ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   24/04/2017    12 ಒಪ್ಪಂಗೊ

 

ಡಿಮಾನಿಟೈಸೇಷನಿಂದಾಗಿ ಇಡೀ ದೇಶದ ಸಾಮಾಜಿಕ ಜೀವನಲ್ಲಿ ಆದ ಏರುಪೇರಿನ ಆರಿಂಗಾರು ಮರವಲೆ ಎಡಿಗೋ? ಯೋ ದೇವರೇ…ಅಂಬಗ ನಾವೆಲ್ಲ ಅಸಬಡಿದ್ದದ್ರ ಜಾನ್ಸೀರೆ ಈಗಳೂ ಮೈ ಅಕ್ಕಿ ಕಟ್ಟುತ್ತು. ಕೊರಳು ಒತ್ತಿ ಹಿಡಿದ್ರೂ ಉಸಿರಾಡೇಕು ಹೇಳ್ತಾಂಗಿದ್ದ ಸ್ಥಿತಿ. ಅಂದರೆ ಆ ಸಮಯಲ್ಲಿ ಜೆನಂಗೋ ತೋರ್ಸಿದ ತಾಳ್ಮೆಯೂ ಅಷ್ಟೇ ಅದ್ಭುತ. ಮುಂದೆ ಒಳ್ಳೇದಾವುತ್ತರೆ ಈಗ `ರಜಾ’ ಬಂಙ ಆದ್ರೂ ತೊಂದರೆ ಇಲ್ಲೆ ಹೇಳ್ತ ನಿರೀಕ್ಷೆಯೇ ಅದರ ಹಿಂದೆ ಇತ್ತಿದ್ದದು. ಆ ದಿನಂಗಳಲ್ಲಿ ಎನಗಾದ ಒಂದು ಅನುಭವವ ನಿಂಗಳೊಟ್ಟಿಂಗೆ ಹಂಚಿಯೋಳ್ತೆ ಆಗದೋ?

 

ಆಧಾರ್ ಕಾಡರ್ಿನ ಪ್ರತಿ, ಎರಡು ಲೀಟರು ನೀರು, ಕೊಡೆ, ಒಂದು ಸಣ್ಣ ಡಬ್ಬಿಲಿ ಬಿಸ್ಕೆಟು, ರಜಾ ಹಳೇ ನೋಟುಗೋ…ಇಷ್ಟೆಲ್ಲದ್ರ ಹಿಡ್ಕೊಂಡು ಬ್ಯಾಂಕಿಂಗೆ ಹೆರಟೆ.  ನಾಕು ದಿನಂದ ಎನಗೆ ಇದುವೇ ಕೆಲಸ. ಯಾವ ಬೇಂಕಿಲ್ಲಿ ರಶ್ಶು ಕಡಮ್ಮೆ ಹೇಳಿ ನೋಡ್ತದು ಆ ಬೆಂಕಿನೆದುರು ಹೋಗಿ ನಿಂದೋಂಬದು (ಡಿಮಾನಿಟೈಸೇಶನ್ ಆದ ಸೂರೂವಿಲ್ಲಿ ನೋಟು ಬಲಾವಣೆಗೆ ಅತಿಯಾದ ನಿಯಮಾವಳಿಗೊ ಇತ್ತಿಲ್ಲೆ. ಅಲ್ಲಿಯೂ ಭ್ರಷ್ಟಾಚಾರ ನೆಡೆತ್ತು ಹೇಳಿಯಪ್ಪಗ ಸರಕಾರ ಬಿಗಿಯಾದ ನಿಯಮಂಗಳ ತಂದದು). ಉದಿಯಪ್ಪಾಗಳೇ ಹೋದರೆ ಎರಡು ಸಾವಿರದ ಎರಡು ನೋಟಾದ್ರೂ ಸಿಕ್ಕುಗೋ ಏನೋ… ಹೇಳ್ತ ದೂರದ ಆಶೆ. ಹಾಂಗೆ ಅಟ್ಟಿ ಕುಟ್ಟಿ ಮನೆಕೆಲಸಂಗಳೆಲ್ಲ ಮುಗುಶಿಕ್ಕಿ ಪೇಟೆಗೆ ಹೆರಟದು. ಮಾರ್ಗ ಕರೆಲಿ ನಿಂದು ಅರ್ಧ ಘಂಟೆಯಾದ್ರೂ ಬಸ್ಸಿನ ಸುಳಿವೇ ಇಲ್ಲೆ. ಕಾಸ್ರೋಡಿನವಕ್ಕೆ ಇದು ಮಾಮೂಲು. ಎಲ್ಲಿಯಾದ್ರೂ ಪೆಟ್ಟು ಗುಟ್ಟೋ ಕತ್ತಿ ಕುತ್ತೋ ಆದರೆ ಮದಾಲು ಕಲ್ಲು ಬೀಳ್ತದು ಬಸ್ಸುಗೋಕ್ಕೆ. ಹಾಂಗಾಗಿ ಬಸ್ಸಿನವಕ್ಕೆ `ಸೂ…’ ಹೇಳ್ತ ಶುದ್ದಿ ಸಿಕ್ಕೀರೆ ಸಾಕು, ಎಲ್ಲ ಬಸ್ಸುಗಳೂ ಗುಡಿ ಹೆಟ್ಟಿ  ಒಳಾವೇ ಕೂರುಗು. ಇಂದೂದೆ ಹಾಂಗೆಂತಾರು ಆದ್ದಾದಿಕ್ಕು ಹೇಳಿ ಜಾನ್ಸಿಯೋಂಡೆ. ಆದರೆ ಮನುಷ್ಯರ ಕೈಲಿ ಪೈಸೆಯೇ ಇಲ್ಲದ್ದಿಪ್ಪಾಗ ಗಲಾಟೆ ಮಾಡ್ಸುವವು ಆರು ಹೇಳಿ ಬೇಕನ್ನೇ…? ಹೀಂಗೆಲ್ಲಾ ಜಾನ್ಸಿಯೋಂಡಿಪ್ಪಾಗಳೇ ಎನ್ನ ದೃಷ್ಟಿ ಅಲ್ಲೇ ಕರೇಲಿತ್ತಿದ್ದ ಹರ್ಕು ವಸ್ತ್ರದ ಏಳೆಂಟು ವರ್ಷ ಪ್ರಾಯದ ಒಂದು ಹುಡಗ, ಅದರ ಅಬ್ಬೆ (ಆನು ಹಾಂಗೆ ತಿಳ್ಕೋಂಡದು) ಯ ಮೇಗೆ ಬಿದ್ದತ್ತು. ಮೊಬೈಲಿನ ಹಾಂಗೆ ಕಾಂಬ ವಸ್ತುವಿನ ಒಂದು ಕಲ್ಲಿನ ಮೇಗೆ ಮಡುಗಿ ಆ ಹುಡುಗ ಇನ್ನೊಂದು ಕಲ್ಲಿಲ್ಲಿ ಅದರ ಸಮಾಕೆ ಗುದ್ದಿಯೊಂಡಿತ್ತಿದ್ದು. ಅಬ್ಬೆ ತನ್ನ ಮಗನ ಜಾಣ್ಮೆ(?)ಯ ನೋಡಿಯೊಂಡು ಹಿಂದಿಲಿ ಎಂತೋ ಹೇಳಿಯೊಂಡಿತ್ತಿದ್ದು. ಆನು ಕುತೂಹಲಂದ ಅವರನ್ನೇ ನೋಡಿಯೊಂಡಿಪ್ಪಾಗ ಎನ್ನೆದುರು ಒಂದು ಖಾಲಿ ಅಟೋರಿಕ್ಷಾ ಬಂದು ನಿಂದತ್ತು. ಬೇಗ ಹತ್ತಿಯೋಂಡೆ. ಅಂದ್ರೆ ಆ ಡ್ರೈವರಂ ಕೂಡ್ಲೇ ಹೆರಟಿದಿಲ್ಲೆ. ಆ ಅಬ್ಬೆ ಮಗ ಕಳ್ಳರುಗಳೋ ಹೇಳ್ತಾಂಗೆ ಸಮಾ ಬೈದತ್ತು, ಅವೂದೆ ಅದಕ್ಕೆ ಸರಿಯಾಗಿ ಹೆದರಿ ಓಡಿ ಹೋದವು. `ಎಲಾ ಇದೆಂತ ಕಥೆ…’ ಹೇಳಿ ಎನಗೆ ಕಂಡ್ರೂ ಅದರ ಕೇಳಿ ತಿಳಿವಷ್ಟು ತಾಳ್ಮೆ ಎನ್ನತ್ರೆ ಇತ್ತಿದ್ದಿಲ್ಲೆ. ಅಂಬಾಗಳೇ ಘಂಟೆ ಹತ್ತೂವರೆ ಕಳುದ್ದು. ಬೇಂಕಿಲ್ಲಿ ಎಷ್ಟು ದೊಡ್ಡ ಸಾಲಿದ್ದೋ ಏನೋ…ಬಿಸ್ಕೇಟಿನ ಬದಲು ಊಟವನ್ನೇ ಕಟ್ಟಿ ತೆಕ್ಕೋಂಬಲೆ ಆವುತಿತು ಹೇಳಿ ಜಾನ್ಸಿಯೋಂಡೆ.

 

“ಅಕ್ಕಾ…,ನನ್ನ ಗುರುತು ಸಿಗ್ಲಿಲ್ವಾ…? ನಿಮ್ಮ ರಸ್ತೆಯಲ್ಲಿರುವ ಎಸ್.ಟಿ.ಡಿ.ಬೂತ್ ನನ್ನ ತಮ್ಮಂದಲ್ವಾ?” ಸ್ವರ ಕೇಳಿಯಪ್ಪಗಳೇ ಆನು ಅಟೋ ಡ್ರೈವರನ ಮೋರೆಯ ಗಮನಿಸಿದ್ದದು.

“ಓ…ಹೌದಲ್ಲಾ…” ಹೇಳಿಕ್ಕಿ ಸುಮ್ಮನಾದೆ. ಎನ್ನ ತಲೆ ಪೂರಾ ಹಳೆ ನೋಟು ಕೊಟ್ಟು ಹೊಸ ನೋಟು ತೆಕ್ಕೋಂಬ ವಿಚಾರದ ಸುತ್ತ ಮುತ್ತಲೇ ತಿರಿಗಿಯೊಂಡಿತ್ತಿದ್ದು. ಆದರೆ ಈ ಡ್ರೈವರಂ ಸುಮ್ಮನೆ ಕೂರೇಕನ್ನೇ?

“ಅಕ್ಕಾ, ನೀವಲ್ಲಿ ನಿಂತಿರುವಾಗ ಬದಿಯಲ್ಲಿ ಇಬ್ರು ಕೂತ್ಕೊಂಡು ಏನು ಮಾಡ್ತಿದ್ರು ಗೊತ್ತಾ ನಿಮ್ಗೆ…?”

“ಇಲ್ವಲ್ಲಾ…ಕಲ್ಲು ಹಿಡ್ಕೊಂಡು ಅದೇನೋ ಮಾಡ್ತಿದ್ರಲ್ಲಾ?”

“ನಿಮ್ಮಂತ ಎಜುಕೇಟೆಡ್ಡುಗಳೇ ಹೀಗೆ ಹೇಳಿದ್ರೆ ಹೇಗೆ? ಅವುಗಳು ಮಹಾ ಚಾರ್ಸೌಬೀಸ್ಗಳು…,ಯಾರ್ದೋ ಮೊಬೈಲ್ ಎಗರಿಸಿ ಅದ್ರಿಂದ ಸಿಮ್ ತೆಗೆಯೋಕಾಗ್ದೆ ಕಲ್ಲಿನಲ್ಲಿ ಹೊಡೆದು ತೆಗೀತಿದ್ರು. ಇಂತವುಗಳೇ ಹಗಲೆಲ್ಲ ಮನೆಗಳ ಸುತ್ತ ಮುತ್ತ ಗುಜ್ರಿ ಹೆಕ್ಕೋ ನಾಟಕ ಮಾಡಿ ರಾತ್ರಿ ಮನೆಗಳಿಗೆ ನುಗ್ಗೋದು..ಈ ಉತ್ತರದವುಗಳು (ಉತ್ತರ ಭಾರತಂದ ಬಂದವು), ತಮಿಳರು ಬಂದು ನಮ್ಮೂರೇ ಹಾಳಾಗೋಯ್ತು…., ಇಂತವುಗಳನ್ನು ನೋಡಿದ ಕೂಡ್ಲೇ ಪೋಲೀಸ್ ಕಂಪ್ಲೇಂಟ್ ಕೊಡ್ಬೇಕು, ನಾವು ಸುಮ್ಮನೆ ಇದ್ದೇ ಇವುಗಳು ಇಷ್ಟು ಹೆಚ್ಚಿಕೊಂಡಿರೋದು….” ಇತ್ಯಾದಿ ಇತ್ಯಾದಿಯಾಗಿ ಹೇಳಿ ಎನ್ನ ತಲೆ ತಿಂದೇ ಬಿಟ್ಟತ್ತು.

ಬೇಂಕಿನೆದುರು ಇಳಿವಾಗ ಡ್ರೈವರಂಗೆ ಕ್ರತಜ್ಞತೆ ಹೇಳಿದೆ. ಕಳ್ಳರ ಬಗ್ಗೆ ಅರಿವು ಮೂಡ್ಸಿದ್ದದಕ್ಕೆ ಅಷ್ಟಾದ್ರೂ ಹೇಳದ್ರೆ ಹೆಂಗೆ?

 

ಯಬ್ಬ…, ನಮ್ಮ ಅರಬ್ಬೀ ಸಮುದ್ರವೇ ಕಪ್ಪು ಬಣ್ಣದ ಹೊದಕ್ಕೆ ಹೊದೆದು ಬೇಂಕಿನೆದುರು ಬೋಗರ್ೊರೆತ್ತಾ ಇದ್ದೋ ಹೇಳಿ ಎನಗೊಂದಾರಿ ಕಂಡತ್ತು. ಅಲ್ಲಿತ್ತಿದ್ದದು ಜನಸಾಗರ ಅಲ್ಲ, ಬುಖರ್ಾ ಸಾಗರ! ಈ ಗುಡಿಗುಮ್ಮಂಗಳ ನೋಡಿ ನೋಡಿಯೇ `ಎಂಗೋಗೆ ಇಲ್ಲಿ ಇನ್ನು ಎಂತ ಕೆಲಸ…’ಹೇಳಿ ಜಾನ್ಸಿದ ಕಾಕೆಗೋ ಈ ಊರಿಂಗೆ ಬಾರದ್ದದಾದಿಕ್ಕೊ? ಅವರ ಬೆವರು ಮಿಶ್ರಿತ ಸೆಂಟಿನ ವಾಸನೆ ಮೂಗಿಂಗೆ ಬಡುದಪ್ಪಗ ಛೆ, ಚೀಲಲ್ಲಿ ಒಂದು ಡಬ್ಬಿ ವಿಕ್ಸನ್ನೂ ಹಾಕಿಕ್ಕಲಾವ್ತಿತು ಹೇಳಿ ಕಂಡತ್ತು.

ಅಂತೂ ಆನೂ ಆ ಹನುಮಂತನ ಬೀಲದ ಒಂದು ಅಂಗವಾಗಿ ಹೋದೆ. ಎನಗೊಂದು ಅಭ್ಯಾಸ ಇದ್ದು, ಎಲ್ಲಿಯೇ ಆದ್ರೂ ಕಾಯೇಕಾಗಿ ಬಂದ್ರೆ ಎನ್ನ ಸುತ್ತಲಿನ ಪರಿಸರವ, ಜೆನರ ಸೂಕ್ಷ್ಮವಾಗಿ ಗಮನಿಸಿಯೋಂಡಿಪ್ಪದು. ಇದೊಂದು ಹವ್ಯಾಸ ಇಪ್ಪ ಕಾರಣ ಎನಗೆ ಎಲ್ಲಿಯೂ ಬೊಡುದತ್ತು ಹೇಳಿ ಆವುತ್ತಿಲ್ಲೆ. ಇಲ್ಲಿಯೂ ಅದ್ರನ್ನೇ ಮಾಡಿದೆ. ಎನ್ನಂದ ಸುಮಾರು ಏಳೆಂಟು ಜೆನಂಗಳಿಂದ ಮುಂದೆ ಒಂದು ಅಜ್ಜಮ್ಮ ನಿಂದೋಂಡಿತ್ತಿದ್ದು. ಎಪ್ಪತ್ತೋ ಎಂಭತ್ತೋ ವರ್ಷ ಆದಿಕ್ಕು. ಪಾಪ…ಇಲ್ಲಿಗೆ ಬಪ್ಪಲೆ ಮನೆಲಿ ಬೇರಾರೂ ಇಲ್ಲೆಯಾಯಿಕ್ಕು. ಅದರ ನೋಡುವಾಗ ಆಥರ್ಿಕವಾಗಿ ರಜಾ ಕಷ್ಟಲ್ಲಿಪ್ಪವರ ಹಾಂಗೇ ಕಂಡೊಂಡಿತ್ತಿದ್ದು. ಒಂದು ಕೈಲಿ ಕಪ್ಪುಕಟ್ಟಿಹೋದ ನಾರಿನ ಚೀಲ, ಇನ್ನೊಂದು ಕೈಲಿ ಕೊಡೆಯನ್ನೂ ಕೊರಳಿಂಗೆ ಒಂದು ಬಳ್ಳಿ ನೇಲ್ಸಿದ ಕುಪ್ಪಿಯನ್ನೂ ಹಿಡ್ಕೊಂಡು ಅದರಷ್ಟಕೇ ಸಣ್ಣ ಸ್ವರಲ್ಲಿ ಎಂತೋ ಮಣ ಮಣ ಹೇಳಿಯೋಂಡಿತ್ತಿದ್ದು. ಬಹುಷಃ ನಿಂದು ನಿಂದು ಬಚ್ಚಿಯಪ್ಪಗ ಪರಂಚುತ್ತದಾದಿಕ್ಕು. ಎಷ್ಟು ಹೊತ್ತಾದರೂ ಸಾಲು ಮುಂದೆ ಹೋಗದ್ದಿಪ್ಪಾಗ ಅಲ್ಲೇ ನೆಲಕ್ಕಲ್ಲಿ ಕೂದತ್ತು, ನಾರಿನ ಚೀಲದೊಳಾಂದ ಇನ್ನೊಂದು ಕುಂಞಿ ಸಂಚಿ ಹೆರ ತೆಗದತ್ತು. ಅದರಲ್ಲಿ ಹಳೆ ನೋಟುಗಳ ಅಟ್ಟಿಯೇ ಇದ್ದತ್ತು! ಅದರ ಕರೇಂಗೆ ಮಡುಗಿ ಕಾಗದಲ್ಲಿ ಸುರುಟಿ ಮಡುಗಿದ ಎಲೆ,ಅಡಕ್ಕೆ ಇತ್ಯಾದಿಗಳ ಹೆರ ತೆಗದು ಒಂದೊಂದನ್ನೇ ಬಾಯೊಳಾಂಗೆ ಹಾಕಿಕ್ಕಿ ಕೈಲಿ ಬಾಕಿ ಒಳುದ ಸುಣ್ಣವ ಗೋಡೆಗೆ ಬಳುದತ್ತು. ಮೂಗು ಸುಮುದು ಕೈಲಿಪ್ಪ ಚೀಲಕ್ಕೆ ಉದ್ದಿತ್ತು. ರಜಾ ಹೊತ್ತು ಕಳುದಪ್ಪಗ ಅದರ ಹಿಂದೆ ನಿಂದೊಂಡಿತ್ತಿದ್ದ ಎರಡು ಬ್ಯಾತರ್ಿಗಳೂ ಅಲ್ಲೇ ಕೂದವು. ಪಟ್ಟಾಂಗಕ್ಕೆ ಸುರುವಾತಯ್ಯಂ….ಈ ಅಜ್ಜಿ ಯಾವಾಗಲೋ ಸಿಕ್ಕಿದ ವಿಧವಾ ವೇತನದ ಪೈಸೆಯ ಬದಲಾಯಿಸಲೆ ಬಂದದಾಡ. ಈ ಹೊಸ ಕಾನೂನಿಂದಾಗಿ ಭೂತಾಯಿ (ಮೀನು) ತೆಗವಲೂ ಪೈಸೆ ಇಲ್ಲದ್ದಾಂಗಾಗಿ ಹೋತು…ರೇಶನಿಂಗೆ ಹೋಪಲೂ ಎಡಿತ್ತಿಲ್ಲೆ…., ಹೀಂಗೆಲ್ಲ ಅವರ ಮಾತುಕತೆ ನೆಡಕ್ಕೋಂಡಿಪ್ಪಾಗ ಮೆಲ್ಲಂಗೆ ಸಾಲು ಕರಗುತ್ತಾ ಬಂತು. ಕೂದೊಂಡಿತ್ತಿದ್ದವೆಲ್ಲರೂ ಎದ್ದವು. ತನ್ನ ಸರದಿ ಬಪ್ಪ ಮೊದಲೇ ಕೈಲಿ ಆ ನೋಟಿನ ಕಟ್ಟವ ಹಿಡ್ಕೊಂಡ ಅಜ್ಜಿ ಮುಂದಂಗೆ ಹೋಪಲೆ ನೋಡಿತ್ತು.

“ಓ ಅಜ್ಜೀರೆ…, ಅಂಚ ಪೋಯಾರ ಬಲ್ಲಿ…,ಈರ್ ಆಧಾರ್ ಕಾಡರ್ು, ಬೇಂಕುತ ಅಜರ್ಿ ಮಿನಿ ಕೊಂಡಾತಿಜ್ಜಿಯೇರಾ…?”(ಅಜ್ಜೀ, ಹಾಂಗೆಲ್ಲ ಹೋಪಲಾಗ…,ನಿಂಗೊ ಆಧಾರ್ ಕಾಡರ್ು, ಬೇಂಕಿನ ಅಜರ್ಿಗಳ ತಯಿಂದಿಲ್ಲಿರಾ) ಹೇಳಿ ಅಲ್ಲೇ ನಿಂದೊಂಡಿತ್ತಿದ್ದ ಒಂದು ಜವ್ವನಿಗ ಕೇಳಿಯಪ್ಪಗ ಅಜ್ಜಿಗೆ ಕಕ್ಕಮಕ್ಕ ಆತದ.

 

“ಅಕ್ಕ ನಮಸ್ಕಾರ…” ಹೇಳ್ತ ಸ್ವರ ಎನ್ನ ಹಿಂದಂದಲೇ ಕೇಳಿಯಪ್ಪಗ ಆನು ತಿರುಗಿ ನೋಡಿದೆ. ಮತ್ತದೇ ಅಟೋ ಡ್ರೈವರಂ! ಇದು ಇಲ್ಲಿಗೂ ಎತ್ತಿತ್ತೋ ಹೇಳಿ ಜಾನ್ಸಿಯೊಂಡೇ ಆನೂದೆ ಪ್ರತಿ ನಮಸ್ಕಾರ ಮಾಡಿ ಮತ್ತೆ ಪುನಃ ಆ ಅಜ್ಜಿಯ ಗಮನ್ಸಲೆ ಸುರು ಮಾಡಿದೆ. ಪಾಪದ ಅಜ್ಜಿಗೆ ಎಂತ ಮಾಡೇಕೂ ಹೇಳಿಯೇ ಗೊಂತಾಗದ್ದೆ ಅದರ ಚೀಲಲ್ಲಿಪ್ಪ ಎಲ್ಲಾ ಕಾಗದ ಪತ್ರಂಗಳನ್ನೂ ಪೈಸವನ್ನೂ ಆ ಜವ್ವನಿಗನೆದುರು ಹಿಡಿದತ್ತು. ಪುಣ್ಯಕ್ಕೆ ಅದರಲ್ಲಿ ಆಧಾರ್ ಕಾಡರ್ು ಇತ್ತಿದ್ದು. ಪೈಸೆ ಬದಲ್ಸೇಕಾರೆ ಬೇಂಕಿನವು ಕೊಡ್ತ ಒಂದು ಅಜರ್ಿಯ ಭತರ್ಿ ಮಾಡೇಕಲ್ದೋ? ಅಷ್ಟಪ್ಪಗ ಕೌಂಟರಿನೆದುರು ನಿಂಬ ಸರದಿ ಅಜ್ಜಿಗೆ ಸಿಕ್ಕಿತ್ತು. ಒಂದು ಕೈಲಿ ಎರ್ರಾಬಿರ್ರಿಯಾಗಿ ನೇತೊಂಡಿಪ್ಪ ನೋಟುಗಳೂ ಆಧಾರ್ ಕಾಡರ್ುದೆ, ಇನ್ನೊಂದು ಕೈಲಿ ಚೀಲವನ್ನೂ ಹಿಡ್ಕೊಂಡ ಅಜ್ಜಿಯ ನೋಡಿ ಪೈಸೆ ಕೊಡ್ತ ಕೌಂಟರಿಲ್ಲಿತ್ತಿದ್ದ ಹೆಮ್ಮಕ್ಕೋಗೆ ಕನಿಕರ ಉಕ್ಕಿತ್ತು ಹೇಳಿ ಕಾಣ್ತು. ಆಧಾರ್ ಕಾಡರ್ಿಲ್ಲಿ ಅಜ್ಜಿಯ ಹೆಬ್ಬೆಟ್ಟು ಒತ್ತುಸಿಯೋಂಡು ಬೇಂಕಿನ ಅಜರ್ಿಲಿ ಅಜ್ಜಿಯ ವಿವರ ಎಲ್ಲ ಕೇಳಿ ಬರದತ್ತು. ಈ ಎಲ್ಲ ಬೆಳವಣಿಗೆಂದಾಗಿ ಅಜ್ಜಿ ಒಟ್ಟಾರೆ ಕಂಗಾಲಾಗಿ ಹೋತು. ನೋಟುಗಳ ಅಟ್ಟಿಯನ್ನೇ ಕೌಂಟರಿನೊಳಾಂಗೆ ತುರ್ಕುಸಿತ್ತು. ಅಷ್ಟಪ್ಪಗ ಒಂದು ಅನಿರೀಕ್ಷಿತ ಘಟನೆ ನಡೆದು ಹೋತು. ಅಜ್ಜಿಯ ಕೈಂದ ಒಂದು ಐನೂರರ ನೋಟು ಕೆಳಾಂಗೆ ಬಿದ್ದತ್ತು. ಅದು ಅಜ್ಜಿಯ ಗಮನಕ್ಕೆ ಬಯಿಂದೇ ಇಲ್ಲೆ. ಆದರೆ ಯಾವ ಮಾಯಲ್ಲಿಯೋ ಆ ಅಟೊ ಡ್ರೈವರಂ ಸರ್ರನೆ ಅಲ್ಲಿಗೆ ಹಾಜರಾಗಿ ಪುಸುಕ್ಕನೆ ಆ ನೋಟಿನ ಬಾಚಿ ತಕ್ಕೊಂಡು ಬಂದಷ್ಟೇ ಬೇಗ ಮಾಯವಾಗಿ ಹೋತು. ಕಾಲು ಸರಿಯಾಗಿ ಹಂದಾಡ್ಸಲೂ ಜಾಗೆ ಇಲ್ಲದ್ದಾಂಗಿಪ್ಪ ಆ ರಶ್ಶಿಲ್ಲಿ ಅಟೋ ಡ್ರೈವರನ ಚಾಣಾಕ್ಷತೆಯ ನೋಡಿ ಆನು ಗೆಬ್ಬಾಯ್ಸಿ ಹೋದೆ. ಅಲ್ಲಿತ್ತಿದ್ದ ಒಳುದ ಗ್ರಾಯಕಿಗೊಕ್ಕೆ ಅದು ಗಮನಕ್ಕೆ ಬಾರದ್ದದೋ ಅಥವಾ ಅವರವರ ತಲೆಬೆಶಿಲಿ ಇದರ ಆರೂ ದೊಡ್ಡ ವಿಷಯ ಮಾಡದ್ದದೋ ಗೊಂತಿಲ್ಲೆ. ಎನ್ನ ಸರದಿ ಬಂದು ಆನು ಪೈಸೆ ತೆಕ್ಕೊಂಡು ಮನೆಗೆ ಎತ್ತಿದ ನಂತ್ರವೂ ಎಷ್ಟೋ ಹೊತ್ತಿನವರೆಗೆ ಎನ್ನ ಮೆದುಳು ಪ್ರಶ್ನೆ ಮಾಡಿಯೊಂಡೇ ಇತ್ತಿದ್ದು,

`ಕಡುಬಡತನಲ್ಲಿ ಕಳ್ಳತನಕ್ಕಿಳಿದ ಆ ಅಬ್ಬೆ,ಮಗ, ಅವರ ತಾರಾಮಾರಾ ಬೈದ ಆ ಡ್ರೈವರಂ, ದಾತಾರರು ಇಲ್ಲದ್ದ ಅಜ್ಜಿಯ ಪೈಸೆ ಬಿದ್ದದು ಕಂಡಪ್ಪಗ ಅದು ನೆಡೊಕ್ಕೋಂಡ ರೀತಿ, ಈ ಎಲ್ಲದಕ್ಕೂ ಜೀವಂತ ಸಾಕ್ಷಿಯಾಗಿದ್ದೂ ಚಕಾರ ಎತ್ತದ್ದ ಆನು- ಈ ಮೂವರಲ್ಲಿ ನಿಜವಾದ ಸುಭಗ ಆರು…??’

 

 

 

12 thoughts on “ಸುಭಗ ಆರು…?

  1. ಅಪ್ಪು ಬಾವ. ಹಿಂಗಿದ್ದ ಹಲವು ಸಂದರ್ಭಲ್ಲಿ ಎನ್ನ ಮನಸ್ಸಿಲ್ಲಿಯೂ ಅದೇ ಪ್ರಶ್ನೆಗೊ ಎದ್ದು ನಿಂದದಿದ್ದು. ಅವರವರ ಮನೋಭಾವಕ್ಕೆ ತಕ್ಕ ಹಾಂಗೆ ಉತ್ತರವೂ ಸಿಕ್ಕುಗು ಹೇಳುವೊಂ.

  2. ಅದೇಗ … ಹಲವಾರು ಸಂದರ್ಭಲ್ಲಿ ನಾವು ಕೆಲವು ಘಟನೆಗೊಕ್ಕೆ ಮೂಕಪ್ರೇಕ್ಷಕರಾಗಿ ಆಗಿ ಹೋವ್ತು. ಎಂತಕೇದರೆ ನಾವು ಹುಲು ಮಾನವರು. ನಮ್ಮ ಕೆಲಸ ಆಯೇಕು ಜಾರೆಕು ಸುಭಗ ಆಯೇಕು ಹೇಳ್ಸು ಒಂದೇ ನಮ್ಮ ತಲೆಲಿ. ಆದರೆ ನಿಂಗೊ ಹೇಳ್ತಾಂಗೆ ಈಗ ಸುಭಗ ಆರು?!! ಅವನೋ ಇವನೋ ಆಚವನೋ!!! ಒಪ್ಪ ಕತೆ

  3. ಈಗಾಣ ಕಾಲಲ್ಲಿ ,ಹೀಂಗಿದ್ದ ಸಂದರ್ಭಲ್ಲಿ; ಮನಸ್ಸಿಲ್ಲಿ ಏವ ಭಾವನೆ ಸುಳುದರೂ ತಳಿಯದ್ದೆ ಕೂಬ್ಬದೇ ಸುಭಗತನವೋ!

    1. ನೀನು ಆ ಕ್ಷಣಲ್ಲಿ ಡ್ರೈವರನ ಕೆಲಸ ನೋಡಿ, ತಳಿಯದ್ದೇ ಕೂದ್ದದೆ ಸಮಯೋಚಿತ. ಶೀಲಾ,ಅದೀಗ ಅಲ್ಲಿಂದ ಬಹುಬೇಗ ಪರಾರಿಯಾದರೂ ಕೆಲವು ಸರ್ತಿ ಮಾತಾಡುವ ಸಂದರ್ಭ ಬಂದರೂ ಆರಾರದೋ ವಿಷಯಕ್ಕೆ, ನಾವು ಮಾತಾಡ್ಳೆ ಹೋದರೆ, ನಮ್ಮ ಸಮಯವೂ ನಮ್ಮ ಮನೋಸ್ಥಿತಿಯೂ ಏರುಪೇರು!.

      1. ಹೂಂ. ಅಪ್ಪು ವಿಜಯಕ್ಕ. ಮತ್ತೊಂದು ವಿಷಯ ಎಂತರ ಹೇಳಿರೆ ಮನುಷ್ಯನ ಸ್ವಕೇಂದ್ರಿತ ಮನೋಭಾವ ಎಚ್ಚರಿಕೆಲಿಪ್ಪಷ್ಟು ಹೊತ್ತು ಪರ ಚಿಂತನೆ ಜಾಗೃತಿ ಅವುತ್ತೆ ಇಲ್ಲೇ. ಆದರೂ ಅಹಂ ಹೇಳುದು ಅದರ ತಡೆತ್ತೋ ಏನೋ ….

  4. ಖುಷಿಯ ಮಾತುಗೊಕ್ಕೆ ಧನ್ಯವಾದಂಗೊ ಗೋಪಾಲಣ್ಣ. ಅಪ್ಪು. ನಮ್ಮ ಈ ಬೈಲಿಲ್ಲಿಯೇ ಒಬ್ಬರು ಸುಭಗಣ್ಣ ಇದ್ದವಲ್ದಾ? ಶಿರೋನಾಮೆ ಆಯ್ಕೆ ಮಾಡುವಾಗ ಅದ್ರನ್ನು ನೆಂಪು ಮಾಡಿಯೊಂಡಿತ್ತಿದ್ದೆ. demonetisation ಬಗ್ಗೆ ಮೋದಿ ಅಜ್ಜ ಯಾವ ವೇದಿಕೆಲಿ ನಿಂದೊಂಡು ರಾಷ್ಟ್ರವ ಉದ್ದೇಶಿಸಿ ಮಾತಾಡಿತ್ತೋ ಅದೇ ವೇದಿಕೆಂದ bank employees ಗಳನ್ನೂ ಉದ್ದೇಶಿಸಿ ಮಾತಾಡಿ ಅವರ ಅವಿರತ ಶ್ರಮಕ್ಕೆ , ಗ್ರಾಹಕರಿಂಗೆ ಅವು ಕೊಟ್ಟ ಸಹಕಾರಕ್ಕೆ ಒಂದೇ ಒಂದು ಶಹಬಾಸ್ಗಿರಿ ಕೊಡ್ತಿದ್ರು ಸಾಕಾವ್ತಿತು. ಕಾಸರಗೋಡಿನ ಜನಸಾಮಾನ್ಯರಿಂಗೆ ಅದೊಂದು ನಿರೀಕ್ಷೆ ಇತ್ತಿದ್ದು.

  5. ನಿಜವಾಗಿಯೂ ಮನಸ್ಸಿಲ್ಲಿ ಬಂದದು ಅಪ್ಪು “ಸುಭಗ” ಆರು ಹೇಳಿ. ಶೀಲಕ್ಕ ಬರವ ಶೈಲಿ ನಿಜವಾಗಿಯೂ ಅದ್ಭುತ. ಒಳ್ಳೆ ಓದುಸೆಂಡು ಹೋವ್ತು. ರಿಕ್ಷಾ ಡ್ರ್ರೈವರು ಅಜ್ಜಿಗೆಂತಾರೂ ಸಹಾಯ ಮಾಡುಗೋ ಹೇಳಿ ಗ್ರೇಶುವಗ, ಅದರ ಕುರೆ ಬುದ್ದಿ ಕಂಡು ಬೇಜಾರಾತು.
    ಬೇಂಕಿನವರ ಸರ್ವೀಸಿನ ಹೊಗಳಿದ್ದು ಕಂಡು ಕೊಶಿಯಾತದ !! ಈ ಶುದ್ದಿಯ ಶಿರೋನಾಮೆಯೇ ಆಕರ್ಷಕ. ಸುಭಗ ಆರು ? ಪ್ರಶ್ಣೆಗೆ ನಮ್ಮ ಒಪ್ಪಣ್ಣ ಕಾರ್ಯಕ್ರಮಕ್ಕೆ ನಿಂಗೊ ಬಂದಿದ್ರೆ ಗೊಂತಾವ್ತಿತು ಹೇಳಲೆ ಇದ್ದ ಎನಗೆ, ಈಗ ದಮ್ಮಿಲ್ಲೆ !!

  6. ಸರಿಯಾಗಿ ಹೇಳಿದಿರಿ ಶರ್ಮಪ್ಪಚ್ಚಿ, ಧನ್ಯವಾದಂಗೊ.

  7. ಕಣ್ಣೆದುರೇ ನಡೆದ ಘಟನೆಗೆ ನಾವು ಸಾಕ್ಷಿ ಆಗಿರ್ತೇ ವಿನಃ ಕೆಲವೊಂದು ಸರ್ತಿ ಅದಕ್ಕೆ ಸರಿಯಾಗಿ ಸ್ಪಂದಿಸಲೆ ಎಡಿಯದ್ದೆ, ಘಟನೆ ಪುನಃ ನೆಂಪಪ್ಪಗ ಪಾಪ ಪ್ರಜ್ಞೆ ಬತ್ತು.
    ನಿರೂಪಣೆ ಲಾಯಿಕ ಆಯಿದು.

  8. ತುಂಬಾ ಒಳ್ಳೆದಾಯ್ದು ಅತ್ತೇ….ನಿರೂಪಣೆ ಯೂ ಲಾಯ್ಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×