Oppanna.com

ಜಂಬ್ರಂದ ಶುರುವಾತು….

ಬರದೋರು :   ತೆಕ್ಕುಂಜ ಕುಮಾರ ಮಾವ°    on   21/03/2011    14 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಕಳುದ ವಾರ ಎನಗೆ ಒಂದು ಮದುವೆ ಜಂಬ್ರಕ್ಕೆ ಹೊಪಲೆ ಅವಕಾಶ ಸಿಕ್ಕಿತ್ತು. ಸೊಸೆಯ ಮದುವೆ, ಆದ್ದದು ಸುಳ್ಯ ಶಿವಕೃಪಲ್ಲಿ. ಎನಗೆ ಮುನ್ನಾಣ ದಿನಂದಲೇ ಡ್ಯೂಟಿ ಶುರುವಾಗಿತ್ತಿದ್ದು,ಅತ್ತಾಳ ಮುಗಿಶಿ ಇರುಳು ೧೨ಕ್ಕೆ ಒರಗಿದ್ದು. ಮರದಿನ ಉದಿಯಪ್ಪಗ ೭ ಗಂಟೆಗೆ ದಿಬ್ಬಾಣದವು ಯೆತ್ತಕ್ಕಾರೆ ಯೆಂಗೊಗೆ ಕಾಪಿ ತಿಂಡಿ ಮುಗಿಯೆಕ್ಕು ಹೇಳಿ ತಾಕೀತು ಆಗಿತ್ತು. ಶಿವಕೃಪಲ್ಲಿ ಮನುಗಿದರೆ ನುಸಿಗ ಹೊತ್ತುಗೊಂಡು ಹೋಕು ಹೇಳಿ ಭಾವ° ಎಚ್ಚರಿಕೆ ಕೊಟ್ಟ ಕಾರಣ,ನಾವು ಮನೆಗೆ ಹೋಗಿ ಮರದಿನ ೫.೩೦ ಗೆ ವಾಪಸು ಬಂದದು, ಮದುವೆಗೆ ಹಾಜರು ಇರೆಕ್ಕನ್ನೇ !ನುಸಿಗೊ ಮಡಿಕೇರಿಲಿ ಇಳುಶಿರೆ ಬಪ್ಪಲೆ ಬಸ್ಸೂ ಸರಿಕಟ್ಟುಇಲ್ಲೆ,ಮಾರ್ಗವೂ ಇಲ್ಲೆ.

ಜಂಬ್ರಲ್ಲಿ ನಾಕು ಸರ್ತಿ ಅತ್ತಿತ್ತ ಓಡಿದರೆ ಸಾಕು, ಬೆಶಿಲು ಏರುವಗ ಬಚ್ಚೆಲು ಶುರುವಾವ್ತು,ಪ್ರಾಯದೋಷವೋ ಎ೦ತ ಕರ್ಮವೋ?.ಮುಹೂರ್ತ ೧೦.೪೫ ಕ್ಕೆ, ಮುಗಿವಲಪ್ಪಗ ಎನಗೆ ರಜ ಕೂರೆಕ್ಕು ಹೇಳಿ ಕಂಡತ್ತು,ಒಂದು ಮೂಲೆಲಿ ಕುರ್ಚಿ ಹಿಡಿದು ಕೂದೆ ಅತ್ತಿತ್ತ ನೋಡಿಗೊಂಡು. ಒಬ್ಬ ಬೆಳಿ ತಲೆಯವ° ಎನ್ನತ್ರೆ ಬಂದು    ” ನನ್ನ ಗುರ್ತ ಉಂಟಾ..?”  ಹೇಳಿ ಕೇಳಿಗೊಂಡು ಬಂದ. ” ಛೇ.. ನಿಮ್ಮನ್ನು ಮರಿಲಿಕ್ಕುಂಟಾ ವಿಶ್ವಣ್ಣ ”  ಎಂಗ ಹೀಂಗೆ ಪಟ್ಟಾಂಗ ಶುರು ಮಾಡುವಾಗ ಎನ್ನ ಹೆಂಡತ್ತಿಯೂ ಸೇರಿತ್ತು,  ಆರು..? ಯೆಂತ..? ಹೇಳಿಗೊಂಡು. “ಇವ° ಇಡ್ಯಡ್ಕ ವಿಶ್ವಣ್ಣ, ನವಗೆ ನೆರೆಕರೆಯೆ” ಹೇಳಿ ಗುರ್ತ ಮಾಡಿಯಪ್ಪಗ ಹೆಂಡತ್ತಿ ಹಾಂ..ಹಾಂ.. ಹೇಳಿ ತಲೆ ಆಡಿಸಿತ್ತು, ಸರಿ ಗೊಂತಾಯಿದಿಲ್ಲೆ ಹೇಳಿ ವಿಶ್ವಣ್ಣಂಗೆ ಕಂಡತ್ತು. ” ಗಿರೀಶ್ ಭಾರದ್ವಾಜರ ಪರಿಚಯ ಉಂಟಾ..ಅವರ ತಮ್ಮ ನಾನು” ಹೇಳಿಯಪ್ಪಗ ” ಹೋ..ಗೊತ್ತಾಯ್ತು ” ಹೇಳಿ ಹೇಳಿತ್ತು. “ಇವು ಒಳ್ಳೆ ಕೃಷಿಕರು. ಈಗಳೂ ಗೆದ್ದೆ ಬೇಸಾಯ ಮಾಡಿಗೊಂಡಿದ್ದವು. ರಾಜ್ಯ ಪ್ರಷಸ್ತಿಯೂ ಸಿಕ್ಕಿದ್ದು ಇವಕ್ಕೆ” ಅನು ಸೇರ್ಸಿದೆ.

” ನಂದು ಎಂತ ಇಲ್ಲ ಮಾರಾಯ.. ತಂದೆಯವರು ಮಾಡಿದ್ದನ್ನು ಮುಂದುವರಿಸಿದ್ದು ಅಷ್ಟೆ..” ವಿಶ್ವಣ್ಣ ಹೇಳಿದ. ಇಷ್ಟೆಲ್ಲ ಮಾತುಕತೆ ಅಪ್ಪಗೆ ವಿಶ್ವಣ್ಣನ ತಮ್ಮಂದ್ರು ಬಂದು ಸೇರಿಗೊಂಡವು. ಸಣ್ಣಾಗಿಪ್ಪಗ ದೊಡ್ರಜೆಲಿ ಯೆವಾಗಳೂ ಒಟ್ಟಿಂಗೆ ಕ್ರಿಕೆಟ್ಟು ಆಡಿಗೊಂಡಿದ್ದದು ಎಲ್ಲ ನೆಂಪು ಮಾಡಿಗೊಂಡೆಯ°.

ವಿಶ್ವಣ್ಣನ ಅಪ್ಪ ಬಿ.ಕೆ. ಭಟ್ ಆನು ಸಣ್ಣಾಗಿಪ್ಪಳೇ ರೆಟೈರ್ ಆಗಿ ಇಡ್ಯಡ್ಕಲ್ಲಿ ಹೊಳೆ ಕರೆಲಿ ದೊಡ್ಡ ಜಾಗೆಲಿ ಇದ್ದುಗೊಂಡು ಕೃಷಿ ಮಾಡಿಗೊಂಡಿತ್ತಿದ್ದವು. ಅಡಕ್ಕೆ, ಕಾಯಿ ಅಲ್ಲದೆ ಬತ್ತ ಬೇಸಾಯದೇ ಮಾಡುಗು. ಒಟ್ಟಿಂಗೆ ಕಬ್ಬುದೇ ಬೆಳೆಸುಗು. ವರ್ಷಕ್ಕೊಂದರಿ ಕಬ್ಬು ಕಡುದು “ಆಲೆಮನೆ”ಯಾಂಗೆ ಬೆಲ್ಲ ಕಾಸುಗು. ಆವಾಗ ನೆರೆಕರೆಯವಕ್ಕೆಲ್ಲ ಹೇಳುಗು, ಒಂದು ದೊಡ್ಡ ಜಂಬ್ರದಾಂಗೆ ಮಾಡುಗು. ಆನುದೇ ಹೋಯಿದೆ. ಕಬ್ಬಿನ ಹಾಲು, ರವೆ, ಬೆಲ್ಲ ಹೊಟ್ಟೆ ತುಂಬ ತಿಂದ ನೆಂಪು ಎನಗೆ ಮರೆಯ.ಆಸುಪಾಸಿಂದ ಜನಂಗ ಅವರಲ್ಲಿಗೆ ಅನುಭವ ಕೇಳಿಗೊಂಡು ಬಕ್ಕು. ಆದರ್ಶ ಕೃಷಿಕ ಹೇಳುದರಲ್ಲಿ ಸಂಶಯವೇ ಇಲ್ಲೆ. ಇಷ್ಟೇ ಅಲ್ಲ, ಅವು ಒಳ್ಳೆ ಇಂಜಿನಿಯರ್ ಆಗಿಯೂ ಹೆಸರು ಮಾಡಿತ್ತಿದ್ದವು. ಸ್ವಾತಂತ್ರ್ಯಾ ನಂತರ ಉತ್ತರ, ದಕ್ಶಿಣ ಕನ್ನಡ ಜಿಲ್ಲೆಲಿ ಎಲ್ಲ ಸಿವಿಲ್ ಕಾಮಗಾರಿ ಕೆಲಸಂಗಳ ಇವು ಮಾಡಿಸಿದ್ದವಡ. ಕಟೀಲು ದೇವಸ್ಥಾನ ಮದಲು ಪೂರ ಮುಂಗಿಪ್ಪಗ ಈಗಿಪ್ಪದರ(ದೋಣಿಯಾಕರಲ್ಲಿಪ್ಪ ಪಂಚಾಂಗ) ಇವೇ ಮಾಡಿಸಿದ್ದಡ. ಅವರ ದೊಡ್ಡ ಮಗ ಗಿರೀಶಣ್ಣ ನಮ್ಮ ಜಿಲ್ಲೆಲಿ ತೂಗು ಸಂಕ ಕಟ್ಟಿಸಿ ” ತೂಗು ಸೇತುವೆ ಸರದಾರ” ಹೇಳಿ ಹೆಸರು ಮಾಡಿದ್ದವು. ಅಪ್ಪಂಗೆ ಸಿಕ್ಕದ್ದ ಪ್ರಶಸ್ತಿ ಸಮ್ಮಾನಂಗಳ ಮಕ್ಕ ಪಡದ್ದವು. ಎಲ್ಲೋರು (ಗಿರೀಶಣ್ಣನ ಬಿಟ್ಟು)ಈಗ ಕೃಷಿ ಮಾಡಿಗೊಂಡು ಸಂತೋಷಲ್ಲಿದ್ದವು.

ಮದುವೆ ಚೆಂದಲ್ಲಿ ಕಳಾತು. ಮರದಿನ ಮಾಣಿ ಮನೆಲಿ ಕನ್ಯಾಸಮರ್ಪಣೆಗೆ ಬರೆಕ್ಕು ಹೇಳಿ ಅತು. ಸರಿ ಹೆರಟದೇ. ಅಲ್ಲಿ ಎನಗೆ ಎಂತ ಕೆಲಸ ಇತ್ತಿಲ್ಲೆ, ಅಂತೆ ಅತ್ತಿತ್ತ ಓಂಗಿಗೊಂಡು ಇತ್ತಿದ್ದೆ. ಮೂಲೆಲಿ ಒಂದಿಕ್ಕೆ ಹಳೇ ಪುಸ್ತಕ ಕಂಡತ್ತು. ” ಜಂಬ್ರಂದ ನಂಬ್ರಕ್ಕೆ” ಹೇಳ್ತ ಹವಿಗನ್ನಡಲ್ಲಿಪ್ಪ ನಾಟಕ ಅದು. ಪಡಾರು ಮಾಪಣ್ಣ ಮಾವ ಬರದ್ದದು.ನಮ್ಮದೇ ಸಮಾಜದ ಒಂದೈವತ್ತು ವರ್ಷ ಮೊದಲಾಣ ಕತೆ. ಓದುಲೆ ಶುರು ಮಾಡಿದರೆ ಓದಿಸಿಗೊಂಡು ಹೋತು. . ನಮ್ಮವಕ್ಕೆ ಕೃಷಿಯೇ ಪ್ರಧಾನ ಆಗಿಪ್ಪ ಆ ಕಾಲಲ್ಲಿ ಮನೆ ಮಕ್ಕ ಹೆರ ಹೋಗಿ ಓದಿ ಕೆಲಸಕ್ಕೆ ಸೇರುವ ಕ್ರಮ ಇತ್ತಿಲ್ಲೆಡ. ಹಾಂಗೆ ಹೋಪದು ಒಂದು ಸಮಸ್ಯೆ ಹೇಳಿ ಗ್ರೇಶುಗು. ಇಂಥಾ ಸಮಸ್ಯೆಯ ಸುತ್ತ ಹೆಣೆದ ಕತೆ.ಎನಗೆ ಸಮಯ ಹೋದ್ದದೇ ಗೊಂತಾಯಿದಿಲ್ಲೆ. ಊಟಕ್ಕಾತು ಹೇಳುವಗ ಓದಾಣ ಮುಗುದು ಎನ್ನ ಉಪ್ಪರಿಗೆ ತು೦ಬಿದ್ದು,ಹೊಟ್ಟೆ ತಾಳ ಹಾಕಿದ್ದು ಗೊ೦ತೇ ಆಯಿದಿಲ್ಲೆ. ಊಟ ಎಲ್ಲ ಮುಗುಶಿ ಮನೆಗೆ ಬಂದು ಉಸ್ಸಪ್ಪ ಹೇಳಿ ಮನುಗಿದೆ.

ಆದರೆ ತಲೆಲಿ ಒಂದು ವಿಷಯ ಕೊರವಲೆ ಶುರುವಾತು. ಈಗ ನಮ್ಮ ಸಮಾಜಲ್ಲಿ ಮಕ್ಕ ಕಲ್ತು ಹೆರ ಕೆಲಸಕ್ಕೆ ಹೋಪದು ಮಾಮೂಲಾಯ್ದು. ಕೆಲವು ದಿಕ್ಕೆ ಒಬ್ಬ ಮಾಣಿ ಮನೇಲೆ ಇದ್ದುಗೊಂಡು ಕೃಷಿ ಮಾಡಿಗೊಂಡು ಇದ್ದವು. ಹೀಂಗಿಪ್ಪ ಮಾಣ್ಯ೦ಗೊಕ್ಕೆ ಈಗ ಮದುವೆಗೆ ಯೆವ ಕೂಸೂ ಸಿಕ್ಕುತ್ತಿಲ್ಲೆ ಹೇಳಿ ಅಯಿದು. ರಜ ಕಲ್ತ ಕೂಸುಗ ಪೇಟೆಲಿಪ್ಪ ಮಾಣಿಯ ಬಿಟ್ಟು ಬೇರೆ ನೋಡುತ್ತಾವಿಲ್ಲೆ.ಕೆಲವಕ್ಕೆಮಾಣಿಯೊಟ್ಟಿ೦ಗೆ ಅಬ್ಬೆ ಅಪ್ಪ° ಇದ್ದರೆ ಆಗ.

ಅ೦ತೂ ಪರ್ದೇಶಿಯೂ,ಅನಾಥನೂ ಆದ ಮಾಣಿಯ೦ಗೊಕ್ಕೆ ಕಾಯ್ಸು ಹೆಚ್ಚು ಹೇಳಿ ಹೆರಿಯೋರು ಹೇಳುವಾ೦ಗಾತು! ಹೀಂಗಾಗಿ ಕೆಲವು ಮಾಣಿಯಂಗ ಮದುವೆ ಆಗದ್ದೆ ಬಾಕಿ ಒಳುದ್ದವು. ಹಾಂಗೇಳಿ ಹೆರಿಯವು ಸುಮ್ಮನೆ ಕೂಪಲೆ ಎಡಿಗಾ..? ಇದೊಂದು ದೊಡ್ಡ ಸಮಸ್ಯೆಯೇ ಅಯ್ದು.ಈಗೀಗ ಹೆರ ಸಮುದಾಯಂದ ಕೂಸಿನ ತಂದು ಮದುವೆ ಮಾಡ್ಸುಲೆ ಸುರುಮಾಡಿದ್ದವು. ಬೇರೆ ಉಪಾಯ ಇಲ್ಲೆ ಹೇಳ್ತ ಪರಿಸ್ಟಿತಿ.ಅಂಬಗ ಈ ಸಮಸ್ಯೆಗೆ ಬೇರೆ ಪರಿಹಾರ ಇಲ್ಲೆಯ..?

ಒಂದಿಕ್ಕೆ ಅಪ್ಪ ಹಾಕಿಕೊಟ್ಟ ದಾರಿಲಿ ನಡದು ಕೆಲಸ ಮುಂದುವರಿಸಿಗೊಂದು ಹೋದ ಮಕ್ಕ ಜೀವನಲ್ಲಿ ಯಶಸ್ಸು ಕಂಡವು, ಮತ್ತೊಂದಿಕ್ಕೆ ಅಪ್ಪನೊಟ್ಟಿಂಗೆ ಕೃಷಿ ಮುಂದುವರಿಸಿಗೊಂಡು ಇಪ್ಪ ಮಕ್ಕೊ ಸಂಸಾರ ಮುಂದುವರುಸುಲೆ ಒಪ್ಪಂದ ಮಾಡೆಕ್ಕಾಗಿ ಬಪ್ಪದರ ಕಾಣುತ್ತು. ಈ ದ್ವಂದ್ವಲ್ಲಿ ಎನ್ನ ಮನಸ್ಸು ಕೆಲ ಸಮಯ ಸಂಕಟಲ್ಲಿದ್ದದು ಸುಳ್ಳಲ್ಲ.

ಪರಿಹಾರಕ್ಕೆ ಕಾಲವನ್ನೇ ಕಾಯುವನೋ?

14 thoughts on “ಜಂಬ್ರಂದ ಶುರುವಾತು….

  1. ಹೋಯ್..ಪ್ರಸಾದ,
    ಬೈಲಿಂಗೆ ಬಂದದು ಸಂತೋಷ ಆತು. ಇಸ್ಪೇಟು ಆಡದ್ದೆ ವರ್ಷ ಕೆಲವು ಕಳ್ತು. ಬರೇ ನೆಂಪುಗ ಈಗ. ಇನ್ನೊಂದರಿ ಅವಕಾಶ ಬಕ್ಕು ಅಅಗ ನೋಡುವ ಓಂದು ಕೈ.

    1. ಚೆಲ, ಕುಮಾರ ಭಾವ೦ಗೂ ಪ್ರಸಾದ ಭಾವ೦ಗೂ ಇಸ್ಪೇಟು ಆಡದ್ದೆ ಕೈ ತೊರುಸಿಗೊ೦ಡು ಇದ್ದೋ ಹೇಳಿ ಸ೦ಶಯ ಆವುತ್ತನ್ನೇ.ಇಲ್ಲಿಯೇ ಒ೦ದು ಕಳ ಹಾಯಿಕ್ಕುವನೋ?

  2. kumara bavana baraha nodi thumba khoshi aathu. baravanigeya shaili mathu barada vicharango ollediddu.

    aanude hoyekkada maduve adu. aadare yee doorada saudiya hoige raashili ippa kaarana hopalathille. hogiddare aanude kumarana pattangakke seruthithe. alladde nakata ispetu aadthitheyo, allada kumara baava?

  3. ಬೊಳುಂಬು ಗೋಪಾಲ ಮಾವ,

    ಒಪ್ಪ ಕೊಟ್ಟದಕ್ಕೆ ಧನ್ಯವಾದ.

  4. ಕೃಷಿಲಿ ಇನ್ನೂ ಆಸಕ್ತಿ ಒಳುಸೆಂಡು, ಅದರಲ್ಲಿ ಪ್ರಶಸ್ತಿಯನ್ನು ತೆಕ್ಕೊಂಡ ವಿಶ್ವಣ್ಣನ ವಿಷಯ ಕೇಳಿ ಕೊಶಿ ಆತು. “ಪರ್ದೇಶಿಯೂ,ಅನಾಥನೂ ಆದ ಮಾಣಿಯ೦ಗೊಕ್ಕೆ ಕಾಯ್ಸು ಹೆಚ್ಚು ” ಈ ಪ್ರಯೋಗ ಚೆಂದ ಆಯಿದು. ಈಗಾಣ ಪರಿಸ್ಥಿತಿಯ ಸರಿಯಾಗಿಯೇ ಹೇಳಿದ್ದ, ಕುಮಾರ. ಬರಹಂಗೊ ಬತ್ತಾ ಇರಳಿ.

  5. ಹಾಂಗೇ.. ಇನ್ನಒಂದು ಸಂಗತಿ ಃ-

    ನಮ್ಮ ಹಪ್ಪಳ, ಸೆಂಡಗೆ , ಉಪ್ಪಿನಕಾಯಿಗೊ, ಪೆರಟಿದ ಹಲಸಿನ ಹಣ್ಣು, ಸೊಳೆ ಹೊರುದ್ದದು – ಇತ್ಯಾದಿಗೊ, ಲಾಯಿಕಕ್ಕೆ ಪೇಟೆಲಿ ಸಿಕ್ಕುವ ಕಸಂಟು ಚಿಪ್ಸುಗಳ ಹಾಂಗೇ ಪೇಕು ಮಾಡಿ , ತೋರುಸಲೆ ಎಡಿಗಾರೆ- ಅದರ ಈಗಾಣ ರಿಲಯೆನ್ಸು, ಮೋರ್, ನೀಲಗಿರಿ…ಇತ್ಯಾದಿಗಳಲ್ಲಿ , ಸೇಲಿಂಗೆ ಮಡುಗುಸುವ ಪ್ರಯತ್ನ ಮಾಡಲೆ ಎಡಿಗು !

    ಎನ್ನ ಮೊದಲಾಣ ಕೆಲಸಂಗೊ ಇದೇ ಆಗಿತ್ತು. ಹಾಂಗಾಗಿ ರಜ ಗುರ್ತದವು, ಶಿಷ್ಯವರ್ಗ ( ! ) ಈಗಳೂ ಏನಾರೂ ಸಹಾಯ ಕೇಳುತ್ತವು, ಅಂಬಗ ನವಗೆ ಇದರ ಉಪ್ಯೋಗುಸಲಕ್ಕು . ಒಂದೇ ಕಂಡಿಶನ್ನು – ನಾಲ್ಕು ಜನ ಸೇರಿದ ಪ್ರಯತ್ನ ಆಗಿರೆಕು ! ಎನಗೆ ಅದ್ರಲ್ಲಿ ಏನೂ ಬೇಡ- ಸಲಹೆ , ಸಹಾಯ ಉಚಿತ, ನಮ್ಮವಕ್ಕೆ !

    ದಾರಿಃ- ಒಪ್ಪಣ್ಣನ ಮೂಲಕ ಮಾಂತ್ರ.

  6. ಬಾಲಣ್ಣ,

    ಒೞೆ ಆಲೋಚನೆ. ಈಗ ಹೆಚ್ಛಿನವಕ್ಕೆ ಕಂಪ್ಯುಟರ್ ಜ್ಣಾನ ಇದ್ದು. ಅದರ ಸದುಪಯೊಗ ಮಾಡುಲೆ ಹೀಂಗಿತ್ತ ಆಲೊಚನೆಗ ಕಾರ್ಯಕ್ಕೆ ಬರೆಕ್ಕು. ಇಷ್ಟು ಮಾತ್ರ ಸಾಕಾಗ. ಯಾವುದೇ ಕೆಲಸ ಮಾಡುವವಕ್ಕೆ ಸರಿಯಾಗಿ ವ್ರಿತ್ತಿ ಗೌರವ , ವ್ಯಕ್ತಿ ಗೌರವ ಎರಡು ಸಿಕ್ಕುವಾಂಗೆ ನಾವು ನೊಡಿಗೊೞೆಕ್ಕು.ಊರಿಲಿ ಕೆಲವೆ ಜೆನ ಕ್ರಿಶಿಯೊಟ್ಟಿಂಗೆ ಪೌರೊಹಿತ್ಯ ಅಥವ ಅಡಿಗೆ ಕೆಲಸವನ್ನೂ ಮಾಡುತ್ತವು. ಅವಕ್ಕೆ ಕೀಳರಿಮೆ ಬಾರದ್ದಾಂಗೆ ನಾವು ಪೇಟೆಲಿಪ್ಪವು ವ್ಯವಹರಿಸೆಕ್ಕು ಹೇಳಿ ಎನಗೆ ಕಾಣ್ತು.
    ಒಪ್ಪ ಕೊಟ್ಟದಕ್ಕೆ ಧನ್ಯವಾದ.

    1. “ಕೃಷಿ ಬರ್ಕತ್ತಾಗ” ಹೇಳಿ ಊರಿಲ್ಲಿಡೀ ಘ೦ಟಾಘೋಷವಾಗಿ ಸುದ್ದಿ ಹಬ್ಬಿಪ್ಪಗ, ಕೃಷಿಕರೇ ಸ್ವಯ೦ ಆತ್ಮವಿಶ್ವಾಸಲ್ಲಿಲ್ಲದ್ದಿಪ್ಪಗ ಯಾವ ಕೂಸು ತಾನೇ ಕೃಷಿಕನ ಪತ್ನಿಯಾಗಿ ಬದುಕುವೆ ಹೇಳಿ ಧೈರ್ಯ ತೋರುಸುಗು?

      {ವ್ಯಕ್ತಿ ಗೌರವ ಎರಡು ಸಿಕ್ಕುವಾಂಗೆ ನಾವು ನೊಡಿಗೊೞೆಕ್ಕು……..ಅವಕ್ಕೆ ಕೀಳರಿಮೆ ಬಾರದ್ದಾಂಗೆ…..}
      ಕುಮಾರಣ್ಣ,
      ಇದು ತು೦ಬಾ ಪರಿಣಾಮಕಾರಿ ಆಲೋಚನೆ. ಅತ್ಯವಶ್ಯವಾಗಿ ಕಾರ್ಯಗತವಾಯೆಕಾದ್ದದು.

      1. ಮಹೇಶಣ್ಣ,

        “ಕೃಷಿಕರೇ ಸ್ವಯ೦ ಆತ್ಮವಿಶ್ವಾಸಲ್ಲಿಲ್ಲದ್ದಿಪ್ಪಗ….” ಇದಕ್ಕೆ ಸರಿಯಾದ ಮಾರ್ಗವ ಮನ್ನೆ ನಿಂಗಳ ಲೇಖನಲ್ಲಿ ನೋಡಿದ್ದೆಯಂ.
        ನಿಂಗಳ ಒಪ್ಪ ನೋಡಿ ಸಂತೋಷ ಆತು…

  7. ನಮ್ಮ ದೇಶಲ್ಲಿ ಎಲ್ಲಾ ಬಿಸಿನೆಸ್ಸುಗಳೂ ಸಿಟೀ ಸೆಂಟರ್ಡ್ , ಹಾಂಗಗಿ ಕೆಲಸಕ್ಕೆ ಹೋಯೆಕಾಗಿ ಬಪ್ಪಗ ಮನೆ ಹತ್ತರೆ ಕೆಲಸಂಗೊ ಇಲ್ಲದ್ದ,
    ಇದ್ದರೂ ಅವನ ಓದಿಂಗೆ, ಅರ್ಹತೆಗೆ ಸರಿಯಾದ್ದದು ಇರ್ತಿಲ್ಲೆ. ಮೋದಲು ಶಾಲೆಲಿ ಮಾಶ್ಟ್ರ ಕೆಲಸ, ಸೊಸ್ಟೈಟಿ ಕೆಲಸ, ಹತ್ರಾಣ ಏವದಾರೂ ಬೇಂಕಿಲ್ಲಿ… ಹೀಂಗೆಲ್ಲ ಅವಕಾಶಂಗೊ,ಕೄಷಿಯೊಟ್ಟಿಂಗೆ ಜೋಡುಸಲೆ ಸಾಧ್ಯೈಪ್ಪವುಗೊ ಇದ್ದತ್ತು. ಈಗ ಅದೆಲ್ಲಾ ಇಲ್ಲೆನ್ನೆ !

    ಹಾಂಗೆ ನಮ್ಮವು ಕೆಲವು ಜೆನ ಸೇರೆಂಡು ತಾಲೂಕು ಕೇಂದ್ರಂಗಳಲ್ಲಿ ಕಾಲ್ ಸೆಂಟರುಗಳೋ .. ಬಲ್ಕು ಡಾಟಾ ಪ್ರೊಸೆಸಿಂಗೊ ಮಾಡ್ಲೆ ಎಡಿಗೋ ಎಂತದೊ ?
    ರಜ ಪೇಟೆಯ ನಮುನೆ ಕೆಲಸಂಗೊ, (ಸಂಬಳ , ಗ್ಲಾಮರು,;-ಹೇಳಿರೆ, ಲೇಪುಟೊಪು, ಪಿಕ್ ಅಪ್, ದ್ರೋಪು..ಇಪ್ಪ) ಮನೆ ಹತ್ತ್ರೆ ಸಿಕ್ಕುಲೆ ಸುರು ಆದರೆ ರಜಾ ಸುಲಭ ಅಕ್ಕು ಹೇಳಿ ತೋರ್ತು !
    ಈಗ ಮದಲಾಣ ಹಾಂಗೆ ಮನೆ ತುಂಬ ಮಕ್ಕೋ ಆರಿಂಗೂ ಇಲ್ಲೆ, ಎಲ್ಲಾ ೧-೨ರಲ್ಲಿಯೇ ಇಪ್ಪವು. ಹಾಂಗಾಗಿ, ಮನೆಯೊಳ ಮನಸ್ತಾಪಂಗೊ ಬಾರ ಆಗಿಕ್ಕು. ನಾವೊಂದು ಹೀಂಗೆ ಪ್ರಯತ್ನ ಸುರುಮಾದ್ಲೆ ಹೆರತಟೆರೆ ಜನ ಇಕ್ಕು. ಪ್ರೈವೇಟು ಕಂಪೆನಿ ಮಾಡಿಯೊಂದು …ಸಣ್ಣ ಸಣ್ಣ ಪ್ರಯತ್ನಂಗಳೇ ಸರಿ. ದೊಡ್ಡದು ಮಾಡಿ ನೆಡಶಲೆ ಕಶ್ಟ ! ಒಂದಿಪ್ಪತ್ತು, ಐವತ್ತು ಜನರ ವರ್ಕುಫೋರ್ಸು.. ಹೀಂಗೆ ಅಲ್ಲಲ್ಲಿ..
    ಇಂದ್ರಾಣ ಕಾಲಲ್ಲಿ ಕನೆಕ್ಟಿವಿಟಿ ಎಲ್ಲಾ ತುಂಬ ಸಮಸ್ಯೆ ಆಗ. ಸಮಾನ ಮನಸ್ಕರಿದ್ದರೆ ನೋಡುವನೋ ?

  8. ರಘು,

    ಧನ್ಯವಾದ,

    ಪುಸ್ತಕ ಸಿಕ್ಕುಗು.ಇನ್ನೊಂದರಿ ಊರಿಂಗೆ ಹೋದಿಪ್ಪಾಗ ತೆಕ್ಕೊಂಡು ಬಪ್ಪಲಕ್ಕು.

  9. ಕುಮಾರ ಮಾವನ ಬೈಲಿನ ಶುರುವಾಣ ಬರಹ ಲಾಯ್ಕಕೆ ಓದುಸಿಗೊ೦ದು ಹೋತು.ಇಡ್ಯಡ್ಕ ಕುಟು೦ಬದ ಕೃಷಿ ವಿಷಯ ತಿಳುದು ಸ೦ತೋಷ ಆತು.
    ಆ “ಜೆ೦ಬ್ರ೦ದ ನ೦ಬ್ರಕ್ಕೆ” ಪುಸ್ತಕ ಸಿಕ್ಕುಗೋ? ಸಿಕ್ಕಿರೆ,ಬೈಲಿನ ಎಲ್ಲ ನೆ೦ಟ್ರಿ೦ಗೂ ಓದುವ ಹಾ೦ಗೆ ಹಾಕುಲಕ್ಕನ್ನೇ?

  10. ಲೇಖನ ಒಪ್ಪ ಆಯಿದು.
    ಈಗಾಣ ಮಾಣ್ಯಂಗೊ ಹೆರೆ ಕೆಲಸಕ್ಕೆ ಎಲ್ಲಿಗೇ ಹೋದರೂ ಕೃಷಿಯ ಪೂರ್ತಿ ಬಿಡುಲೆ ಎಡಿಯ ಅಲ್ಲದ….
    ಒಪ್ಪಂಗಳೊಟ್ಟಿಂಗೆ…..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×