂಗುದೆ ಇಂಥಾ ವಿಷಯಂಗೊ, ಇಂಥಾ ಚಿಕಿತ್ಸೆ ಮಾಡ್ತರಿಂದ ಸಿಕ್ಕುವ ಗುಣಂಗೊ ಗೊಂತಾಯೆಕಾದ್ದು ಮುಖ್ಯ ಅಷ್ಟೆ. ಒಪ್ಪಕೆ ಒಪ್ಪ ಕೊಟ್ಟದಕ್ಕೆ ಧನ್ಯವಾದ.

 6. Mahesha Krishna Prasada says:

  Namskara,
  Bolumbu appachi, ningala lekana thadavagi odiddakke kshamisi.
  Ondu uthhamavada vicharava chandavagi baililli prasthutha padisiddakke dhanyavadango.

  kambo.
  MKP

 7. ಮಾಣಿಪ್ಪಾಡಿ ರಾಮಚಂದ್ರ ಭಟ್Advocate, Notary, Mangalore. says:

  ಬೊಳುಂಬು ಮಾವನಿಂದ ಒಪ್ಪಣ್ಣ.ಕಾಮ್ ವೆಬ್ ಪರಿಚಯ ಆತು. ಹವ್ಯಕ ಬಾಷೆಯ ತುಂಬಾ ವಿಚಾರಂಗೊಗೊಂತಾತು. ಡಾ . ಸತೀಶ್ ಭಟ್ ರ ಈ ಸಾಧನೆ ಲೋಕ ಮೆಚ್ಚುವಂತಾದ್ದು. ಶ್ರೀ ದೇವರ, ಶ್ರೀ ಗುರುಗಳ, ಎಲ್ಲಾ ಹಿರಿಯವರ ಆಶೀರವಾದ ಅವರ ಮೇಲೆ ಸದಾ ಇರಲಿ.

 8. ಸುಭಗ says:

  ಬೊಳುಂಬು ಮಾವಾ, ಪ್ಲೇಷ್ಟಿಕು ಸರ್ಜರಿ – ಲೇಖನ ಭರ್ಜರಿ..! ಅಭಿನಂದನೆಗೊ..

 9. shreecharana says:

  ಬೊಳುಂಬು ಮಾವ,
  ನಿಂಗ ಎಂಗಳ ಒಪ್ಪಣ್ಣನ ಒಪ್ಪ ಬೈಲಿಂಗೆ ಬಪ್ಪಲೆ ಹೇಳಿ ಸುಮಾರು ಸಮಯ ಆತು. ಯಾವಾಗಲೂ ಕೆಲಸ ಮುಗಿವಲೇ ಇಲ್ಲೆ ನೋಡಿ! ಅಂತೂ ಇಂದು ರಜ್ಜ ಪುರುಸೊತ್ತು ಮಾಡಿ ಬೈನ್ದೆಯ…. ಹವ್ಯಕ ಸಭಾದ ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಹೊಪಲೆ ಎಡಿಗಾಗದ್ದರೂ, ನಿಂಗಳ ಈ ಲೇಖನಂದಾಗಿ ಅಲ್ಲಿ ಭಾಗವಹಿಸಿದಷ್ಟೇ ಅನುಭವ ಸಿಕ್ಕಿತ್ತು….. ಅನಂತ ಧನ್ಯವಾದಂಗೋ…

 10. ಸರ್ ನಮಸ್ಕಾರ .ನನ್ನ ಬಾಲ ಕಾಲಿನ ಬೆರಳು ೧ ೨ ಅರ್ಧದಷ್ಟು ಕಟ್ ಅಗೀದೆ ಇದ್ದಕ್ಕೆ ನಾನು ಪ್ಲಾಸ್ಟಿಕ್ ಬೆರಳು ಬೇಕಗಿತ್ತು ಅದ್ದಕ್ಕೆ ನಿಮ್ಮ ಸಹಾಯ ಬೇಕು ನಿಮ್ಮ ಫೋನ್ ನಂಬರ್ ನನ್ನ ನಂಬರ್ ಕಳಿಸಿ ೯೬೧೧೪೫೭೭೪೫ ವಡ್ಸಾಪ್ ನಂಬರ್ 8892457738

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *