Oppanna.com

ಪ್ರಾಯ ಆದವರ ವೃದ್ಧಾಶ್ರಮಕ್ಕೆ ಹಾಕೆಡಿ

ಬರದೋರು :   ಕೇಜಿಮಾವ°    on   24/10/2010    10 ಒಪ್ಪಂಗೊ

ಫೇಸ್ ಬುಕ್ಕಿಲ್ಲಿ ಮೊನ್ನೆ ಒಂದು ಕೂಟ ನೋಡಿದೆ.ಪ್ರಾಯ ಆದವರ ವೃದ್ಧಾಶ್ರಮಕ್ಕೆ ಹಾಕೆಡಿ,ಅವು ನಮ್ಮ ನಾವು ಸಣ್ಣಾಗಿಪ್ಪಗ ನೋಡಿಯೊಂಡದರ ಹೇಂಗೆ ಮರವದು.ನಮ್ಮ ಕರ್ತವ್ಯ ಇಲ್ಲೆಯೋ.ಒಳ್ಳೆ ಸಮಯೋಚಿತವೇ.ಅಂಬಗ ನೆಂಪಾತದ.
ಒಂದೆರಡು ವರ್ಷ ಹಿಂದೆ ರಾಮಣ್ಣ ಬಂದಿತ್ತಿದ್ದ°.ಅವ° ಕೇಳಿತ್ತಿದ್ದ°.ಅಪ್ಪೋ ಡಾಕ್ಟ್ರೇ,ನಿಂಗಳ ಚೆಂಙಾಯಿ ಇದ್ದ° ಅಲ್ಲದೋ,ಅದೇ ರಾಜ,ಅವ° ಅವನ ಅಪ್ಪ ಅಮ್ಮನ ವೃದ್ಧಾಶ್ರಮಕ್ಕೆ ಸೇರ್ಸಿಕ್ಕಿ ಅಮೆರಿಕಕ್ಕೋ ಇಂಗ್ಲೇಂಡಿಂಗೋ ಹೋಹಿದಡಲ್ಲದೋ,ಸರಿಯೋ ಅದು,ನಿಂಗಳ ಹತ್ತರೆ ಹೇಳಿದ್ದಾಯಿಲ್ಲೆಯೋ ಹೇಳಿ.
ಅಪ್ಪು,ರಾಜ° ಅಮೆರಿಕಕ್ಕೆ ಹೋಪಗ ಅಪ್ಪ ಅಮ್ಮನ ಒಂದು ವ್ಯವಸ್ತೆ ಮಾಡಿಕ್ಕಿ ಹೋಯೆಕ್ಕು ಹೇಳುವ ಅಭಿಪ್ರಾಯ ಎನ್ನ ಹತ್ರೆ ಮಾತಾಡಿದ್ದಿದ್ದು.ಆನುದೇ ಅವಂಗೆ ಅದೇ ಸರಿ ಹೇಳಿತ್ತಿದ್ದೆ.
ರಾಜ° ಹೇಳಿರೆ ಎನ್ನ ಒಟ್ಟೀಂಗೆ ಶಾಲಗೆ ಬಂದೊಡ್ಡಿದ್ದವ°.ಮನೆಲಿ ನಾಕೈದು ಖಂಡಿ ಅಡಕ್ಕೆ ಅಕ್ಕು.ಒಂದು ಅಕ್ಕ° ಮದುವೆ ಆಗಿ ಗೆಂಡನೊಟ್ಟೀಂಗೆ ಇದ್ದು.ಅಪ್ಪ° ಸಾಲ ಮಾಡಿಯೇ ಮಗನ ಕಲಿಶಿದ್ದು.ಮಗನೂ ಹುಶಾರಿ.ಮೆರಿಟ್ ಸೀಟೇ ಸಿಕ್ಕಿ ಎಮ್ಬಿಬಿಎಸ್ ಮಾಡಿದ್ದು.ಏನೋ ಯೋಗ ಒಳ್ಳೆದಿತ್ತು,ಅಲ್ಲದ್ದ್ರೆ ಬ್ರಾಹ್ಮಣ ಆಗಿ ಎಮ್ ಡಿ ಸೀಟ್ ಸಿಕ್ಕೆಕ್ಕು ಹೇಳಿ ಆದರೆ?ಮತ್ತುದೇ ಹೆಚ್ಚು ಕಲಿವಲೆ ಅಮೆರಿಕಕ್ಕೆ ಹೋದ್ದಪ್ಪು.ಅದೆಂತದೋ ಉದ್ದ ಡಿಗ್ರಿ ಮಾಡಿಕ್ಕಿ ಊರಿಂಗೆ ಬಂದಿತ್ತಿದ್ದ°.ನ್ಯೂರೊಸರ್ಜನ್ ಅವ° ಈಗ.ಊರಿಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಕೆಲಸ ಮಾಡಿತ್ತಿದ್ದ°.ನಮ್ಮ ಜಾತಿ ರಾಜಕೀಯಂದಾಗಿ ಮೇಲೆ ಬಪ್ಪಲಾಯಿದಿಲ್ಲೆ,ಅಮೆರಿಕಕ್ಕೆ ವಾಪಸು ಹೋದ,ಬಂದ ಹಾಂಗೇ.ಅಲ್ಲಿ ಒಂದು ಹತ್ತು ವರ್ಷಂದ ಮೇಲಾತು ಅವ° ಕೆಲಸ ಮಾಡ್ತದು.ಅಪ್ಪ ಅಮ್ಮನ ಒಂದರಿ ಕರಕ್ಕೊಂಡು ಹೋಗಿತ್ತಿದ್ದ° ಅಲ್ಲಿಗೆ,ಅಲ್ಲಿ ಮುದ್ಕ ಮುದ್ಕಿ ಎಂತ ಮಾಡುಗು,ಭಾಷೆಯೂ ಬಾರದ್ದಲ್ಲಿ?
ಹಾಂಗೆ ಅವನೇ ಊರಿಂಗೆ ಬಂದು ಒಂದು ಒಳ್ಳೆ ವೃದ್ಧಾಶ್ರಮಲ್ಲಿ,ನಮ್ಮ ದೇರಾಜೆ ಮೂರ್ತಿಯ ಮಗ° ಮಾಡಿದ್ದಾಯಿಲ್ಲೆಯೋ,ಹಾಂಗಿಪ್ಪದು.ಆದರೆ ಅಲ್ಲಿ ಪೈಸೆ ಕೊಟ್ಟು ಇಪ್ಪವು ಮಾಂತ್ರ ಇಪ್ಪಲಕ್ಕು.ತಿಂಗಳಿಂಗೆ ಒಬ್ಬಂಗೆ ಹತ್ತು ಸಾವಿರ,ಅದರ ಮೇಲೆ ಮೂರೋ ನಾಲ್ಕೋ ಲಕ್ಶ ದೆಪೊಸಿಟ್.ಎಲ್ಲಾ ವ್ಯವಸ್ತೆಯೂ ಇದ್ದು,ಸೌಖ್ಯ ಇಲ್ಲದ್ದರೆ ಡಾಕ್ಟ್ರಕ್ಕಳೂ ಇದ್ದವು.ಇಷ್ಟು ವ್ಯವಸ್ತೆ ಇದ್ದರೆ ಏಕಾಗ ರಾಮಣ್ಣ ಹೇಳಿ ಆನು ಕೇಳಿತ್ತಿದ್ದೆ.
ಯೋಚನೆ ಮಾಡಿ.ಇಂದು ಎಲ್ಲೋರಿಂಗೂ ಒಬ್ಬನೋ ಇಬ್ರೋ ಮಕ್ಕೊ ಇಪ್ಪದು.ಅವಕ್ಕೆ ವಿದ್ಯಾಭ್ಯಾಸ ಅನಿವಾರ್ಯ ಅಲ್ಲದೋ?ಮನೆಲಿ ಹೆಚ್ಚು ಅನುಕೂಲ ಇಲ್ಲದ್ದರೆ ಜೀವನ ನೆಡವಲೆ ಹೆರ ಏನಾರೂ ಕೆಲಸಕ್ಕೆ ಹೋಯೆಕ್ಕಷ್ಟೆ,ಕೂಲಿ ಕೆಲಸ ಮಾಡ್ಳೆ ನವಗೆ ಎಡಿಗೋ,ಅಥವಾ ಮಾಡಿರೆ ಕಲ್ತದಕ್ಕೆ ಎಂತ ಪ್ರಯೋಜನ ಹೇಲಿ ನಾವೇ ಕೇಳದೋ?ಹಾಂಗೆ ಪೇಟೆ ಸೇರಿದ ಮಕ್ಕಳೊಟ್ಟಿಂಗೆ ಇಪ್ಪಲಕ್ಕೋ?

ನಿಂಗಳ ಪೈಸೆ ಎಲ್ಲ ಎಂತ ಮಾಡಿದ್ದಿ,ಒಬ್ಬನೇ ಮಗ ಹೇಳಿ ಕೊಟ್ಟಿರೋ ಹೇಳಿ ಎನ್ನ ಮಾವ ಒಂದರಿ ಅವನ ಮನೆಲಿ ಒಂದು ತಿಥಿಗೆ ಹೋಗಿಪ್ಪಗ ಎಲ್ಲೋರೂ ಇಪ್ಪಗ ಕೇಳಿತ್ತಿದ್ದ°.”ಎಲ್ಲವನ್ನೂ ಮಕ್ಕೊಗೆ ಕೊಡೆಡಿ.ನಾವು ಸತ್ತ ಮೇಲೆಯೇ ಮಕ್ಕೊಗೆ ಸಿಕ್ಕೆಕ್ಕಲ್ಲದ್ದೆ ಮದಲಲ್ಲ“.ಅದಕ್ಕೆ ಅವನ ವಿವರಣೆಯೂ ಭಾರೀ ಅರ್ಥಪೂರ್ಣ ಆಗಿತ್ತು.ನಮ್ಮ ಪೈಸ ಎಲ್ಲ ಮಗಂಗೆ ಕೊಟ್ಟು ಅವನೊಟ್ಟಿಂಗೆ ಇಪ್ಪಲೆ ಸುರು ಮಾಡಿತ್ತು ಹೇಳಿ ಗ್ರೇಶಿಯೊಳಿ.ಎಲ್ಲಾ ಅವನ ಹತ್ತರೆ ಇಪ್ಪಗ ಒಂದು ದಿನ ಆದರೂ ನಾವು ಖರ್ಚಿಗೆ ಕೇಳುವಗ,ಎಲ್ಲಿಯೋ ಇನ್ವೆಸ್ಟ್ ಮಾಡಿದ ಪೈಸೆ ಕೈಲಿಲ್ಲದ್ದೆ,ಇಲ್ಲೆ ಹೇಳಿ ಹೇಳುಲೂ ಆಗದ್ದೆ, ಆ ಕೆಲಸ ಇಂದು ಮಾಡದ್ದ್ರೆ ಆಗದೋ ಹೇಳಿ ಅವ° ಕೇಳಿರೆ ನಿಂಗೊಗೆ ಹೇಂಗಕ್ಕು?ಹಾಂಗಾಗಿ ನಿಂಗಳ ಖರ್ಚಿಗೆ ಬೇಕಪ್ಪಷ್ಟು ಮಡಿಕ್ಕೊಂಡು ಬಾಕಿ ಇಪ್ಪದರ ಕೊಡಿ.
ನಮ್ಮ ಎಲ್ಲೋರ ಪೈಕಿಯೂ ಹೀಂಗಿಪ್ಪ ಉದಾಹರಣೆಗೊ ಇಕ್ಕು.
ಇದರ ನೋಡಿ-ಎನ್ನ ಒಬ್ಬ ಪೈಕಿಯವನೇ,ಅಪ್ಪಂಗೆ ಒಬ್ಬನೇ ಮಗ.ಒಟ್ಟೀಂಗೇ ಇಪ್ಪದು ಅಪ್ಪ ಮಗ.ಅಮ್ಮನೂ ಇದ್ದು.ಅಪ್ಪಂಗೆ ಈಗ ಉಷಾರಿಲ್ಲೆ.ಮೊನ್ನೆ ಎನ್ನ ಹತ್ತರೆ ಬಂದಿತ್ತಿದ್ದ.ಬೀಪಿ,ಶುಗರು ಎಲ್ಲ ಇದ್ದು.ಆನು ನೋಡಿ ಒಂದರಿ ಮಂಗ್ಳೂರಿಲ್ಲಿ ಪರೀಕ್ಷೆ ಮಾಡ್ಸಿರಕ್ಕು ಹೇಳಿದೆ.ಮನಗೆ ಹೋಗಿಯಪ್ಪಗ ಇನ್ನು ಮುದಿಪ್ರಾಯಲ್ಲಿ ಎಂತರ ಪರೀಕ್ಷೆ ಹೇಳಿ ಮಗ ಕೇಳಿದ°.ಅನುಕೂಲ ಇಲ್ಲದ್ದವು ಅಲ್ಲವೇ ಅಲ್ಲ.ಅಲ್ಲಿ ಅಪ್ಪನ ತಪ್ಪೆಂತ ಹೇಳಿರೆ ಕಾರ್ಬಾರೆಲ್ಲ ಮಗಂಗೆ ಬಿಟ್ಟಿದ°.ಪುಣ್ಯಕ್ಕೆ ಎಲ್ಲವನ್ನೂ ಮಗನ ಹೆಸರಿಂಗೆ ಬರದ್ದಾ°ಯಿಲ್ಲೆ.
ಪ್ರಾಯ ಆದ ಮೇಲೆ ಹೇಂಗಿಪ್ಪದು,ಎಲ್ಲಿಪ್ಪದು ನಮ್ಮ ಸೊತ್ತಿನ ಎಂತ ಮಾಡುದು ಇತ್ಯಾದಿ ನಾವಿಂದು ಮದಲೇ ನಿಶ್ಚಯ ಮಾಡಿಯೊಳೆಕ್ಕು.ಪ್ರಾಯ ಅಪ್ಪಗ ನವಗೆ ಆ ಚೈತನ್ಯ ಇರ್ತೋ ಇಲ್ಲ್ಯೋ ಗೊಂತಿಲ್ಲೆ ಅಲ್ಲದೋ?
ನಾವು ದುಡ್ದರ ಒಂದು ಒಳ್ಳೆ ರೀತಿಲಿ ವಿನಿಯೋಗ ಮಾಡಿ,ಎಲ್ಲೈಸಿಯೋ ಮತ್ತೊಂದೋ,ಒಂದು ಪೆನ್ಶನ್ ನಮುನೆಲಿ ಸಿಕ್ಕುತ್ತ ಹಾಂಗೆ ಮಾಡಿಯೊಂಡ್ರೆ ಸಮಸ್ಯೆ ಇರ.
ಮಕ್ಕೊ ಒಳ್ಳೆಯವೇ ಇರ್ತವು.ಇಂದ್ರಾಣ ಮಕ್ಕೊ ನಮ್ಮ(ಎನ್ನ)ಕಾಲದ ಮಕ್ಕಳಿಂದ ಒಳ್ಳೆಯವೇ.
ಪ್ರಾಯ ಅಪ್ಪಗ ಆನು ವೃದ್ಧಾಶ್ರಮಕ್ಕೆ ಹೋಪದು ಹೇಳಿ ಒಂದು ಸರ್ತಿ ಹೀಂಗೇ ಮಾತಿಂಗೆ ಹೇಳಿದ್ದಕ್ಕೆ ಒಬ್ಬ ಮಾಣಿ ಎನ್ನ ಬೈದ್ದದು ನೆಂಪಿದ್ದು.ಎಂತ ಡಾಕ್ಟ್ರೆ,ಎಂಗೊಗೆ ಅಷ್ಟೂ ಬುದ್ಧಿ ಕಮ್ಮಿಯೋ,ನಿಂಗಳ ಎಂಗೊ ಬಿಟ್ಟು ಹಾಕಲೆಡಿಗೋ,ಜವ್ವನಿಗರ ಮರ್ಯಾದಿ ತೆಗೆಯೆಡಿ ಹೇಳಿ ಎನ್ನ ಜೋರು ಮಾಡಿತ್ತಿದ್ದ.ತುಂಬಾ ಒೞೆ ಮಾಣಿ,ಅವನ ಅಪ್ಪ ಅಮ್ಮನ ನೋಡ್ತಾ ಇದ್ದ ಕೂಡಾ.ಆದರೆ ಅನು ಮಾಂತ್ರ ಮಕ್ಕಳೆಡೆಲಿ ಅಪ್ಪ ಅಮ್ಮಂಗೆ ಸರಿಯಕ್ಕು ಹೇಳಿ ನಂಬಿದ್ದಿಲ್ಲೆ,ನೋಡವು ಹೇಳಿ ಅಲ್ಲ,ನಾವು ಅವರ ಸರಿಯಾಗಿ ಬೆಳೆಶಿದ್ದು ಹೇಳಿಯಾದರೆ.ಅವರ ಜೀವನ ಅವಕ್ಕೆ ಬೇಕಾದ ಹಾಂಗೆ ನೆಡೆಯೆಕ್ಕಾರೆ ನಾವು ದೂರ ಇಪ್ಪದೇ ಒಳ್ಳೆದು.ಹಾಂಗೆ ಹೇಳಿ ನಮ್ಮ ಕೈಕ್ಕಾಲು ಬಾರದ್ದ ಹಾಂಗಿಪ್ಪಗ ಒಟ್ಟಿಂಗೆ ಇಪ್ಪಲಾಗ ಹೇಳಿಯಲ್ಲ. ನಮ್ಮ ನೋಡಿಯೊಂಬದು ಮಕ್ಕಳ ಕರ್ತವ್ಯ ಖಂಡಿತಾ ಅಲ್ಲ.ನವಗೆ ಮಕ್ಕೊ ಅಪ್ಪಗ ಅವರ ನಾವು ಕೇಳಿದ್ದೊ?
ಆನು ಎನ್ನ ಅಪ್ಪನ ನೋಡಿಯೊಂಡಿದಿಲ್ಲೆಯೋ ಹೇಳಿ ಅರಾರೂ ಕೇಳ್ಲಕ್ಕು.ಖಂಡಿತಾ.ಹಾಂಗೇ ನೋಡಿಯೊಳದ್ದವರ ಎಷ್ಟು ಬೇಕು ಹೇಳಿ ಅನು ತೋರ್ಸುವೆ.
ಎಲ್ಲ ದಿಕ್ಕಿಲ್ಲಿಯೂ ಇದು ಅನ್ವಯ ಆವುತ್ತು ಹೇಳಿ ಅಲ್ಲ.ಅಪ್ಪ ಮಕ್ಕೊ ಒಟ್ಟಿಂಗಿಪ್ಪದು ತುಂಬ ನೋಡಿದ್ದಿದ್ದು.ಹಾಂಗೆ ಹೇಳಿ ಬೇರೆ ಬೇರೆ ದಿಕ್ಕಿಂದ ಬೇರೆ ಬೇರೆ ವಾತಾವರಣಲ್ಲಿ ಬೆಳದ ಕೂಸುಗೊ ಸೊಸೆಯಕ್ಕೊ ಒಂದೇ ಬುದ್ದಿಲಿಕ್ಕು ಹೇಳುದೂ ಕಷ್ಟವೇ.ಬಯಸುದೂ ಸರಿಯಲ್ಲ.(ಕೆಲಸ ಮಾಡ್ತ ಕೂಸುಗೊ ಇತ್ಯಾದಿ ಅದೇ ಒಂದು ಲೇಖನ ಅಕ್ಕು)
ಇದು ಚರ್ಚೆ ಮಡುವ ವಿಷಯ ಮಾಂತ್ರ ಅಲ್ಲ,ನಾವಿಂದು ಯೋಚನೆ ಮಾಡೆಕಾದ್ದು ಕೂಡ.

ಕೇಜಿಮಾವ°
Latest posts by ಕೇಜಿಮಾವ° (see all)

10 thoughts on “ಪ್ರಾಯ ಆದವರ ವೃದ್ಧಾಶ್ರಮಕ್ಕೆ ಹಾಕೆಡಿ

  1. ಚಿಂತನೆಗೆ ಎಳೆತ್ತ ಲೇಖನ. ಕೇಜಿ ಅಣ್ಣಂಗೆ ಧನ್ಯವಾದಂಗೊ
    ಮಕ್ಕೊ ಸಣ್ಣ ಇಪ್ಪಗಳೇ, ಅವರ ಅಬ್ಬೆ ಅಪ್ಪಂದ ದೂರ ಇರ್ತ ಹಾಂಗೆ ಆವುತ್ತ ಕಾಲ ಇದು. 3 ವರ್ಷ ಅಪ್ಪಗಳೇ ಶಾಲೆಗೆ ಸೇರಿಸಿರೆ, ದಿನ ನಿತ್ಯ ಅವಕ್ಕೆ ಓದು, ಬರೆ, ಟ್ಯೂಶನ್, ಇದುವೇ ಆವುತ್ತು. ಪೈಸೆ ಹೆಚ್ಚು ಖರ್ಚು ಮಾಡಿ ಕಲಿಸಿರೆ ಮಕ್ಕೊ ದೊಡ್ಡ ಜೆನ ಆವ್ತವು ಹೇಳಿ ತಿಳಿವವು, ಮಕ್ಕಳೊಟ್ಟಿಂಗೆ ಮಾತಾಡ್ಲೆ, ಅಭಿಪ್ರಾಯ ವಿನಿಮಯೆ ಮಾಡ್ಲೆ ತನ್ನ ಸಮಯ ಕೊಡ್ಲೆ ತಯಾರು ಇರ್ತವಿಲ್ಲೆ. ಮಕ್ಕೊಗೆ ಅಬ್ಬೆ ಅಪ್ಪ ಹೇಳಿರೆ ಅವಕ್ಕೆ ಬೇಕಾದ್ದರ ಒದಗಿಸಿಕೊಡುವ ವ್ಯೆಕ್ತಿ ಆವ್ತವೇ ವಿನಹ, ಆತ್ಮೀಯತೆ, ಗೌರವ ಯಾವುದೂ ಬೆಳೆತ್ತಿಲ್ಲೆ. ದೊಡ್ಡ ಅಪ್ಪಗ ಅವಕ್ಕೆ ಇವರ ಆಗತ್ಯ ಕಾಣ್ತಿಲ್ಲೆ ಎಂತ ಹೇಳಿರೆ ಅವು ದುಡಿವಲೆ ಸುರು ಮಾಡ್ತವು, ಪೈಸಗೆ ಬೇಕಾಗಿ ಅಬ್ಬೆ ಅಪ್ಪನ ಆಶ್ರಯೆಸಕ್ಕಾವುತ್ತಿಲ್ಲೆ. ಅಷ್ಟಪ್ಪಗ ಅವರ ನೋಡಿಗೊಳೆಕ್ಕು ಹೇಳ್ತ ಬಾಂಧವ್ಯ ಇರ್ತಿಲ್ಲೆ, ವೃದ್ಧಾಶ್ರಮಕ್ಕೆ ಹಾಕುವದೇ ಸುಲಾಭ ಹೇಳಿ ಕಾಣ್ತು.
    ಹಿಂದಾಣ ಕಾಲಲ್ಲಿ ಕೂಡು ಕುಟುಂಬಲ್ಲಿ, ಅಣ್ಣ, ತಮ್ಮ, ಅಕ್ಕ, ತಂಗೆ, ಅಪ್ಪ,ಅಮ್ಮ, ದೊಡ್ಡಪ್ಪ,ದೊಡ್ಡಮ್ಮ, ಅಪ್ಪಚ್ಚಿ, ಚಿಕ್ಕಮ್ಮ ಹೀಂಗೇ ಸಂಬಂಧಂಗೊ, ಮಕ್ಕೊ ದೊಡ್ಡ ಆದ ಹಾಂಗೆ ಗಟ್ಟಿ ಆವ್ತಾ ಹೋವ್ತು. ಈಗಾಣ ನೂಕ್ಲಿಯಸ್ ಕುಟುಂಬಲ್ಲಿ, ಅಪ್ಪ, ಅಮ್ಮ ಬಿಟ್ಟರೆ ಬಾಕಿ ಇಪ್ಪವೆಲ್ಲಾ ಅಂಕಲ್, ಆಂಟಿ, ಬ್ರದರ್, ಸಿಸ್ಟರ್. ಕಸಿನ್. ಸಂಬಂಧ ಕೇಳಿರೆ ಎಂತ ಆಯೆಕ್ಕು ಹೇಳ್ಲೆ ಗೊಂತಿರ. ಬಾಂಧವ್ಯದ ಪ್ರಶ್ನೆಯೇ ಇಲ್ಲೆ.
    ವೃದ್ಧಾಶ್ರಮ ನಡೆಸುತ್ತವರ ಒಂದು ಲೆಕ್ಕಲ್ಲಿ ಮೆಚ್ಚೆಕ್ಕು. ಪೈಸ ಕೊಟ್ಟರೆ ಆದರೂ ಸರಿಯಾಗಿ ನೋಡ್ತವನ್ನೆ. ನೋಡ್ಲೆ ಆರೂ ಗತಿ ಗೋತ್ರ ಇಲ್ಲದ್ದೆ ಅನಾಥರಾಗಿ ಇರೆಕೂ ಹೇಳಿ ಇಲ್ಲೆ ಅನ್ನೆ.

    1. ಶರ್ಮಣ್ಣ,ಎನ್ನ ಲೇಖನದ ಉದ್ದೇಷ ಮಕ್ಕೊ ನೋಡುವ ಅಥವಾ ನೋದದ್ದಿಪ್ಪದರ ಬಗ್ಗೆ ಅಲ್ಲ.ಪ್ರಾಯ ಅಪ್ಪಗ ನಾವು ನಮ್ಮಷ್ಟಕೆ ಜೀವನ ಮಾಡುವ ಪ್ರಸಂಗ ಬಂದರೆ ಅದು ಮಕ್ಕಳ ತಪ್ಪಲ್ಲ,ನಾವು ಅದಕ್ಕೆ ತಯಾರಾಗಿರೆಕು ಹೇಳ್ತದಲ್ಲದ್ದೆ ಈಗಾಣ ಮಕ್ಕಳ ದೂರುವ ಕೆಲಸಕ್ಕೆ ಹೆರಟದಲ್ಲ.ಕೆಲವು ಪರಿಸ್ತಿತಿಲಿ ವೃದ್ಧಾಶ್ರಮ ಅನಿವಾರ್ಯ ಹೇಳಿ ಎನಗೆ ಕಂಡು ಬರದ್ದು.
      ಹಾಂಗೆ ನೋಡಿರೆ ಈಗಾಣ ಮಕ್ಕೊ ನಮ್ಮ ಕಾಲದ ಮಕ್ಕಳಿಂದ ಎಷ್ಟೋ ಹೆಚ್ಚು ಪ್ರೌಢರಾಯಿದವು ಹೇಳೆಕ್ಕಾವುತ್ತು.ಅವರ ಜವಾಬ್ದಾರಿ ಅವು ಸರಿಯಾಗಿ ತಿಳ್ಕೊಂಡಿರ್ತವು.ಇನ್ನಾಣ ಜನರೇಶನ್ ಬಗ್ಗೆ ಎನಗೆ ಯಾವುದೇ ಸಂಶಯ ಆಗಲೀ ಅಪನಂಬಿಕೆಯಾಗಲೀ ಇಲ್ಲವೇ ಇಲ್ಲೆ.
      ಕೂಡು ಕುಟುಂಬ ಹೇಳಿರೆ ಇಂದ್ರಾಣ ಮಕ್ಕೊಗೆ ಗೊಂತಿಲ್ಲದ್ದು ಅಪ್ಪು.ಅದಕ್ಕೆ ನಾವೇ ಅಲ್ಲದೋ ಜವಾಬ್ದಾರಿ?

  2. ಡಾಕ್ಟ್ರೆ ಎ೦ತಾ ಒಳ್ಳೆ ವಿಚಾರ ಬರದ್ದಿ.ಇದು ಖ೦ಡಿತಾ ನಮ್ಮ ಇಡಿ ಸಮಾಜ ಯೋಚಿಸೇಕಾದ ವಿಚಾರ.ಒಳ್ಳೆ ಲೆಖನಕ್ಕೆ ಬೆನ್ನು ತಟ್ಲೇ ಬೇಕು.(ಗಟ್ಟಿ ಅಲ್ಲ,ಕೊ೦ಡಾಟಲ್ಲಿ)ಇನ್ನು ವಿಶ್ಣು ನ೦ದನ ಬರದ ವಿಚಾರ ಹವಿಕ ಸಮಾಜ ಆನೋ ನಿನೋ ಗ್ರಹಿಸಿದ್ದದರಿ೦ದ ಎಷ್ಟೋ ಹೆಚ್ಹು ಮು೦ದೆ ಈ ವಿಚಾರ೦ಗಳಲ್ಲಿ ಹೋಯಿದು.ಬಹುಶಹ ನಮ್ಮ ಹತ್ತರಾಣ ಸ೦ಬ೦ದ೦ಗಳಲ್ಲಿ ಆರಾರು ಹಾ೦ಗೆ ಮಾಡದ್ದೆ ಇಕ್ಕು.ಆದರೆ ಹಾ೦ಗೆ ಮಾಡ್ತ ದಿನ ಹೆಚ್ಹು ದೂರ ಇಲ್ಲೆ.ಮತ್ತೆ ಕಲಾಯ ತಸ್ಮಯ್ ನಮಹ ಅಲ್ಲದೊ ರಘು ಭ್ಹಾವ೦ ಹೇಳಿದ ಹಾ೦ಗೆ ಎರಡು ಅನಿವಾರ್ಯತಗೊ ಸಮಾಜಕ್ಕೆ ಬಯಿ೦ದು ಸಹಿಸೇಕಷ್ಟೆ.ಅ೦ದಿಗೆ ಅದೇ ಸುಖ ಇ೦ದಿಗೆ ಇದೇ ಸುಖ ಹೆಳಿ ಕಳಿವಲೆ ಕಲ್ತವ೦ಗೆ ಕಷ್ಟ ಆಗ ಅಲ್ಲದ್ದವ೦ ಬಹುಶಹ ಕಷ್ಟ ಪಡೇಕಷ್ಟೆ.ಒಪ್ಪ್೦ಗಳೊಟ್ಟಿ೦ಗೆ.

  3. Vruddashrama anivarya helthadu thappu.

    Yenage gonthippa hange havyakaralli vruddashramakke sersuva krama ashtara mattinge baindille. Khanditha namma samajalli adu nedeya heltha nambike yenage iddu.

    1. ಹವ್ಯಕ ಸಮಾಜದ ಬಗ್ಗೆ ಅತೀ ಅಭಿಮಾನ ಬೇಡ.ನಮ್ಮ ಸಮಾಜದ ಹುಳುಕುಗಳ ಬಗ್ಗೆ ಬರೆತ್ತರೆ ಎನ್ನ ಹತ್ತರೆ ಒಂದು ದೊಡ್ಡ ಪುಸ್ತಕ ಬರವಷ್ಟು ಮಾಹಿತಿ ಇದ್ದು.ಇಲ್ಲಿ ಅದು ಅಪ್ರಸ್ತುತ ಹೇಳಿ ಎನ್ನ ಅಭಿಪ್ರಾಯ.ಎಲ್ಲ ಸಮಾಜದವರ ಹಾಂಗೇ ನಮ್ಮಲ್ಲಿಯೂ ಲೋಪ ದೋಷಂಗೊ ಬೇಕಾಷ್ಟು ಇದ್ದು.ಆದರೆ ಇಲ್ಲಿ ಬರೀ ಒಳ್ಳೆದರನ್ನೇ ಬರೆತ್ತಾ ಇಪ್ಪ ಕಾರಣ ಎಲ್ಲೋರ ಮೂಡ್ ಹಾಳು ಮಾಡುದು ಬೇಡ.ನಿಂಗೊ ಇನ್ನೂ ನೋಡ್ಳೆ ತುಂಬಾ ಇದ್ದು.ನಿಂಗಳ ನಂಬಿಕೆ ಮೆಚ್ಚೆಕ್ಕಾದ್ದೇ.

      1. Khanditha ningo heliddara opputthe. Aanu namma bagge heligondadu bere samjadara ottinge namma tulane madigondu.
        Lopangala meeri namma samja belettha iddu heli anu grehisidde. Aanu nodida hange namma samajada indrana makkoge modalanavara hange hulukku, sanna jagala idella kammi aaydu. Samskruthika maulyagalalli nambike hecchaydu. Gonthille Maniyagala mattinge yenage idu yeddu kanthu. Koosugo rajja paridhi bittu hovutthavo heli samshaya.

        Yenage hecchentha gonthille. Suttha mutthalu nodiddar helidde. Ningo helida hange aanu innude nodle thumba iddu.

        1. ಸರಿಯೇ.ಅದರನ್ನೂ ಆನು ಹೇಳಿದ್ದೆ.ಈಗಾಣ ಮಕ್ಕಳ ಬಗ್ಗೆ ಎನಗೆ ತುಂಬಾ ಅಭಿಮಾನ ಇದ್ದು.ಈ ಮಲ್ಟಿಮೀಡಿಯಾ ಮಕ್ಕಳ ತುಂಬಾ ವಿಚಾರವಂತರಾಗಿ ಮಾಡಿದ್ದು,ಲೋಪಂಗಳ ಬಗ್ಗೆ ಯೋಚನೆ ಮಾಡದ್ದರೆ ಎಂಗಳ ತಲೆಮಾರಿನವು ಮಾಡಿದ ತಪ್ಪುಗಳೇ ಪುನರವರ್ತನೆ ಅಕ್ಕು ಹೇಳಿ ಎಚ್ಚರಿಗೆಲಿ ಇಪ್ಪ ಅವಶ್ಯಕತೆಯ ಮನವರಿಕೆ ಮಾಡುವ ಬಗ್ಗೆ ಹಾಂಗೆ ಬರದ್ದಷ್ಟೆ.ಕೂಸುಗಳ ಬಗ್ಗೆ ಬರೆತ್ತರೆ ಅದು ಒಂದು ಬೇರೇ ಲೇಖನ ಅಕ್ಕು.ಬರವ ಯೋಚನೆ ಇದ್ದು,ಮುಂದಾಣ ದಿನಂಗಳಲ್ಲಿ.

          1. Khanditha Bareyakku Mava.

            Jenara moodu halavutthu heli nammallippa hulukugala bagge bareyadde ipplaga. Ningo hulukugala kai madi thorsidare gonthappadu.

            Nammalippa hulukugala bagge baradare ondu arogyapoorna charche-samvada akku. Adu adara saripadisigombale sahaya madugu.

            Nigalinda aa niriksheli idde.

  4. ನಮ್ಮ ಸ೦ಬ೦ಧ೦ಗೊ ಶಿಥಿಲ ಅಪ್ಪಾ ಇಪ್ಪದರ ಒ೦ದು ಪಾರ್ಶ್ವಫಲ – ಹೆಚ್ಚುತ್ತಾ ಇಪ್ಪ ವೃಧ್ಧಾಶ್ರಮ೦ಗಳ ಸ೦ಖ್ಯೆ. 🙁 ನಮ್ಮ ಸ೦ಸ್ಕಾರ ಅಧೋಗತಿಗೆ ಇಳಿತ್ತಾ ಇಪ್ಪದರ ಲಕ್ಷಣವುದೆ ಇದುವೇ. ನಮ್ಮ ಅಬ್ಬೆ ಅಪ್ಪನ ವೃಧ್ಧಾಪ್ಯಲ್ಲಿ ಚೆ೦ದಕ್ಕೆ ನೋಡ್ಯೊ೦ಬಲೆ ಎಡಿಯದ್ದರೆ ನಾವು ಎ೦ತ ಸಾಧನೆ ಮಾಡಿದರೂ, ಯಾವ ಹಿಮಾಲಯವ ಜಯಿಸಿದರೂ ಅದಕ್ಕೆ ಬೆಲೆ ಇಲ್ಲೆ. ನಮ್ಮ ಸಮಾಧಾನಕ್ಕೆ ಬೇಕಾಗಿ ನಾವೇ ನಮ್ಮ ರಾಜಕೀಯವ, ವ್ಯವಸ್ಥೆಯ ದೂರಿಗೊ೦ಡು ಕೂಪಲೆ ಸುಲಭ. ಅದು ನಮ್ಮ ವರ್ತನೆಗಳ ಸರಿ ಹೇಳಿ ನಮ್ಮನೇ ನಾವು ನ೦ಬಿಸಿಯೊ೦ಬಲೆ ಮಾಡ್ತ ಸರ್ಕಸ್ ಅಷ್ಟೇ. ಮಕ್ಕಳ ಬೆಳೆಶುತ್ತಾ ಇಪ್ಪಗಳೇ ಇದರ ಗ೦ಭೀರವಾಗಿ ಆಲೋಚನೆ ಮಾಡೆಕಾದ ಸಮಯ ಈಗಾಗಳೇ ಕಳುದತ್ತು. ನಾವು ಒಳ್ಳೆ ವಿದ್ಯಾಭ್ಯಾಸ ಹೇಳಿದರೆ ಇ೦ದಿನ ಸ್ಫರ್ಧಾತ್ಮಕ ಜಗತ್ತಿಲ್ಲಿ ಮು೦ದೆ ಬಪ್ಪಲೆ ಇಪ್ಪ ವಿದ್ಯಾಭ್ಯಾಸ ಮಾ೦ತ್ರ ಹೇಳಿ ತಿಳ್ಕೊ೦ಡಿದು. ಖ೦ಡಿತ ಅದು ಅಗತ್ಯ. ಆದರೆ ಅದರಷ್ಟೇ ಅಗತ್ಯ ಸ೦ಸ್ಕಾರ ಹೇಳಿ ಕೊಡುವದರಲ್ಲಿಯೂ ಇದ್ದು. ಈಗಾಣ ತಲೆಮಾರೇ ಹೀ೦ಗೆ. ಇನ್ನು ಮು೦ದಾಣ ತಲೆಮಾರು ಹೇ೦ಗಿಕ್ಕು?
    ಅಬ್ಬೆ ಅಪ್ಪನ ವೃಧ್ಧಾಶ್ರಮಲ್ಲಿ ಬಿಟ್ಟು ತಿ೦ಗಳಿ೦ಗೆ ಇ೦ತಿಷ್ಟು ಹೇಳಿ ಪೈಸೆ (ಗರ್ಭಪಾತ್ರದ ಬಾಡಿಗೆಯೊ?) ಕೊಟ್ರೆ ಮಕ್ಕಳ ಜವಾಬ್ದಾರಿ ಮುಗಿಗು ಹೇಳಿ ನಮ್ಮ ತಲೆಮಾರಿಲ್ಲಿಯೆ ಒಪ್ಪಿಯೊ೦ಬಲೆ ನಾವು ಮಾನಸಿಕವಾಗಿ ಸನ್ನಧ್ಧರಾವ್ತಾ ಇದ್ದು. ಕಾಲ ಬದಲಾವ್ತಾ ಇಪ್ಪ ಹಾ೦ಗೆ ನಾವು ಪಾಶ್ಚಾತ್ಯ ಸ೦ಸ್ಕಾರದ ಒಳ್ಳೇ ವಿಶಯ೦ಗಳ ಧಾರಾಳವಾಗಿ ಸ್ವೀಕರಿಸಿದ್ದು. ಅದರ ಒಟ್ಟಿ೦ಗೆ ಹಾಳು ವಿಶಯ೦ಗಳನ್ನುದೆ ಸ್ವೀಕರಿಸುತ್ತಾ ಇಪ್ಪದೇ ಬೇಜಾರದ ವಿಶಯ. ವೃಧ್ಧಾಶ್ರಮ೦ಗಳಲ್ಲಿ ಹೋಗಿ ನೋಡಿರೆ, ಬದ್ಕಲೆ ಗತಿ ಇಲ್ಲದ್ದೆ ಇಪ್ಪೊ ಮಕ್ಕೊ ಅಲ್ಲ, ಧಾರಾಳವಾಗಿ ಬದ್ಕಲೆ ಗತಿ ಇಪ್ಪ ಮಕ್ಕಳೆ ಹೆತ್ತವರ ಅಲ್ಲಿ ತ೦ದು ಬಿಟ್ಟಿಕ್ಕಿ ಹೋಪದು. ಸ್ವಾಮೀ ದೇವರೇ… ಯಾವ ಮಕ್ಕೊಗುದೆ ಹೀ೦ಗಿರ್ತ ಬುಧ್ಧಿ ಕೊಡದ್ದೇ ಇರು ಹೇಳಿ ಹೃದಯಪೂರ್ವಕ ಪ್ರಾರ್ಥನೆ.

  5. ಒಳ್ಳೆ ಲೇಖನ ಮಾವ,ಧನ್ಯವಾದ.
    “ಆನು ಮತ್ತು ಎನ್ನ” ಹೇಳ್ತ ಶಬ್ದಂಗಳ ಸುತ್ತಲೂ ಸುತ್ತುವ ಇಂದಿನ ಜೀವನಕ್ರಮಲ್ಲಿ ವೃದ್ಧಾಶ್ರಮ ಅನಿವಾರ್ಯ ಆದ್ದದು ಬೇಜಾರಿನ ಸಂಗತಿ.
    ಕೆಲಸಕ್ಕೆ ಹೋಪ ಅಬ್ಬೆ ಅಪ್ಪ ಸಣ್ಣ ಮಕ್ಕಳ “ಬೇಬಿ ಸಿಟ್ಟಿಂಗ್ ” ಹೇಳುವ ವ್ಯವಸ್ಥೆಲಿ ಬಿಡೊದರ ಇನ್ನೊಂದು ರೂಪ ವೃದ್ಧಾಶ್ರಮ ಹೇಳಿ ಎನ್ನ ಅನಿಸಿಕೆ.ಎರಡೂ ಅನಪೇಕ್ಷಿತ ಆದರೆ ಅನಿವಾರ್ಯ,ಬಾಲ್ಯ ಮತ್ತೆ ವೃದ್ಧಾಪ್ಯ ಈ ಎರಡೂ ಹಂತಲ್ಲಿ ಅಲ್ಲಿ ಇರೆಕ್ಕಾಗಿ ಬಪ್ಪೊದು ಅಸಹಾಯಕತೆ.
    ದೇರಾಜೆ ಭಾರವಿಯ ಹಾಂಗೆ ಸೇವಾ ಮನೋಭಾವದವು ಸಿಕ್ಕೊದೂ ಅಪರೂಪವೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×