Oppanna.com

ದೀಪಾವಳಿ ~ ಪಟಾಕಿ

ಬರದೋರು :   ಗಣೇಶ ಮಾವ°    on   04/11/2010    8 ಒಪ್ಪಂಗೊ

ಗಣೇಶ ಮಾವ°

                                 ಬೆಳಕು ಜ್ಞಾನದ ಪ್ರತೀಕ!ಸಂತೋಷದ ಸಂಕೇತ!

                                ಕತ್ತಲೆ (ಕಪ್ಪು) ಅಜ್ಞಾನದ ಪ್ರತೀಕ!ದು:ಖದ ಸಂಕೇತ!

ಧಾರ್ಮಿಕವಾಗಿ ನೋಡಿರೆ ದೀಪಾವಳಿಗೂ ಪಟಾಕಿಯ ಶಬ್ದಕ್ಕೂ ಯಾವ ಸಂಬಂಧವೂ ಕಾಣ್ತಿಲ್ಲೆ. ದೀಪಾವಳಿಗೂ ಪಟಾಕಿಗೂ ಸಂಬಂಧ ಎಂತದಪ್ಪ?ಹೇಳುವ ಪ್ರಶ್ನೆ ಒಂದರಿ ಬಂತು,ಸೀದಾ ಮಾಷ್ಟ್ರು ಮಾವನಲ್ಲಿಗೆ ಹೋದೆ.ಆನು ಹೋಪಗಳೇ ಮಾಷ್ಟ್ರು ಮಾವನ ದೊಡ್ಡ ಸೊಸೆ ಅಮೆರಿಕಕ್ಕೆ ತೆಕ್ಕೊಂಡು ಹೋಪಲೆ ಮೈಸೂರುಪಾಕು ಕಾಸಿಗೊಂಡು ಇತ್ತವು.ಮಾಷ್ಟ್ರುಮಾವ ಅಮೇರಿಕಾದ ಒಂದೊಂದೇ ಶುದ್ಧಿಗಳ ಸೊಸೆಯ ಹತ್ತರೆ ಕೇಳಿಗೊಂಡೂ ಇತ್ತವು.ಅಷ್ಟಪ್ಪಗ ನಾವು ಎತ್ತಿತ್ತಿದಾ ಅಲ್ಲಿಗೆ,ಸೊಸೆಯ ಕಾಸಾಣ ಮುಂದರ್ದತ್ತು,ಮಾಷ್ಟ್ರುಮಾವ ಹೆರ ಜೆಗಿಲಿಲಿ ಬಂದು ಕೂದವು.ಸೀದಾ ಎನ್ನ ಸಂಶಯ ಕೇಳ್ಲೇ ಸುರು ಮಾಡಿದೆ.

ದೀಪಾವಳಿಯ ದೀಪಂಗೊ

 

     ಒಂಭತ್ತನೇ ಶತಮಾನಲ್ಲಿ ಸುರೂವಿಂಗೆ ಚೀನಾದೇಶದವು ಪಟಾಕಿಯ ಕಂಡು ಹಿಡುದರೆ,ಹದಿನೈದನೇ ಶತಮಾನಲ್ಲಿ ಪಟಾಕಿ ಭಾರತಲ್ಲಿ ಬಪ್ಪಲೆ ಸುರು ಆತು.ಎಂತಕೆ ದೀಪಾವಳಿ ಹಬ್ಬಕ್ಕೆ ಮಾತ್ರ ಪಟಾಕಿಯ ಹೊಟ್ಟುಸೆಕ್ಕು?ದೀಪಾವಳಿ ಹೇಳುದು ಹಬ್ಬದ ಆಚರಣೆಲಿ ಒಂದು ಆದ್ದದು ಹೇಂಗೆ?ಈ ಹಬ್ಬವ ಎಂತಕೆ ಆಚರಣೆ ಮಾಡೆಕ್ಕು?ಹೇಳಿ ಪ್ರಶ್ನೆಯ ಮಾಷ್ಟ್ರುಮಾವನ ಹತ್ತರೆ ಕೇಳಿದೆ.ಶಾಲೇಲಿ ಮಾಡ್ತ  ಪಾಠದ ಶೈಲಿಲಿಯೇ ಅವು ವಿವರಣೆ ಕೊಡ್ಲೆ ಸುರು ಮಾಡಿದವು.ಎಡಕ್ಕೆಡಕ್ಕಿಲಿ ಅವರ ಸೊಸೆ ಕಾಸುವಲ್ಲಿಂದ ಕೆಮಿ ಹೆರಾಂಗೆ ಹಾಯಿಕೊಂಡಿತ್ತವು..ಪಾಕ ಅಪ್ಪನ್ನಾರ ನವಗೂ ಹೊತ್ತು ಹೋಯೇಕ್ಕನ್ನೇ.ಇರಳಿ.. ವಿಷಯಕ್ಕೆ ಹೋಪ.

    ದೀಪಾವಳಿ ಹಬ್ಬ ಮಾಡುದಕ್ಕೆ ಒಂದು ಶಾಸ್ತ್ರೀಯ ಪ್ರಯೋಜನ ಇದ್ದು,ಧಾರ್ಮಿಕವಾದ ಅಂಶ ಇದ್ದು,ಆರೋಗ್ಯ ರಹಸ್ಯವೂ ಇದ್ದು.ಆಶ್ವಿಜ ಮಾಸಾಂತ್ಯಕ್ಕೆ ಮಳೆಗಾಲ ಮುಗಿತ್ತು.ಶರದೃತುವಿಲಿ ಬಪ್ಪಂತಹ ದೀಪಾವಳಿ ಹಬ್ಬದ ಸಮಯಕ್ಕೆ ಭೂಮಿಂದ ಕೋಟಿ ಕೋಟಿ ಕ್ರಿಮಿಕೀಟಂಗ ಹುಟ್ಟಿ ಬತ್ತವು.ದೀಪಾವಳಿ ಹಬ್ಬದ ಸಮಯಲ್ಲಿ ಸಾಮಾನ್ಯವಾಗಿ ಗೆದ್ದೆ ಬೇಸಾಯದವಕ್ಕೆ ಕೊಯ್ಲಿನ ಸಮಯವೂ ಆಗಿರ್ತು.  ಈ ಕ್ರಿಮಿಗಳಿಂದಾಗಿ ಮನುಷ್ಯರಿಂಗೂ,ಪಶು ಸಂಪತ್ತಿಂಗೂ,ಆಹಾರ ಬೆಳೆಗಕ್ಕೂ ವಿಪರೀತ ಹಾನಿಯಾವ್ತು.ಈ ಸಮಸ್ಯೆಯ ನಿವಾರಣಾರ್ಥವಾಗಿ ನಮ್ಮ ಹೆರಿಯವು ದೀಪಾವಳಿ ಹಬ್ಬವ ಆಚರಣೆ ಮಾಡ್ಲೆ ಸುರು ಮಾಡಿದವು.ನಿಧಾನಕ್ಕೆ  ಪಟಾಕಿಗ ಸೃಷ್ಟಿ ಆಗಿ ದೀಪಾವಳಿ ಹಬ್ಬಲ್ಲಿ ಭಾಗವಹಿಸುಲೆ ಸುರು ಆತು.ಆ ಕಾಲಲ್ಲಿ ದನದ ತುಪ್ಪ,ಔಡಲ(ಹರಳು)ಎಣ್ಣೆ,ಎಳ್ಳೆಣ್ಣೆ,ಹಾಂಗೆ ಮುಂದರುದು ತೆಂಗಿನ ಎಣ್ಣೆಲಿಯೂ ಹೊತ್ತುಸುಲೆ ಸುರು ಆತು,ಆದರೆ ದೀಪಾವಳಿಗೆ ಹರಳೆಣ್ಣೆಯೇ ಪ್ರಶಸ್ತ ಅಡ!!ಚಿತ್ರವಿಚಿತ್ರವಾದ ಹುಳುಗ,ಕ್ರಿಮಿಕೀಟಂಗ ಇದರ ಬೆಣಚ್ಚಿಂಗೆ ಬಿದ್ದು ಸಾಯ್ತವು,ಹಾಂಗೆ ಈ ಎಣ್ಣೆ ಹೊತ್ತುಸಿಯಪ್ಪಗ ಬಪ್ಪ ಪರಿಮ್ಮಳಕ್ಕೆ ಸಾಮಾನ್ಯ ಕ್ರಿಮಿಗ ದೂರ ಆವ್ತು. ಹರಳೆಣ್ಣೆಯ ದೀಪಲ್ಲಿ  ಬಪ್ಪ ಹೊಗೆಂದ ನಮ್ಮ ಹತ್ತಾರು ರೋಗಂಗ ವಾಸಿ ಆವ್ತಡ!!ಮಳೆಗಾಲಲ್ಲಿ ನಾವು ಕುಡಿವ ಹೊಸ ನೀರಿಂದಾಗಿ ವಾಂತಿ~ಭೇದಿ,ಕಣ್ಣಿನರೋಗ,ಅಜೀರ್ಣ,ಶೀತ ಇತ್ಯಾದಿ ಅನೇಕ ರೋಗಂಗಕ್ಕೆ ದಿವ್ಯೌಷಧ ಆಗಿ ಕೆಲಸ ಮಾಡ್ತು.ಮೂರ್ಸಂದಿಯಾಣ ಹೊತ್ತಿಲಿ ನುಸಿಗಳ ಉಪದ್ರಕ್ಕೆ ಹೊತ್ಸಿ ಮಡಿಗಿರೆ ಕಮ್ಮಿ ಅಪ್ಪದು ನವಗೆ ಪ್ರತ್ಯಕ್ಷ ಅನುಭವ ಇದ್ದು.ಇನ್ನು ಬೇರೆಂತಾರು ಪ್ರಯೋಜನ ಇದ್ದರೆ ನಮ್ಮ ಸುವರ್ಣಿನಿಯಕ್ಕನೋ,ಡಾಕುಟ್ರಕ್ಕನೋ ಹೇಳೆಕ್ಕಷ್ಟೇ.ನವಗರಡಿಯ.

ಪಟಾಕಿ ಹೊಟ್ಟುಸುತ್ತ ಕೊಶಿ

 

            ನಾವು ಹೊಟ್ಟುಸುವ ಪಟಾಕಿಲಿ “ಗಂಧಕ”ದ ಹೊಗಗೆ ಕ್ರಿಮಿಗ ನಾಶ ಆವ್ತು.ಸಣ್ಣ ಕ್ರಿಮಿಗ ಎಲ್ಲಾ ಪಟಾಕಿಯ “ಢಂಢಂ” ಶಬ್ದಕ್ಕೇ ಸತ್ತು ಹೋವ್ತವು. ಆಶ್ವೀಜ ಅಮಾಸೆಂದ ಸುರುಮಾಡಿ ಕಾರ್ತಿಕಮಾಸದ ಅಕ್ಹೇರಿ ವರೆಗೂ ಈ ತೈಲದ ದೀಪಂಗಳ ಶಕ್ತ್ಯಾನುಸಾರ ಮನೆ ಮುಂದೆ ಬೆಳಗುತ್ತವು.ದೀಪಾವಳಿಯ ಉತ್ತರಭಾರತಲ್ಲಿ ಸೇಟುಗ ಭಾರೀ ಗೌಜಿಲಿ ಮಾಡ್ತವಡ!ಚಿನ್ನದ ವ್ಯಾಪಾರ ಮಾಡ್ತವು ಅವರ ಚಿನ್ನಕ್ಕೆ ಲಕ್ಷ್ಮೀ ಪೂಜೆಯ ಮಾಡ್ತವು.ನಮ್ಮ ಊರಿಲಿ ಈಗೀಗ ಎಲ್ಲಾ ಅಂಗಡಿಗಳಲ್ಲಿಯೂ ಲಕ್ಷ್ಮೀಪೂಜೆ ಮಾಡಿ ದೀಪಾವಳಿಯ ಆಚರಣೆ ಮಾಡ್ತವು.ಹೆಚ್ಚಿನ ವ್ಯಾಪಾರಿಗ ಅವರ ವಾರ್ಷಿಕ  ಲಾಭ-ನಷ್ಟವ ಈ ಸಮಯಲ್ಲಿಯೇ ಲೆಕ್ಕ ಹಾಕುತ್ತವಡ.ಮತ್ತೆ ಕೆಲವು ಜೆನಂಗ ಇದೇ ಸಮಯಲ್ಲಿ ಚಿನ್ನ ತೆಗದರೆ ಒಳ್ಳೆದು ಹೇಳ್ತವು.ಒಟ್ಟಿಲಿ ಮಂಗಳಮಯ ವಾತಾವರಣ ದೀಪಾವಳಿಲಿ ಕಾಂಬದು ಸತ್ಯ.ಇಷ್ಟೆಲ್ಲಾ ವಿವರಣೆ ಮಾಷ್ಟ್ರುಮಾವ  ಕೊಟ್ಟುಗೊಂಡಿದ್ದ ಹಾಂಗೆ ಅವರ ಸೊಸೆ ಮೈಸೂರುಪಾಕು ತಯಾರು ಮಾಡ್ತಾ ಇದ್ದದು ಮರತ್ತೇ ಹೋಗಿತ್ತು. ಅಷ್ಟೆಲ್ಲಾ ಅಪ್ಪಗ ಚೂರಿಬೈಲಿಂದ ದೀಪಕ್ಕ ದೊಡಾ ಬೇಗು ತೆಕ್ಕೊಂಡು ಬಪ್ಪದು ಕಂಡತ್ತು.ದೀಪಾವಳಿಯ ಆಚರಣೆ ಅಲ್ಲಿಂದಲೇ ಸುರುಆತು ನವಗೆ.ಮತ್ತೆ ಎಲ್ಲೋರು ಸೇರಿ ಮೈಸೂರು ಪಾಕು ತಿಂದೆಯ!ಮಾಷ್ಟ್ರು ಮಾವನ ಸೊಸೆಯ ಹಬ್ಬಕ್ಕೆ  ಅಪ್ಪನ ಮನಗೆ ಹೋಪಲೆ ಕಲ್ಮಡ್ಕ ಬಸ್ಸಿಂಗೆ ಕಳ್ಸಿಕ್ಕಿ  ಬಂದೆ.

                                    “ಬೈಲಿನ ಎಲ್ಲೋರಿಂಗೂ ದೀಪಾವಳಿಯ ಶುಭಾಶಯಂಗ “

8 thoughts on “ದೀಪಾವಳಿ ~ ಪಟಾಕಿ

  1. ದೀಪಾವಳಿಯ ಹಿನ್ನೆಲೆಯ ಲೇಖನ ಲಾಯಿಕಾಯಿದು ಭಾವ, ಈಗ ಪಟಾಕಿಗಳ ಹಾವಳಿಲಿ ಹೊಸ ರೂಪ ಬಯಿಂದು ಅಲ್ಲದೋ?

    1. ಹ,ಅಪ್ಪು ವಿದ್ಯಕ್ಕ,೧೦.೩೦ ಆಯಿದು.ದಾರಿ ನಡೂಕೆ ಶ್ರೀ ಅಕ್ಕ ಸಿಕ್ಕಿದವು.ನಿಂಗಳ ಡ್ಯೂಟಿ ಮುಗಿವಾಗ ಎಷ್ಟು ಹೊತ್ತಾಯಿದು?ಶೇಡಿಗುಮ್ಮೆ ಭಾವ ಹೆಂಗಿದ್ದವು?ಕಾಣದ್ದೆ ಸುಮಾರು ದಿನ ಆತು..

  2. ಪಟಾಕಿ ಹೆಂಗೆ ಬಂತು ಹೇಳುದರ ಗಣೇಶ ಮಾವ ಭಾರಿ ಲೈಕಲ್ಲಿ ಹೇಳಿದ್ದದು ಕಂಡು – ಓದಿ ಖುಷಿ ಆತು.
    ಈ ಪಟ್ಹಾಕಿಂದ ಎಷ್ಟೇ ಒಳ್ಳೇದು ಹೇಳಿರು ಉಪದ್ರನ್ಗಳು ಎಂತ ಕಮ್ಮಿ ಇಲ್ಲೆ. ಸಣ್ಣ ಸಣ್ಣ ಹಿಳ್ಳೆಗೋ, ಬಾಣನ್ತಿಗೋ, ಪ್ರಾಯದವು ಇಪ್ಪಲ್ಲಿ ಎಲ್ಲ ಮನಸ್ಸ್ಸಿನ್ಗೆ ಬಂದ ಹಾಂಗೆ ಪಟಾಕಿ ಹೊತ್ತುಸಿ ಉಪದ್ರ ಕೊಡುವವು ನಮ್ಮಲ್ಲಿ ಇದ್ದವು…
    ನಮ್ಮದು ದೀಪಾವಳಿ ಅಲ್ಲದೋ ಅದರ ದೀಪ ಹಚ್ಚಿಯೇ ಆಚರಣೆ ಮಾಡುವೋ, ಅದು ಪಟಾಕಾವಳಿ ಅಪ್ಪದು ಬೇಡ ಈ ವರ್ಷವಾದರೂ ಪಟಾಕಿ ಸಿಡಿತದಿಂದ ಗಾಯ/ಸಾವು/ಅಪಘಾತ ಹೇಳಿ ಪತ್ರಿಕೆಗಳಲ್ಲಿ ನೋಡುದು ಬೇಡ. ಎಂತ ಹೇಳ್ತಿ??
    ನಾಳಂಗೆ ಚೆಂದಕೆ ಎಣ್ಣೆ ಕಿಟ್ಟಿ ಮಿಂದು – ಹೊತ್ತೊಪಗ ಗುರುಗೋ ಹೇಳಿದ ಹಾಂಗೆ ಎಳ್ಳೆಣ್ಣೆ ದೀಪ ಹಚ್ಚಿ – ಪಾಯಸವ ಮಣ್ಣ ಕುಡುದು ಲೈಕಕೆ ಒರಗುವ ಆಗದ..


    ನಿಂಗಳ
    ಮಂಗ್ಳೂರ ಮಾಣಿ…

    1. ಗಣೇಶನ ಲೇಖನ ದೀಪಾವಳಿಯ ಆಚರಣೆಯ ಹಿನ್ನೆಲೆ ಲಾಯಿಕಲಿ ತಿಳಿಸಿಕೊಟ್ಟತ್ತು
      ಮಂಗ್ಳೂರು ಮಾಣಿ ಹೇಳಿದ್ದಕ್ಕೆ ಎನ್ನ ಸಹಮತ ಇದ್ದು. ದೀಪಾವಳಿ ಹೇಳಿರೆ ದೀಪಂಗಳ ಹೊತ್ತಿಸಿ ಬೆಳಗೆಕ್ಕಲ್ಲದ್ದೆ, ಪಟಾಕಿ ಹೊಟ್ಟಿಸಿ ವಾತಾವರಣವ ಹಾಳು ಮಾಡ್ಲೆ ಆಗ. ಗಂಧಕದ ಹೊಗೆ ನವಗೆ ಖಂಡಿತಾ ಒಳ್ಳೆದಲ್ಲ. ಶಬ್ದ ಮಾಲಿನ್ಯ ಕೂಡಾ ತುಂಬಾ ಜಾಸ್ತಿ ಆವ್ತು. ನಮ್ಮ ಕೆಮಿಗೆ 80 ಡೆಸಿಬಲ್ ಗಿಂತ ಹೆಚ್ಚಿನ ಶಬ್ದವ ಕೇಳಿರೆ ಕೆಮಿ ತಮ್ಮಟೆ ಹಾಳು ಅಪ್ಪ ಚಾನ್ಸ್ ತುಂಬಾ ಇದ್ದು. ಕೆಲವು ಪಟಾಕಿಗೊ 120 ಕ್ಕಿಂತಲೂ ಹೆಚ್ಚು ಡೆಸಿಬಲ್ ನಷ್ಟು ಶಬ್ದ ಮಾಡುತ್ತು.
      ಮಕ್ಕೊ, ಬಾಣಂತಿಗೊ, ಪ್ರಾಯದವು, ರೋಗಿಗೊ ಇಪ್ಪಲ್ಲಿ ಅಂತೂ ಇದರ ಸಂಪೂರ್ಣ ನಿಶೇಧ ಮಾಡೆಕ್ಕು.
      ಆರೋಗ್ಯವೂ ಹಾಳು, ಪೈಸೆಯೂ ನಷ್ಟ.
      ಎಡಿಗಾದಷ್ಟು ದೀಪಂಗಳ ಬೆಳಗಿಸಿ,”ಧಿಯೋ ಯೋ ನಃ ಪ್ರಚೋದಯಾತ್” ಹೇಳಿ ಪ್ರಾರ್ಥಿಸುವೊ

      1. {..80 ಡೆಸಿಬಲ್ ಗಿಂತ ಹೆಚ್ಚಿನ ಶಬ್ದವ ಕೇಳಿರೆ ಕೆಮಿ ತಮ್ಮಟೆ}

        ಅಯ್ಯೊ.. ಅಪ್ಪಚ್ಚಿ… ಈ ಪುಳ್ಳರುಗಳ ಹೇಳಿ ಸುಖ ಇಲ್ಲೆ…. ಆನು ಮಾರ್ಗಲ್ಲಿ ಹೋಪಗ, ಅದ “ಢ೦……!!” ಹೇಳಿ ಹೊಟ್ಟಿತ್ತದ… ಎರಡು ನಿಮಿಶ, ಈ ರೇಡಿಯಾಲ್ಲಿ ಉದ್ಯಪ್ಪಗ ಬತ್ತನ್ನೆ ”ಕೂ.ಇ.ಇ.ಇ………ಯಿ” ಹೇಳಿ.. ಒ೦ದಾರಿ ಮೂರು ಲೋಕ ಕ೦ಡಾ೦ಗಾತಿದ…. ರಮ ರಮಾ…!! 😀

  3. ದೀಪಾವಳಿಲಿ ಬೆಡಿ ಹೊಟ್ಟುಸುವುದು ಎಂತಕೆ ಹೇಳಿ ಗಣೇಶ ಮಾವ ಬಹಳ ಚೆಂದಕೆ ವಿವರುಸಿದ್ದ. ಲೇಖನದ ಎಡಕ್ಕಿಲ್ಲಿ ಕೆಲವು ಬೆಡಿ ಪಟಾಕಿಗೊ ಹೊಟ್ಟೆಂಡಿದ್ದದು ಲಾಯಕಾಯಿದು. ಪಾಕ ಆವ್ತಾ ಇಪ್ಪಗ ಗಣೇಶ ಮಾವ ಬಾಯಿಲಿ ನೀರು ಹರಿಶೆಂಡು ಇದ್ದದು ಇನ್ನೂ ಲಾಯಕಾಯಿದು. ಬೈಲಿನ ಎಲ್ಲೋರಿಂಗು ದೀಪಾವಳಿಯ ಶುಭಾಶಯಂಗೊ.

  4. ಅ೦ತೂ ದೀಪಾವಳಿ ಪಟಾಕಿ ಚೆ೦ದಕಿ ಹೊಟ್ಟ್ಸಿದೇನೆ ಗಣೇಶ ಮಾವ೦.ಒಳ್ಳೆ ಲೇಖನ.ಮುಗಾ೦ಬೊ ಖುಷ್ ಹುವ.ಒಪ್ಪ೦ಗಳೊಟ್ಟಿ೦ಗೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×