Oppanna.com

ಹೀಂಗೊಂದು ಯೋಚನೆ

ಬರದೋರು :   ಕೇಜಿಮಾವ°    on   16/01/2011    21 ಒಪ್ಪಂಗೊ

ಮೊನ್ನೆ ಹೇಳಿರೆ ಒಂದು ವಾರದ ಹಿಂದೆ ಮಗನ ಬಿಡ್ಳೆ ಹೇಳಿ ಬಸ್ ಸ್ಟೇಂಡಿಂಗೆ ಹೋಗಿತ್ತಿದ್ದೆ.ಅಲ್ಲಿ ಬಸ್ಸಿಂಗೆ ಕಾದೊಂಡಿಪ್ಪಾಗ ಎಂತಕೋ ಒಂದು ರಜಾ ಬೇಜಾರಾದ ಹಾಂಗಾತು.ಮಕ್ಕೊ ಕೆಲಸಕ್ಕೆ ಸೇರಿದ ಮೇಲೆ ನಮ್ಮಂದ ದೂರ ಹೋದ ಹಾಂಗೇ ಅಲ್ಲದೋ.ಮನ್ನೆ ಮನ್ನೆ ’ಆಪ್ಪ° ಬಿಸ್ಕೂಟ್ ಬೇಕು ಚೋಕ್ಲೇಟು ಬೇಕು ಹೇಳಿಯೊಂಡು ನಮ್ಮ ಹಿಂದೆಯೇ ಬಂದೊಂಡಿದ್ದವ° ಇವನೆಯೋ ಹೇಳಿ ಆಶ್ಚರ್ಯ ಅಪ್ಪಷ್ಟು ಬೇಗ ಬೆಳೆತ್ತವದಾ ಮಕ್ಕೋ.ಯೇವಗಳೂ ಬಸ್ ಟಿಕೆಟ್ ತೆಗದು ನಾವೇ ಕೊಡೆಕ್ಕಿತ್ತು,ಈಗ ಹೋಪಲೂ ಟಿಕೆಟ್ ತೆಕ್ಕೊಂಡಿದೆ ಹೇಳುವಾಗ ಏನೋ ಒಂದು ಕಳಕ್ಕೊಂಡ ಹಾಂಗಾತು ನವಗೆ.
ಎನ್ನ ಅಪ್ಪ ಅಮ್ಮಂಗೂ ಹೀಂಗೇ ಆಗಿಕ್ಕಲ್ಲದೋ ಮಕ್ಕೊ ಒಬ್ಬೊಬ್ಬನೇ ಕೆಲಸ ಹೇಳಿ ಮನೆ ಬಿಟ್ಟು ಹೋಪಗ?
ಆದರೆ ನವಗೆ ಮನಗೆ ಬಪ್ಪಗ ಅಪ್ಪ° ಅಮ್ಮ ಮನೆಲಿಕ್ಕು.ಎನ್ನ ಮಗಂಗೇ ಆದಾರೂ ಅವ° ಮನಗೆ ಬಪ್ಪಾಗ ನಾವು ಕಾದೊಂಡಿಕ್ಕು.ಮೀವಲೆ ಬೆಶಿ ನೀರು,ಊಟಕ್ಕೆ ಅವಂಗೆ ಪ್ರೀತಿಯ ಬೆಂದಿ ಎಂತಾರೂ ಮಾಡಿ.ಅವಂಗೆ ಬಪ್ಪಂಕಾಯಿ ಇಷ್ಟ ಹೇಳಿ ಆ ಕರೀಮನ ಅಂಗ್ಡಿಂದಾದರೂ ತಂದು ಮಡ್ಗು.ಕಲ್ತೊಂಡಿಪ್ಪಗಾದರೆ ಬಂದರೆ ಒಂದು ತಿಂಗಳೋ ಒಂದೂವರೆ ತಿಂಗಳೋ ಇಕ್ಕು.ಇನ್ನು ಕೆಲಸಲ್ಲಿ ಹಾಂಗೆಲ್ಲಾ ರಜೆ ಸಿಕ್ಕಾಡ.ಬಂದ° ಹೋದ° ಹೇಳ್ತ ಹಾಂಗೆ.ಎರಡು ದಿನಕ್ಕೆ ಬಂದರೆ ಹೆಚ್ಚು.
ಹಾಂಗಾರೆ ಒಬ್ಬ ಮಗ ಆದರೂ ಆರು ಜೆನ ಆದರೂ ಅಪ್ಪ ಅಮ್ಮಂಗೆ ಅಖೇರಿಗೆ ಆರೂ ಇಲ್ಲೆಯೋ ಹೇಳ್ತ ಕಥೆ.ಮಕ್ಕೊಗಾದರೂ ಅಷ್ಟೆ,ಊರಿಲ್ಲಿ ಇದ್ದರೆ ಹೊಟ್ಟೆ ಗತಿ ಎಂತ?
ಹೀಂಗೆಲ್ಲ ಯೋಚನೆ ಮಾಡಿಯೊಂಡು ನಾವು ಒರಗಿತ್ತು.ಮರದಿನ ಕೆಲಸಕ್ಕೆ ಹೋಯೆಕ್ಕಲ್ಲದೋ?ಬಸ್ಸಿಳುದು ನಮ್ಮ ಸತೀಶನ ಅಂಗ್ಡಿಲಿ ಎರಡು ಬಾಯಿ ಮಾತಾಡಿ ಹೋವುತ್ತು ನಮ್ಮ ಯಾವಗಾಣ ಕ್ರಮ,ಹಾಂಗೆ ಹೋದವಂಗೆ ಗೊಂತಾದ ಸುದ್ದಿ ಆರೂ ಕೇಳ್ಲಾಗದ್ದದು.ನಾಲ್ಕು ವರ್ಷಂದಲೇ ಏನೋ ಸೌಖ್ಯ ಇಲ್ಲೆ ಹೇಳಿ ಗೊಂತಿತ್ತು,ಈಗ ಗುಣ ಆಯಿದು ಹೇಳಿಯೊಂಡಿತ್ತಿದ್ದವಪ್ಪ.ಮನ್ನೆ ಮಗಂಗೆ ಮದ್ದಿಂಗೆ ಹೇಳಿಯೂ ಬಂದಿತ್ತಿದ್ದ°.ಕಾಂಬಗ ಸರಿಯಾಗೇ ಇತ್ತಿದ್ದನುದೇ.ಮತ್ತೆ ನಾವು ಕೇಳ್ಲಾವುತ್ತೋ,ನಿನಗೆ ಎಂತಾದ್ದದು ಹೇಳಿ.ಸಣ್ಣ ಪ್ರಾಯವುದೇ.ಮದುವೆ ಆಗಿ ಒಂದು ಹತ್ತೊರುಷ ಆಯಿಕ್ಕು,ಎರಡು ಮಕ್ಕಳುದೇ ಇದ್ದವು.
ಅದೇ,ಎಂಗಳ ಬರೆ ಹಲ್ಲಿನ ಡಾಕ್ಟ್ರು,ಉದಿಯಪ್ಪಗ ಬೆಂಗ್ಳೂರಿಲ್ಲಿ ಬಾರದ್ದ ಊರಿಂಗೆ ಹೋಗಿಯೇ ಬಿಟ್ಟ° ಹೇಳಿ.
ಅಂಬಗ ಕಂಡತ್ತು ನವಗೆ,ನಾವು,ಹೇಳಿರೆ ದೊಡ್ಡ ಆದ ಮಕ್ಕೊ ಇಪ್ಪೋರು,ಎಷ್ಟು ಭಾಗ್ಯಶಾಲಿಗೊ.ಮಕ್ಕೊ ಆಗಿ,ಅವರ ಬಾಲ್ಯದ ಆಟಂಗಳ ನೋಡಿತ್ತು.ಶಾಲಗೆ ಕಳುಸಿತ್ತು,ಎನಗೆ ನಿನ್ನೆಯೋ ಹೇಳುವಷ್ಟು ಸ್ಪಷ್ಟವಾಗಿ ನೆಂಪಿದ್ದು,ಮಧ್ಯಾಹ್ನ ಉಂಡಿಕ್ಕಿ ಕೈ ಹಿಡ್ಕೊಂಡು ಮಗನ ಹತ್ತರೇ ಇಪ್ಪ ಶಾಲಗೆ ಕರಕ್ಕೊಂಡು ಹೋಗಿಯೊಂಡಿತ್ತಿದ್ದದು.
ಅದೇ ಆ ಮಾಣಿಯ ನೆಂಪಾತು,ನಮ್ಮ ಹಲ್ಲಿನ ಡಾಕ್ಟ್ರ ಮಗ°,ಎರಡ್ಣೇ ಕ್ಲಾಸಿಲ್ಲಿಕ್ಕು,ಅವನ ಆರು ಕರಕ್ಕೊಂಡು ಹೋಕಪ್ಪಾ,ಮನಗೆ ಬಪ್ಪಾಗ ಅಮ್ಮ ಇಕ್ಕು,ಆದರೆ ಕಸ್ತಲೆ ಅಪ್ಪಗ ಅಪ್ಪ° ಏಕೆ ಬಯಿಂದಾಯಿಲ್ಲೆ ಹೇಳಿ ಕೇಳುವಾಗ ಆ ಅಮ್ಮಂಗೆ ಎಷ್ಟು ಸಂಕಟ ಅಕ್ಕಪ್ಪಾ.ಸಂತಗೋ ಜಾತ್ರಗೋ ಆರು ಕರಕ್ಕೊಂಡು ಹೋಕಪ್ಪಾ ಹೇಳಿ ಗ್ರೇಶುವಾಗ ನಾವು ನಿಜವಾಗಿ ಪುಣ್ಯ ಮಾಡಿಕ್ಕು,ಈ ಜನ್ಮಲ್ಲಿ ಮಾಡಿದ್ದಿಲ್ಲೆ,ಹಿಂದಾಣ ಜನ್ಮಲ್ಲಿ ಆಯಿಕ್ಕು.ಮಕ್ಕೊ ದೊಡ್ಡ ಅಪ್ಪದರ ನೋಡಿದ್ದು,ಕಲಿಶಿದ್ದು,ಕೆಲಸವೂ ಸಿಕ್ಕಿದ್ದು.ಅಪ್ಪ ಅಮ್ಮನೂ ನಮ್ಮ ನೋಡಿಯೊಂಡಿದವು,ಸಣ್ಣ ಪ್ರಾಯಲ್ಲಿ ಮನಗೆ ಬಪ್ಪಗ ಅಪ್ಪ° ಅಮ್ಮ ಇಲ್ಲೆ ಹೇಳಿ ಆಯಿದಿಲ್ಲೆ,ಹಾಂಗಾರೆ ನವಗೆ ಏನೂ ಕಮ್ಮಿ ಆಯಿದಿಲ್ಲೆ,ಆರೋಗ್ಯವೂ ತಕ್ಕ ಮಟ್ಟಿಂಗೆ ಲಾಯಕಿದ್ದು,ಇನ್ನೆಂತ ಬೇಕು?
ಅಂಬಗ ನೆಂಪಾತು,ನಾವು ದೇವರು ಕೊಟ್ಟ ಸಣ್ಣ ಸಣ್ಣ ಸಂತೋಶಂಗಳನ್ನೂ ಯೋಚನೆ ಮಾಡದ್ದೆ ಅನುಭವಿಸುತ್ತು,ಅಲ್ಲದೋ?ನಾವಿಂದು ಇಷ್ಟು ಆರೋಗ್ಯವಾಗಿಪ್ಪಾಗ ಅದರ ಮಡಿಕ್ಕೊಂಬಲೆ ಒಂದು ರಜ ಪ್ರಯತ್ನ ಮಾಡೆಕ್ಕಾಗಿ ಬಂದರೆ ಆಕಾಶ ತಲೆ ಮೇಲೆ ಬಿದ್ದ ಹಾಂಗೆ ಮಾಡ್ತದು ಎಂತಕೆ?ಇಂದು ಮಗ° ಕೆಲಸಕ್ಕೆ ಹೋವುತ್ತ°,ಮದಲಾಣ ಹಾಂಗೆ ಸಿಕ್ಕ° ಹೇಳಿ ಯೊಚನೆ ಮಾಡ್ಳಾದ್ದದು,ಬೇಜಾರವೇ ಆದರೂ ಮಾಡ್ಳಾದ್ದದು ಅರೋಗ್ಯ ಇದ್ದ ಕಾರಣ ಅಲ್ಲದೋ?ಪೈಸದ ಹಿಂದೆಯೇ ಹೋದರೆ ಇದಕ್ಕೆಲ್ಲ ಪುರುಸೊತ್ತಿಕ್ಕೋ?ನಾವು ಹೀಂಗಿಪ್ಪದೇ ಒಳ್ಳೆದು,ಪೈಸ ರಜ ಕಮ್ಮಿ ಆದರೂ ಅಕ್ಕು,ಆರೋಗ್ಯ ಸರಿ ಇದ್ದು ಮಕ್ಕಳೋ ಅಣ್ಣ ತಮ್ಮಂದ್ರೋ ಅಕ್ಕ ತಂಗೆಯಕ್ಕಳೋ ಬಪ್ಪಾಗ ನೆಗೆ ಮಾಡಿ ಮಾತಾಡುವಷ್ಟು ಮನಸ್ಸೂ,ತಕ್ಕ ಮಟ್ಟಿಂಗೆ ಅನುಕೂಲವೂ ಇದ್ದರೆ ಸಾಕಪ್ಪಾ.

ಕೇಜಿಮಾವ°
Latest posts by ಕೇಜಿಮಾವ° (see all)

21 thoughts on “ಹೀಂಗೊಂದು ಯೋಚನೆ

  1. ಇದು ಕುದ್ಕ° ದ್ರಾಕ್ಶೆ ಹುಳಿ ಹೇಳಿದ ಹಾಂಗೆ ಹೇಳಿ ಕಾಣ್ತು.ಮಕ್ಕೊ ಫೈಲ್ ಆಗಿ ಮನೆಲಿ ಕೂದ್ದದು ಅಪ್ಪಂಗೆ ಸಂತೋಷ ಹೇಳಿ ಆದರೆ ಅಷ್ಟು ಸ್ವಾರ್ಥಿ ಅಪ್ಪಲಾಗ ಹೇಳಿ ಆನು ಹೇಳುವೆ.ಅವು ಒಳ್ಳೆ ಮಾರ್ಕು ತೆಗದು ಕಲ್ತು ಮನೆಲಿ ಕೂದರೆ ಸಂತೋಷ ಆದರೆ ಸರಿ.ಅಂಬಗ ಮಕ್ಕೊ ನಮ್ಮ ಬಿಟ್ಟು ಹೋಕು ಹೇಳಿ ಕಲಿಶದ್ದೆ ಇದ್ದರೆ ಹೇಂಗಕ್ಕು?ಅಪ್ಪಂದ್ರ ಖುಷಿ ಮಕ್ಕಳ ಗುರಿ ಆಅದರೆ ದೇವರೇ ಗತಿ.ಮಕ್ಕಳ ಖುಷಿಲಿ ಹೆತ್ತವಕ್ಕೆ ಖುಷಿ ಆಯೇಕ್ಕಾದ್ದು ನ್ಯಾಯ.ಕಲಿಯದ್ದೆ ಎನ್ನ ಮಗ ಎನ್ನೊಟ್ಟಿಂಗಿರಲಿ ಹೇಳಿ ಆನು ಖಂಡಿತಾ ಯೋಚನೆ ಕೂಡಾ ಮಾಡೆ.

    1. ಆಗ ಅವಕ್ಕೆ ಬೇಜಾರು ಆದಿಕ್ಕು, ಆದರೆ ಈಗ ಕುಶಿಲಿ ಇದ್ದ ಹಾಂಗೆ ಕಂಡತ್ತು!

      1. ಅವು ಭಾರೀ ಸೆಲ್ಫಿಶ್ ಆಗಿರೆಕ್ಕು.ಮಕ್ಕೊ ನಮ್ಮ ನೋದಿಯೊಳೆಕ್ಕಾದು ಅವರ ಕರ್ತವ್ಯ ಅಲ್ಲವೇ ಅಲ್ಲ.ಅವರ ಹುಟ್ಟಿಲ್ಲಿ ಮಕ್ಕಳ ಪಾತ್ರ ಏನೂ ಇಲ್ಲದ್ದ ಕಾರಣ ಅವರ ಹುಟ್ಟಿಂಗೆ ಕಾರಣರಾದವು ಏನೂ ಬಯಸುಲಾಗ.ನಾವು ಮಕ್ಕಳ ಸರಿಯಾಗಿ ಬೆಳೆಶಿದ್ದೇ ಆದರೆ ಅವು ನಮ್ಮ ನೋಡಿಯೊಂಗು,ಇಲ್ಲದ್ದರೆ ನಮ್ಮದೇನೋ ತಪ್ಪಿದ್ದು ಹೇಳಿಯೇ ಅರ್ಥ ವಿನಃ ಅವರ ತಪ್ಪಲ್ಲ.
        ನಿಂಗೊ ಹೇಳ್ತ ಅಪ್ಪಂದ್ರು ಈಗ ಸಂತೋಷಲ್ಲಿದ್ದೆಯೋ° ಹೇಳಿ ಗ್ರೇಶಿಗೊಂಡಿದವಷ್ಟೆ.
        ನಾವು ಮಕ್ಕಒಗೆ ಕಲಿಶೆಕ್ಕದ್ದರ ಕಲಿಶದ್ದೆ ಮಕ್ಕಳ ದೂರುದು ಶುದ್ಧ ತಪ್ಪು,ಮತ್ತೆ ಅವರವರ ಭಾವಕ್ಕೆ ಹೇಳ್ತ ಹಾಂಗೆ.

        1. ಮಕ್ಕಳ ಬೆಳೆಸಿ ಸಂಸ್ಕೃತಿ,ವಿದ್ಯಾಭ್ಯಾಸ ಕೊಟ್ಟು,ಅವು ನಮ್ಮಿಂದ ಒಂದು ಸ್ಟೆಪ್ ಮೇಲೆ ಸಮಾಜಲ್ಲಿ ನಿಲ್ಲುವ ಹಾಂಗೆ ಮಾಡುವದರಲ್ಲಿ ಅಬ್ಬೆ/ಅಪ್ಪ ತೃಪ್ತಿ ಕಾಣಕು,ಅವರ ಬಗ್ಗೆ ನಮ್ಮದು ಆದಷ್ಟೂ ಕರ್ತವ್ಯಪ್ರಜ್ಞೆ ಇರಕಷ್ಟೆ ಹೊರತು ಮಮಕಾರ ಇಪ್ಪಲೆ ಆಗ.ಮಮಕಾರ ಯಾವತ್ತೂ ದುಃಖಕ್ಕೆ ಕಾರಣ ಆವುತ್ತು.ಇದು ಜಸ್ಟ್ ಐಡಿಯಲಿಸ್ಟಿಕ್ ಥಿಂಕಿಂಗ್, ವಾಸ್ತವಲ್ಲಿ ಕಷ್ಟಸಾಧ್ಯ.

          1. ಸತ್ಯ,ಅದರೆ ಮಕ್ಕೊ ಸಣ್ಣ ಆಗಿಪ್ಪಗ ನಾವು ಅವರ ಹೇಂಗೆ ಬೆಳೆಶಿದ್ದು ಹೇಳ್ತದರ ಮೇಲೆ ಎಲ್ಲ ಅವಲಂಬಿಸಿರ್ತು.ಕೆಲವು ಮಕ್ಕೊ ಪರಿಸರದ ಪ್ರಭಾವಂದಲೋ ಅಥವಾ ಸಹವಾಸಂದಲೋ ಸ್ವರ್ಥಿಗೊ ಅಪ್ಪಲೆ ಸಾಧ್ಯ ಇದ್ದು.ಅಲ್ಲದ್ದರೆ ಅವಕ್ಕೆ ಅವರ ಜವಾಬ್ದಾರಿ ಖಂದಿತ ಅರ್ಥ ಆಗಿರ್ತು.ಒಬ್ಬ° ಮಾಣಿಯ ಹತ್ತರೆ ಆನು ವೃದ್ಧಾಶ್ರಮಲ್ಲಿಪ್ಪ ಯೋಚನೆ ಹೇಳುವಾಗ ಅವ° ಎನ್ನ ಬೈದ್ದ.ಅಪ್ಪೋ ದಾಕ್ಟ್ರೆ ಎಂಗೋ ಅಷ್ಟೂ ಸ್ವರ್ಥಿಗೋ ಹೇಳಿ ಅವಮಾನ ಮಾಡ್ತಾ ಇದ್ದಿ,ಹಾಂಗಾರೆ ನಿಂಗೊ ಕಲಿಶಿದ್ದು ಎಂಗೊ ಮರದ್ದಿಯೊ° ಹೇಳಿ ನಿಂಗಳ ಅಭಿಪ್ರಾಯವೋ ಹೇಳಿ ಸೀರಿಯಸ್ ಆಗಿ ಕೇಳಿದ°.ಅಂಬಗ ಎನಗೆ ಈಗಾಣ ಮಕ್ಕಳ ಪ್ರೌಢಿಮೆಯ ಬಗ್ಗೆ ತಿಳುವಳಿಕೆ ಬಂತು,ಎಲ್ಲೋರೂ ಒಂದೇ ಹಾಂಗೆ ಇಕ್ಕು ಹೇಳ್ಲೆ ಬತ್ತಿಲ್ಲೆ ಆದರೆ ಹೆಚ್ಚಿನವು ಹಿಂದಾಂಅ ತಲೆಮಾರಿಂದ ಜಾಸ್ತಿ ಯೋಚನೆ ಮಾಡ್ತವು ಹೇಳಿ ಎನ್ನ ಅನುಭವ.

        2. ಮೊನ್ನೆ ಕೆಳಾಣ ಈಚಣ್ಣ ಅವನ ಪಿಯುಸಿಲಿಪ್ಪ ಮಾಣಿಯ ಹತ್ರೆ ಹೇಳ್ಯೋಂಡಿತ್ತಿದ್ದ – ಅಣ್ಣೋ, ನೀನು ಓದಿ ಉಷಾರಿ ಆದರೆ ನಿನಗೆ ಒಳ್ಳೇದು. ಪೈಲು ಆದರೆ ಎನೆಗೆ ಒಳ್ಳೇದು. ನೀನೇ ನಿಘಂಟು ಮಾಡು!!.ಫಕ್ಕ ನೆಂಪಾತು.

  2. “ಅಪ್ಪೋ ಬಾವ, ನಮ್ಮ ಮಕ್ಕೋ ಸರಿಯಾಗಿ ಓದದ್ದೇ ಫೈಲು ಆದ್ದು ಒಳ್ಳೆದೇ ಆತು, ಇಲ್ಲದ್ರೆ ಅವುದೆ ಬೆಂ ಗ್ಳೂರಿಲಿಯೊ, ಅಮೆರಿಕಲ್ಲಿಯೋ ಇದ್ದರೆ ಈ ಜಾಗೆಯ ಎಂಥ ಮಾಡೊದು” – ಇದು ಒಂದು ಜೆಂಬರಲ್ಲಿ ಇಬ್ರು ಮಾತಾಡಿಕೊಂಡು ಇದ್ದದು. ಅವರ ನೋಡುವಾಗ ಅವ್ರ ಆರೋಗ್ಯ, ಖುಷಿ ಎಲ್ಲವುದೇ ದೂರಲ್ಲಿ ಇಪ್ಪ ಮಕ್ಕಳ ಅಬ್ಬೆ ಅಪ್ಪಂದ್ರಿಂದ ಹೆಚ್ಚು ಹೇಳಿ ಕಂಡತ್ತು.

  3. ನಿಂಗಳ ಲೇಖನ ಮನಸ್ಸಿಂಗೆ ತಟ್ಟಿತ್ತು ಮಾವ! ಹಳೇ ನೆನಪುಗಳ ಮುಟ್ಟಿತ್ತು.. ದಿನಾ ಮೋರೆ ನೋಡ್ತ ಒಂದು ಜೀವ ಇದ್ದಕ್ಕಿದ್ದ ಹಾಂಗೆ ಮರೆಯಾದರೆ ಅಪ್ಪ ವೇದನೆ ಅನುಭವಿಸಿ ಗೊಂತಿದ್ದು, ಆ ಜೀವದ ಹೆತ್ತವರ ಸಂಕಟ ಇಂದಿಂಗೂ ನೋಡ್ಲೆಡಿತ್ತಿಲ್ಲೆ.. ಹಾಂಗಿಪ್ಪಾಗ ಸಣ್ಣಾಗಿಪ್ಪಾಗಿಂದ ಎತ್ತಿ ಆಡ್ಸಿ ಬೆಳೆಶಿ ಮಕ್ಕೊಗೋಸ್ಕರವೇ ಬದ್ಕುತ್ತ ಹಿರಿಯ ಜೀವಂಗಳ ಅಸಡ್ಡೆ ಮಾಡ್ತ ಕೆಲವು ಮಕ್ಕಳ ಕಂಡಪ್ಪಗ ಹೊಟ್ಟೆ ಉರಿತ್ತು.. ಪೈಸ ಬಕ್ಕು, ಹೋಕು, ಅಪ್ಪ-ಅಮ್ಮನ ಪ್ರೀತಿ ಪೈಸದ ಅಮಲಿಲಿ ಕಳಕ್ಕೊಂಡ್ರೆ ಮತ್ತೆ ಸಿಕ್ಕುಗೋ>? ಹಾಂಗಿಪ್ಪ ಪೈಸಂದ ನೆಮ್ಮದಿ ಸಿಕ್ಕುಗೋ? ನಮ್ಮ ನಮ್ಮ ಸಮಸ್ಯೆ ನಾವಗೆ ದೊಡ್ಡದೇ, ಆದರೆ ನಮ್ಮಂದ ದೊಡ್ಡ ಸಮಸ್ಯೆ ಇಪ್ಪೋರು ಹೋರಾಡ್ತಾ ಇದ್ವು ಹೇಳ್ತ ಸತ್ಯ ನಾವಗೆ ಗೊಂತೇ ಆವ್ತಿಲ್ಲೆ ಎಷ್ಟೋ ಸತ್ತಿ.. ಕೇಜಿಮಾವನ ಲೇಖನ ರಜ ಹೊತ್ತು ಎನ್ನ ದೀರ್ಘ ಆಲೋಚನೆಗೆ ಹಚ್ಚಿತ್ತು.. ಇನ್ನೂ ಆ ಗುಂಗಿಂದ ಹೆರ ಬಯಿಂದಿಲ್ಲೆ! ಹಿಂಗಿಪ್ಪ ಚಿಂತನೆಗೆ ಹಚ್ಚುವ ಯೋಚನೆಗಳ ಬರಹ ಇನ್ನುದೆ ಬರಳಿ! ಹರೇರಾಮ!

  4. ಕೇಜಿಮಾವನ ಯೋಚನಾ ಲಹರಿಗೊ ಎಲ್ಲ ನಿಜ ಜೀವನಕ್ಕೆ ಹತ್ರ ಇರುತ್ತು. ಮಕ್ಕಳ ಹೆತ್ತು ಹೊತ್ತು ಅವಕ್ಕೆ ಒಳ್ಳೆ ವಿದ್ಯಾಭ್ಯಾಸ ಕೊಟ್ಟು ಬೆಳಸುತ್ತದು ಹಿರಿಯರಾದವರ ಕರ್ತವ್ಯ. ಹಾಂಗೆ, ಹಿರಿಯರು ಹೇಳಿದ ಹಾಂಗೆ ನಯ ವಿನಯ ಸಂಪನ್ನರಾಗಿ, ನಮ್ಮ ಸಂಸ್ಕೃತಿಯನ್ನೂ ಒಳಿಸೆಂಡು ಹೆತ್ತವರಿಂಗೆ ಬೇಜಾರು ಆಗದ್ದ ಹಾಂಗೆ ನೆಡಕ್ಕೊಂಡು ಕಡೆಂಗೆ ವರೆಗೆ ನೋಡೇಳೆಕಾದ್ದು ಮಕ್ಕಳಾದವರ ಕರ್ತವ್ಯ. ಅದರಲ್ಲೇ ಮನಸ್ಸಿಂಗೆ ಅದೆಷ್ಟು ಕೊಶಿ ಸಿಕ್ಕುತ್ತು. ಸಿಕ್ಕಿದ್ದರಲ್ಲೇ ತೃಪ್ತಿ ಪಡುತ್ತದು, ಜಾಣತನ. ಪೈಸೆ ಮಾಡುತ್ತ ವಿಷಯ ಗ್ರಹಿಸುವಗ ನೆಗೆ ಬತ್ತು. ಪೈಸೆ ಬೇಕಾದಷ್ಟು ಆದವ ಹೇಳಿದ ಆಡ, ಜೀವನಲ್ಲಿ ಪೈಸೆ ಒಂದೇ ಅಲ್ಲ. ಎಲ್ಲವೂ ಪೈಸೆಂದ ಅಳವಲಾಗ. ಹೇಳಿ. ಆದರೆ, ಒಬ್ಬ ಬಡವನ ಕೇಳಿ ನೋಡಿ. ಪೈಸೆ ಇಲ್ಲದ್ರೆ ಎಂತದು ಇಲ್ಲೆ. ಜೀವನಲ್ಲಿ ಪೈಸೆ ಮುಖ್ಯ ಹೇಳಿ ಹೇಳುಗವ. ಅತಿಯಾಸೆ ಒಳ್ಳೆದಲ್ಲ ಹೇಳಿದ ಡಾಕ್ಟ್ರ ಮಾತು ಸತ್ಯ. ದೇವರು ಇಷ್ಟು ನವಗೆ ಕೊಟ್ಟಿದ ಅಲ್ದೊ ಹೇಳಿ ಸಂತೋಷಲ್ಲಿ ಇಪ್ಪದು ಒಳ್ಳೆದು.

  5. ಆನು ಹೇಳ್ತಾ ಇಪ್ಪದು ನಾವು ನವಗೆ ಸಿಕ್ಕಿದ ಸಂತೋಷಂಗಳ ಅನುಭವಿಸದ್ದೆ ಸಿಕ್ಕದ್ದ ನಮ್ಮ ಯೋಚನೆಲಿ ಸಂತೋಷ ಹೇಳ್ತದರ ಹಿಂದೆ ಹೋವುತ್ತಾ ಇದ್ದು ಹೇಳಿ ಅಷ್ಟೆ,ಯಾವದು ಒಳ್ಳೆದು ಯೇವದು ಅಲ್ಲ ಹೇಳಿ ತೀರ್ಮಾನ ಮಾಡುದಲ್ಲ.

    1. ಸರಿ, ನಿಂಗೊ ಹೇಳಿದ ಪ್ರಧಾನ ವಿಷಯ ಅದುವೇ ಸರಿ,
      ಗೋಪಣ್ಣನತ್ರೆ ಹೇಳಿದ್ದು ಊಟಲ್ಲಿ ಮೆಣಸುಕಾಯಿಯ ಹಾಂಗೆ ಸಣ್ಣ ವಿಷಯ ಅಷ್ಟೆ.

  6. ಗೋಪಣ್ಣೋ,
    ನಿಂಗೊ ಹೇಳುದು ಸರಿ.
    ಆದರೆ,
    ಎರಡೂ ಇಪ್ಪದೊಳ್ಳೇದಲ್ಲದೊ? {ಅನುಷ್ಠಾನವೂ ಬೇಕು ಅಭಿವೃದ್ಧಿಯೂ ಬೇಕು}.

  7. ವಿಷಯ ನೂರಕ್ಕೆ ನೂರೂ ಸತ್ಯ…
    ನಮ್ಮ ದೇಶದ ನೀರು ಗಾಳಿ ವಾತಾವರಣ … ಎಲ್ಲಾ ಮೂಲಭೂತ ರಿಸೋರ್ಸ್ಸಗಳ
    ಪ್ರಯೋಜನ ಪಡದ ನಮ್ಮ ಪ್ರತಿಭಾವಂತ ಮಕ್ಕಳ ಪ್ರತಿಭಾ ಪಲಾಯನ / ಅಪಹರಣ ಗ್ರೇಶಿದರೆ ವ್ಯಥೆ ಆವುತ್ತು. ಯಂ.ಯನ್.ಸಿ.ಗಳ ಆಮಿಷ ಗಳ ಸೆಳತ , ವಿದೇಶಕ್ಕೆ ವಲಸೆ ಹೋಪದಕ್ಕಿಪ್ಪ ‘ಸ್ಟೇಟಸ್’ ಹಳ್ಳಿ ತೋಟದ ಅಡಕ್ಕೆ ಹೆರುಕ್ಕುವ ಮಕ್ಕೊಗೆ ಯಾವ ಕಾಲಕ್ಕೂ ಬಾರ ನಿಜ…. ಆದರೆ ಅವರ ಯಥಾನು ಮತಿ,ಯಥಾನು ಶಕ್ತಿ ಕೊಡುಗೆ ಯಾವುದಾದರು ಇದ್ದರೆ ಅದು ನಮ್ಮ ಸಮಾಜಕ್ಕೆ ಮೀಸಲು. ನಮ್ಮ ಸನಾತನ ಸಂಸೃತಿ ಸಂಕೋಲೆಯ ಒಳಿಶಿ ಬೆಳೆಸುವ ಜವಬ್ದಾರಿಯುತ ಕೊಂಡಿಗೊ ಆವು ….ಪ್ರತಿಭಾವಂತ ಮಕ್ಕಳ ಹೆತ್ತು ಹೊತ್ತು ಸಾಕಿ ಸಲಹುವುದು ಸರಿ..ಖಂಡಿತ ತಪ್ಪಲ್ಲ.
    ಆದರೆ, ಇಪ್ಪದೂ ಒಬ್ಬನೇ ಒಬ್ಬ ಕೊಂಡಾಟದ ಮಾಣಿ…ಏವದೋ ಒಂದರ ಕಟ್ಟಿಗೊಂಡು ವಿದೇಶಲ್ಲೇ ನೆಲಸಿದ…ನಮ್ಮ ತೋಟ, ಗೆದ್ದೆ, ಮನೆ, ಜಮೀನು, ಜಪ, ತಪ , ಪೂಜೆ , ಅನುಷ್ಠಾನ , ಮನೆತನ , ಆಚಾರ , ವಿಚಾರ, ಆಹಾರ, ವಿಹಾರ ,ಸಂಸ್ಕಾರ…ಎಲ್ಲಾ ಅನಾಥ… ಅಬ್ಬೆ ಅಪ್ಪನ ದಿನಕ್ಕೂ ಬಪ್ಪಲೆ ಪುರುಸೊತ್ತಿಲ್ಲೆ….ಯಂ.ಯನ್.ಸಿ.ಗಳ ಉರುಳಿನ ಎದುರು ಎಲ್ಲಾ ಕಳಾಹೀನ , ನಿಸ್ತೇಜ..!! ರಾಕೆಟ್ಟುಗಳ ಹಾಂಗೆ ವಿದೇಶಕ್ಕೆ ಹಾರುವ ಮಕ್ಕಳ, ಏರಿಸಿ ಹಾರುಸುವ ಉಡ್ಡಯನ ಕೇಂದ್ರಂಗೊ ನಾವಾಯಕ್ಕೋ?… ಅಲ್ಲ… ಸಿಕ್ಕಿವ ವ್ಯವಸ್ಥೆಗೆ ತೃಪ್ತಿ ಪಟ್ಟು ಹಿರಿಯರ, ಹೆತ್ತವರ ಅನಾಥಾಶ್ರಮ,ವೃದ್ದಾಶ್ರಮಕ್ಕೆ ಸೇರಸದ್ದೇ ಇಪ್ಪ ಸಂಸ್ಕಾರಯುತ ಸಮಾಜವ ಬೆಳೆಶುವವು ನಾವಾಯಕ್ಕೋ ?..ಚಿಂತಿಸಿದರೆ ಹೇಂಗೆ ?

  8. ಮಾವನ ಲೇಖನ ಎಷ್ಟು ಭಾವನಾತ್ಮಕ ಹೇಳಿರೆ,ಗೊಂತಾಗದ್ದೆ ಕಣ್ಣಿಲಿ ನೀರು ಬಂತು.ನಾವು ನಮ್ಮ ಹತ್ತರೆ ಇಪ್ಪ ಸುಖವ ಮರದು ಸಣ್ಣ ಸಣ್ಣ ತಾಪತ್ರೆಗೊಕ್ಕುದೆ ತಲಗೆ ಮರ ಬಿದ್ದ ಹಾಂಗೆ ಪ್ರತಿಕ್ರಿಯೆ ಮಾಡುತ್ತು ಅಲ್ಲದೋ? ಜೀವನಲ್ಲಿ ಮುಂದುವರುದು ಹಿಂದೆ ನೋಡಿ ಅಪ್ಪಗ ಗೊಂತಪ್ಪದು ಪೈಸೆಯ ತಿಮ್ಬಲೆ ಎಡಿತ್ತಿಲ್ಲೇ ಹೇಳಿ.. ಮಾವ,ಈ ವಿಚಾರ ಸರಣಿ ಇನ್ನೂ ಬರಳಿ.

  9. ಕೆ.ಜಿ.ಮಾವ ಬಾರಿ ಒಳ್ಳೆ ಯೋಚನಗೊ.ನಿಜವಾಗಿಯೂ ನಾವು ನಮ್ಮತ್ರೆ ಇಲ್ಲದ್ದದರ ಯೋಚನೆ ಮಾಡಿಯೇ ಇದ್ದ ಸುಖವ ಕಳಕ್ಕೋಳುತ್ತಾ ಇದ್ದು.ಇನ್ನು ಬೇಕು ಹೇಳುತ್ತದರ ಬಿಟ್ರೆ ಎಷ್ಟೋ ಸುಖ೦ಗೊ ನಮ್ಮ ಬಾಗಿಲ್ಲಿಯೇ ಮುರುಟಿ ಬಿದ್ದೊಡಿಪ್ಪದು ಕಾ೦ಗು.ಏಳುಸುತ್ತ ಕೆಲಸ ನಮ್ಮದು.ಬರಳಿ ಇನ್ನೂ ಇ೦ತಾ ವೈಚಾರಿಕ ಯೋಚನಾ ಲಹರಿಗೊ.ಒಪ್ಪ೦ಗಳೊಟ್ಟಿ೦ಗೆ.

  10. ಕೇಜಿ ಮಾವ ! ಬರದ್ದು ಲಾಯ್ಕಾಯ್ದು… !ಎಂಗಳೂ ಊರಿಂಗೆ ಹೋದಪ್ಪಗ ಆ ಅನುಭವಂಗ ಆವ್ತು!! ಒಂದು ರೀತಿಲಿ ಸವಿ-ಸವಿ ನೆನಪು!

  11. ತುಂಬಾ ಲಾಯ್ಕ ಆಯ್ದು ಮಾವ……. ಆನು ಮನೆಗೆ ಹೋಗಿ ಬಪ್ಪಗ, ಎನಗುದೇ ಹಾಂಗೇ ಕಾಣ್ತು. ಆನು ಮನೆಲ್ಲಿದ್ದರೆ ಎಷ್ಟು ಖುಷಿಲ್ಲಿರ್ತವು!! ಅಮ್ಮಂಗೆ ಎಷ್ಟು ಬಚ್ಚಿದ್ದರೂ, ಮಗಂಗೆ ಹೇಳಿ ತಿಂಡಿ ಮಾಡುವ ಸಂಭ್ರಮ ಎಂತ!! ಎಷ್ಟು ಪುರ್ಸೊತ್ತಿಲ್ಲದ್ರೂ, ಆನು ಹೋದರೆ ಅಪ್ಪ ಎನಗೋಸ್ಕರ ಸಮಯ ಮಡಿಕ್ಕೊಳ್ತವು. ಒಂದೇ ದಿನಕ್ಕೆ ಹೋಪಲಪ್ಪದಾದರೂ, ಮೂರು- ಮೂರುವರೆ ಗಂಟೆ ಪ್ರಯಾಣ ಮಾಡುದು ಎನಗೆ ಕಷ್ಟ ಹೇಳಿ ತೋರ್ತಿಲ್ಲೆ. ವಾರಕ್ಕೊಂದರಿ ಅಥವಾ ಎರಡು ವಾರಕ್ಕೊಂದರಿ ಮನೆಗೆ ಹೋಗಿ ಬತ್ತೆ. 🙂

  12. ಬಹಳ ತೂಕದ ಯೋಚನಾಸರಣಿ ಮ೦ಡಿಸಿದ ಕೇಜಿಮಾವ೦ಗೆ ಧನ್ಯವಾದ೦ಗೊ.

    ಸುರುವಿ೦ಗೆ ಓದಿಯಪ್ಪಗಳೇ ಮನಸ್ಸಿ೦ಗೆ ತಟ್ಟಿತ್ತು. ಪುನಃ ಒ೦ದರಿ ಓದಿದೆ.. ಒ೦ದೊ೦ದು ವಾಕ್ಯದ ಹಿ೦ದೆಯೂ ಎಷ್ಟು ಗಹನವಾದ ಅರ್ಥ ಅಡಗಿದ್ದು ಹೇಳಿ ನೋಡುವಗ, ಅದರ ಬಗ್ಗೆ ಆಲೋಚನೆ ಮಾಡುವಗ ಮನಸ್ಸು ಮತ್ತೂ ಮತ್ತೂ ಆಳಕ್ಕೆ ಇಳಿತ್ತಾ ಹೋವ್ತು. ಈ ಒ೦ದು ಲೇಖನಲ್ಲಿಯೇ ವಾರಗಟ್ಳೆ ಆಲೋಚನೆ ಮಾಡ್ತಷ್ಟು ಸತ್ತ್ವ ಇದ್ದು… ಪುನಃ ಪುನಃ ಹೃತ್ಪೂರ್ವಕ ಅಭಿನ೦ದನೆಗೊ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×