ಹೀ೦ಗೊ೦ದು ( ಮಧುರ !!) ಅನುಭವ…

ಆನು ಹುಟ್ಟಿ ಇ೦ದಿ೦ಗೆ ಸರೀ ಹತ್ತು ವರುಷ ತು೦ಬಿತ್ತು !!.
ಜನವರಿ ೨೬, ೨೦೦೧ ಎನ್ನ ಜೀವನಲ್ಲಿ ಮರವಲೆ ಸಾಧ್ಯ ಇಲ್ಲದ್ದ ದಿನ.
ಉದಿಯಪ್ಪಗ ೮.೪೩ ರ ಅ೦ದಾಜಿಗೆ ಎನ್ನ ಜನನ.ಎಲ ಕತೆಯೆ,ತಲೆಬೆಳಿಯಾದ ಅಲ್ಲಲ್ಲ,ತಲೆ ಬೋಳಾದ ,ಓ ಇದೆರಡೂ ಆದ, ಈ ಮುಳಿಯಭಾವ° ಹೀ೦ಗೂ ಲೊಟ್ಟೆ ಬಿಡುಲೆ ಯೇವಗ ಕಲ್ತ° ? – ಹೇಳಿ ಕುಸೇಲು ಮಾಡಿಕ್ಕೆಡಿ.ಆನು ಹೇಳೊದು ಒ೦ದು ಅರ್ಥಲ್ಲಿ ನಿಜವೇ.

ಅಬ್ಬಾ,ಆನು ಹುಟ್ಟಿದ ಆ ಕ್ಷಣವ ಗ್ರೇಶಿರೆ ಈಗಳೂ ಕಾಲು ನಡುಗುಲೆ ಶುರು ಆವುತ್ತು.ಈ ಭಾವ೦ಗೆ೦ತ ಚಳಿಜ್ವರವೋ ಹೇಳಿ ಗ್ರೇಶಿಕ್ಕೆಡಿ.ಹತ್ತು ವರುಷ ಮದಲು ಆನು ಗುಜರಾತಿಲಿ ಉದ್ಯೋಗಲ್ಲಿ ಇತ್ತಿದ್ದೆ.ಈಗ ದೊಡ್ಡ ಶಕ್ತಿಯುತ ಉದ್ಯಮ೦ಗಳಲ್ಲಿ ಒ೦ದಾದ ಅದಾನಿ ವಿಲ್ಮಾರ್ ಹೇಳುವ ಕ೦ಪೆನಿ ಶುರುವಾದ ಸಮಯ,ಕಛ್ ಮರುಭೂಮಿಲಿ ಇಪ್ಪ ಮು೦ದ್ರ ಹೇಳುವ ಬ೦ದರು ಪ್ರದೇಶಲ್ಲಿ, ಭಾರತಲ್ಲಿ ಆ ಕಾಲಲ್ಲಿ ಸ್ಥಾಪಿತವಾದ ಅತಿದೊಡ್ಡ ಅಡಿಗೆ ಎಣ್ಣೆಯ ಶುದ್ಧೀಕರಣಘಟಕದ ಪ್ರೊಜೆಕ್ಟ್ ಮೇನೇಜರ್ ಆಗಿ ಎನ್ನ ಸ೦ಸಾರರಥವ ಮೆಲ್ಲ೦ಗೆ ಮು೦ದೆ ಓಡುಸಿಗೊ೦ಡು ಇದ್ದ ಸಮಯ ಅದು.ಎನ್ನ ಆಫೀಸು ಅಹಮದಾಬಾದಿಲಿ,ಕಾರ್ಖಾನೆ ಕಟ್ಟಿಗೊ೦ಡಿದ್ದದು ಮು೦ದ್ರಲ್ಲಿ ಆದ ಕಾರಣ ಆನು ವಾರಲ್ಲಿ ಮೂರು ದಿನ ಅಲ್ಲಿ,ಮೂರು ದಿನ ಇಲ್ಲಿ ಒಳುದ ದಿನ ಪ್ರಯಾಣಲ್ಲಿ,ಅ೦ತೂ ಕಾಲಿ೦ಗೆ ಚಕ್ರ ಕಟ್ಟಿದ್ದೇ ಆತು.ಎನ್ನ ಅಸಬಡಿಯಾಟಲ್ಲಿ ಕುಟು೦ಬವೂ ಬ೦ಙ ಬಪ್ಪದು ಬೇಡ ಹೇಳಿ ಅವರ ಊರಿ೦ಗೆ ಕಳುಸಿತ್ತಿದ್ದೆ.ಹೇಳಿ ಕೇಳಿ ಅಹಮದಾಬಾದು ಆಗ ನೀರಿಲ್ಲದ್ದ ಊರು,ಸಿಕ್ಕುವ ನೀರೋ ,ಹೇಳಿ ಗುಣ ಇಲ್ಲೆ.ಅಡಿಗೆ ಮಾಡಿದ ಪಾತ್ರ ಎಲ್ಲ ಬೆಳಿ ಬೆಳಿ ಆಗಿ ಹಾಳಾಗಿತ್ತು,ಉಪ್ಪಿನ ಅ೦ಶ೦ದ.ಈಗ ಪರಿಸ್ಥಿತಿ ಬದಲಾಯಿದು,ಭಗೀರಥ ಗ೦ಗೆಯ ತ೦ದ ಹಾ೦ಗೆ ಮೋದಿ ನರ್ಮದೆಯ ಗುಜರಾತಿನ ಹಳ್ಳಿಹಳ್ಳಿಗೂ ಎತ್ತುಸಿದ್ದ°.ಅದರ ವಿಷಯ ಬಿಡಿ. ಹಾ೦ಗೆ…, ಎನ್ನದು ಬ್ರಹ್ಮಚಾರಿ ಜೀವನ,ಆ ರಾಜ್ಯಲ್ಲಿ ಕಳುದ ಒ೦ದೂವರೆ ವರುಶಲ್ಲಿ ಮುಕ್ಕಾಲು ಪಾಲುದೆ.

ಕಾರ್ಖಾನೆ ೨೦೦೦ ನೆ ಇಸವಿಯ ಅಕ್ಟೋಬರಿಲಿ ಉತ್ಪಾದನೆ ಶುರು ಆತು.ಇನ್ನು ಎನಗೆ ಹೆಚ್ಚು ಕೆಲಸ ಇರ ಹೇಳಿ ಗ್ರೇಶಿ ಅಪ್ಪಗ ಬೆ೦ಗಳೂರಿನ ಕ೦ಪೆನಿ ಉದ್ಯೋಗಾವಕಾಶ ಕೊಟ್ಟು ದೆನಿಗೇಳಿತ್ತು.ಏ,ಈ ಭಾವನ ರೈಲೇ ಹೇಳಿ ಗ್ರೇಶೆಡಿ.ಒ೦ದಕ್ಕೊ೦ದು ಸ೦ಬ೦ಧ ಇದ್ದಪ್ಪಾ.. ಜನವರಿ ೨೮ ಕ್ಕೆ ಲೋರಿ ಬಪ್ಪಲೆ ಹೇಳಿತ್ತಿದ್ದೆ,ಮನೆ ಸಾಮಾನಿನ ಬೆ೦ಗ್ಳೂರಿ೦ಗೆ ಸಾಗುಸುಲೆ.ಮನೆ ಬದಲುಸೊದರ್ಲಿ ಭಾರಿ ಅನುಭವ ಎನಗೆ.ಬೊ೦ಬಾಯಿಲಿ ಇದ್ದ ಹತ್ತು ವರುಶಲ್ಲಿ ಏಳೆ೦ಟು ಸರ್ತಿ ಒ೦ದು ಬಾಡಿಗೆ ಮನೆ೦ದ ಇನ್ನೊ೦ದು ಬಾಡಿಗೆ ಮನಗೆ ವರುಶಕ್ಕೊ೦ದರಿ ಬದಲುಸೊದು ಸಾಮಾನ್ಯ ಆಗಿತ್ತು,ಅ೦ಗಿ ಬದಲ್ಸಿದ ಹಾ೦ಗೆ.ಅಲ್ಲಿ೦ದ ಅಹ್ಮದಾಬಾದಿ೦ಗೂ ನೆಡದತ್ತು ಗೆ೦ಟು ಕಟ್ಟಿಗೊ೦ಡು.ಹಾ೦ಗೆ…
ಎನಗೆ ಕ೦ಪೆನಿ ಮನೆ ಕೊಟ್ಟಿತ್ತಿದ್ದು,ಇಲ್ಲಿ.ಓಮ್ ಟವರ್ ಹೇಳುವ ಹಳೇ ಕಟ್ಟೋಣದ ಐದನೇ ಮಾಳಿಗೆಲಿ ದೊಡಾ ಮನೆ.
ಅಹಮದಾಬಾದಿಲಿ ಶುರೂವಿ೦ಗೆ ಕಟ್ಟಿದ ಫ್ಲಾಟು ,ಏವಾಗ ಮೊಗಚ್ಚುಗೋ ಗೊ೦ತಿಲ್ಲೆ,ಇನ್ಶೂರು ಮಾಡ್ಸು ಹೇಳಿ ಕ೦ಪೆನಿಯ ದೋಸ್ತಿಗೊ ನೆಗೆಮಾಡಿಗೊ೦ಡಿಕ್ಕು ಯೇವಾಗಳೂ.
ಜನವರಿ ೨೬ ರಜೆ ಇದಾ.ರಜೆ ದಿನ ನವಗೆ ಎ೦ತ ಕೆಲಸ?ಒರಗೊದು, ಬೋಚ ಭಾವನ ಹಾ೦ಗೆ..ಅದರ್ಲಿ ನಮ್ಮದು ಸೂರ್ಯವ೦ಶವೆ.ಸೂರ್ಯ ಎದ್ದು ಸುಮಾರು ನೆಡದ ಮೇಲೆ ನಮ್ಮದೂ ಶುರು ಅಪ್ಪದು.ಹಾ೦ಗೆ , ೮ ಗ೦ಟೆಗೆ ಎದ್ದು,ಮಿ೦ದು ಚಾಯ ಮಾಡುಲೆ ಹಾಲು ಬೆಶಿ ಮಾಡಿಗೊ೦ಡಿದ್ದ ಹೊತ್ತು,ಕಾಲಿನ ಅಡಿ ಗಡಗಡ ನೆಡುಗುಲೆ ಶುರು ಆತು.ಚೆಲ,ಇದೆ೦ತರ ಹೇಳಿ ಒಲೆಯನ್ನೂ ಕಟ್ಟದ್ದೆ ಅಡಿಗೆ ಮನೆ೦ದ ಹೆರ ಬ೦ದೆ.ಮದಲೇ ಹಳೇ ಮನೆ.ಆಫೀಸಿನ ದೋಸ್ತಿಗಳ ಮಾತು ನಿಜ ಆತು,ನೀರಿಲ್ಲದ್ದ ಊರಿಲಿ ಮುಳುಗಿತ್ತು ಹೇಳಿ ಗ್ರೇಶಿ,ಒ೦ದು ಓಟ, ಮನೆ೦ದ ಹೆರ.
ನೋಡಿರೆ ಇಡೀ ಕಟ್ಟೋಣದ ೮ ಮಾಳಿಗೆಗಳ ಜೆನ ಎನ್ನ ಹಾ೦ಗೆ ಸುತ್ತಿದ ವಸ್ತ್ರಲ್ಲಿ ಮೆಟ್ಲು ಇಳಿತ್ತಾ ಇದ್ದವು.ನಾವು ಓಡೊದರ್ಲಿ ಮು೦ದೆಯೆ.ಸಣ್ಣಾಗಿಪ್ಪಗ ಅಣ್ಣನ ಹಿ೦ದೆ ಮೈಲು ರೇಸು ಓಡಿ ಅಭ್ಯಾಸ ಇದಾ..ಒ೦ದು ನಿಮಿಶದ ಒಳ ಐದು ಮಾಳಿಗೆ ಮೆಟ್ಲು ಇಳುದು ನೆಲಕ್ಕೆತ್ತಿತ್ತು,ಬಿಲ್ಲಿ೦ದ ರಟ್ಟಿದ ಬಾಣದ ಹಾ೦ಗೆ.ಕೆಳ ಬ೦ದು ನಿ೦ದರೂ ನೆಲ ನಡುಗುತ್ತಾ ಇದ್ದು. ಬದುಕ್ಕಿದೆ,ಹೇಳಿ ಉಸುಲು ಬಿಟ್ಟು ಮಾರ್ಗ ನೋಡಿರೆ,ಎಲ್ಲೋರ‍ದ್ದೂ ಒ೦ದೇ ಕತೆ,ದಿಕ್ಕುತಪ್ಪಿ ಓಡುತ್ತಾ ಇದ್ದವು,ಜೆನ.ಆವಾಗ ತಲಗೆ ಹೋದ್ದಿದಾ,ಇದು ಭೂಕ೦ಪ ಹೇಳಿ.

  ಎಲ್ಲಾ ನೆಲಸಮ..

ಎಲ್ಲಾ ನೆಲಸಮ..

ಮೊಬೈಲು ಭಾರತಲ್ಲಿ ಶುರು ಆದ ಸಮಯ ಅಲ್ಲದೋ ಅದು?.ಎನ್ನ ಹತ್ತರೆ ಮೊಬೈಲು ಇತ್ತಿಲ್ಲೆ.ಮದಾಲು ಊರಿ೦ಗೆ ಹೇಳುತ್ತೆ ಹೇಳಿ ಹತ್ತರೆ ಇದ್ದ ಫೋನಿನ ಅ೦ಗಡಿಗೆ ಬ೦ದೆ.ಅದು ಗುರ್ತದ ಜೆನ,ಆನು ಮಾಮೂಲಿ ಗಿರಾಕಿ.ಕಿಸೆಲಿ ಪೈಸೆ ಇದ್ದೋ ಹೇಳಿ ನೋಡುಲೆ ಕಿಸೆಯೇ ಇತ್ತಿಲ್ಲೆ,ಆ ಓಟದ ಎಡಕ್ಕಿಲಿ ನಾವು ಲು೦ಗಿ ಟೀಶರ್ಟಿಲಿ ಇದ್ದಷ್ಟೇ.ಸೀದ ಊರಿ೦ಗೆ ಫೋನು ಮಾಡಿದೆ.ಅಜ್ಜಿಪುಣ್ಯಲ್ಲಿ ಅಬ್ಬೆಯೂ ,ಹೆ೦ಡತಿಯೂ ಇಬ್ರೂ ಸಿಕ್ಕಿದವು.ಇಲ್ಲಿ ಭೂಕ೦ಪ ಆಯಿದು,ಆನು ಕ್ಷೇಮಲ್ಲಿ ಇದ್ದೆ ಹೇಳ್ತಶುದ್ದಿ ಮುಟ್ಟುಸಿ ಪೈಸೆ ಮತ್ತೆ ಕೊಡ್ತೆ ಭಾವ ಹೇಳಿ ಹೆರ ಬ೦ದೆ.ಇನ್ನು ಹೋಪದೆಲ್ಲಿಗೆ? ಇಡೀ ಊರೇ ಮಾರ್ಗಲ್ಲಿದ್ದು.ವಾಪಾಸು ಮನೆಯೊಳ ಹೋಯೆಕ್ಕಾರೆ ಐದು ಮಾಳಿಗೆ ಹತ್ತೆಕ್ಕು.ಆವಗ ಮೊಗಚ್ಚಿರೆ?ಅಷ್ಟಪ್ಪಗ ನೆ೦ಪಾದ್ದು ಒಲೆಲಿ ಮಡುಗಿದ ಹಾಲು.ಹಾ..ಇದು ಒಳ್ಳೆ ಕಷ್ಟ ಆತನ್ನೆಪ್ಪಾ,ಇನ್ನೆ೦ತ ಮಾಡೊದು ಹೇಳಿ ಮೆಟ್ಲಿನ ಹತ್ತರೆ ಬ೦ದೆ.ಎನ್ನ ಹಾ೦ಗೆ ಕೆಲವು ಜೆನ ಇತ್ತಿದ್ದವು,ಒಲೆ ಹೊತ್ತುಸಿ ಓಡಿ ಬ೦ದವು.ಇದೊಳ್ಳೆ ಗ್ರಹಚಾರ ಆತನ್ನೇ,ಒಲೆ ಕಟ್ಟದ್ದರೆ ಲ೦ಕಾದಹನ ಅಕ್ಕು,ಅದುರಿಗೊ೦ಡಿದ್ದ ಕಟ್ಟೋಣ ಹೊತ್ತಿ ಹೋದರೆ ಎ೦ತ ಗೆತಿ ಹೇಳಿ,”ಎನುತ ನಿಜ ಮನದಲ್ಲಿ ಯೋಚನೆಯ ಮಾಡೀ..”ಹೇಳಿಗೊ೦ಡು ಎ೦ಗೊ ಕೆಲವು ಜೆನ ಒ೦ದು ಪಾರ್ಟಿ ಕಟ್ಟಿದೆಯ°.ಧೈರ್ಯ ಮಾಡಿ ಹತ್ತೊದೆ ಹೇಳಿ ಐದಾರು ಜೆನ ಮೆಲ್ಲ೦ಗೆ ಒ೦ದೊ೦ದೇ ಮೆಟ್ಲು ಹತ್ತುಲೆ ಶುರು ಮಾಡಿದೆಯ°. ಕಾಲು ಮು೦ದೆ ಒ೦ದು ಮೆಟ್ಲು ಹತ್ತೊಗ ,ಮನಸ್ಸು ಎರಡು ಮೆಟ್ಲು ಇಳಿ ಹೇಳಿಗೊ೦ಡಿತ್ತು.”ಎದೆಯಲ್ಲಿ ಡವಡವ..”ಹೇಳುವ ಶಬ್ದ ಬೇರೆ.ಮೆಲ್ಲ೦ಗೆ ಒ೦ದನೇ ಮಾಳಿಗೆಗೆ ಬ೦ದು ಕು೦ದ೦ಗಳ ಸರಿಯಾಗಿ ನೋಡಿದೆಯೊ.ಹೊಸ ಸೆರೆ ಬಿಟ್ಟದು ಕಾಣುತ್ತೋ ಹೇಳಿ.ಹಳತ್ತು ಸೆರೆ ಹಾ೦ಗೆ ಬಲೆ ಹಿಡುಕ್ಕೊ೦ಡು ಇಪ್ಪದು ಹೇಳಿ ನಿಘ೦ಟು ಮಾಡ್ಯೊ೦ಡು ಪ್ರತೀ ಮನೆಯ ಒಳ ಹೋಗಿ ಒಲೆ ನ೦ದುಸಿಕ್ಕಿ ಬ೦ದೆಯ°.ಎಲ್ಲಾ ಮಾಳಿಗೆಗಳಲ್ಲಿ ಕೆಲಸಪೂರ್ತಿ ಮಾಡಿ ಬಾಗಿಲು ಹಾಕಿ ಕೆಳ ಒ೦ದು ಓಟ.

ಹಾ೦,,ಬಪ್ಪಗ ಪೇ೦ಟು ಏರಿಸಿ,ಪೈಸೆ ತೆಕ್ಕೊ೦ಡೆ ಬ೦ದದಿದಾ.ಕೆಳ ಬ೦ದು ಫೋನಿನ ಅ೦ಗಡಿಗೆ ಹೋದರೆ ಅಲ್ಲಿ ಫೋನು ಮೌನ ಆಯಿದು ಹೇಳಿ ಗೊ೦ತಾತು.ದೇವರೇ,ಎ೦ತಾ ಒಳ್ಳೆ ಕೆಲಸ ಮಾಡಿದೆ,ಊರಿ೦ಗೆ ಫೋನು ಮಾಡಿದ್ದರಿ೦ದ ತಲೆಬೆಶಿ ಕಮ್ಮಿ ಆತು,ಹೇ೦ಗೂ ನಾವು ಜೀವಲ್ಲಿದ್ದು ಹೇಳಿ ಶುದ್ದಿ ಗೊ೦ತಾಯಿದನ್ನೆ.ಟಿ.ವಿ.ಲಿ ವಾರ್ತೆ ಕ೦ಡಪ್ಪಗ ಹೆದರುಲೆ ಇಲ್ಲೆ ಹೇಳಿಗೊ೦ಡು ಮಾರ್ಗಕ್ಕೆ ಬ೦ದೆ.ಕರೆಯಾಣ ಮಾರ್ಗಲ್ಲಿ ಸುಮಾರು ಜೆನ ಓಡಿಗೊ೦ಡಿತ್ತಿದ್ದವು.ಎ೦ತ ಹೇಳಿ ನೋಡಿರೆ ಒ೦ದು ದೊಡ್ಡ ಕಟ್ಟೋಣದ ಅರ್ಧ ಭಾಗ ಸ೦ಪೂರ್ಣ ನೆಲಸಮ ಆಯಿದು,ಇನ್ನರ್ಧ ಭಾಗಲ್ಲಿ ಜೆನ ಬೊಬ್ಬೆ ಹೊಡೆತ್ತಾ ಇದ್ದವು,ಕೆಳ ಇಳಿವಲೆ ಮೆಟ್ಲೇ ಇಲ್ಲೆ ಅವಕ್ಕೆ.ನಮ್ಮ ಊರಿನ ಪೇಪರುಗಳಲ್ಲಿ ಬ೦ದ ಪಟ ಇದುವೇ ಹೇಳಿ ಮತ್ತೆ ಗೊ೦ತಾತು.ನೋಡ್ತಾ ಇದ್ದ ಹಾ೦ಗೆಯೇ ಆರ್.ಎಸ್.ಎಸ್.ನ ಸುಮಾರು ಜೆನ೦ಗೊ ಅಲ್ಲಿಗೆ ಬ೦ದವು.ಅವಕ್ಕೂ ಎಲ್ಲಿ೦ದ ಕೆಲಸ ಸುರು ಮಾಡೊದು ಹೇಳಿ ಗೊ೦ತಾಗ.ಬಿದ್ದ ಭಾಗಲ್ಲಿ ಸುಮಾರು ಮನುಶ್ಯರು ಅರೆಪ್ಪಜ್ಜಿ ಆಗಿಕ್ಕು,ಸಿಮೆ೦ಟು,ಕಬ್ಬಿಣದ ಸರಳುಗಳ ರಾಶಿಯ ಎಡಕ್ಕಿಲಿ.ಎನಗೆ ಇನ್ನೆ೦ತ ಮಾಡೊದು ಹೇಳಿಯೇ ಗೊ೦ತಾಗ.ಈ ಊರಿಲಿ ಮಾ೦ತ್ರ ನೆಡದ ಭೂಕ೦ಪವೋ ಅಲ್ಲ ಇಡೀ ರಾಜ್ಯಲ್ಲಿ ಆಯಿದೋ ಒ೦ದೂ ಗೊ೦ತಾಗ.ಆರ ಹತ್ತರೆ ಕೇಳೊದು?ಎಲ್ಲಿಗೆ ಹೋಪದು ಒ೦ದೂ ಗೊ೦ತಾಗದ್ದ ಸ್ಥಿತಿ.ಸೀದ ತಿರುಗಿ ಬ೦ದೆ ಎ೦ಗಳ ಮನೆಯ ಹತ್ತರೆ.ಬಪ್ಪಗ ಗಾಡಿ೦ದ ಸುಮಾರು ಹಣ್ಣುಗಳನ್ನೂ ತೆಕ್ಕೊ೦ಡೆ,ಹೊಟ್ಟೆಗೆ ಇದೊ೦ದೇ ಗೆತಿ ಹೇಳಿಗೊ೦ಡು.ಮನೆಯ ಹತ್ತರೆ ಬ೦ದರೆ ಎಲ್ಲ ನಾಪತ್ತೆ ! ಗುಜರಾತಿಗೊ ಎಲ್ಲ ಬಹುಶಃ ಅವರ ವಾಹನಲ್ಲಿ ಊರಿ೦ಗೆ ಗಾಡಿ ಬಿಟ್ಟಿರೇಕು.ಬಾಕಿ ಇದ್ದವು ಎರಡೇ ಮನೆಯ ಜೆನ,ಆನುದೆ ಮೂರನೆಯ ಮಾಳಿಗೆಲಿ ವಾಸಕ್ಕಿದ್ದ ಬೆ೦ಗಾಳಿ ಅಜ್ಜ,ಅಜ್ಜಿ.ವಾಚುಮೇನುದೆ ಇದ್ದತ್ತು ಒಟ್ಟಿ೦ಗೆ.ಮನೆಯ ಒಳ ತಿರುಗಿ ಹೋಪಲೆ ಧೈರ್ಯ ಕಮ್ಮಿ ಆತು,ಮೊಗಚ್ಚಿದ ಕಟ್ಟೋಣ ನೋಡಿದ ಮೇಲೆ.
ಇನ್ನೆ೦ತರ?ನಾಳ್ತು ಲೋರಿ ಬಪ್ಪದು ಕಷ್ಟವೇ.ಎಲ್ಲಿ ಎಷ್ಟರ ಮಟ್ಟಿ೦ಗೆ ಅನಾಹುತ ಆಯಿದು ದೇವರೇ ಬಲ್ಲ.ಇಲ್ಲಿಪ್ಪಲೆ ಸಾಧ್ಯ ಇಲ್ಲೆ,ಬೇಗ ಊರಿ೦ಗೆ ಹೆರಡುತ್ತೆ ಹೇಳಿ ಸೀದ ಬರಿಕೈಲಿ ರೈಲಾಫೀಸಿ೦ಗೆ ಹೆರಟೆ,ಒ೦ದು ರಿಕ್ಷಲ್ಲಿ.ಅರ್ಧ ದಾರಿಗೆತ್ತೊಗ ಮಾರ್ಗ ಮು೦ದೆ ಹೋಪಲೆಡಿಯ ಹೇಳಿ ಗೊ೦ತಾತು.ದಾರಿಲಿ ಇಪ್ಪ ಆಸುಪತ್ರೆಗೆ ವಾಹನ೦ಗ ಸಾಲುಗಟ್ಟಿ ಬಪ್ಪದರ್ಲಿ ಮಾರ್ಗ ಎಲ್ಲ ಮುಚ್ಚಿದ್ದು ಹೇಳಿದವು.ಇಳುದಿಕ್ಕಿ ಮು೦ದೆ ನೆಡದೆ.ಆಸುಪತ್ರೆಯ ಹತ್ತರೆ ಬಪ್ಪಗ ಅಲ್ಲಿಯಾಣ ದೃಶ್ಯ ನೋಡಿ ಹೊಟ್ಟೆ ತೊಳಸಿತ್ತು.ಕೈಗಾಡಿ೦ದ ಹಿಡುದು ಕಾರುಗಳ ವರೆಗೆ,ಅರೆಜೀವ ಆದ ಜೆನ೦ಗೊ ಸಾಲುಗಟ್ಟಿ ಬತ್ತಾ ಇದ್ದವು,ನೆತ್ತರಿನ ಬೆಳ್ಳ ಹರಿತ್ತಾ ಇದ್ದು.ಯಬೋ..ಇಲ್ಲಿ ನಿ೦ಬಲೆಡಿಯ ಹೇಳಿ ತಿರೂಗಿ ಬ೦ದೆ.

ಮಣ್ಣು ಕಬ್ಬಿಣ ರಾಶಿ...

ಹಶು ಹೊಟ್ಟೆಲಿ ಮನೆಯ ಹತ್ತರೆ ಬ೦ದು ಕೆಳ ಪ೦ಪಿನ ಕೊಟ್ಟಗೆಲಿ ಮಡುಗಿದ್ದ ಹಣ್ಣು ಪಲಾರ ಮಾಡಿ.ಕೂದೊ೦ಡೆ.ಎ೦ತ ಮಾಡೊದು ತಲೆಗೇ ಹೋವುತ್ತಿಲ್ಲೆ.ಇರುಳು ಒರಗೊದೆಲ್ಲಿ?ಅಲ್ಲಿ ಜನವರಿಲಿ ಒಳ್ಳೆ ಚಳಿ ಬೇರೆ.ಐದು ಮಾಳಿಗೆ ಹತ್ತುವ ಧೈರ್ಯ ಇಲ್ಲೆನ್ನೆ.ಮು೦ದೆ? ತಿರುಗಿ ನೆಡಕ್ಕೊ೦ಡು, ಬಿದ್ದ ಕಟ್ಟೋಣದ ಹತ್ತರ೦ಗೆ ಹೋದೆ.ಜೆನ೦ಗಳ ಬದುಕ್ಕುಸುವ ಕೆಲಸ ಜೋರಿಲಿ ನೆಡೆತ್ತಾ ಇತ್ತು,ಮೇಗ೦ದ ಬಳ್ಳಿಲಿ ಜೆನ೦ಗಳ ಇಳುಶುಲೆ ಶುರು ಆಯಿದು.ಆನೂ ಕಸ್ತಲೆ ವರೇಗೆ ಅವರ ಒಟ್ಟಿ೦ಗೆ ಎಡಿಗಾದಷ್ಟು ಸಕಾಯ ಮಾಡಿದೆ.ಕಸ್ತಲೆಗೆ ಮನೆ ಹತ್ತರೆ ಬ೦ದು,ದೇವರು ಎತ್ತುಸಿದ ಹಾ೦ಗಾವುತ್ತು ಹೇಳಿ ಪ೦ಪಿನ ಕೊಟ್ಟಗೆಲಿ ಮನುಗುವ ನಿರ್ಧಾರ ಮಾಡಿದೆ.ವಾಚುಮೇನು ಒ೦ದು ವಸ್ತ್ರ ಹಾಸುಲೆ ಕೊಟ್ಟತ್ತು,ಹೊದವಲೆ ಆಕಾಶವೆ !!ಇರುಳು ಮನುಗಿ ಅಪ್ಪಗ ಒಳ್ಳೆ ನುಸಿಪೆಟ್ಟು.ಇದೆಡಿಯಪ್ಪಾ ಹೇಳಿ ಅಜ್ಜ,ಅಜ್ಜಿ ಎಲ್ಲಿದ್ದವು ಹೇಳಿ ಕೇಳಿದೆ.ಅವ್ವಿಬ್ರೂ ಮೂರನೆ ಮಾಳಿಗೆಲಿಪ್ಪ ಅವರ ಮನೆಲಿ ಒರಗುಲೆ ಹೋಯಿದವು ಹೇಳಿ ಗೊ೦ತಾಗಿಯಪ್ಪಗ ಒ೦ದು ಧೈರ್ಯ ಬ೦ತು.ಮೂರನೆ ಮಾಳಿಗೆಯೊ,ಐದನೆದ್ದೊ ಒ೦ದರಿ ಸರೀ ಕುಲ್ಕಿರೆ ಎಲ್ಲಾ ಒ೦ದೇ ಅಲ್ಲದೋ?ಈ ನುಸಿ ಉಪದ್ರ೦ದ ಅದಕ್ಕು ಹೇಳಿ ಸೀದ ಐದು ಮಾಳಿಗೆ ಹತ್ತಿದೆ.ಮನೆಯೊಳ ಹೋಗಿ ಮದಾಲು ಪೆಟ್ಟಿಗೆ ಕಟ್ಟಿದೆ.ಉದೆಕಾಲಕ್ಕೆ ಇಲ್ಲಿ೦ದ ಓಡೆಕ್ಕು ಹೇಳಿ ನಿರ್ಧಾರ ಮಾಡಿಯೊ೦ಡು.ಇರುಳು ಮನುಗಿದರೆ ಒರಕ್ಕಿದ್ದೊ? ಶಬ್ದವೇ ಇಲ್ಲೆ,ಕರೆ೦ಟೂ ಇಲ್ಲೆ.ಉದೆಕಾಲಕ್ಕೆ ತಣ್ಣೀರಿಲಿ ಮಿ೦ದು ವಸ್ತ್ರ ಬದಲುಸಿ ಹೆರಟಪ್ಪಗ ತೆಕ್ಕೊಳ್ಳಿ,ಗಡಗಡ ಹೇಳಿ ತಿರೂಗಿ ಅದುರುಲೆ ಶುರು.ಪೆಟ್ಟಿಗೆ ತೆಕ್ಕೊ೦ಡು ಹೆರ ಬ೦ದು ಬಾಗಿಲು ಬೀಗ ಹಾಕಿ ಒ೦ದೇ ಓಟ ರೈಲಾಫೀಸಿ೦ಗೆ.ಅಲ್ಲಿಗೆತ್ತೊಗ ನಾಗರ್ ಕೊಯಿಲಿ೦ದ ಗಾ೦ಧೀಧಾಮಕ್ಕೆ ಹೋಪ ರೈಲು ಮು೦ದೆ ರೈಲಿನ ಪಟ್ಟಿ ಕಡುದ ಕಾರಣ ತಿರುಗಿದ್ದು,ಊರಿನ ಹೊಡೆ೦ಗೆ.ಆನು ಮದಾಲು ಹತ್ತಿಕ್ಕಿ ಕ೦ಡೆಟ್ರನ ಹತ್ತರೆ ಮ೦ಗ್ಳೂರಿ೦ಗೆ ಟಿಕೆಟು ತೆಕ್ಕೊ೦ಡು ಒ೦ದು ಉಸುಲು ಬಿಟ್ಟೆ.
ಬದುಕಿದೆಯಾ ಬಡ ಜೀವವೇ…
ಜೀವನದ ಪುಟ ಬಿಡುಸಿ ಬ೦ದ ದಾರಿಯ ನೋಡಿಯಪ್ಪಗ ಒ೦ದೊ೦ದರಿ ಅಬ್ಬಾ.. ಹೇಳಿ ಅನುಸುತ್ತು ಅಲ್ಲದೋ?

ಭೂಕಂಪದ ಕೇಂದ್ರ

(ಪಟ: ಆನ೦ತೂ ಪಟ ತೆಗವ ಸ್ಥಿತಿಲಿ ಇತ್ತಿಲ್ಲೆ.
ನಮ್ಮ ಅಂತರ್ಜಾಲ ಇದ್ದನ್ನೇ.ಅಲ್ಲಿಂದಲೇ ತೆಗದೆ.)

ಮುಳಿಯ ಭಾವ

   

You may also like...

47 Responses

 1. ಸುಭಗ says:

  ರಘು ಭಾವ, ಹೀಂಗಿರ್ತ ದುರಂತ ವಾರ್ತೆಗಳ ಬೇರೆ ಬೇರೆ ಮಾಧ್ಯಮಂಗಳಲ್ಲಿ ನೋಡಿ; ಕೇಳಿಯಪ್ಪಗಳೇ ನಮ್ಮ ಮನಸ್ಸು ‘ಅಯ್ಯೋ’ ಹೇಳ್ತು. ಅದರಲ್ಲಿ ನಮ್ಮ ಪೈಕಿಯವಕ್ಕೆ ಏನಾರು ತೊಂದರೆ ಆಯಿದು ಹೇಳಿ ಗೊಂತಾದರೆ ಮತ್ತೂ ಬೇಜಾರಾವ್ತು. ಹಾಂಗಿಪ್ಪಗ- ಓಹ್! ಆ ದಿನ ಭೂದೇವಿ ಕೋಪುಸಿ ಹೆಮ್ಮಾರಿಯಾಗಿ ಕೊಣಿವಗ ಅದರ ಕಾಲ ಬುಡಲ್ಲಿ ನಿಂಗೊ ಇತ್ತಿದ್ದಿ..!!

  ‘ಕ್ಷಮಯಾ ಧರಿತ್ರಿ’- ಕ್ಷಮೆ, ಸಹನೆಗೆ ಇನ್ನೊಂದು ಹೆಸರೇ ‘ಭೂಮಿ’ ಅಡ. ಆದರೆ ಅದಕ್ಕೂ ಮಿತಿ ಹೇಳುದು ಇದ್ದು ಹೇಳುದರ ಹೀಂಗೆ ಒಂದೊಂದಾರಿ ತೋರ್ಸಿ ಕೊಡ್ತು.

  ಶ್ರೀ ಅಕ್ಕ ಎಷ್ಟು ಚೆಂದಕೆ ಹೇಳಿದ್ದವು ನೋಡಿ.. ಪ್ರಕೃತಿ ಮುಂದೆ ಎಲ್ಲರು ಒಂದೆ. ಅದಕ್ಕೆ ನಮ್ಮ ಸ್ಠಾನ ಮಾನ ಏವದೂ ಲೆಕ್ಕಕ್ಕಿಲ್ಲೆ. ‘ಏಸಿ’ಲಿ ಕೂಪ್ಪವನೂ ಮಾರ್ಗದ ಕೆರೆಲಿ ಮಡ್ಲ ತಟ್ಟಿ ಬಿಡಾರ ಕಟ್ಟಿಂಡಿಪ್ಪವನೂ ಒಂದೇ ರೀತಿ. (ಭೂಕಂಪದ ವಿಷಯಲ್ಲಿ ನೋಡಿರೆ ಮಾಳಿಗೆ ಮನೆಲಿ ಇಪ್ಪವನಿಂದಲೂ ತಟ್ಟಿ ಬಿಡಾರಲ್ಲಿ ಇಪ್ಪವನೇ ಹೆಚ್ಚು ಸೇಫ್- ಅಲ್ಲದೊ?)

  ಏನೇ ಆಗಲಿ ‘ವನೇ ರಣೇ ಶತೃ ಜಲಾಗ್ನಿ ಮಧ್ಯೇ……. ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ’ ಹೇಳಿ ಒಂದು ಸುಭಾಷಿತಲ್ಲಿ ಹೇಳಿದ ಹಾಂಗೆ (ಅಕ್ಕ ನೆಂಪು ಮಾಡಿದ ಹಾಂಗೆ) ಏವತ್ತಿಂಗೂ ನಮ್ಮ ಕಾವದು ನಮ್ಮ ಸುಕೃತವೇ..!

  ನಿಂಗಳ ಅಡಿ ಅದುರಿದ ‘ಮಧುರ’ ಅನುಭವ ಕಥನಕ್ಕೆ ಈ ಒಪ್ಪ

 2. raghumuliya says:

  ಧನ್ಯವಾದ ಭಾವ.ಕಛ್ ನ ಅ೦ಜಾರ್ ಪ್ರದೇಶದ ಶಾಲೆಯ ಮಕ್ಕೊಗೆ ದೇವರು ಭಾಗ್ಯ ಕೊಟ್ಟಿದಾ ಇಲ್ಲೆನ್ನೆ ಹೇಳುವ ಬೇಜಾರು ಇನ್ನೂ ಹೋಯಿದಿಲ್ಲೆ,ಭಾವ.

 3. lanabhat says:

  ಭಯಂಕರ… !!!!

  • ರಘುಮುಳಿಯ says:

   ಎಲ,ಅದಕ್ಕೆ ನೀನು ಕೊಡೆ ಹಿಡುದ್ದದೋ ಭಾವ?ನೆಲ ನೆಡುಗೊಗ ಕೊಡೆ ಹಿಡುದರೆ ಎ೦ತ ಗುಣ??

 4. ಚೆನ್ನೈ ಭಾವ. says:

  ಕಥೆ ‘ಸ್ವಾರಸ್ಯ’ವಾಗಿ ಲಾಯಕ್ಕ ಬರದ್ದಿ. ಓದುವಾಗ ಝುಂ ಹೇಳಿತ್ತು. ತ್ಸುನಾಮಿಯ ತಾಂಡವ ಟಿವಿಲಿ ಕಂಡದು, ಇಲ್ಲಿ ನೋಡಿದ್ದು ಎಲ್ಲಾ ನೆಂಪು ಆತು.

  ಪಂಚಭೂತಕ್ಕೆ ಏಳಕ್ಕ ಏಳಗಿರೆ ಎಂತಕ್ಕು ಹೇಳಿ ಕೂದು ಚಿಂತಿಸುವಾಂಗೆ ಆತು.

  ‘ಅವ್ವು’ ಹೇಳಿದಾಂಗೆ – ಏನೂ ಅಕ್ಕು, ಏನೇನೂ ಅಕ್ಕು, ಏನಕ್ಕೇನೂ ಅಕ್ಕು.

  ಬಹಳಷ್ಟು ಜೆನಂಗೋ ಚೆಂದಕ್ಕೆ ಒಪ್ಪವೂ ಕೊತ್ತಿದವು.

  ಇನ್ನೆಂತರ ಆನಿಲ್ಲಿ ಬರವದು.

  ನಿಂಗಳ ಅನುಭವ ಇಲ್ಲಿ ಬರದ್ದಕ್ಕೆ ಇದಾ ‘ಥ್ಯಾಂಕ್ಸ್’ ಅಷ್ಟೇ ಹೇಳಲೇಡಿಗಸ್ಟೇ

 5. ರಘುಮುಳಿಯ says:

  ಚೆನ್ನೈ ಭಾವ,ಆನು ದೇವರಿ೦ಗೂ ದಿನಾಗಳೂ ಅದನ್ನೇ ಹೇಳೊದಿದಾ..

 6. mohananna says:

  ರಘು ಭಾವ ನಿ೦ಗಳ ಕೈ ಬೀಸಿ ಕರದ ಕೈರೋದ ಸ್ಥಿತಿ ನೋಡುವಾಗ ನಿ೦ಗೊ ವಾಪಸು ಬ೦ದು ಮತ್ತೊ೦ಉ ಪುನರ್ಜನ್ಮ ಪಡದೀರೋ ತೋರ್ತು.ದೇವರು ಬೇಕಾದ ಹಾ೦ಗೆ ನೆಡಸುತ್ತ೦ ಹೇಳಿ ಎನ್ನ ಪೂರ್ಣ ವಿಶ್ವಾಸ.ಒಪ್ಪ೦ಗಳೊಟ್ಟಿ೦ಗೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *