ಬಾಲಿಶ್…೫

May 5, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಲಿಶ್…೫

ಆತ್ಮ ! ಭಾರತದ ನಂಬಿಕೆ ! ಇಂದಿನ  ಹೊಸ ಚಿಂತನೆಯ ವಿಜ್ಞಾನಿಗೊ ಒಪ್ಪಲೆ ಸುರು ಮಾಡಿದ ವಿಚಾರ. ಹೈಡ್ರೋಜನ್ , ಕಾರ್ಬನ್ ಗಳಿಂದ ಎಲ್ಲವೂ ಉಂಟಾದರೂ ಒಂದಕ್ಕೊಂದು ವಿರುದ್ದವಾದ ಕಣಂಗೊ, ವಿಭಿನ್ನ ಲಕ್ಷಣ ,ಸ್ವಭಾವದ ವಸ್ತು, ಜೀವ

, ಜೀವಿಗೊ, ಒಂದು ಇನ್ನೊಂದರ ತಿಂದು ಬದುಕ್ಕುವ ಸರಪಣಿ.. ಈ ಲೊಜಿಕ್ಕುಗೊಕ್ಕೆ ಕಾರಣ , ಇದರ ಸಾಧ್ಯತೆ ಹೇಂಗೆ ಮತ್ತು ಎಂತಕೆ ..? … ಈ ಪ್ರಶ್ನೆಗೊಕ್ಕೆ ಆಧ್ಯಾತ್ಮ, ವೇದಂಗಳಲ್ಲಿ ಉತ್ತರ ಇದ್ದು ಹೇಳಿ ಒಪ್ಪುವ ಕಾಲ ಸುರುವಾಗಿ ರಜ ವರ್ಷ ಆತು. ಹಾಂಗಾಗಿ, ವೇದ, ವೇದಿಕ್ ಆಚರಣೆಗಳ ಬಗ್ಗೆ ಕುತೂಹಲ- ಅಧ್ಯಯನಕ್ಕೆ ದಾರಿ ಮಾಡಿದ್ದು . { ನೆಂಪು: ಅತಿರುದ್ರ ಯಾಗದ ಸಮಯಲ್ಲಿ ಕಿರ್ಲಿಯನ್ ಫೊಟೋಗ್ರಫಿ ಮಾಡಿ ಪ್ರಭಾವಲಯಂಗಳ ಅಧ್ಯಯನ ಮಾಡಲೆ ಬಂದವರ ಬಗ್ಗೆ : ಒಂದಿಪ್ಪತ್ತು -ಇಪ್ಪತ್ತೈದು ವರ್ಷ ಮದಲೇ -ಕೇರಳಲ್ಲಿ )

ಬಿಗ್ ಬ್ಯಾಂಗ್ ಥಿಯರಿಯ ಹೇಳಿದ ನಂತರ , ವಿಜ್ಞಾನಿಗಳ ಕಾಡಲೆ ಸುರುಮಾಡಿದ ಪ್ರಶ್ನೆ , ಆ  ಸ್ಪೋಟಕ್ಕೆ ಬೇಕಾದ ಶಕ್ತಿ ಎಲ್ಲಿಂದ ಬಂತು ..ಹೇಳುವದು . ಶಕ್ತಿ ಎಲ್ಲಿಯಾದರೂ ಯಾವುದಾದರೂ ರೂಪಲ್ಲಿ ಇಲ್ಲದ್ದೇ ಆದರೆ, ಸ್ಪೋಟ ಹೇಂಗಾತು ?… ಆರೂ, ಎಂತದೂ ಇಲ್ಲದ್ದಲ್ಲಿಂದ   ಎಲ್ಲದೂ ಉಂಟಾತು ಹೇಳುವದರ ಒಪ್ಪಲೆ ವಿಜ್ಞಾನಕ್ಕೆ ಸಾಧ್ಯ ಇಲ್ಲೆ. ಹೀಂಗೆ ಅವಕ್ಕೆ ಅವೇ ಪ್ರಶ್ನೆ ಮಾಡ್ಲೆ ತೊಡಗಿಯಪ್ಪಗ ನಮ್ಮ ಋಷಿಗಳ ಹಾಂಗೇ ಅವರಲ್ಲೂ ಕೆಲವಕ್ಕೆ ಪ್ರಕೃತಿಲಿ ಇನ್ನೂ ಬಿಡುಸಲೆ ಇಪ್ಪ ಗೆಂಟುಗೊ ಇದ್ದು ! ( ಅದಕ್ಕೆ ಅರ್ಗೆಂಟು ಮಾಣಿಯಂಗೊ ಬೇಕಾತು….ಆ ಅರ್ಗೆಂಟು ಗುಣಕ್ಕೆ !)  ಐನ್ ಸ್ಟೈನ್ ತನ್ನ ಹತ್ತ್ರೆ ಭಗವದ್ಗೀತೆ ಮಡಿಕ್ಕೊಂಡಿತ್ತಿದ್ದಾಡ ..ಈಗಾಣ ಸ್ಟೀಫನ್ ಹಾಕಿನ್ಸ್ ತನ್ನ ಬಿಡಿ ಲೆಕ್ಚರುಗಳಲ್ಲಿ ” ಪ್ರಕೃತಿಯ ಎಲ್ಲಾ ಗುಟ್ಟುಗಳ ತಿಳಿವಲೆ ಬೇಕಾದ ತಲೆ ಮನುಷ್ಯ೦ಗೆ ಪ್ರಕೃತಿ ಕೊಟ್ಟಿದಿಲ್ಲೆ “…ಹೇಳಿದ್ದ ! ಅವನೂ  “ಭಾರತದ ಹಳೆಯ ನಂಬಿಕೆಯಾದ ಆತ್ಮ ಅವಿನಾಶಿ, ಅದು ಎಲ್ಲಾ ಸಜೀವ ಸೃಷ್ಟಿಲಿ ಇದ್ದು, ಬಹುಶಃ ಜೀವ ಇಲ್ಲದ್ದರಲ್ಲೂ ಅದರ ಅಥವಾ ಅದಕ್ಕೆ  ಪೂರಕವಾದ ಅಂಶಂಗೊ ಇಕ್ಕು ” .

ಪರಮಾಣು ಯಾರು ಮಾಡಿದ? ಹೇಳಿ ಒಬ್ಬ ಮಗು ( ನಮ್ಮ ಅರ್ಗೆಂಟು ಮಾಣಿಯ ಹಾಂಗೆ ಈಪ್ಪ..ಅರ್ಗೆಂಟು  ಮಾಣಿಯ ಮೋರೆಲಿ ಕೋಪ ಬತ್ತಾ ಇದ್ದೋ..) ಕೇಳಿದ್ದಕ್ಕೆ. . . .” ಮೇ ಬೀ ಗೋಡ್ . . . . “ಐ ಹೇವ್ ಟು ಅನ್ಡರ್ಸ್ಟೇಂಡ್ ಇಟ್ ! – { ಬಿಡಿ ಭಾಷಣಂಗೊ..ಕೆಲವು ಉಸ್ಮಾನಿಯ ಯುನಿವರ್ಸಿಟೀಲಿ ಮೊದಲು ರಿಜಿಸ್ಟ್ರಾರ್ ಆಗಿ, ನಂತರ ಹೈದರಾಬಾದಿನ ಹೆರಾಣ ,ವಿಸಾ ಟೆಂಪಲ್ ಖ್ಯಾತಿಯ ಚಿಲಕೂರು ಬಾಲಾಜಿ ದೇವಸ್ಥಾನದ ಪುರೋಹಿತ, (ಡಬ್ಬಲ್ ಪಿ ಎಚ್ ಡಿ)  ಅವು ಓದಲೆ ಕೊಟ್ಟಿತ್ತಿದ್ದವು !} ಹಾಂಗೇ ಅವನ ಕಾಂಬಲೆ ಹೋದವ ಆನು ಎಂತಕೆ ಬಂದೆ,..ಕಾರಣ ಎಂತಾಗಿಕ್ಕು…ಕೇಳಿದ್ದಕ್ಕೂ ..”ಮೇ ಬಿ ಡೆಸ್ಟೈನ್ಡ್  ಸೊ !” -ಹೇಳಿತ್ತಡ .

ಈ ಡಬಲ್ ಪಿ ಎಚ್ ಡಿ ಮಾಡಿದ ಪುರೋಹಿತರೇ ಮೆದುಳು : ಮನಸ್ಸು ಇದರ ವ್ಯತ್ಯಾಸವ ತಿಳಿವಲೂ ಸಹಾಯ ಮಾಡಿದವು . ಪ್ರತಿತತ್ವ, ಕ್ವಾರ್ಕ್ ಗಳ ಬಗ್ಗೂ ರಜ ಅರ್ಥ ಅಪ್ಪ ಹಾಂಗೆ ಹೇಳಿಕೊಟ್ಟವೂ ಅವೇ. ಅಂಬಗ ಆನು ಒಂದು  ಕೋಳಿ ಪ್ರೋಸೆಸ್ಸು ಮಾಡಿ ಫ್ರೀಜ್ ಮಾಡಿ ಎಲ್ಲಾ ಮಾಡೆಂಡು ಇದ್ದ ಕಂಪೆನಿಲಿ ಮಾರ್ಕೆಟಿಂಗ್ ವಿಭಾಗದ  “ಬೋಸ” ಆಗಿ ಇತ್ತಿದ್ದೆ. ಬ್ರಾಹ್ಮಣ ಜನ್ಮಲ್ಲಿ ಹುಟ್ಟಿ ಕೋಳಿಯೇ ಗತಿ ಆತನ್ನೇ… ಹೇಳಿ ಒಳ್ಳೆ ಬೇಜಾರ ಇದ್ದತ್ತು…ಕೆಲವು ದಿನ ಎಂತದೋ ವಿವರಣೆಗೆ ಸಿಕ್ಕದ್ದ, ಹೇಳಲೆ ಎಡಿಗಾಗದ್ದ ಭಾವನೆಗೊ ಬಂದೊಂಡಿದ್ದತ್ತು .  ಆ ಫೇಕ್ಟ್ರಿಗೆ ದಾರಿ ಈ ದೇವಸ್ಥಾನದ ಕರೇಲಿ ಆಗಿ ಮತ್ತು ದೂರ ಹೋಯೆಕು. ಮನಸಿಂಗೆ ತುಂಬ ಕಸಿವಿಸಿ ಆಗೆಂಡಿಪ್ಪಗ ಆ ದೇವಸ್ಥಾನಕ್ಕೆ ಹೋಗೆಂಡಿತ್ತಿದ್ದೆ. ಹಾಂಗೆ ಅವರ ಗುರ್ತ ಆಗಿ ,ಮಾತಡೆಂದಿಪ್ಪಗ ಒಂದರಿ ” ಮನಸ್ಸಿಂಗೆ ತುಂಬಾ ಬೇಜಾರ ಆಯಿದು” ಹೇಳಿದೆ. ಈ ಒಂದು ಲೈನು …ಎನ್ನ ಆಧ್ಯಾತ್ಮದ ಓದಿನ ಬೆಳೆಶಿತ್ತು.

ನೀನು ಆರು ?.. ಆ ನಿನ್ನ ಮನಸು ಹೇಳಿರೆ ಎಂತರ ?  ಅದರ ಪೂರ್ವಲ್ಲಿ ಎಂತರ? ಪೂರ್ವ ಇತ್ತೋ.. ಇದ್ದರೆ ಅಪರ ಎಂತ  ? ಈಗ ನೀನು ಹೇಳಿ ಗ್ರೇಶೆಂಡು ಇಪ್ಪ ರೂಪ, ಬುಧ್ಧಿ,ತಿಳುವಳಿಕೆ, ಇಮೇಜು  ಇ..ಇ  ,ನಿನಗೇ ಏಕೆ  ಬಂತು? ನೀನು ಹೇಂಗೆ ಯೋಚನೆ ಮಾಡುತ್ತೆ? . . ಯೋಚನೆ ಹೇಳಿರೆ ಎಂತರ? ..ನೀನು ಎಂತ ತರಿಕಿಟ ಹೊಡದರೂ , ಲಾಗ ಹಾಕಿರೂ ನಿನ್ನ ಪಾತ್ರ ರೈಸುತ್ತಿಲ್ಲಿ ಏಕೆ? ಇದೇ ನಿನಗೆ ಮೊದಲು ಹೀಂಗೆ ಮಾಡ್ಲೆ ಏಕೆ ಎಡಿಗಾಯಿದಿಲ್ಲೆ?

ಹೀಂಗೆ ಪ್ರತೀ ಸತ್ತಿಯೂ ಒಂದಲ್ಲದ್ದರೆ.. ಒಂದು ಪ್ರಶ್ನೆ ಕೇಳೀ . .  ಕೇಳೀ,  ರಜ ಸಮಯ ಆನು ಅಲ್ಲಿಗೆ ಹೋಪದರ ನಿಲ್ಲುಸಿದೆ ! ಅವು ಬಿಟ್ಟವಿಲ್ಲೆ, ಆಫೀಸಿಂಗೆ ಫೋನಾಯಿಸಿ ದಿನುಗೇಳಿದವು. ಅಂತು ಅವರ ಕರ್ಮಲ್ಲಿ ಇದೂ ಇತ್ತು ! ಅಲ್ಲಿ ಅವು ಟೋರ್ಚು ಹಾಕಿದವು !

ಅವಿನಾಶಿ ಅನಂತ, ಮತ್ತು ಶೂನ್ಯ ಎರಡೂ ಆಗಿ, ಇದ್ದೂ ಗೊಂತಾಗದ್ದಿಪ್ಪ, ಡಿ ಎನ್ ಏ ಗಳಲ್ಲಿ  ಎಕ್ಸ್, ವೈ ಕ್ರೊಮೊಸೊಮುಗಳ ಒಳ ಆನು ಆನಾಗಿಪ್ಪ, ನೀನು ನೀನಾಗಿಪ್ಪ ಕೋಡಿಂಗ್ಸುಗಳ ಬಗ್ಗೆ, ಶರೀರದ ಹಾರ್ಡ್ವೇರುಗಳ ಲೈಫು,  ಅದು ಹಾಳಪ್ಪ ಸಮಯ, ಯೂಸೇಜ್ ಲಿಮಿಟ್ಗಳ,ಅದರ ರಿಪೇರಿಯ ಕ್ರಮ ಮತ್ತು ಟೂಲ್ಸುಗಳ (ಎನ್ನ ಶರೀರಕ್ಕೆ ಹಿಡಿವ ಮದ್ದು, ಅದೇ ರೋಗ ಇಪ್ಪ ಇನ್ನೊಂದು ಶರೀರಕ್ಕೆ ಹಿಡಿಯದ್ದೆ ಇಪ್ಪದರ ಗುಟ್ಟು)  ಸಂಗತಿಗಳ ಬಗ್ಗೆ  ! ರಜ ರಜ ಗೊಂತಾತು ! ಅಂದಿಂಗೆ ಅಷ್ಟೆ ಆಗಿದ್ದಿಕ್ಕು ಎನ್ನ ಪಾತ್ರದ ಗಾತ್ರ ! ಆತ್ಮ ದೊಡ್ಡದರಿಂದ ದೊಡ್ಡದು, ಸಣ್ಣದರಿಂದ ಸಣ್ಣದು ! ಹಾಂಗಾದರೆ ಎಂತ? ಉಮ್ಮಪ್ಪ ! ಇದರ ಆ ಶಾಸ್ತ್ರಿಗೊ ಪರಮಾತ್ಮ, ದೇವರು  ಹೇಳಿ ತಿಳ್ಕೊ .. ಹೇಳಿದವು. ಒಪ್ಪಿದೆ. { ಎನ್ನ ಅಜ್ಜಿ ಇದರ ಹಣೇವಾರ..ಪಡಕ್ಕೊಂಡು ಬಂದದು ಹೇಳೆಂಡು ಇದ್ದಿದ್ದವು ! ಆನು ಯಾವ ಭೂತಕನ್ನಡಿಲಿ ನೋಡೆಕು..?..ಹೇಳಿ ನೆಗೆಮಾಡಿದ್ದೆ!}

ಈ ಶಕ್ತಿಯ ನಮ್ಮ ಋಷಿಗೊ  “ತತ್” ಹೇಳಿದವೋ ?  ಇದರ ಶಕ್ತಿ, ಸ್ಪೋಟದ ಸಮಯಲ್ಲಿ..ಸಣ್ಣಾ ಸಣ್ಣ ಅತೀ ಸೂಕ್ಶ್ಮ  ಕಿಡಿಗಳಾಗಿ ಅವೇ ಜೀವಾತ್ಮ ಆಗಿಯೋ .ಎಲ್ಲವನ್ನೂ ನೆಡೆಶುವ, ನಿಯಮಂಗಳ ನಿರ್ವಹಿಸುವ ಕಂಡಕ್ಟರುಗೊ ಆದವು .ಇದು ಒಂದು ನಂಬಿಕೆ .

ಈ ಶಕ್ತಿಯನ್ನೇ ಅನೇಕರು, ಅವರ ಕಾಲದ ಅಗತ್ಯಕ್ಕೆ ತಕ್ಕ ಹಾಂಗೆ , ದೇವರು, ಪರಮಾತ್ಮ, ..ನಾರಾಯಣ..  ಶಿವ…ಅಲ್ಲ ಇನ್ನೆಂತಾರು, ಅಂದ್ರಾಣ ಸಮಯದ ಅವರ “ಗುರಿ“ಗೊಕ್ಕೆ ಸರಿಯಪ್ಪ ಹಾಂಗೆ ಹೆಸರು ಮಡುಗಿ ದೆನಿಗೊಂಡವೋ ? ಏಕೆ ಹೀಂಗೆ ತೋರುತ್ತು ಹೇಳಿರೆ: ಎಲ್ಲಾ ನಂಬಿಕೆಗೊ ವ್ಯಕ್ತಿಗೆ ಸರಿ ಹೇಳಿ ತೋರಿಯಪ್ಪಗಳೇ ಅವ ಅದರ  ಪೂರ್ತಿ ಒಪ್ಪುವದು, ಇಲ್ಲದ್ದರೆ ಹೆದರುಸಿಯೋ ಮಣ್ಣೋ ಮಾಡಿ ಕನ್ವರ್ಶನ್ ಆಗಿ ಮತ್ತೆ, ಅದೂ ಅಲ್ಲ ಇದೂ ಅಲ್ಲದ್ದ ಸ್ಥಿತಿಲಿ ಇಪ್ಪವರ ಹಾಂಗೆ ಅಕ್ಕು. ಮತ್ತು ಆ ನಂಬಿಕೆಗೊ ಒಳಿಯ ಕೂಡಾ . ಈ ನಂಬಿಕೆಗೊ ಯಾವದೂ ಅಂದ್ರಾಣ ಜನ, ಕಾಲಕ್ಕೆ ತಪ್ಪಾಗಿರ ! ಅವರ ಬದುಕಿಂಗೆ ಅಗತ್ಯ  ಆಗಿದ್ದಿಕ್ಕು.

ಇರಲಿ !. ಈ ಶಕ್ತಿ , ಈಥರ್ ಹೇಳಿ ಪಾಶ್ಚಾತ್ಯರು ಹೇಳಿಯೊಂಡ ಇನ್ನೊಂದರೊಟ್ಟಿಂಗೆ ಸೇರಿ ಪುರುಷ ಮತ್ತು ಸ್ತ್ರೀ ತತ್ವ ಅಥವಾ ಕಲ್ಪನೆಗೊ-ಕ್ಕೆ ರೂಪ ಕೊಟ್ಟತ್ತೋ ? ಈ ಶಕ್ತಿಗಳ ಭಿನ್ನ ರೂಪಂಗಳೇ ಎಕ್ಸೋಟಿಕ್ ಪಾರ್ಟಿಕಲ್ಲುಗೊ, ಅದರಿಂದ ಅಸಂಖ್ಯ ಸೌರಮಂಡಲ, ಅನಂತರದ ಎಲ್ಲಾ ಸೃಷ್ಟಿಗೆ ಕಾರಣ ಆತು ಹೇಳುವ ವಾದವ ಒಪ್ಪಲೆ ಎನಗೆ ರಜಾ ತಡ ಆತು. ಏಕೆ ಹೇಳಿರೆ ” ಈಥರ್” -ಇದಕ್ಕೆ ನಮ್ಮವುಎಂತ ಹೇಳಿದ್ದವು        , [ ಗೆದ್ದವು   ಎಲ್ಲಾ ನಮ್ಮವು.. ಸೋತವು ಆರಾರೋ .. !] ಎಲ್ಲಿ . . ಹೇಳಿ ತಿಳಿವಲೆ ಸಮಯ ಬೇಕಾತು. ಇದರ ನಮ್ಮವು  “ಅಹಸ್” ಹೇಳಿದ್ದವು, ಇದು” ಪರಮಾತ್ಮನ” ಸೃಷ್ಟಿ,  ಇದರಿಂದಲೇ  ” ಅಹಮ್”, ಇದರಿಂದ  “ಜೀವಾತ್ಮ” ಉಂಟಾತು ಹೇಳಿ ನಮ್ಮವು ಹೇಳಿದ್ದವೂ   ! ಈ ಜೀವಾತ್ಮವೇ ಎಲ್ಲ ಜೀವಿಗೊ- “ಜೀವಿ” ಹೇಳಿ ಹೇಳುಸಿಯೊಂಬಲೆ ಕಾರಣ . ಜೀವಿಯ ಗುಣ ಲಕ್ಶಣಗಳ ಇದರ ಕಾರಣಂದಲೇ ಆ ಶರೀರ, ಸಸ್ಯ, ಏಕಕೋಶ ಜೀವಿಯಿಂದ .ಮನುಷ್ಯನ ವರೇಗೆ ..ಎಲ್ಲಕ್ಕೂ ..! ಇದು ಪರಮಾತ್ಮನಿಂದ  ಅದ್ದರಿಂದ ನಾವೆಲ್ಲಾ ಅವನ ಅಂಶಂಗೊ..!   { ತಿಮ್ಮುರುಟು :.. ಅಂಬಗ ರಾಮ ರಾಮ ಹೇಳಿ ಎಂತಕೆ ಜೆಪ ಮಾಡೆಕು.. ಆನು ಆನೇ .ಹೇಳಿಯೊಂಡರೆ ಸಾಲದೊ..? !  ! ಆನು ಅಂಶವೇ ಹೊರತು ಇಡೀ ಅಲ್ಲ.. ಇದು ಅರ್ಥ ಅಪ್ಪಗ ತಿಮ್ಮುರುಟು ಬಿಡುತ್ತು ! ಅಷ್ಟಪ್ಪಗ ಅಳದು ಕೊಟ್ಟ ಆಯುಷ್ಯ ಮುಗುದಿರುತ್ತುದೆ !  }

ಈ ಜೀವಾತ್ಮ ರೇತಸ್ಸಿಲ್ಲಿ ,ಅಂಡಾಣುವಿಲ್ಲಿ ಇಪ್ಪ ಕ್ರೊಮೊಸೊಮುಗಳ ಕೋಡಿಂಗ್ಸ್ ಮಾಡುವ ಪ್ರೇರಕ ಶಕ್ತಿ. ಇದರಿಂದ ನಂತರದ ಸಂತತಿಯ ಉತ್ಪತ್ತಿ, ಸ್ಥಿತಿ, ಗತಿ , ಸಾವಿನ ವರೆಗಿನ ಎಲ್ಲ ಸಂಗತಿಗಳ ರಿಕಾರ್ಡು ಬರೆತ್ತವ. !  ಮಿಲನದ ಸಂದರ್ಭಲ್ಲಿ ಒಂದು ಅಂಡಕ್ಕೆ ಸೇರಲೆ  ಸಹಸ್ರ ಸಹಸ್ರ ಸಂಖ್ಯೆಯ ವೀರ್ಯಾಣುಗಳಲ್ಲಿ, ಯಾವುದೋ ಒಂದಕ್ಕೆ ಮಾಂತ್ರ ಶಕ್ತಿ ಬಪ್ಪಹಾಂಗೆ ಕಲ್ಪಿಸಿ, ಅದರಿಂದ ಫಲಿತವಾದ ಅಂಡ ಬೆಳದು             { ನೆಂಪು :ಸೃಷ್ಟಿಯ ಮುಂಚಿನ ಸಮರಾಂಗಣ – ನಾಗೇಶ್ ಹೆಗಡೆ.. ಒಂದಿಪ್ಪತ್ತು ವರ್ಷ ಹಳೆ ಸುಧಾ ವಾರಪತ್ರಿಕೆ } ಮತ್ತೆ ಜೀವಿಯಾಗಿ ..ಈ ಸರಪಳಿ ಮುಂದೆ ಹೇಂಗೆ ಆಯೆಕು ಹೇಳುವದೂ ಇದರಲ್ಲೇ ಕೋಡಿಫೈ ಆಗಿರ್ತು !

ಆವಿನಾಶೀ ಆತ್ಮಂದ , ಭಿನ್ನ ಭಿನ್ನ ಸ್ವಭಾವ, ಸರೂಪದ ಜೀವ ? ಎಂತ ಕಥೆ ಇದು ?

( ರಜ ಕಳುದು ..)

ಬಾಲಿಶ್...೫, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ವಿದ್ವಾನಣ್ಣ
  ವಿದ್ವಾನಣ್ಣ

  ಬಾಲಣ್ಣಾ….. ಅದ್ಭುತ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಭಾರೀ ಒಪ್ಪಕ್ಕೆ ಬತ್ತಾ ಇದ್ದು. ಖುಶೀ ಆವ್ತು ವಿಚಾರ ಧಾರೆ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  “ಬಾಲಿಶ್”-ಬರಹ ಶೈಲಿ, ಬೇರೆಯೇ ಲೋಕಕ್ಕೆ ಕೊ೦ಡು ಹೋವುತ್ತಾ ಇದ್ದು.ಹೈದರಾಬಾದಿನ ಪುರೋಹಿತರ ಪ್ರಶ್ನೆಗೊಕ್ಕೆ ಉತ್ತರ ಹುಡುಕ್ಕೊಗ ಒಳುದ್ದೆಲ್ಲಾ ಮರಗು,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 4. ಅರ್ಗೆ೦ಟು ಮಾಣಿ

  ಹೆ ಹೆ ಹೆ! ಮೋರೆಲಿ ಕೋಪ ಬಪ್ಪೊದು ಕಮ್ಮಿ ಬಾಲಣ್ಣ 😉
  ಬರಹ ಇಡೀ ಓದಿದ ಮತ್ತೆ ಮೇಗಾಣ-ಕೆಳಾಣ ತೊಡಿಗೊ ಎನಗೇ ಗೊ೦ತಿಲ್ಲದ್ದ ಹಾ೦ಗೆ ಎಡ-ಬಲ ದಿಕ್ಕಿಲಿ ಎಳಕ್ಕೊ೦ಡು ತನ್ನ ಪ್ರತಿಕ್ರಿಯೆ ತೋರ್ಸಿತ್ತು!

  ಒಪ್ಪ ಆಯ್ದು ಲೇಖನ ಹೇಳ್ತ ಒಪ್ಪ ಈ ಮಾಣಿದು.

  ಇ೦ತಿ ಗೆ೦ಟ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿದೊಡ್ಮನೆ ಭಾವಕೇಜಿಮಾವ°ಕೊಳಚ್ಚಿಪ್ಪು ಬಾವವಿನಯ ಶಂಕರ, ಚೆಕ್ಕೆಮನೆಬೋಸ ಬಾವಬಟ್ಟಮಾವ°ಒಪ್ಪಕ್ಕಸುಭಗಅಕ್ಷರ°ವೆಂಕಟ್ ಕೋಟೂರುಶುದ್ದಿಕ್ಕಾರ°ಚೆನ್ನಬೆಟ್ಟಣ್ಣಮುಳಿಯ ಭಾವಅನುಶ್ರೀ ಬಂಡಾಡಿಪುತ್ತೂರಿನ ಪುಟ್ಟಕ್ಕಅಜ್ಜಕಾನ ಭಾವಸರ್ಪಮಲೆ ಮಾವ°ಯೇನಂಕೂಡ್ಳು ಅಣ್ಣಜಯಗೌರಿ ಅಕ್ಕ°ಶರ್ಮಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಕಜೆವಸಂತ°ಅಡ್ಕತ್ತಿಮಾರುಮಾವ°ಕಳಾಯಿ ಗೀತತ್ತೆಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ