ಬಾಲಿಶ್. . . . ೬

May 12, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಲಿಶ್. . . . ೬

ಸೃಷ್ಟಿಯ ಸುರು ಸ್ಫೋಟಂದ , ಅದರಿಂದ ಶಕ್ತಿಯೂ ಬಿಡುಗಡೆ ಆತು , ಇದು ವಿಜ್ಞಾನ, ಮತ್ತು ನಮ್ಮ ಶಾಸ್ತ್ರಂಗೊ ಎರಡೂ ಒಪ್ಪಿದ ವಿಷಯ.  ಶಾಸ್ತ್ರಂಗೊ ಸೃಷ್ಟಿಯ ಸುರುವಿಲ್ಲಿ ಆದ ಈ ಶಕ್ತಿಯ ಬಿಡುಗಡೆ , ಭಿನ್ನ ರೂಪಂಗಳಲ್ಲಿ ಪ್ರಕಟ ಆತು. ಓಂ ಕಾರದ ಶಬ್ದ , ಉಪನಿಷತ್ತುಗೊ ಹೇಳುವ ಕಾಂತಿ, ಎಲ್ಲ ಇದೇ . ಶಕ್ತಿಯ ನಿಯಮಗಳು-ಹೇಳಿ ನಾವು ಭೌತಶಾಸ್ತ್ರಲ್ಲಿ ಕಲುತ್ತದರ ಈಗ ನೆಂಪು ಮಾಡಿರೆ, ಆ ನಿಯಮಂಗೊ ಇಲ್ಲಿ ಸರಿಯಾಗಿ ವ್ಯಕ್ತ ಆದ್ದು ಕಾಣುತ್ತು. ಶಕ್ತಿಯ ನಾಶ ಸಾಧ್ಯ ಇಲ್ಲೆ, ಅದರ ರೂಪಾಂತರ ಮಾತ್ರ ಸಾಧ್ಯ.  ಈ ಶಕ್ತಿಯ ನಮ್ಮ ಶಾಸ್ತ್ರಂಗೊ ಪರಬ್ರಹ್ಮ ಹೇಳಿ ಸುಲಭಕ್ಕೆ ಹೇಳಿದ್ದು. ಇದಕ್ಕೆ ಮತ್ತೆ, ಸ್ತ್ರೀ ಮತ್ತು ಪುರುಷ ತತ್ವಂಗಳ ಹೆಸರು ಕೊಟ್ಟವು.

ಕೆಲ ಕಂತುಗಳ ಮದಲು ಆನು ಬರೆದಿತ್ತಿದ್ದೆ- ಅಹಸ್ ದ್ರವ್ಯ ಹೇಳಿ.ಈ ಅಹಸ್ ದ್ರವ್ಯವ ಎಕ್ಸೋಟಿಕ್ ಪಾರ್ಟಿಕಲ್ಲ್ಸು ಹೇಳಿ ವಿಜ್ಞಾನ ಹೇಳಿತ್ತು. ಈ ಅಹಸ್ ದ್ರವ್ಯ ಮತ್ತು, ಕಂಪನಂದ ಬಿಡುಗಡೆ ಆದ ಶಕ್ತಿ  ಸೇರಿ ಪ್ರೋಟೊನು, ನ್ಯೂಟ್ರೋನು, ಇಲೆಕ್ಟ್ರಾನುಗೊ, ಕ್ವಾರ್ಕ್ಗ್ ಗೊ, ಅದರಿಂದ  ಹೈಡ್ರೊಜನ್, ಹೀಲಿಯಂಗಳ ಮೋಡಂಗೊ.. ಅಲ್ಲಿಂದ ಹೈಡ್ರೋಕಾರ್ಬನ್ನುಗೊ….ಅಲ್ಲಿಂದ ಮುಂದೆ, ತುಂಬಾ ಮುಂದೆ..ಶರೀರ !-ಇದು ವಿಜ್ಞಾನ ವಿವರಿಸುವ ರೀತಿ. ಆನು ಬರವಗ  ತುಂಬ ಸಣ್ಣ ಮಾಡಿದ್ದೆ.

ಇದರ ನಮ್ಮ ಶಾಸ್ತ್ರಂಗೊ ತೇಜಸ್ಸು ಮತ್ತೆ ಆಪಸ್ಸು ಹೇಳಿ ಹೇಳಿತ್ತು, ಇದರ ಎಲ್ಲಾ  ಹೇಳಿದ ಋಷಿಗೊ ಅಂದ್ರಾಣ ಭಾಷೆಲಿ, ಫೋರ್ಮುಲಾಲ್ಲಿ ಹೇಳಿದವು.  ಬ್ರಾಹ್ಮಣವೋ ,ಆರಣ್ಯಕವೋ, ಉಪನಿಷತ್ತೋ,ವೇದವೋ..ಇತ್ಯಾದಿಗಳಲ್ಲಿ. ನೋಡಿ: – ಆಪಸ್ಸು- ಆಪಃ ಹೇಳಿರ ಸಂಸ್ಕೃತಲ್ಲಿ ನೀರು ಹೇಳಿಯೂ ತೇಜಸ್ಸಿಂಗೆ ಬೆಣಚ್ಚು, ಬೆಶಿಇಪ್ಪದು, ಶಾಖ..ಇತ್ಯಾದಿಯು ಅರ್ಥ ! ಹೀಂಗೆ ಸಂಸ್ಕೃತಲ್ಲಿ ಹೇಳಿದ್ದು ಮುಂದೆ ಬೇರೆ ಬೇರೆ ಕಾರಣಕ್ಕೆ, ಗೂಢ ಆಗಿಕ್ಕು. ಅದರಿಂದಲಾಗಿ ನಮ್ಮ ನಡುವೆ ಇದ್ದ ಈ ಜ್ಞಾನ ನಿಧಾನಕ್ಕೆ ವಿಕೃತಿಗೆ, ಅಜ್ಞಾನಕ್ಕೆ ತಿರುಗಿತ್ತು ಹೇಳಿ ಎನ್ನ ನಿಗಮನ !

ಇರಲಿ ! ವಿಜ್ಞಾನ ಹೇಳಿದ್ದರ  ನಮ್ಮ ಋಷಿಗೊ ಅದರಿಂದ ಮದಲೇ ವಿವರುಸಿದ್ದು ಹೇಳುವದಕ್ಕೆ ಇನ್ನೊಂದು ಉದಾಹರಣೆ ನಮ್ಮ ದರ್ಶನಂಗೊ . ವೈಷೇಶಿಕರಲ್ಲಿ ಮದಾಲು ನೆಂಪಿಂಗೆ ಬಪ್ಪ ಋಷಿ ಕಣಾದ. ಅವ ಹೇಳಿದ ಕಣ ಸಿದ್ಧಾಂತ ಆಧುನಿಕ ಮಹಾವಿಜ್ಞಾನಿಗಳ ದರ್ಶನಕ್ಕೇನೂ ಕಮ್ಮಿ ಅಲ್ಲ. ಅವನ ಕಾಲಲ್ಲಿ ಇಲೆಕ್ತ್ರಾನಿಕ್ ಮೈಕ್ರೋಸ್ಕೋಪು ಇದ್ದತ್ತಿಲ್ಲೆನ್ನೆ, ಹಾಂಗಾಗಿ ದೃಷ್ಟಿಗೆ ತೋರುಸಲೆ ಆಗಿರ. ಆದರೆ ಅಂದ್ರಾಣ ಋಷಿಗೊಕ್ಕೆ ವಿಶೇಷ ಶಕ್ತಿಗೊ ಇದ್ದತ್ತು, ಹಾಂಗಾಗಿ ಅವಕ್ಕೆ ಈ ಇರುವಿಕೆಗಳ ಅನುಭವಿಸಲೆ ಎಡಿಗಾಗೆಂಡಿದ್ದತ್ತು . ಆಧುನಿಕ ಕಾಲಲ್ಲಿಯೂ ರಮಣ ಮಹರ್ಷಿಗೊಕ್ಕೆ, ರಾಮಕೃಷ್ಣ ಪರಮಹಂಸರಿಂಗೆ ಎಲ್ಲಾ ಇದು ಸಧ್ಯ ಆಗಿದ್ದತ್ತು ಹೇಳಿ ನಿದರ್ಶನಂಗೊ ನವಗೆ ಸಿಕ್ಕುತ್ತು.

ಈ ಪುರುಷ ಮತ್ತು ಸ್ತ್ರೀ ತತ್ವಂಗಳಲ್ಲಿ ಆಧುನಿಕ ವಿಜ್ಞಾನ ಮೇಟರ್, ಎಂಟಿ ಮ್ಯಾಟರುಗಳ ಸುಳಿವು ಕಂಡವೋ  ಕ್ವಾರ್ಕ್, ಪ್ರತಿ ಕ್ವಾರ್ಕುಗಳ ನಂತರ ಹುಡುಕಲೆ ಇದು ಸಹಾಯ ಆತೋ  ?

ಅಂತೂ ಕಣಂಗಳಲ್ಲಿ ಸೃಷ್ಟಿ  – ಭೌತಿಕವಾಗಿ ಇಪ್ಪ ರೂಪಂಗಳ ವಸ್ತುಗಳ – ಸುರು ಆತು . ಈ ಕಣಂಗಳಲ್ಲಿ ಕೆಲವಕ್ಕೆ  ವಿಶೇಷ ಶಕ್ತಿ ಎಲ್ಲಿಂದಲೋ ಬಂದು, ಅದರಿಂದ ಜೀವಕೋಶಂಗೊ ಉಂಟಾತು….

ಈ ಎಲ್ಲಿಂದಲೋ ಬಂದ ಶಕ್ತಿಯ ನಮ್ಮ ಋಷಿಗೊ ಪರಬ್ರಹ್ಮಂಗೆ ಕನೆಕ್ಟು ಮಾಡಿದ್ದವು.

” ಆದಿಯಲ್ಲಿ ಬ್ರಹ್ಮ ಸ್ವಯಂಭೂವಾಗಿ ಸೃಷ್ಟಿಯ ಮದಲು ತಪಸ್ಸು ಮಾಡೆಂಡಿದ್ದಿದ್ದ. ಆಂಬಗ ಅವನ ಬಾಯಿಂದ ’ಓಂ”-ಕಾರ ಕೇಳೆಂಡಿದ್ದತ್ತು, …. ಸಮಯಲ್ಲಿ , ಅವನ ಮುಂದೆ ಆದಿಮಾಯೆ ಪ್ರತ್ಯಕ್ಷ…..’  -ಎಲ್ಲಾ ಅಜ್ಜಿಕಥೆಗಳಲ್ಲೂ ಈ ರೀತಿಯ ಪ್ರಸಂಗ ಕೇಳಿದ್ದು ಅಲ್ಲದೋ ? ಕಥೆಗೊಕ್ಕೆ , ಅದೂ ಪುರಾಣ ಕಥೆಗೊಕ್ಕೆ ಒಂದು ಹೆನ್ನಲೆ, ಉದ್ದೇಶ ಇರ್ತು. ಸುಲಭಗ್ರಾಹ್ಯ ಅಲ್ಲದ್ದ ವಿಚಾರಂಗಳ ನವಗೆ ತಿಳುಶಲೆ ಮಾಡಿದ ಪುರಾಣಕಥೆಗೊ ಈ ರಹಸ್ಯಂಗಳ ಸರಳವಾಗಿ, ಕೆಲ ಸಂಧರ್ಭಂಗಳಲ್ಲಿ ಅನೂಹ್ಯವಾದ, ಭಯ, ಕುತೂಹಲ ಹುಟ್ಟುಸುವ ರೂಪಲ್ಲಿ ನಿರೂಪಣೆ ಮಾಡಲೆ ಆ ದಾರಿಯ ಹಿರಿಯಜ್ಜ, ಅಜ್ಜಿಗೊ ಸಿಲೆಕ್ಟು ಮಾಡಿಯೊಂಡವು. ! ಶಕ್ತಿಗೆ ಆತ್ಮ, ಅವಿನಾಶೀ, ದೇವರು, ನಾರಾಯಣ ಹೇಳಿ ಹೆಸರುಸಿ, ಅದಕ್ಕೆ ಮತ್ತೆ ಸರ್ವರನ್ನೂ ಬಗ್ಗುಸಲೆ ಪೂಜೆ, ಭಜನೆಗಳ ಕಲ್ಪನೆ ಮಾಡಿದವು!   ಆನೂ ಇದರ ಬರವಗಳೂ ದೇವರ ಅಲ್ಲಗಳವಲೆ ಧೈರ್ಯ ಮಾಡುತ್ತಿಲ್ಲೆ !! ದಿನಾ ಪೂಜೆ –  ಎರಡು ಹೂ ಹಾಕಿ , ಎನ್ನ ಕ್ರಮಲ್ಲಿ- ಮಾಡದ್ದೆ ಇದ್ದರೆ ಎಂತೋ ಕಸಿವಿಸಿ !

{ಹಾಂಗೆ ಒಂದು ರಜ ಕಥೆಗೊ ಅವೇ ಶಾಸ್ತ್ರಂಗಳೂ ಆಗಿ,  ಮುಂದೆ ಬೇರೆ ಬೇರೆ ಕಾಲಂಗಳಲ್ಲಿ ಅಂದ್ರಾಣ ಅಗತ್ಯಂಗೊಕ್ಕೆ ಬೇಕಾದಹಾಂಗೆ ನೆಂಪು ಮಾಡಿದವು ಆಯಾ ಕಾಲದ”ಮನು “ಗೊ . }

ಹೆಂಡತಿ ಹಲಸಿನ ಹಣ್ಣು ಕೊರೆತ್ತಾ ಇದ್ದು ! ಪರಿಮ್ಮಳಲ್ಲಿ, ಕೂಬಲೆ ಎಡಿತ್ತಿಲ್ಲೆ.! ಇನ್ನು ರಜಾ ಸ್ವಾಹಾ ಮಾಡಿಕ್ಕಿಯೇ ಮುಂದೆ ! ದೇವರೇ ಈ ಅಪರಾಧಕ್ಕೆ ಕ್ಷಮೆ ಇರಲಿ !! !  😉 😉

ಈ ಕಣಲ್ಲಿ ಪರಮಾತ್ಮನ ಅಂಶ -ಆತ್ಮದ ತುಣುಕು ಎಂಟರ್ ಆಗಿ, ಅಲ್ಲಿ ಜೀವಕೋಶ ಆತು, ಈ ಜೀವಕೋಶ ಮುಂದೆ ಹಂತಂಗಳಲ್ಲಿ, ಜೀವಿಯಾಗಿ ಮತ್ತೆ ಕೊನೆಯಲ್ಲಿ “ಸುಕೃತ” (ಸು – ಕೃತ ; ಶಬ್ದ ವಿಘಟನೆ ಎನ್ನದು) ಶರೀರ- ಮಾನವ ಜನ್ಮಕ್ಕೆ ಬಂತು – ಇದು “ಗರುಡ ಪುರಾಣ ” , ಇನ್ನು ಇತರ ಶಾಸ್ತ್ರಂಗಳಲ್ಲೂ ಸಿಕ್ಕುವ ವಿವರಣೆ.{ನಮ್ಮ ಬೋಧಾಯನ ಆಚಾರ್ಯರೇ ಮೊದಲಾಗಿ ಆಚಾರ್ಯರುಗೊ ಈ ಆತ್ಮ  ಸುಕೃತ  ಶ್ರೀರಲ್ಲಿಪ್ಪಗ ಮಾಡೆಕ್ಕಾದ ಸಂಸ್ಕಾರಂಗಳಲ್ಲಿ ಹೇಳುವದು ಈ ಸು ಕೃತ ಮತ್ತೆ ವಿಕೃತ ಆಗದ್ದೇ ಇಪ್ಪಲೆ. }

ಪ್ರತೀ ಜೀವಕೋಶಕ್ಕೂ ಅದರದ್ದೇ ಆದ ಕೆಲಸಂಗೊ ಇದ್ದ ಹಾಂಗೇ ನಮ್ಮ ಶಾಸ್ತ್ರಂಗೊ ಜೀವಿಗಳ ಕೆಲಸಂಗಳನ್ನೂ  ಹೇಳುತ್ತವು. ಅದರಿಂದ ಸೃಷ್ಟಿಯ ಪೋಷಣೆಯೂ ಆವುತ್ತು. ಉದಾ: ಲೇಕ್ಟೋಬೆಸ್ಸಿಲ್ಲೈ ಬೆಕ್ಟೀರಿಯಾ ಸರಿಯಾಗಿ ಕೆಲಸ ಮಾಡಿರೆ ಹಾಲು ಒಳ್ಳೆ ಮಸರಕ್ಕು. ಅಲ್ಲದ್ರೆ ,  ಉಂಡವನ ಗತಿ . . . ಮನೆಂದ ಹೆರವೇ ಇರಕಕ್ಕು ! ! ! ಜೀವಿಗೊ ಅವಕ್ಕೆ ಇಪ್ಪ ರೋಲ್ ಸರಿಯಾಗಿ ನಿಭಾಯಿಸಿಯಪ್ಪಗ ಅದು ಸೃಷ್ಟಿಗೆ ಪೋಷಕವಾಗಿ, ನಾವು ಈಗ ಅಂಬಗಂಬಗ ಕೇಳುವ ಹಾರ್ಮೊನೀ ವಿಥ್ ನೇಚರ್ ಆವುತ್ತು ಅಲ್ಲದೊ?

ವಿಜ್ಞಾನಲ್ಲೂ ಹೀಂಗೆ ಮೇಟರ್-ಎಂಟಿ ಮೇಟರ್ ಹೇಳುವ ಸಂಗತಿ ಥಿಯರಿಯಾಗಿ ಇದ್ದು. ಸೃಷ್ಟಿಯ ವಿವರುಸುವ ಭೌತಜ್ಞರು ಅಸಂಖ್ಯ ಸೌರವ್ಯೂಹಗಳ ಸಧ್ಯತೆ ಹೇಳಿತ್ತವು. ಹಾಂಗೇ ಬ್ಲೇಕ್ ಹೋಲ್ಗಳನ್ನೂ ತೋರುಸುತ್ತವು. ತತ್ವ-ಪ್ರತಿ ತತ್ವಂಗಳ ಪ್ರತಿಪಾದನೆಲಿ ವಿಶ್ವದ ಹುಟ್ಟು ಸಾವುಗಳ ಸಾಧ್ಯತೆಯ ವಿವರುಸುತ್ತವು .

ಜೀವಿಗೊಕ್ಕೆ ಕೊಟ್ಟ ರೋಲ್ ಸರೀ ಮಾಡಿದ ಆಹಂ ಇಪ್ಪ ಆತ್ಮ { ಆತ್ಮದ “ಕೆಡು” ಅಹಮ್ ಹೆಳುವ ಭಾವ- ಇದು ಆ ಆತ್ಮದ -ಆ ರೂಪಲ್ಲಿ ಮಾಡೆಕಾದ ರೋಲಿಂಗೆ ಸಹಜ ಸ್ವಭಾವ,(ಆಧುನಿಕ ಮನಃ ಶಾಸ್ತ್ರದ ಸೆಲ್ಫ್ ಇಮೇಜ್) } ಮು೦ದೆ ಇನ್ನೂ ಒಳ್ಳೆ ರೋಲಿಂಗೆ ಪ್ರಮೋಟ್ ಆವುತ್ತು. ( ಈ ಭಾಶೆ ಎನ್ನದು, ಭಾವ ಎನಗೆ ಕಲುಶಿದ ಎಲ್ಲ ಪುಸ್ತಕ, ಗುರುಗಳದ್ದು} ಈ ರೀತಿ ಸುಕೃತ ಶರೀರ ಬಪ್ಪಗ ಆ ಆತ್ಮಕ್ಕೆ ಯೋಚನೆ , ಇಂದ್ರಿಯಾನುಭವ ಎಲ್ಲ ಬಪ್ಪ ಹಂತ ಆವುತ್ತು. ಅದಕ್ಕೇ ಚೆನ್ನೈ ಭಾವ ಬರದ್ದದು” ಜಂತೂನಾಮ್ ನರಜನ್ಮಂ ದುರ್ಲಭಂ !  ಇಲ್ಲಿಗೆತ್ತಿಯಪ್ಪಗ ಕೆಡು ಬಿಡುವ ಅವಕಾಶ ಆತ್ಮಕ್ಕೆ ಸಿಕ್ಕುತ್ತು. ಆದರೆ ಕೆಲವೇ ಶರೀರಲ್ಲಿಪ್ಪ ಆತ್ಮಂಗೊಕ್ಕೆ ಅದು ಸಾಧ್ಯ ಆವುತ್ತು. ಉಳುದವಕ್ಕೆ, ಶರೀರವೇ ಎಲ್ಲಾ ಆಗಿ ಅವಕಾಶ ತಪ್ಪಿ ಹೋವುತ್ತು, ಅಥವಾ ಮತ್ತೆ ಈ ಶರೀರಕ್ಕೆ ಇಪ್ಪ ರೋಲಿನ ಸರೀ ಮಾಡಲೆಡಿಯದ್ದೆ, ಮತ್ತೆ, “ಕೆಡು” ಹತ್ತುತ್ತು ! ಇದರಿಂದಾಗಿ ಪುನಃ ಬೇರೆ ಬೇರೆ ರೋಲು ಮಾಡಿ , ಮಾಡಿ ಬಳಲೆಕಾವುತ್ತು.

ತತ್ ತ್ವಂಗಳ ಪ್ರಕಾರ , ಹಾಂಗೇ ನಮ್ಮ ಲೌಕಿಕ ಅರ್ಥಲ್ಲೂ – ದೊಡ್ಡಾದರಲ್ಲಿ, ಸಣ್ಣದು ವಿಲೀನ ಆದರೆ ಸಹಜ ಅಲ್ಲದೋ? !ಇದೇ ರೀತಿ, ಜೀವಾತ್ಮ, ಪರಮಾತ್ಮಲ್ಲಿ ಸೇರೆಕಾದ್ದು ಸಹಜ. ಅದೇ ಜೀವಾತ್ಮದ ಅಂತಿಮ  ಗುರಿ. ಅಲ್ಲಿಂದ ಅದು ಮತ್ತೆ ಪುನಃ ಹೊಸ ಸೃಷ್ಟಿಗೆ ಸಹಕಾರ ಕೊಡೆಕು . ಅದು ಆಗದ್ದೆ ಇಪ್ಪಗ, ಸೃಷ್ಟಿಲಿ ನೆಗೆಟಿವ್ ಅಂಶಂಗೊ ಪ್ರವರ್ಧಮಾನಕ್ಕೆ ಬತ್ತು. ಇದರ ಬೇಲೆನ್ಸು ಮಾಡಲೆ ಹೆಚ್ಚು ಶಕ್ತಿ, ದೊಡ್ಡ ರೋಲ್ ಇಪ್ಪ ನಾಯಕರುಗೊ ಸುಕೃತ ಶರೀರಲ್ಲಿ ಬತ್ತವು. ಇದು ಆಚಾರ್ಯರ ರೂಪಲ್ಲೋ ಅವತಾರಂಗಳ ರೀತಿಲೋ ಆವುತ್ತು ಒಂದಾದರೆ, ಇನ್ನೊಂದು ಈ ನೆಗೆಟಿವ್ ಶಕ್ತಿಯೇ ವಿನಾಶರೂಪಿ  ವೈರಸ್ಸೋ ,ಬೆಕ್ಟೀರಿಯಾವೋ ಆವುತ್ತೋ?  ಉದಾಃ  ಸುಕೃತ ಶರೀರಲ್ಲಿಪ್ಪವು ತುಂಬಾ ವಿಕೃತ ಚರ್ಯೆ ಮಾಡಿದರೆ ಬಪ್ಪ  ಮಾರಿ AIDS ಹಾಂಗೆ ! .

ಅದಕ್ಕಾಗಿಯೇ ಸುಕೃತ ಶರೀರಿಗೆ ಮನಸ್ಸು ಇಪ್ಪದು. ಚಿಂತನೆ ಮಾಡುವ ಕೆಪೇಸಿಟಿ ಇಪ್ಪದು. ಇದರ ಒಟ್ಟಿಂಗೆ ಆ ಜೀವಿಗೆ ತನ್ನ ತಿಳಿವ ಒಳಿತಿನ ಬಗ್ಗೆ ಚಿಂತನೆ ಮಾಡುವ, ತನಗಿಂತ ಕಮ್ಮಿ ಕೆಪೇಸಿಟಿ ಇಪ್ಪ ಸೃಷ್ಟಿಯ ಇತರ ಜೀವಿಗಳ ಋಣಾತ್ಮಕ ಅಥವಾ ಧನಾತ್ಮಕವಾಗಿ ಬಾಧಿಸುವ ಶಕ್ತಿ ಕೂಡ ಇದ್ದನ್ನೇ ? ತೇನ ತ್ಯಕ್ತೇನ ಭುಂಜೀತಾ..ವ ತಿಳಿಯುವ ತಿಳಿಶುವ ಕೆಲಸದ ಬದಲು ಸರ್ವಸ್ವವನ್ನೂ ತಿಂದು ತೇಗುವ ವಿಕೃತಿ ಮಾಡುವಗಳೂ ,ಒಳಾಂದಲೇ ತಾನು ಮಾಡುವದು ಸರಿ ಅಲ್ಲ ಹೇಳಿ ಒಳಾಂದೊಳ ಚುಚ್ಚುವ ಅಂಶವೂ ಅಲ್ಲೇ ಇದ್ದು. ಪರಮಾಣುವಿನ ಒಳ ಕ್ವಾರ್ಕು-ಪ್ರತಿ ಕ್ವಾರ್ಕು ಇಪ್ಪ ಹಾಂಗೇ ! ಸ್ಮೃತಿಗಳಲ್ಲಿಯೋ,ಶಾಸ್ತ್ರಂಗಳಲ್ಲಿಯೋ ಕೆಲವು ಅಂಶಂಗಳಹೇಳಿದ್ದು, ಹೀಂಗೇ ಮಾಡೆಕು ಹೇಳಿವ ಕಟ್ಟಳೆಗಳ ಮಾಡಿದ್ದು ಇದಕ್ಕೇ. ಧನಾತ್ಮಕ ಶಕ್ತಿಗಳ ಬಲ ಹೆಚ್ಚು ಮಾಡಲೆ.

ಈ ಧನಾತ್ಮಕ ಶಕ್ತಿ ಹೇಳಿರೆ ಎಂತ? ..ಇದರ ನಿರ್ವಚನ ಹೇಂಗೆ?  ಛೇ.. ಆನು ಇದರ ರಜಾ ಸೂಚಿಸದ್ದರೆ, ಬಾಲಿಶ್- ಬಾಲಿಶವೇ ಅಕ್ಕು !

ಉದಾಹರಣೆ  ೧: ದಾರಿಲಿ ಆರೋ ಬಿದ್ದು ತಾಗಿದ್ದು, ನೆತ್ತರು ಹರಿಶೆಂಡಿಪ್ಪವನ ಕರೇಲಿ ಕೂರುಸಿ, ಗಾಯಕ್ಕೆ ರಜಾ ಎಂತಾರೂ ಮದ್ದೋಮಣ್ಣೋ ಮಾಡಿರೆ ನವಗೆ ಎಂತೋ ಸಮಾಧಾನ ಆವುತ್ತಲ್ಲದೋ ?

೨: ಅಣ್ಣಾ ಹಜಾರೆಯ ಚಳವಳಿ ಪೇಪರಿಲ್ಲಿ ಓದಿ ನಮ್ಮಷ್ಟಕೇ ನಾವು ನಾಕುಜನ ಮಾತಾಡಿಯೊಂಡಪ್ಪಗಳೂ ಅಪ್ಪ ಒಂದು ರೀತಿಯ ಸಮಾಧಾನ. . .

೩; ಒಪ್ಪಣ್ಣಲ್ಲಿ ಓದಿಯಪ್ಪಗ ಖುಶಿ ಆಗಿ ಒಪ್ಪ ಕೊಟ್ಟಪ್ಪಗ ಅಪ್ಪ ಖುಶಿ….

೪; ಗವರ್ಮೇಂಟು ಕೆಲಸಲ್ಲಿ -ಅದೂ ರಿಜಿಸ್ತ್ರಿ ಆಫೀಸಿನ ಹಾಂಗಿಪ್ಪ ಕಮಾಯಿ ಇಪ್ಪಲ್ಲೂ .. ಗಾಂಧೀ ಹೇಳಿ ಸಹೋದ್ಯೋಗಿಗೊ ನೆಗೆ ಮಾಡಿರೂ , ಲಂಚವೋ..ಇನ್ನೆಂತದೋ ತೆಕ್ಕೊಳದ್ದೆ ಮನೆಗೆ ಬಂದಪ್ಪಗ ಇರುಳು ಬಪ್ಪ ಕೆಟ್ಟ ಕನಸಿಲ್ಲದ್ದ ಒರಕ್ಕು…

ಎಲ್ಲವೂ ನಮ್ಮ , ನಮ್ಮ ಪರಿಧಿಯ ಒಳ ಇಪ್ಪವರ ಖುಶಿಪಡುಸುತ್ತು. ಈ ಖುಶಿ ಅವರನ್ನೂ ಖುಶಿ ಪಸರುಸುವ ಹಾಂಗೆ ಮಾಡುತ್ತು. ಮೋಡರ್ನ್ ಮನಶಾಸ್ತ್ರ ಇದರ ಸ್ತ್ರೋಕ್ಸ್ ಥಿಯರಿಲಿ ವಿವರುಸುತ್ತು. ಮನುಷ್ಯ , ಮನುಷ್ಯರ ನೆಡುಕೆ ಖುಶಿ ಬೆಳೆಸುವ ರೀತಿಯ. ನಮ್ಮಷ್ಟಕ್ಕೆ ನಾವೇ ಈ ಖುಶಿ ಅನುಭವಿಸೆಕಾದರೆ ಪೂಜೆಯೋ, ಧ್ಯಾನವೋ ಮಾಡೆಕು. ಈ ಖುಶಿ ಮತ್ತೆ ಬೇರೆ ಯಾವ ಭಾವನೆಗೊಕ್ಕೂ ಸಂಕ ಹಾಕುತ್ತಿಲ್ಲೆ, ಖುಶಿ -ಖುಶಿಲೇ ಅಂತ್ಯ ಆವುತ್ತ ಬಗೆ. ಇದು ಸಿನೇಮಾ ನೋಡುವುದರಲ್ಲಿಯೋ, ಆಟ ಆಡುವುದರಲ್ಲಿಯೋ ಇಲ್ಲೆ, ಏಕೆ ಹೇಳಿರೆ, ಅದರಲ್ಲಿ ಉದ್ದೇಶ ಸ್ವಂತಕ್ಕೆ ಸುಖವೋ, ಖುಶಿಯೋ ತೆಕ್ಕೊಂಬದು. ಈನ್ನೊಬ್ಬರಿಂಗೆ , ಅಥವಾ ತನಗೆ ಅಲ್ಲದ್ದೆ ಇಪ್ಪ ಸ್ಟ್ರೋಕ್ಸು ಧನಾತ್ಮಕವಾದ್ದು, ಪ್ರತಿ ಶಕ್ತಿಗಳ ಬಲ ತಗ್ಗುಸುತ್ತು. ಇದರಿಂದ ವ್ಯಕ್ತಿಯ ಇಮೇಜೂ ದೊಡ್ಡ ಆವುತ್ತು, ಸುಕೃತ ಶರೀರದಲ್ಲಿಪ್ಪ ಆತ್ಮದ ಗುರಿಗೂ ಅದು ಸಹಾಯಕ ಆವುತ್ತು. !

ಎನ್ನ ಮಟ್ಟಿಂಗೆ ಉದ್ಧರೇತ್ ಆತ್ಮನಾತ್ಮಾನಾಂ…ಕೂಡಾ ಇದೇ  ! !  ತಪ್ಪಿದ್ದರೆ, ತಿಳುಶಿ, ತೆಳುಶಿ.. ತಿದ್ದಿಗೊಂಬೆ .

ಜಯವಿಜಯರ ತ್ರಿಜನ್ಮ ಮೋಕ್ಷದ ಕಥೆ , ರಾಮ ರಾವಣರ ಕಥೆ (ಋಷಿಯ ಮಗ ರಾಕ್ಷಸ, ಕ್ಷತ್ರಿಯ ದೇವರು,) ಹಾಂಗೆ ಈಗ ಅಘೋರೀ ಪಂಥ, ನಾಗಾ ಸಾಧೂಗಳ ನಂಬಿಕೆ ಎಲ್ಲ ಇದರ ಹಿನ್ನಲೆಲಿ ನೋಡಿರೆ, ಋಣಾತ್ಮಕ ರೋಲ್ ಕೂಡಾ ಆದರ ಪೂರ್ತಿ ಸಾಧ್ಯತೆಗಳಲ್ಲಿ ಉಪಯೋಗಿಸಿದರೆ, ಅದರಿಂದ ಸೃಷ್ಟಿಯ ಧನಾತ್ಮಕತೆಯ ಪೋಷಣೆ ಸಾಧ್ಯವೋ ? ಇದು ಈಗ ಇದರ ಬರೆತ್ತಾ ಇಪ್ಪಗ ಎನಗೆ ಬಂದ ಪ್ರಶ್ನೆ. ಆಲೋಚನೆ ಮಾಡೆಕು..! ಪ್ರತಿ ತತ್ವಂಗೊಕ್ಕೆ ತತ್ವದ ವಿಜಯ ಅಥವಾ ಪೊಸೆಟಿವಿಟಿಯ ಬೆಳಶುವಲೆ ಮಾತ್ರ ಸಾಧ್ಯ ಏಕೆ? ಪರಮಾಣು ಶಕ್ತಿಯ ಬಳಸುವಲೆ ಎಡಿಗಾದ ನವಗೆ, ಅದರಿಂದ ಬಪ್ಪ ವಿಕಿರಣಂಗಳ ಇಲ್ಲದ್ದೆ ಮಾಡಲೆ ಏಕೆ ಎಡಿಗಾಯ್ದಿಲ್ಲೆ?

ಕ್ಲೋನಿಂಗಿಂದ ಇನ್ನೊಂದು ಜೀವಿಯ ಬೆಳೆಶಲೆ ಎಡಿಗಾದ ನವಗೆ, ಶಿಖಂಡಿಗಳ ಸರಿಮಾಡಲೆ ಏಕೆ ಎಡಿಗಾಯಿದಿಲ್ಲೆ? ಸುಕೃತ ಶರೀರಲ್ಲಿಯೇ ಬಂದ ಜೀವಿಯಲ್ಲಿಪ್ಪ ವಿಕೃತಿ ಏಕೆ ಒಳಿತ್ತು ?

ಎಂತೋ ಬರೆತ್ತೆ ಹೇಳಿ ಎಲ್ಲೆಲ್ಲಿಗೋ ಹೋದೆನೋ….ಬೈದಿಕ್ಕೆಡಿ.!

(ಮು೦ದಾಣದ್ದು ರಜಾ ಕಳುದು ..)

ಬಾಲಿಶ್. . . . ೬, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಬಾಲಣ್ಣನ ಶೈಲಿ ಮನೋಹರವಾಗಿದ್ದು. ಬಹು ವಿಷಯಗಳೂ ಅಡಕ. ಬರೆತ್ತಾ ಇರಿ ಹೇಳಿ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಬಾಲಣ್ಣನ “ಬಾಳಿಶ್” ಓದಿ ಅಭಿಪ್ರಾಯ ತಿಳುಸುಲೆ ಎನಗೆ ಬುದ್ದಿ ಸಾಲ – ತತ್ವ ಶಾಸ್ತ್ರ, ಪುರಾಣ ಪುಸ್ತಕ ಓದಿದ್ದು ಕಡಮ್ಮೆ. ಹಾಂಗೇಳಿ ಈ ಬರಹಂಗಳ ಓದುತ್ತಾ ಇದ್ದೆ.. ಒಪ್ಪ ಇಲ್ಲದ್ದರೆ ಓದಿದ್ದಾವಿಲ್ಲೆ ಹೇಲಿ ಗ್ರೇಶುದು ಬೇಡ. “ಬಾಲಿಶ್” ಇನ್ನೂ ಬರಲಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಅನುಶ್ರೀ ಬಂಡಾಡಿಕಾವಿನಮೂಲೆ ಮಾಣಿಜಯಶ್ರೀ ನೀರಮೂಲೆಯೇನಂಕೂಡ್ಳು ಅಣ್ಣತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°ದೀಪಿಕಾಸುಭಗದೊಡ್ಡಭಾವಒಪ್ಪಕ್ಕಕೊಳಚ್ಚಿಪ್ಪು ಬಾವದೊಡ್ಮನೆ ಭಾವಅಕ್ಷರ°ನೆಗೆಗಾರ°ದೊಡ್ಡಮಾವ°ಬೊಳುಂಬು ಮಾವ°ಉಡುಪುಮೂಲೆ ಅಪ್ಪಚ್ಚಿಕಳಾಯಿ ಗೀತತ್ತೆಕಜೆವಸಂತ°ನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿಮುಳಿಯ ಭಾವಡೈಮಂಡು ಭಾವವೇಣೂರಣ್ಣವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ