ಹವ್ಯಕ ಜೀವನದ ಚಿತ್ರಣ

April 10, 2011 ರ 10:54 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎನಗೆ ತುಂಬಾ ಇಷ್ಟವಾದ ಒಂದು ಹಳೆ ಕಾದಂಬರಿಯ ಬಗ್ಗೆ ಇಲ್ಲಿ ಬರೆತ್ತಾ ಇದ್ದೆ.

ಬೈಲಿಲಿ ತುಂಬಾ ಜೆನ ಅದರ ಓದಿಕ್ಕು.

ಅದುವೇ ಶಿವರಾಮ ಕಾರಂತರ ‘ ಬೆಟ್ಟದ ಜೀವ.’

ಇದು ಕಾರಂತರು ೧೯೪೩ರಲ್ಲಿ ಬರೆದ ಕಾದಂಬರಿ .

ಗುತ್ತಿಗಾರಿನ ಹತ್ತರೆಯ ಹವ್ಯಕ ಕುಟುಂಬದ ಗೋಪಾಲಯ್ಯ ಹೇಳುವ ಒಬ್ಬ ಮುದುಕನ ಸುತ್ತ ಈ ಕತೆ ಅರಳಿದ್ದು.

ಕಾರಂತರು ಆವಾಗ ಪುತ್ತೂರಿಲಿ ಇತ್ತಿದ್ದವಡ.ಅವಕ್ಕೆ ಕಟ್ಟ ಕುಟುಂಬದ ಒಬ್ಬ ಅಜ್ಜನ ಪರಿಚಯ ಇತ್ತು.ಅವರ ಸಾಹಸ,ಮತ್ತೆ ಒಬ್ಬ ಗೌಡನ ಸಾಹಸವ ಕಣ್ಣಾರೆ ಕಂಡ ಅವು ಈ ಕತೆ ಬರದವಡ.

ಅಲ್ಲದೆ ಅವಕ್ಕೆ ಗುಂಡುಕುಟ್ಟಿ ಮಂಜುನಾಥಯ್ಯ ಹೇಳುವ ಹವ್ಯಕ ಸ್ನೇಹಿತರು ಇತ್ತಿದ್ದವಡ.ಅವರ ಮನೆಲಿ ಕೆಲವು ದಿನ ಕೂದು ಈ ಕತೆ ಬರೆದವಡ.ಹಾಂಗಾಗಿ ಈ ಕತೆ ಒಬ್ಬ ಧೀಮಂತ ಹವ್ಯಕನ ಬಗ್ಗೆ ರೂಪಗೊಂಡತ್ತು ಹೇಳಿ ಕಾರಂತರೇ ಒಂದು ಲೇಖನಲ್ಲಿ ಬರೆದ್ದವು.

ಈ ಹಿನ್ನೆಲೆ ಆನು ತಿಳಿದ್ದು ಈ ಕಾದಂಬರಿಯ ಮೊದಲು ಒದಿ ಎಷ್ಟೋ ವರ್ಷ ನಂತರ! ಅದರ ಮೊದಲೇ ಇದರ ಮತ್ತೆ ಮತ್ತೆ  ಓದಿದ್ದೆ.

ಒಂದು ಕಾಣೆ ಆದ ದನವ ಹುಡುಕ್ಕಿಯೊಂಡು ನಿರೂಪಕ ಶಿವರಾಮಯ್ಯ ಹೋವುತ್ತ-ಇರುಳು ದಾರಿ ತಪ್ಪಿ ,ಗೋಪಾಲಯ್ಯನ ಮನೆಗೆ ಬತ್ತ-ಬೇರೆಯವರ ಸಹಾಯ,ಮಾರ್ಗದರ್ಶನಂದ.

ಅಲ್ಲಿ ಸಂಜೆದೇವನ ಹಾಂಗೆ ,ಎಣ್ಣೆ ಕಿಟ್ಟಿಕೊಂಡು ಕೂದ ಗೋಪಾಲಯ್ಯನ ಕಾರಂತರು ನಮಗೆ ತೋರುಸುತ್ತವು.ಅವರ ಹೆಂಡತಿಯನ್ನೂ ಕ್ರಮೇಣ ಪರಿಚಯ ಮಾಡುಸುತ್ತವು.

ಓದಿಕೊಂಡು ಹೋದ ಹಾಂಗೆ-ನಾವು ಆ ಹಳ್ಳಿಲಿ ಹೋದ ಹಾಂಗೆ ಆವುತ್ತು.ಗೋಪಾಲಯ್ಯ,ಶಂಕರಮ್ಮನ ಹಾಂಗಿಪ್ಪವು ನಾವು ನೋಡಿದವರಲ್ಲೆ ಇದ್ದವು ಹೇಳಿ ಮನಸ್ಸು ಹೇಳುತ್ತು!

ಆ ಅಜ್ಜಂಗೂ ಅಜ್ಜಿಗೂ ಮನುಷ್ಯರ ಕಾಣದ್ದೆ ಅಸಕ್ಕ ಆಯಿದು. ಶಿವರಾಮನ ಹೋಪಲೆ ಬಿಡುತ್ತವಿಲ್ಲೆ.ಅವೇ ಮಾಡಿದ ಕಾಟು ಮೂಲೆ ತೋಟ,ಆಗಮೆ[ಅರ್ಧಲ್ಲಿ ಕೈ ಬಿಟ್ಟದು]ಎಲ್ಲಾ ತೋರುಸುತ್ತವು.ಕಾಟುಮೂಲೆಲಿ ಅವು ಸ್ಥಾಪನೆ ಮಾಡಿದ ಅನಾಥ ಯುವಕ ನಾರಾಯಣ,ಅವನ ಪತ್ನಿ ಲಕ್ಷ್ಮಿ,ಮಕ್ಕೊ ಇವರೊಟ್ಟಿಂಗೆ ಗೋಪಾಲಯ್ಯಂಗಿದ್ದ ಆತ್ಮೀಯತೆ ಮನಸ್ಸಿಂಗೆ ತಟ್ಟುತ್ತು.

ಗೋಪಾಲಯ್ಯನ ಮಗ  ಶಂಭು ಕಲಿವಲೆ ಹೇಳಿ ಹೋದವ ಬತ್ತನೇ ಇಲ್ಲೆ.ಅವಕ್ಕೆ ಅವನದೇ ಜಪ.ಶಿವರಾಮನಲ್ಲೂ ಅವು ಆ ಬಾರದ್ದ  ಮಗನನ್ನೇ ಕಾಣುತ್ತವು.ಆ ದಂಪತಿಯ ಸರಸ ಸಂಭಾಷಣೆ,ಕುಶಾಲು,ಮರುಕ್ಷಣಲ್ಲೆ ಮಗನ ನೆಂಪಾಗಿ ಬೇಜಾರ ಮಾಡುದು-ಹೊಳೆಲಿ ಮೀವಾಗ ಗೋಪಾಲಯ್ಯ ಪೂರ್ವ ಕತೆ ಹೇಳುದು,ನಾರಾಯಣ,ದೇರಣ್ಣ ಇಬ್ಬರೂ ಗೋಪಾಲಯ್ಯನ ಕತೆ ಹೇಳುದು-ಎಲ್ಲಾ ಒಂದರಿಂದ ಒಂದು ಚಂದದ ನಿರೂಪಣೆ.

ಶಂಭುಗೆ ನಾರಾಯಣನ ಹತ್ತರೆ ಸದ್ಭಾವನೆ ಇಲ್ಲೆ.ಅವನ ಮೇಲೆ ನಾರಾಯಣಂಗೂ ನಂಬಿಕೆ ಇಲ್ಲೆ,ಅವ ಬೇರೆ ಜಾಗೆ ಹುಡುಕುತ್ತ.ಇದು ಗೋಪಾಲಯ್ಯಂಗೆ ಗೊಂತಾಗಿ ಬೇಜಾರ ಆವುತ್ತು-ಅವು ಕಾಟುಮೂಲೆಯ ನಾರಾಯಣನ ಹೆಸರಿಂಗೆ ಬರೆತ್ತವು.

ಕಡೆಗೆ ಹುಲಿ ಶಿಕಾರಿ,ಕಾಡಿಲಿ ಸುತ್ತಾಟ-ಎಲ್ಲಾ ಆವುತ್ತು.

ಶಿವರಾಮಯ್ಯನ ತಹಶೀಲ್ದಾರ ಹೇಳಿ ದಿನುಗೋಳಿ ತಮಾಶೆ ಮಾಡುದು,ಅದರ ನಂಬಿ ದೇರಣ್ಣ ದರ್ಕಾಸ್ತಿನ ವಿಷಯ ಹೇಳುದು-ಎಲ್ಲಾ ಚೆಂದ ಆಯಿದು.

ದೇರಣ್ಣಂಗೆ,ಬಟ್ಯಂಗೆ ಗೋಪಾಲಯ್ಯನ ಮೇಲೆ ಇದ್ದ ಪ್ರೀತಿ ಗ್ರಾಮದ ಸಹಜೀವನವ ತೋರುಸುತ್ತು.

ಗ್ರಾಮಜೀವನದ ಕಷ್ಟ ,ಜಾತಿಭೇದ ಈ ವಿಷಯದ ಕುರಿತೂ ಆಗ್ರಹ ಇಲ್ಲದ್ದ ಸೌಮ್ಯ ಟೀಕೆ ಇದ್ದು.

ಅಕೇರಿಗೆ-ಶಂಭುವಿನ ಶಾಲೆಯ ಪಟ ನೋಡಿ ಆನು ಇವನ ಪುಣೆಯ ಹತ್ತರೆ ಕಂಡಿದೆ ಹೇಳಿ ಶಿವರಾಮಯ್ಯ ಹೇಳುತ್ತ.ಶಂಭುವಿಂಗೆ ಅಲ್ಲಿ ಮರಾಠಿ ಹೆಣ್ಣಿನ ಮದುವೆ ಆಗಿರುತ್ತು.ಗೋಪಾಲಯ್ಯನೂ ಶಿವರಾಮಯ್ಯನ ಒಟ್ಟಿಂಗೆ  ,ಪುಣೆಗೆ ಮಗನ ಹತ್ತರೆಂಗೆ ಹೋವುತ್ತವು.ಅವು ಆಗ ಹೇಳುದು ಇಷ್ಟೆ-ಮಗನ ಮೇಲೆ ಯಾವ ಬೇಜಾರವೂ ಇಲ್ಲೆ.ಅವ ಬಂದು ಅಬ್ಬೆಯ ಹತ್ತರೆ ಮಾತಾಡಿರೆ ಸಾಕು.ಇಲ್ಲೇ ಕೂರೆಕು ಹೇಳಿ ಇಲ್ಲೆ.

ನಾವು ಇದರ ಓದಿದ ಹಾಂಗೆ ಗೋಪಾಲಯ್ಯನ ಅಭಿಮಾನಿಗೊ ಆವುತ್ತೆಯೊಂ.ಅವರ ಧರ್ಮ ಬುದ್ಧಿ,ಕರುಣೆ ,ಆದರ-ಎಲ್ಲಾ ನಮ್ಮ ಮರುಳು ಮಾಡುತ್ತು.

ಹವ್ಯಕರ ಮೇಲಾರದ ವರ್ಣನೆ,ಅಡಕ್ಕೆ ಬೆಳೆಸುವ ವರ್ಣನೆ,ಉಪಚಾರದ ಕ್ರಮ-ಎಲ್ಲಾ ಕುಶಿ ಆವುತ್ತು.

ಸ್ವತಃ ಕಾರಂತರು ನಾಸ್ತಿಕರು-ಪರಿಸರವಾದಿ.ಜಾತಿಯ ಕಟ್ಟು ಹರುದು ಹಾಕಿದ್ದವು.

ಆದರೆ ಅವು ಈ ಕಾದಂಬರಿಲಿ ಆಸ್ತಿಕರಾದ ದಂಪತಿಗಳ ಚಿತ್ರಣವ ಅದ್ವಿತೀಯವಾಗಿ ಮಾಡಿದ್ದವು.ಕಾಡಿನೊಟ್ಟಿಂಗೆ ಹೋರಾಡುವ ಜೆನಂಗಳ ಕಷ್ಟವನ್ನೂ ಕಾರಂತರ ಹಾಂಗೆ ಬರೆವಲೆ ಎಡಿವವು ಕಮ್ಮಿ.ಯಾವುದೇ ಪೂರ್ವಗ್ರಹ ಇಲ್ಲದ್ದೆ ಬರೆದ ಅವಕ್ಕೆ ನಮ್ಮ ವಂದನೆ ಸಲ್ಲಲೇ ಬೇಕು.

ನಮ್ಮ ಎಲ್ಲಾ ಮಕ್ಕಳೂ ಈ ಪುಸ್ತಕ ಓದಿರೆ ಅತ್ಯುತ್ತಮ.

ಹವ್ಯಕ ಜೀವನದ ಚಿತ್ರಣ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ಒಳ್ಳೇ ಲೇಖನಕ್ಕೆ ಧನ್ಯವಾದ೦ಗೊ ಗೋಪಾಲಣ್ಣಾ..

  ಈ ಗು೦ಡುಕುಟ್ಟಿ ಮ೦ಜುನಾಥಯ್ಯ ದೊಡ್ಡ ಶ್ರೀಮ೦ತರು, ಎಸ್ಟೇಟು ಮಾಲೀಕರು, ಆದರುದೆ ಬಹಳ ಒಳ್ಳೇ ಮನುಷ್ಯ, ಚಿನ್ನದ೦ಥ ಜನ. ಅವು ಈಗ ತೀರಿಹೋಗಿ ಸುಮಾರು ವರ್ಷ ಆತು, ಅವರ ಮಗ ಗೋಪಾಲಕೃಷ್ಣಯ್ಯ ಹೇಳಿ ಇದ್ದವು. ಅವುದೆ, ಅವರ ಅಬ್ಬೆ (ಮ೦ಜುನಾಥಯ್ಯನವರ ಧರ್ಮಪತ್ನಿ) ಶ್ಯಾಮಲಮ್ಮ ಎಲ್ಲೋರುದೆ ಬಹಳ ಒಳ್ಳೇ ಜನ೦ಗೊ. ಎನ್ನ ಅಪ್ಪ ತೀರಿಹೋದ ಸಮಯಲ್ಲಿ ಬ೦ದಿತ್ತಿದ್ದವು.

  ಶಿವರಾಮ ಕಾರ೦ತರ ಕಾದ೦ಬರಿಗಳ ಬಗ್ಗೆ ಕೇಳಿ ಗೊ೦ತಿದ್ದು, ಕೆಲವು ಪುಸ್ತಕ೦ಗಳ ಓದಿದ್ದೆ. ಈಗ ಶಿವರಾಮ ಕಾರ೦ತರ ಕೃತಿಗೊ ಸಿಕ್ಕುತ್ತೋ? ಎಲ್ಲಿ ಸಿಕ್ಕುಗು?

  [Reply]

  ಗೋಪಾಲಣ್ಣ

  Gopalakrishna BHAT S.K. Reply:

  ಶಿವರಾಮ ಕಾರಂತರ ಕಾದಂಬರಿಗೊ ಬೆಂಗಳೂರಿಲಿ ಮರುಮುದ್ರಣ ಆಯಿದು.ಸಪ್ನಾ ಬುಕ್ ಸ್ಟಾಲಿಲಿ,ಐ.ಬಿ.ಎಚ್.ಲಿ ಸಿಕ್ಕುಗು.ಮಂಗಳೂರು ಅತ್ರಿ ಬುಕ್ ಸೆಂಟರಿಲಿ ಇಪ್ಪಲೂ ಸಾಕು. ಕೇಳಿದ್ದಿಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  dhanyavaada.

  [Reply]

  VA:F [1.9.22_1171]
  Rating: 0 (from 0 votes)
 3. Asha S Vadya

  Nice article… Feel like reading the book..will try to get it and read. Gundukutty Manjunathaiah was a big shot with a huge coffeee esatate yet known for his humbleness.

  [Reply]

  VA:F [1.9.22_1171]
  Rating: 0 (from 0 votes)
 4. ವೇಣುವಿನೋದ್

  ಆನುದೇ ಬೆಟ್ಟದ ಜೀವ ಓದಿದ್ದೆ ಗೋಪಾಲಣ್ಣ, ನಿಂಗೊ ಹೇಳಿದ ಹಾಂಗೆ ಓದಿ ಮುಗಿಸಿದ ಮೇಲೆಯುದೇ ಅಂಬಗಂಬಗ ಕಾಡುವಂಥ ಕಾದಂಬರಿ ಅದು…ಚೋಮನದುಡಿ ಕೂಡಾ ಹಾಂಗೆಯೇ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ’ಬೆಟ್ಟದ ಜೀವ’ ಎನ್ನತ್ತರೆ ಇದ್ದು. ಓದುವವು ಇದ್ದರೆ ಕೊಡ್ಲಕ್ಕು.
  ಕಾದಂಬರಿಲಿ ಗೋಪಾಲಯ್ಯ ಹೇಳುವ ಒಂದು ಮಾತು – “ನಾವು ಈಗ ಮಾಡುಸುತ್ತ ಕೆಲಸ ಇನ್ನಣ ಪೀಳಿಗೆಯವಕ್ಕಾಗಿ ಇಪ್ಪದು. ಈಗ ಇದರಿಂದ ಪ್ರಯೋಜನ ಆಗದ್ದರೂ ಮುಂದಂಗೆ ಅಕ್ಕು, ಹಾಂಗೆ ಪ್ರಯೋಜನ ಆಗದ್ದರೂ ಕೆಲವು ಜೆನಕ್ಕೆ ಇದರಿಂದ ಕೆಲಸ ಆದರೂ ಸಿಕ್ಕಿದ ಹಾಂಗಾತನ್ನೇ” ಹೇಳ್ತದು. ಇದು ಈ ಕಾಡಿಲಿ ಇಷ್ಟೆಲ್ಲ ಕೆಲಸ ಮಾಡುಸಿ ಎಂತ ಪ್ರಯೋಜನ ಹೇಳ್ತ ಕಥಾನಾಯಕನ ಪ್ರಶ್ನೆಗೆ ಉತ್ತರವಾಗಿ ಬಪ್ಪದು. ಅಲ್ಲದ್ದೆ ಸಾಂಕುಮಗ ನಾರಾಯಣನ ಮುಗ್ಧತೆ, ಪ್ರಕೃತಿಯ ಸುಂದರ ಚಿತ್ರಣ ಎಲ್ಲವೂ ಸೇರಿ ಮನಸ್ಸಿಂಗೆ ತಟ್ಟುತ್ತ ಹಾಂಗಿಪ್ಪ ಕಾದಂಬರಿ ಇದು.

  [Reply]

  VA:F [1.9.22_1171]
  Rating: 0 (from 0 votes)
 6. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಸುಮಾರು ಮೂವತ್ತು ವರ್ಷದ ಹಿಂದೆ ಈ ಕಾದಂಬರಿ ಓದಿತ್ತಿದ್ದೆ. ಈಗ ಮರುಮುದ್ರಣ ಆಯಿದು( ಸಪ್ನಲ್ಲಿ ಸಿಕ್ಕುತ್ತು.- ಕಾರಂತರ ಹೆಚ್ಚಿನ ಪುಸ್ತಕ ಐಬಿಎಚ್ ನವು ಮರುಮುದ್ರಣ ಮಾದಡಿದ್ದವು.) ಎಶ್ಟು ಸರ್ತಿ ಓದಿದರೂ ಹಳತ್ತಾವುತಿಲ್ಲೆ.!

  [Reply]

  VN:F [1.9.22_1171]
  Rating: 0 (from 0 votes)
 7. ವೆಂಕಟೇಶ

  ಕಟ್ಟ ಗೋಪಾಲಯ್ಯನವರ ಒಬ್ಬ ಮಗ ವಿ.ಯಸ್. ಕಟ್ಟ ಹೇಳುವವು ಸುಬ್ರಹ್ಮಣ್ಯದ ಹತ್ತ್ಫರೆ ಇಪ್ಪ ಹರಿಹರಲ್ಲಿ (ಕಟ್ಟ) ವಿಶ್ರಾಂತ ಜೀವನಲ್ಲಿ ಇದ್ದವು. ಇನ್ನೊಬ್ಬ ಮಗ ಪಂಜಲ್ಲಿ ಡೆಂಟಿಸ್ಟ್ ಆಗಿದ್ದವು. ಶಿವರಾಮ ಕಾರಂತರ ಕತೆಲಿ ಇಪ್ಪ ಹಾಂಗೆ ಗೋಪಾಲಯ್ಯನವರ ಮಗ ಮನೆ ಬಿಟ್ಟು ಹೋಯಿದ ಇಲ್ಲೆ. ಈ ಬಗ್ಗೆ ವಿ.ಎಸ್. ಕಟ್ಟ ಕಳುದ ವರಿಶ ಬೆಟ್ಟದ ಜೀವ ಕಾದಂಬರಿಯ ಸಿನೇಮ ಮಾಡುಲೆ ಬಂದ ಪಿ. ಶೇಶಾದ್ರಿಯವರತ್ತರೆ ಹೇಳಿತ್ತಿದವು. (ಬೆಟ್ಟದ ಜೀವ ಸಿನೇಮ ಆಯಿದು, ಬಿಡುಗಡೆ ಆಯಿದಿಲ್ಲ್ಫೆ. ಗೋಪಾಲಯ್ಯನ ಪಾತ್ರವ ದತ್ತಣ್ಣಂದೇ ಶಿವರಾಮನ ಪಾತ್ರವ ಸುಚೇಂದ್ರ ಪ್ರಸಾದ್ ಮಾಡಿದ್ದು)

  [Reply]

  ಗೋಪಾಲಣ್ಣ

  Gopalakrishna BHAT S.K. Reply:

  ಬೆಟ್ಟದ ಜೀವ-ನಿಜವಾಗಿ ನಡೆದ ಕತೆ ಅಲ್ಲ.
  ಕಟ್ಟದ ಒಬ್ಬ ಸಾಹಸಿ ಕೃಷಿಕನ ಮತ್ತೆ ಒಬ್ಬ ಗೌಡನ ಏಕಾಂಗಿ ಸಾಹಸ ನೋಡಿ ಈ ಕಾದಂಬರಿ ಬರೆವಲೆ ಸ್ಫೂರ್ತಿ ಬಂತು ಹೇಳಿ ಮುನ್ನುಡಿಲಿ[ಮರುಮುದ್ರಣ ಆದ್ದರಲ್ಲಿ] ಕಾರಂತರು ಬರೆದ್ದವು.
  ಹಾಂಗಾಗಿ ,ಆರಿಂಗೂ ಅನ್ವಯಿಸೆಕ್ಕು ಹೇಳಿ ಇಲ್ಲೆ ಹೇಳಿ ಎನ್ನ ಸಲಹೆ.
  ಬೆTTaದ ಜೀವ ಸಿನೆಮಾ ಅಪ್ಪದು ಸಂತೋಷದ ವಿಷಯ.
  ಕಾದಂಬರಿ ಆಗಿ ಇದು ೨೦ ನೇ ಶತಮಾನದ ಶ್ರೇಷ್ಠ ಕಾದಂಬರಿಗಳಲ್ಲೊಂದು ಹೇಳಿ ಜಿ.ಎಸ್.ಅಮೂರ ಹೇಳುವ ವಿಮರ್ಶಕರು ಬರೆದ್ದವು.
  ಸಿನೆಮಾ ಆಗಿ ಹೇಂಗಾವುತ್ತೊ?

  [Reply]

  VA:F [1.9.22_1171]
  Rating: 0 (from 0 votes)
 8. ಸುಭಗ
  ಸುಭಗ

  ಕಾದಂಬರಿಲಿ ಗೋಪಾಲಯ್ಯನವರ ಒಂದು ದನ ಕಾಣೆಯಾಗಿ, ಎಷ್ಟು ಹುಡ್ಕಿಯೂ ಸಿಕ್ಕದ್ದೆ, ಅಕೇರಿಗೆ ಆ ದನವ ಒಂದು ಹುಲಿ ಹಿಡುದು ತಿಂದಿದು ಹೇಳ್ತ ವಿಚಾರ ಅವಕ್ಕೆ ಗೊಂತಾವುತ್ತು.
  ಆ ಸನ್ನಿವೇಶಲ್ಲಿ ಶಂಕರಿಯಮ್ಮ “ನಮ್ಮ ಮಾಣಿಯನ್ನೂ ಹೀಂಗೇ ಏವದಾರು ‘ಹೆಣ್ಣುಹುಲಿ’ ಹೊತ್ತಂಡು ಹೋಯಿದೋ ಏನೋ!” ಹೇಳಿ ತುಂಬ ವಿಷಾದಂದ ನಿಟ್ಟುಸಿರು ಬಿಡ್ತವು.
  ಅತ್ಯಂತ ಮಾರ್ಮಿಕವಾದ ಸಮೀಕರಣ..!

  ಕಾರಂತಜ್ಜನ ಜನಪ್ರಿಯ ಕಾದಂಬರಿಯ ಬೈಲಿನವಕ್ಕೆ ನೆಂಪು ಮಾಡಿಕೊಟ್ಟದಕ್ಕೆ ಧನ್ಯವಾದಂಗೊ ಗೋಪಾಲಣ್ಣ.

  [Reply]

  VN:F [1.9.22_1171]
  Rating: 0 (from 0 votes)
 9. ಮುಳಿಯ ಭಾವ
  ರಘುಮುಳಿಯ

  ಗೋಪಾಲಣ್ಣ,ಧನ್ಯವಾದ.
  ಕಾರ೦ತರ ಪ್ರತಿಯೊ೦ದು ಕಾದ೦ಬರಿಯೂ ನಮ್ಮ ಕನಸಿನ ಲೋಕಕ್ಕೆ ಕರಕ್ಕೊ೦ಡು ಹೋವುತ್ತು. ಇದೇ ಕಾದ೦ಬರಿಲಿ ಇರೇಕು,”ಬಿಳಿಕೂದಲಿನ ರಾಯರು ಸೊ೦ಪಾದ ಮಲ್ಲಿಗೆ ನಗೆ ನಕ್ಕರು” ಹೇಳುವ ಅಪೂರ್ವ ಪದಪ್ರಯೋಗ ಇಪ್ಪದು.ಪ್ರತಿ ಕಥೆಲಿಯೂ ಬಪ್ಪ ಜೀವನ೦ಗಳ ಸರೀ ಅಧ್ಯಯನ ಮಾಡಿ,ಸ್ವತಹ ಅನುಭವ ಮಾಡಿಗೊ೦ಡು ಬರವೊದು ಅವರ ವಿಶೇಷತೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಪುತ್ತೂರಿನ ಪುಟ್ಟಕ್ಕಮಂಗ್ಳೂರ ಮಾಣಿಪ್ರಕಾಶಪ್ಪಚ್ಚಿಪುತ್ತೂರುಬಾವವೇಣೂರಣ್ಣಕೆದೂರು ಡಾಕ್ಟ್ರುಬಾವ°ಎರುಂಬು ಅಪ್ಪಚ್ಚಿಕೊಳಚ್ಚಿಪ್ಪು ಬಾವಉಡುಪುಮೂಲೆ ಅಪ್ಪಚ್ಚಿಸುವರ್ಣಿನೀ ಕೊಣಲೆವಿನಯ ಶಂಕರ, ಚೆಕ್ಕೆಮನೆವಿದ್ವಾನಣ್ಣಪೆಂಗಣ್ಣ°ದೊಡ್ಮನೆ ಭಾವಪುಟ್ಟಬಾವ°ಶಾ...ರೀವೇಣಿಯಕ್ಕ°ಶ್ರೀಅಕ್ಕ°ವಾಣಿ ಚಿಕ್ಕಮ್ಮಶುದ್ದಿಕ್ಕಾರ°ದೀಪಿಕಾಬೊಳುಂಬು ಮಾವ°ಜಯಶ್ರೀ ನೀರಮೂಲೆಪುಣಚ ಡಾಕ್ಟ್ರುಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ