ಸುಯೆಜ್ ಕಾಲುವೆಯ ಕರೆಲಿ

December 17, 2010 ರ 6:52 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸರ್ಪಮಲೆ ಮಾವನ “ದೋಣಿಪ್ರಯಾಣ”ದ ಸುಖಾನುಭವದ ಗು೦ಗಿಲಿ ದಿನ ಹೋದ್ದದೆ ಗೊಂತಾತಿಲ್ಲೆಅಲ್ಲದೋ?

ಕೈರೋಲ್ಲಿ ಉದಿ ಆತು,ಮುಕ್ರಿಗಳ ಬಾ೦ಕು ಮುಗಿಲ ಮೇರೆಯ ದಾ೦ಟಿತ್ತು.ಪ್ರತಿ ಮಾರ್ಗಲ್ಲಿ ಒಂದು ಪಳ್ಳಿ,ಪ್ರತಿ ಪಳ್ಳಿ೦ದ ಒಂದು ಸ್ವರ , ಒಬ್ಬೊಬ್ಬ ಒಂದೊಂದು ಶ್ರುತಿಲಿ ಇತ್ತಿದ್ದವು,ದೇವರ ಓಡುಸುಲೆ. ಎಲ್ಲೆಡೆ ಕೋಲಾಹಲ,ಗಡಿಬಿಡಿಲಿ ಎದ್ದಪ್ಪಗ ಗೊಂತಾತು -ಕೈರೋಲ್ಲಿ ಉದಿ ಆತು.ಹಕ್ಕಿಗಳ ಚಿಲಿಪಿಲಿ ಕೇಳದ್ದರೂ, ಕೋಳಿ ಕೂಗದ್ದರೂ .!!.

ಎದ್ದು ತಯಾರಾಗಿ ತಿ೦ಡಿ ಎ೦ತ ಸಿಕ್ಕುಗು ಹೇಳಿ “ಎನುತ ನಿಜಮನದಲ್ಲಿ ಯೋಚನೆಯ ಮಾಡಿ”ಹೇಳಿ ಬಲಿಪ್ಪಜ್ಜನ ಧಾಟಿಲಿ ಮನಸ್ಸಿಲಿ ಹೇಳ್ತಾ, ರೆಸ್ಟಾರೆ೦ಟಿ೦ಗೆ ಬ೦ದೆಯೊ°.ಒ೦ದಷ್ಟು ಹಣ್ಣುಗಳ,ಓಲಿವ್ ಕಾಯಿಗಳ,ತರತರದ ಬ್ರೆಡ್ಡುಗಳ,ಜೇನು ಜ್ಯಾಮ್,ಹಣ್ಣಿನರಸಗಳ ನೋಡಿಯೆ ಮನಸ್ಸು ಹಗುರಾತು,ಕಣ್ಣು ತ೦ಪಾತು.ಮಾ೦ಸಾಹಾರದ ವಿವಿಧ ಬಗೆಗಳನ್ನೂ ಕಂಡು ಕಣ್ಣು ಕೆಂಪಾತು.
ಒ೦ಟೆ ಡುಬ್ಬ ತು೦ಬಿಸಿದ ಹಾ೦ಗೆ ಹೊಟ್ಟೆ ತು೦ಬಾ ತಿ೦ದೆಯೊ°,ದಿನವಿಡೀ ಉಪವಾಸ ಆದರೂ ತೊ೦ದರೆ ಇಲ್ಲೆ ಹೇಳುವಷ್ಟು.ಹಾಲು ಹಾಕದ್ದ ಕೈಕ್ಕೆ ಟರ್ಕಿಶ್ ಕಾಪಿಯನ್ನೂ ಅರಿಷ್ಟದ ಹಾ೦ಗೆ ಕುಡುದಪ್ಪಗ ಇಸ್ಮಾಯಿಲ್ ಹಾಜರ್,ಅದೇ ಸ್ಮೈಲಿನೊಟ್ಟಿ೦ಗೆ.

ಇಸ್ಮಾಯಿಲ್ ನ ಕರೆಂಗೆ ಹೆಟ್ಟಿಸಿಗೊಂಡ ಹೊಸ ಹೊ೦ಡಾ ಕಾರಿಲಿ ಕೂದು ಕಾರ್ಖಾನೆ ಕಟ್ಟುವ ಜಾಗೆಗೆ ಹೆರಟೆಯ°.ಕೈರೊ೦ದ ತೊ೦ಭತ್ತು ಕಿಲೊಮೀಟರು ದೂರಲ್ಲಿಪ್ಪ ಸುಯೆಜ್ ಹೇಳುವ ಜಾಗೆಗೆ.ಶಾಲೆಲಿ ಕಲ್ತ,ಕಲ್ತು ಮರದ, ಸುಯೆಜ್ ಕಾಲುವೆಯ ನೆ೦ಪಾತೆನಗೆ.ಇಸ್ಮಾಯಿಲ್ ನ ಹತ್ತರೆ ವಿಷಯ ತಿಳುಕ್ಕೊ೦ಬ ಮನಸ್ಸಾತು.ಕಾರು ಹೆರಟು ಪೇಟೆಲಿ ಹೋಪಗ ಬೊ೦ಬಾಯಿಲಿ ಪ್ರಯಾಣ ಮಾಡಿದ ಅನುಭವವೆ,ಸಾವಿರಾರು ವರುಶದ ಚರಿತ್ರೆ ಇಪ್ಪ ಈ ಎರಡು ದೇಶ೦ಗೊ ಜೀವನಶೈಲಿಲಿಯೂ ಎಷ್ಟು ಹತ್ತರೆ ಇದ್ದು ಹೇಳಿ ಭಾವನೆ ಮೂಡುವಷ್ಟು ಪರಿಚಿತ ಅನಿಸಿತ್ತು. ಪೇಟೆಯ ನೆಡುಕೆ ಒಂದು ದೊಡ್ಡ ಹೂಗಿನ ತೋಟ ಕಂಡತ್ತು.ಹಸಿರಾಗಿದ್ದ ಗೆಡುಗಳ ನೆಡುಕೆ ಚೆಂದದ ದೇವಸ್ಥಾನ ನೋಡಿ ಆಶ್ಚರ್ಯ ಆತು.ಇದೆಂತ ಕತೆ ಹೇಳಿ ಕೇಳಿದೆ ಇಸ್ಮಾಲಿಯ ಹತ್ತರೆ.ನೂರು ವರುಷ ಮಾಡಲು ಈಜಿಪ್ಟಿನ ಆಳಿದ ಒಬ್ಬ ರಾಜ ಭಾರತದ ಶೈಲಿಲಿ ಈ ಕಟ್ಟೋಣ ಕಟ್ಟಿಸಿದ್ದಡ.ಒಳ ಎಂತದೂ ಇಲ್ಲೆ,ಈಗ ಪಾಳುಬಂಗಲೆಯ ಹಾಂಗೆ ಆಯಿದು ಹೇಳಿ ವಿವರಿಸಿತ್ತು. ಹೋಪಗ ಪೇಟೆಯ ಮಾರ್ಗದ ಕರೆಲಿ ಜೆನ೦ಗಳ ನೋಡಿದೆ.ನಮ್ಮ ಊರಿಲಿ ಮಾಂತ್ರ ಬ್ಯಾರ್ತಿಗೊ ಗೇಸಿನ ಅಂಡೆಯ ಹಾಂಗಿಪ್ಪ ಕಪ್ಪುಗುಡಿ ಹಾಕಿ ತಿರುಗೊದು,ಈ ದೇಶಲ್ಲಿ ತಲೆಗೆ ಒಂದು ಶಾಲು ಸುಂದಿರೆ ಸಾಕು ಹೇಳಿ ಅರ್ಥ ಆತು.
ಈಜಿಪ್ಟಿನ ಈಗ ಆಳ್ವಿಕೆ ಮಾಡೋದು ಹೋಸ್ನಿ ಮುಬಾರಕ್ ಹೇಳ್ತ ಮನುಷ್ಯ.ಅವನ ಬಗ್ಗೆ ಅಲ್ಲ್ಯಾಣ ಜೆನ೦ಗೊಕ್ಕೆ ಆರಿಂಗೂ ಒಳ್ಳೆ ಅಭಿಪ್ರಾಯ ಇಲ್ಲೆ.ಎಂತಗೆ ಕೇಳಿರೆ,ಬ್ಯಾರಿ ಆಗಿದ್ದುಗೊಂಡು ಅಮೇರಿಕದವರ ಓಲೈಸುತ್ತ° ಹೇಳಿ ಎಲ್ಲೋರಿಂಗೂ ಕೋಪ.ಆದರೆ ಅಲ್ಲಿ ಪ್ರತಿ ಚುನಾವಣೆಲಿಯೂ ಅವನೇ ಗೆಲ್ಲೊದಡ,ಸುಮಾರು ಇಪ್ಪತ್ತು ವರುಶಂದ,ಕಳ್ಳ ಓಟಿಲಿ ನಮ್ಮಂದ ಸುಮಾರು ಮುಂದೆ ಇದ್ದು ಈ ದೇಶ ಹೇಳಿ ಅನಿಸಿತ್ತು.ಬಹುಷಃ ನಮ್ಮ ರೆಡ್ಡಿಗೋ ಇಲ್ಲಿ ಕಲ್ತು ಬಂದದೋ ಹೇಳಿ ಸಂಶಯ ಅಪ್ಪಲೆ ಶುರು ಆಯಿದು.ಮುಬಾರಕ್ ಮಾರ್ಗಕ್ಕಿಳುದರೆ ಅವನ ರಕ್ಷಣೆಗೆ ಸಾವಿರಾರು ಜೆನ ಪೋಲಿಸುಗೋ ಮಾರ್ಗಲ್ಲಿ ಸಾಲಾಗಿ ನಿಲ್ಲುತ್ತವು. ಈ ದೃಶ್ಯವ ನೋಡಿ ಆಶ್ಚರ್ಯ ಆತು,ಒಬ್ಬ ಬದುಕ್ಕುಲೆ ಇಷ್ಟು ಜೆನ ದುಡಿಯೆಕ್ಕೋ ಹೇಳಿ ಕಂಡತ್ತು.ಅವನ ವಿರುದ್ಧ ಮಾತಾಡಿರೆ,ಭಾಷಣ ಮಾಡಿರೆ ಕೊಂದೇ ಹಾಕುಗಡ.ಹಾಂಗಾಗಿ ಜೆನ ಗುಟ್ಟಿಲಿ ಬೈವದು !!
ಇಸ್ಮಾಯಿಲನ ಕಾರು ಪೇಟೆಯ ಹೆರಾ೦ಗೆ ಎತ್ತಿ ಅಪ್ಪಗ ಈಜಿಪ್ಟಿನ ಭಿನ್ನತೆಯ ಅರಿವು ಮೂಡಿತ್ತು,ಇಡೀ ದೇಶವೆ ಒ೦ದು ಮರುಭೂಮಿಯೊ ಹೇಳುವಷ್ಟು ಹೊಯ್ಗೆಯ ರಾಶಿ ಮಾರ್ಗದ ಎರಡೂ ಹೊಡೆಲಿ,ಕಣ್ಣಿ೦ಗೆ ಕಾಣುವಷ್ಟು ದೂರ. ನಮ್ಮಲ್ಲಿಪ್ಪ ಹೊಯ್ಗೆ ಲಾಬಿಗೆ ನಿರುದ್ಯೋಗ ಅಕ್ಕು ,ಇಲ್ಲಿ ಅಷ್ಟು ಹೊಯ್ಗೆ ಸಿಕ್ಕಿರೆ.

ಹೊಯಿಗೆ ಗುಡ್ಡೆ
ಕುತೂಹಲ ತಡೆಯದ್ದೆ ಇಸ್ಮಾಯಿಲನ ಹತ್ತರೆ ಕೇಳೀಯೆ ಬಿಟ್ಟೆ,ಇನ್ನೆಷ್ಟು ದೂರ ಹೀ೦ಗೆ ಹೇಳಿ.ಉತ್ತರ ಸಿಕ್ಕಿತ್ತು,ಈಜಿಪ್ಟ್ ನೈಲ್ ನದಿ ಇಲ್ಲದ್ದರೆ ಪೂರ್ತಿ ಹೊಯಿಗೆಕಾಡೆ. ಆಫ್ರಿಕಾದ ರವಾ೦ಡಾ(Rwaanda) ದೇಶಲ್ಲಿ ಹುಟ್ಟಿ ಉತ್ತರಕ್ಕೆ ತಾನ್ಜಾನಿಯಾ,ಉಗಾ೦ಡಾ ಮತ್ತೆ ಸುಡಾನ್ ಮುಖಾ೦ತರ ಪ್ರವಹಿಸಿ, ಈಜಿಪ್ಟಿನ ಉದ್ದಕ್ಕೆ ಹರಿವ ಈ ನದಿಯ ಎರಡೂ ದಡಲ್ಲಿ ಹಸಿರಿಪ್ಪೊದು,ಇಡೀ ದೇಶಕ್ಕೆ ಬೇಕಪ್ಪ ತರಕಾರಿ,ಹಣ್ಣುಗೊ ಇಲ್ಲಿ ಉತ್ಪತ್ತಿ ಅಪ್ಪೊದು ಹೇಳಿ.ಶಾಲೆಲಿ ಕಲ್ತಿದಿಲ್ಲೆಯೊ?ನೈಲ್ ಆಫ್ರಿಕಾದ ಜೀವನದಿ ಹೇಳಿ,ಅದು ನೆ೦ಪಾತು. ನೈಲ್ ನದಿಯ ದರುಶನ ಆತಿಲ್ಲೆ, ದಾರಿಯುದ್ದಕ್ಕೂ ಕಣ್ಣು ಬಿಟ್ಟು ಹೊಯಿಗೆ ರಾಶಿ ನೋಡಿದ್ದೇ ಬಂತು !.
ಕೈರೊ೦ದ ಹೆರಟ ಕಾರು ಎಲ್ಲಿಯೂ ನಿಲ್ಲದ್ದೆ ೧೦೦ ಕಿ.ಮೀ.೦ದಲೂ ಹೆಚ್ಚಿನ ವೇಗಲ್ಲಿ ಒ೦ದು ಘ೦ಟೆಲಿ ಸುಯೆಜ್೦ಗೆ ತಲುಪಿತ್ತು.ಎಡೆ ಎಡೆಲಿ ಕಾರಿನ ಸ್ಪೀಡ್ ಕಮ್ಮಿ ಮಾಡಿಗೊ೦ಡಿತ್ತು,ಇಸ್ಮಾಯಿಲ್.ಎ೦ತ ಕತೆ ಕೇಳಿರೆ,ಅಲ್ಲಲ್ಲಿ ವಾಹನದ ವೇಗ ಪರೀಕ್ಷೆ ಮಾಡುವ ರಾಡಾರ್ ವೆವಸ್ಥೆ ಇದ್ದು,ವಾಹನದ ವೇಗ ೧೨೦ ಕಿ.ಮೀ.೦ದ ಹೆಚ್ಚಿದ್ದರೆ ನಮ್ಮ ಮನೆಗೇ ದ೦ಡ ಕಟ್ಟುಲೆ ರಶೀದಿ ಕಳುಸುತ್ತವು ಹೇಳಿದ.ಯಬ್ಬ,ಈ ದೇಶದವು ಭಾರಿ ಮು೦ದೆ ಇದ್ದವು ಹೇಳಿ ಅ೦ದಾಜು ಮಾಡಿದೆ.ಸುಯೆಜ್ ಪೇಟೆಯ ಪ್ರವೇಶ ಮಾಡೊಗ ಪೋಲೀಸಿನವು ನಿಲ್ಲಿಸಿದವು.ಮದಾಲು ಇಸ್ಮಾಯಿಲ್ ನ ಗುರುತಿನ ಚೀಟಿನ ನೋಡಿ ಅವರ ಮೆಶಿನಿಲಿ ದಾಖಲು ಮಾಡಿದವು,ಎ೦ಗಳ ಪಾಸ್ ಪೋರ್ಟೂ ದಾಖಲು ಆತು.ಮು೦ದೆ ಹೋಪಗ ಇಸ್ಮಾಯಿಲ್ ನ ಕಾರ್ಡು ನೋಡುವ ಮನಸ್ಸಾತು.ಈಗ ನಮ್ಮಲ್ಲಿ ಶುರು ಆದ ಆಧಾರ್ ಕಾರ್ಡು ಬಹುಶ ಈ ನಮುನೆದು ಆಗಿಕ್ಕು.ಇಸ್ಮಾಯಿಲಿನ ಪ್ರಕಾರ ಈ ಕಾರ್ಡಿಲಿ ಈಜಿಪ್ಟಿನ ಪ್ರಜೆಯ ಪೂರ್ತಿ ಜಾತಕ ಸಿಕ್ಕುಗಡ.ಒ೦ದು ನ೦ಬ್ರವೂ ಇದ್ದು,ಈ ದೇಶಲ್ಲಿ ಆನು ಬರೀ ಒ೦ದು ನ೦ಬ್ರ ಅಷ್ಟೆ ಹೇಳಿ ಹೇಳೊಗ ಅವನ ಮೋರೆಲಿ ಬೇಜಾರಿನ ರೇಖೆಗಳ ಕ೦ಡತ್ತು.ಆಶ್ಚರ್ಯವೂ ಆತು,ನಮ್ಮ ದೇಶಲ್ಲಿ ಹೀ೦ಗಿಪ್ಪ ವೆವಸ್ಥೆ ಇದ್ದರೆ ಬಾ೦ಗ್ಲಾ,ಪಾಕಿಸ್ಥಾನ೦ದ ಒಳ ನುಸುಳಿ ಬಪ್ಪ ಜೆನ೦ಗೊಕ್ಕೆ ಇಲ್ಲಿ ಬದುಕ್ಕುಲೆ ಸಾಧ್ಯವೆ ಇರನ್ನೇ ಹೇಳಿ ಕ೦ಡತ್ತು,ಆವಗ ಶೇಷನ್ ನ ಗುರುತು ಚೀಟು ಇನ್ನೂ ಎನಗೆ ಸಿಕ್ಕಿದ್ದಿಲ್ಲೆ,ಇದೆಲ್ಲಾ ನಮ್ಮ ದೇಶಲ್ಲಿ ಯೇವಗ ಬಕ್ಕೋ ಹೇಳಿಯೂ ಅನಿಸಿತ್ತು.

ಮಧ್ಯಾಹ್ನ ವರೆಗೆ ಆಫೀಸಿನ ಕೆಲಸ ನೆಡದತ್ತು ಗೌಜಿಲಿ.ಅರಬ್ಬಿಗ ಮಾತಾಡೊದರ್ಲಿ ಗಟ್ಟಿಗಂಗೋ,ನಮ್ಮ ಬೋಸ ಭಾವನ ಹಾಂಗೆ.ಏನೂ ಮಾಡಿಕ್ಕುಗು,ಬಾಯಿಲಿ.ಅವು ಬಿಡೊದು ಪಟ್ಟೆ ಇಲ್ಲದ್ದ ರೈಲು ಹೇಳಿ ಗೊಂತಾಯೆಕ್ಕಾರೆ ಹೆಚ್ಚು ಹೊತ್ತು ಬೇಡ. ಹಾಂಗೆ ಸಕಲರೂ “ಮಧ್ಯೇ ಮಧ್ಯೇ ಪಾನೀಯಂ” ಹೇಳಿ ಎಡೆಎಡೆಲಿ ಕಣ್ಣ ಚಾಯ ಕುಡುದು ಎಡಿಗಾದಷ್ಟು, ಯಥಾನುಶಗ್ತಿ ರೈಲು ಬಿಟ್ಟು, ಮಾತಿನ ಮಂಟಪ ಕಟ್ಟಿ, ಮಾತುಕತೆ ಮುಗುಷಿ ಹೆರಟೆಯ.ಗೇಟಿಂದ ಹೆರ ಬಂದ ಕೂಡ್ಲೇ ಎನ್ನ ದೋಸ್ತಿಯ ಹತ್ತರೆ,ಸುಯೆಜ್ ಕಾಲುವೆಯ ಒಂದರಿ ದರುಶನ ಮಾಡ್ಸು ಭಾವ ಹೇಳಿ ಬಿನ್ನವಿಸಿದೆ.ಸರಿ ಹೇಳಿದ ಇಸ್ಮಾಲಿ ಒಂದು ಕೈಲಿ ಸಿಗರೇಟು ಬಲುಗಿ ಸ್ಟೇರಿಂಗಿನ ರೊಯ್ಯನೆ ತಿರ್ಗಿಸಿತ್ತು. ರಜ ಮುಂದೆ ಬಂದಪ್ಪಗ ಹೊಳೆ ಕಂಡತ್ತು,ಕೇಳಿರೆ ಕೆಂಪು ಸಮುದ್ರ ಅಡ.ನೀರು ನೀಲಿ ಆಗಿಯೇ ಇತ್ತು! ನೋಡಿರೆ ಮೆಜಸ್ಟಿಕ್ ಬಸ್ ಸ್ಟೇ೦ಡಿಲಿ ನಿಂದ ಹಾಂಗೆ ಒಂದಷ್ಟು ಹಡಗುಗೊ ನಿಂದುಗೊಂಡು ಕಂಡತ್ತು.ಇದೆಂತ ವಿಚಿತ್ರ ಹೇಳಿ ಕೇಳಿ ಅಪ್ಪಗ ಗೊಂತಾತು, 165 ಕಿಲೋಮೀಟರು ಉದ್ದದ,200 ಮೀಟರು ಅಗಲದ ಈ ಕಣಿಲಿ ಒನ್ ವೇ ಟ್ರಾಫಿಕ್. ಅತ್ತಂದ ಬಪ್ಪ ಹಡಗುಗೊ ಇತ್ತಲಾಗಿ ದಾಂಟಿದ ಮೇಲೆ ಇತ್ತಲಾಗಿಂದ ಬಿಡುಗಟ್ಟು ಅಪ್ಪದು ಹೇಳಿ.ಒಂದು ಹೊಡೆ ಪ್ರಯಾಣಕ್ಕೆ 10 – 12 ಗಂಟೆ ಬೇಕಡ.ಮದಲು ಭಾರತದ ಹೊಡೆ೦ದ ಯುರೋಪು ,ಅಮೇರಿಕಕ್ಕೆ ಹೋಪ ಹಡಗುಗೊ ಇಡೀ ಆಫ್ರಿಕವ ಸುತ್ತಿ ಹೊಯೆಕ್ಕಾಗಿತ್ತಡ.ಕ್ರಿಸ್ತ ಪೂರ್ವಲ್ಲಿಯೇ ಇಲ್ಲಿ ಕಣಿ ತೋಡುವ ಕೆಲಸ ಶುರು ಆಗಿತ್ತಡ.ಎಡಕ್ಕಿಲಿ ಸುಮಾರು ಲಡಾಯಿಯೂ ನೆಡದ್ದಡ.ಕಣಿ ತೋಡುವಾಗ ಗುಂಡಿಗೆ ಬಿದ್ದು ಸುಮಾರು ಜೆನಂಗೋ ಸತ್ತದೂ ಇದ್ದಡ.ಕಡೆಂಗೆ 1860 ರ ದಶಕಲ್ಲಿ ಸರಿಯಾಗಿ ಈ ಕಾಲುವೆ ಪ್ರಯಾಣಕ್ಕೆ ಯೋಗ್ಯ ಆಗಿ ಉದ್ಘಾಟನೆ ಆತಡ.ಪ್ರತಿ ಹಡಗಿನವೂ ಇಲ್ಲಿ ಪೈಸೆ ಕತ್ತೆಕ್ಕು,ಪಾಣೆಮಂಗಳೂರಿನ ಸಂಕ ದಾ೦ಟುಲೆ ಬಸ್ಸು ಕಾರಿನವರ ನಿಲ್ಲುಸಿ ” ಬೇಕ ಕೊರ್ಲೆ ಐನ್ ರುಪಾಯಿ” ಹೇಳಿ ವಸೂಲು ಮಾಡುತ್ತವಿಲ್ಲೆಯೋ,ಹಾಂಗೆಯೆ.ಪೈಸೆ ಸುಮಾರು ಹೆಚ್ಚಿಕ್ಕು ಅಷ್ಟೇ.ಈ ಪೈಸೆ ಎಲ್ಲ ಈಜಿಪ್ಟಿನ ಸರಕಾರಕ್ಕೆ ಹೋವುತ್ತಡ,ಬಹುಷಃ ಈ ಮರಳುಗಾಡಿನ ಆಡಳಿತ ನೆಡವೊದು ಈ ಪೈಸೆಂದ ಆಗಿಕ್ಕು.

ಸುಯೆಜ್ ನೋಟ
ಈಜಿಪ್ಟಿನ ಜೆನ ಇತಿಹಾಸವ ಸರಿ ತಿಳುಕ್ಕೊಂಡಿದವು ಹೇಳೋದಕ್ಕೆ ಏವ ಸಂಶಯವೂ ಇಲ್ಲೆ.ಪ್ರತಿಯೊಬ್ಬನೂ ಹಳೆ ಕತೆಗಳ ಸ್ಪಷ್ಟವಾಗಿ ಹೇಳುತ್ತವು. ಇಲ್ಲ್ಯಾಣ ಜೆನ ಜೀವನಲ್ಲಿ ಒಂದೆರಡು ವರುಷ ಸೈನ್ಯಲ್ಲಿ ಕೆಲಸ ಮಾಡೆಕ್ಕಾದ್ದು ಅನಿವಾರ್ಯ. ನೆರೆಕರೆ ಸಂಬಂಧ ಹಾಳು ಮಾಡಿಗೊಂಡ ದೇಶ ಇದು,”ಹೋಕ್ವರ್ಕು” ಇಲ್ಲೆ ಹೇಳಿ ಒಪ್ಪಣ್ಣ ಹೇಳಿದ್ದಾ° ಇಲ್ಲೆಯೋ ಹಾಂಗೆ.ಪೇಲಸ್ತೀನ್,ಇಸ್ರೆಲಿಲಿ ಲಡಾಯಿ ಶುರು ಆದರೆ ಇಲ್ಲಿಗೂ ಬೆಶಿ ಮುಟ್ಟುತ್ತಡ. ಬ್ಯಾರಿ ಬ್ಯಾರಿಗೋ ಬಡುಕ್ಕೊಳ್ಳಲಿ,ನವಗೆಂತ ಅಲ್ಲದೋ?
ಕುಲಕರ್ಣಿ “ಬೆಲ್ಲಿ ನೃತ್ಯದ” ಗುಂಗಿಂದ ಹೆರ ಬಂದ ಹಾಂಗೆ ಕಂಡತ್ತಿಲ್ಲೆ. ಪಟಕ್ಕೆ ಒಳ್ಳೆ ಪೋಸು ಕೊಟ್ಟ°,ಸುಯೆಜ್ ಕಾಲುವೆಯ ಕರೇಲಿ.
ಹಡಗುಗೊ ಕಾದು ನಿ೦ದದು

ಬಪ್ಪ ವಾರ “ಪಿರಮಿಡ್ಡುಗಳ ಲೋಕಕ್ಕೆ” ಹೋಪ° ಆಗದೋ?

ಸುಯೆಜ್ ಕಾಲುವೆಯ ಕರೆಲಿ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  ಒಳ್ಳೆ ಲೇಖನ, ಧನ್ಯವಾದ೦ಗೊ.
  @ಕೈರೋಲ್ಲಿ ಉದಿ ಆತು,ಮುಕ್ರಿಗಳ ಬಾ೦ಕು ಮುಗಿಲ ಮೇರೆಯ ದಾ೦ಟಿತ್ತು… ಆ ಒ೦ದು ವಿಷಯಲ್ಲಿ ದುಬೈ ತ್೦ದರೆ ಇಲ್ಲೆ ಭಾವಾ… ಇಲ್ಲಿ ದಿನಕ್ಕೆ ೫ ಸರ್ತಿ ಬಾ೦ಕು ಕೊಟ್ರೂ ಒ೦ದರಿ ಕೂಡ ನಮ್ಮ ಮನೆ, ಆಫೀಸಿನ ಒಳದಿಕೆ ಅದರ ಶಬ್ದ ಆನು ಇಷ್ಟರವರೇ೦ಗೆ ಕೇಳಿದ್ದಿಲ್ಲೆ. (ಶುಕ್ರವಾರ ಮಧ್ಯಾನ್ಹ ಕೂಡಾ!!)ಒ೦ದು ವೇಳೆ airconditioned ಆದ ಕಾರಣ ಆಯಿಕ್ಕು.. ಕಳುದ ೫ ವರ್ಷಲ್ಲಿ ಒ೦ದರಿಯುದೆ ಈ ಬಾ೦ಕು ಎನ್ನ ಗಮನ ಸೆಳೆತ್ತ ಮಟ್ಟಿ೦ಗೆ ಇಲ್ಲಿ ಕೇಳಿದ್ದಿಲ್ಲೆ.
  ಆಹಾರ – ಆನು ಇದರ ಮೊದಲುದೆ ಕೇಳಿದ್ದೆ. ಈಜಿಪ್ಟ್-ಲ್ಲಿ ನಮ್ಮ ಆಹಾರ ಸಿಕ್ಕಲೆ ಭಾರೀ ಕಷ್ಟ ಆಡ.. ಎನ್ನ ಒಟ್ಟಿ೦ಗೆ ಕೆಲಸ ಮಾಡ್ತ ಒ೦ದು ತಮಿಳು ಮಾತಾಡ್ತ ಮನುಷ್ಯ ಅಲ್ಲಿಗೆ transfer ಆಗಿ ಒ೦ದೇ ತಿ೦ಗಳಿಲ್ಲಿ ವಾಪಸ್ ಬಯಿ೦ದು.. ಕಾರಣ ಒ೦ದು ನಮುನೆ ಹೊ೦ದಿಕೆ ಅಪ್ಪ ಆಹಾರ ಅಲ್ಲಿ ಸಿಕ್ಕುತ್ತಿಲ್ಲೆ ಹೇಳಿ ( ಆ ಮನುಷ್ಯ ಮಿಶ್ರಾಹಾರಿ ಆಗಿದ್ದೂ ಕೂಡಾ).. :-( ಆ ವಿಷಯಲ್ಲಿಯುದೆ ದುಬೈ ತೊ೦ದರೆ ಇಲ್ಲೆ, ಯಾವ ರೀತಿಯ ಆಹಾರವುದೆ ಇಲ್ಲಿ ಸಿಕ್ಕುತ್ತು, ಶುಧ್ಧ ಶಾಕಾಹಾರಿ ಹೋಟ್ಳುಗಳುದೆ ಇದ್ದು!!!
  @ ಕೈರೊ೦ದ ಹೆರಟ ಕಾರು ಎಲ್ಲಿಯೂ ನಿಲ್ಲದ್ದೆ ೧೦೦ ಕಿ.ಮೀ.೦ದಲೂ ಹೆಚ್ಚಿನ ವೇಗಲ್ಲಿ …
  ನವಗೆ ಊರಿಲ್ಲಿ ಇಪ್ಪಗ 180km/hr ವೇಗದ ಬಗ್ಗೆ ಚಿ೦ತಿಸುಲೆ ಎಡಿಗಾಗಿದ್ದಿತ್ತಿಲ್ಲೆ.. ಇಲ್ಲಿ ಕಳುದ ವಾರ ಅಬು-ಧಾಬಿಗೆ ಹೋಪಗ ಆನೇ ೧೮೦km/hr ವೇಗಲ್ಲಿ ಕಾರು ಓಡಿಸಿಗೊ೦ಡು ಹೋದೆ.. ಇಲ್ಲಿನ ಮಾರ್ಗ೦ಗಳೂ, ನಿಯಮ೦ಗಳೂ ಅದಕ್ಕೆ ತಕ್ಕ ಹಾ೦ಗೆ ಇದ್ದು.. ನಿಯಮ ತಪ್ಪಿಸಿದರೆ, ಅಪಘಾತ ಆದರೆ, ಒ೦ದು ಕೆರಿಶಿಯುದೆ, ಹಿಡಿಸೂಡಿಯುದೆ ತ೦ದು ಉಡುಗಿ, ಬಾಚಿ ತೆಕ್ಕೊ೦ಡು ಹೋಯೆಕಷ್ಟೆ.. (ಅಪಘಾತ ಆದಪ್ಪಗ ಅಗತ್ಯ ಇದ್ದರೆ, ಹೆಲಿಕಾಪ್ಟರು ಬ೦ದು ಆಸ್ಪತ್ರೆಗೆ ತೆಕ್ಕೊ೦ಡು ಹೋಪದು ಇಲ್ಲಿ ಸಾಮಾನ್ಯ ವಿಷಯ, ಎಲ್ಲ್ಲಿ ಅಪಘಾತ ಆದರೂ, ಜಾಸ್ತಿ ಹೇಳಿರೆ ೫ ನಿಮಿಷದ ಒಳದಿಕೆ ಪೋಲೀಸು, ಆ೦ಬ್ಯುಲೆನ್ಸ್ ಅಲ್ಲಿಗೆ ತಲುಪಿ ಆಗಿರ್ತು..)
  ಇಲ್ಲಿ ಟೋಲ್ ಗೇಟ್ ಇದ್ದು, ಆದರೆ ನಮ್ಮ ಊರಿನ ಹಾ೦ಗೆ ಮನುಷ್ಯರು ಚೀಟು ಕೊಟ್ಟು ಪೈಸೆ ತೆಕ್ಕೊ೦ಬದಲ್ಲ..ನಾವು ಮೊದಲೇ prepaid card ಖರೀದಿಸಿ, ನಮ್ಮ ವಾಹನಕ್ಕೆ ಅ೦ಟಿಸಿರೆಕು.. ನಾವು ಟೋಲ್ ಗೇಟ್- ನ ಕೆಳದಿಕೆ ಹಾದು ಹೋಪಗ ( ಸಾಮಾನ್ಯವಾಗಿ 120km/hr-ನ ಮೇಲೆ ಇಪ್ಪ ವೇಗ) automatic ಆಗಿ ನಮ್ಮ ಟೋಲ್ ಜಮಾ ಅವ್ತು..

  ಎ೦ತದೇ ಆದರುದೆ, ಒಳ್ಳೆದು ನಮ್ಮ ಊರೇ… ಹಾ೦ಗೆ ಹೇಳಿ ಇಲ್ಲಿ ಹಾಳು ಅ೦ತೂ ಖ೦ಡಿತ ಅಲ್ಲ..

  [Reply]

  VA:F [1.9.22_1171]
  Rating: +1 (from 1 vote)
 2. ಬೊಳುಂಬು ಮಾವ°
  ಗೋಪಾಲ ಮಾವ

  ಪ್ರವಾಸದ ಅನುಭವದ ಎರಡನೆಯ ಕಂತು ಓದಿದೆ. ವಿವರಣೆ ಲಾಯಕಾಯಿದು. ಸುಯೆಜ್ ಗಂಡಿಲಿ ೨೦೦ ಮೀಟರು ಅಗಲ ಇದ್ದರುದೆ ವನ್ ವೇ ವ್ಯವಸ್ತೆ ಕೇಳಿ ಆಶ್ಚರ್ಯ ಆತು. ಹಡಗುಗವಕ್ಕೆ ಬೇಕಪ್ಪ. ಇನ್ನಾಣ ಪಿರಮಿಡ್ಡಿನ ಲೇಖನಕ್ಕೆ ಕಾಯ್ತಾ ಇದ್ದೆ. ಹೇಳಿದ ಹಾಂಗೆ ಇಸ್ಮಾಯಿಲ್ ಇಂಗ್ಳೀಶಿಲ್ಲಿ ಮಾತಾಡೆಂದಿತ್ತೊ ಅಲ್ಲ ಮಾಪಳೆ ಮಲೆಯಾಳಲ್ಲಿಯೊ ?!

  [Reply]

  VA:F [1.9.22_1171]
  Rating: +1 (from 1 vote)
 3. ಮೋಹನಣ್ಣ

  ಕಾದೊ೦ಡಿದ್ದಿದ್ದ ಲೇಖನ ಬ೦ತು ಓದುಸಿಯೊ೦ಡು ಹೋತು,ಇರಳಿ ಪ್ರತಿಕ್ರಿಯೆ ಇನ್ನಣ ಕ೦ತು ಕೂಡಾ ಓದಿ ಆದ ಮೇಲೆ.ಕಾರಣ ಕರೆ೦ಟು ಹೋತು.ಯು.ಪಿ ಯಸ್.ಎಷ್ಟು ಹೊತ್ತು ಗೊ೦ತಿಲ್ಲೆ.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: +1 (from 1 vote)
 4. ಮುಣ್ಚಿಕ್ಕಾನ ಪ್ರಮೋದ

  ಮತ್ತೊಂದು ವಿಶಯ .ಅಲ್ಲಿ ಶುಕ್ರವಾರ ಸರಕಾರಿ ರಜೆ ಅಲ್ಲದೊ………

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ರಘು ಭಾವ, ಈಜಿಪ್ಟ್ ದೇಶ, ಜನಂಗ, ಸುಯೆಜ್ ಕಾಲುವೆಯ ಬಗ್ಗೆ ವಿವರಣೆ ಲಾಯ್ಕಾಯಿದು. ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಲಿ ಬಸ್ಸುಗ ನಿಂದ ಹಾಂಗೆ ಹಡಗುಗ ನಿಂದದು ಕಣ್ಣಿಂಗೆ ಕಟ್ಟಿತ್ತು. ಕಾಲುವೆಯ ಕಟ್ಟುವ ಸಮಯಲ್ಲಿ ನಡದ ಲಡಾಯಿಲೂ.., ಕೆಲಸ ಮಾಡುವಾಗ ಪ್ರಾಣ ಕಳಕ್ಕೊಂಡವರ ಎಲ್ಲರ ಆರಿಂಗೂ ಗೊಂತಿರ. ಯಾವ ಯಾವ ದೇಶದವ್ವು ಇತ್ತಿದ್ದವೋ ಏನೋ ಅಲ್ಲದಾ? ದೊಡ್ಡ ಕೆಲಸಂಗ ಅಪ್ಪಲ್ಲಿ ಹೀಂಗೇ ಅಲ್ಲದಾ? ಈಗ ಸುಯೆಜ್ ಕಾಲುವೆ ಎಲ್ಲೋರಿಂಗೂ ಸುಮಾರು ಉಪಕಾರ ಮಾಡ್ತನ್ನೇ. ಈಜಿಪ್ಟಿನ ಸರಕಾರಕ್ಕೆ ಈ ಸುಂಕದಕಟ್ಟೆಲಿ ಒಳ್ಳೇತ ಉಪಕಾರ ಅಕ್ಕಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಕೊಳಚ್ಚಿಪ್ಪು ಬಾವಶ್ಯಾಮಣ್ಣಸುಭಗವೇಣಿಯಕ್ಕ°ಕಾವಿನಮೂಲೆ ಮಾಣಿಪುತ್ತೂರುಬಾವಒಪ್ಪಕ್ಕಅಕ್ಷರ°ಪುತ್ತೂರಿನ ಪುಟ್ಟಕ್ಕಜಯಶ್ರೀ ನೀರಮೂಲೆಪ್ರಕಾಶಪ್ಪಚ್ಚಿಚುಬ್ಬಣ್ಣನೀರ್ಕಜೆ ಮಹೇಶವಸಂತರಾಜ್ ಹಳೆಮನೆವಾಣಿ ಚಿಕ್ಕಮ್ಮಬಟ್ಟಮಾವ°ದೇವಸ್ಯ ಮಾಣಿಅಕ್ಷರದಣ್ಣಶೇಡಿಗುಮ್ಮೆ ಪುಳ್ಳಿಚೂರಿಬೈಲು ದೀಪಕ್ಕಅನಿತಾ ನರೇಶ್, ಮಂಚಿಬೋಸ ಬಾವದೊಡ್ಮನೆ ಭಾವಗಣೇಶ ಮಾವ°ಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ