ಬೆಲೆ ಹೆಚ್ಚಿದ್ದು, ಹಣದುಬ್ಬರ ದರ ಇಳುದ್ದು! – ಇದು ಹೇಂಗೆ?

January 28, 2011 ರ 5:35 pmಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ಎಲ್ಲೋರೂ ಕೇಳುವ ಪ್ರಶ್ನೆ! ಆರಿಂಗೂ ಅರ್ತ ಆಗದ್ದ ವಿಷಯ!!
ಒಟ್ಟು ಕನ್ಫ್ಯೂಶನ್!!!
ಹೆಚ್ಚಾಗಿ ಪ್ರತಿ ವಾರ ಪೇಪರಿಲ್ಲಿ ಒಂದು ಸಣ್ಣ ಸುದ್ದಿ ಇರುತ್ತು – ‘ಕಳುದ ವಾರ ಹಣದುಬ್ಬರದ ದರ 6.1ರಿಂದ 5.8 ಕ್ಕೆ ಇಳುದ್ದು ಅತವಾ 5.3 ಕ್ಕೆ ಇಳುದ್ದು’ ಹೇಳಿ.
ಆದರೆ ನಾವು ಅಂಗ್ಡಿಂದ ತೆಗವ ಯಾವ ಸಾಮಾನಿಂಗೂ ಕ್ರಯ ಕಮ್ಮಿ ಆದ್ದು ಕಾಣ್ತಿಲ್ಲೆ. ಮತ್ತೆಂತದು ಇಳುದ್ದದು? ಬೆಲೆ ಇಳಿಯದ್ದೆ ಹಣದುಬ್ಬರ ಇಳುದ್ದು ಹೇಂಗೆ?
ಇದು ಅರ್ತ ಆಯೆಕ್ಕಾದರೆ, ನಮ್ಮ ದೇಶಲ್ಲಿ ಹಣದುಬ್ಬರ(Inflation rate)ವ  ಹೇಂಗೆ ಲೆಕ್ಕ ಹಾಕುತ್ತವು ಹೇಳೊದು ಗೊಂತಿರೆಕು.
ಭಾರತಲ್ಲಿ ಬೆಲೆಯೇರಿಕೆಯ ಅಳವಲೆ “ಸಗಟು ಬೆಲೆ ಸೂಚ್ಯಂಕ”(Wholesale Price Index – WPI )ವ ಉಪಯೋಗುಸುತ್ತವು. ಈ ಉದ್ದೇಶಕ್ಕೆ ಸಗಟು (ರಖಂ) ಸೂಚ್ಯಂಕವ ಉಪಯೋಗುಸುವ ದೇಶ ಬಹುಶಃ ಭಾರತ ಒಂದೇ.
ಮುಂದುವರುದ ಎಲ್ಲಾ ದೇಶಂಗಳಲ್ಲಿ ಗ್ರಾಹಕ ಬೆಲೆಗಳ ಸೂಚ್ಯಂಕ (Consumer Price Index – CPI)ವನ್ನೇ ಉಪಯೋಗಿಸಿ ಹಣದುಬ್ಬರವ ಅಳೆತ್ತವು.
ಇವೆರಡಕ್ಕೆ ಇಪ್ಪ ವೆತ್ಯಾಸ ಎಂತದು?
ರಖಂ ಬೆಲೆ ಹೇಳಿದರೆ ವ್ಯಾಪಾರ ಸುರುವಪ್ಪ ಹೋಲ್ ಸೇಲ್ ಮಾರ್ಕೆಟಿಲ್ಲಿಪ್ಪ ಕ್ರಯ. ಗ್ರಾಹಕ ಬೆಲೆ ಹೇಳಿದರೆ ವ್ಯಾಪಾರದ ಅಂತಿಮ ಹಂತಲ್ಲಿಪ್ಪ ಬೆಲೆ (ಚಿಲ್ಲರೆ ಬೆಲೆ).
ನಾವು ಗ್ರಾಹಕರು. ನಾವು ಸಾಮಾನುಗಳ ತೆಕ್ಕೊಂಬದು ಚಿಲ್ಲರೆ ಮಾರುಕಟ್ಟೆಲಿ.
ನಮ್ಮ ದೇಶಲ್ಲಿ ಎಷ್ಟೋ ಜೆನ ಅರ್ಥಶಾಸ್ತ್ರಜ್ಞರು ಇದು ಸರಿ ಅಲ್ಲ, ಗ್ರಾಹಕ ಸೂಚ್ಯಂಕವನ್ನೇ ಉಪಯೋಗುಸೆಕ್ಕು ಹೇಳ್ತವು. ಆದರೆ ಇಷ್ಟ್ರವರೆಗೆ ಸರಕಾರ ಇದರ ಒಪ್ಪಿದ್ದಿಲ್ಲೆ.
ಇದು ಕಳುದ ಶತಮಾನದ ಸುರುವಿಂದಲೇ ಮುಂದುವರುಕ್ಕೊಂಡು ಬಂದ ಕ್ರಮ ಭಾರತಲ್ಲಿ. ನಮ್ಮ ದೇಶಲ್ಲಿ  ಈ ಸೂಚ್ಯಂಕವ ಹೇಂಗೆ ಲೆಕ್ಕ ಮಾಡ್ತವು  ಹೇಳಿ ತಿಳಿಯೆಕ್ಕಾದರೆ  ಇಲ್ಲಿದ್ದು, ನೋಡಿ:
( http://www.eaindustry.nic.in – ಈ ಸಂಕೋಲೆಯ ಹಿಡುದು ನೇಲಿ – ಒಪ್ಪಣ್ಣ ಹೇಳುವ ಹಾಂಗೆ.)
ಬೆಲೆಯ ಸೂಚ್ಯಂಕ ಹೇಳಿದರೆ ಎರಡು ವರ್ಷಗಳ ಬೆಲೆಗಳ ಹೋಲಿಸಿ ಎಷ್ಟು ಹೆಚ್ಚಾಯಿದು ಅತವಾ ಕಮ್ಮಿ ಆಯಿದು ಹೇಳಿ ಲೆಕ್ಕ ಹಾಕಿ ತೋರುಸಲೆ ಇಪ್ಪದು.
ಇಲ್ಲಿ ಹಿಂದಾಣ ಒಂದು ವರ್ಷವ ಮೂಲ ವರ್ಷ (Base Year) ಹೇಳಿ ತೆಕ್ಕೊಂಡು, ಆ ವರ್ಷದ ಬೆಲೆಗೊಕ್ಕೆ ಈ ವರ್ಷದ ಬೆಲೆಗಳ ಹೋಲಿಕೆ ಮಾಡುವದು.
ಮೂಲ ವರ್ಷದ ಬೆಲೆಯ 100ಕ್ಕೆ ಸಮ ಹೇಳಿ ತೆಕ್ಕೊಂಬದು.
ಉದಾಹರಣಗೆ, ಈಗ ನಮ್ಮ ದೇಶಲ್ಲಿ ಹಣಕಾಸಿನ ವರ್ಷ 2004-05 ರ ಮೂಲ ವರ್ಷ(2004-05 = 100) ಹೇಳಿ ತೆಕ್ಕೊಳ್ತವು.
ಆ ವರ್ಷ 10 ರೂಪಾಯಿ ಕ್ರಯ ಇದ್ದ ಒಂದು ವಸ್ತುವಿಂಗೆ ಈ ವರ್ಷ 15 ರೂಪಾಯಿ ಬೆಲೆಯಾದರೆ, ಈಗಾಣ ಸೂಚ್ಯಂಕ 150 ಅಲ್ಲದೋ? ಆ ವಸ್ತುವಿನ ಬೆಲೆ ಶೇಕಡಾ 50ರಷ್ಟು ಹೆಚ್ಚಿದ್ದು ಹೇಳಿ ಅರ್ಥ.
ಆದರೆ ಸೂಚ್ಯಂಕ ಹೇಳಿದರೆ ಅದು ಸಾಮಾನ್ಯ ಬೆಲೆಯ ಮಟ್ಟದ ಏರಿಳಿಕೆಯ ಲೆಕ್ಕ ಮಾಡುವದು. ಆದ ಕಾರಣ ಜನಸಾಮಾನ್ಯರು ಉಪಯೋಗುಸುವ ಎಲ್ಲಾ ತರದ ಸಾಮಾನುಗಳ ಬೆಲೆಗಳ ಲೆಕ್ಕಕ್ಕೆ ತೆಕ್ಕೊಳ್ತವು.
ಕಳುದ ವರ್ಷದ ವರೆಗೆ 435 ವಸ್ತುಗಳ ಲೆಕ್ಕಕ್ಕೆ ತೆಕ್ಕೊಂಡಿತ್ತಿದ್ದವು. ಆವಾಗ 1993-94 ಮೂಲ ವರ್ಷ ಆಗಿತ್ತು. ಈಗ ಮೂಲ ವರ್ಷದ ಬದಲಾವಣೆಯ ಒಟ್ಟಿಂಗೆ ಸಾಮಾನುಗಳ ಸಂಖ್ಯೆಯನ್ನೂ 676ಕ್ಕೆ ಹೆಚ್ಚಿಸಿದ್ದವು; ಹಿಂದೆ ಇದ್ದ ಕೆಲವು ವಸ್ತುಗಳ ಬಿಟ್ಟು ಬೇರೆ ಹೊಸ ವಸ್ತುಗಳ ಸೇರಿಸಿದ್ದವು.
ಈಗ ಫ್ರಿಜ್, ವಾಶಿಂಗ್ ಮೆಶಿನ್, ಮೈಕ್ರೊವೇವ್ ಓವನ್, ಕಂಪ್ಯೂಟರ್, ಟೆಲಿವಿಶನ್,ಡಿಶ್ ಏಂಟೆನಾ, ಐಸ್ಕ್ರೀಮ್, – ಹೀಂಗಿಪ್ಪ ಸುಮಾರು ವಸ್ತುಗಳ ಸೇರಿಸಿದ್ದವು.
ಹೀಂಗೆ ಮಾಡಿದ್ದು ಎಂತಕೆ ಹೇಳಿದರೆ, ವರ್ಷ ಹೋದ ಹಾಂಗೆ ಕೆಲವು ವಸ್ತುಗಳ  ಪ್ರಾಮುಖ್ಯ ಜನರ ಬಳಕೆಲಿ ಕಮ್ಮಿ ಆವುತ್ತು; ಅದರ ಬದಲು ಬೇರೆ ಹೊಸ ವಸ್ತುಗಳ ಬಳಕೆ ಹೆಚ್ಚಾಗಿದ್ದರೆ ಆ ವಸ್ತುಗಳ ಸೇರುಸೆಕ್ಕಾವುತ್ತು.
ಇಲ್ಲದ್ದರೆ ಸೂಚ್ಯಂಕ ಬೆಲೆಯ ಮಟ್ಟವ ಸರಿಯಾಗಿ ಸೂಚಿಸಲೆ ಸಾಧ್ಯ ಇಲ್ಲೆ.
ಜನರ ದಿನ ನಿತ್ಯದ ಜೀವನಲ್ಲಿ ಎಲ್ಲಾ ವಸ್ತುಗಳ ಪ್ರಾಮುಖ್ಯತೆ ಒಂದೇ ರೀತಿ ಅಲ್ಲ.
ಆದ ಕಾರಣ, ಈ ಪ್ರಾಮುಖ್ಯತಗೆ ಸರಿಯಾಗಿ ವಸ್ತುಗೊಕ್ಕೆ ಭಾರ ಅತವಾ ತೂಕ (Weightage) ಕೊಡುತ್ತವು. ಎಲ್ಲಾ 676 ವಸ್ತುಗಳ ಒಟ್ಟು ಭಾರ 100.
ಅದರ ಪ್ರಾಮುಖ್ಯತಗೆ ಸರಿಯಾಗಿ ಹಂಚಿ ಹಾಕಿರುತ್ತವು. (ಈ 676 ವಸ್ತುಗಳ ವಿವರ, ಪ್ರತಿಯೊಂದು ವಸ್ತುವಿಂಗೆ ಕೊಟ್ಟ ತೂಕವ (ಪ್ರಾಮುಖ್ಯತೆಯ) ತಿಳಿಯೆಕು ಹೇಳುವ ಆಸಕ್ತಿ ಇಪ್ಪವು ಈ ಸಂಕೋಲೆಯ ಹಿಡುದು ನೇಲಲಕ್ಕು:
( http://eaindustry.nic.in/wpi_200405out.htm )
ಈ WPI ಹೇಳಿದರೆ ತೂಕ ಸೇರಿಸಿದ ಬೆಲೆಗಳ ಸರಾಸರಿ ಸೂಚ್ಯಂಕ.
ಸೂಚ್ಯಂಕವ ಪ್ರತಿಯೊಂದು ವರ್ಷ, ತಿಂಗಳು, ವಾರಕ್ಕೂ ಲೆಕ್ಕ ಹಾಕಿ ಕೊಡುತ್ತವು.
ವಾರದ ಸೂಚ್ಯಂಕವ ಎರಡು ವಾರಕ್ಕೆ ಒಂದು ಸರ್ತಿ (ಗುರುವಾರ, ಅಂದು ರಜೆ ಆದರೆ ಮತ್ತಾಣ ಕೆಲಸದ ದಿನ), ತಿಂಗಳಿನ  ಸೂಚ್ಯಂಕವ  ಮುಂದಾಣ ತಿಂಗಳಿನ 14ನೇ ತಾರೀಕಿಂಗೆ ಪ್ರಕಟುಸುತ್ತವು.
ವಾರದ ಸೂಚ್ಯಂಕ ಎರಡು ವಾರ ಹಿಂದಾಣ ವಾರದ್ದು. ವಾರದ ಸೂಚ್ಯಂಕ ಹೇಳಿದರೆ, ಆ ವಾರಲ್ಲಿ ಮುಗಿವ ವರ್ಷದ ಸರಾಸರಿ ಸೂಚ್ಯಂಕ.
ಹಣದುಬ್ಬರದ ದರವ ಲೆಕ್ಕ ಹಾಕುವ ಕ್ರಮ ಹೀಂಗೆ:
ವಾರ್ಷಿಕ ಹಣದುಬ್ಬರದ ದರ = (ವರ್ಷಾಂತ್ಯದ ಸೂಚ್ಯಂಕ – ವರ್ಷಾರಂಭದ ಸೂಚ್ಯಂಕ)/ವರ್ಷಾರಂಭದ ಸೂಚ್ಯಂಕ x 100.
ಉದಾಹರಣಗೆ 2001 ಜನವರಿ 1ಕ್ಕೆ ಸೂಚ್ಯಂಕ 106.09 ಮತ್ತೆ 2002 ಜನವರಿ 1ಕ್ಕೆ 109.72 ಆದರೆ,
2001ರ ಹಣದುಬ್ಬರದ ದರ = (109.72 – 106.09)/106.09 x 100 = 3.42% .
ಈ ರೀತಿ ಪ್ರತಿ ವಾರವೂ ಲೆಕ್ಕ ಹಾಕಿ ಕೊಡುವ ಸೂಚ್ಯಂಕವೇ ವಾರದ ಹಣದುಬ್ಬರದ ದರ.
ಪ್ರತಿ ವಾರ ಕೊಡುವ ಹಣದುಬ್ಬರದ ದರ ಎರಡು ವಾರ ಹಿಂದಾಣ ವಾರಕ್ಕೆ ಮೇಲೆ ಹೇಳಿದ ಕ್ರಮಲ್ಲಿ ಲೆಕ್ಕ ಹಾಕಿದ ವಾರ್ಷಿಕ ದರ.
ಈ ದರ ಇಳುದರೆ ಹಣದುಬ್ಬರದ ದರ ಇಳುದ್ದು  ಹೇಳುತ್ತವು. ಇದು ಅರ್ತ ಆದರೆ ನಾವು ನೋಡುವ ಬೆಲೆಗಳ ಏರಿಳಿತಂಗಳ ಇದು ಎಂತಗೆ ತೋರುಸುತ್ತಿಲ್ಲೆ ಹೇಳುವದು ಅರ್ತ ಅಕ್ಕು.
ಈಗ ಆಹಾರ ವಸ್ತುಗಳ ಹಣದುಬ್ಬರವ ಮಾಂತ್ರ ಪ್ರತ್ಯೇಕವಾಗಿಯೂ ಕೊಡುತ್ತವು. ಇಲ್ಲಿ ಆನು ಸ್ಥೂಲವಾಗಿ ಹೇಳಿದ್ದೆ.
ಮೂಲ ವರ್ಷದ ಆಯ್ಕೆ, ಬೆಲೆಗಳ ಸಂಗ್ರಹ ಮಾಡುವ ಕ್ರಮ, ತೂಕ ಕೊಡುವ ಸಮಸ್ಯೆ, ಸೂಚ್ಯಂಕವ ಲೆಕ್ಕ ಮಾಡ್ಳೆ ಯಾವ ಫಾರ್ಮುಲಾ (ಬೇರೆ ಬೇರೆ ಫಾರ್ಮುಲಾ ಇದ್ದು) ಉಪಯೋಗುಸುತ್ತವು.
ಆ ಫಾರ್ಮುಲವನ್ನೇ ಎಂತಗೆ ಉಪಯೋಗುಸುತ್ತವು, ಬೇರೆ ಫಾರ್ಮುಲವ ಎಂತಗೆ ಉಪಯೋಗುಸುತ್ತವಿಲ್ಲೆ, ಹೇಳುವ ಪ್ರಶ್ನೆಗಳ ಉತ್ತರ ಕೊಟ್ಟಿದಿಲ್ಲೆ.
ಆಸಕ್ತಿ ಇಪ್ಪವು ಮೇಲೆ ಕೊಟ್ಟ ಸಂಕೋಲಗಳ ಮುಖಾಂತರ ಅಧ್ಯಯನ ಮಾಡ್ಳೆ ಅಕ್ಕು.
ಸಂಖ್ಯಾ ಶಾಸ್ತ್ರವ ಕಲ್ತವಕ್ಕೆ ಅದು ಸುಲಭಲ್ಲಿ ಅರ್ತ ಅಕ್ಕು, ಒಳುದವು ಅದರ ಬಗ್ಗೆ ತಲೆ ಬೆಶಿ ಮಾಡುವ ಅಗತ್ಯ ಇಲ್ಲೆ ಹೇಳಿ ಎನ್ನ ಅಭಿಪ್ರಾಯ.
ಯಾವದೇ ವಿಷಯಲ್ಲಿ ಸರಕಾರದ ಅಂಕೆ ಸಂಖ್ಯೆಗಳ ಬಗ್ಗೆ ಹೆಚ್ಚು ತಲೆಕೆಡುಸಲೆ ಆಗ. ಅದು ಒಂದು ತೋರ ಮಾಪಕ ಹೇಳಿ ತೆಕ್ಕೊಳೆಕ್ಕಷ್ಟೆ – ಬೇರೆ ಅಂಕೆಸಂಖ್ಯೆಗಳೇ ಇಲ್ಲದ್ದ ಕಾರಣ.
ಬೆಲೆ ಹೆಚ್ಚಿದ್ದು, ಹಣದುಬ್ಬರ ದರ ಇಳುದ್ದು! - ಇದು ಹೇಂಗೆ?, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಸರ್ಪಮಲೆ ಮಾವ°
  ಸರ್ಪಮಲೆ ಮಾವ

  ಆನು ಸಂಕ್ಷಿಪ್ತವಾಗಿ ವಿವರಿಸಿದರೂ ಅದರ ಮೆಚ್ಚಿ ಬರದ ಎಲ್ಲೋರಿಂಗೂ ಧನ್ಯವಾದಂಗೊ. ಕಾರಣಂಗೊ, ಪರಿಣಾಮಂಗೊ, ಪರಿಹಾರಂಗೊ, – ಇದರ ಎಲ್ಲ ವಿವರಿಸಲೆ ಹೆರಟರೆ, ಪಾಟವೇ ಮಾಡೆಕ್ಕಾವುತ್ತು; ಇಲ್ಲಿಯ ಉದ್ದೇಶ ಅದಲ್ಲ. ಆದ ಕಾರಣ ಹಾಂಗೆ ಮಾಡ್ಳೆ ಹೆರಡುತ್ತಿಲ್ಲೆ. ಒಂದೊಂದು ಸರ್ತಿ ಸಾಂದರ್ಭಿಕವಾಗಿ ವಿವರುಸಲೆ ಅಕ್ಕು. ಎನ್ನ ಆಸಕ್ತಿ ಬರೇ ಅರ್ಥಶಾಸ್ತ್ರಕ್ಕೆ ಸೀಮಿತವಾಗಿ ಇಲ್ಲೆ.
  ಒಪ್ಪಣ್ಣ ಕೇಳಿದ ಆರ್ಥಿಕ ಕುಸಿತದ ವಿಷಯ ಈಗ ಹಳತ್ತಾತು. ಆರ್ಥಿಕ ಏರಿಳಿತಂಗೊ ಮಾರುಕಟ್ಟೆ ಅರ್ಥವ್ಯವಸ್ಥೆಲಿ ಯಾವಾಗಲೂ ಆಯ್ಕೊಂಡಿರುತ್ತು. ಅದು ಅತಿಯಾದರೆ ಮಾಂತ್ರ ಸಮಸ್ಯೆ ಆವುತ್ತು.

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಮಾವ°, ನಿಂಗೊ ಪಾಠದೇ ಹೀಂಗೇ ಮಾಡುಸ್ಸೋ? ಲಾಯ್ಕಲ್ಲಿ ಹೀಂಗೇ ವಿವರ್ಸಿ? ಭಾಗ್ಯವಂತರು ನಿಂಗಳ ಶಿಷ್ಯರು.!!
  ನಿತ್ಯ ಕೇಳುವ ವಿಷಯವ ಚೆಂದಲ್ಲಿ ವಿವರ್ಸಿದ್ದಿ. ಸುಮಾರು ವಿಷಯ ಗೊಂತಾತು..
  ಧನ್ಯವಾದಂಗೋ..

  [Reply]

  VN:F [1.9.22_1171]
  Rating: 0 (from 0 votes)
 3. ಮೋಹನಣ್ಣ
  Mohananna

  ಏ ಬೊಳು೦ಬು ಮಾವೋ ನಿ೦ಗೊ ಇ ಬೇ೦ಕಿ೦ಗು ಎ.ಟಿ.ಯಮ್.ಹೇಳಿ ಬೇ೦ಕಿ೦ಗೆ ಬಪ್ಪವರನ್ನೂ ಬರದ್ದ ಹಾ೦ಗೆ ಮಾಡಿದ್ದಿ.ಇನ್ನು ಆನೂ ಬೋಚಭಾವನೂ ಮಾ೦ತ್ರ ಬರೇಕಷ್ಟೆಯೋ ಏನೊ(ಎನಗೆ ಮೆಲೆ ಹೇಳಿದ ಯೇವ ಎಕೌ೦ಟುಗಳೂ ಇಲ್ಲೆ)ಒಪ್ಪ೦ಗಲಳೊಟ್ಟಿ೦ಗೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಮಾಲಕ್ಕ°ವೇಣಿಯಕ್ಕ°ಪ್ರಕಾಶಪ್ಪಚ್ಚಿವಿಜಯತ್ತೆನೆಗೆಗಾರ°ಡಾಗುಟ್ರಕ್ಕ°ಕೊಳಚ್ಚಿಪ್ಪು ಬಾವಜಯಗೌರಿ ಅಕ್ಕ°ಗೋಪಾಲಣ್ಣಕೇಜಿಮಾವ°ವಾಣಿ ಚಿಕ್ಕಮ್ಮvreddhiಶೇಡಿಗುಮ್ಮೆ ಪುಳ್ಳಿಅನು ಉಡುಪುಮೂಲೆಚೆನ್ನಬೆಟ್ಟಣ್ಣಪೆರ್ಲದಣ್ಣತೆಕ್ಕುಂಜ ಕುಮಾರ ಮಾವ°ಅಕ್ಷರ°ಚೂರಿಬೈಲು ದೀಪಕ್ಕಶೀಲಾಲಕ್ಷ್ಮೀ ಕಾಸರಗೋಡುಯೇನಂಕೂಡ್ಳು ಅಣ್ಣಪುಣಚ ಡಾಕ್ಟ್ರುದೊಡ್ಮನೆ ಭಾವಅಡ್ಕತ್ತಿಮಾರುಮಾವ°ಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ