ಬಾಲಿಶ್. . .  . . . .(೪)

April 14, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಲಿಶ್. . .  . . . .(೪) . .

ಬರವ ಮೂಡ್ ಇಪ್ಪಗ ಕೂದೋಂಡು ಬರದರೆ ಆವುತ್ತು. ಇಲ್ಲದ್ದರೆ, ಎನ್ನ ಸುಮಾರು ಅರೆ ಬರೆ ಸಂಗತಿಗಳಲ್ಲಿ ಇದೂ ಸೇರುಗು ! ಹಾಂಗಾಗಿ ನೆಡು ಇರುಳು ಎದ್ದು ಮತ್ತೆ ಕೂಯಿದೆ !  ಎರಡು ಪ್ರಯೋಜನಂಗೊ –

೧.) ಎಲ್ಲಾ ಒರಗೆಂಡು ಇರ್ತವು, ಹಾಂಗಾಗಿ ನಿಶ್ಶಬ್ದ ಖುಷೀ ಆವುತ್ತು !   ೨.) ಹೆಂಡತಿಯ ಪ್ರಥಮ ವಿಮರ್ಶೆ-(ಹಾಂಗೆ ಹೇಳಿರೆ ಎಂತ?ರಿಂದ) ರಜಾ ವಿನಾಯ್ತಿ !    ಹ್ಹ. . .ಹಾ !

ಆಟಂ.. ಪಾರ್ಟಿಕಲ್ಸ್ ,.. ಜೀವ..ಆತ್ಮ,,,,?ಆನು ಆರು ? ಹೇಂಗೆ?  ಎಂತಕೆ ? ಎಲ್ಲಿಂದ ? ಎಲ್ಲಿಗೆ?  . . ಇದೆಲ್ಲಾ ಪ್ರಶ್ನೆಗೊ ಜಿಜ್ನಾಸುಗಳ ತುಂಬಾ ಮಂಡೆಬೆಶಿ ಮಾಡುಸಿದ್ದದು .ಅದಕ್ಕೆ ಸರೀ ಉತ್ತರ ಕಂಡುಕೊಂಡವು ತಾವೇ ಅವ ಆಗಿ, ಒಂದೆರಡು ಶಬ್ದಗುಚ್ಚಂಗಳಲ್ಲೇ ಅದರ ಹೇಳಿದವು. ಏಕೆ ಹೇಳಿರೆ, ಅರ್ಥ ಆದವಕ್ಕೆ ಅದು ಅಷ್ಟೇ ಇಪ್ಪದು. ಆದರೆ ಎನ್ನಹಾಂಗಿಪ್ಪವಕ್ಕೆ, ತಲೆ ಹೆರ ಬೆಳದಷ್ಟು ಒಳ ಬೆಳೆಯದ್ದ ..ನಿಧಾನಸ್ಥರಿಂಗೆ, ಆ ಶಬ್ದಕ್ಕೆ ಉತ್ತರಕ್ಕೆ ವರುಷಗಟ್ಟಲೆ ಓದೆಕಾವುತ್ತು, ಅರ್ಥ ಆದವು ಬರದ್ದರ !

ಪೂರ್ಣಂದ ಪೂರ್ಣವೋ.. ಅನಂತಂದ .ಶೂನ್ಯವೋ.. ಬಿಗ್ ಬೇಂಗ್-ಇಂದ  ಬ್ಲೇಕ್ ಹೋಲ್’-(ಚಂದ್ರಶೇಖರ್ ಲಿಮಿಟ್ ) ಇದೆಲ್ಲ ಸೃಷ್ಟಿ ಯ ವಿವರುಸುವಗ, ಓದಲೆ ಹೆರಟರೆ ಸಿಕ್ಕುವ ಜ್ಞಾನರಾಶಿ ! ಓದಿ ಅರ್ಥಆಯೆಕಾರೆ ಆಯುಶ್ಯ ಮುಗಿಗು!  ಥಿಯರೆಟಿಕಲ್ ಫಿಸಿಕ್ಸು..ಋಗ್ವೇದಂದ ಸುರುವಾದ್ದು – ಹೇಳೊದಕ್ಕೆ ಈವಿಚಾರಂಗಳ ಮೂಸಿನೋಡಿರೆ ಸಾಕಾವುತ್ತು  (ಎನ್ನ ಜ್ಞಾನ ಇಷ್ಟೇ .. ಆದರೂ ) ..ಹೇಳೆಕು, ಬರೆಕು , ಹೇಳಿ ತೋರುತ್ತರೆ, ವೇದವಿದರು ಜ್ಞಾನ ಹಂಚಲೂ ಕೇಳಿದವಂಗೆ ಯೋಗ್ಯತೆ ಇದ್ದೋ ನೋಡಿ ಕಲಿಶಿದ್ದವು !-ಎಂದರೆ ಅಪಾತ್ರರಿಂಗೆ ಅಣುವಿನ ,ಪರಮಾಣುವಿನ ಬಗ್ಗೆ ತಿಳುಶಿರೆ, ವಿನಾಶ ಹೇಳುವದು ಅವು ಜ್ಞಾನದಾನ, ಶಿಕ್ಷಣಲ್ಲೂ ನೋಡಿಯೊಂಡಿದವು !  ವಿಜ್ಞಾನಿಯ, ಜ್ನಾನದ ಜವಾಬ್ದಾರಿ !

ಉಪನಿಶತ್ತು ಪೂರ್ತಿ ಹೀಂಗೆ ಪ್ರಶ್ನೆ ಉತ್ತರಂಗಳ ಸೋಲ್ವಡ್ ಕೊಶ್ಚನ್ ಪೇಪರ್ !  ಆದರೆ ಪ್ರಶ್ನೆ ಕೇಳುವವರ ಜ್ನಾನ ಇದರ ಆನ್ಸರ್ ಬುಕ್ ಓದುವವಂಗೂ ಬೇಕನ್ನೆ ! ಇಲ್ಲದ್ದರೆ ಅದು ಸುಡಲೆ ಯೋಗ್ಯವಾದ್ದು.. ಮನುಧರ್ಮ ಶಾಸ್ತ್ರ ! ಇಕ್ಕ್ರಲ್ಲಾ! ..ಒದೀರ್ಲಾ.!ದವರ.. ಕ್ಕೆ ಸಿಕ್ಕುವ ಸಾಹಿತ್ಯ !  ನಳಂದಾ ಲ್ಲಿ ತಿಂಗಳುಗಟ್ಲೆ ಹೊತ್ತುಸಿದ ಆಕ್ರಮಣಕಾರರಿಂಗೂ ಇದ್ದದು ಇದೇ ಮನಸ್ಸು ! ಎನಗೆ ಸಿಕ್ಕುತ್ತಿಲ್ಲೆ ಹೇಳಿ ಆದರೆ..ನಿನಗೂ ಬೇಡ, ಕೊಡೆ !

ಸ್ಪೋಟಂದ ಶಕ್ತಿ, ಕಂಪನ.. ಇದೆಂತಾತು ? ಶಕ್ತಿ ರೂಪಾಂತರ ಆಯೆಕಷ್ಟೇ.. ಪೊಟೆನ್ಷಿಯಲ್, ಕೈನೆಟಿಕ್ ಆಗಿ, ಮತ್ತೆ ಪೊಟೆಂಟ್  ಆಗಿ.. . . . .

ಗ್ರೀಕ್ ಮಿಥೋಲಜಿ ಈಥರ್ ಹೇಳಿ ಒಂದು ದ್ರವ್ಯಂದ ಬ್ರಹ್ಮಾಂಡ ಆವರಿಸಿದ್ದು,,,ಅದೇ ಸೄಷ್ಟಿಯ ಆರಂಭ ಹೇಳಿರೆ , ನಮ್ಮ ಭಾರತೀಯ ಜ್ಞಾನ ಪರಂಪರೆ, ಇಂದ್ರಾಣ ವಿಜ್ಞಾನಕ್ಕೆ ಬೇಸ್ ಆಗಿಪ್ಪ  “ತತ್ವ” ಮತ್ತೆ “ಸತ್ವಂ”ಗಳ  ಹೇಳುತ್ತು.

ಶೂನ್ಯಲ್ಲಿ  . . .ಶೂನ್ಯ ಅಲ್ಲದ್ದ ಆದರೆ ಎಂತ ಹೇಳಿ ಸರಿಯಾಗಿ ನಿರ್ವಚನ ಮಾಡದ್ದ ಅದು-ತತ್ . ಇದರಲ್ಲಿಂದ ಸ್ಪೋಟ ಆಯೆಕಾರೆ ಇದ್ದ ಅದು -{ ಎಂತರ ಹೇಳಿ ಕೇಳೆಡಿ !   “ಆದು-ಇದು “ಗಳ  ಅರಿತವಂಗೆ ಅದರ ವಿವರಿಸುವ ಅಗತ್ಯ ಆರಾರೂ ಪೀಡಿಸಿರೆ ಮಾಂತ್ರ ಇದ್ದತ್ತಾಯ್ಕು, ಅಲ್ಲದ್ರೆ ಎಲ್ಲೋರಿಂಗೂ ಅದು ಸಿಕ್ಕೆಕಾತು , ಎನಗೂ !} ಸೇರಿ ಎಲ್ಲಾ ಆತು  !

ಖಭೌತಶಾಸ್ತ್ರ ಕಲುತ್ತವು ಇದರ ಅವರ ಪ್ರಕಾರ ವಿವರುಸಿದ್ದು-

ಮಹಾಸ್ಫೋಟದ ಢಂ – ಇಂದ ಎಕ್ಸೋಟಿಕ್ ಪಾರ್ಟಿಕಲ್ಲುಗೊ ಹುಟ್ಟಿದವು, ಹಾಂಗೇ ಅಪಾರ ಶಕ್ತಿ , ಶಾಖ ಬಿಡುಗಡೆ ಆತು. ಈ ಶಕ್ತಿ, ಶಾಖಂಗಳೊಟ್ಟಿಂಗೆ ಕೆಲ ಎಕ್ಸೋಟಿಕ್ ಪಾರ್ಟಿಕಲ್ಲು ಸೇರಿ ನ್ಯೂಟ್ರಾನ್, ಪ್ರೋಟಾನ್.. ಇದೇ  ಒಟ್ಟಿಂಗೆ ಕಾಲಾಂತರಲ್ಲಿ,. . ಹೈಡ್ರೋಜನ್ ,  ಹೀಲಿಯಂ ಕಣಂಗಳಾಗಿ …ಎಲ್ಲಾ ಅನಂತವ ಆವರಿಸಿಕೊಂಡತ್ತು ! ( ಹಾಂಗಾರೆ ಅನಂತ ಎಲ್ಲಿಂದ ? ಅದರ ವ್ಯಾಪ್ತಿ ? ..)   ಅದರಿಂದಲೇ ವಾಯು ತತ್ವಬಂತು ಹೇಳುತ್ತವು. ದೇವತೆಗೊ ಅಲ್ಲೇ ಬಂದವು , ಪೄಥಿವೀ, ಆಪ್ಃ , ತೇಜ…ಎಲ್ಲಾ ಅಲ್ಲಿಂದ ಹೇಳಿ ವೇದ ಹೇಳಿತ್ತು !  { ಜನ್ಮನಾ ಜಾಯತೇ ಜಂತುಃ …. ಆನೆಲ್ಲಿದ್ದೆ? }

ವೇದಂಗೊ ಇದರ ಜೊತೆ ಆತ್ಮತತ್ವ   (ಅದು) ಸೇರಿ ಪ್ರಾಣ ಉಂಟಾತು . ಅದರ  “ಹಿರಣ್ಯಗರ್ಭ ” ಹೇಳಿ ಬನ್ನಂಜೆ ಆಚಾರ್ಯರೂ , ಈಗ ತೀರ್ಥರಾಮರೂ ಹೇಳುತ್ತವು, ಸರೀ ಹೇಳಿ ಎನಗೆ ತೋರ್ತು ! ವೇದಾಂತ ಭಾರತೀ.. ಯೆಡತೊರೆಯ ಪುಸ್ತಕಂಗಳೂ ಹೀಂಗೇ ವಿವರುಸುತ್ತು . ಮಹಾಜನೋ ಯೇನ ಗಥಾ ಸ್ಸ ಪಂಥಾಃ ! ( ಹಿರಣ್ಯ ಗರ್ಭ ಗರ್ಭಸ್ಥಂ .. .. .. ಹೇಳಿ ದಕ್ಷಿಣೆ ಕೊಡುವಾಗ.. ನೆಂಪಾದರೇ ? ?)

ಹಿರಣ್ಯಗರ್ಭನ ಗರ್ಭಲ್ಲಿ ಅಹಸ್ ಹೇಳಿ ದ್ರವ್ಯ(  ಓದಿ: ತೀರ್ಥರಾಮ) ಅದೇ ತೇಜಸ್ ಆಗಿ+ ಶಕ್ತಿ , ಆಪಸ್ಸು ಆಗಿ -ಶಕ್ತಿ, ಇದರೆರಡೇ ವೇದಂಗಳಲ್ಲಿ ಹೇಳಿದ ಅರ್ಕದ್ರವ್ಯ ಆತು. ಇದೇ ಎರಡು ಗುಣಂಗಳ  ಹರಡಿ  ಅದೇ ಮುಂದೆ ಸೄಷ್ಟಿಗೆ ಕಾರಣ  ! ಇದು ವೇದ ! ಇದರಿಂದ ಉಂಟಾದ್ದು ದೊಡ್ಡಮೊಟ್ಟೆ ಬ್ರಹ್ಮಾಂಡ !  ಖಬೌತಶಾಸ್ತ್ರಿಗೊ ಇದರ ಯೂನಿವರ್ಸಲ್ ಎಗ್ ಹೇಳಿದವು.

ಅಲ್ಲಿಗೆ ಖಭೌತಶಾಸ್ತ್ರ ಮತ್ತೆ ವೇದಂಗಳ ಸಾಮ್ಯತೆ ಹತ್ತರೆ ಹತ್ತರೆ ಬತ್ತು . ಅಲ್ಲಿಗೆ ರೀಸರ್ಚ್ ವೇದವನ್ನೇ ಕಂಡದೋ ?

ಈಗ ಸ್ಟೀಫನ್ ಹಾಕಿನ್ಸ್ ನ ನೆಂಪು ಬತ್ತು. ಋಣ ಮತ್ತು ಧನ ಶಕ್ತಿಗೊ, ನಾವು ತಿಳುದ ಹಾಂಗೆ ವಿರುಧ್ಧ ಗುಣ ಇಪ್ಪ ಕಣಂಗೊ . ಇದು ಪರಮಾಣುವಿನ ಒಳ ಹೇಂಗೆ ಪರಸ್ಪರ ಹಿಡುದು ನಿಂಬಷ್ಟೇ ಬಲ ಪರಸ್ಪರ ಕೊಟ್ಟೊಂಡು ನಿಲ್ಲುತ್ತಲ್ಲದೋ ? ಇದರ ಕ್ಯಾಲ್ಕುಲೇಶನ್, ಫೋರ್ಮುಲಾ ಬರ್ದವು ಆರು?  ಇದರ ಹಾಕಿನ್ಸ್ ಸ್ಟ್ರಿಂಗ್ ಥಿಯರಿ ಹೇಳಿದ ! ಇದೂ ವೇದಲ್ಲಿಪ್ಪದೇ ? ! ಅಣು, ಪರಮಾಣುಗಳಲ್ಲೂ ಇದೇ ಋಣ-ಧನ ಶಕ್ತಿಗಳ ಫಾರ್ಮ್ಯುಲಾ . ಕಣ ಕೇಂದ್ರಲ್ಲಿ ಧನಾತ್ಮಕ (ಪೊಸೆಟಿವ್) ಶಕ್ತಿಗೊ, ಅದರ ಸುತ್ತ ಋಣಾತ್ಮಕ ಇಲೆಕ್ಟ್ರಾನ್ ಗೊ , ಅದಕ್ಕೆ ಒಂದು ನಿರ್ದಿಷ್ಟ ಭ್ರಮಣ ಪಥ… ವ್ವಾ ! ಇದುವೇ ಸೂರ್ಯಮಂಡಲಲ್ಲೂ ! !

ಅಲ್ಲಿಗೆ ಅಣು, ಬ್ರಹ್ಮಾಂಡ..ಎಲ್ಲದರಲ್ಲೂ  ಒಂದೇ ಫೋರ್ಮ್ಯುಲಾ ! ಆರು ಬರದ್ದೂ ? ಕ್ವಾಂಟಂ , ಎ ಬ್ರೀಫ್ ಹಿಸ್ಟರೀ ಆಫ್ ಟೈಂ ,.. ಇಲ್ಲೂ ಇದರ ಕಥೆ . ಐನ್ ಸ್ಟೀನ್ ಕೂಡ ಹೀಂಗೆ ವೇದಕ್ಕೆ ಸಂಕ ಹಾಕುವ ರೀತಿ ಹೇಳಿದ್ದ.

ಇರಲಿ ! ಈ ಋಣ , ಧನ ಶಕ್ತಿಗಳಿಂದ ಕಣಂಗೊ ಆತು, ಇದರಿಂದ ಮೂಲವಸ್ತುಗೊ ಆತು . ಎಲ್ಲಾ ಸರಿ, ಹಾಂಗೇ ಮುಂದೆ  ನೀರು,ಗಾಳಿ , ಅಮೀಬಾ -ಏಕ ಕೋಶ ಜೀವಿ – ಹೀಂಗೆಲ್ಲಾ ಆತು. ಇದು ವಿಜ್ನಾನದ ಕ್ಲಾಸುಗಳಲ್ಲಿ ಬೇರೆ ಬೇರೆ ಹಂತಂಗಳಲ್ಲಿ ನಾವು ಕಲುತ್ತಿದು.

ಇದಕ್ಕೆ ಪ್ರಾಣ ಎಲ್ಲಿಂದ ಬಂತು ? ! ವಿಜ್ಞಾನಲ್ಲಿ ಪ್ರಾಣಕ್ಕೆ-  ಪ್ರಾಣ ಇಪ್ಪ ಜೀವಿಗಳ ಲಕ್ಷಣ ಹೇಳಿ , ಅದಿಲ್ಲದ್ರೆ ಇಲ್ಲೆ, ಇದ್ದರೆ ಜೀವಿ ಹೇಳಿ ನಿರ್ವಚಿಸುತ್ತವು. ಲಕ್ಷಣಂಗಳ ಹೇಳುತ್ತವೇ ವಿನಾಃ ನಿರ್ವಚನ ? ಜೀವವ ಲಕ್ಷಣಂಗಳಿಂದಲೇ ನಿರ್ವಚಿಸುವ, ವಿಜ್ಞಾನಿಗೊ, ಬಾಕಿ ಇಪ್ಪ ಸಂಗತಿಗೊಕ್ಕೆ ಅದೇ ಮಾನದಂಡ ಉಪಯೋಗಿಸಲೆ ಏಕೆ ಒಪ್ಪುತ್ತವಿಲ್ಲೆ ? . . . . ರೇಶನಲಿಸ್ಟುಗೊ ಇದರ ಒಪ್ಪುತ್ತವು ಆದರೆ, ಇದೇ ರೀತಿ ಇತರ ಸಂಗತಿಗೊಕ್ಕೆ ಬೇರೆಂತೆಲ್ಲಾ ಹೇಳುತ್ತವು ! ಅಲ್ಲಿ ಅನುಭವ ಜನ್ಯವಾದ್ದು ಮಾತ್ರ ಸತ್ಯ ಹೇಳಿ !  .  .  . .  ..ತಿಮ್ಮುರುಟಲ್ಲದೋ ?  . ? . .!

ಆತೋ , ಇನ್ನಾಣದ್ದು ಪ್ರಾಣ ! – ಸೆಸಿಗೊಕ್ಕೆ, ಅಮೀಬಾಕ್ಕೆ, ಮೀನಿಂಗೆ, ಪ್ರಾಣಿಗೊಕ್ಕೆ, ( ಅಲ್ಲಿ ಪ್ರಾಣ ಇದ್ದರೂ ಮನುಷ್ಯ ಪ್ರಾಣಿ ಸೇರುತ್ತಾಇಲ್ಲೆ ! ) ಎಲ್ಲಾ ಇದ್ದು ಹೇಳಿ ಒಪ್ಪಿದ್ದು! .  ಅಲ್ಲಿ ಪ್ರಾಣಿಗೊಕ್ಕೆ ವಿವರುಸಿದ , ಪ್ರಾಣ ಇಪ್ಪದರ ಲಕ್ಷಣಂಗೊ , ಹುಟ್ಟು ಬೆಳವಣಿಗೆ, ಸಾವು. . .ಎಲ್ಲಾ ಇದ್ದು ,  ಮನುಷ್ಯಂಗಪ್ಪಗ ಇನ್ನೊಂದು  , ಮನಸ್ಸು, ಆಲೋಚನೆ ಮಾಡುವ ಶಕ್ತಿ, ರೀ ಸರ್ಚಿನ ಬುದ್ಧಿ ,ಎಲ್ಲ ಸೇರಿಪ್ಪದೊಂದು..ಸೇರುತ್ತು. ವೇದ ಇದರ ಆತ್ಮ ಹೇಳಿ ಹೇಳಿರೆ, ವಿಜ್ಣಾನ ಇದರ ಮನ್ಸ್ಸು, ಬುಧ್ಧಿ ಹೇಳಿತ್ತು . ಇದೆಲ್ಲಿಂದ ಬಂತು ? ಆರು ಕೊಟ್ಟವು ?

ಉಪನಿಶತ್ತುಗೊ ವಿವರುಸುವ ಆತ್ಮತತ್ವ -ಇಲ್ಲಿ ಇದರ ಸರಿಯಾಗಿ ನಿರ್ವಚಿಸುತ್ತು . ಅದರ ಮೊದಲು :-

ಕೆಲವು ವರ್ಷಂಗಳ ಮೊದಲು, ಆನು ಶಾಲೆಗೆ ಹೋಗೆಂಡಿಪ್ಪ ಸಮಯಲ್ಲಿ, ೭೦ರ ದಶಕಲ್ಲಿ , ಕಸ್ತೂರಿ ಮಾಸಪತ್ರಿಕೆಲಿ; ಪುನರ್ಜನ್ಮದ ಬಗ್ಗೆ ಕೆಲ ವಿಶ್ಲೇಷಣೆಗೊ, ಪುಸ್ತಕ ವಿಭಾಗಲ್ಲಿ ಓದಿತ್ತಿದ್ದೆ. ಅಬೈತನೋ. ಇಸ್ಮಯಿಲನೋ. ಹೇಳಿ. ಇದು ದೂರದ  ತುರ್ಕಿಸ್ಥಾನಲ್ಲಿ ಆದ್ದದು. ಆ ಹುಡುಗ ತನ್ನ ಹಿಂದಿನ ಜನ್ಮದ ಹೆಂಡತಿ, ಮಗಳು, ಹೆಚ್ಚೆಂತರ ಸಾಲ ಕೊಟ್ಟ ತೆಕ್ಕೊಂಡವರ ಹೆಸರು, ಗುರ್ತ ಎಲ್ಲ ಹೇಳಿತ್ತಡ!.  ಹಾಂಗೇ ಶಂಭು ದಯಾಳ್ ಹೇಳಿ ಹೆಸರಿನ ಒಂದು ಹೋರಿಯ; ಬದಿಯಡ್ಕಲ್ಲಿ, ಮೂರು ಮಾರ್ಗ ಸೇರುವಲ್ಲಿ, ಮೊದಲು ಒಂದು ಭಾವಿ ಎಲ್ಲ ಇದ್ದತ್ತು, -ತಂದಿದ್ದಿದ್ದವು. ಅತೀಂದ್ರಿಯ ಶಕ್ತಿ ಇಪ್ಪದು, ನಿಂಗಳ ಹೆಸರು ಹೇಳಿರೆ ಅದು ಅಲ್ಲಿಪ್ಪವರಲ್ಲಿ ನಿಂಗೊ ಇದ್ದರೆ ಬಂದು ಕೈ ಮೂಸೆಂಡಿದ್ದತ್ತು.  ಎದ್ಗರ್ ಕೇಸೀಯ ಕಥೆ ನಿಂಗೊ ಓದಿಪ್ಪಿ ! ಆ ಕ್ರಿಸ್ತ ಪಾದ್ರಿ, ತುಂಬಾ ಕೇಸುಗಳ ಮನೋವ್ಯಾಧಿಗಳ ರೋಗಬಾಧಿತರ ಮನಸ್ಸಿನ  ಹಿಂದಾಣ ಜನ್ಮಕ್ಕೆ ಕರಕ್ಕೊಂಡು ಹೋಗಿ , ಆ ಕರ್ಮಫಲಂಗಳ ಇಂದು ಅವು ಅನುಭವಿಸುತ್ತದರ ಜಗತ್ತಿಂಗೆ ತೋರುಸಿತ್ತು ! ಪಾದ್ರಿ ತೋರುಸಿದ ನಂತರ ಅದು ಸರಿ ಇಕ್ಕೋ ಹೇಳಿ ಪಾಶ್ಚಾತ್ಯರು ಅನುಮಾನಿಸಲೆ, ದೂರಂದ ಒಪ್ಪಲೆ ಸುರು ಮಾಡಿದವು !  {ಹೈಪೋಥೆಸಿಸ್. . . ಯೆಟ್ ಟು ಬಿ  ಕನ್ಕ್ಲೂಸಿವ್ಲೀ  ಪ್ರೂವ್ಡ್ !}

ಬೆಂಗಳೂರಿನ ನಿಮ್ಹಾನ್ಸಿಲ್ಲಿ, ಪುನರ್ಜನ್ಮ ದ ಅಧ್ಯಯನಕ್ಕೆ ಡಾ. ಎಸ್ . ಪಾಸ್ರಿಚಾ ಸುರು ಮಾಡ್ಸಿದ ಅಧ್ಯಯನ  – ಇದರಲ್ಲಿ ನಂಬಲೆ ಅರ್ಹವಾದ ವಿಚಾರಂಗಳ ಪ್ರಕಟ ಮಾಡಿದ್ದವು. ಹೀಂಗಿಪ್ಪದು ಸುಮಾರು ಮನೋವೈಜ್ನಾನಿಕ ಜರ್ನಲ್ ಗಳಲ್ಲೂ ಪ್ರಕಟ ಆಯಿದು. ಹಾಂಗಾಗಿ, ನಮ್ಮ ಜನ್ಮ , ಜನ್ಮಾಂತರ, ಪುನರ್ಜನ್ಮಂಗೊ; ಹಿಂದೆ ಆರೋ ಬರದ ಕಥೆ ಅಲ್ಲ, ಅದು ಸತ್ಯ, ಪೂರ್ತಿ ಅರ್ಥ ಇನ್ನೂ ಅಪ್ಪಲೆ ಬಾಕಿ ಇಪ್ಪ, ಆದರೆ ಡಿಪ್ ಸ್ಟಿಕ್ ಸ್ತಡಿಗಳ ಆಧಾರಲ್ಲಿ, ಅಧ್ಯಯನ ಮುಂದುವರುಸೆಕಾದ ಸಂಗತಿ ಹೇಳುವೊದು ಪಾಶ್ಚಾತ್ಯ ವಿಜ್ನಾನಿಗೊ ಕೂಡಾ  ಒಫ್ಫಿದ ವಿಚಾರ.

ಹಿಪ್ನೋಟಿಸ್೦, ಫ್ಲಾಂಚೆಟ್ ವಿಧಾನಂಗಳಲ್ಲಿ ಕೆಲ ಜನ ಅಧ್ಯಯನ  ಮಾಡಿದ್ದವು. ಶ್ರೀ ಶ್ರೀ ರವಿಶಂಕರ್ ಗುರೂಜಿ ಕೂಡಾ ಸುದರ್ಶನ ಕ್ರಿಯೆ ಸಾಧಕರಿಂಗೆ ನಂತರ ಹೀಂಗೊಂದು ಕ್ರಿಯೆ ಮಾಡುಸುತ್ತವಡಾ. ಅದಕ್ಕೆ      ಮನಸ್ಸು, ಬುದ್ಧಿಯ ಮದಲು ತಯಾರಿ ಮಾಡಿಕ್ಕಿ ಮತ್ತೆ ಮನಸ್ಸಿನ ಹಿಂದಾಣ ಲೋಕಕ್ಕೆ , ಜನ್ಮಂಗೊಕ್ಕೆ ದಾಂಟುಸಲೆ ಎಡಿತ್ತಡ . ಎನ್ನ ಗೊಂತಿಲ್ಲಿ ಒಬ್ಬ ದಾಕ್ಟರು ಅದರ ಅನುಭವ ಮಾಡಿಯೊಂಡಿದ ! ಅವನ ಅದೄಷ್ಟ ! , ಕರ್ಮ ಫಲ !

ಇದರ ಹಿಂದೆ ಆಲೋಚನೆ ಮಾಡೆಂಡು ಪುಸ್ತಕಂಗಳ ಹಿಡ್ಕೊಂಡು ಓದಲೆ ಸುರುಮಾಡಿಯಪ್ಪಗ …ಝಗ್ ! .. ಆತ್ಮ ಅವಿನಾಶಿ,…ಸೃಷ್ಟಿಲಿ ಎಲ್ಲವೂ “ಅವನ” (ಆದರ) ಅಂಶಂಗೊ ! ಸರ್ವತ್ರ, ..ಸರ್ವವ್ಯಾಪೀ ಸಂಗತಿ ಒಂದು ಇದ್ದು !

ಹಾಂಗೆ, ಎನ್ನ ತಲಗೆ ಆತ್ಮ ಬಂತು !                                                                                        ************************   ( ರಜಾ ಮತ್ತೆ ಬರೆತ್ತೆ )

ಬಾಲಿಶ್. . .  . . . .(೪), 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಅಧ್ಯಯನ ವಿಮರ್ಶೆ ಜಿಜ್ಞಾಸ್ ಲಾಯಕ್ಕಾಯ್ದು ಹೇಳಿ ಒಪ್ಪ. ಎಂತಾರು ನಿಂಗೊ ಹೇಳಿದಾಂಗೆ ನಡು ಇರುಳು ಕೂದು ಬರದರೇ ಸರಾಗವಾಗಿ ಬರದು ಮುಗಿತ್ತು. ಮಂಡೆಯೂ ಚುರುಕಾಗಿ ತಲೆಹರಟೆ, ಕಿರಿ ಕಿರಿ ಇಲ್ಲದ್ದೆ ಕೆಲಸ ಮಾಡುತ್ತು . ಅಂದರೂ ಲೈಟ್ ಆಪ್ಹ್ ಮಾಡಿ ಕೂರಿಪ್ಪ ಹೇಳಿ ಪರಂಚುತ್ತವಪ್ಪ !

  [Reply]

  VA:F [1.9.22_1171]
  Rating: 0 (from 0 votes)
 2. ಒಪ್ಪಣ್ಣ

  ಬಾಲಣ್ಣೋ..
  ನಿಂಗಳದ್ದೇ ಆದ ರೀತಿಲಿ ವಸ್ತು ವಿಮರ್ಶೆ ಮಾಡಿಂಡು ನಮ್ಮ ಸಂಸ್ಕಾರ-ಸಂಸ್ಕೃತಿಯ ಶುದ್ದಿ ಹೇಳಿದ್ದು ಒಪ್ಪಣ್ಣಂಗೆ ತುಂಬಾ ಕೊಶಿ ಆತು.
  “ಪುನರ್ಜನ್ಮ”ದ ಬಗ್ಗೆ ಎಷ್ಟೇ ಚಿಂತನೆ ಈಗ ಮಾಡಿರೂ ಅದೊಂದು “Re-search” ಆಗಿಕ್ಕು, ಎಂತಕೆಹೇಳಿರೆ, ನಮ್ಮ ಅಜ್ಜಂದ್ರು ಅದಾಗಲೇ ಒಂದರಿ Search ಮಾಡಿದ್ದವಿದಾ!
  ಅಲ್ಲದೋ?

  ಇನ್ನಾಣ ಕಂತು ಬರಳಿ, ಕಾಯ್ತಾ ಇದ್ದೆ.

  [Reply]

  VA:F [1.9.22_1171]
  Rating: 0 (from 0 votes)
 3. ಬಾಲಣ್ಣ,ಉಡುಪಿಯ ಸತ್ಯಕಾಮ ರ ಬರಹ ಓದಿದ ಹಾಂಗೆ ಆವುತ್ತು,ನಿಂಗೊ ಬರದ್ದದರ ಓದಿಯಪ್ಪಗ,ಮೂಡ್ ಬಪ್ಪಗ ಸೀದಾ ಬರಕ್ಕೊಂಡು ಹೋಗಿ,ಪುನಃ ತಿದ್ದಲೆ ಹೋಗೆಡಿ.ಓದಿದ ಹಾಂಗೆ ಎನ್ನ ತಲೆಯೂ ತಿರುಗಲೆ ಸುರು ಆವುತ್ತು.ಮನುಷ್ಯನ ಆಲೋಚನೆಗೆ ದೂಡುತ್ತು.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  raghumuliya

  ಬಾಲಣ್ಣನ ಚಿ೦ತನೆಗಳ ವಿಸ್ತಾರವ ನೋಡಿ ಒ೦ದರಿ ಅಬ್ಬಾ ಹೇಳಿ ಅನಿಸಿತ್ತು.ಈ ಮಹಾಸೃಷ್ಟಿಯೇ ಒ೦ದು ಅದ್ಭುತ.ನವಗೆ ಅರ್ಥ ಆಗದ್ದ ವಿಷಯ೦ಗಳೇ ಎಷ್ಟಿದ್ದು ದೇವರೇ ….ಬಾಲಣ್ಣ ಬರಳಿ ಹೀ೦ಗೆಯೇ ನಿ೦ಗಳ ಯೋಚನಾಸರಣಿ.

  [Reply]

  VA:F [1.9.22_1171]
  Rating: 0 (from 0 votes)
 5. ಹಳೆಮನೆ ಮುರಲಿ
  ಹಳೆಮನೆ ಮುರಲಿ

  ಬಾಲಣ್ಣಾ,
  ನಿಂಗೊಗೆ ಹಗಲು ಹೊತ್ತು ಅಷ್ಟು ಬೇಗ ಬchchuಲೆ ಕಾರಣ ಎನಗೆ ಈಗ ಗೊಂತಾತು. ಇರುಳು ಇಡೀ ಕೂದುಕೊಂಡು ಹೀಂಗೆಲ್ಲ ತಲೆ ಬಿಸಿ ಮಾಡಿಕೊಂಡು ಬರದರೆ ಹಗಲು ಹೊತ್ತು ಗಾಡಿ ಚೂರು ಓಡುವಗಳೇ ರೇಡಿಯೇಟರ್ ಬೆಶಿ ಆದ್ದದಲ್ಲಿ ಅತೆಶಯ ಇಲ್ಲೆ.
  ಬೈಲಿಲ್ಲಿ ಹೆಚ್ಚಿಗೆ ಹೊಗಳುತ್ತವು ಹೇಳಿ ಇರುಳು ಇಡೀ ಕೂದು ಕಂಡಾಬಟ್ಟೆ ಈಗಲೇ ಬರದು ಮುಗುಶುದು ಬೇಡಪ್ಪ. ಸಾಲದ್ದಕ್ಕೆ ಈಗಾಣ ಕಾಲದ ನೆರೆಕರೆಯವಕ್ಕೆ ನೆಟ್ಟಿಲ್ಲಿ ಆಟ ಆಡುದು ಬಿಟ್ಟರೆ ಬೇರೆ ಯಾವುದೂ ಕೊಶಿ ಆವುತ್ತಿಲ್ಲೆಯೋ ಹೇಳಿ ಸಂಶಯ ಇದ್ದು.
  ಒಪ್ಪಣ್ಣ ಮಾಂತ್ರ ಒಂದು ” ನ್ಯಾನೋ ಟೆಕ್ನಾಲಜಿಯ ಆಧ್ಯಾತ್ಮ್a ” ಹೇಳಿ ಹೊಸ ಅಂಕಣ ಸುರು ಮಾಡ್ತನಡ. ಬಾಕಿ ನಿಂಗಳದ್ದೇ ಮರ್ಜಿ ಮಹಾರಾಯ್ರೆ!

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಹಳೆಮನೆ ಮುರಲಿ ಅಣ್ಣಾ..
  {ಒಪ್ಪಣ್ಣ ಮಾಂತ್ರ ಒಂದು ” ನ್ಯಾನೋ ಟೆಕ್ನಾಲಜಿಯ ಆಧ್ಯಾತ್ಮ ” ಹೇಳಿ ಹೊಸ ಅಂಕಣ ಸುರು ಮಾಡ್ತನಡ}

  ಅಪ್ಪೋ? ಎನಗೇ ಗೊಂತಿತ್ತಿಲ್ಲೆನ್ನೇ?
  ಮತ್ತೆ, ಬೇರೆ ಎಂತೆಲ್ಲ ಸುರು ಆವುತ್ತಡ? :-)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಶರ್ಮಪ್ಪಚ್ಚಿವೆಂಕಟ್ ಕೋಟೂರುಅನಿತಾ ನರೇಶ್, ಮಂಚಿಸರ್ಪಮಲೆ ಮಾವ°ಶಾಂತತ್ತೆಅಜ್ಜಕಾನ ಭಾವಅಡ್ಕತ್ತಿಮಾರುಮಾವ°ಅಕ್ಷರದಣ್ಣಶುದ್ದಿಕ್ಕಾರ°ಮಾಲಕ್ಕ°ವಿನಯ ಶಂಕರ, ಚೆಕ್ಕೆಮನೆನೆಗೆಗಾರ°ಜಯಶ್ರೀ ನೀರಮೂಲೆರಾಜಣ್ಣಪಟಿಕಲ್ಲಪ್ಪಚ್ಚಿಕೊಳಚ್ಚಿಪ್ಪು ಬಾವದೊಡ್ಡಮಾವ°ಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರುಡಾಗುಟ್ರಕ್ಕ°ಅನುಶ್ರೀ ಬಂಡಾಡಿಪೆರ್ಲದಣ್ಣಬಟ್ಟಮಾವ°ಕೇಜಿಮಾವ°ಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ