ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಪುತ್ತೂರುಬಾವಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆಪೆರ್ಲದಣ್ಣನೆಗೆಗಾರ°ಪೆಂಗಣ್ಣ°ವೇಣೂರಣ್ಣತೆಕ್ಕುಂಜ ಕುಮಾರ ಮಾವ°ಬಟ್ಟಮಾವ°ಕಾವಿನಮೂಲೆ ಮಾಣಿಹಳೆಮನೆ ಅಣ್ಣಶರ್ಮಪ್ಪಚ್ಚಿಡೈಮಂಡು ಭಾವಡಾಮಹೇಶಣ್ಣಒಪ್ಪಕ್ಕಮುಳಿಯ ಭಾವಅನು ಉಡುಪುಮೂಲೆಡಾಗುಟ್ರಕ್ಕ°ಚೆನ್ನೈ ಭಾವ°ಮಂಗ್ಳೂರ ಮಾಣಿಬೊಳುಂಬು ಮಾವ°ನೀರ್ಕಜೆ ಮಹೇಶಚೂರಿಬೈಲು ದೀಪಕ್ಕಸರ್ಪಮಲೆ ಮಾವ°ಚುಬ್ಬಣ್ಣದೊಡ್ಡಭಾವಸಂಪಾದಕ° (editor)ಅಕ್ಷರದಣ್ಣಶ್ರೀಅಕ್ಕ°ಗೋಪಾಲಣ್ಣವಸಂತರಾಜ್ ಹಳೆಮನೆವೇಣಿಯಕ್ಕ°ಅಡ್ಕತ್ತಿಮಾರುಮಾವ°ಪುಟ್ಟಬಾವ°ಬಲ್ನಾಡುಮಾಣಿಸುಭಗದೊಡ್ಡಮಾವ°ದೀಪಿಕಾಕೇಜಿಮಾವ°ಯೇನಂಕೂಡ್ಳು ಅಣ್ಣಕಳಾಯಿ ಗೀತತ್ತೆಶ್ಯಾಮಣ್ಣಶಾಂತತ್ತೆಮಾಷ್ಟ್ರುಮಾವ°ಪವನಜಮಾವವಿದ್ವಾನಣ್ಣಪುತ್ತೂರಿನ ಪುಟ್ಟಕ್ಕಗಣೇಶ ಮಾವ°ಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿದೇವಸ್ಯ ಮಾಣಿಅಕ್ಷರ°ಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ಅನುಶ್ರೀ ಬಂಡಾಡಿಬಂಡಾಡಿ ಅಜ್ಜಿಚೆನ್ನಬೆಟ್ಟಣ್ಣಅಜ್ಜಕಾನ ಭಾವ


ಋಣತ್ರಯ

September 24, 2010 ರ 3:19 pmಗೆ ನಮ್ಮ ಗಣೇಶ ಮಾವ° ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 ಮಾತೃಋಣ,ಪಿತೃಋಣ,ಋಷಿಋಣ  ಈ ಮೂರು ಋಣಂಗಳ ಋಣತ್ರಯ ಹೇಳಿ ಹೇಳ್ತವು. ಋಣ ಹೇಳಿರೆ ಸಾಲ.ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬನೂ ಋಣತ್ರಯಂದ ಮುಕ್ತ ಆಯೆಕ್ಕು.ಇಲ್ಲದ್ರೆ ಜನ್ಮ ಸಾರ್ಥಕತೆ ಸಿದ್ಧಿಸುತ್ತಿಲ್ಲೆ..ಮೊದಲಿಂಗೆ ಮಾತೃ ಋಣ ಹೇಳಿರೆ ಎಂತ ಹೇಳಿ ಹೇಳ್ತೆ, ನವಮಾಸ ತನ್ನ ದೇಹದೊಳದಿಕೆ ಮಡಿಕ್ಕೊಂಡು ಭಾರವ ಸಹಿಸಿ ರಕ್ತ ಮಾಂಸಾದಿಗಳ ಕೊಟ್ಟು ಜೀವ ಜಗತ್ತಿನ ತೋರ್ಸಿದ ಮತ್ತೊಂದು ಸೃಷ್ಟಿ ದೇವತೆ ನಮ್ಮ ಹೆತ್ತಬ್ಬೆ..~ಅಮ್ಮ,

            ನಮ್ಮ ಜನ್ಮಕಾರಣನಾಗಿ,ಪೋಷಕನಾಗಿ,ವಿದ್ಯೆ ಹೇಳ್ಸಿ,ಕಾಲಕ್ಕೆ ತಕ್ಕ ಹಾಂಗಿಪ್ಪ ಅವಶ್ಯಕತೆಗಳ ಪೂರೈಸಿ ಅಭಿವೃದ್ಧಿಯ ದಾರಿಗೆ ನಡೆಶಿ,ತನ್ನ ಪಿತೃಋಣವ ತೀರ್ಸುಲೆ ಮಕ್ಕೊಗೆ ಮದುವೆ ಮಾಡಿ,ಒಟ್ಟಿಲಿ ಹೇಳ್ತಾರೆ  ಸಮಾಜಲ್ಲಿ ಆದರ್ಶಪ್ರಾಯ ವ್ಯಕ್ತಿಯಾಗಿ ಬಾಳಿ ಬದುಕುಲೆ ಇಪ್ಪಂತಹ ಎಲ್ಲಾ ವೆವಸ್ಥೆಗೊಕ್ಕೆ ಬೇಕಾಗಿ ಅಹರ್ನಿಶಿ ನಮ್ಮ ಭವಿಷ್ಯದ ಉನ್ನತಿಗಾಗಿ ಶ್ರಮಿಸಿದ ಅಪ್ಪ~ಇದು ಪಿತೃಋಣ..

           ಅಪ್ಪ ಅಮ್ಮ ಜನ್ಮಕೊಟ್ಟರೆ ಜ್ಞಾನವ ಕೊಡುವದು ಗುರು.ನಾವು ಈಗ  ಆಚರಣೆ ಮಾಡುವ  ಸಂಪ್ರದಾಯ ಹೇಳುವದು ಯಾವ ರೀತಿಲಿ  ಮಾಡಿಗೊಂಡಿದ್ದೋ ಅದಕ್ಕೆ ಕಾರಣ ನಮ್ಮ ಗೋತ್ರದ ಋಷಿಗ.ನಾವು ಆಡುವಂತಹ ಭಾಷೆಗೆ ರೂಪುಕಲ್ಪನೆ ಕೊಟ್ಟು ಭಾಷೆಯ ಲಿಪಿರೂಪಕ್ಕೆ ಶಾಶ್ವತಗೊಳಿಸಿದವು ನಮ್ಮ ಋಷಿಮುನಿಗ..ಉತ್ತಮ ಬದುಕು ನಡೆಶುಲೆ ಪ್ರಯೋಗವಿಧಿ ಸಹಿತ ಅಪೂರ್ವ ಶಾಸ್ತ್ರಂಗಳ ಮೂಲಕ ಧರ್ಮಜ್ಞಾನವನ್ನೂ,ಪರಿಸರ ಪ್ರಜ್ಞೆಯನ್ನೂ ಗ್ರಂಥಂಗಳ ರೂಪಲ್ಲಿ ನವಗೆ ಇಂದು ವಿಜ್ಞಾನ ಧನರೂಪಲ್ಲಿ ಕೊಟ್ಟವು ನಮ್ಮ ಋಷಿ ಪರಂಪರೆ~ಇದು ಋಷಿಋಣ..

         ಈ ಋಣತ್ರಯ ವಿಮುಕ್ತಿಗಾಗಿ ನಾವು ಋಷಿಗ ಹೇಳಿದ ವಿಧಿಗೆ ಶರಣಾಯೆಕ್ಕು..ಅದರ ಶಾಸ್ತ್ರ ವಿಧಿಗ ಹಲವು ರೂಪಲ್ಲಿ ಇಕ್ಕು.ಆದರೆ ಅದರ ಸಂಕಲ್ಪ ಒಂದೇ ಆಗಿರ್ತು.ಉದಾ:ವೈದಿಕ ಕಾರ್ಯಕ್ರಮ,ಜ್ಯೋತಿಷ್ಯ ಪರಿಹಾರ,ಅಧ್ಯಯನ-ಅಧ್ಯಾಪನಾದಿ ಷಟ್ಕರ್ಮ ವಿಷಯಂಗ,ಆಯುರ್ವೇದ,ಇನ್ನೂ ಹಲವು ರೀತಿಲಿ ಹೇಳುಲಕ್ಕು.ಮಾತಾ ಪಿತೃಗಳ ಋಣ ಹೇಳಿರೆ ಅದೊಂದು ಧಾರ್ಮಿಕ ಋಣ.ಅದಕ್ಕೆ ಅನುಸರಿಸಿ ನಮ್ಮ ಆಚಾರ ವಿಚಾರ ಪದ್ಧತಿಗ ಇರ್ತು.ನಾವು ಹುಟ್ಟಿ ಬೆಳದ ಕೂಡ್ಲೆ ನಮ್ಮ ಜೀವನಲ್ಲಿ  ಕಣ್ಣಿನ ಮೇಲೆ ಕಣ್ಣು ಮಡುಗಿ ನಾವು ಸಮಾಜಲ್ಲಿ ವಿದ್ಯೆ ಬುದ್ಧಿ ಕಲ್ತು ಸಂಪಾದನೆಗೆ ಇಳಿವನ್ನಾರ ಹಲವಾರು ರೀತಿಲಿ ತಲೆಬೆಶಿ ಮಾಡಿಗೊಂಡಿರ್ತವು.ಇಂಥ  ಅಪ್ಪ ಅಮ್ಮಂದ್ರು ಮುದಿತನ ಬಪ್ಪಗ ಅವರ ಸೇವೆಯ ಮಾಡಿ,ಅವರ ಆಗು ಹೋಗುಗಳ ಸೂಕ್ತ ಸಮಯಲ್ಲಿ ವಿಚಾರ್ಸಿಗೊಂಡು,ಅವರ ಮನಸ್ಸಿಂಗೆ ಧೈರ್ಯ ತುಂಬಿ  ಮಾತಾಪಿತೃ  ಋಣಂದ ಮುಕ್ತಿಯಾಯೆಕ್ಕು…

        ನಮ್ಮ ಇಡೀ ಜಗತ್ತಿಂಗೆ ಜಗದ್ಗುರುಗ ಆಗಿಪ್ಪಂತಹ ನಮ್ಮ ಗುರುಗಳ ಸೇವೆ ಮಾಡಿಗೊಂಡು ಆ ಮೂಲಕ ನಮ್ಮ ಋಷಿ ಪರಂಪರೆಯ ನಮ್ಮ ಜೀವನಲ್ಲಿ ಅಳವಡಿಸಿಗೊಂಡು ಋಷಿಋಣ ಸಹಿತ ಋಣತ್ರಯಂಗಳ  ಮುಕ್ತಿ ಮಾಡ್ಲೆ  ಅವು ಹೇಳಿದ ರೀತಿಲಿ ಪದ್ಧತಿಗಳ ಅನುಸರಿಸಿಗೊಂಡು ಹೋಪ!!

       ಮಾತೃದೇವೋಭವ!ಪಿತೃದೇವೋಭವ!ಆಚಾರ್ಯದೇವೋಭವ!ಅತಿಥಿದೇವೋಭವ!

              ಹರೇರಾಮ

ಋಣತ್ರಯ, 5.0 out of 5 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗಣೇಶ ಮಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

  1. ರಘುಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: 0 (from 0 votes)

    ಗಣೇಶ ಮಾವಾ,ಮುತ್ತಿನಂಥಾ ಮಾತುಗೋ.
    ಧನದಾಸೆಂದ ಇಂದು ಋಣ೦ಗಳ ಮರತು ಬಿಟ್ಟಿದು ಲೋಕ,ಅಲ್ಲದೋ?
    ಕ್ರಮೇಣ ಧನಮದ ತುಂಬಿ ತುಳುಕೊಗ ಋಣತ್ರಯ೦ಗೊ ಬಹುಷಃ ಭಾರತ್ರಯವಾಗಿ ಕಾ೦ಬೊದೋ ಏನೋ. ಹಾಂಗಾಗಿ ಅವರಿಂದ ಮುಕ್ತಿ ಪಡೆವ ದಾರಿ ಹುಡುಕ್ಕೊದೋ?

    [ಉತ್ತರುಸಿ]

  2. ಚುಬ್ಬಣ್ಣ
    ಚುಬ್ಬಣ್ಣ
    VN:F [1.9.3_1094]
    Rating: 0 (from 0 votes)

    “….ಪ್ರತಿಯೊಬ್ಬನೂ ಋಣತ್ರಯಂದ ಮುಕ್ತ ಆಯೆಕ್ಕು.” ಮುಕ್ತ ಆಯಿಕು ಹೇಳುದರ ಅರ್ಥ ಎ೦ತರ ಗಣೇಶ ಮಾವ°… ರಜ ಬಿಡ್ಸಿ ಹೇಳುವಿರಾ?

    ಎನಗೆ ತಿಳುದ ಮಟ್ಟಿ೦ಗೆ “ಗೊಪಿತೃಮಾತೃಗುರು” ವಿನ ಋಣ ಎ೦ದಿ೦ಗು ತೀರ್ಸಲೆಡಿಯಾ ಹೀಳಿ…

    ನಮ್ಮ ಅಬ್ಬೆಅಪ್ಪಗುರು.. ಎಲ್ಲಾ ದೇವರಿಗಿ೦ತ ಮೇಲೆ ಹೇಳಿ ಹಿರಿಯರು ಹೇಳ್ತವು… ಅಲ್ಲದೊ?? ಅಬ್ಬೆಅಪ್ಪನ ಸೆವೆ ಮಾಡದ್ರೆ… ಮಕ್ಕೊ ಆಗಿ ನಮ್ಮ ಬೆಲೆ… ಒ೦ದು ಕಸವಿ೦ಗು ಸಮಾನ ಅಲ್ಲಾ…

    “ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ, ನಿತ್ಯ ದಾನವ ಮಾಡಿ ಫಲವೇನು? – ” ಒ೦ದು ದಾಸರ ವಾಣಿ ಇದ್ದು..

    [ಉತ್ತರುಸಿ]

    ಗಣೇಶ ಮಾವ° ಉತ್ತರ ಕೊಟ್ಟದು:
    ಗಣೇಶ ಮಾವ°

    VN:F [1.9.3_1094]
    Rating: 0 (from 0 votes)

    ಸೇವೆ ಮಾಡುವದೇ ಋಣ ಮುಕ್ತನನ್ನಾಗಿ ಮಾಡುದು ಚುಬ್ಬಣ್ಣ ಭಾವ.. ಆಯಾಯ ಕಾಲಕ್ಕೆ ಅವರ ಸೇವೆ ಮಾಡಿರೆ ನವಗೆ ನಮ್ಮ ಹಿರಿಯವು ಮಾಡಿದ ಋಣವ ತೀರ್ಸಿದ ಹಾಂಗೆ..

    [ಉತ್ತರುಸಿ]

  3. ಸುವರ್ಣಿನೀ
    ಸುವರ್ಣಿನೀ ಕೊಣಲೆ
    VN:F [1.9.3_1094]
    Rating: 0 (from 0 votes)

    ಖಂಡಿತಾ… ಲೇಖನ ಲಾಯ್ಕ ಆಯ್ದು..ಲೇಖನಕ್ಕೆ ಆಯ್ಕೆ ಮಾಡಿಗೊಂಡ ವಿಷಯವೂ ಅಷ್ಟೇ..

    [ಉತ್ತರುಸಿ]

  4. ಪದ್ಮನಾಭ ಭಟ್
    VA:F [1.9.3_1094]
    Rating: 0 (from 0 votes)

    ಭಾರೀ ಒಳ್ಳೆ ಲೇಖನ.

    [ಉತ್ತರುಸಿ]

  5. ಶರ್ಮಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: 0 (from 0 votes)

    ಋಣತ್ರಯಂಗಳ ಬಗ್ಗೆ ಗಣೇಶನ ಲೇಖನಲ್ಲಿ ಇಪ್ಪ ವಿಶಯಂಗಳ ಎಲ್ಲರೂ ಅನುಷ್ಠಾನಲಲ್ಲಿ ತರೆಕ್ಕಾದ್ದು ಅವರವರ ಕರ್ತವ್ಯ ಕೂಡಾ.
    ಅಲ್ಲದ್ದೆ ನವಗೆ ಈ ಭೂಮಿ ಋಣ, ಸಮಾಜದ ಋಣಂಗಳೂ ಇದ್ದು. ಅದರನ್ನೂ ಸರಿಯಾದ ರೀತಿಲಿ ತೀರ್ಸೆಕಾದ್ದು ನಮ್ಮ ಕರ್ತವ್ಯ.

    [ಉತ್ತರುಸಿ]

  6. ಗೋಪಾಲ ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ಭಾರೀ ಒಳ್ಳೆಯ ವಿಚಾರವ ಹೇಳಿದ್ದವು ಗಣೇಶಣ್ಣ. ಋಣ ಸಂದಾಯ ಮಾಡುತ್ತದು ನಮ್ಮ ನಮ್ಮ ಕರ್ತವ್ಯ ಖಂಡಿತಾ. ಋಣಮುಕ್ತ ಆವುತ್ತರ ಒಟ್ಟಿಂಗೆ, ಎಂಗಳ ಬ್ಯಾಂಕಿನ ಸಾಲವನ್ನೂ ಮರದಿಕ್ಕೆಡಿ !!!

    [ಉತ್ತರುಸಿ]

    ಗಣೇಶ ಮಾವ° ಉತ್ತರ ಕೊಟ್ಟದು:
    ಗಣೇಶ ಮಾವ°

    VN:F [1.9.3_1094]
    Rating: 0 (from 0 votes)

    ಗೋಪಾಲ ಮಾವ,
    ನಿಂಗಳ ಬ್ಯಾಂಕಿಲಿ ಆನು ಸಾಲ ಮಾಡಿದ್ದಿಲ್ಲೆ…ಮತ್ತೆ ಎಂಗಳ ಬೈಲಿನೋರು ಕ್ರೋಪು ಲೋನು ಮಾಡಿಕ್ಕು.ಅದು ಎಂಥ ಇದ್ದೋ ಗುರಿಕ್ಕಾರನ ಹತ್ರೆ ಕೇಳಿಕ್ಕಿ,ಎಂಗಳ ಬೈಲಿಲಿ ಅಡಕ್ಕೆಲಿ ರಾಜ ಗಟ್ಟಿ ಅವ್ವೆ,!!!

    [ಉತ್ತರುಸಿ]

  7. Krishnamohana Bhat
    ಮೋಹನಣ್ಣ
    VA:F [1.9.3_1094]
    Rating: 0 (from 0 votes)

    ಗಣೇಶಣ್ಣನ ಲೇಖನ ಒಳ್ಳೆಸಮಯಲ್ಲಿ ಬಯಿ೦ದು.ಇ೦ದು ಅಬ್ಬೆ ಅಪ್ಪ ನಮ್ಮದು ಮಾ೦ತ್ರ ಅಲ್ಲ ನಮ್ಮ ಮಕ್ಕಳದ್ದು ಚಾಕ್ರಿ ಮಾಡಿರಕ್ಕು ಹೇಳಿ ಗ್ರಹಿಸುವ ಕಾಲ ಆ ಮೇಲೆ ಅವರ ಚಾಕ್ರಿ ಮಾಡೇಕಾಗಿ ಬ೦ದರೆ ಎಲ್ಲಿ ವ್ರುದ್ದಸ್ರಮ ಇದ್ದು ಅದರಲ್ಲಿ ಎಲ್ಲಿ ಕಮ್ಮಿಗಾವುತ್ತು ಹೇಳಿ ನೋಡುತ್ತವು.ಆನು ಮನೆಲಿ ನಿ೦ದರೆ ಅಕ್ಕೊ? ಹೆ೦ಡತ್ತಿಯು ಕೆಲಸಕ್ಕೆ ಹೋವುತ್ತು ಮಕ್ಕಳ ವಿದ್ಯಾಬ್ಯಾಸ ಆಯೆಕು ಅದರೆಡೆಲಿ ಈ ರಗಳೆ ಒ೦ದು ಹೇಳಿ ಗ್ರಹಿಸುವವೆ ಜಾಸ್ತಿ.ನಾಳೆ ನಮ್ಮ ಮಕ್ಕಳ ಯೋಚನ ಲಹರಿಯೂ ಇದೆ ದಾರಿಲಿ ಹೋಕು ಹೇಳಿ ನಾವು ಗ್ರಹಿಸುತ್ತಿಲ್ಲೆ.ನಮ್ಮ ಮಕ್ಕೊ ಹಾ೦ಗೆ ಮಾಡವು ಹೇಳಿ ನಮ್ಮ ಆಲೋಚನೆ;ನಮ್ಮ ಅಬ್ಬೆ ಅಪ್ಪನು ನಮ್ಮ ಹಾ೦ಗೆ ಅಥವಾ ಅದರಿ೦ದ ರಜ ಹೆಚ್ಚಗಿಯೆ ನವ ಬೆಕಾಗಿ ಬ೦ಗ೦ ಬಯಿನ್ದವು ಹೆಳಿ ತಿಳ್ಕೋ೦ಡ್ರೆ ಸಮಸ್ಯೆ ಅಥವ ಋಣ ಹೇಳ್ತದು ಪರಿಹಾರ ಅಕ್ಕಸ್ಟೆ.ಅ೦ತು ಗಣೇಶಣ್ಣ ಒಳ್ಳೆ ಲೇಖನ ಬರದ್ದ೦.ಇನ್ನು ಗೋಪಾಲ ಮಾವ೦ ಅಬ್ಬೆ ಅಪ್ಪನ ಋಣ ಕಳುದು ಪುರುಸೊತ್ತು ಸಮಯ ಎಲ್ಲಾ ಸಿಕ್ಕಿ ಅಡಕ್ಕಗೆ ರೋಗ ಇಲ್ಲದ್ದೆ ಕೈಗೆ ಬ೦ದು ಕ್ರಯವೂ ಬ೦ದರೆ ನಿ೦ಗಳ ಬಿಟ್ಟುಹಾಕುತ್ತಿಲ್ಲೆ.ಸ೦ತೋಷ ಆತಾನೆ.ಒಪ್ಪ೦ಗಳೊಟ್ಟಿ೦ಗೆ.

    [ಉತ್ತರುಸಿ]

  8. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ಲೈಕ ಆಯಿದು ಗುರುಗಳೇ… ನಮ್ಮ ಹಿರಿಯರು ನವಗೆ ಮಾಡಿದ ಋಣವ, ಕೊಟ್ಟ ಸಂಸ್ಕಾರವ ನಾವು ನಮ್ಮ ಮುಂದಿನವಕ್ಕೆ ಕೊಟ್ಟು ಹಿರಿಯರ ಋಣ ತೀರುಸೆಕ್ಕು ಅಲ್ಲದ?


    ನಿಂಗಳ
    ಮಂಗ್ಳೂರ ಮಾಣಿ…

    [ಉತ್ತರುಸಿ]

  9. ನೀರ್ಕಜೆ ಚಿಕ್ಕಮ್ಮ
    ನೀರ್ಕಜೆ ಚಿಕ್ಕಮ್ಮ
    VA:F [1.9.3_1094]
    Rating: 0 (from 0 votes)

    ಒಪ್ಪ ಲೇಖನ!!!!

    [ಉತ್ತರುಸಿ]

  10. ಮಹೇಶ
    ಡಾಮಹೇಶಣ್ಣ
    VA:F [1.9.3_1094]
    Rating: 0 (from 0 votes)

    ತುಂಬಾ ಸರಳವಾಗಿ ವಿವರುಸಿದ್ದಿ.
    ಧನ್ಯವಾದ ಗಣೇಶ ಮಾವಂಗೆ.

    [ಉತ್ತರುಸಿ]

  11. ಒಪ್ಪಣ್ಣ
    ಒಪ್ಪಣ್ಣ
    VA:F [1.9.3_1094]
    Rating: 0 (from 0 votes)

    ಋಣತ್ರಯಂಗಳ ಬಗ್ಗೆ ಭಾರೀ ಚೆಂದಲ್ಲಿ ಹೇಳಿಕೊಟ್ಟಿದಿ ಗಣೇಶಮಾವಾ..
    ತುಂಬಾ ಕೊಶಿ ಆತು.
    ಹೀಂಗಿರ್ತದು ಬೈಲಿಂಗೆ ಬತ್ತಾ ಇರಳಿ, ರಜಾ ಅಧ್ಯಾತ್ಮವನ್ನುದೇ ಕಲ್ತುಗೊಂಬ, ವಾನಪ್ರಸ್ಥದ ಮೊದಲು.
    ಅಲ್ಲದೋ? ;-)

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME