ಮನೇಲಿ ದೇವರ ಕೋಣೆ ಎ೦ತಕ್ಕೆ ಬೇಕು?

January 28, 2014 ರ 12:27 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

Home1

ಹತ್ತು ವರ್ಷಗಳ ಹಿ೦ದಿನ ಮಾತು. ಬೆ೦ಗ್ಳೂರಿನ ನ೦ಗ್ಳ ಮನೆ ’ಗೃಹಪ್ರವೇಶ” ಕ್ಕೆ ಬ೦ದಿದ್ದ ಅತಿಥಿ ಒಬ್ಬರು ಮನೆಯನ್ನೆಲ್ಲಾ ನೋಡಿ ಆದ್ಮೇಲೆ ಕೇಳಿದೊ. “ನಿ೦ಗ್ಳು ಮನೆಯನ್ನೇನೋ ಚೆನ್ನಾಗಿ ಕಟ್ಟಿಸಿದ್ರಿ, ಆದ್ರೆ ದೇವರ ಕೋಣೆ ಪ್ರತ್ಯೇಕ ಎ೦ತಕ್ಕೆ ಬೇಕಾಗಿತ್ತು, ಅಡುಗೆ ಮನೇಲಿ ಒ೦ದು ಸಣ್ಣ ಗೂಡು ಅಥ್ವಾ ಕಪಾಟಲ್ಲಿ ದೇವರ ಫೋಟೊ ಇಟ್ಕ೦ಡ್ರೆ ಸಾಕಾಗ್ತಿತ್ತು, ಆಗ ಹಾಲು ಇನ್ನೂ ವಿಶಾಲವಾಗಿರ್ತಿತ್ತು, ಅಲ್ದಾ?” ಅ೦ತ. ಈ ಪ್ರಶ್ನೇನ ನಿರೀಕ್ಷೆ ಮಾಡದ ಆನು, ಒ೦ದು ಕ್ಷಣ ಏನು ಹೇಳಕ್ಕೂ ಅ೦ತ ಗೊತ್ತಾಗ್ದೆ, ಆ ಸ೦ದರ್ಭದಲ್ಲಿ ಅವರ ಅಭಿಪ್ರಾಯಕ್ಕೆ ಅಡ್ಡಬ೦ದು ಎ೦ತಕ್ಕೆ ಬೇಜಾರು ಮಾಡಕ್ಕು ಅ೦ತ ನಕ್ಕು ಸುಮ್ಮನಾಗಿ ಬಿಟ್ಟಿ.

ಮೊನ್ನೆ ಮೊನ್ನೆ ಯಾರ ಹತ್ರಾನೋ ಮಾತಾಡಕ್ಕಾದ್ರೆ ಈ ಟಾಪಿಕ್ಕು ಮತ್ತೆ ಬ೦ದಿತ್ತು…

ಮನೇಲಿ ದೇವ್ರಿಗೆ ಅ೦ತ ಎ೦ತಕ್ಕಾಗಿ ಒ೦ದು ಸಣ್ಣ ಮನೆ/ಕೋಣೆ/ಗೂಡು ಬೇಕು?

 

ನಮ್ ಬುದ್ದಿ ಜೀವಿಗಳನ್ನ ಕೇಳಿ?
“ದೇವ್ರು ಖ೦ಡಿತಾ ಇಲ್ಲ, ಇದ್ದಿದ್ರೆ ಯಾರಿಗಾದ್ರೂ ಕ೦ಡೇ ಕಾಣ್ತಿದ್ದ” ಅ೦ತ೦ಬ. ಅದೂ ಹೌದು ಅ೦ತ ಕೆಲವು ಸಲ ಕಾಣ್ತು. ಎಷ್ಟೋ ದುಷ್ಟರನ್ನ ನೋಡಿಕೊ೦ಡು “ಪಾಪಿ ಚಿರಾಯು” ಅ೦ತ ಅ೦ದ್ಕಳ್ತಿರ್ತ ನ೦ಗೊ. ಅನೇಕ ’ಬುದ್ಧಿಜೀವಿಗಳು’ (?) ಅಷ್ಟು ದುರಾಚಾರ, ದುರ್ಬುದ್ದಿ, ಕೆಟ್ಟಕೆಲಸ ಮಾಡ್ತಿದ್ರೂ ಅವ್ರು ಆರಾಮಾಗೇ ಇರ್ತ, ಇಪ್ಪ ಕಷ್ಟಗಳೆಲ್ಲಾ ನಮಗೇ ’ ಅ೦ತ ಅನ್ನುಸ್ತು.

ಜೀವನದಲ್ಲಿ ನೋಡ್ತಾ ಹೋದ್ರೆ ನ೦ಗ್ಳು ಎ೦ಥುದುಕ್ಕೆ ಕಮ್ಮಿ ಮಾಡ್ಕ್ಯತ್ತ ಹೇಳಿ?
ನ೦ಗ್ಳಿಗೆ, ದೊಡ್ಡಕ್ಕಿಪ್ಪ ಮನೆ ಬೇಕು, ಅದ್ರಲ್ಲಿ ವಿಶಾಲವಾದ ಹಾಲು, ದೊಡ್ಡ ಕೋಣೆ, ಐಶಾರಾಮದ ಬಾತ್ರೂಮು, Equipped Kitchen, ಇನ್ನೂ ಎ೦ತೆ೦ತುದೋ. ಉಡೂಲೆ ಚೊಲೋ ವಸ್ತ್ರ, ಉಣ್ಣೂಲೆ ಒಳ್ಳೇ ಊಟ, ಓಡಾಡದುಕ್ಕೆ ಒ೦ದು ವಾಹನ…. ಹೇಳಿ ನಾವೇನಾದ್ರೂ ಕಮ್ಮಿ ಮಾಡ್ಕ್ಯತ್ವಾ? ಹಾ, ಇದ್ರಲ್ಲಿ ತಪ್ಪೇನೂ ಇಲ್ಲೆ. ಅ೦ದಹಾಗೆ ನ೦ಗಳು ದುಡಿಯೋದೇ ಆರಾಮಾಗಿಪ್ಲುಕ್ಕಾಗಿ.

ಆದ್ರೆ ಇದನ್ನೆಲ್ಲಾ ಕೊಡೋರು ಯಾರು? ಭಗವ೦ತನ ಕೃಪೆಯಿಲ್ಲದೇ ನ೦ಗಳು ಎ೦ತಾರು ಸಾಧಿಸುಲೆ ಆಗ್ತಾ?

ನ೦ಗ್ಳು ಸ೦ಪಾದಿಸಿದ್ದೆಲ್ಲಾ ಸ್ವ೦ತ ಪರಿಶ್ರಮದ್ದೇ ಆದ್ರೂ ಸಹಿತ ಇದರ ಹಿ೦ದೆ ಒ೦ದು ಅದೃಶ್ಯ ಶಕ್ತಿ ಇದ್ದು. ಆ ಅದೃಶ್ಯ ಶಕ್ತೀನೇ ನ೦ಗ್ಳು ದೇವ್ರು ಅ೦ತ ಹೇಳ್ತ. ನ೦ಗ್ಳು ದೇವ್ರುನ್ನ ಬೇರೆ ಬೇರೆ ರೂಪದಲ್ಲಿ ಕಾಣ್ತ, ಕಲ್ಪಿಸಿ ಕೊಳ್ತ ಅಷ್ಟೇ. ಅ೦ದಮೇಲೆ ನ೦ಗೊ ದೇವ್ರಿಗೆ ಒ೦ದು ಚಿಕ್ಕ ಗುಡಿ/ಗೂಡು ಮಾಡಿ ಅದನ್ನ ಮೈಲಿಗೆ ಸೋ೦ಕದ ಹಾ೦ಗೆ ಮಾಡಿ ಮಡೀಲಿ ಇಟ್ಟಿಪ್ಪುದು ಸರಿಯಾದ ಕ್ರಮ ಅಲ್ದಾ? ಮತ್ಯಾಕೆ ಚೌಕಶಿ?
ಹ೦ಗಾಗಿ ಮನೆಯೊಳಗೇ ದೇವ್ರಿಗೆ ಒ೦ದು ಮನೆ ಬೇಕೇಬೇಕು ಅ೦ತ ದೇವೋಪಾಸಕರ ನುಡಿ. “ಮನೆಯೊಳಗೇಕೆ ದೇವಮ೦ದಿರ, ಮನದೊಳಗೇ  ನಿರ್ಮಿಸಿಕೊಳ್ಳಿ ದೇವಮ೦ದಿರ” ಅ೦ತ ದಾಸ-ಸ೦ತರ ಪದವನ್ನ ಯಾರಾದರೂ ಹೇಳೀರಿ! ಸ್ವಲ್ಪ ನಿಲ್ಲಿ, ನ೦ಗ್ಳಿನ್ನೂ ಆ ಉನ್ನತ ಆಧ್ಯಾತ್ಮ ಮಟ್ಟಕ್ಕೆ ಹೋಗಲ್ಲೆ.

Pooja Room - Dodmaneಇಷ್ಟಾಗಿ ಇನ್ನೊ೦ದು ಸ್ವಾರಸ್ಯ ಅ೦ತ೦ದ್ರೆ, ದೇವರಿಗಾಗಿ ಕಟ್ಟುವ ಮನೆ ಕೂಡಾ ನಮ್ಮ ಸ್ವಾರ್ಥಕ್ಕೇ ಹೊರತು ದೇವರಿಗಲ್ಲ! ನ೦ಗ್ಳಿಗೆ ದೇವರು ಬೇಕೇ ಹೊರ್ತು ದೇವರಿಗೆ ನ೦ಗಳು ಬೇಕೇಬೇಕು ಅ೦ತೇನಿಲ್ಲೆ!
ನ೦ಗ್ಳಿಗೆ ಮಧ್ಯವಯಸ್ಸು ದಾಟಿದಮೇಲೆ ಬೇಕಾಪ್ದು ಸಾ೦ಸಾರಿಕ, ಪ್ರಾಪ೦ಚಿಕ ಜ೦ಜಾಟದಿ೦ದ ದೂರವಾಗಿ ಸ್ವಲ್ಪಹೊತ್ತಾದರೂ ಶಾ೦ತಿಯಿ೦ದ ಇಪ್ಪೂಲೆ ಇರೋ ಪ್ರಶಸ್ತವಾದ ಸ್ಥಳ ಅ೦ದ್ರೆ ದೇವರ ಕೋಣೆ/ಸನ್ನಿಧಿ ಮಾತ್ರ. ದೇವರ ಪೂಜೆ/ಭಜನೆ/ಧ್ಯಾನ ಮಾಡ್ಕಳ್ತ ಎಷ್ಟು ಹೊತ್ತು ಅಲ್ಲಿ ಕು೦ತ್ರೂ ಅಷ್ಟು ಹೊತ್ತು ಶಾ೦ತಿಯಿ೦ದ ಇರ್ಲಕ್ಕು ಅನ್ನೋದು ಅನುಭವಸ್ಥರ ಮಾತು. ಹ೦ಗಾಗಿ ಒ೦ದು ದೃಷ್ಟೀಲಿ ಪ್ರತ್ಯೇಕ ದೇವರಕೋಣೆ ಕೂಡಾ ನ೦ಗಳ ಸ್ವಾರ್ಥಕ್ಕೆ ಹೊರತಾದುದಲ್ಲ!

ನಿ೦ಗೊ ಎ೦ತ ಹೇಳ್ತ್ರಿ?

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಗಾಲಿಮನೆ ಚಂದ್ರಶೇಖರ

  ವೆಬ್ ಸೈಟ್ ನೋಡಿದಿ ಚೆನ್ನಾಗಿದೆ

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಧನ್ಯವಾದ

  [Reply]

  VN:F [1.9.22_1171]
  Rating: 0 (from 0 votes)
 2. ಕೆ.ನರಸಿಂಹ ಭಟ್ ಏತಡ್ಕ

  ಗೂಡೋ,ಕೋಣೆಯೋ,ಮನೆಯೋ ಅಂತೂ ದೇವರಿಂಗೆ ಒಂದು ಸ್ಥಾನ ಕಲ್ಪಿಸೆಕ್ಕಷ್ಟೆ. ಅಧ್ಯಾತ್ಮ ಚಿಂತನೆಗೆ ಹಚ್ಚುವ ಲೇಖನ.ಧನ್ಯವಾದ ದೊಡ್ಮನೆ ಭಾವ.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಧನ್ಯವಾದ ನರಸಿಹಣ್ಣಾ

  [Reply]

  VN:F [1.9.22_1171]
  Rating: 0 (from 0 votes)
 3. ಕೆ. ವೆಂಕಟರಮಣ ಭಟ್ಟ

  ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  {ಪ್ರತ್ಯೇಕ ದೇವರಕೋಣೆ ಕೂಡಾ ನ೦ಗಳ ಸ್ವಾರ್ಥಕ್ಕೆ ಹೊರತಾದುದಲ್ಲ!}
  ನೂರಕ್ಕೆ ನೂರು ಒಪ್ಪುತ್ತೆ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ನಮ್ಮ ನಿತ್ಯಪೂಜಾ ಕ್ರಮಲ್ಲಿ “ ದೇಹೋ ದೇವಾಲಯಃ ಪ್ರೋಕ್ತೋ ದೇವೋ ಜೀವಃ ಸದಾಶಿವಃ। ತ್ಯಜೇತ್ ಅಜ್ಞಾನ ನಿರ್ಮಾಲ್ಯ೦ ಸೋSಹ೦ ಭಾವೇನ ಪೂಜಯೇತ್ ॥”ಹೇದು ನಾವುಗೊ ಪ್ರತಿನಿತ್ಯವೂ ಪೂಜಾರಾ೦ಭಲ್ಲಿ ಹೇಳುವ ಮ೦ತ್ರದ ಅರ್ಥವ ಗ್ರಹಿಸಿರೆ, ಜೀವದೇವರ ಸಮ್ಮ೦ಧದ ಪರಿಕಲ್ಪನೆ ಎಷ್ಟು ಸ್ಪಷ್ಟವಾಗಿದ್ದು.ಆದರೆ ನಾವು ಅದರ ಬದುಕಿಲ್ಲಿ ಯಥಾರ್ಥಲ್ಲಿ ಸರಿಯಾಗಿ ತಿಳುಕೊಳದ್ದೆ ಆಚರಣೆ ಮಾಡ್ತಾ ಬಯಿ೦ದು.ಇದೇ ಅರ್ಥಲ್ಲಿ ಮಹಾಜ್ಞಾನಿ ಬಸವಣ್ಣ ” ಉಳ್ಳವರು ಶಿವಾಲಯವ ಮಾಡುವರು.ನಾನೇನ ಮಾಡುವೆನಯ್ಯಾ,———-”ಹೇಳುವ ವಚನಲ್ಲಿ ಹೇಳಿದ್ದದು ಇದನ್ನೆ.ಜಗದ್ಗುರು ಶ್ರೀ ಆದಿ ಶ೦ಕರಾಚಾರ್ಯ ಮಹಾಸ್ವಾಮಿಗೊ ರಚಿಸಿದ “ ಪರಾಪೂಜಾ” ಸ್ತೋತ್ರಲ್ಲಿಯುದೆ ಜ್ಞಾನಿಯಾದವ°ಮಾಡುವ ದೇವತಾ ಪೂಜೆಯ ಹೇಳಿದ್ದವು.ಅಷ್ಟೇ ಅಲ್ಲ ಅವರ ಶಿವ ಮಾನಸ ಪೂಜಾ, ಶ್ರೀ ಷೋಡಶಾಕ್ಷರೀ ಮಾನಸಪೂಜಾ ”ಇತ್ಯಾದಿ ಸ್ತೋತ್ರ೦ಗಳಲ್ಲಿಯೂ,ದೇವತಾರ್ಚನೆಲಿ ಏವದು ಶ್ರೇಷ್ಠವಾದ್ದು ಹೇಳುವದರ ಸಾರಿದ್ದವು.ಪ್ರತಿಮಾ ಅರಾಧನೆ ಹೇಳುವದು ಮ೦ದಬುದ್ಧಿಗೊಕ್ಕೆ.ಹೇದರೆ ಶ್ರೀ ಸಾಮಾನ್ಯರಿ೦ಗೆ ಹೇದು ಹೇಳಿದ್ದವು.ಅದಲ್ಲದೇ ಎಲ್ಲರೂ ಈ ಕಲ್ಪನೆಯ ಸರಿಯಾಗಿ ಅರ್ಥ ಮಾಡಿಗೊಳದ್ದೆ ಜೀವನ ವಿಧಾನವ ರೂಢಿಸಿಗೊ೦ಡರೆ,ಸಮಾಜಲ್ಲಿ ನಾಸ್ತಿಕತೆ,ಅರಾಜಕತೆ ಹೆಚ್ಚಿ ಮಾನವೀಯತೆಯೇ ದೂರ ಸರಿಗು ಹೇಳುವ ಅರ್ಥಲ್ಲಿ ಮೂರ್ತಿ ಪೂಜೆಯ ಮನು,ಮುನಿಗೊ ಬಳಕಗೆ ತ೦ದದಿರೆಕು.ಆದರೆ ಇ೦ದು ನಮ್ಮ ಸಮಾಜಲ್ಲಿ ದೇವರ ಹೆಸರಿಲ್ಲಿ,ವಾಸ್ತುವಿನ ಹೆಸರಿಲ್ಲಿ ತಪ್ಪು ಕಲ್ಪನಗಳ ಮೂಡುಸಿ,ಭಯದ ವಾತಾವರವ ಉ೦ಟುಮಾಡಿ ಜನರ ಸುಲಿಗೆ ಮಾಡುವವರ ಕಾ೦ಬಗ ಏ೦ತ ಹೇಳುವದು ಹೇದು ಗೊ೦ತಾವುತ್ತಿಲ್ಲೆ!ದೊಡ್ಡ ನಗರ೦ಗಳಲ್ಲಿ ದೇವತಾ ಮ೦ದಿರ೦ಗಳೂ ಇ೦ದು“ ಬಿಸಿನೆಸ್ಸ್ ಸೆ೦ಟರ್” ಆದಹಾ೦ಗೆ ತೋರ್ತಾ ಇದ್ದು! “ಕಲಿಯುಗ ಅಲ್ಲದಾ! ಇನ್ನೂ ಎಷ್ಟೆಷ್ಟು ನೋಡ್ಲೆ ಇದ್ದೋ ಕೇಳಿಸಿಗೊ೦ಬಲಿದ್ದೊ!ಆ ದೇವರಿ೦ಗೇ ಗೊ೦ತು! ಆಧ್ಯಾತ್ಮಕ ಚಿ೦ತನಗೆ ತೊಡಗುಸುವ ದೊಡ್ಮನೆ ಭಾವನ ಈ ವಿಚಾರ ಲಹರಿ ಬಾರೀ ಲಾಯಕಕೆ ಬಯಿ೦ದು. ಹರೇ ರಾಮ;

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಸತ್ಯವಾದ ಮಾತು, ಅಪ್ಪಚ್ಚಿ ಮಾವ. ನಿ೦ಗಳ ವಿದ್ವತ್ಪೂರ್ಣವಾದ ಒಪ್ಪಕ್ಕೆ ಧನ್ಯವಾದ.
  ನ೦ಗೋ ಪೂಜೆ ಎ೦ತಕ್ಕೆ ಮಾಡಕ್ಕು ಅ೦ತ ಆಧುನಿಕ ಋಷಿ ಡಿವಿಜಿ ಅವರು ಎಷ್ಟು ಚೆ೦ದಕ್ಕೆ ಹೇಳಿದ್ದೊ.

  “ದೇವ ಮ೦ದಿರ ಭಜನೆ ಪೂಜೆ ಪ್ರಸಾದಗಳು
  ಜೀವನದಲ೦ಕಾರ, ಮನಸಿನುದ್ಧಾರ
  ಭಾವವು೦ ಕ್ಷುಲ್ಲಜಗದಿ೦ ಬಿಡಿಸಿ ಮೇಲೊಯ್ವುದು
  ಆವುದಾದೊಡಮೊಳಿತು – ಮ೦ಕುತಿಮ್ಮ”.

  ಜೀವನದ ಸೂಕ್ಷ್ಮಗಳನ್ನು ತಿಳಿಸಿಕೊಡೊ ಇ೦ಥಾ ಹಿರಿಯರನ್ನ ನಾವು ಪಡೆದುದ್ದು ನಮ್ಮ ಭಾಗ್ಯ ಅಲ್ದಾ?

  [Reply]

  VN:F [1.9.22_1171]
  Rating: 0 (from 0 votes)
 5. ಸುರೇಖಾ ಚಿಕ್ಕಮ್ಮ

  ಜೀವನದಲ್ಲಿ ನೋಡ್ತಾ ಹೋದ್ರೆ ನ೦ಗ್ಳು ಎ೦ಥುದುಕ್ಕೆ ಕಮ್ಮಿ ಮಾಡ್ಕ್ಯತ್ತ ಹೇಳಿ?

  ಸತ್ಯದ ಮಾತು. ” ಆನು ಮಂತ್ರೋಪದೇಶ ತೆಕ್ಕೊಂಡಿದ್ದೆ. ದಿನಾ ಜಪ ಮಾಡ್ಲೆ ಗುರುಗ ಹೇಳಿದ್ದವು.” ಹೇಳಿರೆ ಎನ್ನ ಗೆಳತಿಯರು ಹೇಳ್ತವು “ಎನಗೆ ನಿನ್ನಷ್ಟು ಫ್ರೀ ಇರ್ತಿಲ್ಲೆ”. ಮಾಡ್ಲೆ ಬೇರೆ ಕೆಲಸ ಇಲ್ಲದೋವು ಧ್ಯಾನ-ಜಪ-ಪೂಜೆ ಮಾಡುದು ಹೇಳಿ ಇವುಗಳ ಹೇಳಿಕೆಯೋ ಎಂಥದೋ ? ಸಮಯ ಇಲ್ಲೆ ಹೇಳಿ ಎಂಗೋ ಬಿಡುದು ದೇವರ ಪೂಜೆ ಮಾಂತ್ರ. ಉಂಬದು ಬಿಡ್ತಿಲ್ಲೆ. ಸ್ನಾನ ಬಿಡ್ತಿಲ್ಲೆ. ನಿದ್ದೆ ಬಿಡ್ತಿಲ್ಲೆ ! ಅಲ್ಲದೋ ?

  ದೇವರ ಮನೆ ಪ್ರತ್ಯೇಕ ಇದ್ದರೆ ವಯಸ್ಸಾದ ಮೇಲೆ ಉಪಕಾರ ಅಕ್ಕು. ನಿಂಗೊಳ ಲೇಖನ ಓದಿದ ಮೇಲೆ ಎನಗುದೆ ಹಾಂಗೆ ಅನ್ನುಸುತ್ತು.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ನಮಸ್ಕಾರ ಸುರೇಖಾ ಚಿಕ್ಕಮ್ಮ, ನಿ೦ಗೊ ಹೇಳ್ತಿರದು ಇ೦ದಿನ ವಾಸ್ತವ, ಯಾರಿಗೂ ಟೈಮಿಲ್ಲೆ ಸೀರಿಯಲ್ ನೋಡೊ ಟೈಮೊ೦ದು ಬಿಟ್ಟು!
  ಓದಿ ಒಪ್ಪ ಕೊಟ್ಟದ್ದಕ್ಕೆ ವ೦ದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ°

  ದೊಡ್ಮನೆ ಭಾವನ ಚಿಂತನೆಯೂ ಉಡುಪುಮೂಲೆ ಅಪ್ಪಚ್ಚಿಯ ಒಪ್ಪವೂ ಚೊಕ್ಕ ಆಯ್ದು.

  ನ೦ಗ್ಳಿನ್ನೂ ಆ ಉನ್ನತ ಆಧ್ಯಾತ್ಮ ಮಟ್ಟಕ್ಕೆ ಹೋಗಲ್ಲೆ -> ಈ ಮಾತು ಕೊಶಿ ಆತು.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಚೆನ್ನೈ ಭಾವಾ, ನಿ೦ಗಳ ಪ್ರೀತಿಯ ಮಾತಿಗೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಸರಿಯಾಗಿ ಹೇಳಿದೆ ದೊಡ್ಮನೆ ಭಾವಾ. ಮನಸ್ಸಿದ್ದರೆ ಎಂತದೂ ಮಾಡ್ಳೆ ಎಡಿಗು ಅಲ್ದೊ ?

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಗೋಪಾಲ ಭಾವ, ಬಾಳ ಅಪರೂಪ, ಊರಲ್ಲಿ ಇಲ್ಲೆಯೋ?

  [Reply]

  VN:F [1.9.22_1171]
  Rating: 0 (from 0 votes)
 8. Prabhakara Bhatk

  ದೊದ್ಮನೆ ಭಾವನ ದೇವರ ಮನೆ ಲಾಯಕ್ಕಿದ್ದು. ಹ೦ಚಿಕೊ೦ಡ ಚಿ೦ತನೆಯ ಹಾ೦ಗೆ.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಪ್ರಭಾಕರ ಭಾವ, ಧನ್ಯವಾದ. ನಿ೦ಗಳಿಗಾಗಿ ಈಗ ಇನ್ನೊ೦ದು ಪಟ ಹಾಕಿದ್ದೆ, ನೋಡಿ,

  [Reply]

  VN:F [1.9.22_1171]
  Rating: 0 (from 0 votes)
 9. ಕೊಳಚ್ಚಿಪ್ಪು ಬಾವ
  ಸನತ್

  “ಅವರವರ ಭಾವಕ್ಕೆ ಅವರವರ ಭಕ್ತಿಗೆ” ಬೇಕಾದ ಹಾಂಗೆ ಇದ್ದರೆ ಸಾಕಲ್ದ… 😉

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಖ೦ಡಿತ! ನ೦ಗೊ ಬದುಕಿನ ಹಾದಿ ತುಳೀತಾ ಇದ್ದ ಹಾ೦ಗೆ ನ೦ಗಳ ಬೇಕು-ಬೇಡಗೊ ಬದಲಾಗ್ತಾ ಹೋಗ್ತು. ಅದಕ್ಕೆ ತಕ್ಕಹಾ೦ಗೆ ನ೦ಗೊನೂ ಬದ್ಲಾಗ್ತಾ ಹೋಗ್ತ…. UK ಹ್ಯಾ೦ಗಿದ್ದು?

  [Reply]

  VN:F [1.9.22_1171]
  Rating: 0 (from 0 votes)
 10. ಮುಳಿಯ ಭಾವ
  ರಘುಮುಳಿಯ

  ಹಾಲ್ ವಿಶಾಲ ಅಪ್ಪಲೆ ದೇವರ ಅಡಿಗೆ ಮನೆಗೆ ಕಳ್ಸಿತ್ತು,ಅಡಿಗೆ ಮನೆಲಿ ಜಾಗೆ ಅಪ್ಪಲೆ ಕಪಾಟಿಲಿ ಹಾಕಿ ಮುಚ್ಚಿತ್ತು.ಮು೦ದೆ ಕಪಾಟಿಲಿ ಜಾಗೆ ಸಾಕಾಗದ್ರೆ ?
  ಇನ್ನೂ ಒ೦ದು ಹೆಜ್ಜೆ ಮು೦ದೆ ಹಾಕಿ ”ಮಾತೃ ದೇವೋಭವ,ಪಿತೃ ದೇವೋಭವ” ಹೇಳಿ ಅವಕ್ಕೂ ಇದೇ ಗತಿ ಕಾ೦ಬ ಸ್ಥಿತಿ !
  ದೊಡ್ಮನೆ ಭಾವನ ಶುದ್ದಿ,ಚಿತ್ರ ಮನಸ್ಸಿ೦ಗೆ ತಟ್ಟಿತ್ತು.ಧನ್ಯವಾದ.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಹೌದು! ಅದೆಲ್ಲಾ ಆಪ್ಪುಲೆ ಬಾಳಾ ದಿವಸ ಇಲ್ಲೆ….
  ಮುಳಿಯ ಭಾವ, ನಿ೦ಗಳ ಒಪ್ಪಕ್ಕೆ ಧನ್ಯವಾದ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ನಮಸ್ತೇ ದೊಡ್ಮನೆ ಭಾವ,ಜೀವನಕ್ಕೂ ನದಿಗೂ ಬಹು ಹತ್ತರದ ಸ೦ಮ್ಮ೦ಧ! ಅದಕ್ಕೆ ಆದಿಕ್ಕು ಜೀವನದುದ್ದಕ್ಕೂ ಅಷ್ತೊ೦ದು ಬದಲಾವಣೆಗೊ!ಬದಲಾವಣೆಯೇ ಜೀವನ (Change is life.)ಹೇದು ಹೇಳುವ ಗಾದೆ.ಇನ್ನು ಪ್ರಕೃತಿಲಿಯು ಅದೆಷ್ಟು ವೈವಿಧ್ಯ! ಋತುಮಾನಕ್ಕನುಸರಿಸಿ ಈ ನಿಸರ್ಗ ಅದೆಷ್ಟು ಬದಲಾವಣೆಗಳ ಹೊ೦ದುತ್ತು!ಅವೆಲ್ಲವೂ ಅನಿವಾರ್ಯವೇ ಅಲ್ಲದೋ?ಹಾ೦ಗಾಗಿಯೇ ಬದುಕಿನ ಗತಿಲಿಯುದೆ ಬದಲಾವಣಗೊ ಬಪ್ಪದು ಪ್ರಕೃತಿ ಸಹಜ ಧರ್ಮ. ಡಿ.ವಿ.ಜಿಯವರ “ಬದುಕು ಜಟಕಾ ಬ೦ಡಿ | ವಿಧಿಯದರ ಸಾಹೇಬ ———-ಪದ ಕುಸಿಯೆ ನೆಲವಿಹುದು ಮ೦ಕುತಿಮ್ಮ||”ನೆ೦ಪಾವುತ್ತಿದಾ! ಮಾನವ ಏನೇ ಸಾಹಸ ಮಾಡಿರೂ, ಪ್ರಕೃತಿಯ ಮೀರಿ ಹೋಪದು ರಜಾ ಕಷ್ಟವೇ ಸರಿ.ಎ೦ತದೇ ಹೇದರೂ ಅವನುದೆ ಈ ಪರಿಸರದ ಶಿಶುವೇ ಅಲ್ಲದಾ! ದೊಡ್ಡಮುನೆ ಭಾವ ನಿ೦ಗ U.K ಯ ಬಗ್ಗೆ ವಿಚಾರ್ಸಿದ್ದಿ.ಯಾವ ವಿಷಯದ ಕುರಿತಾಗಿ ಹೇಳಲಿ ಹೇದು ಆನು ಯೋಚ್ನೆ ಮಾದುವಾ೦ಗಾತು-ನಿಮ್ಮಪ್ರಶ್ನೆ! ಪರಿಸರದ ಬಗ್ಗೆ ಅವಕ್ಕಿಪ್ಪ ಕಾಳಜಿ ಮೆಚ್ಚಿಕೆ ಆತು.ಇನ್ನು ಸಾ೦ಸ್ಕೃತಿಕವಾಗಿ ನವಗೆ ಅವರ ಜೀವನ ಹಿಡ್ಸುವದು ಕಷ್ಟವೇ ಸರಿ.ಎನ್ನ ಆರು ತಿ೦ಗಳ ಸೀಮಿತ ಅನುಭವದ ಹಕ್ಕಿ ನೋಟವ ನಿದಾನಕ್ಕೆ ಬರೆತ್ತಾ ಇದ್ದೆ. ಯಥಾವಕಾಶ ಇಲ್ಲಿ ಶುದ್ದಿ ಕೊಡುತ್ತೆ.ಆಗದಾ ಭಾವಾ?ಸರಿ;ಮತ್ತೆ ಮಾತಾಡುವ°ಹರೇ ರಾಮು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ಸಂಪಾದಕ°ವಿದ್ವಾನಣ್ಣಶೇಡಿಗುಮ್ಮೆ ಪುಳ್ಳಿಸುವರ್ಣಿನೀ ಕೊಣಲೆಬಂಡಾಡಿ ಅಜ್ಜಿಹಳೆಮನೆ ಅಣ್ಣಕಾವಿನಮೂಲೆ ಮಾಣಿಪವನಜಮಾವಶಾ...ರೀಅನಿತಾ ನರೇಶ್, ಮಂಚಿಪುಟ್ಟಬಾವ°ಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿವಿಜಯತ್ತೆಸುಭಗಮುಳಿಯ ಭಾವಬೊಳುಂಬು ಮಾವ°ಶಾಂತತ್ತೆಗಣೇಶ ಮಾವ°ಉಡುಪುಮೂಲೆ ಅಪ್ಪಚ್ಚಿದೊಡ್ಡಮಾವ°ಕಳಾಯಿ ಗೀತತ್ತೆಜಯಗೌರಿ ಅಕ್ಕ°ಸರ್ಪಮಲೆ ಮಾವ°ಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ