Oppanna.com

ಇದು ಕಥೆಯಲ್ಲ…ಜೀವನ????????

ಬರದೋರು :   suhaa...s suhas    on   30/03/2011    24 ಒಪ್ಪಂಗೊ

ಆ ದಿನ ಆಗಸ್ಟ್ ೧೬, ಆನು ಕೆಲಸಕ್ಕೆ ಸೇರಿದ ಎರಡನೇ ದಿನ…ಬಣ್ಣ ಬಣ್ಣದ ಕನಸು ನೋಡಿಯೊಂಡು ಕಣ್ಣು ಬಿಟ್ಟಪ್ಪಗ ೮.೦೦ ಗಂಟೆ ಆಗಿದ್ದತ್ತು…ಗಡಿ ಬಿಡಿ ಮಾಡಿ ಎದ್ದು…ಎಲ್ಲಾ ಕೆಲಸ ಅರ್ಧಂಭರ್ದ ಮಾಡಿ ಹೆರಟೆ…ಒಂಭತ್ತು ಗಂಟೆ ಒಳ ಆನು ಆಫೀಸಲ್ಲಿ ಇರೆಕಾಗಿದ್ದತ್ತು…ರೂಮಿಂದ ಆಫೀಸ್ ಗೆ ಬಸ್ಸಿಲ್ಲಿ ಹೋಪದಾದ್ರೆ ೧.೦೦ ಗಂಟೆ ದಾರಿ ಇದ್ದತ್ತು…ಈ ವಿಚಾರ ತಲೆಗೆ ಬಂದ ಕೂಡ್ಲೆ ತಿಂಡಿಯೂ ತಿನ್ನದ್ದೆ ಬಸ್ ಸ್ಟಾಪಿನತ್ರೆ ಓಡಿದೆ…

ಹಾಂಗೆ ಓಡ್ತಾ ಇಪ್ಪಗ ಯಾವುದೋ ಶಾಲಾ ವಾಹನ ಯಮ ವೇಗಲ್ಲಿ ಬಂದು ಗುಂಡಿಲಿಪ್ಪ  ಕೆಸರ ಪೂರಾ ಎತ್ತಿ ಎನ್ನ ಮೇಲೆ ಹಾಕಿ ಹೋಳಿ ಹಬ್ಬ ಮಾಡಿ ಹೋತು…ಎನಗೆ ಆಗ ಬಂದ ಕೋಪಲ್ಲಿ  ಅವನ ಗಾಡಿಯ ಗ್ಲಾಸು ಒಡೆಯೆಕು ಹೇಳಿ ಒಂದು ಕಲ್ಲು ಎತ್ತಿಯೊಂಡೆ…ಎತ್ತುವಷ್ಟರಲ್ಲೆ ಅದು ಮರೆಯಾಗಿದ್ದತ್ತು.

ಎನ್ನ ಪರಿಸ್ಥಿತಿ ಈಗ ಇಂಗು ತಿಂದ ಮಂಗನಾಂಗೆ  ಆಗಿದ್ದತ್ತು…ಕೂಡ್ಲೆ ಆಫೀಸಿಂಗೆ ಫೋನ್ ಮಾಡಿ ವಿಷಯ ತಿಳುಶಿದೆ…ಅವು ಅರ್ಥ ಮಾಡಿಯೊಂಡವು…ಹ್ಯಾಪು ಮೋರೆ ಹಾಕಿಯೊಂಡು ವಾಪಸ್ ಬತ್ತಾ ಇಪ್ಪಗ,ಎನ್ನ ಈ ಪರಿಸ್ಥಿತಿಗೆ  ಆರು ಕಾರಣ ಹೇಳಿ ಆಲೋಚನೆ ಮಾಡಿದೆ…ಆಗ ಎನ್ನ ಕಣ್ಣ ಮುಂದೆ ಬಂದ ೩ ಆರೋಪಿಗಳು…

೧.ಆಫೀಸಿಗೆ ಹೋಯೆಕು ಹೇಳಿ ಗೊಂತಿದ್ರೂ , ತಡವಾಗಿ ಎದ್ದ ಆನು….

೨.ಮಕ್ಕೊ ವ್ಯಾನಿಲ್ಲಿದ್ದರೂ , ವಾಯುವೇಗಲ್ಲಿ ಹೋದ ಡ್ರ್ಯೆವರ್….

೩.ಮಾರ್ಗಲ್ಲಿಪ್ಪ ಗುಂಡಿಗಳ ನೋಡಿಯೂ ನೋಡದ್ದೆ ತಮ್ಮ ಸ್ವಾರ್ಥ ಸಾಧನೆಗೇ ಬದುಕ್ಕುವ ರಾಜಕಾರಣಿಗೊ…

ಆನು ಬರದ್ದರ ಓದಿ ಅವು ತಿದ್ದಿಯೊಳ್ತವು ಹೇಳಿ ಎನಗೆ ಖಂಡಿತಾ ಭರವಸೆ ಇಲ್ಲೆ.ಆನ೦ತೂ ಎನ್ನನ್ನೇ ತಿದ್ದಿಗೊ೦ಡೆ.

ಎನ್ನ ಕೋಪ, ಈ  ಅನುಭವ  ಬರದಪ್ಪಗ ಕಮ್ಮಿ ಆತಿದಾ !.

24 thoughts on “ಇದು ಕಥೆಯಲ್ಲ…ಜೀವನ????????

  1. ಎಂಗಳದ್ದು ಖಾಸಗಿ ಕಂಪನಿ ಅಲ್ಲದೊ…ಆ ದಿನ ಎಂಗಗೆ ಸ್ವಾತಂತ್ರ್ಯ ಇದ್ದತ್ತಿಲ್ಲೆ….

  2. ‘ಕೋಪದ ಕೈಲಿ ಬುದ್ಧಿಯ ಕೊಡ್ಲಾಗ’ ಹೇಳಿ ಹೆಳಿದ್ದವು ಹಿರಿಯರು. ಅಲ್ಲದೊ ತೂತಣ್ಣ? ನೋಡು, ಆ ಶಾಲೆ ವ್ಯಾನ್ ನಿನ್ನ ಕಲ್ಲಿನ ಪೆಟ್ಟಿಂಗೆ ಸಿಕ್ಕದ್ದದು ಒಂದು ಲೆಕ್ಕಲ್ಲಿ ಒಳ್ಳೆದೇ ಆತು. ಅಲ್ಲದ್ರೆ ಮತ್ತೂ ಏನಾರು ಅನರ್ಥ ಆವ್ತಿತ್ತು.

    ಅದು ಸರಿ, ‘ಆಗಸ್ಟ್ ೧೬ ಆನು ಕೆಲಸಕ್ಕೆ ಸೇರಿದ ಎರಡನೇ ದಿನ’ ಹೇಳಿದೆ- ಅಂಬಗ ಊರಿಡೀ ರಜೆ ಇಪ್ಪ ದಿನ ಆಗಸ್ಟ್ ೧೫ಕ್ಕೆ ನೀನು ಕೆಲಸಕ್ಕೆ ಸೇರಿದ್ದದೊ? ಎಂತ ಕತೆಯಪ್ಪಾ ಇದು!

    ಏನೇ ಆಗಲಿ, ಲೇಖನ ಚೆಂದ ಆಯಿದು.

  3. ಈ ರೀತಿ ಆತ್ಮ ವಿಮರ್ಷೆ ಮಾಡಿರೆ, ನಾವು ಕೋಪಿಸಿಗೊಂಡ ಎಷ್ಟೋ ಕ್ಷಣಂಗೊಕ್ಕೆ ಕಾರಣ, ನಮ್ಮ ಅಜಾಗ್ರತೆಂದಲೇ ಆದ್ದು ಹೇಳಿ ಗೊಂತಾವ್ತು.
    ಒಳ್ಳೆ ಬರಹ.

  4. ಆಫೀಸಿನವ್ವು ನಿಂಗೊ ಫೋನು ಮಾಡಿ ಹೇಳಿಯಪ್ಪಗ ಅದರ ನಂಬಿದವನ್ನೇ , ಅದರ ಮೆಚ್ಚೆಕು 🙂

    1. ಅಂಬಗ ಇದು ಲೊಟ್ಟೆ ಕತೆಯೋ. ಛೆ.,!

      ನಿಂಗಳ ಬೆಳಿ ಅಂಗಿಗೆ ಕೆಸರು ರಟ್ಟಿದ್ದರ ಫಟ ತೆಗದು ಹಾಕೆಕ್ಕಾತೂ…

      1. ಹಾಂಗಲ್ಲ…ಅವು ಹೇಳಿದ್ದಕ್ಕೆ ಉತ್ತರ ಬರುದೆ ಅಷ್ತೆ…ಇನ್ನು ಮುಂದೆ ಆನು ಬರವದೆಲ್ಲ ಕಾಲ್ಪನಿಕ ಕಥೆಗೊ…ಓದಿ… ಪ್ರೋತ್ಸಾಹಿಸಿ…

        1. ಇದಾ ಎಡೆಎಡೆಲಿ ನಿಂಗಳ ನಿಜ ಕತೆಯನ್ನೂ ಬರದಿಕ್ಕಿ ಆತೋ.

    1. ಏ ಭಾವ,ಬರದ್ದು ಇ೦ದಾದರೂ ಹಳೆ ಕತೆ ಅಲ್ಲದೋ?ಲೇಖನದ ಸುರುವಾಣ ಗೀಟು ಒ೦ದಾರಿ ಓದಿಕ್ಕಿ.
      ಮತ್ತೆ,ಪೇಟೆಲಿ ಕೆಲವು ಚರ೦ಡಿ ನೀರು ವರುಷದ ಎಲ್ಲಾ ಕಾಲವೂ ಒರತೆ ಕಡಿಯದ್ದೆ ಹರಿತ್ತಪ್ಪಾ..

    2. ನಿಂಗ ಹೀಂಗೆ ಕೇಳ್ತಿ ಹೇಳಿ ಗೊಂತಿದ್ದು…ಅದಕ್ಕೆ ತಾರೀಕು ಕೂಡ ಹಾಕಿದ್ದೆ… ಒಂದರಿ ನೋಡಿಯೊಳ್ಲಿ…

  5. ಲಾಯಕೆ ವರ್ಣನೆ ಬರದ್ದಿ.. ಎಲ್ಲದರಿ೦ದ ಕೊಶಿಯಾದ್ದು ಎನಗೆ ನಿ೦ಗಳ ೩ ಆರೋಪಿಗಳ ವಿಮರ್ಶೆ.. ನಿ೦ಗಳ “self-analysis”, ಕೊಶಿಯಾದ್ದು.. ಇದು ಎಲ್ಲಾರು ಮಾಡ್ತವಿಲ್ಲೆ.. ನಾವು ಹಲವು ಬಾರಿ ಇದು ಬಿಟ್ಟು ಬೇರೆ ಎಲ್ಲಾ ಮಾಡ್ತು..

  6. ಸ್ವ ಅನುಭವ ಲಾಯಿಕ ಆಯಿದು.ಸಮಯದ ಬಗ್ಗೆ ಇರೆಕಾದ ಗಮನವ ಭಾರೀ ಲಾಯಿಕಲ್ಲಿ ವಿವರ್ಸಿದ್ದಿ.ಧನ್ಯವಾದ

  7. ” ಅವನ ಗಾಡಿಯ ಗ್ಲಾಸು ಒಡೆಯೆಕು ಹೇಳಿ ಒಂದು ಕಲ್ಲು ಎತ್ತಿಯೊಂಡೆ…ಎತ್ತುವಷ್ಟರಲ್ಲೆ ಅದು ಮರೆಯಾಗಿದ್ದತ್ತು. ” – ಇದು ಲಾಯಕ್ಕ ಆದ್ದು. ಇಲ್ಲದ್ರೆ ನಿಂಗಳ ಕೈಲಿದ್ದ ಕಲ್ಲು ಇನ್ನೂ ಅನಾಹುತಕ್ಕೆ ಕಾರಣ ಆವ್ತಿತ್ತು. ತಡ ಆಗಿ ಆದ್ರೂ ಆಫೀಸಿಂಗೆ ಹೋಪಲೆ ಎಡಿಗಾತು. ಇಲ್ಲದ್ರೆ ಕೇರಳಲ್ಲಿ ಮತ್ತು ಆಗಿರುತ್ತಿದ್ರೆ ನಿಂಗಳೂ ಆಸ್ಪತ್ರೆ ಸೇರೆಕ್ಕಾಗಿ ಬತ್ತಿತ್ತೋ!!

    ಬರದ್ದು ಚಿಕ್ಕವಾಗಿ ಕಂಡ್ರೂ ವಿಷಯ ಲಾಯಕ್ಕ ಆಯ್ದು ಹೇಳಿ ಒಪ್ಪ ಇಲ್ಲಿಂದ.

  8. ತೂತಣ್ಣ ಭಾವ೦ಗೆ ಸ್ವಾಗತ.ಸಣ್ಣ ವಿಷಯವ ಚೊಕ್ಕಕೆ ಬರದ್ದಿ,ಸ೦ತೋಷ ಆತು.
    ನಾವು ಪ್ರತಿಯೊ೦ದು ಲೋಪಕ್ಕೂ ಲೋಕವ ದೂರೊದರ ಮದಲು ನಮ್ಮ ತಪ್ಪೇನಾರು ಇದ್ದೋ ಹೇಳಿ ನೋಡಿಗೊ೦ಡು,ತಿದ್ದಿ ನೆಡೆಯೆಕ್ಕು ಹೇಳುವ ನಿ೦ಗಳ ಮಾತು ಮೆಚ್ಚೆಕ್ಕಾದ್ದು.

  9. {ಕೂಡ್ಲೆ ಆಫೀಸಿಂಗೆ ಫೋನ್ ಮಾಡಿ ವಿಷಯ ತಿಳುಶಿದೆ } – ಇದು ಎನಗೆ ಖುಶಿ ಕೊಟ್ಟತ್ತು. ಹೆಚ್ಚಿನೋರಿಂಗೆ ಇದು ಹೊಳೆತ್ತಿಲ್ಲೆ.
    ಲಾಯಕ ಬರದ್ದಿ.
    ಮುಂದುವರೆಸಿಃ)ಃ)ಃ)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×