ಹೀಂಗೊಂದು

March 27, 2011 ರ 7:37 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಷ್ಟು ವರ್ಷ ಪ್ರಾಕ್ಟೀಸ್ ಮಾಡಿ ರೋಗಿಗೊಕ್ಕೆ ಉಪದೇಶ ಮಾಡುವಾಗ ಹೇಳ್ತದರ ಬರದರೆ ಒಳ್ಳೆ ಲೇಖನ ಅಕ್ಕಲ್ಲದೋ ಕೇಳಿದ ಎನ್ನ ಭಾವ°.
ಆನು ವೈಜ್ಞಾನಿಕ ಲೇಖನ ಅದರಲ್ಲೂ ವೈದ್ಯಕೀಯಕ್ಕೆ ಸಂಬಂಧ ಪಟ್ಟದರ ಬರಹ ರೂಪಕ್ಕೆ ಇಳಿಶುದಕ್ಕೆ ಯಾವಾಗಳೂ ಒಪ್ಪಿಗೆ ಕೊಡುವವ° ಅಲ್ಲ.ಬೇಕಾರೆ ಯೇವದಾರೂ ಸಭೆಲಿ ಕೆಲಸ ಇಲ್ಲದ್ದವು ಕೇಳ್ತವು ಹೇಳಿ ಆದರೆ ಎನಗೆ ಗೊಂತಿದ್ದಷ್ಟು ಮತಾಡುವೆ.
ಇಷ್ಟೆಲ್ಲಾ ಅನುಭವ ಇಪ್ಪ ಎನ್ನ ಹಾಂಗಿಪ್ಪ ಎಷ್ಟೋ ವಿದ್ಯಾರ್ಥಿಗೊಕ್ಕೆ ಕಲಿಶಿದ ಮಹಾನುಭಾವ° ಒಬ್ಬ ಬರೆತ್ತ°.ತಾನು ಕಲಿಶಿದ್ದದರನ್ನೇ ತಪ್ಪು ಹೇಳಿ ಈಗ ಹೇಳ್ತಾ ಇದ್ದ°.ನಾವು ಎಂತ ಹೇಳಿ ತಿಳಿಯೆಕ್ಕು.ಕಲ್ತವ°,ಅವನ ಕೈಂದಲೇ,ಕೋಡಂಗಿ ಆದನೋ ಅಂಬಗ?ಅದರ ಬದಲು ಅವ° ಒಂದು ಸಭೆಲಿ ಅದರ ಹೇಳಿರೆ ಚರ್ಚೆ ಮಾಡುವ ಅವಕಾಶ ಇರ್ತಲ್ಲದೋ?ನಮ್ಮ ಸಂಶಯ ದೂರ ಮಾಡ್ಳೆ ಎಡಿಗಲ್ಲದೋ?ಬರವಣಿಗೆಗೆ ಆ ವ್ಯಾಪ್ತಿ ಇಲ್ಲೆ.
ಬರವಗ ಯಾವಗಳುದೇ ಒಂದು ಮಿತಿ ಇರ್ತು.ಒಂದು ಕಾಯಿಲೆಯ ಬಗ್ಗೆ ಎಲ್ಲಾ ವಿವರ ಕೊಡ್ಳೆ ಸಾಧ್ಯವೇ ಇಲ್ಲೆ.ಕೊಡದ್ದರೆ ಜನ ಸಾಮಾನ್ಯರು ಅದರ ಅಪಾರ್ಥ ಮಾಡಿಯೊಂಡು ಒಂದೋ ಅಗತ್ಯ ಇಪ್ಪಗ ಡಾಕ್ಟ್ರ ಹತ್ತರೆ ಹೋಪದರ ತಡವು ಮಾಡುಗು,ಅಲ್ಲ ರಜಾ ಏನಾರು ಸುರುವಪ್ಪಗಳೇ ನಡಿರುಳು ಹೇಳಿ ಕೂಡಾ ಯೋಚನೆ ಮಾಡದ್ದೆ ಉಪದ್ರ ಕೊಡುಗು.ಎನ್ನ ಅಕ್ಕ° ಒಂದಿದ್ದು,ರಜ ತಲೆ ಬೇನೆ ಆದರೆ ಬ್ರೈನ್ ಕೇನ್ಸರೇ ಆಗಿಕ್ಕೋ ಹೇಳಿ ಸಂಶಯ ಪಡುಗಲ್ಲದ್ದೆ ಒಂದು ಹೊತ್ತು ಚಾಯ ಕುಡಿಯದ್ದೆ ಸುರುವಾದ್ದಾಗಿಕ್ಕು ಹೇಳಿ ಯೋಚನೆ ಕೂಡಾ ಮಾಡ.ಅದೇ ಕೆಲವು ಜೆನ ಇದ್ದವು,ಹೇಳಿದ ಮೇಲೆ ಕೂಡಾ ಬೇಕಾದ ಮದ್ದು ಅಥವಾ ಓಪ್ರೇಶನ್ ಆಯೆಕ್ಕಾದ ಸಮಸ್ಯೆ ಇದ್ದರೂ ಮಾಡ್ಳೆ ಹೋಗವು.
ಬರವದೇ ಆದರೆ ಹೇಂಗೆ ಬರೆಯೆಕ್ಕು ಹೇಳ್ತದುದೇ ಸಮಸ್ಯೆಯೇ,ಸಾಮಾನ್ಯ ಜೆನಕ್ಕೆ ಅಪ್ಪ ಹಾಂಗೆ ಬರದರೆ ಅವಕ್ಕೆ ಓದುವಾಗ ಬಪ್ಪ ಸಂಶಯಕ್ಕೆ ಪರಿಹಾರ ಸಿಕ್ಕ.ಪಾಠದ ಹಾಂಗೆ ಬರದತ್ತೋ ಅದು ಮುಗಿಯ.ಮನುಷ್ಯನ ಕಾಯಿಲೆ ವಿವರ್ಸಿದ ಹಾಂಗೇ ಬತ್ತಿಲ್ಲೆ.
ಒಂದರಿ ನಡಿರುಳು ಫೋನ್ ಬಂತು.ಎನ್ನ ಪೈಕಿ ಒಂದು ಹೆಮ್ಮಕ್ಕೊಗೆ ತಲೆ ಬೇನೆ,ಎಂತ ಮಾಡ್ಳಕ್ಕು ಕೇಳ್ಯೊಂಡು.ಎನಗೆ ಒರಕ್ಕಿನ ಅಮಲಿಲ್ಲಿ ಒಂದರಿ ಹೇಳಿ ಹೋಪ ವರೆಗೆ ಆತು,ಒಂದು ಮೆಟಾಸಿನ್ ಮಾತ್ರೆ ತೆಕ್ಕೊಂಡು ಮನುಗಲಿ,ಉದಿಯಪ್ಪಾಗ ನೋಡುವೊ° ಹೇಳಿ.ಆದರೆ ಮಾತಾಡಿದ್ದು ಅಂಥ ಜವಾಬ್ದಾರಿ ಇಲ್ಲದ್ದವ° ಏನಲ್ಲ.ಹಾಂಗಾಗಿ ಆನು ಅವರ ಹತ್ತರೇ ಮಾತಾಡ್ತೆ,ಫೋನ್ ಕೊಡು ಹೇಳಿಯಪ್ಪಗ ಫೋನಿಲ್ಲಿ ಮಾತಾಡ್ಳೆ ಎಡಿಯದ್ದಷ್ಟುದೇ ಜೋರಿದ್ದು ಹೇಳಿ ಗೊಂತಾತು.ಅದಕ್ಕೆ ಬೇಕಾದ ವ್ಯವಸ್ತೆ ಮಾಡಿಯಪ್ಪಗ ಗೊಂತಾದ್ದು ನಿಜವಾಗಿಯೂ ಹೆದರಿಕೆ ಅಪ್ಪ ಹಾಂಗಿದ್ದದೇ.ಅದಕ್ಕೆ ಮೆದುಳಿನ ರಕ್ತಸ್ರಾವ ಆಗಿತ್ತು.ಅಂಬಗ ತಲೆ ಬೇನೆಗೆ ಬೆಶಿ ಚಾಯ ಕುಡುದು ಮನುಗುದು ಯಾವಗ,ಸರಿಯಾದ ತಪಾಸಣೆ ಮಾಡಿ ಮದ್ದೋ ಓಪ್ರೇಶನೋ ಮಾಡುದು ಯಾವಗ ಹೇಳಿ ಬರವಲೆ ಸಾಧ್ಯ ಇಲ್ಲೆ ಹೇಳಿ ಆತಿಲ್ಲೆಯೋ?
ಇನ್ನೊಂದು ಹೊಡೆ ನೋಡುವೋ°.ಎಂಗಳ ಕಂಪೋಂಟ್ರು ಒಂದು ದಿನ ಬಂದ°.ಅವನ ಪೈಕಿ ಒಬ್ಬಂಗೆ ಕೊರಳು ಬೇನೆ.ಹೆಚ್ಚು ದಿನ ಆಯಿದಿಲ್ಲೆ.ಕಂಪೂಟರಿನ ಎದುರೇ ಕೂಪ ಕೆಲಸ,ಬಗ್ಗಿ ಕೂದಾಯಿಕ್ಕಲ್ಲದೋ ಹೇಳಿ ಅವನ ಅಭಿಪ್ರಾಯ.
ಈಗ ಹೇಂಗಿದ್ದು ಜನರ ಮಾನಸಿಕ ಸ್ತಿತಿ ಗೊಂತಿದ್ದೋ,ಎನಗೆ ಗೊಂತಿಪ್ಪದು ಆನು ಕಲ್ತ ವಿಷಯ ಮಾಂತ್ರ ಹೇಳಿ ಅಲ್ಲ.ಪೇಪರಿಲ್ಲಿ,ಟೀವಿಲಿ ನೋಡಿ(ಈಗ ಇಂಟರ್ನೆಟ್ಟಿಲ್ಲಿಯೂ) ಎಲ್ಲದರ ಬಗ್ಗೆ ರಜ ರಜ ಗೊಂತಿದ್ದು ಹೇಳಿ.ರಜ ರಜ ಗೊಂತಿದ್ದರೆ ಎಂತಾವುತ್ತು ಕೇಳಿ.
ಆನು ನೋಡಿ ಎನಗೆ ಗೊಂತಪ್ಪ ವಿಷಯ ಅಲ್ಲ,ಇದಕ್ಕೆ ಎಕ್ಸರೆಯೋ,ಸ್ಕೇನಿಂಗೋ ಮಾಡೆಕ್ಕಕ್ಕು,ಎಂತಕೂ ಒಂದರಿ ಎಲುಬಿನ ತಜ್ಞರಿಂಗೆ ತೋರ್ಸುದು ಒಳ್ಳೆದು ಹೇಳಿ ಕಳ್ಸಿದೆ.
ಕಳ್ದ ವಾರ ಬಂದ.ನಿಂಗೊ ಹೇಳಿದ್ದಪ್ಪು.ಆದರೆ ಇದಕ್ಕೆಲ್ಲಾ ಓ ಅಲ್ಲಿ ಒಬ್ಬ° ಎಣ್ಣೆ ಹಾಕಿ ಗುಣ ಮಾಡ್ತ,ಅವನ ಹತ್ತರೆ ಹೋದರೆ ಸಾಕು ಹೇಳಿ ಮೂರು ತಿಂಗಳು ಮುಂದೆ ಹಾಕಿದವು.ಈಗ ಜೋರಿದ್ದು,ನಿಂಗೊ ಒಂದು ದಾರಿ ತೋರ್ಸೆಕ್ಕು ಹೇಳ್ತ ಸಾರಾಂಶ.
ಹೇಳಿದ ಹಾಂಗೆ ಕೇಳಿದವಿಲ್ಲೆ ಹೇಳಿ ಎಡಿಯ ಹೇಳ್ಲಕ್ಕೋ?
ಎಲ್ಲ ಟೆಸ್ಟ್ ಮಾಡಿ ನೋಡುವಾಗ ಗೊಂತಾತದಾ,ಅದಕ್ಕೆ ಬೆನ್ನೆಲುಬಿಲ್ಲಿ ಟೀಬಿ.ಮದಲೇ ಆಗಿದ್ದರೆ ಮದ್ದಿಲ್ಲಿ ಗುಣ ಆವ್ತಿತು.ಈಗ ಬೆನ್ನು ರಜಾ ಬಗ್ಗಲೆ ಸುರು ಆಯಿದು,ಬೆನ್ನೆಲುಬಿನ ಹತ್ತರೆ ರಜಾ ರೆಶಿಗೆಯೂ ಆಯಿದು.ಬಪ್ಪ ವಾರ ಓಪ್ರೇಶನ್.ಒಂದು ಲಕ್ಷದ ಹತ್ತರೆ ಕರ್ಚಕ್ಕು,ಕರ್ಚು ದೊಡ್ಡದಲ್ಲ,ಇನ್ಶೂರೆನ್ಸ್ ಇಕ್ಕು.ಆದರೆ ಬಂಙ ಬಪ್ಪದಾರು?
ಅಂಬಗ ಬೆನ್ನು ಬೇನೆ ಕೊರಳು ಬೇನೆ ಹೇಳಿ ಲೇಖನ ಎಲ್ಲಿಂದ ಸುರು ಮಾಡುದು ಎಲ್ಲಿ ನಿಲ್ಸುದು?
ಎಂಗೋ ಯೇವತ್ತೂ ತಮಾಷೆ ಮಾಡ್ಸಿಗೊಂಬವೇ,ಶೀತಕ್ಕೆ ಮದ್ದು ಮಾಡಿರೆ ಒಂದು ವಾರ,ಅಲ್ಲದ್ದರೆ ಏಳು ದಿನಲ್ಲಿ ಗುಣ.ಶೀತಕ್ಕೆ ಮದ್ದು ಅಗತ್ಯ ಇಲ್ಲೆ.ದೊಡ್ಡ ದೊಡ್ಡ ಎನ್ನಂದ ಎಷ್ಟೋ ಹೆಚ್ಚು ಕಲ್ತ ದಾಕ್ಟ್ರಕ್ಕಳೂ ಹೇಳ್ತವು.
ಮಳೆಗಾಲಲ್ಲಿ ಹರೀಶ ಬಂದ.ಹೆಂಡತ್ತಿಗೆ ಜ್ವರ,ಶೀತ.ರಜಾ ಮದ್ದು ಕೊಡಿ ಹೇಳಿ.ಹಳ್ಳಿಲಿ ಇದೆಲ್ಲಾ ಸಾಮಾನ್ಯ.ನೋಡ್ಯೇ ಮದ್ದು ಕೊಡೆಕ್ಕು ಹೇಳಿಯೇನೂ ಇಲ್ಲೆ.ನಾಲ್ಕು ಮಾತ್ರೆ ಕಟ್ಟಿ ಕೊಟ್ರಾತು.ನಾವು ರಜಾ ಪೆದಂಬು,ರಜಾ ಜಾಸ್ತಿಯೇ.ಹಾಂಗೆಲ್ಲ ನೋದದ್ದೆ ಕೋಡ್ಳೆ ಅದೆಂತ ಮದ್ದೋ,ಅಲ್ಲ ಬಾಟ್ಳೀಲಿ ಬಪ್ಪ ಜ್ಯೂಸೋ ಕೇಳಿತ್ತು.
ಹಾಂಗಾರೆ ನಿಂಗೊ ಮನಗೇ ಬರೆಕು,ಅದಕ್ಕೆ ಬಪ್ಪಲೆ ಎಡಿಯ ಹೇಳಿ ಸಣ್ಣಕೆ ಹೇಳಿದ°.
ನೋಡಿರೆ ಅದಕ್ಕೆ ಕಣ್ಣು ರಜಾ ಅರಿಶಿನ ಆಗಿತ್ತು.ಕಣ್ಣು ಅರಿಶಿನ ಆದ ಕೂಡ್ಳೇ ಅದು ಅರಿಶಿನಮುಂಡ ಹೇಳ್ಲಾವುತ್ತಿಲ್ಲೆ.ಬೇರೆ ಬೇರೆ ಕಾಯಿಲೆಲಿ,ಕೆಲವು ಮಾತ್ರೆಗಳಲ್ಲಿ ಕೂಡಾ ಕಣ್ಣು ಅರಿಶಿನ ಅಪ್ಪಲೆ ಸಾಧ್ಯ.
ಸರಿ,ನಮ್ಮ ಟೆಸ್ಟುಗೊ ಸುರು.ಅದಕ್ಕೆ ಡೆಂಗೆ ಜ್ವರಂದಾಗಿ ಲಿವರಿಂಗೆ ರಜಾ ತೊಂದರೆ ಆಗಿತ್ತು.ಮತ್ತೆ ಆಸ್ಪತ್ರೆಲಿ ಅಡ್ಮಿಟ್ ಮಾಡಿ ಒಂದು ಹದ್ನೈದು ದಿನ ಅಷ್ಟೇ.ಗುಣ ಆತು ಹೇಳುವೊ°.ಅದೇ ನಮ್ಮ ಕಶಾಯವೋ,ಮೆಟಾಸಿನ್ನೋ ತೆಕ್ಕೊಂಡು ಕೂದಿದ್ದರೆ ಅಥವಾ ಏಳು ದಿನ ನೋಡುವೋ° ಹೇಳಿ ಕುಶಾಲು ಮಾಡಿರೆ ರಕ್ತ ಹೆಪ್ಪು ಕಟ್ಟುವ ವ್ಯವಸ್ತೆ ಸಮತೋಲನ ತಪ್ಪಿ ಜೀವಕ್ಕೆ ಅಪಾಯ ಬಪ್ಪಲೆ ಸಾಧ್ಯ ಇದ್ದತ್ತು.
ಅಂಬಗ ಶೀತ ಜ್ವರಕ್ಕೆ ಏಳು ದಿನ ನೋಡ್ಳಕ್ಕು ಹೇಳ್ತದರಲ್ಲಿ ಸತ್ಯ ಇಲ್ಲೆ ಹೇಳಿ ಆತಿಲ್ಲೆಯೋ?
ಇಂದು ನಮ್ಮ ಹತ್ತರೆ ಮದಲಾಣ ಕಾಲಂದ ಹೆಚ್ಚು ಅನುಕೂಲ ಇದ್ದು,ಆರ್ಥಿಕವಾಗಿಯೂ ಕೂಡಾ.ನವಗೊಬ್ಬ° ಫೇಮಿಲಿ ಡಾಕ್ಟ್ರು ಇರ್ತ°.ಕೈಗೊಂದು,ಬೀಲಕ್ಕೊಂದು ಫೋನಿದ್ದು.ವಿಜ್ಞಾನ ಎಷ್ಟು ಮುಂದುವರ್ದು ಹೇಳಿ ಆನೇನೂ ಹೇಳೆಕ್ಕಾದ್ದಿಲ್ಲೆ.
ಯಾವದೇ ವಿಷಯದ ಬಗ್ಗೆ ಬರವಲೆ ಏನೂ ಕಷ್ಟ ಇಲ್ಲೆ.ಇಂಟೆರ್ನೆಟ್ಟಿಲ್ಲಿ ಬೇಕಾದಷ್ಟು ಸಾಹಿತ್ಯ ಸಿಕ್ಕುತ್ತು,ಅದರನ್ನೇ ಕತ್ತರ್ಸಿ ಅಂಟುಸುವ ಕೆಲಸ ಮಾಡುವ ಲೇಖಕರೇ ಜಾಸ್ತಿ ಅಲ್ಲದ್ದೆ ತನಗೆ ಬಳಸಿ ಗೊಂತಿಪ್ಪದರ ಬರವವು ಕಮ್ಮಿಯೇ.ಕುದುರಗೆ ಕಣ್ಣು ಕಟ್ಟಿ ಅಪ್ಪಾಗ ಕಾಂಬಷ್ಟೇ ಅಕ್ಕಷ್ಟೇ ಕಾಯಿಲೆಯ ಬಗ್ಗೆ ಬರದರೆ.ಅದಕ್ಕೆ ಆಚೀಚ ಹೊಡೇಲಿ ಎಂತ ಇದ್ದು ಹೇಳಿ ಹೇಂಗೆ ಕಾಣದೋ ಹಾಂಗೇ ಅಕ್ಕಷ್ಟೆ
ಅದಕ್ಕೆ ಬೇಕಾಗಿಯೇ ಎನ್ನ ಹತ್ತರೆ ಅರಾರೂ ಕೇಳಿರೆ ಆನು ಎದುರು ಕೂದು ಮಾತಾಡುವೊ° ಹೇಳುದಲ್ಲದ್ದೆ ಬರವವ° ಅಲ್ಲವೇ ಅಲ್ಲ.

ಹೀಂಗೊಂದು, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಮುಣ್ಚಿಕಾನ ಭಾವ

  ನಿಜವನ್ನೇ ಹೇಳಿದಿರಿ ಕೇಜಿಮಾವ. ಈಗಾಣ ಕಾಲಲ್ಲಿ ಬಪ್ಪ ರೋಗಗಳ ಬಗ್ಗೆ ಸರಿಯಾಗಿ ಟೆಸ್ಟ್ ಮಾಡದ್ದೆ ವಿವರಣೆ ಕೊಡುಲೆ ಎಡಿಯ ಅಲ್ಲದಾ… ಲೇಖನ ಒಪ್ಪ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಕೇಜಿ ಮಾವ,
  ನಿ೦ಗಳ ಮಾತು ನಿಜ.ಲೇಖನ ಓದಿ ಸ್ವಯ೦ವೈದ್ಯ ಮಾಡೊದು ಅಪಾಯಕಾರಿ .ಆರೋಗ್ಯದ ವಿಷಯಲ್ಲಿ ಪ್ರತಿಯೊಬ್ಬನೂ ಜಾಗೃತೆಲಿ ವ್ಯವಹರಿಸೆಕ್ಕು.
  ಆದರೆ ಲೇಖನ೦ಗೊ ಓದುಗ೦ಗೆ ವಿಷಯ ಗೊ೦ತಪ್ಪ ಹಾ೦ಗೆ awareness ನ ಉ೦ಟು ಮಾಡುತ್ತು ಅಲ್ಲದೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಪ್ಪಪ್ಪು., ಮೊನ್ನೆ ಎನಗೆ ಕಲ್ಲು ಡಂಕಿ ಬೆರಳಿಂಗೆ ರಜಾ ತಾಗಿ ನೆತ್ತರು ಬಂತು. ಬೇಂಡೇಜು ಹಾಕಲೆ ಹೇಳಿ ದಾಕುಟ್ರನತ್ರೆ ಹೋದೆ. ಹೃದಯ ಬಡಿತ ಎಲ್ಲ ಸ್ಟೆತೋಸ್ಕಾಫ ಮಡಿಗಿ ನೋಡಿದ್ದವು.!!!

  [Reply]

  ಕೇಜಿಮಾವ°

  ಕೆ ಜಿ ಭಟ್ Reply:

  ಅದರ್ಲೇನೂ ತಪ್ಪಿಲ್ಲೆ.ಎನ್ನ ಹತ್ತರೆ ಬಂದರೆ ಆನು ಬ್ಲಡ್ ಶುಗರ್ ಕೂಡಾ ನೋಡ್ತಿತೆ.

  [Reply]

  VA:F [1.9.22_1171]
  Rating: 0 (from 0 votes)
 3. ಅಡ್ಕತ್ತಿಮಾರುಮಾವ°

  ನಿಂಗ ಹೇಳಿದ್ದು ಸರಿ ಡಾಕ್ಟ್ರೆ…ಆದರೆ ಕೆಲವು ಡಾಕ್ಟ್ರಕ್ಕೆ ಸಣ್ಣ ಆಪತ್ತಿನ ವೈಭವೀಕರಿಸುತ್ತವು..ಸಣ್ಣ ರೋಗಕ್ಕೆ ದೊಡ್ಡ ಹೆಸರು ಕೊಟ್ಟು ಸುಲಿಗೆ ಮಾಡುತ್ತವು ಇದಕ್ಕೆ ಎಂತ ಹೇಳುತ್ತಿ?ಸಹಜ ಹೆರಿಗೆ ಅಪ್ಪೊವಕ್ಕೆ siserian ಮಾಡುತ್ತವು ಇದು ಸರಿಯಾ?ಎನಗೆ ಸದ್ಯ ಒನ್ದು ಕಹಿ ಅನುಭವ ಆದ್ದರ ಹೇಳುಲೆ ಬಯಸುತ್ತೆ.. ….ಆನು ದಶಂಬರಲೆ ಬೆಂಗಳೂರಿಂಗೆ ಹೊಗಿತ್ತೆ ಅಲ್ಲಿಂದ ಬಂದಪ್ಪಗ ಹೊಟ್ಟೆಬೇನೆ ಸುರು ಆತು ಹಾಂಗೆ Family ಡಾಕ್ಟ್ರ ಮದ್ದು ಮಾಡಿತ್ತು ಅದು ಅಮೀಬಿಕ್ ಡೀಸೆಂಟ್ರಿ ಹೇಳಿ ಮದ್ದು ಕೊಟ್ಟವು..ಅದರಲ್ಲಿ ಕಮ್ಮಿ ಆತಿಲ್ಲೆ…ದೊಡ್ಡಾಆಸ್ಪ್ಪತ್ರೆ ಗೆ ಹೊಯೆಕ್ಕು ಹೇಳಿ ಆತು ಅಲ್ಲಿ ನಾವ್ ದೊಡ್ಡ ಡಾಕ್ಟ್ರ ಕಂಡತ್ತು ಅವು ನೋಡಿ ಹೇಳಿದವು ಕರುಳು ಬೀಗಿದ್ದು ಕೈಗೆ ಸಿಕ್ಕುತ್ತು ಇದರ ಕೂಡಲೆ ಓಪರೇಶನ್ ಮಾದೆಕ್ಕು ಅಲ್ಲದ್ದರೆ ಅದು ಬೇರೆ ರೋಗಕ್ಕೆ ಸೇರುಗು ಹೇಳೀ….ನಾವ್ ಕೆಡಗಿತ್ತು ಹೇಳಿ ಆತು…ಅಲ್ಲಿ ಇಪ್ಪ ನಮ್ಮಪೈಕಿ ಒಬ್ಬ ಡಾಕ್ಟ್ರ ಬೇಟಿ ಆದೆ ಎಂತಕ್ಕೂ ಮಾವ ನಿಂಗ ಕೂಡಲೆ ಓಪರೇಶನ್ ಮಾಡುಸೆಡೀ ೨ ಟೆಸ್ಟ್ ಮಾಡುಸಿಕ್ಕಿ ಮತ್ತೆ ಆಲೊಚನೆ ಮಾಡಿ ಹೇಳಿದವು ಹಾಂಗೆ ಕರುಳಿನ ಟೆಸ್ತ್ಮ್ ಮಾಡಿ ಅಪ್ಪಗ ಏನೂ ತೊಂದರೆ ಇಲ್ಲೆಹೊಟ್ಟೆ ಒಳ ಎಲ್ಲಾ ಸರೀ ಇದ್ದು ಹೇಳಿ report ಬಂತು..ಮನಗೆ ಬಂದು ೧೦ ದಿನ rest ತೆಕ್ಕೊಂದು ಅಪ್ಪಗ ಹೊಟ್ಟೆ ಬೆನೆ ಕಮ್ಮಿ ಆತು..ದೊಡ್ಡ ಡಾಕ್ಟ್ರ ಮಾತು ಕೇಳಿದರೆ ಅಂತೆ ಕಸ್ಟ್ಟ ಬರೆಕ್ಕಾತು ಅಲ್ಪ್ಪ ಪೈಸವೂ ಮುಗಿಶೆಕ್ಕಾತು ..ಆನು ಹೋದ ಡಾಕ್ಟ್ರ ನಮ್ಮ ಹೋಬಳಿ ಲಿ ದೊಡ್ಡ ಡಾಕ್ಟ್ರ… ಇದಕ್ಕೆ ಎಂತ ಹೇಳುತ್ತಿ??????

  [Reply]

  ಕೇಜಿಮಾವ°

  ಕೆ ಜಿ ಭಟ್ Reply:

  ಅದಕ್ಕೇ ಆನು ಯಾವಾಗಳೂ ಹೇಳ್ತೆ ಒಬ್ಬ ಡಾಕ್ಟ್ರನ ಅಭಿಪ್ರಾಯ ಅವನ ಮಟ್ಟಿಂಗೆ ಸರಿ ಆಗಿಕ್ಕು.ಆದರೆ ನಾವು ಓಪ್ರೇಶನ್ ನ ಹಾಂಗಿಪ್ಪ ವಿಷಯಕ್ಕಪ್ಪಗ ನಮ್ಮ ಮನೆ ಡಾಕ್ಟ್ರು ಹೇಳುದರ ಮದಲು ಕೇಳೀ ಮತ್ತೆ ಇನ್ನೊಬ್ಬನ ಅಭಿಪ್ರಾಯ ತೆಕ್ಕೊಳೆಕ್ಕು.ಎರಡ್ನೇ ಡಾಕ್ಟ್ರನ ಅಭಿಪ್ರಾಯ ತೆಕ್ಕೊಂಬ ವಿಶಯ ಪ್ರಸ್ತಾಪ ಮಾಡಿದ ಕೂಡ್ಳೇ ಸುರುವಾಣವ° ಈ ಅಸಾಮಿಯ ಮಂಗ ಮಾಡುದು ಸುಲಭ ಅಲ್ಲ ಹೇಳೀ ತಿಳಿತ್ತ°.ಎರಡ್ನೇ ಅಭಿಪ್ರಾಯ ತೆಕ್ಕೊಂಬದು ರೋಗಿಯ ಕಾನೂನು ಬದ್ಧ ಹಕ್ಕು.
  ಸಮ್ಮಾಜಲ್ಲಿ ಎಲ್ಲ ನಮುನೆಯ ಮನುಷ್ಯರಿಪ್ಪ ಹಾಂಗೇ ಈಗ ಈ ಕ್ಷೇತ್ರವೂ ಆಯಿದು,ಅಪ್ಪಲಾವುತಿತಿಲ್ಲೆ.ಆದರೂ ನಮ್ಮ ಊರಿಲ್ಲಿ ಹೆಚ್ಚಿನವು ಸರಿ ಇದ್ದವು ಹೇಳಿ ಎನ್ನ ಅನುಭವ.
  ನೆಂಪು ಮಡಿಕ್ಕೊಳಿ,ಮದಲೂ ನಮ್ಮ ಏಮಿಲಿ ಡಾಕ್ಟ್ರು,ಮತ್ತೇ ಸ್ಪೆಶಲಿಸ್ಟ್.
  ಟೆಸ್ಟ್ ಮಾಡ್ಸಲೆ ಮಾಂತ್ರ ಹಿಂದೆ ಮುಂದೆ ನೋಡ್ಳಾಗ.

  [Reply]

  VA:F [1.9.22_1171]
  Rating: 0 (from 0 votes)
 4. mankuthimma

  dodda dodda aaspatrege hottebene heli irulu hodare entaku pareekshe maadi nodva heli blood test,urine test, scanning maadi kidneyli kallu iddu heli helttavada,
  4 bottle glucose kotu flushing maadi bidtavada.
  sanna maddili,athava kashayalli hopa seekina dodda dodda rogada hesaru heli dodda dodda treatmanetina hesarili sulige maadtta dodda dodda doctorga iddavu kg maavaa.
  idu ante lotte heludalla,anubhavada vaakyanga.

  [Reply]

  VN:F [1.9.22_1171]
  Rating: 0 (from 0 votes)
 5. ಕೇಜಿಮಾವ°
  ಕೆ ಜಿ ಭಟ್

  ಆನಿಲ್ಲಿ ಬರದ ವಿಷಯ ಆರೋಗ್ಯ ಲೇಖನ ಬರವದರ ಬಗ್ಗೆ.ಸಣ್ಣ ಮದ್ದಿಲ್ಲಿ ಹೋಪ ಕಾಯಿಲೆ ಹೇಳುವ ನಇಂಗಳೇ ಕಮ್ಮಿ ಆಗದ್ರೆ ಅದೇ ದಾಕ್ಟ್ರನ ಅವ° ಸರೀ ನೋಡಿದ್ದಾಯಿಲ್ಲೆ ಹೇಳಿದ ಉದಾಹರಣೆಗೊ ಎನ್ನ ಹತ್ತರೆ ಬೇಕಾಷ್ಟಿದ್ದು.ಅದರ ಉದಾಹರಣೆ ಕೊಟ್ಟೇ ಆನು ಬರದ್ದು ನಿಂಗೊ ಗಮನುಸಿದ ಹಾಂಗೆ ಕಾಣ್ತಿಲ್ಲೆ.ಅದೇ ಕಳೆ ಕೊಚ್ಚುವ ಯಣ್ತ್ರಲ್ಲಿ ಕಾಲೇ ತುಂಡಾಗಿ ಹೋಪಾಂಗಿಪ್ಪದರ ಒಳಿಶಿದ್ದು ನಿಂಗೊಗೆ ಗೊಂತಿಕ್ಕು.ನಮ್ಮ ಬೈಲಿನವರದ್ದೇ ಅನುಭವ.

  [Reply]

  VA:F [1.9.22_1171]
  Rating: 0 (from 0 votes)
 6. ಅಡ್ಕತ್ತಿಮಾರುಮಾವ°

  ಅಪ್ಪು ಡಾಕ್ಟ್ರೆ ನಿಂಗ ಬರದ್ದರ ಖಂಡಿತಾ ಗಮನಿಸಿದ್ದೆ..ಆನು ನಿಂಗ ಬರದ್ದಕ್ಕೆ ವಿರೋದವಾಗಿ ಬರದ್ದು ಅಲ್ಲಲೇ ಅಲ್ಲ…ಕೆಲವು ಹೀಂಗಿಪ್ಪವು ಕೂಡಾ ಇದ್ದವು ಅರಡಿಯದ್ದೊರ ಹೆದರುಶಿ ರೋಗ ಭೀತಿ ಹುಟ್ಟುಸುವೋವುದೆ ಇದ್ದವು ಹೇಳಿ ಹೇಳಿದ್ದಸ್ಟ್ಟೆ…ಮತ್ತೆ ಯೆಲ್ಲೋರೂ ಹಾಂಗೆ ಆದರೆ ದೇವರೆ ಗತಿ…ಒಳ್ಳೆಯೊರೂ ತುಂಬಾ ಜನ ಇದ್ದವು…ಆದರೆ ಬೊಟ್ಟು ಮಾಡುದು ಮಾಂತ್ರ ಹಾಂಗಿಪ್ಪೋರ ಅಲ್ಲದಾ….ಮತ್ತೆ ಕಳೆ ಕೊಚ್ಹುವ ಯಂತ್ರ ತಾಗಿ ಕಾಲೇ ಹೋಪದರ ಒಳಿಶೆಕ್ಕಾರೆ ಈಚವಂಗೆ ಜೇವಕ್ಕೆ ಬಯಿಂದು ….ಸಾಮ ,ಭೇದ..ಮುಗಿಶಿ ದಂಡಕ್ಕೆ ವರೇಗೆ ಎತ್ತಿದ ಮೇಲಸ್ಟ್ಟೆ ಒಳಿಶುವ ಬಗ್ಗೆ ಅವು ಆಲೋಚನೆ ಮಾಡಿದ್ದು…..ವೈದ್ಯ ವ್ರುತ್ತಿಲ್ಲಿ ತುಂಬಾ ಜನ ಒಳ್ಳೆಯೊರು ಇದ್ದವು ಅವರನ್ನೆ ಹೇಳಿದ್ದು… ವೈಧ್ಯೋ ನಾರಾಯಣೋ ಹರಿ:

  [Reply]

  VN:F [1.9.22_1171]
  Rating: 0 (from 0 votes)
 7. ಕೇಜಿಮಾವ°
  ಕೆ ಜಿ ಭಟ್

  ಅದಕ್ಕೆ ಆನು ಎನ್ನ ಹತ್ತರೆ ಬಪ್ಪವಕ್ಕೆಲ್ಲ ಹೇಳ್ತೆ,ನಿಂಗಳೆ ನಿಘಂಟು ಮಾಡುದು ಬೇಡ ಹೇಳಿ.ಈಗ ಆನು ಬರದ ಹಾಂಗೆ ಎನಗೆ ಗೊಂತಿಲ್ಲೆ ಹೇಳಿ ಆರೂ ತಿಳ್ಕೊಳ್ತವಿಲ್ಲೆ.ನವಗೆ ಗೊಂತಿಲ್ಲದ್ದರ ಒಬ್ಬನ ಹತ್ತರೆ ಕೇಳುದಲ್ಲ.ಯೇವಾಗಳೂ ಎರಡ್ಣ್ನೇ ಅಭಿಪ್ರಾಯ ತೆಕ್ಕೊಳೆಕ್ಕು.ತುಂಬ ಜನಕ್ಕೆ ಒಂದು ಕಲ್ಪನೆ ಇದ್ದು.ಎರಡ್ಣೇ ಅಭಿಪ್ರಾಯದ ಬಗ್ಗೆ ಕೇಳಿರೆ ಡಾಕ್ಟ್ರಿಂಗೆ ಅಸಮಧಾನ ಅಕ್ಕೋ ಏನೋ ಹೇಳೀ.ಖಂಡಿತಾ ಅಪ್ಪಲಾಗ.ಅಪ್ಪವನ ಹತ್ತರೆ ಹೋಪದರ ನಿಲ್ಲುಸುವ ಕಾಲ ಬಯಿಂದು ಹೇಳಿ ತಿಳ್ಕಂಡು ಅವನ ಬಿಟ್ಟೇ ಬಿಡೆಕು.ಸಾಮಾನ್ಯವಾಗಿ ಒಂದೆರಡು ವರ್ಷ ನೋಡಿಯಪ್ಪಗ ನಂಬಿಗಸ್ತ ಅಪ್ಪೋ ಅಲ್ಲದೋ ಹೇಳಿ ಗೊಂತಕ್ಕಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 8. ಗೋಪಾಲಣ್ಣ
  Gopalakrishna BHAT S.K.

  ರೋಗವ ಪತ್ತೆ ಹಚ್ಚುದು ವೈದ್ಯ ಮಾಡೆಕ್ಕಾದ ಮುಖ್ಯ ಕೆಲಸ.
  ಮಗುವಿನ ಜ್ವರ ಪೋಲಿಯೊ ಹೇಳಿ ವೈದ್ಯಂಗೆ ಕೂಡಲೇ ಪತ್ತೆ ಹಚ್ಚಲೆ ಎಡಿಯದ್ದದರಿಂದ ,ಸಕಾಲಕ್ಕೆ ಬೇಕಾದ ಮದ್ದು ಆಗದ್ದೆ ಕಷ್ಟ ಆದ್ದದು ಇದ್ದು.
  ಹೀಂಗಾಗಿ ವೈದ್ಯರು ಪರೀಕ್ಷೆ ಮಾಡಿಸಲೆ ಹೇಳಿದರೆ ಜನಂಗೊ ಪರಂಚಲೆ ಆಗ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆವಾಣಿ ಚಿಕ್ಕಮ್ಮಶ್ಯಾಮಣ್ಣದೀಪಿಕಾಮಾಷ್ಟ್ರುಮಾವ°ಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ಚೂರಿಬೈಲು ದೀಪಕ್ಕಸುವರ್ಣಿನೀ ಕೊಣಲೆಅಜ್ಜಕಾನ ಭಾವರಾಜಣ್ಣಪುತ್ತೂರಿನ ಪುಟ್ಟಕ್ಕಪೆರ್ಲದಣ್ಣvreddhiಪೆಂಗಣ್ಣ°ವಿಜಯತ್ತೆಕೇಜಿಮಾವ°ಶೇಡಿಗುಮ್ಮೆ ಪುಳ್ಳಿಪವನಜಮಾವಯೇನಂಕೂಡ್ಳು ಅಣ್ಣಎರುಂಬು ಅಪ್ಪಚ್ಚಿವಿದ್ವಾನಣ್ಣನೆಗೆಗಾರ°ಕಾವಿನಮೂಲೆ ಮಾಣಿಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ