ಬಾಲಿಶ್ -೨

March 31, 2011 ರ 6:30 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಲಿಶ್

ಕಂಪನಂದಓಂಕಾರಂದ ಶಕ್ತಿ !

ಇದು ಎರಡು ರೂಪಲ್ಲಿ ಪ್ರಕಟ ಆತು.
ಒಂದು, ಶುರುವಿನ  ಕಂಪನದ ಶಕ್ತಿ, ಇನ್ನೊಂದು, ಅಹಸ್ ಹೇಳಿ ಉಪನಿಷತ್ತುಗಳಲ್ಲಿಯೂ, ಈಥರ್ ಹೇಳಿ ಗ್ರೀಕರ ಪುರಾಣಂಗಳಲ್ಲಿಯೂ ಅನಂತರ ಹೇಳಿಸಿಯೊಂಡ ಇನ್ನೊಂದು ಇಡೀ ಬ್ರಹ್ಮಾಂಡವ ಆವರಿಸಿಯೊ೦ಡ  ದ್ರವ್ಯ-  ಇದೆರಡೂ ಸ್ತ್ರೀ ಪುರುಷ  ಶಕ್ತಿಗೊ {ಹೀಂಗೆ ನಾವು ಮತ್ತೆ ಹೇಳಿಯೊಂಡದು } ಆಗಿ ಹೈಡ್ರೋಕಾರ್ಬನ್.. ಜೀವದ ಸೃಷ್ಠಿ..  – ಋಗ್ವೇದದ ಟ್ರಾನ್ಸ್ಲೇಶನ್ – ಅದು ಮಾಡಿದವನ ಮಿತಿಲಿ- ಈ ಅರ್ಥ ಕೊಟ್ಟತ್ತು; ಎನಗೆ ! ( ಇಲ್ಲಿ ಎನ್ನ ಮಿತಿ ಇನ್ನೂ ಸಣ್ಣದು ) .
ಈ ಶಕ್ತಿಗಳ ಸಮ್ಮಿಲನವೇ ಪ್ರಾಣ, ಅದನ್ನೇ ಮುಂದೆ  ಹಿರಣ್ಯಗರ್ಭ ಹೇಳಿದವೋ !?

ಈ ಶಕ್ತಿಯೇ ( ಎರಡು ಒಂದಾಗಿ ಬಂದದು) ಮತ್ತಾಣ ಸಣ್ಣ ಸಣ್ಣವಕ್ಕೆ , ಬೇರೆ ಬೇರೆ ರೀತಿ ತೋರಿ, ಅರ್ಕವೋ .. ಎಲ್ಲ ಆತು ಹೇಳಿ ಈಗ ತೋರ್ತು !
( ತೋರದ್ದೆ ಇದ್ದಷ್ಟು ದಿನ ಆನು ಚೆಂಡಿ ತೋರ್ತು ಸುತ್ತಿಕೊಂಡು ” ಹಿರಣ್ಯಗರ್ಭೋ ಭೂಗರ್ಭೋ ..ಮಾಧವೋ …” ಹೇಳಿಯೊಂಡು ..
ತಲೆಲಿ ಬೇರೆಂತದೋ ತುಂಬಿಸೆಂಡು.. ಅರ್ಥ ಬಿಡಿ , ಉಚ್ಚಾರವೂ ಸರೀ ಇದ್ದಿರ ! ! ) ತೋರಿಯಪ್ಪಗ, ಈಗ ಮಂತ್ರ ಹೇಳಲೂ, ಪೂಜೆ ಮಾಡಲೂ ಎರಡಕ್ಕೂ  ಸರೀ ಧೈರ್ಯ ಬತ್ತಿಲ್ಲೆ.
{ ಸತ್ಯಕ್ಕಾದರೂ ಇಂದು ಪೂಜೆ ಮಾಡುವದೂ ಹೆದರೆಂಡೇ ! , ದೇವರಿಂಗೂ,,.., ಹೆಂಡತಿಗೂ …! ! }

ಇದು ನಮ್ಮ ವೇದಂಗಳ ಆಧುನಿಕ ವಿಜ್ಞಾನಿಗೊ ಸಂಶೋಧಿಸಿದ್ದದು ! ( ರೀ ಸರ್ಚ್- ಪುನಃ ಹುಡುಕ್ಕಿಯೊಂಡದು – ಎಲ್ಲಿಂದ? ) .
ಭಾಷೆ ಬದಲಾತು ಅಷ್ಟೇ !

ಅದು ಮತ್ತೆ ಬೇರೆ ಬೇರೆ ರೀತಿಲಿ ಜನ ಹೇಳಲೆ ಸುರು ಮಾಡಿದ್ದೋ ? ಪ್ರಕೃತಿ, ಪುರುಷ,  ಇತ್ಯಾದಿ …, ಇತ್ಯಾದಿ..!?  -ಇರಲಿ !
ಈ ಕಂಪನಂದಲೇ ಮುಂದೆ ಪ್ರಾಣ ಉಂಟಾತು…

ಸ್ಫೋಟಂದ ಒಂದಕ್ಕಿಂತಲೂ ಹೆಚ್ಚು ಈ ರೀತಿಯ  ಶಕ್ತಿಕೇಂದ್ರಂಗೊ ಉಂಟಾಗಿಕ್ಕು , ಅದರಿಂದಾಗಿ ಒಂದರಿಂದ ಹೆಚ್ಚು ಬ್ರಹ್ಮಾಂಡಂಗೊ ,ದ್ರವ್ಯ ರಾಶಿಗೊ. ದ್ರವ್ಯಂಗೊ,  ಮಿಲ್ಕೀ ವೇ ಗೊ { ಧಧಿಕ್ರಾವಣ್ಣೋ….}, ಇಂದು ವಿಜ್ಞಾನಿಗೊ ಇಕ್ಕೋ ಹೇಳಿ ಹೈಪೊಥಿಸಿಸ್ ಮಂಡಿಸುವ ಸೂರ್ಯಮಂಡಲಂಗೊ.. ಇನ್ನೊಂದು ಅಥವಾ  ಅದಕ್ಕಿಂತ ಹೆಚ್ಚು ಬ್ರಹ್ಮಾಂಡಂಗೊ .. .. .. .ಇದೆಲ್ಲಾ ವೇದವಿದರಿಂಗೆ ವೇದ್ಯ ಆಯಿದಡ ಅದನ್ನೇ ಈಗ ಕ್ರಿಸ್ತ ಸತ್ತ ನಂತರ ಸಂಶೋಧನೆ ಮಾಡಿದವು.
(ಅವರ ಬಗ್ಗೆ ಆನು ದೋಷಾರೋಪ ಮಾಡುವಷ್ಟು ಬುದ್ಧಿ ಬೆಳದವ ಅಲ್ಲ., ಆದರೆ ಇದು ಸತ್ಯ ಹೇಳಿ ನಂಬಿಯಪ್ಪಗ , ಅದರ ಹೇಳುವ ಸಾಹಸ ) .

ಇತ್ತೀಚೆಗೆ ಸ್ಟೀಫನ್ ಹಾಕಿನ್ಸಿನ ಬಗ್ಗೆ ಆಸಕ್ತಿ ಬಂತು, ರಜ ರಜವೇ ಆಗಿ ಓದಿಯಪ್ಪಗ ಅದಾ , ಡೆಲ್ಲಿಲಿಪ್ಪ ಆಡಿಟರ್ ಅಪ್ಪಚ್ಚಿ ರಜಾ ಆಧ್ಯಾತ್ಮ , ಜ್ಯೋತಿಶ್ಯ , ಉಪನಿಶತ್ತುಗಳ ಬಗ್ಗೆ ಹೇಳಲೆ ಸುರು ಮಾಡಿದವು . ಅಲ್ಲಿಂದಲೂ ರಜಾ ಓದಲೆ ಸುರು ಮಾಡಿಯಪ್ಪಗ ರಜಾ ಗೊಂತಪ್ಪಲೆ ಸುರು ಆತು !

ಕ್ವಾಂಟಂ ಥಿಯರಿಯೂ ಇದನ್ನೇ ವಿವರಿಸುತ್ತು. ಅದೂ ಆಳಕ್ಕೆ ಇಳುದಪ್ಪಗ, ಸೃಷ್ಟಿಯ ಇಡಿಯಾಗಿ ನೋಡುವ ದೃಷ್ಟಿ ಬೆಳೆಸಲೆ ಹೇಳ್ತು …ಏಕಂ ಸತ್, ವಿಪ್ರಾಃ ಬಹುಧಾ …!?
ಇದೂ ಅಪ್ಪ, ಕೆಲ ವರ್ಶ ಮೊದಲು ಹೈದರಾಬಾದಿಂಗೆ ಬಂದಿಪ್ಪಗ (ಆನು ೧೦ ವರುಷ ಅಲ್ಲಿತ್ತಿದ್ದೆ -ಒಂದು ರೀತಿಯ ಅಜ್ಣಾತವಾಸ ) ಕೆಮಿ ಹಿಡುದ್ದದು (- ಓದ್ಲೆ ಹೇಳಿದ್ದು. ಅಪ್ಪಂಗೆ ಅಂಬಗ ೭೫ ವರ್ಶ ಕಳುದಿತ್ತು!. ಎಂಗೊ ಇಬ್ರೂ ಅಲ್ಲಿ ಸ್ತೀಫನ್ ಹಾಕಿನ್ಸ್ನ  ಹುಡುಕ್ಕಿದ್ದೆಯೊ, ಸಿಕ್ಕಿ ಓದಿದ್ದು )

[ಒಂದರಿ ಓದಿ ,..ಓದಿ ಮರುಳಾದ .. ಕೂಚುಭಟ್ಟ ! .. ಮತ್ತೆ ,ಮತ್ತೆ , ಮತ್ತೆ ಓದಿಯಪ್ಪಗ ಇಷ್ಟಾತು ! .. ಈಗ ಅರ್ಧೋ ಘಟೋ ….  !? ವಿದ್ವಾನಣ್ಣ ರಂಗಸ್ಥಳಕ್ಕೆ ಬರೆಕು ! .. ಯಕ್ಷಗಾನಲ್ಲಿ ಬಾಲ ಗೋಪಾಲಂಗೊ…ಎಲ್ಲ ಆದ ನಂತರ ನಿಜ ಪಾತ್ರಂಗೊ ..ಕಥೆ ಎಲ್ಲ ಸುರು ಅಪ್ಪ ಹಾಂಗೆ ! ]

ಬಿಗ್ ಬ್ಯಾಂಗ್ ನಿಂದ ನಂತರ ಅತ್ಯಾಧಿಕವಾದ ಶಕ್ತಿಯೂ ಎಕ್ಸೋಟಿಕ್ ಪಾರ್ಟಿಕಲ್ಸ್ ಗಳೂ  ಉಂಟಾದವು, ಅವೇ ಮುಂದೆ ಇತರ ಉತ್ಪಾದನೆಗೊಕ್ಕೆ ಕಾರಣ ಆತು ಹೇಳಿಯೂ ಆಧುನಿಕರ ವಿವರಣೆಗೊ. ಇದಕ್ಕೆ ಅವು ನಂಬಲೆ ಸಾಧ್ಯ ಅಪ್ಪ ರೀತಿಯ ತರ್ಕ, ಡೊಕ್ಯುಮೆಂಟೇಶನ್ನು ಗಳನ್ನೂ ಮಾಡಿ ಅದು ಸತ್ಯ ಹೇಳಿ ಬಿಂಬಿಸುತ್ತವು. ಈ ರೀತಿಯ ದಾಖಲೆ ಇಲ್ಲದ್ದದೆಲ್ಲಾ ಸರಿಯಲ್ಲ ಹೇಳುವ ವಿತರ್ಕವನ್ನೂ ಹುಟ್ಟುಸಿ, ಬೆಳೆಸಿದವು. ಅದರಲ್ಲಿ ಆನೂ ಸೇರಿ , ನಮ್ಮೆಲ್ಲರ ಪಾಲೂ ಇದ್ದು -ಅದೇ ಸರಿ ಹೇಳಿ ಸಾಧಿಸುವಲ್ಲಿ. !

ಈ ಪಾರ್ಟಿಕಲ್ಲುಗಳ ವರ್ತನೆಗಳ ವಿವರಿಸಲೆ ಬೇರೆ ಬೇರೆ ಥಿಯರಿಗೊ ಬಂತು.   ಮೋಲೆಕ್ಯೂಲ್ , ಆಟಂ, ಇಲೆಕ್ಟ್ರಾನ್, ನ್ಯೂಟ್ರಾನ್, ಅದರೊಳ ಇನ್ನೆಂತದೋ… ಎಲ್ಲಾ ಬಂತು. ಆದರೆ ಇದೆಲ್ಲಾ ಒಂದು ಪರಮಾಣುವಿನ ಒಳ ,  ಒಟ್ಟಿಂಗೆ ವಿಭಿನ್ನ ಚಟುವಟಿಕೆಗಳ ಮಾಡುತ್ತಾ ಹೇಂಗೆ ಇರ್ತವು? ಇದರ ಆರು, ಯಾವ ಶಕ್ತಿಯ ಮೂಲಕ ನಿಯಂತ್ರಿಸುತ್ತವು ?!ಇದಕ್ಕೆ ಗುರು ಆರು? ಶಿಷ್ಯ ಆರು ? ಸೂತ್ರ ಯಾವದು/ ಉದ್ದೇಶ ಎಂತದು ?  ಅಯ್ಯೋ ದೇವರೇ..    .. ಮರುಳು …ಹಿಡುಶುತ್ತು  ! !

ಸ್ತೀಫನ್ ಹಾಕಿನ್ಸ್ ಹೇಳುವ ಸ್ಟ್ರಿಂಗ್ ಥಿಯರಿ ಹೇಳುವ ಒಂದು ಸಿದ್ಧಾಂತದ ಪ್ರಕಾರ – ಅಣುವಿನ ಒಳ ಇಪ್ಪ ಎಲ್ಲ ನ್ಯಾನೊ ಪಾರ್ಟಿಕಲ್ಲುಗೊ- ಪರಸ್ಪರ ಒಂದು ಸೂತ್ರಲ್ಲಿ ಜೋಡುಸಿಯೊಂಡಿದ್ದು… ಇತ್ಯಾದಿ . ಇದರದ್ದೇ ಮುಂದುವರಿಸಿದ ಭಾಗ ತರ್ಕಕ್ಕೆ ಸಿಕ್ಕುವ ಮಿಲ್ಕೀವೇಂದ ಬಂದ ನೆಬ್ಯೂಲಾಂಗೊ….. ಮತ್ತಾಣ ಗ್ರಹ ನಕ್ಷತ್ರ,  ಉಪಗ್ರಹಂಗೊ…ಇತ್ಯಾದಿ…….. ! !

ಅನಂತರದ ಜೀವ ಸೃಷ್ಟಿಯ ಬಗ್ಗೆ ವಿಜ್ಞಾನದ ಕ್ಲಾಸುಗಳಲ್ಲಿ ಶಾಲೆಲಿ , ಶಾಲೆ ಬಿಟ್ಟ ಮೇಲೆಯೂ ನಾವು ಕಲಿತ್ತಾ ಇದ್ದು !

{  ಸ್ಟ್ರಿಂಗೇ,  ಜೋಡುಸುವ ಶಕ್ತಿಯೇ, ಪರಮಾತ್ಮನೋ ?.. , ಶಿವನೋ  ?   …!?   ಎಂಥಾ ಮರುಳಯ್ಯಾ ಇದು .. !? }

ಈ ರೀತಿ ಬರೆತ್ತಾ ಇದ್ದಾಂಗೇ .. ಮಂಡೆ ಬೆಶಿ ಆವುತ್ತಾ ಇದ್ದು !  ಸ್ಪೋಟಂದ ಶಾಖ, ಪಾರ್ಟಿಕಲ್ಲುಗೊ, ಅದರಿಂದ ಮಿಲ್ಕಿ ವೇ. ಸೃಷ್ಟಿ .. , ನೋವಾ. ಸುಪರ್ನೋವಾ .. ನೆಬ್ಯೂಲಾ..  ಅಲ್ಲಿಂದ ಸೂರ್ಯಮಂಡಲ, ಗ್ರಹಂಗೊ, ಅವುಗಳ ಚಲನೆ, ಗ್ರಹಚಾರ ! ! ! .

ಭೂಮಿಲಿ, ಜೀವ, ವಿಕಾಸ , ಅನಂತರ ಮಾನವ, ಋಷಿಗೊ, ಅವರ ಧ್ಯಾನ, ತಪ, ವೀಕ್ಷಣೆ , ಅಲ್ಲಿಂದ ವೇದ, ಆರಣ್ಯಕ, ಉಪನಿಷತ್ತು, ಬ್ರಾಹ್ಮಣಂಗೊ (ಜಾತಿ ಅಲ್ಲ, ಜ್ನಾನ) .. ಮತ್ತೆ ಪುರಾಣಂಗೊ… ಇದೆಲ್ಲಾ ಆಗಿ ಇನ್ನೊಂದು ಕೆಲವು ಸಾವಿರವೋ ಎಷ್ಟೋ ವರ್ಷಗಳ ನಂತರ ಈಗಾಣ ಭಾರತಖಂಡದ ಹೆರಾಂದ ಜನ ಬಂದು, ಇದನ್ನೇ ಜ್ಞಾನ , ಸಂಶೋಧನೆ ಹೇಳಿ ನವಗೆ ಹೇಳುತ್ತಾ ,.. ನಾವು ಅವರಿಂದ ಆವು ಹೇಳಿದ್ದನ್ನೇ ಸರೀ ಹೇಳಿ ಒಪ್ಪಿಯೆಂಡು ಬದುಕ್ಕುತ್ತು !.

ವಿ. ಸೂಃ ಕಳೆದ ಸರ್ತಿ ಬರೆದ ಬಾಲಿಶ್ ಂಗೂ, ಈ ಮತ್ತೆ ಮುಂದೆ ಬಪ್ಪ ಬಾಲಿಶಂಗೊಕ್ಕೂ ಬರೆವ, ಬರದ ಎಲ್ಲ ಪ್ರತಿಕ್ರಿಯೆಗಳ ಕಡೇಂಗೆ – ಇದರ ಕೊನೇಯ ಬಾಲಿಶಲ್ಲಿ, ಎನಗೆ ಎಂತಾರೂ ಹೇಳಲೆ ಇದ್ದರೆ

ಹೇಳ್ತೆ, ಆಗದೋ  . . . . ? ನಿಂಗಳ ಪ್ರತಿಕ್ರಿಯೆ ಅಗತ್ಯ ಬೇಕು. ! ಹಾಂಗೇ ಕಡೇಂಗೆ ಕೆಲ ಪುಸ್ತಕಂಗೊ ..ಎನಗೆ ರುಚಿ ಆದ್ದದು .. ಪಟ್ಟಿಯೂ ಕೊಡ್ತೆ .

(ಬಾಕಿ ರಜ ಕಳುದು)

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವವೇಣೂರಣ್ಣಮಂಗ್ಳೂರ ಮಾಣಿಪುತ್ತೂರಿನ ಪುಟ್ಟಕ್ಕಅನುಶ್ರೀ ಬಂಡಾಡಿvreddhiಗೋಪಾಲಣ್ಣಸಂಪಾದಕ°ಅನು ಉಡುಪುಮೂಲೆಅಕ್ಷರದಣ್ಣಜಯಗೌರಿ ಅಕ್ಕ°ದೀಪಿಕಾಬೋಸ ಬಾವಶಾಂತತ್ತೆಕೊಳಚ್ಚಿಪ್ಪು ಬಾವವೆಂಕಟ್ ಕೋಟೂರುದೊಡ್ಡಮಾವ°ಗಣೇಶ ಮಾವ°ವಸಂತರಾಜ್ ಹಳೆಮನೆಸರ್ಪಮಲೆ ಮಾವ°ಚೆನ್ನೈ ಬಾವ°ಚೆನ್ನಬೆಟ್ಟಣ್ಣವಿನಯ ಶಂಕರ, ಚೆಕ್ಕೆಮನೆಅನಿತಾ ನರೇಶ್, ಮಂಚಿಮುಳಿಯ ಭಾವಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ