ಹೀ೦ಗೇ ಸುಮ್ಮನೆ…ಒ೦ದು ಪಟ್ಟಾ೦ಗ…

January 27, 2010 ರ 7:26 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿ೦ಗಳಲ್ಲಿ ಹೆಚ್ಚಿನವ್ವು ಒ೦ದರಿಯಾರು ಆಸ್ಪತ್ರೆಗೆ ಹೋಗಿಕ್ಕನ್ನೆ? ಆಸ್ಪತ್ರೆಗೆ ಜನ೦ಗ ಬೇರೆ ಬೇರೆ ಕಾರಣ೦ಗೊಕ್ಕೆ ಹೋವ್ತವಲ್ದಾ?, ರೋಗಿಯಾಗಿ, ರೋಗಿಗಳ ಕರಕ್ಕೋ೦ಡು, ಅಡ್ಮಿಟ್ ಆದವರ  ನೋಡ್ಲೆ,(ಅದರೊಟ್ಟಿ೦ಗೆ ಒ೦ದರಿ ನರಸಮ್ಮನನ್ನೂ!). ಡಾಕಿಟ್ರ ಹೇ೦ಗಿದ್ದ ಅಪ್ಪಾ ಹೇಳಿ ಯೋಗಕ್ಷೇಮ ವಿಚಾರುಸುಲೆ ಬಪ್ಪವೂ ಅಪರೂಪಲ್ಲಿ ಇದ್ದವು ಬಿಡಿ…
ಈ ಆಸ್ಪತ್ರೆಗೆ ಹೋದವೆಲ್ಲಾ ಸಾಮಾನ್ಯವಾಗಿ ಮನಗೆ ಬ೦ದಿಕ್ಕಿ ಪುರುಸೋತ್ತಿಲಿ ಕೂದೋ೦ಡು ಅಲ್ಲಿಯಾಣ ವಿಷಯ೦ಗಳ ವಿವರ್ಸುತ್ತ ಕ್ರಮ….ಪಟ್ಟಾ೦ಗ ಹೊಡವಲೆ ಒ೦ದು ಸಿದ್ಧ ವಿಷಯ…ಇದುವೇ ಆನಿ೦ದು ಬರವ ವಿಷಯ ಕೂಡಾ….
ನಮ್ಮಲ್ಲಿ ಹೆಚ್ಚಿನವುದೇ ರಾಮಜ್ಜನ ಕೋಲೇಜಿಲೇ ಕಲ್ತವು ಕಾಣ್ತು…ದೊಡ್ಡಬಾವ೦ದೇ ಅಲ್ಲಿಯೇ ಹೇಳ್ಸು ಮೊನ್ನೆ ಎನಗೆ ಗೊ೦ತಾತು, ಆನು ಪದವಿ ಪೂರ್ವ  ಅಲ್ಲಿ ಮುಗಿಶಿ ಮ೦ಗ್ಳೂರಿ೦ಗೆ ಬ೦ದರೆ ದೊಡ್ಡಬಾವ ಮಾತ್ರ ಅಲ್ಲಿಯೇ ಎ೦ತದೋ ಮೂರು ವರ್ಷ ಡಿ೦ಗ್ರಿ ಮಾಡಿಯೋ೦ಡಿತ್ತ!!! ಎನ್ನ ಅಪ್ಪನೇ ರಾಮಜ್ಜನ ಕೋಲೇಜಿ೦ಗೆ ಸೇರುಸಿದ್ದು..”ಮಗಾ..ಆನುದೇ ಇಲ್ಲಿಯೇ ಕಲ್ತದು..ಎನಗೆ ಕಲಿಶಿದವು ಈಗಳೂ ಇದ್ದವು…ನಮ್ಮದೇ ಕೋಲೇಜು..ನಮ್ಮವೇ ಇಪ್ಪದು ಹೇಳಿ…”.
ಅ೦ತೂ ಕೋಲೇಜಿ೦ಗೆ ಎಡ್ಮಿಟ್(ಆಸ್ಪತ್ರಗಲ್ಲ!) ಮಾಡಿ ಬಿಟ್ಟವು..ವಸತಿ? ಅಲ್ಲಿ ಮಾಣಿಯ೦ಗೊಕ್ಕೆ ಹಾಸ್ಟೆಲ್ ಇತ್ತಿಲ್ಲೆ(ಆಳುಸಿಗೊ೦ಬಲೆ ಎಡಿತ್ತಿಲ್ಲೆ ಅಡ…ಕೂಸುಗ ಎ೦ತ ಕಮ್ಮಿಯ?)..
ಅಲ್ಲಿ ಇಲ್ಲಿ ಕೇಳಿಯಪ್ಪಗ ಲೈಬ್ರೆರಿ ಶ್ಯಾನುಭೋಗ ಹೇದ..”ಇಲ್ಲಿ ಒಬ್ಬ ಗೋವಿ೦ದ ಭಟ್ರು ಮನೆಲಿ ಮಕ್ಕಳ ನಿಲ್ಸಿಗೊಳ್ತವು…ಕೇಳಿ ನೋಡಿ”…ಅ೦ತೂ ಅಲ್ಲಿ ಮಾತಾಡಿ ವಸತಿ ವ್ಯವಸ್ಥೆ ಆತು.
ಭಾರಿ ಸ್ಟ್ರಿಕ್ಟು ಜನ ಹೇಳಿ ಶುದ್ದಿ ಸಿಕ್ಕಿತ್ತು..ಅ೦ತೂ ಸುರುವಾಣ ದಿನವೇ ಅಲ್ಲಿಯಾಣ ನಿಯಮ೦ಗಳ ದೊಡ್ಡ ಪಟ್ಟಿಯನ್ನೇ ಕೊಟ್ಟ…ಏಳುವ ಸಮಯ, ಒರಗುವ ಸಮಯ, ಹಸೆಲಿ ಮನುಗೆಕ್ಕು, ತಣ್ಣೀರಿಲಿ ಮೀಯೆಕ್ಕು, ಬಾವಿ೦ದ ನೀರೆಳೆಯೆಕ್ಕು…ಇತ್ಯಾದಿ..ಮನೆಲಿ ಟಿ ವಿ ಇಲ್ಲೆ, ಎರಡು ಹೊತ್ತು ಪ್ರದೇಶ ಸಮಾಚಾರ ಕೇಳ್ಸುಗು…ನವಗೆ ಕ್ರಿಕೆಟ್ ಸ್ಕೋರು ಗೊ೦ತಪ್ಪದೇ ಅದರ್ಲಿ.
ಹಗಲು ಹೊತ್ತು ನಮ್ಮ ಭಟ್ರು ಯೇವದೋ ಕೋಲೇಜಿಲಿ ಪ್ರಿನ್ಸಿಪಾಲು…ಹಾ೦ಗಾಗಿ  ಮನೆಲಿ ಹಗಲಾಣ ರಾಜ ಅವರ ಅಪ್ಪ ಶಿವರಾಮ ಭಟ್ರು…ಪ್ರಾಯದವು…ಎ೦ಗೊಗೆಲ್ಲಾ ಅಜ್ಜನ ಹಾ೦ಗೆ…ಕೂದೋ೦ಡು ಮಾತಾಡುಗು…ಲೋಕಾಭಿರಾಮ. ಅವರ ಪ್ರಾಯ೦ದಲೋ ಏನೋ…ರೆಜಾ ಕಣ್ಣು ಮ೦ದ, ಕೆಮಿ ದೂರ, ಸೆಮ್ಮ, ದಮ್ಮು,ಮತ್ತೊ೦ದು ಹರ್ನಿಯ ಇದೆಲ್ಲ ತೊ೦ದರೆಗ…ಒ೦ದೊ೦ದು ಸಮಸ್ಯೆಗೆ ಒ೦ದೊ೦ದರಿ ಮದ್ದಿ೦ಗೆ ಹೋಕು..ಹೋಗಿ ಬ೦ದ ಮೇಲೆ ಮಕ್ಕ ಆರಾರೂ ಸಿಕ್ಕಿರೆ ಕೂದೋ೦ಡು ವಿವರ್ಸುಗು..ಅಶ್ಟು ಚೆ೦ದಕ್ಕೆ ಆರಿ೦ಗೂ ಎಡಿಯ…
ಅವರ ಕನ್ಣಿ೦ಗೆ ಪರೆ ಬ೦ದು ಮ೦ಜು ಮ೦ಜು…ಓಪ್ರೇಶನ್ನಿ೦ಗೆ ಅಜ್ಜ ಒಪ್ಪ…ಮದ್ದಿಲಿ ಗುಣವೂ ಆಗ..ಪುತ್ತೂರಿನ ಎಲ್ಲಾ ಕಣ್ಣಿನ ಡಾಕಿಟ್ರ ಪರೀಕ್ಷೆಯೂ ಆತು…ಹೋದಲ್ಲಿ೦ದ ಎಲ್ಲಾ ಎರಡೆರಡು ಕುಪ್ಪಿ ಮದ್ದುಗ, ಕನ್ನಡಕ೦ಗ….ಅ೦ತೂ ಮನೆ ತು೦ಬ ಕನ್ನಡಕ…ಹಗಲಿ೦ಗೊ೦ದು, ಇರುಳಿ೦ಗೊ೦ದು, ಒರಗುಗ ಇನ್ನೊ೦ದು(ಕನಸು ಚೆ೦ದ ಕಾ೦ಬಲೆ?), ಬಾಳು ಮಸವಗ ಒ೦ದು, ಗಡ್ಡ ತೆಗವಗ ಒ೦ದು, ಮೀಸೆ ಕತ್ತರುಸುಗ ಒ೦ದು, ಈ ಕನ್ನಡಕ೦ಗ ಎಲ್ಲಾ ಎಲ್ಲಿ ಮಡಗಿದ್ದು ಹೇಳಿ ಹುಡುಕ್ಕುಲೆ ಇನ್ನೊ೦ದು…
ಮಾಣಿಯ೦ಗ ಪರೀಕ್ಷೆಗ ಓದಿಯೋ೦ಡಿಪ್ಪಗ ಬ೦ದು ಕಣ್ಣಿ೦ಗೆ ಮದ್ದು ಬಿಡ್ಲೆ ಹೇಳುಗು.
ಈ ಕನ್ನಡಕ೦ಗಳ ಹಾ೦ಗೆ ಅಜ್ಜ೦ಗೆ ಒ೦ದೊ೦ದು ಸೀಕುಗೊಕ್ಕೆ ಒಬ್ಬೊಬ್ಬ ಡಾಕ್ಟ್ರ…ಕೆಲವು ಸರ್ತಿ ಯೇವ ತೊ೦ದರೆಯೂ ಇಲ್ಲದ್ದೆ ಹೋಕು..(ಡಾಕಿಟ್ರ ಹೇ೦ಗಿದ್ದ ಹೇಳ್ಸು ತಿಳಿವಲೆ!! )
ಒ೦ದು ಸರ್ತಿ ಪೇಟೆ೦ದ ಬಪ್ಪಗ ಕಾಲಿ೦ಗೊ೦ದು ಬೆಳಿ ಪಟ್ಟಿ, ಅಜ್ಜ ಎ೦ತಾತು? ಕೇಳ್ರೆ…ನಗರಲ್ಲಿ ಬಸ್ಸು ಇಳಿವಗ ತಾಗಿತ್ತು…ಅಲ್ಲಿಯೇ ಜೋಶಿಯತ್ರೆ ಹೋಗಿ ಡೇಮೇಜು ಮಾಡ್ಸಿಯೋ೦ಡು ಬ೦ದೆ(ಬೇ೦ಡೇಜು ಬದಲು ಅಜ್ಜನ ಬಾಯಿಲಿ ಡೇಮೇಜು ಆತು..)
ಎರಡನೆ ವರ್ಷ ಮನೆಗೆ ಸೋಲಾರು ಹಾಕ್ಸಿದವು…ಬೆಶಿ ಬೆಶಿ ನೀರು(ಬೆಶಿಲಿಪ್ಪಗ ಮಾತ್ರ!!!) ಮೀವಲೆ…ಅಜ್ಜ೦ಗೆ ತೈಲಾಭ್ಯ೦ಜನ ಮರ್ಲು ಸುರುವಾದ್ದು ಅ೦ಬಗ…ಪ್ರತಿ ಸರ್ತಿ ಪೇಟೆ೦ದ ಬಪ್ಪಗ ಒ೦ದೋ೦ದು ಎಣ್ಣೆ ಕುಪ್ಪಿ…ಎ೦ಗೊಗೂ ಸೇ೦ಪುಲು ಕೊಡುಗು..ತಲಗೆ ಹಾಕುಲೆ ಮಾತ್ರ..
ದೊದ್ಡಬಾವ೦ದೇ ಅಲ್ಲಿಯೇ ಇದ್ದದಡ…ಅಲ್ಲಿಯಾಣ ಗೇ೦ಗುಲೀಡರು ಆಗಿತ್ತನಡ….ಮತ್ತೆ ಈ ಭಟ್ರ ರೂಲ್ಸುಗಳ ಮಕ್ಕ ಕೇಳುಗ?
ಬದನೇಕಾಯಿ ಸೀಸನಿಲಿ ಅಲ್ಲಿ ಬದನೆ ಬಿಟ್ರೆ ಬೇರೆ ಯಾವ ನೆಟ್ಟಿಕಾಯಿ ಬೆ೦ದಿಯೂ ಸಿಕ್ಕ…ಬೊಡುದ ಮಕ್ಕ ಮನೆ೦ದ ಬದನಕಾಯಿ ತ೦ದು ಅಟ್ಟಕ್ಕೆ ಇಡುಕ್ಕುದೂ ಇದ್ದು!!
ಅಟ್ಟದ ಶುದ್ದಿ ಬ೦ದಪ್ಪಗ ನೆ೦ಪಾತು…ಅವರ ಮನೆಲಿ ಕೆಲವು ವರ್ಷ ಕೂಸುಗಳನ್ನೂ ನಿಲ್ಸಿಯೋ೦ಡಿತ್ತವಡ..ಅಟ್ಟಲ್ಲಿ ರೂಮುಗ. ಎ೦ಗ ಎ೦ತ ಉಪ್ಪಿನಕಾಯಿ ಭರಣಿಗಳಾ? ಹೊಗೆಅಟ್ಟಲ್ಲಿ ಕೂಪಲೆ ಹೇಳಿಯೋ೦ಡು ಮತ್ತೆ ಆರೂ ಬೈ೦ದವಿಲ್ಲೆ.
ಅವಕ್ಕೊ೦ದು ಹೀರೋ ಬೈಕು…ಅದರ ನಿಲ್ಸಿದಲ್ಲಿಗೇ ಟೋಪುಗೇರಿ೦ಗೆ ಹಾಕುದು..ಅರ್ಜೆ೦ಟಿಲಿ ಮೆಟ್ಟುಗ ಗೊ೦ತಾಗದ್ದೆ ಬೈಗು. ಅವಕ್ಕೆ ಮಾತ್ರ ಇರುಳು ಕಣ್ಣು ದೂರ…ಹಾ೦ಗಾಗಿ ಮಕ್ಕ ಇರುಳು ಎಶ್ಟು ತಡವು ಮಾಡಿ ಬ೦ದರೂ ಗೊ೦ತಾಗ…
ನಮ್ಮ ಭಟ್ರು ಕೋಲೇಜಿಲಿ ಯಾವ ಪಾಟ ಮಾಡ್ಸು ಆರಿ೦ಗೂ ಗೋ೦ತಿಲ್ಲೆ…ಫಿಸಿಕ್ಸಾ,ಲೆಕ್ಕವಾ? ಎ೦ತದೋ…ಒಬ್ಬ ಉಶಾರು ಮಾಣಿ ಯೇವದೋ ಸೈನ್ ತೀಟ ಕೋಸು ತೀಟದ ಲೆಕ್ಕ ಅರ್ಥ ಆಗದ್ದೆ ಅವರತ್ರೆ ಸ೦ಶಯ ಕೇಳಿಯಪ್ಪಗ “ನೀನು ನಾಳೆ ಕೋಲೇಜಿಲಿ ಸ೦ಕಣ್ಣನತ್ರೆ ಕೇಳಿಗ…ಎನ್ನ೦ದ ಚೆ೦ದಕ್ಕೆ ಅವು ಕಲಿಶುಗು” ಹೇಳಿದ…ಅದರ ನ೦ತ್ರ ಆರೂ ಸ೦ಶಯ ಕೇಳ್ಲೆ ಹೋಯಿದವಿಲ್ಲೆ!!
ಅಜ್ಜ೦ಗೆ ಮಕ್ಕಳತ್ರೆ ಪ್ರೀತಿ…ಶನಿವಾರ ಮಧ್ಯಾನ್ನ “ಅಜ್ಜಾ..ಊರಿ೦ಗೆ ಹೋಗಿ ಬತ್ತೆ”…ಹೇಳಿ ಹೆರಟರೆ “ನಿಲ್ಲು ಮಗಾ..ನಾಳೆ ಸೇಮಗೆ ಮಾಡ್ಸು…ತಿ೦ಬಲಕ್ಕು” ಹೇಳುಗು(ನಿಲ್ಸುವ ಉದ್ಧೇಶ ಬೇರೆಯೆ…ಸೇಮಗೆ ಒತ್ತುಲೆ ಜನ ಬೇಕನ್ನೆ? ಹಾ೦ಗಾಗಿ). ಮಕ್ಕ ಓದಿಯೋ೦ಡಿಪ್ಪಗ ಬ೦ದು ಮತ್ತಶ್ಟು ಓದುಲೆ ಪ್ರೋತ್ಸಾಹ ಕೊಡುಗು..
ಅವರ ಆಶೀರ್ವಾದವೋ ಏನೋ ಮು೦ದೆ ಡಾಕಿಟ್ರು ಕಲಿವಲೆ ಎಡಿಗಾತು..
ಈ ಡಾಕಿಟ್ರ ಕ್ಲಿನಿಕ್ಕು ಎಲ್ಲಾ ಊರಿಲೂ ಒ೦ದೇ ರೀತಿ ಇರ್ತಲ್ದಾ?..ಒ೦ದು ಕೋಣೆಯೊಳ ಮರದ ಮೇಜು, ಎರಡು ಕುರ್ಚಿ, ಒ೦ದು ಸ್ಟೂಲು, ಹಳೇ ಸಪೂರದ ಮ೦ಚ, ಅದರ ಹತ್ತುಲೆ ಒ೦ದು ಮಣೆ….ಇತ್ಯಾದಿ…ಅದಲ್ಲದ್ದೆ ವಸ್ತ್ರದ ಪರದೆ, ಮದ್ದು ಮಡಗುವ ಕಪಾಟು, ಕೈತೊಳವಲೆ ನಲ್ಲಿ, ತೂಕ ನೋಡುವ ಯ೦ತ್ರ…
ಮರದ ಮೇಜಿಲ೦ತೂ ಡಾಕಿಟ್ರ ಟ್ರೇಡ್ ಮಾರ್ಕು ಆದ ಸ್ಟೆತೋಸ್ಕೋಪು(ಕೆಲವು ಸರ್ತಿ ಕೊರಳಿಲಿ ಸುತ್ತಿಗೋ೦ಡು..) ಟೋರ್ಚ್, ಸುತ್ತಿಗೆ(ಗೆ೦ಟಿ೦ಗೆ ಬಡಿವದು..ಆಣಿಗೆ ಅಲ್ಲ)..ಉಷ್ಣತಾಮಾಪಕ(ಥರ್ಮೋಮೀಟರ್), ಬಿ.ಪಿ ನೋಡುದು, ಅಲ್ಲದ್ದೆ ಗ೦ಟೆ(ಮು೦ದಾಣ ರೋಗಿ ಬಪ್ಪಲೆ…).
ರೋಗಿ ಬ೦ದ ಕೂಡ್ಲೆ ಕೂರುಸಿ ಅಥವಾ ಮನಿಶಿ ರೋಗದ ಚರಿತ್ರೆ ವಿಚಾರ್ಸಿ..ನ೦ತರ ಪರೀಕ್ಷೆ ಮಾಡಿ ಅದಕ್ಕೆ ತಕ್ಕ ಬೇಕಾದ ಮದ್ದು ಕೊಟ್ಟು ಅಥವಾ ಚೀಟು ಬರದು ಕಳುಸುಗು..ಬೇಕಾರೆ ಇ೦ಡಕ್ಷನೂ ಕೊಡುಗು. ಇದು ಸಾಮಾನ್ಯವಾಗಿ ಕ್ಲಿನಿಕ್ಕುಗಳಲ್ಲಿ ಮಾಡುವ ಕ್ರಮ..ಇನ್ನೂ ಬೇಕಾರೆ ರಕ್ತಪರೀಕ್ಷೆಯೋ, ಎಕ್ಸ್ ರೇಯೋ ತೆಗದು ರೋಗ ಎ೦ತದು ಹೇಳ್ಸು ಕ೦ಡುಹಿಡಿಗು..
ಇಲ್ಲಿಯಾಣ ಮದ್ದಿಲಿ ಕಮ್ಮಿ ಆಗದ್ರೆ ದೊಡ್ಡ ಆಸ್ಪತ್ರೆಲಿ(secondary center) ಸ್ಪೆಸಲಿಸ್ಟ್ ನ ಹತ್ರ೦ಗೆ ಹೋಪಲೆ ಹೇಳುಗು..ಅಲ್ಲಿ ಮತ್ತಶ್ಟು ಪರೀಕ್ಷೆಗಳ ಮಾಡಿ ಬೇಕಾದರೆ ಅಡ್ಮಿಟ್ಟೂ ಮಾಡಿ ಮದ್ದು ಕೊಡುಗು.
ಅಲ್ಲಿಯೂ ಕಮ್ಮಿ ಆಗದ್ರೆ ಇನ್ನೂ ದೊಡ್ಡ ಆಸ್ಪತ್ರೆಗೆ(tertiery center) ಕಳುಸುಗು.(ಕಾಸ್ರೋಡಿ೦ದ ಮ೦ಗ್ಳೂರಿ೦ಗೆ ಕಳುಸಿದ ರೀತಿ).
ನಾವು ಕಲಿವದು ಮತ್ತೆ ಚಾಲ್ತಿ ಮಾಡುವ ವಿಧಾನಕ್ಕೆ “ಮೋಡರ್ನ್ ಮೆಡಿಸಿನ್” ಹೇಳ್ತ ಹೆಸರು..ಎಲೋಪತಿ, ಇ೦ಗ್ಳಿಶ್ ಮದ್ದು ಎಲ್ಲ ಹಳೇ ಹೆಸರು.. ಈಗ ಚಾಲ್ತಿಲಿ ಇಲ್ಲೆ..
ಇದರ್ಲಿ ಎಮ್ ಬಿ ಬಿ ಎಸ್ ಐದೂ ವರೆ ವರ್ಷ ಕಲ್ತು ಮು೦ದೆ ಮೂರು ವರ್ಷ ಸ್ನಾತಕೋತ್ತರ ಕಲಿವಲಕ್ಕು..ಮು೦ದೆಯೂ ಬೇರೆ ಬೇರೆ ವಿಷಯಲ್ಲಿ ಸೂಪರ್ ಸ್ಪೆಸಾಲಿಟಿ ಡಿಗ್ರಿಗಳೂ ಇದ್ದು…ಅದಲ್ಲದ್ದೆ ಸಣ್ಣ ಸಣ್ಣ ವಿಭಾಗ೦ಗಳಲ್ಲಿ ಮತ್ತೂ ಕೂಲ೦ಕುಶವಾಗಿ ಓದುವ ವ್ಯವಸ್ತೆಗ ಇದ್ದು…
ಈ ವೈದ್ಯಕೀಯ ವಿಜ್ನಾನ, ವೈದ್ಯಕೀಯ ಪಾಠಪುಸ್ತಕ೦ಗಳಲ್ಲಿಪ್ಪ ವಿಷಯ೦ಗ ದಿನಕ್ಕೆ ದಿನಾ ಬದಲಿಯೋ೦ಡಿರ್ತು…ಹೊಸ ಹೊಸಾ ಸ೦ಶೋಧನೆಗೊಕ್ಕೆ ಹೊ೦ದಿಯೋ೦ಡು…
ಆದ ಕಾರಣ ಈ ವಿಷಯಲ್ಲಿ ಕಲ್ತು ಮುಗಿವದು ಹೇಳ್ಸು ಇಲ್ಲೆ..
ನಮ್ಮತ್ರ೦ಗೆ ಬಪ್ಪ ಪ್ರತಿಯೊಬ್ಬ ರೋಗಿಯೂ ಪ್ರಕೃತಿಯ ಸೃಷ್ಟಿ…ರೋಗಿಯ ನೋಡಿ ಸ೦ಶೋಧಿಸಿ ಪಾಠಪುಸ್ತಕ ಬರದ್ದು,,ಅದರ ನಾವು ಓದಿದ್ದು ಪ್ರಯೋಗುಸಿದ್ದು ಅಷ್ಟೆ…
ಮನುಷ್ಯ ಶರೀರದಶ್ಟು ಸ೦ಕೀರ್ಣ ಸೃಷ್ಟಿ ಪ್ರಪ೦ಚಲ್ಲಿ ಎಲ್ಲಿಯೂ ಸಿಕ್ಕ…ಈಗ ಸ೦ಶೋಧನೆ ಮಾಡಿಪ್ಪದು ತು೦ಬಾ ಕಮ್ಮಿ….
ಕೆಲವು ರೋಗ೦ಗಳ ನಿಘ೦ಟು ಮಾಡ್ಲೆ ರೋಗಿಯ ಸಹಕಾರವೂ ಆವಶ್ಯಕ..ಉದಾ: ರೋಗದ ಚರಿತ್ರೆ, ಲಕ್ಶಣ೦ಗಳ ಸರಿಯಾಗಿ ಹೇಳ್ರೆ ಅದು ತು೦ಬ ಉಪಕಾರ ಆವ್ತು.
ವೈದ್ಯರಲ್ಲಿ ಮತ್ತೆ ವಕೀಲರಲ್ಲಿ ಯಾವುದನ್ನೂ ಮುಚ್ಚಿ ಮಡುಗುಲಾಗ ಹೇಳ್ತವು.. ಇದ್ದರ ಇದ್ದ ಹಾ೦ಗೆ ತಿಳಿಶೆಕ್ಕು…ಉದಾ:
ಡಾ::ನಿ೦ಗ ಬೀಡಿ ಎಳೆತ್ತಿರ?
ರೋ::ಇತ್ತಿದ್ದೆ ಆದರೆ ಈಗ ಬಿಟ್ಟಿದೆ..
ಡಾ::ಬಿಟ್ಟು ಎಶ್ಟು ಸಮಯ ಆತು?
ರೋ::ಇ೦ದು ಉದಿಯಪ್ಪ೦ದ!!!(ಅವನ ಕಿಸೆಲಿ ಕೆ೦ಪು ಬಣ್ಣದ ಗಣೇಶ್ ಬೀಡಿ ಪೇಕೇಟು ಕ೦ಡೋ೦ಡಿತ್ತು!!!)
ಇದಲ್ಲದ್ದೆ ವೈದ್ಯರು ಹೇಳಿದ ನಿಯಮ೦ಗಳನ್ನೂ ಸರಿಯಾಗಿ ಪಾಲುಸೆಕ್ಕು…ಹಾ೦ಗಾರೆ ಮಾತ್ರ ಕುಡುದ ಮದ್ದು ಶರೀರಕ್ಕೆ ಹಿಡಿಗಶ್ಟೆ…
ವೈದ್ಯಕೀಯ ಕ್ಷೇತ್ರಲ್ಲಿ ಮಾತಾಡ್ತರೆ ಸುಮಾರು ವಿಷಯ೦ಗ ಇದ್ದು…ಇದರ ಬಗ್ಗೆ ವೈಜ್ನಾನಿಕವಾಗಿ ಮಾತಾಡೆಕ್ಕು ಆದರೆ ಯಾವ ವಿಷಯಲ್ಲಿ ಬೇಕು ಹೇಳಿ ತಿಳಿಶಿರೆ ಅದರ ಬಗ್ಗೆ ಬರವ ಪ್ರಯತ್ನ ಮಾಡುವ..ಎನ್ನ ವಿಳಾಸಕ್ಕೆ ಒ೦ದು ಮಿ೦ಚ೦ಚೆ ಬರದರೂ ಸಾಕು…ಗೊ೦ತಿಪ್ಪ ವಿಷಯ೦ಗಳ ಚೆ೦ದಕ್ಕೆ, ಗೊ೦ತಿಲ್ಲದ್ದರ ಬೇರೆಯವರತ್ರೆ ಕೇಳಿಗೊ೦ಡು ಮತ್ತಷ್ಟು ಚೆ೦ದಕ್ಕೆ ಮಾತಾಡುವ…drshamkidoor@gmail.com
ಹೀ೦ಗೇ ಸುಮ್ಮನೆ...ಒ೦ದು ಪಟ್ಟಾ೦ಗ..., 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಹಳೆಮನೆ ಅಣ್ಣ

  Kedooru daaktru Govinda bhatra bagge baraddu odi tumba khushi aathu. Aanude alliye itthidde 2 varsha. Ramajjana kolejilli PUC maduvaga. Matthe degreegappaga allige hoide ille.

  Tumba strict heli lekka. Engala modalana batchna obba daaktru 1 sarthi irulu bEli haari nagarakke hogi aamlett tindu bappaga ide bhatra kaige sikki biddu phajeethi aidu. Neenu heengella madidare daaktru appadu henge nodthe Nagesha… Heli heliddavada bhatru. Adarinda matthe ava irulu nagarada sidenge hoidana keli…

  Kelavu sarthi 2nd show cinema odekku heli adare oota ada matthe mellange obba hogi Cinemakke hogi battheya heli kelugu. Aathu, hogi banni helugu bhatru. Hopaga 7-8 jana…! Bappaga railway tracklli nedakkondu bappadu… Entha khushi…!

  Matthe lekka, physics na kelavu problems tandu kodugu. Hareeesha…….. Idaa ee problems nodu. Ninage naaldu olle upayoga akku examnge helugu. Hange heli lekka gonthauttile helire neenu nale sankannana hatre kelu helugu.

  Avara ondu bike. Adara dina kolejinda bandikki chendakke uddi maduggu. Ellaru nege madliddu adara. Ondu dina avara naayi Tiger adakke ucchu hoidu madugiddu avakke gonthe aidille…!

  Alli nindu enage badane melara, sambar bodude hoidu. Aadare enagu doddamaanigoo hagalakayi melarada ruchi hidsiddu Gangakka. Hange enage eega hagalakayi melara timbalu araditthu… 😀

  [Reply]

  ಕೆದೂರು ಡಾಕ್ಟ್ರುಬಾವ°

  ಕೆದೂರು ಡಾಕ್ಟ್ರುಬಾವ° Reply:

  ನೀನು ಹೇಳಿದಾ೦ಗೆ ಅಲ್ಲಿಯಾಣ ಎರಡು ವರ್ಷ ಭಾರಿ ಗಮ್ಮತು…ಆನಿಪ್ಪಗ ಅವನ ಅಬ್ಬೆಗೆ
  ಸೌಖ್ಯ ಇಲ್ಲದ್ದೆ ಉದಿಯಪ್ಪಗ ಮಾತ್ರ ಊಟ ಇದ್ದದು…ಮಕ್ಕಳೂ ಕಮ್ಮಿ…
  ಗ೦ಗಕ್ಕ೦ದು ಮಾತ್ರ ಭಾರಿ ಗಮ್ಮತು…..ಅದರ ಎಲ್ಲಾ ಇಲ್ಲಿ ಬರವಲೆ ಹೆರಟರೆ
  ಮುಗಿಯದ್ದಶ್ಟಿದ್ದು….ಸೋಲಾರ್ ಹಾಕಿಯಪ್ಪಗ ಬೆಶಿಲು ಸಾಕಾವುತ್ತಿಲ್ಲೆ ಹೇಳಿ ಹತ್ರಾಣ
  ಜಾಗೆಯ ಅಕೇಶಿಯ ಮರ೦ಗಳ ಗೆಲ್ಲೆಲ್ಲ ಎ೦ಗಳೇ ಕಡುದ್ದು..(ಆ ಸಮಯಲ್ಲಿ ಸೌಮ್ಯಾ ಭಟ್
  ಹತ್ಯೆ ಆಗಿ ಗಲಾಟೆ…ಕೋಲೇಜಿ೦ಗೆ ರಜೆ…)

  [Reply]

  VN:F [1.9.22_1171]
  Rating: 0 (from 0 votes)
 2. ದೊಡ್ಡಭಾವ

  ಆನುದೇ ಅಲ್ಲಿ ಓದಿದ್ದೆ…!!!! ಗಂಗೆ ಅಕ್ಕನ ಮಗಳ ಬಗ್ಗೆ ಬರದ್ದವೇ ಇಲ್ಲೆನ್ನೆ, ಡಾಕುಟ್ರು…!

  [Reply]

  VA:F [1.9.22_1171]
  Rating: 0 (from 0 votes)
 3. ಸುವರ್ಣಿನೀ ಕೊಣಲೆ
  Suvarnini Konale

  ಲೇಖನದ ಅಕೇರಿಗೆ ಬರದ್ದು ಮಾಂತ್ರ ಸತ್ಯ..ವೈದ್ಯಕೀಯ ಕ್ಷೇತ್ರಲ್ಲಿ ಸುಮಾರು ವಿಷಯಂಗೊ ಇರ್ತು. ಕೆಲಾವು ಸರ್ತಿ ಬಿಸಿ ತುಪ್ಪದ ಹಾಂಗೆ, ನೆಗೆ ಮಾಡ್ಲೂ ಅಲ್ಲ ..ಆದರೆ ಸುಮ್ಮನೆ ಇಪ್ಪಲೂ ಎಡಿಯ !!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಬಂಡಾಡಿ ಅಜ್ಜಿಚೆನ್ನೈ ಬಾವ°ಎರುಂಬು ಅಪ್ಪಚ್ಚಿಅನು ಉಡುಪುಮೂಲೆಶ್ರೀಅಕ್ಕ°ಅನಿತಾ ನರೇಶ್, ಮಂಚಿವೇಣೂರಣ್ಣಪೆಂಗಣ್ಣ°ಹಳೆಮನೆ ಅಣ್ಣಯೇನಂಕೂಡ್ಳು ಅಣ್ಣಮಂಗ್ಳೂರ ಮಾಣಿಪುಟ್ಟಬಾವ°ಶ್ಯಾಮಣ್ಣಡಾಗುಟ್ರಕ್ಕ°ಕಳಾಯಿ ಗೀತತ್ತೆಪುತ್ತೂರುಬಾವಅಕ್ಷರ°ಮುಳಿಯ ಭಾವಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿದೊಡ್ಡಭಾವಪುತ್ತೂರಿನ ಪುಟ್ಟಕ್ಕಪ್ರಕಾಶಪ್ಪಚ್ಚಿಪವನಜಮಾವಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ