ಬಾಲಿಶ್…(೩)

April 7, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಲಿಶ್…()

ಸ್ಫೋಟ,-> ಪಾರ್ಟಿಕಲ್ಲ್ಸು,..ಜೀವ….  ಇದರ ವೇದವಿದರು ಹೇಳಿದ ಬಗೆಗೊ  ಬೇರೆ,ಬೇರೆ.

ಪರಮಾಣುವಿನ ಕಲ್ಪನೆ, ಆಧುನಿಕರ ಹಾಂಗೇ ವೇದಂಗಳ ತೆಳುಶಿದವು ,ತಿಳುಶಿದವು .  “ಪರಮಾಣುರಿತಿ ಪ್ರೋಕ್ತ್ವ…ಜ್ಞಾನೀನಾಂ ದೃಷ್ಟಿ ಗೋಚರಂ”  ..ಹೇಳಿದವು. ಇಲ್ಲಿ ದೄಷ್ಟಿಯೂ ಅವರ ಅಂತರ್ದೃಷ್ಟಿ ಆಗಿಕ್ಕಷ್ಟೇ, ಏಕೆ ಹೇಳಿರೆ ಅಂದು ಇಲೆಕ್ತ್ರೋನಿಕ್ ಮೈಕ್ರೋಸ್ಕೋಪು ಇಲ್ಲೆನ್ನೆ. ಈ ಪರಮಾಣುವಿನ ಒಳಾಣ ಸಂಗತಿ, ಅದರ ಮಾಪನಂಗಳನ್ನೂ ಅವು ಹೇಳಿದ್ದಿದ್ದವು. !

ಅದರಿಂದಲೂ ಮೊದಲು ಕೆಲವು ಸಂಗತಿಗೊ

೧. ವೇದಂಗೊ… ಪ್ರಾಚೀನ ಭಾರತದ ಅನ್ವೇಷಣೆ, ಅವೇ ಜಗತ್ತಿನ ಮೊದಲ ಗ್ರಂಥಂಗೊ ಹೇಳಿ ಇಂದಿನ ಚರಿತ್ರಕಾರರು, ಇತಿಹಾಸಕಾರರು ಒಪ್ಪಿದ್ದವು. ಆದರೆ ಕ್ರಿಸ್ತನ ಅನುಯಾಯಿಗಳ ಆಶಯಂಗೊಕ್ಕೆ , ಅವು ಬರದ್ದಕ್ಕೆ,ಹೇಳುತ್ತದಕ್ಕೆ ಧಕ್ಕೆ ಬಾರದ್ದ ಹಾಂಗಿಪ್ಪ  ವಿಚಾರಂಗೊ ಸರಿ, ಅದಲ್ಲದ್ದು ಹಿಯರ್ಸೇ (ಆಧಾರ ರಹಿತ ಗುಲ್ಲು…!.) ಹೇಳುವ ವಿತರ್ಕವ ಹುಟ್ಟುಸಿ, ಬೆಳೆಶಿದವು. ನಾವೆಲ್ಲಾ ಅದನ್ನೇ ಹೆಚ್ಚಾಗಿ ಒಪ್ಪಿ, ಬಳಸಿ,ಬೆಳೆಶಿದೆಯೊಂ. ಉದಾಃ ರಾಜ ವಿಕ್ರಮಾದಿತ್ಯನ ಶಕೆ ಶಾಲೀವಾಹನ ಶಕೆ..ಎಲ್ಲಾ ಹೋಗಿ, ಜಗತ್ತೆಲ್ಲಾ ಕ್ರಿ. ಶ.ದ ಹಿಂದೆ ಇಪ್ಪದರ ಸಂಶಯಲ್ಲಿ ನೋಡ್ತು. ನವಗೆ ಅದೆಲ್ಲಾ ಕಥೆಗೊ ಅಷ್ಟೆ ! !

೨. ಡೆಲ್ಲಿಗೆ ಹೋದವೆಲ್ಲಾ ಕುತುಬ್ ಮಿನಾರ್ ನೋಡಿಪ್ಪಿ. ಅದರ ಹತ್ತರೇ ಅಶೋಕ ಸ್ಥಂಭ ಹೇಳಿ ಇಪ್ಪ ಒಂದು ಕಬ್ಬಿಣದ ಒನಕೆ ಹಾಂಗೆ ಇಪ್ಪ ಕಂಬ ನೆಟ್ಟದರ ನೋಡಿಪ್ಪಿ. ಗೈಡುಗೊ ಅದಕ್ಕೆ ತಾಗಿ ನಿಂದೊಂಡು ಬೆನ್ನ ಹಿಂದಾಗಿ ಕೈ ತಂದು ಜೋಡುಸಲೆ ಹೇಳಿಕ್ಕು. ಹಾಂಗೆ ಸಾಧ್ಯ ಆದವು ದೇಶ ಆಳುಗು ಹೇಳಿ ಪ್ರ್ತೀತಿ ಇದ್ದು…ಇ.ಇ .!

ಆ ಕಂಬ ನೆಟ್ಟು ೨೦೦೦ಕ್ಕೂ ಹೆಚ್ಚು ವರ್ಶ ಆತು ! ಅದಕ್ಕೆ ಏಕೆ ತುಕ್ಕು ಹಿಡುದ್ದಿಲ್ಲೆ? .. ಅದೆಂಥಾ ಮೆಟಲರ್ಜಿಯಪ್ಪಾ ..ಹೇಳಿ ಅನ್ವೇಶಣೆ ಮಾಡಿದ ಜಪಾನಿನ ವಿಜ್ಞಾನಿಯೋ, ಇಂಜಿನಿಯರೋ ಒಬ್ಬ ಹೇಳಿದ: ಅದಕ್ಕೆ ವಿಶೇಷ ಲೇಪ ಹಾಕಿದ್ದವು , ಅದು ಸುಮಾರು ೫ ಮಿಲ್ಲಿ ಮೈಕ್ರಾನ್ ತೆಳ್ಳಂಗೆ …ಸುಮಾರು ೧೫೦೦ ಡಿಗ್ರೀ ಸೆಂಟಿಗ್ರೇಡು ಬೆಶಿಲಿ ಹೇಳಿ ! ಈ ಮೆಟಲರ್ಜಿ ಆ ಸಮಯಕ್ಕೇ ಬೆಳೆಶಿದ್ದರೆ, ಅಂಬಗ ಆ ಜ್ಞಾನ ಎಲ್ಲಿಗೆ ಹೋತು ? ಅದೂ ಆ ಲೇಪ ಹೀಂಗೆ ಸಹಸ್ರಮಾನಂಗಳ ಬೆಶಿಲು, ಗಾಳಿ, ಮಳೇ ..ತಡಕ್ಕೊಂಡು ಒಳುದ್ದದು ! ಎನ್ನ ಲೆಕ್ಕಲ್ಲಿ ೫ ಮಿ.ಮೈ. ಹೇಳಿರೆ, ಮಜ್ಜಿಗೆ ತೋಡಿ ಎರದ ನಂತರ ಸೌಟಿಲ್ಲಿ ಅಂಟೆಂಡಿಪ್ಪದರಿಂದಲೂ ಕಮ್ಮಿ.!

೩. ಗಣಿತ – ಒಂದು ಇತ್ತೀಚೆಗೆ ಆನು ಕಂಡ ಸಂಗತಿ -ಮದಾಲು ಹೇಳ್ತೆ. ಡಿಲ್ಲಿಗೆ ಹೋಪಲೆ ವಿಮಾನನಿಲ್ದಾಣಲ್ಲಿ, ಮದಲೇ ಹೋಗಿ ಕಾದೊಂಡಿಪ್ಪಗ, ತಿಂಬಲೆ ತೆಕ್ಕೊಂಬಲೆ ಹೇಳಿ ಒಂದು ಕೌಂಟ್ರಿಲ್ಲಿ ಕ್ಯೂ.. ಎನ್ನಂದ ಮುಂದೆ ಒಂದು ಬೆಳಿಯ.. ಎಂತೋ ತೆಕ್ಕೊಂಡತ್ತು. ೫೦೦ ರ ನೋಟು ಕೊಟ್ಟತ್ತು. ಅಲ್ಲಿದ್ದ ಜೆನ ಇನ್ನೂ ೧೦ ರೂ ಕೊಡಿ ಹೇಳಿ ತೆಕ್ಕೊಡು ಚಿಲ್ಲರೆ ವಾಪಾಸು ಕೊಟ್ಟತ್ತು. ಈ ಮನುಶ್ಯ ತೆಕ್ಕೊಂಡು ಹೋತು. ಆನು ಎನಗೆ ತೆಕ್ಕೊಂಡು ಬಂದೆ. ಗ್ರಾಚಾರಕ್ಕೆ ಇಬ್ಬರೂ ಎದುರೆದುರು ಕೂದ್ದು. ಈ ಮನುಶ್ಯಂಗೆ ಫಜೀತಿ ! ಲೆಕ್ಕ ಸರಿಯೋ ಹೇಳಿ , ಮೊಬೈಲಿಲ್ಲಿ ಲೆಕ್ಕ ಹಾಕೆಂದಿತ್ತು. ನವಗೆ ಮನಸ್ಸಿಲ್ಲೇ ಮಾದುವ ಲೆಕ್ಕ ! ಸಣ್ಣಾಗೆಂಡಿಪ್ಪಗ ಬಾಯಿಪಾಠ ಮಾಡೆಂಡಿದ್ದ ಮಗ್ಗಿ. ನಮ್ಮ ಬಾಲ ಪಾಠ ಅಲ್ಲೆಲ್ಲಾ ಶಾಲೆಲಿ !

ಶೂನ್ಯ – ಭಾರತ ಕೊಟ್ಟದು ಗಣಿತಕ್ಕೆ , ಎಲ್ಲೋರಿಂಗು ಈಗ ಗೊಂತಿದ್ದು. ನಮ್ಮ ಸಂಖ್ಯಾಬಲ ಎಲ್ಲಿವರೆಗೆ – ಸೂಕ್ಶ್ಮಲ್ಲಿ:.ವೇದಗಣಿತ ಹೇಳಿ ಜ್ಞಾನಶಾಖೆ ಈಗ ಮತ್ತೆ ಪ್ರಕಾಶಿಸುತ್ತಾ  ಇದ್ದು .

….. ಎಪ್ಲೈಡ್ ಮೆಥಮೆಟಿಕ್ಸು-

೪. ಆರ್ಯಭಟ – ೫ನೇ ಶತಮಾನಲ್ಲಿ, ಸುಮಾರು ೪೫೦ನೇ ಇಸವಿಯಾಗಿಕ್ಕು, ಭೂಮಿ ಗೋಲಾಕಾರವಾಗಿದ್ದು ಹೇಳಿದ ( ಆರ್ಯಭಟೀಯಂ – ಲ್ಲಿ), ಅದರ ಸುತ್ತಳತೆ ೧೦೫೦ ಯೋಜನಗಳಷ್ಟು ಹೇಳಿಯೂ ಹೇಳಿದ. ಇದರ ಕನ್ವರ್ಟು ಮಾಡಿರೆ {ಒಂದು ಯೋಜನ ಹೇಳಿರೆ ಸುಮಾರು ಹನ್ನೆರಡೂ ಕಾಲು ಕಿ.ಮೀಗಿಂತ ರಜಾ ಕಮ್ಮಿ, ಸರಿಯಾದ ಮಾಪನ -೧೨.೧೧ಕಿ ಮೀ ಹೇಳಿ ತೀರ್ಥರಾಮ ವಳಲಂಬೆ ವಿವರಿಸಿದ್ದವು,)೧೦೫೦ *೧೨.೧೧=೧೨೭೧೫.೫  {ಮೊಡರ್ನ್ನಿನ ಪ್ರಕಾರ ಹೇಳೊದರಿಂದ ಬರೆ ೩ಕಿ ಮೀ ವ್ಯತ್ಯಾಸ !} ಆರ್ಯಭಟನ ಕಾಲಲ್ಲಿ ಟೆಲಿಸ್ಕೋಪು, ಉಪಗ್ರಹಾಧಾರಿತ ಅಳೆತ..ಯಾವದೂ ಇಲ್ಲದ್ದೆ ಈ ನಿಖರತೆ?

೫. ಕಾಲದ ಗಣನೆ, ಕಲ್ಪ , ಯುಗ, ಯುಗಾಂತ, ಸಮಯ, ಘಟಿ, ಮುಹೂರ್ತ…… . . .. ದಿನಮಾನ, ವರುಶದ ಬಗ್ಗೆ ಹೇಳಿದ್ದ ನಿಖರತೆ  ! – ಹೈದರಾಬಾದಿಲ್ಲಿ ಇದ್ದಿಪ್ಪಗ ಐ ಎಸ್ ಬಿ ಗೆ ಹೋಗಿ ಅಲ್ಲಿಯಾಣ ಲೈಬ್ರರಿಗಳಲ್ಲಿ ಓದಲೆ ಅವಕಾಶ ಎನ್ನ ಹಳೇ ಕಂಪೆನಿಯ ಬಾಬ್ತು ಸಿಕ್ಕಿದ್ದತ್ತು. ಅಲ್ಲಿ ಒಂದು ಪುಸ್ತಕ.. ಹೆಸರು ಸರೀ ಬತ್ತಿಲ್ಲೆ, ಒಬ್ಬ ಆಚಾರ್ಯನ ಬಗ್ಗೆ ಬರದಿತ್ತಿದ್ದವು. ಆ ಪುಸ್ತಕವ ತಿರುಪತಿ ಯುನಿವರ್ಸಿಟೀಯವು ಪ್ರಕಟ ಮಾಡಿದ್ದದು. ಅದರಲ್ಲಿ ಇದ್ದ ಪ್ರಕಾರ ಒಬ್ಬ ಆಚಾರ್ಯ ಒಂದು ವರುಷ ಹೇಳಿರೆ ೩೬೫.೨೫  ದಿನ  ಹೇಳಿಯೂ (ಮುನ್ನೂರ ಅರುವತ್ತೈದೂಕಾಲು ದಿನ !} ಅದರಿಂದ ನಂತರ ಕಲ್ಪದ ವರೇಗಾಣ ಲೆಕ್ಕಂಗಳನ್ನೂ ಹೇಳಿದ್ದ.

…ರಸಾಯನ, ಜೀವಶಾಸ್ತ್ರಂಗೊ…

೬. ಇನ್ನೊಂದು ದಿಕ್ಕೆ ರಸಶಾಸ್ತ್ರಜ್ನಂಗೊ ಆಂಧ್ರದ ನಾಗಾರ್ಜುನ ಹೇಳುವಲ್ಲಿ ಕೃತಕವಾಗಿ ಚಿನ್ನ, ವಜ್ರಂಗಳ ಮಾಡೆಂಡಿದ್ದ ಫೇಕ್ಟ್ರಿ ಮಡಿಗೆಂಡಿತ್ತಿದ್ದವು ಹೇಳಿಯೂ ಓದಿದೆ !( ಅದೇ ಪುಸ್ತಕಲ್ಲಿ !)೮೪ ಲಕ್ಶ ಜೀವರಾಶಿಗೊ ಸೃಷ್ಟಿಲಿ ಇದ್ದು ಹೇಳಿಯೂ ಅದೆಲ್ಲಾ ಶೂನ್ಯಲ್ಲಿ ಮುಗಿತ್ತು , ಅನಂತಲ್ಲಿ ಸುರು ಆದ್ದದು ಹೇಳಿಯೆಲ್ಲಾ ವಿವರುಸುವ ಆ ವಿಚಾರಂಗೊ ಎನಗೆ ಇನ್ನೂ ಅರ್ಥ ಆಯಿದಿಲ್ಲೆ !   ಈ ಅನಂತ ಮತ್ತು ಶೂನ್ಯಂಗಳ ತಿಳಿವಲೆ ಇನ್ನೂ ಕಲಿಯೆಕು, ಓದೆಕು.

ಇದರ ಓದಿದ ಸಮಯಲ್ಲಿ, ಗಾಂಧಾರಿ ಒಂದೇ ಭ್ರೂಣಂದ ನೂರು ಮಕ್ಕಳ ಪದೆದ ಕಥೆ..ಸರಿಯಾಗಿಕ್ಕು.. ಅಂದಿಂಗೆ ಅದರ ಕಥಾ ರೂಪಲ್ಲಿ  ಹೇಳಿದ್ದದಾಗಿಕ್ಕೋ ? ಅಗಸ್ತ್ಯ ಕುಂಭಸಂಭವಃ ನಿಜ ಆಗಿಕ್ಕು ! ಅಲ್ಲದೋ .

ಕ್ರಿಸ್ತ ಹುಟ್ಟೆಕಾರೆ ಮದಲೇ ಬೆಳದ ನಮ್ಮ ನಾಗರೀಕತೆ (?- ನಗರಾತೀತ ನಾಗರೀಕತೆ ..ಕಾಡಿಲ್ಲಿ, ಸರೀ ವಸ್ತ್ರವೂ ಇಲ್ಲದ್ದ .., ಬೇಶದ್ದೆ ತಿಂದ ಅಥವಾ , ಬೇಶೆಕಾದ ಅಗತ್ಯ ಕಾಣದ್ದಷ್ಟು ಜ್ಞಾನತೃಶ್ಣುಗೊಕ್ಕೆ ಭೌತಿಕ ಸುಖದ ಅಗತ್ಯ ಇರ ) ಸುಮಾರು  ನಾಶ ಆಯಿದು. ಉದಾಃ ನಳಂದಾವ ಆಕ್ರಮಣ ಮಾಡಿದ ಎಲ್ಲ ಸರ್ತಿಯೂ ಅಲ್ಲಿ ಗ್ರಂಥಂಗಳ ಸುಡುವ ಕೇಲಸ ಆಗಿತ್ತು.ಈ ಕೆಲಸಕ್ಕೆ ಮೂರು ತಿಂಗಳುಗೊ ಬೇಕಾಗಿತ್ತು, ಈ ಸಮಯಲ್ಲಿ ಅಲ್ಲಿಗೆ ಬಂದ ಆಕ್ರಮಣಕಾರರೊಟ್ಟಿಂಗೆ ಇದ್ದ ಕೆಲವು ಜನ ಕದ್ದು ಕೊಂಡೋದ್ದರ ಅಫಘಾನಿಸ್ತಾನ, ಹಿಂದೂಕುಶ್ ಪರ್ವತಂಗಳ ಆಚ ಹೊಡೆಲಿ ವೈದ್ಯಕ್ಕೆ ಉಪಯೋಗಿಸಿದ ಇತಿಹಾಸ ಸಿಕ್ಕಿದ್ದು.

ಕ್ರಿಸ್ತ ಹಿಮಾಲಯಕ್ಕೆ   ಬಂದದು , ಅಲ್ಲಿ ಜ್ಞಾನ ಪಡೆದ್ದು ಈಗಳೂ ಪಾದ್ರಿಗೊ ಗುಟ್ಟಾಗಿ ಕಲಿವ ಸಂಗತಿ. ಪಾದ್ರಿ ಟ್ರೈನಿಂಗಿನ ಕಡೇಲಿ, ಅಥವಾ ,ದೀಕ್ಶೆಯ ಆನಂತರ ಅವಕ್ಕೆ ಇದರ ಹೇಳುತ್ತವಡ. ಕ್ರಿಸ್ತನ ಹೆಸರಿಲ್ಲಿ, ನಂಬಿಕೆಗಳ ನಾಶಮಾದುವದರ ಕಲಿಶಲೆ ಬೇಕಾಗಿ !

ಇಷ್ಟೊಂದು ಶತಮಾನಂಗಳ ಸಂಸ್ಕೄತಿ ಮತ್ತೆ ಹಿನ್ನಲೆಯ ನಾಶವೋ , ಅದರಬಗ್ಗೆ ಸಂಶಯ, ಅಪನಂಬಿಕೆಗಳ ಬೆಳೆಶೆಕಾದ್ದದು ಅಂದ್ರಾಣ ಆಕ್ರಮಣಕರರಿಂಗೆ ಅಗತ್ಯ ಇದ್ದತ್ತು. ಅವೆಕ್ಕೆ ಸುರುಸುರೂವಿಂಗೆ ಭಾರತದ ಬೆಳೆ, ವಾಣಿಜ್ಯಂದ ಅಂದ್ರಾಣ ಪೈಸೆ ಬೇಕಾಗಿತ್ತು. ಆದರೆ ಇಲ್ಲಿ ಪೈಸೆಂದಲೇ ಎಲ್ಲವೂ ಅಲ್ಲ ಹೇಳಿ ಬಲವಾಗಿ ನಂಬಿದ ಜನಾಂಗ ಇದ್ದತ್ತು. ಅವಕ್ಕೆ ತಲೆಮಾರುಗಳಿಂದ ಬಂದ ಸಂಸ್ಕಾರ ,  ಈಚವಕ್ಕೆ ಅರ್ಥ ಆಗದ್ದು ; ಬೆನ್ನಿಂಗೆ ಇದ್ದತ್ತನ್ನೆ. ಅದರ ಒಡೆಯದ್ದೆ ಅವರ ಆರ್ಥಿಕ ಎಜೆಂಡಾ ಮುಂದುವರುಸಲೆ ಎಡಿಯ ! ಹಾಂಗಾಗಿ, ವಿತರ್ಕ, ಕುತರ್ಕಂಗಳ ಅಡಿಪಾಯಲ್ಲಿ ,ಹೊಸ ನಂಬಿಕೆಗಳ ಹುಟ್ಟುಸಲೆ ಇಪ್ಪ ಜ್ಞಾನ ಶಾಖೆ ಸುರು ಆತು- ಇದು ಎನ್ನ ನಂಬಿಕೆ { ತಪ್ಪಿದ್ದರೆ , ಅರ್ಥ ಅಪ್ಪ ಹಾಂಗೆ ಎನಗೆ ಬೋಧಿಸಿದರೆ, ತಿದ್ದಿಕೊಂಬೆ }. [ದುಡ್ಡೇ ದೊಡ್ಡಪ್ಪ, ವಿದ್ಯೆ ಅವರಪ್ಪ- ಹಾಂಗಾಗಿ , ಅಲ್ಲಿಗೇ ಬೆಳ್ಳುಳ್ಳಿ ಮಡುಗಿರೆ ! ! – ಇದು ಇಂದಿಂಗೂ ಪಾಶ್ಚಾತ್ಯ ಜ್ನಾನ ಶಾಖೆಗೊ ಕಲುಶುವ, ನಾವು ಕಲಿವ ಕ್ರಮ: – ಪಿ ಎಚ್ ಡಿ ಬರದವ, ಅವನ ಥಿಸೀಸಿನ ಡಿಫೆ೦ಡು ಮಾಡೆಕು.ಅಲ್ಲಿ ಪ್ರಶ್ನೆಗೊ-ಬೆಳ್ಳುಳ್ಳಿ ಮಡುಗುವ ನಮೂನೆಯೇ- ಹೆಚ್ಚಾಗಿ. ಕೆಲವೇ ಅಪವಾದಂಗೊ ]

ನಮ್ಮ ವೇದಂಗಳ, ಜ್ಞಾನಂಗಳ ಆಧಾರಲ್ಲಿ, ೨೫೦೦-೩೦೦೦ಸಾವಿರ ಪೇಟೆಂಟುಗೊ- ಹೆರದೇಶದವು ಮಾಡಿಯೊಂಡಿದವು ! ಕೆಲವಕ್ಕಂತೂ ನೇರ ವೇದಂಗಳನ್ನೇ ಉಲ್ಲೇಖ ಮಾಡಿದ್ದವು. ಇದೆಲ್ಲಾ ರಜಾ ಇಂಟರ್ ನೆಟ್ಟಿಲ್ಲಿ ಸಿಕ್ಕುತ್ತು ಕೂಡ. ಇದಕ್ಕಾಗಿಯೇ ವೇದಂಗಳ ಸತ್ಯ ಹೇಳಿ ಒಪ್ಪಿಗೊಂಡದು !  ರಾಮಕೃಷ್ಣ ಮಿಶನ್ನಿನ ಸುಮಾರು ಸ್ವಾಮಿಗೊ ಇದರ ಬರದ್ದವು.

ಪೈಸೆ ಇಪ್ಪವಕ್ಕೆ ಜೈ ಹೇಳುವ ಕಾಲ ಈ ಆಕ್ರಮಣಕಾರಂಗೊ ಬರೆಕಾರೆ ಸುರು ಆಯಿದು ನಮ್ಮ ದೇಶಲ್ಲಿ. ಮುಸ್ಲಿಂ ಆಢಳಿತದ ಕಾಲಲ್ಲಿ -” ಅಲ್ಲೋಪನಿಶತ್ ” (ನೆಗೆ ಮಾಡೆಡಿ -ಓದಿ ಸತ್ಯಾರ್ಥ ಪ್ರಕಾಶ- ಆರ್ಯ ಸಮಾಜದ ಪ್ರಕಟಣೆ )  ಹೇಳಿಯೂ ಸಂಸ್ಕೃತ ಗೊಂತಿದ್ದವು ಬರದ್ದವು ಹೇಳುವೊದು ಇದಕ್ಕೆ ಸಾಕ್ಷಿ ! !

ಆನು ಹೆರಟದು – ಆಟಂ, ಪಾರ್ಟಿಕಲ್ಸ್, ಜೀವಂಗಳ ಬಗ್ಗೆ !  ಇನ್ನಾಣ ಕಂತಿಲ್ಲಿ  ! ! !

(ಬಾಕಿ ರಜ ಕಳುದು )

ಬಾಲಿಶ್...(೩), 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಗಣಪತಿ.ಭಟ್.ಬಿ
  ಗಣಪತಿ.ಭಟ್.ಬಿ

  ಲಾಯ್ಕಾಯಿದು, ಇನ್ನಾಣ ಕ೦ತುಗೊಕ್ಕೆ ಕಾದೊ೦ಡಿರ್ತೆ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಬಾಲಿಶ್ ಮೂರನೆಯ ಕ೦ತು ಆಸಕ್ತಿದಾಯಕವಾಗಿದ್ದು.
  ನಮ್ಮ ದೇಶ ವೈಜ್ಞಾನಿಕವಾಗಿ ಎಷ್ಟು ಮು೦ದುವರುದಿತ್ತು ಹೇಳೊದಕ್ಕೆ ಕೆಲವು ಉದಾಹರಣೆಗೊ ಸಿಕ್ಕುತ್ತು.ಆದರೆ ಹೆರದೇಶದವರ ದಾಳಿಲಿ ಹೆಚ್ಚಿನ ಎಲ್ಲವನ್ನೂ ಕಳಕ್ಕೊ೦ಡು ಈಗ ಹೆರದೇಶದವರ ಆಶ್ರಯ ಬೇಡುವ ಹಾ೦ಗಾತೋ? ಅಲ್ಲ ,ಅವರ ಓಲೈಸೊದರಲ್ಲಿ ನಮ್ಮ ಸ್ವ೦ತಿಕೆಯ ಮರದ್ದೋ?
  ಬಾಲಣ್ಣ,ಚಿ೦ತನೆ ಮು೦ದುವರಿಯಲಿ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ನಿಂಗಳ ಮಾತಿಂಗೆ ಎನ್ನದೊಂದು ಓಟಿದ್ದು.
  ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದದೂ, ಅದರ ಒಳಿಶಿಯೊಂಬ ಯೋಗ್ಯತೆ ಇಲ್ಲದ್ದದೂ ಕಾರಣ ಆದಿಕ್ಕು ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ

  ಬಹಳ ಒಳ್ಳೇದಾಗಿ ಮೂಡಿಬತ್ತಾ ಇದ್ದು ಈ ಸರಣಿ, ವಾದಗತಿಗೊ ನಿಖರವಾಗಿಯೂ ಸ್ಪಷ್ಟವಾಗಿಯೂ ಗೊ೦ದಲ ಇಲ್ಲದ್ದೆ ಇದ್ದು. ಅಭಿನ೦ದನೆಗೊ.
  ಎಲ್ಲವನ್ನೂ ಸ೦ಗ್ರಹಿಸಿ ಪುಸ್ತಕ ರೂಪಲ್ಲಿ ಪ್ರಕಟಿಸುವ ಬಗ್ಗೆ ಏಕೆ ಯೋಚಿಸಲಾಗ ನಿ೦ಗೊ?

  [Reply]

  VA:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ
  ಮಹೇಶ

  {ಅದಕ್ಕೆ ಏಕೆ ತುಕ್ಕು ಹಿಡುದ್ದಿಲ್ಲೆ? }
  ಇದರ ಬಗ್ಗೆ ಐ ಐ ಟಿ ಕಾನ್ಪುರದ ಮೆಟಲರ್ಜಿ ಪ್ರೊಫೆಸರು (ಬಾಲಸುಬ್ರಮಣಿಯ೦) ವರ್ಶಗಟ್ಲೆ ಸ೦ಶೋಧನೆ ಮಾಡಿ ಅ೦ಥದ್ದೇ ಲೋಹವ ತಯಾರು ಮಾಡಿದ್ದವಡ. ಅದಕ್ಕೆ ಪೇಟೆ೦ಟ್ ಕೂಡ ಸಿಕ್ಕಿದ್ದು ಬಹುಶಃ. ಆ ವಿಶಯಲ್ಲಿ ಅವರ ಪಿ ಎಚ್ ಡಿ ವಿದ್ಯಾರ್ಥಿಗಳೂ ಸ೦ಶೋಧನೆ ಮಾಡಿದ್ದವು.
  ಆ ಕ೦ಬ ಡೆಲ್ಲಿಲ್ಲಿ ನಿರ್ಮಿಸಿದ್ದದಲ್ಲ. ಅದು ಯಾವುದೊ ಮುಘಲ್ ಆಕ್ರಮಣಕಾರಿ ಬೇರೆ ಯಾವುದೊ ಜಾಗೆ೦ದ (ಸಾರನಾಥ?) ಪೊರ್ಪಿ ತೆಕ್ಕೊ೦ಡು ಹೋದ್ದದು. ಆ ಕ೦ಬದ ಮೇಲೆ `ಧರ್ಮಚಕ್ರ’ ಮಡುಗುವ ಹಾ೦ಗೆ ಒ೦ದು ಚಡಿ ಇದ್ದಡ. ಆ ಚಕ್ರ ಮೂಲ ಜಾಗೆಲ್ಲಿಯೇ ಇದ್ದಡ. ಆ ಚಡಿಯ ಅಳತೆ ಮತ್ತು ಈಗ ಆ `ಚಕ್ರ’ದ ಅಳತೆ ಹೊ೦ದಿಕೆ ಆವುತ್ತು – ಹೇಳಿ ಹೇಳ್ತವು ಅವು.

  ರಾಜರ ಕಾಲಲ್ಲಿ ಇದ್ದ ದೊಡ್ಡ ದೊಡ್ಡ ಉಕ್ಕಿನ ತೋಪುಗೊ ಪರ್ವತಪ್ರದೇಶ೦ಗಳಲ್ಲಿ ಅನಾಥವಾಗಿ ಬಿದ್ದೊ೦ಡು ಇರ್ತು. ಆ ತೋಪುಗಳ ಬಗ್ಗೆ ಸ೦ಶೋಧನೆ ಮಾಡ್ಯೊ೦ಡು ಇತ್ತಿದ್ದವು ಅವು.
  ಅವರ ಮಾತುಗೊ ಕೇಳ್ಳೆ ಭಾರಿ ಲಾಯಕ. ಪ್ರೇರಣಾದಾಯಕವಾಗಿರ್ತು.

  ” ಅಲ್ಲೋಪನಿಶತ್ ”
  ಬ್ರಿಟಿಷರ ಕಾಲಲ್ಲಿ `ಯೇಶುಸಹಸ್ರನಾಮಾವಲಿಃ’ ಹೇಳಿ ಒ೦ದು ತಯಾರಾಯಿದಡ. ಬೈಬಲ್ ಸ೦ಸ್ಕೃತಲ್ಲಿ ಅನುವಾದ ಆಯಿದು.
  ತಮಿಳುನಾಡಿಲ್ಲಿ ಚರ್ಚಿಲ್ಲಿ ಹಾಡುವ ತಮಿಳು ಯೇಶುಸ್ತುತಿಗೊ ಒಬ್ಬ ಬ್ರಾಹ್ಮಣ ಶಾಸ್ತ್ರಿ (ಕ್ರಿಶ್ಚಿಯನ್ ಆಗಿ ಮತಾ೦ತರಗೊ೦ಡ) ಬರದ್ದದಡ. ಅದರಲ್ಲಿ ಭಕ್ತಿ ಭಾವ ತು೦ಬಿ ತುಳುಕುತ್ತು ಹೇಳಿ ಒ೦ದು ತಮಿಳ ಹೇಳ್ತದು ಕೇಳಿದ್ದೆ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಮಾಹಿತಿಗೊಕ್ಕೆ ಒಂದೊಪ್ಪ…

  [Reply]

  VA:F [1.9.22_1171]
  Rating: 0 (from 0 votes)
 5. ಬಾಲಣ್ಣ
  ಬಾಲಣ್ಣ

  ಮಹೇಶಣ್ಣ,

  ಪೂರಕ ಮಾಹಿತಿಗೊಕ್ಕೆ ತೊಂಬಾ (ಎರದು ಸರ್ತಿ ತುಂಬ ಹೆಳುವದರ ಹೀಗೆ ಬರದರೆ? ) ಥೇಂಕ್ಸು. ಸಾರನಾಥಂದ ಕಿತ್ತದು ಹೇಳಿ ಹೇಳುವದು ಸರಿ ಹೇಳಿ ಸೂರ್ಯನಾಥ್ ಕಾಮತ್ ಹೇಳಿದ್ದವು. ಅವು ನಮ್ಮ ಪರಂಪರೆಯ ಬಗ್ಗೆ ಅಧ್ಯಯನ ಮಾಡಿ ಅಧಿಕಾರಿಕವಾಗಿ “ಭಾರತ ದರ್ಶನ ” ಮಾಡುಸೆಂಡು ಇತ್ತಿದ್ದವು.

  ಅಲ್ಲೋಪನಿಶತ್, ಯೇಸು ಸಹಸ್ರನಾಮಾವಳಿ ಹಾಂಗೇ ಈಗ ದಾಸರ ಪದಂಗಳನ್ನೂ ಬರೆತ್ತವು, ಹಾಡುತ್ತವು. ತಿರುವನಂತಪುರ-ಮಂಗಳೂರು ಪರಶುರಾಮ ಎಕ್ಸ್ ಪ್ರೆಸ್ಸು ರೈಲಿಲ್ಲಿ ಪೋಟ್ಟಂದ ಹತ್ತೆಂಡು -ಧ್ಯಾನ ಶಿಬಿರಂದ ಬತ್ತ ಪುರ್ಬುಗೊ !
  ಹೈದರಾಬಾದಿಲ್ಲಿ ಎನ್ನ ಅಪರ್ಟುಮೆಂತಿನ ಪಕ್ಕಲ್ಲೇ ಅಲೆಕ್ಷ್ ಹೇಳಿ ಕಸ್ಟಂಸ್ ಡಿ ಏಸ್ ಪಿ ಇತ್ತಿದ್ದ. ಆವನ ಅಪ್ಪ ಐಯ್ಯರ್ ! ಅವ ಇಂದಿಂಗೂ ಅಪ್ಪನ ಜೆಪವೋ ಪೂಜೆ ಯೋ ಮಾಡೆಂಡಿಪ್ಪ ಫೋಟೋ ಮನೆಲಿ ಮಡಿಗಿದ್ದ. ಎಂತೋ ಸೌಖ್ಯ ಇಲ್ಲ್ದ್ದೆ ಇಪ್ಪಗ ಪಾದ್ರಿಗಳ ಆಸ್ಪತ್ತ್ರೆಲಿ ಅವನ ಅಜ್ಜಿಗೆ ಮದ್ದು ಮಾಡ್ಲೆ ಕಂಡಿಶನ್ – ಒಬ್ಬ ಮಗನ ಕ್ರಿಸ್ಚಿಯನ್ ಮಾಡೆಕು ಹೇಳಿ ಆಗಿತ್ತಡ. ! !

  ಹೀಂಗಿಪ್ಪ ಇನ್ನೊಂದು ಸಂಗತಿಃ
  ಅಡಕ್ಕೆ ಮಾರುಲೆ , ಕೋಕ ಕ್ಕೆ, ಮಾಪ್ಳೆ ಇಲ್ಲದ್ರೆ ಕೇಂಪ್ಕೋಕ್ಕೆ ತಪ್ಪ ಜನ ಇನ್ನೂ ಇದ್ದವು ! ನಮ್ಮ ಊರಿಲ್ಲಿ ! !

  [Reply]

  VA:F [1.9.22_1171]
  Rating: 0 (from 0 votes)
 6. ಒಪ್ಪಣ್ಣ

  ಬಾಲಣ್ಣಾ..
  ಬಾಲಿಶ ಅಲ್ಲದ್ದ ಪ್ರೌಢ ಅಂಕಣಂಗಳ ನಿಂಗಳದ್ದೇ ಆದ ಚೆಂದದ ವರ್ಣನೆಲಿ ಬೈಲಿಂಗೆ ಕೊಟ್ಟಿದಿ.
  ಅಪ್ಪು, ನಮ್ಮದೇ ಆದ ಅನೇಕ ವಸ್ತುಗೊ ಈಗ ಪರರ ಪಾಲಾಯಿದು. ಬೇರೇವು ನವಗೆ ಕಲಿಶುತ್ತ ಹಾಂಗಾಯಿದು.

  { ೫ ಮಿ.ಮೈ. ಹೇಳಿರೆ, ಮಜ್ಜಿಗೆ ತೋಡಿ ಎರದ ನಂತರ ಸೌಟಿಲ್ಲಿ ಅಂಟೆಂಡಿಪ್ಪದರಿಂದಲೂ ಕಮ್ಮಿ.! }
  ಹೋಲಿಕೆ ಕಂಡು ಒಪ್ಪಣ್ಣಂಗೆ ಬಾರೀ ಕೊಶೀ ಆತು! :-)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ದೊಡ್ಮನೆ ಭಾವವೇಣೂರಣ್ಣನೆಗೆಗಾರ°ಚುಬ್ಬಣ್ಣಶಾಂತತ್ತೆಪ್ರಕಾಶಪ್ಪಚ್ಚಿತೆಕ್ಕುಂಜ ಕುಮಾರ ಮಾವ°ನೀರ್ಕಜೆ ಮಹೇಶಡೈಮಂಡು ಭಾವಮಾಷ್ಟ್ರುಮಾವ°ಪೆಂಗಣ್ಣ°ಕೆದೂರು ಡಾಕ್ಟ್ರುಬಾವ°ಬಟ್ಟಮಾವ°ದೊಡ್ಡಭಾವಡಾಮಹೇಶಣ್ಣಅಕ್ಷರದಣ್ಣಪುತ್ತೂರುಬಾವಕೊಳಚ್ಚಿಪ್ಪು ಬಾವಅನಿತಾ ನರೇಶ್, ಮಂಚಿಶುದ್ದಿಕ್ಕಾರ°ಪವನಜಮಾವಜಯಗೌರಿ ಅಕ್ಕ°ವೇಣಿಯಕ್ಕ°ವಿನಯ ಶಂಕರ, ಚೆಕ್ಕೆಮನೆಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ