Oppanna.com

ಜೆಂಬ್ರದ ಊಟ

ಬರದೋರು :   ಕೇಜಿಮಾವ°    on   17/10/2010    19 ಒಪ್ಪಂಗೊ

ನಮ್ಮಊಟದ ಬಗ್ಗೆ ಎಷ್ಟು ಬರದರೂ ಮುಗಿಯದ್ದ ಕಥೆ.ಎನ್ನ ಮೂವತ್ತು ವರ್ಷದ ವೃತ್ತಿ ಜೀವನಲ್ಲಿ ನೋಡಿದ ಜೀವನಶೈಲಿ ಆಧಾರಿತ ಕಾಯಿಲೆಗೊ ಜಾಸ್ತಿಯಪ್ಪದು ನೋಡಿರೆ ಆಶ್ಚರ್ಯವೂ ಆವುತ್ತು,ಹೆದರಿಕೆಯೂ ಆವುತ್ತು.ನಮ್ಮ ಮಕ್ಕಳ ಕಾಲಕ್ಕಪ್ಪಗ ಎಂತಕ್ಕಪ್ಪಾ ಹೇಳುವ ಯೊಚನೆ ತುಂಬಾ ದಿನಂದ ಕೊರೆತ್ತಾ ಇದ್ದು.ಸೀಮೂತ್ರವೂ ರಕ್ತದೊತ್ತಡವೂ ಇಪ್ಪವರ ಸಂಖ್ಯೆ ಇಷ್ಟೇ ಜಾಸ್ತಿ ಆಯಿದು ಹೇಳಿ ಲೆಕ್ಕ ಮಡಿಕ್ಕೊಂಡಿದಿಲ್ಲೆ,ತಪ್ಪಾತು ತೋರ್ತು.
ಹವ್ಯಕ ಆಹಾರ ಆ ಮಟ್ಟಿಂಗೆ ತುಂಬಾ ವೈಜ್ಞಾನಿಕವಾಗಿದ್ದು.ಆನು ಯೇವಗಳೂ ನೆಗೆ ಮಾಡುವ ಕ್ರಮ ಇದ್ದು.ನಮ್ಮ ಆಹಾರ ಕ್ರಮಲ್ಲೇ ಉಂಡೊಂಡಿದ್ದವಕ್ಕೆ ಯಾವದೇ ಪಥ್ಯ ಬೇಡ ಹೇಳಿ,ಅಲ್ಲದೋ ಭಾವ?
ಇಂದು ಮಾಂತ್ರ ಭಾವಂದ್ರೆಲ್ಲ ಸೇರಿ ನಮ್ಮ ಊಟದ ಕ್ರಮದ ದಾರಿಯೇ ತಪ್ಸಿದ್ದವನ್ನೇ!
ಕ್ರಮದ ಬಗ್ಗೆ ಮಾತು ಸುರುವಾದರೆ ಮುನ್ನಾಣ ದಿನದ ಮೇಲಾರಕ್ಕೆ ಕೊರವದರಿಂದಲೇ ಸುರು ಮಾಡೆಕ್ಕಲ್ಲದೋ.ಗುರಿಕ್ಕಾರನ ಮೇಲ್ವಿಚಾರಣೆಲಿ ನೆರೆಕರೆಯವೆಲ್ಲ ಸೇರಿ ಕೊರವದೆಂತಕೆ?ಸಂಬಳಕ್ಕೆ ಜೆನ ಸಿಕ್ಕವು ಹೇಳಿ ಅಲ್ಲ.ಅಕಸ್ಮಾತ್ ಏನಾರೂ ಕಮ್ಮಿ ಆಗಿದ್ದರೆ ಎಲ್ಲೊರೂ ಸೇರಿ ಹೊಂದ್ಸಿಗೊಂಡು ಹೋಯೆಕ್ಕು ಹೇಳ್ತದು.ಈಗಾಣ ಹಾಂಗೆ ಪೈಸ ಕೊಟ್ರೆ ಮದಲು ಎಂತದೂ ಸಿಕ್ಕುಗು ಹೇಳುತ್ತ ಧೈರ್ಯ ಇದ್ದದಿಲ್ಲೆ.ನೆರೆಕರೆಯಕ್ಕೂ ಗುರಿಕ್ಕಾರಂಗೂ ಅಷ್ಟು ಜವಾಬ್ದಾರಿ ಇತ್ತದಾ.ಜೆಂಬ್ರಕ್ಕೆ ಕೊರತ್ತೆ ಆಗದ್ದ ಹಾಂಗೆ ವ್ಯವಸ್ತೆ ಪರಸ್ಪರ ಸಹಕಾರಲ್ಲಿಯೇ.ಮನೆಲಿದ್ದ ಹಾಲೋ ಮಜ್ಜಿಗೆಯೋ ಕೊಟ್ಟು ಸುಧರಿಕೆ ಆಗಿಯೊಂಡಿತ್ತು.
ಮುನ್ನಾಣ ದಿನ ಮೇಲಾರಕ್ಕೆ ಕೊರವದರಿಂದ ಸುರು ಮಾಡಿ ಮೂರ್ನೇ ಹಂತಿಗೆ ಬಳುಸಿಕ್ಕಿ ಹೋಕು.ಈಗಾಣ ಹಾಂಗೆ ಕೈ ತೊಳವಲೆ ಅವರವರ ಮನಗೆ ಎತ್ತುವ ಕ್ರಮವೂ ಇತ್ತಿಲ್ಲೆ.
ಈಗ ಮರದಿನದ ಊಟಕ್ಕೆಂತರ ಹೇಳುದು ಯಜಮಾನನ ಪ್ರತಿಷ್ಟೆಯ ಸಂಗತಿಯಗಿ ಹೋಯಿದು.
ನಿಜ ಸ್ತಿತಿ ಎಂತ ಹೇಳಿ ನೋಡುವೊ°.
ಎರಡು ಸಾಲು ಹಸೆ ಹಾಕಿ ಜೆಂಬ್ರಕ್ಕೆ ತಕ್ಕ,ಹತ್ತೋ ಇಪ್ಪತ್ತೋ ಜೆನ ಎರಡು ಹಂತಿ ಹಾಕಿ ಕೂದವು.ಎದುರಂಗೊಂದು ಮಣೆಯೂ ಬಂತು.ಹೆಚ್ಚಿನ ದಿಕ್ಕಿಲ್ಲಿಯೂ ಕೊರವಲೆ ಉಪಯೋಗ ಮಾಡುವ ಮಣೆ ಸ್ವಚ್ಚ ಇರ್ತು ಹೇಳಿ ಧೈರ್ಯ ಇಲ್ಲೆ.
ತಾಳಿಂಗೆ ತೊಂಡೆ ಕಾಯಿಯೋ,ಅಳತ್ತಂಡೆಯೋ ಆದರೆ ಕಥೆ ಬೇರೆಯೇ,ಒಂದರಿ ನೀರಿಲ್ಲಿ ಮುಳುಗುಸಿ ತೆಗದರೆ ತೊಳದ ಶಾಸ್ತ್ರ ಆದ ಹಾಂಗೇ.ಹಾಂಗೇ ಕೊರವಲೆ ಕೂಪವು ಸಾಬೂನು ಹಾಕಿ ಕೈ ತೊಳದ್ದದು ಆರಾರೂ ನೋಡಿದ್ದಿದ್ದೋ?ಎಲೆ ತಿಂಬವಿದ್ದರೆ ಬಾಯಿಲಿದ್ದದು ಕೊರದ ಬಾಗಕ್ಕೆ ಬಿದ್ದರೂ ಬಿದ್ದತ್ತೇ.ಅಂಗಿ ತೆಗದು ಅಡಿಗೆ ಮಾಡುವಗ ಅಡಿಗೆಯೋರ ನೋಡಿರೆ ಅಭ್ಯಾಸ ಇಲ್ಲದ್ದವಕ್ಕೆ ಮೆಚ್ಚುಗೋ?.ಉಪ್ಪು ಕಮ್ಮಿ ಆದರೆ ಬೆಗರು ಬಿದ್ದು ಸರಿಯಕ್ಕು ಹೇಳಿ ತಮಾಶೆ ಮಾಡುದಕ್ಕೂ ಕಮ್ಮಿ ಇಲ್ಲೆ,ಬಿಡಿ.
ನಡೂಕೆ ಕೊರವಲಿಪ್ಪದರ ತಂದು ಹಾಕುವವು ನೆಡವಗ ಸಗಣ ಉಡುಗಿದ ನೆಲ ಆದರೆ ಧೂಳು ಹಾರಿಯೊಂಡಿಕ್ಕು.ನಮ್ಮ ಜೆಂಬ್ರದ ಊಟ ಉಂಡು ಆರಿಂಗೂ ವಾಂತಿ ಭೇದಿ ಸುರುವಾದ್ದಿಲ್ಲೆ ಹೇಳಿ ಒಬ್ಬ ಬೈಲಿಲ್ಲಿ ಹೇಳಿದ್ದಿದ್ದು.ಎನ್ನ ಹತ್ತರೆ ಕೇಳಿ.
ಸರಿ ನಾಲ್ಕು ಬಗೆ ತಾಳು ಅವಿಲು ಕೋಸಂಬ್ರಿ,ಇದೆಲ್ಲಾ ಬಾಳೆ ಎಲೆ ಅಲಂಕಾರಕ್ಕೆ ಮಾಡುವ ಹಾಂಗೆ ಕಾಣ್ತಷ್ಟೆ ಅಲ್ಲದ್ದೆ ಸರಿಯಾದ ಆಹಾರ ಹೊಟ್ಟೆಗೆ ಹೋಯೆಕ್ಕು ಹೇಳ್ತದು ತೋರ್ತಿಲ್ಲೆ ಅದಾ.ನಾಲ್ಕು ಬಗೆ ಇದ್ದಲ್ಲದೋ,ರಜ ರಜ ಬಳುಸಿರೆ ಸಾಕು,ಸುಧರಿಕೆ ಮಾಡುವಗ ಜಾಗೃತೆ ಮಾಡಿಯೊಂಡ್ರಾತು ಹೇಳುದು ಸಾಕಷ್ಟು ಕೇಳ್ತು.ಅಶನ ರಜ ಜಾಸ್ತಿ ಮಾಡಿರಾತು ಹೇಳುದೂ ಇಲ್ಲದ್ದಿಲ್ಲೆ.
ತಾಳು ರಜ ರಜ ಬಳುಸಿ ಅಶನ ಜಾಸ್ತಿ ಬಳುಸಿರೆ ಅಶನ ಕಮ್ಮಿ ತಿನ್ನೆಕ್ಕಾದವಂಗೆ ದೇವರೇ ಗತಿಯಲ್ಲದೋ?ಅವ° ಜವ್ವನಿಗ,ಇನ್ನೊಂದು ಹೋಳಿಗೆ ಎನ್ನ ಲೆಕ್ಕಲ್ಲಿ ಹಾಕಿ ಭಾವಾ ಹೇಳಿದ್ದು ಕೇಳಿದ್ದು ವಿನಹಾ ರಜ ತಾಳು ಬಳುಸಿ ಹೇಳಿರೆ ಸೌಟಿಂದ ಬೀಳುದೇ ಕಷ್ಟ.ತರಕಾರಿ ತಿಂಬದು ಒಳ್ಳೆದು,ರಜ ಜಾಸ್ತಿ ಬಳ್ಸಿ ಹೇಳುದು ಕೇಳಿದ್ದಿಲ್ಲೆ.(ಆನು ಹೇಳ್ತ ಕ್ರಮ ಇದ್ದು).
ಹಸರಿಂದೋ ಕಡ್ಳೆದೋ ಕೋಸಂಬ್ರಿ ಮಾಡ್ತವು.ಬಹುಷಃ ನಮ್ಮ ಆಹಾರಲ್ಲಿ ಪ್ರೋಟೀನ್ ಸಿಕ್ಕುವ ಮುಖ್ಯ ವಸ್ತು ಅದು,ಉದ್ದು ಇನ್ನೊಂದು.ಉಪ್ಪಿನ ಕಾಯಿಯಾದರೂ ಜಾಸ್ತಿ ಬಳುಸಿಕ್ಕುಗು,ಕೋಸಂಬ್ರಿ ಇಲ್ಲೆ.ಹಸರು ಪಾಯಸ ತಿಂಬಲೆ ಒತ್ತಾಯ ಮಾಡುವವು ಕೋಸಂಬ್ರಿ ತಿಂಬಲೆ ಮಾಡುದು ಒಳ್ಳೆದು.(ಕೈ ಹಾಕಿ ಬಳುಸದ್ದರೆ).
ಇನ್ನು ಬಫೆ ಬೇಕೋ ಬೇಡದೋ ಹೇಳಿಯೂ ಚರ್ಚೆ ಇದ್ದದ.
ಕೂದು ಉಂಬದು ಒಳ್ಳೆದೇ,ಪುರುಸೊತ್ತು ಇದ್ದು ಬಳುಸಲೆ ಜೆನ ಇದ್ದರೆ.ಹಂತಿ ಹಾಕಿ ಕೂದಪ್ಪಾಗ ಬಳುಸಲೆ ಜೆನ ಇಲ್ಲದ್ದರೆ ನಿಧಾನ ಆವುತ್ತು.ನಿಧಾನಲ್ಲಿ ಉಣ್ಣೆಕ್ಕಾದ್ದು ಸರಿಯೇ.ವಾಸ್ತವಿಕವಾಗಿ ಎಂತಾವುತ್ತು ಗೊಂತಿದ್ದೋ?
ಉಂಬಲೆ ಕೂಪಗ ತಡವಾಗಿರ್ತು.ಸುರುವಾಣ ಹಂತಿ ಒಂದೂವರೆಗೆ ಕೂದರೆ ಎರಡ್ಣೇ ಹಂತಿಗಪ್ಪಗ ಎರಡೂವರೆ.
ಉಂಬಲೆ ಕೂದ ಮೇಲೆಂತಾವುತ್ತು,ತಡವಾದರೆ ಹೊಟ್ಟೆಲಿಪ್ಪ ಜೀರ್ಣ ರಸ ಖಾಲಿ ಆಗಿರ್ತು.ಜೀರ್ಣ ಹೇಂಗಕ್ಕು?
ಸಮಯಕ್ಕೆ ಸರಿಯಾಗಿಯೇ ಆದರೂ ರಜ ತಾಳು ಅಶನ ಉಂಡು ಸಾರಿಂಗೆ ೫ ನಿಮಿಷ ಕಾಯೆಕ್ಕಕ್ಕು,ಇದೇ ಮುಂದುವರುದು,ತಾಳು ವಿಚಾರಣೆ,ಸಾರು ,ಕೊದಿಲು,ಮೆಣಸುಕಾಯಿ,ಹುಳಿ ಮೇಲಾರದ ವರೆಗೆ ಎತ್ತುವಾಗ ಹೊಟ್ಟೆ ತುಂಬಿರ್ತು,ಮಧ್ಯಲ್ಲಿ ಐದೈದು ನಿಮಿಷ ಕಾಯಿವದು ಬೇರೆ..ಈಗ ನೋಡಿ ನಿಜವಾದ ಕಥೆ ಸುರುವಪ್ಪದು.
ಒಂದರಿ ಪಾಯಸ ಹಾಕಿಯೊಂಡ°.ಕಥೆ ಮುಗ್ತು.ಇನ್ನೊಂದು ಹಾಯ್ಕೊಳೆಕ್ಕಲ್ಲದೊ?ಒಟ್ಟಿಂಗೆ ಬಂತದಾ,ಹೋಳಿಗೆ(ಇದ್ದದರಲ್ಲಿ ಒಳ್ಳೇ ಭಕ್ಷ ಹೋಳಿಗೆ ಆದರೂ),ತುಪ್ಪ ಹಾಕಿ ಒಂದು ಹಾಲು ಹಾಕಿ ಇನ್ನೊಂದು ತಿಂದರೆ ಯೆಜಮಾನಂಗೆ ಸಂತೋಷ,ಆಯೆಕ್ಕಾದ್ದೇ.ಅಖೇರಿಗೆ ಮಜ್ಜಿಗೆ ಅಶನ ಉಣ್ಣೆಕ್ಕಲ್ಲದೋ,(ಮಸರು ಬಳುಸಿಕ್ಕವು,ದ್ರಾಕ್ಷೆ ಪಾಯ್ಸ ಮಾಡಿರೂ)
ಅದೊಂದು ಎನಗೆ ಇನ್ನೂ ಅರ್ಥ ಆಗದ್ದ ವಿಷಯ,ಮಸರು ಬಳುಸದ್ದದು,ಈಗೀಗ ಸುರುವವುತ್ತಾ ಇದ್ದು.ಮಜ್ಜಿಗೆ ನೀರು ಬಳುಸಿರೆ ನಮ್ಮ ಹಾಂಗಿಪ್ಪವಕ್ಕೆ ಸರಿ,ಈಗಾಣ ಮಕ್ಕಗೆ ಬೆಂಗ್ಳೂರಿಂದ ಸ್ನೇಹಿತರ ಬಪ್ಪಲೆ ಹೇಳುದು ಅನಿವಾರ್ಯ ಆದ ಮೇಲೆ ಅವರ ಎದುರು ಕಷ್ಟ ಆವುತ್ತು.ಹವಿಕರಿಂಗೆ ಬಿಟ್ಟು ಮಜ್ಜಿಗೆ ನೀರಿಲ್ಲಿ ಉಂಬ ಅಭ್ಯಾಸ ಆರಿಂಗೂ ಇಲ್ಲೆ.ಅದಿರ್ಲಿ.ನಮ್ಮ ಕ್ರಮ ನವಗೆ,ಆದರೆ ಬಪ್ಪಲೆ ಹೇಳಿದ ಮೇಲೆ ಊಟಕ್ಕೆಂತ ನಿರೀಕ್ಷೆ ಮಾಡುದು ಹೇಳಿ ಗೊಂತಿಲ್ಲದ್ದವಕ್ಕೆ ಕಷ್ಟ ಅಪ್ಪಲಾಗ,ಅಲ್ಲದೋ?
ಯೋಚನೆ ಮಾಡೆಕ್ಕದ ವಿಷಯ ಎಂತ ಗೊಂತಿದ್ದೋ,ಬೆಣ್ತೆಕ್ಕಿ ಅಶನ ಉಂಡು ಹೊಟ್ಟೆ ಹಾಳಾತು ಹೇಳ್ತದು ಸಾಮಾನ್ಯ.ಕಾರಣ ಬೆಣ್ತೆಕ್ಕಿ ಅಲ್ಲ ನಮ್ಮ ಉಂಬ ಕ್ರಮ,ರಜಾ ಯೋಚನೆ ಮಾಡಿ,ಅಶನ,ತಾಳು,ಹಪ್ಪಳ,ಸಾರು,ಕೊದಿಲು,ಅವಿಲು,ಪಾಯ್ಸ,ಹೋಳಿಗೆ,ಮಜ್ಜಿಗೆ ಅಥವಾ ಮಸರು,ಇದೆಲ್ಲಾ ಮಿಶ್ರ ಮಾಡಿರೆ ಹೇಂಗೆ ಕಾಂಗು?ಅದೇ ಸ್ತಿತಿಲಿ ನಾವು ತಿಂದ ಆಹಾರ,ತಡವಾಗಿ ಉಂಡ ಪರಿಣಾಮ ಜೀರ್ಣ ರಸವೂ ಇಲ್ಲದ್ದ ಪರಿಸ್ತಿತಿಲಿ,ಹೊಟ್ಟೆಗೆ ಹೋದರೆ?
ನಾವಿಂದು ಒಂದು ಘಟ್ಟಕ್ಕೆ ಬಯಿಂದು,ಹೆಚ್ಚಿನವಕ್ಕೂ ಆರೋಗ್ಯದ ಬಗ್ಗೆ ಗಂಭೀರ ಚಿಂತನೆ ಮಾಡೆಕ್ಕಾಗಿ ಬಯಿಂದು.ಬೇರೆ ಬೇರೆ ಬಗೆ ಮಾಡುದು ಒಂದು ಇಷ್ಟ ಇಲ್ಲದ್ದವ° ಇನ್ನೊಂದರಲ್ಲಿ ಉಣ್ಣೆಕ್ಕು ಹೇಳ್ತದಲ್ಲದ್ದೆ,ಎಲ್ಲೊರೂ ಎಲ್ಲವನ್ನೂ ಉಣ್ಣೆಕ್ಕು ಹೇಳಿ ಅಲ್ಲ.ಎರಡು ತಾಳು/ಒಂದು ತಾಳು,ಅವಿಲು,ಸಾರು ಬೇಡ(ನೀರು ನೀರಾಗಿ ಉಂಡರೆ ಮತ್ತೆ ಅದೇ ತೇಗು ಬಂದು ಎದೆ ಉರಿ ಸುರುವಕ್ಕು),ಕೊದಿಲು,ಮೇಲಾರ,ಒಂದು ಬಗೆ ಪಾಯ್ಸ,ಒಂದು ಭಕ್ಷ,ಅಖೇರಿಗೆ ಮಸರೂ ಅಶನ.ಇದು ಸಾಕು ನಮ್ಮ ಜೆಂಬ್ರಂಗಳಲ್ಲಿ.ಕನಿಷ್ಟ ಪಕ್ಷ ಒತ್ತಾಯ ಮಾಡುದಾದರೂ ಬೇಡ.ಪಲಾವ್,ಚಿರೋಟಿ,ಪೂರಿ,ಚಪಾತಿ-ನಮ್ಮ ಊಟಂಗೊಕ್ಕೆ ಆವುತ್ತಿಲ್ಲೆ.
ಮತ್ತೆ ಬಫೆ ಮಾಡುದೂ ಬಿಡುದೂ ಅವರವರ ಅಗತ್ಯಕ್ಕೆ ಸರಿಯಾಗಿ,ಅಲ್ಲದೋ?

ಕೇಜಿಮಾವ°
Latest posts by ಕೇಜಿಮಾವ° (see all)

19 thoughts on “ಜೆಂಬ್ರದ ಊಟ

  1. “ವೈಜ್ನ್ಹಾನಿಕವಾಗಿ ಇರುಳು ಮೊಸರು ಉ೦ಬಲಾಗ ಹೇಳಿ ಇಲ್ಲೆ”? !!! ಮೊಸರಿಲ್ಲಿ ಕೊಬ್ಬಿನ ಅ೦ಶ ಜಾಸ್ತಿ ಇಪ್ಪ ಕಾರಣ ಮತ್ತು ಇರುಳು ಸಾಮಾನ್ಯವಾಗಿ ನಾವು ದೈಹಿಕ ವ್ಯಾಯಾಮ ಇಲ್ಲದ್ದೆ ವಿಶ್ರಾ೦ತಿ ತೆಕ್ಕೊ೦ಬ ಕಾರಣ ಇರುಳು ಮೊಸರು ಉ೦ಬಲಾಗ ಹೇಳುವದು ಆನು ಹಲವು ದಿಕ್ಕೆ ಕೇಳಿದ್ದೆ. ಮಜ್ಜಿಗೆ ಆದರೆ ತೊ೦ದರೆ ಇರ್ತಿಲ್ಲೆ. ಮೊಸರಿ೦ದ ಬೆಣ್ಣೆ ಬೇರ್ಪಡಿಸಿ ಆಗಿರ್ತಲ್ಲದಾ.. ಆದರೆ ಮಧ್ಯಾಹ್ನ ಮೊಸರು ಉ೦ಬಲಾಗ ಹೇಳುವದರ ಆನು ಸುರುವಿ೦ಗೆ ಕೇಳ್ತಾ ಇಪ್ಪದು. “ರಾತ್ರೌ ದಧಿಮಾನಯ” ಹೇಳುವದು ಮೊದಲಿ೦ದಲೇ ಕೇಳಿದ್ದೆ ಹೊರತು “ಮಧ್ಯಾಹ್ನೌ ದಧಿಮಾನಯ” ಹೇಳಿ ಕೇಳಿದ ನೆ೦ಪಿಲ್ಲೆ..

    1. ಮೊಸರಿಲ್ಲಿ ಕೊಬ್ಬಿನ ಅಂಶ ಎಷ್ಟಿದ್ದು ಗೊಂತಿದ್ದಾ?೪-೫%.ಅದರಿಂದ ಹೆಚ್ಚು ಕೊಬ್ಬು ಅಶನಲ್ಲಿ ನಮ್ಮ ಹೊತ್ತೆಗೆ ಹೋವುತ್ತು.ಅಶ್ಟಕ್ಕೂ ಮಸರಲ್ಲದ್ದೆ ಜೆಂಬ್ರಲ್ಲಿ ಕೊಬ್ಬು ಇರುಳಾಗಲೀ ಹಗಲಾಗಲೀ ನಾವು ತಿಂತಿಲ್ಲೆಯೋ?ಒಂದು ಹೋಳಿಗೆಲಿ ಎಷ್ಟು ಕೊಬ್ಬು ಇದ್ದು ಹೇಳಿ ಏನಾರೂ ಅಂದಾಜಿದ್ದಾ?ನಾವು ತಿಂಬ ಮಸರು ಇರುಳಾದರೂ ಮಧ್ಯಾಹ್ನ ಆದರೂ ಆರೋಗ್ಯಕ್ಕೇನೂ ತೊಂದರೆ ಇಲ್ಲೆ.ದಿನಕ್ಕೆ ೩೦೦ ಎಮ್ ಎಲ್ ಹಾಲು ಮತ್ತು ಅದರ ಉತ್ಪನ್ನ ತಿಂಬಲಕ್ಕು.ಇರುಳು ಜಂಬ್ರಲ್ಲಿ ತುಪ್ಪ ಬಳುಸುದರ ಆರಾದರೂ ಬೇಡ ಹೇಳಿದ್ದರ ಕೇಳಿದ್ದಿರಾ?ವೈಜ್ನಾನಿಕವಾಗಿ ಇರುಳಾಗಲೀ ಮೊಸರು ತಿಂಬಲೆ ತೊಂದರೆ ಇಲ್ಲೆ.ಮಿತಿ ಮೀರಿರೆ ಯಾವದೇ ಹೊತ್ತಾದರೂ ಒಂದೇ.ಮಧ್ಯಾಹ್ನ ಉಂಡಿಕ್ಕಿ ಎಷ್ಟು ಕೆಲಸ ಮಾಡ್ತಣ್ಣೋ?

  2. ಆನು ಇಂದು ಒಂದು ಕಡೆಲಿ ಹೋದಿಪ್ಪಾಗ ಹೀಂಗೇ ವಿಚಾರ್ಸಿದೆ, ಊಟಕ್ಕೆ ಮಜ್ಜಿಗೆಯ ಬದಲು ಮೊಸರು ಏಕೆ ಬಳ್ಸುತ್ತವಿಲ್ಲೆ ಹೇಳಿ? ಆವಾಗ ಎನಗೆ ಗೊಂತಾದ್ದು ಹೇಳಿರೆ ಪುರಾತನ ವೈದ್ಯಶಾಸ್ತ್ರ ಪ್ರಕಾರ ಮಧ್ಯಾಹ್ನ ಮತ್ತು ರಾತ್ರಿ ಮೊಸರು ವರ್ಜ್ಯ. ಉದಿಯಪ್ಪಗ ಮಾತ್ರ ಅಕ್ಕು.ಹಾಂಗಾಗಿಯಾಯಿಕ್ಕು ಉದಿಯಪ್ಪಗಾಣ ಕಾಪಿ ತಿಂಡಿಗೆ ಅವಲಕ್ಕಿಯಾದರೂ,ಇಡ್ಲಿಯಾದರೂ ಮೊಸರಿರ್ತು.ಮತ್ತೆ ಅಮಾಸೆ ದಿನ ಮೊಸರು ಉಂಬದಿರ್ಲಿ ಕಡವಲೇ ಆಗಡ್ಡ.ಅಂತು ಕಾರಣ ಖಂಡಿತಾ ಇರ್ತು.ಇತ್ತೀಚೆಗೆ ಗುರುಗಳ “ನಿದ್ದೆಯೆಂಬ ಪೂಜೆ” ಪ್ರವಚನಲ್ಲಿ ಕೇಳಿದ್ದೆ- ನಿದ್ರಾದೇವಿ ಮತ್ತು ಅನ್ನಪೂರ್ಣೇಶ್ವರಿಯ ಸರಿಯಾಗಿ ಪೂಜಿಸೆಕ್ಕಾದ ರೀತಿಲಿ ಪೂಜಿಸಿದರೆ ಯಾವ ರೋಗವೂ ಬತ್ತಿಲ್ಲೆಡ. ಆದರೆ ನವಗೀಗ ಇದೆರಡೇ ಸರಿಯಾಗಿ ಮಾಡ್ಲೆ ಎಡಿಯದ್ದದು.ಎಂತ ಮಾಡುದು ಕಾಲದ ಮಹಿಮೆ ಹೇಳೆಕ್ಕಷ್ಟೆ.”ಗಾಡ್ ಬ್ಲೆಸ್”

    1. ಅಮವಾಸ್ಯೆ ದಿನ ಆದರೂ ಮಸರು ಉಣ್ಣೆಕ್ಕು ಹೇಳಿ ಕಡವಲಾಗ ಹೇಳಿ ಮಾಡಿದ್ದಾಗಿರೆಕು.ವೈಞ್ನಾನಿಕವಾಗಿ ಇರುಳು ಮಸರು ಉಂಬಲಾಗ ಹೇಳಿ ಇಲ್ಲೆ.ನಾವು ಬೇರೆ ಎಲ್ಲದಕ್ಕೂ ವಿಞ್ನಾನವ ನಂಬುವಗ ಇದಕ್ಕೆ ಎಂತ ಅಡ್ಡಿ?

    2. ಮಜ್ಜಿಗೆ ಆದರುದೆ ಚೂರು ಮ೦ದ ಮಜ್ಜಿಗೆ ಬಳುಸಲಾಗದಾ? ಈಗಳುದೆ “ಎ೦ಗಳ ಮಜ್ಜಿಗೆ ನೀರು ಭಾವಾ..” ಹೇಳ್ತ ಹಾ೦ಗೆ ಮಾಡೆಕಾ? 🙂

  3. ಎಂಗಳ ಊರಿಲಿ ಒಬ್ಬ ಅಡಿಗೆಯವರಿದ್ದವು. ಕೇಜಿ ಮಾವನ ಲೇಖನಲ್ಲಿಪ್ಪ ಹಲವಾರು ವಿಷಯಂಗಳ ಪಾಲಿಸುತ್ತವು.ಮೀಯದ್ದೆ ಅಡಿಗೆ ಮಾಡ.ನಡುಗೆ ಉಚ್ಚು ಹೊಯ್ಯುವಲೆ ಹೋದರೂ ಕ್ಲೀನ್ ಆಗಿ ಕೈ ತೊಳೆಗು.ತರಕಾರಿ ಸರೀ ತೊಳದ್ದೀರೊ ನೋಡುಗು. ಅಲ್ಲಿಪ್ಪವರತ್ತರೆ ಅದರ ಕ್ಲೀನ್ ಮಾಡ್ಸುಗು. ಹೇಳಿಯೂ ಕ್ಲೀನ್ ಮಾಡದ್ದರೆ ದೊಡ್ಡಕ್ಕೆ ಬೊಬ್ಬೆ ಹಾಕಿ “ಆನು ನಾಳೆ ಈ ಪಲ್ಯ ಉಂಬಲಿಲ್ಲೆ” ಹೇಳುಗು.ಮೈದ, ಕಡ್ಲೆ ಹೊಡಿ ಗಾಳ್ಸದ್ದೆ ಉಪಯೋಗಿಸ.ಸಕ್ಕರೆ ಕೆಂಪು ಇದ್ದರೆ ಅದರ ಕೊದಿಶಿ ಅದರಲ್ಲಿಪ್ಪ ಮಣ್ಣು ತೆಗದು ತೋರ್ಸುಗು. ಬೇನ್ಸೊಪ್ಪಿಲಿ ಹುಳು, ಸಾಲಿಗ ಇಪ್ಪದರ ತೆಗದು ತೋರ್ಸುಗು.ಅಡಿಗೆ ಒಲೆಯ ಮೇಲೆ ಹಣ್ಣಡಕ್ಕೆ ಅಟ್ಟಲ್ಲಿದ್ದರೆ ಅಲ್ಲಿ ಅಡಿಗೆ ಮಾಡೆಕ್ಕಾರೆ ಒಂದೋ ಹಣ್ಣಡಕೆ ತೆಗದು ಉಡುಗಿ ಕ್ಲೀನ್ ಮಾಡಿ ಕೊಡೆಕು ಇಲ್ಲದ್ರೆ ಅಡಿಯಂದ ವಸ್ತ್ರ ಕಟ್ಟಿ ಮೇಲಂದ ಹುಳು ಬೀಳದ್ದಾಂಗೆ ವ್ಯವಸ್ಥೆ ಮಾಡೆಕ್ಕು.ಪ್ರತೀ ಸಾಮಾನನ್ನೂ ಕೂಲಂಕುಷ ನೋಡದ್ದೆ ಸೀದ ಪೇಕೆಟ್ ಹರುದು ಹಾಕ.ಸ್ವೀಟ್ ಮಾಡಿ ಮಡುಗುವಾಗ ಎರುಗು ಬಾರದ್ದಾಂಗೆ ಸರೀ ವ್ಯವಸ್ಥೆ ಮಾಡಿಯೇ ಮಡುಗುಗು. ಕುಡಿವ ಬೆಶಿನೀರು ಮುಂದಾಣ ದಿನವೇ ಕೊದಿಶಿ ಮಡುಗುಗು.ಎಷ್ಟು ಜಾಗ್ರತೆ ಹೇಳಿರೆ ಮುಚ್ಚೆಲುಗಳ ತೆಗದು ನೆಲಕ್ಕೆ ಹಾಂಗೇ ಮಡುಗ, ಬಾಳೆಲಿ ಮಡುಗುಗು. ಹೆಗಲಿನ ಬೈರಾಸಲ್ಲಿ ಪಾತ್ರ, ಪ್ಲೇಟುಗಳ ಉದ್ದ. ಅದಕ್ಕೇಳಿ ಕೈವಸ್ತ್ರ ಕೇಳಿ ತೆಕ್ಕೊಂಗು. ಎಳ್ಳು, ಏಲಕ್ಕಿಲಿಪ್ಪ ಕಲ್ಲು ತೆಗದು “ಇದರ ಅಂಗಡಿಗೆ ಕೊಡಿ” ಹೇಳುಗು.ಪ್ರತೀ ಸಣ್ಣ ಸಣ್ಣ ವಿಷಯಂಗಳಲ್ಲೂ ತುಂಬ ಕೇರ್ ಫುಲ್. ಲೈಟಿನ ಅಡೀಲೇ ಯಾವದೇ ಪಾಕ ಮಾಡ. ಎಲ್ಲದಕ್ಕೂ ಸೈಡ್ ಲೈಟ್, ಸಣ್ಣ ಹಾತೆ ಲೈಟಿಂಗೆ ಬಂದು ಬೀಳ್ತಡ. ಅವರ ಬಗ್ಗೆ ಬರೆತರೆ ತುಂಬಾ ಇದ್ದು. ಇದು ಯಾವದೂ ಎನ್ನ ಕಲ್ಪನೆ ಅಲ್ಲ. ಆಶ್ಚರ್ಯ ಆವುತ್ತಲ್ಲದೋ?!! ಇದು ಸತ್ಯ ಇವು ಯಾವದೇ ಸ್ಪೆಷಲ್ ಕೋರ್ಸ್ ಮಾಡಿದ್ದವಿಲ್ಲೆ. ಆದರೆ ತುಂಬ ಶ್ರದ್ಧೆ. ಇವರ ಹೆಸರು ಕೋಡಪದವು ರಾಮಚಂದ್ರಣ್ಣ ಹೇಳಿ. ಇಂಥವರ ನಾವು ಗುರುತಿಸೆಕ್ಕು.

    1. ಕೊಷಿ ಆತು,ಎಲೆಮರೆಂದ ಒಂದು ಹಣ್ಣು ಹೆರ ಬಂತು.ರಾಮಚಂದ್ರಣ್ಣನ ಹಾಂಗಿಪ್ಪ ಶಿಸ್ತಿನ ಸಿಪಾಯಿಗಳ ಪರಿಚಯ ಬೈಲಿಂಗೆ ಆಯೆಕ್ಕು.ನಮ್ಮಲ್ಲಿ ಕೊರತೆ ಇಪ್ಪ್ದು ಶಿಸ್ತಿಂದೆ.90%ಕೆಲಸ ನೇರ್ಪಕ್ಕೆ ಮಾಡಿ ಒಳುದ 10%ಲಿ ಸೋತುಹೋಪದು.
      ಶಿಸ್ತು ನಮ್ಮ ಮನೆಂದ ಶುರು ಆಯೆಕ್ಕು ಹೇಳ್ತ ಮಾತಿನ ಒಪ್ಪೆಕ್ಕಾದ್ದೆ.

    2. ಪ್ರಕಾಶ ಅಪ್ಪಚಿ .. .. ನಿಂಗೋಗೆ ಮರತ್ತಾ .. ರಾಮಚಂದ್ರಮಾವ ಅಡಿಗೆ ಮಾಡುವಾಗ ಎಲೆ ಅದಕ್ಕೆ ತಿನ್ತವಿಲ್ಲೇ ,ಬೀದಿ ಸಿಗರೇಟು ಎಳತ್ತವಿಲ್ಲೆ.. ಮತ್ತೆ ಹೋಳಿಗೆ ಮಾಡುವಾಗನ ಕ್ಲೀನ್ ನ ಅವು ಮಾಡುವಾಗ ಕಣ್ಣಾರೆ ನೋಡಿದರೆ ಗೊಂತಕ್ಕಷ್ಟೇ ಅಲ್ಲದ ಪ್ರಕಶಪ್ಪಚಿ…

    3. ರಾಮಚಂದ್ರಣ್ಣ ತುಂಬಾ ಶಿಸ್ತಿನ ಮನುಶ್ಯ.ಅವನ ಆನುದೇ ತುಂಬಾ ಸಮಯಂದ ನೋಡ್ತಾ ಇದ್ದೆ.ಅವನ ಇನ್ನೊಂದು ವಿಷೇಶ ಗೊಂತಿದ್ದೋ?ಎಷ್ಟೇ ಸಣ್ಣ ಅಡಿಗೆ ಒಪ್ಪಿಗೊಂಡ ಮೇಲೆ ಎಷ್ಟೇ ದೊಡ್ಡ ಅಡಿಗೆ ಸಿಕ್ಕಿರೂ ಅವ° ಹೋಗ°.

  4. ನದೀ ಮೂಲ, ಋಷಿ ಮೂಲ ಎಲ್ಲ ನೋಡ್ಲಾಗ ಹೇಳ್ತವು. ಇದರ ಜೆಂಬಾರಂಗಳ ಅಡುಗೆ ಕೊಟ್ಟಗೆಲಿಯುದೆ ಅನ್ವಯಿಸೆಕಾಗಿ ಬತ್ತದು ನಮ್ಮೆಲ್ಲೋರ ಹಣೆ ಬರಹ. ಮನೆ ಯಜಮಾನಂಗೆ ಎಲ್ಲವನ್ನೂ ಮೇಲ್ತನಿಖೆ ಮಾಡಿ ಎಲ್ಲವೂ ಸರಿಯಾಗಿ ಆವ್ತ ಹಾಂಗೆ ಮಾಡ್ಳೆ ಎಡಿಯ. ಶುದ್ದಲ್ಲಿರೆಕಾದ ಮನಸ್ಸು ಅಡಿಗೆಯವಕ್ಕೆ, ಬಡುಸುತ್ತವಕ್ಕೆ, ಬೆಂದಿಗೆ ಕೊರೆತ್ತವಕ್ಕೆ, ಹಾಂಗೆ,ಉಣುತ್ತವಕ್ಕೆ, ಬರೆಕಷ್ಟೆ. ಅದು ಹೇಳಿ ಬತ್ತ ಪಾಟ ಅಲ್ಲ. ಗೋಣ ಎಬ್ಬಿದ ಹಾಂಗೆ ಹೋಗದ್ರೆ, ಅದು ಹೋದ ಹಾಂಗೆ ಎಬ್ಬೆಕಾಡ. ನಮ್ಮ ನಮ್ಮ ಮನೆಲಿ ನಾವು ಸುರುವಿಂಗೆ ಶುದ್ದಕ್ಕೆ ಮಾಡುವೊ. ಮತ್ತೆ ಜೆಂಬಾರದ ಕಡೇಂಗೆ ಹೋಪೊ ಹೇಳೀ ಎನ್ನ ಅನಿಸಿಕೆ.

  5. olle lekhana.taiu kaili badusadde chamachalli badusuva krama naavu alavadisekkaaddu.

  6. ಕೇಜಿ ಮಾವ, ನಿಂಗ ಆರಿಂಗೆ ಹೇಳುದು ಈ ಪಾಠ ಎಲ್ಲ? ಎಂಗೊ ಬೆಂಗೂರಿಲಿಪ್ಪ ಹವ್ಯಕರು ಎಲ್ಲ ಅಡಿಗೆಯ ಕಂತ್ರಾಟಿಂಗೆ ಕೊಡುದು. ಅದರ ಚೆಂದಕ್ಕೆ ಹೇಳುದಾದರೆ ಕೇಟರಿಂಗ್ ಹೇಳಿ. ಅವು ಎಂತರ ಮಾಡೆಕ್ಕು ಹೇಳಿ ಹೇಳುಲಕ್ಕಷ್ಟೇ ಹೊರತು ಹೇಂಗೆ ಮಾಡೆಕ್ಕು ಹೇಳಿ ಹೇಳುಲೆ ಗೊಂತಿಲ್ಲೆ. ಮಾಡಿದ್ದರ ತಿಂಬದು.

    ಮತ್ತೆ ನಿಂಗ ಹೇಳಿದ ಆರೋಗ್ಯ ಕಾಳಜಿ ಎಲ್ಲ ಎಂಗೊಗೆ ಬೆಂಗಳೂರಿಲಿಪ್ಪವಕ್ಕೆ ಅಂಥಾ ದೊಡ್ಡ ವಿಷ್ಯ ಅಲ್ಲ, ಎಂತಕ್ಕೆ ಗೊಂತಿದ್ದೋ, ಎಂಗಳ ಕಂಪೆನಿಲಿ ಇನ್ ಶ್ಯೂರೆನ್ಸ್ ಕೊಡ್ತವು ಎಂಗೊಗೆ. ಬಿಪಿ ಶುಗರ್ ಎಲ್ಲ ಲೆಕ್ಕವೇ ಅಲ್ಲ. ಸದ್ಯಕ್ಕೆ ಕ್ಯಾನ್ಸರ್ ಒಂದು ಬಿಟ್ಟರೆ ಮತ್ತೇವದರ ಹೆದರಿಕೆಯೂ ಇಲ್ಲೆ ಎಂಗೊಗೆ.

    ಈ ಬಗ್ಗೆ ಎಲ್ಲ ಯೋಚನೆ ಮಾಡುದು ಬಿಟ್ಟು ಆಪೀಸಿನ ಪ್ರಮೋಶನ್ ಬಗ್ಗೆಯೋ, ಶೇರ್ ಮಾರ್ಕೆಟ್ ಬಗ್ಗೆ ಯೋಚ್ಸುದು ಕ್ಷೇಮ ಹೇಳಿ ಕಾಣುತ್ತು ಎನಗೆ.

    ಹೀಂಗೆ ಹೇಳಿದೆ ಹೇಳಿ ಬೇಜಾರು ಮಾಡೆಡಿ.. ಕಾಲ ಬದಲಾಯಿದಲ್ಲದೋ, ನಾವುದೆ ಬದಲಪ್ಪದು ಅನಿವಾರ್ಯ. ಅಲ್ಲದೋ?

    ವಿ. ಸೂ. : ವಿಡಂಬನೆಯನ್ನು ಗಮನಿಸಿ. 🙂

    1. ಮುಖ್ಯವಾಗಿ ಬೆಂಗ್ಳೂರಿಲ್ಲಿ ಇಪ್ಪ ಹವ್ಯಕರೂ ಊರಿಂಗೆ ಬಂದೇ ಜೆಂಬಾರ ಮಾಡುದು.ಬೆಂಗ್ಳೂರಿಲ್ಲಿ ಮಾಡುದು ಕಮ್ಮಿಯೇ.ಕಾಲ ಬದಲಾದ್ದು ಅಪ್ಪು,ಹಾಂಗಾಗಿಯೇ ಇದರ ಬರದ್ದು.೩೦ ವರ್ಷ ಹಿಂದಾಗಿದ್ದಾರೆ ಇದು ಪ್ರಸ್ತುತ ಹೇಳಿ ಆವುತಿತಿಲ್ಲೆ.ವಿಡಂಬನೆ ಆರೋಗ್ಯದ ವಿಷಯಲ್ಲಿ ಸರಿಯಲ್ಲ,ಏಕೆ ಹೇಳಿರೆ ನಾಳೆ ಬಿಪಿ,ಶುಗರೇ ತಲೆಬೆಶಿ ಮಾಡುಸುಗು.ಶೇರೋ,ಪ್ರೊಮೊಶನೋ ಕೊಟ್ಟ ಸಂತೋಶವೋ ಪೈಸವೋ ಅನುಭವಿಸಲೆ ಸಿಕ್ಕ.ಕ್ಯಾನ್ಸರ್ ಕೂಡಾ ಕೆಲವು ಸಎತಿ ಆಹಾರಕ್ಕೆ ಸಂಬಂದಪಡುತ್ತು ಗೊಂತಿದ್ದಲ್ಲದೊ?
      ಅಡಿಗೆ ಹೇಂಗೆ ಮಾಡೆಕ್ಕು ಹೇಳ್ತ ಪರಿಸ್ತಿತಿ ಇಲ್ಲಿಯೂ ಇಲ್ಲೆ.ಇಲ್ಲಿ ಅಡಿಗೆಯವರನ್ನೂ ಹವಿಕರು ಹೇಳಿ ಗ್ರೇಶಿಯೊಂಡು ಬರದ್ದು.

      1. ಅಪ್ಪಪ್ಪಾ.. ನಿಂಗ ಹೇಳಿದ್ದರ ಒಪ್ಪಿಯೇ ಆನು ಬರದ್ದು ಕೇಜಿ ಮಾವ.. ಈಗಣ ಪರಿಸ್ಥಿತಿಯ ವಿಡಂಬನೆ ಮಾಡಿ ಬರದ್ದು ಆನು.. ಆರೋಗ್ಯದ ವಿಷಯಲ್ಲಿ ವಿಡಂಬನೆ ಅಲ್ಲ.. ಎಂತದೇ ಆಗಲಿ.. ಒಳ್ಳೆ ಲೇಖನ.

  7. ಕೇಜಿ ಮಾವ,ಉತ್ತಮ ಲೇಖನ.
    ಪಾಯಸವ ಚಮಚಲ್ಲಿ ಬಳುಸುವ ಕಾಲ ಬಂತಲ್ಲದ ಮಾವ. ಎಲ್ಲ ಸಕ್ಕರೆ ಸ್ಟಾಕು ಮಾಡುಲೆ ಶುರು ಮಾಡಿ..
    ಅನುಪ್ಪತ್ಯಲ್ಲಿ ಬಳುಸುವ ಮತ್ತೆ ತಿಂಬ ಕ್ರಮಲ್ಲಿ ತಾಳು ಮತ್ತೆ ಸಾರಿನ ಹಂತಕ್ಕೆ ಪ್ರಾಮುಖ್ಯತೆ ಕೊಡೆಕ್ಕಾದ್ದು ಅಗತ್ಯ. ಗುಣಮಟ್ಟತೆಯ ಹೆಚ್ಚಿಸಿ ಐಟಮುಗಳ ಕಮ್ಮಿ ಮಾಡಿದರೆ ಆರೋಗ್ಯಕ್ಕೂ ಒಳ್ಳೆದು.ತಯಾರಿಕೆಯ ಪರಿಶುದ್ಧತೆಯ ವಿಮರ್ಶೆ ಒಳ್ಳೆದಾಯಿದು.ನಾವೆಲ್ಲಾ ಯೋಚನೆ ಮಾಡೆಕ್ಕಾದ ವಿಷಯಂಗ.
    ಇನ್ನು ಬಳುಸಿದ ಮೇಲೆ ಒಳುದ್ದರ ಬಡವರಿಂಗೆ,ಊಟಕ್ಕಿಲ್ಲದ್ದವಕ್ಕೆ ವಿತರಿಸುವ ಪ್ರಯತ್ನವೂ ಪೇಟೆಗಳಲ್ಲಿ ಮಾಡಿದರೆ ಉತ್ತಮ.

  8. ಮನಸ್ಸಿಲ್ಲಿ ಎಸ್ತೊ ಸರ್ತಿ ಹೀ೦ಗೆಲ್ಲ ಅನಿಸಿದ್ದು ಎನಗೂ. ಆದರೆ ಸ೦ಪ್ರದಾಯವ ಪ್ರಶ್ನಿಸಿ ಅಧಿಕಪ್ರಸ೦ಗಿ ಹೇಳಿ ಅನಿಸಿಗೊ೦ಬಲಾಗ ಹೇಳ್ತ ಕಾರಣ೦ದಾಗಿ ಎಲ್ಲೂ ಕೆಳಿದ್ದೆ ಇಲ್ಕ್ಲೆ ಇದೆಲ್ಲ.
    ಡಾಕ್ತ್ರ ಲೆಖನ ಸಮಯೊಚಿತ. ಬಳುಸುದು ಮತ್ತು ತಿ೦ಬದು ಒ೦ದು ಕಲೆ ಹೆಳುದು ಸರಿ. ಆದರೆ ನಾವೆ ಆ ಕಲೆಲಿ ಪರಿಪೂರ್ಣರು ಹೆಳುದರ ಬಗ್ಗೆ ಎನಗೆ ಎನ್ನದೆ ಅದ ಗೊ೦ದಲ೦ಗ ಇದ್ದು.

  9. ಕೇಜಿ ಮಾವ ಬರದ ಎಲ್ಲವೂ ನಮ್ಮವು ಯೋಚನೆ ಮಾಡೆಕಾದ ವಿಷಯಂಗಳೆ. ಜೆಂಬ್ರಂಗಳಲ್ಲಿ ಬಳುಸಲೆ ಸೌಟು ಅಥವಾ ಚಮ್ಚಂಗಳ ಉಪಯೋಗುಸದ್ದೆ ಬರೇ ಕೈಲಿ ತಾಳು,ಕೋಸಂಬರಿ,(ಕೆಲವು ಕಡೆಲಿ ಉಪ್ಪಿನಕಾಯಿ ಕೂಡಾ)ಬಳುಸೊದರ ನೋಡಿದ್ದೆ. ಅದೇ ರೀತಿ ಬೆಶಿ ನೀರು ಕೊಡುವಾಗ(ಕುಡಿವಲೆ)ಹೆಚ್ಚು ಬೆಶಿ ಇದ್ದರೆ ಬೆಶಿ ನೀರಿಂಗೆ ತಣ್ಣೀರು ಸೇರಿಸಿ ಹದ ಮಾಡಿ ಕೊಟ್ಟರೆ ಅಕ್ಕೋ? (ಶುದ್ದೀಕರಿಸಿದ ನೀರಿಂಗೆ ರಜ್ಜ ಕೊಳಕ್ಕು ನೀರು ಸೇರಿಸಿದರೆ ಹೇಂಗೆ?)
    ಒಂದು ಜೆಂಬ್ರಲ್ಲಿ ಶರ್ಬತ್ತು ಮಾಡುವಾಗ ಅಡಿಗೆಯವ (ಬಾಯಿಲಿ ಬೀಡಿ ಎಳಕ್ಕೊಂಡು) ಸಕ್ಕರೆ ಹಾಕಿ ಅದರೆ ಕರಗುಸಲೆ ಇಡೀ ಕೈ ಹಾಕಿ ತೊಳಸಿದ್ದು ವೀಡಿಯೊಲ್ಲಿ ರೆಕಾರ್ಡ್ ಆದ್ದದು ಎನಗೆ ಗೊಂತಿದ್ದು. ಮನೆ ಯಜಮಾನಂಗೆ(ಕೇಜಿ ಮಾವನ ಹಾಂಗೇ ಇಪ್ಪ – ಅದೇ ಅಭಿಪ್ರಾಯ,ಸ್ವಭಾವ – ಡಾಕ್ಟ್ರು)ಜೆಂಬ್ರ ಎಲ್ಲ ಕಳುದ ಮೇಲೆ ಪುರುಸೊತ್ತಿಲ್ಲಿ ಕೂದೊಂಡು ಈ ವೀಡಿಯೊವ ನೋಡುವಾಗಳೇ ಇದು ಗೊಂತಾದ್ದು! ಅವಂಗೆ ಹೇಂಗಾದಿಕ್ಕು ಹೇಳಿ ವಿವರುಸುವ ಅಗತ್ಯ ಇಲ್ಲೆನ್ನೆ!
    ಕೊರವಲೆ ಕೂಪವು ಸಾಬೂನು ಹಾಕಿ ಕೈ ತೊಳೆತ್ತವಿಲ್ಲೆ; ಉಂಬವು ಊಟಕ್ಕೆ ಕೂಪಂದ ಮದಲೆ ಸಾಬೂನು ಹಾಕಿ (ಅಥವಾ ಹಾಕದ್ದೆ) ಕೈ ತೊಳವದು ಎಲ್ಲಿಯಾದರೂ ನೋಡಿದ್ದೀರೊ? ಕೈ ತೊಳವಲ್ಲಿ ಸಾಬೂನು ಮಡುಗುವ ಕ್ರಮವೂ ಇಲ್ಲೆ! ಕಾಲಕ್ಕೆ ತಕ್ಕ ಬದಲಾವಣೆ ಹೇಳಿಯೊಂಡು ಎಷ್ಟೋ ಅಗತ್ಯ ಇಲ್ಲದ್ದ ಬದಲಾವಣೆ ಆವುತ್ತಾ ಇದ್ದು. ಆದರೆ ಡಾಕ್ಟ್ರು ಮಾವ ಹೇಳುವ ಬದಲಾವಣಗಳ ಅಗತ್ಯ ಹೆಚ್ಚು ಹೇಳುವದರಲ್ಲಿ ಸಂಶಯವಿಲ್ಲೆ.

  10. ಜೆಂಬಾರಂಗಳಲ್ಲಿ ಬೆಂದಿಗೆ ಕೊರವದು, ಅಂಗಿ ಹಾಕದ್ದೆ ಅಡಿಗೆ ಮಾದುವದು, ಬಳುಸುತ್ತ ಕ್ರಮ ಎಲ್ಲಾ ಯತಾರ್ಥ ಚಿತ್ರಣ ಕೊಟ್ಟಿದವು. ಒಳ್ಳೆ ಲೇಖನ.
    ಅವು ಹೇಳಿದ ಹಾಂಗೆ ತರಕಾರಿಯ ತೊಳವಲೆ ಉದಾಸೀನ ಮಾಡುವದು, ಎಲೆ ತಿಂದೊಂಡು ಬೊಬ್ಬೆ ಹೊಡಕ್ಕೊಂಡು ಎಂಜಲು ರಟ್ಟಿಸಿಂಡು ಕೊರವದು ಆನು ಕಂಡಿದೆ. ಇದೆಲ್ಲಾ ಎಷ್ಟು ಸರಿ ಹೇಳುವದರ ಆಲೋಚನೆ ಮಾಡೆಕ್ಕಾದ್ದೆ.
    ಸೆಖೆಗೆ, ಒಲೆ ಎದುರು ನಿಂದೊಂಡು ಅಡಿಗೆ ಮಾಡುವವರ ಬಗ್ಗೆ ನವಗೆ ಅನುಕಂಪ ಇದ್ದು. ಆದರೆ ಬೆಗರಿಂಗೆ ಒಂದು ವೆವಸ್ಥೆ ಕೂಡಾ ಒಟ್ಟಿಂಗೆ ಮಾಡೆಕ್ಕಾದ್ದೆ.
    ಊಟಕ್ಕೆ, ಚೆಪ್ಪರದ ಕರೇಲಿ ಕೂದವನ ಬಾಳೆಲಿ ಅಕೇರಿಗಪ್ಪಗ ನೋಡಿರೆ ಎಷ್ಟು ಧೂಳು ಇರ?
    ನಮ್ಮಲ್ಲಿ ಬಳುಸುವವು ಅಂಗಿ ತೆಗೆಕು ಹೇಳ್ತ ಕ್ರಮ ಇತ್ತೀಚೆಗೆ ಕಮ್ಮಿ ಅಯಿದು. ಎನ್ನ ಲೆಕ್ಕಲ್ಲಿ ಇದು ಒಳ್ಳೆ ಬೆಳವಣಿಗೆ. ಸೆಖೆಗೆ ಬಳುಸುವಾಗ, ಬಳುಸುತ್ತವನ ಬೆಗರು ಉಣ್ತವನ ಬಾಳೆಗೆ ಬಿದ್ದ ಅನುಭವ ಆಯಿದು. (ಬ್ರಾಹ್ಮಣರ ಬೇರ ಪಂಗಡಂಗಳಲ್ಲಿ ಈಗಲೂ ಅಂಗಿ ತೆಗೆಯದ್ದೆ ಬಳುಸುತ್ತವಿಲ್ಲೆ.)
    ಐಟಮ್ ಜಾಸ್ತಿ ಮಾಡುವದು, ಇಲ್ಲದ್ದರೆ ಉತ್ತರ ಭಾರತದ ಶೈಲಿಯ ಅಡಿಗೆ ಸೇರುಸುವದು ಇದೆಲ್ಲಾ ಯಜಮಾನನ ಪ್ರತಿಷ್ಠೆಯ ವಿಶಯ ಆಗಿ ಹೋಯಿದು. ಮಜ್ಜಿಗೆ ಒಟ್ಟಿಂಗೆ ಮೊಸರು ಬಳುಸುವ ಕ್ರಮ ಇತ್ತೀಚೆಗೆ ಸುರು ಆಯಿದು. ಉದಿಯಪ್ಪಗಾಣ ತಿಂಡಿಗೂ ಮೊಸರು ಬಳುಸಲೆ ಸುರು ಮಾಡಿದ್ದವು. ನೀರು ಮಜ್ಜಿಗೆ ಹೇಳಿರೆ ಬರೇ ನೀರು ಇಪ್ಪದೂ ಇದ್ದು.
    ಊಟ ಬಲ್ಲವನಿಗೆ ರೋಗ ಇಲ್ಲ ಹೇಳ್ತ ಗಾದೆಯೇ ಇದ್ದು. ಇದ್ದು ಹೇಳಿ ಎಲ್ಲವನ್ನೂ ಉಣ್ಣೆಕ್ಕು ಹೇಳಿ ಇಲ್ಲೆ. ತನ್ನ ಅಗತ್ಯಕ್ಕೆ ಬೇಕಾದಷ್ಟೆ ತಿಂದರೆ ಯಾವ ತೊಂದರೆ ಬಾರ.
    ಹೊಟ್ಟೆಲಿ 1/3 ಅಂಶ ಘನ ಆಹಾರ, 1/3 ಅಂಶ ದ್ರವ ಆಹಾರ, ಇನ್ನು ಒಳುದ 1/3 ಅಂಶ ಕರಗಲೆ ಜಾಗೆ ಬಿಟ್ಟರೆ ಯಾವುದೇ ತೊಂದರೆ ಬಾರ ಹೇಳಿ ಹೇಳುತ್ತು ಕೇಳಿದ್ದೆ.
    ಒತ್ತಾಯ ಮಾಡಿ ಬಳುಸುವದಕ್ಕೆ ಎನ್ನ ವಿರೋಧ ಇದ್ದು. ಬೇಡ ಹೇಳಿರೂ ಬಳುಸುವದು, ಅವ ಅದರ ಬಿಟ್ಟಿಕ್ಕಿ ಹೋಪದು, ಇಲ್ಲದ್ದರೆ ದಾಕ್ಷಿಣ್ಯಕ್ಕೆ ತಿಂಬದು ಇದೆಲ್ಲಾ ಅಗತ್ಯ ಇದ್ದಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×