ಆನು ಶಿವನ ಸ್ವರ್ಗವ ಕಂಡೆ

I visited Shiva’s Paradise ಐ ವಿಸಿಟೆಡ್ ಶಿವಾ’ಸ್ ಪ್ಯಾರಡೈಸ್
Readers Digest, 2009 August     ಬರದೊನು ಕಾಶ್ಯಪ ಶಿಂಕ್ರೆ

ಬಡೆಕ್ಕಿಲ ಸರಸ್ವತಿ

ಬಡೆಕ್ಕಿಲ ಸರಸ್ವತಿ

ಆನು ಶಿವನ ಸ್ವರ್ಗವ ಕಂಡೆ-1

ರೀಡರ್ಸ್ ಡೈಜೆಸ್ಟ್-2009 ರ ಅಗೋಸ್ತು ತಿಂಗಳಿಲಿ ಆನು ಓದಿದ ಈ ಅನುಭವದ ಆಧಾರಲ್ಲಿ ಹವಿಕ ಬಂಧುಗೋಸ್ಕರ ಬರೆತ್ತಾ ಇದ್ದ ಇದು ಭಾವಾನುವಾದ ಅಥವಾ ಭಾವಯಾನ. ಎನ್ನ ಸ್ವರವೂ ನಿಂಗಳ ಸಂಗೀತವೂ ಸೇರಿ ಹರಿಯಲಿ, ನಿಂಗಳೆಲ್ಲೋರ ಮಾನಸರೋವರಕ್ಕೆ.
ಧನ್ಯಳಾದೆ

***                                            ***                                                        ***

ಈ ಕಾಲಲ್ಲಿ ಆರೋಗ್ಯ ಯವ್ವನದ ಅಮಿತೋತ್ಸಾಹ ಜತೆಲಿ ಪೈಸ ಇಷ್ಟಿದ್ದರೆ ಕೂಸು ಮಾಣಿ ಭೇದ ಇಲ್ಲದ್ದೆ, ಪ್ರವಾಸೀ ತಾಣಂಗೊಕ್ಕೆ, ಪ್ರೇಕ್ಷಣೀಯ ಜಾಗಗೊಕ್ಕೆ ಹೋಪದು ಟ್ರೆಕ್ಕಿಂಗ್-ಪರ್ವತಾರೋಹಣ, ಇತ್ಯಾದಿಗಳಲ್ಲಿ ಆಸಕ್ತಿ ಬೆಳೆತ್ತಾ ಇದ್ದು ಒಳ್ಳೆದೇ. ಇದರಂದ ನಮ್ಮ ದೇಶ,ಕಾಲ-ಜ್ಞಾನ ಹೆಚ್ಚಾವುತ್ತು. ಸಾಹಸ, ಸೈರಣೆ ಎಲ್ಲ ವೃದ್ಧಿ ಆವುತ್ತು. ಶರೀರ ಸದೃಢ ಆವುತ್ತು. ಆತ್ಮವಿಶ್ವಾಸ, ಧೈರ್ಯ ಪಂಥಾಹ್ವಾನ ಎದುರ್ಸುವ (ಚಾಲೆಂಜ್) ಶಕ್ತಿ ಬೆಳೆತ್ತು. ಆದರೆ ಅದರಂದವೂ ಶ್ರೇಷ್ಠವಾದ್ದು ಮನುಷ್ಯನಾಗಿ ಹುಟ್ಟಿದ್ದಕ್ಕೆ ಸಾರ್ಥಕ್ಯಪಡುವಂಥ ಹಿಮಾಲಯದ ಕೈಲಾಸ ಪರ್ವತ ಮಾನಸ ಸರೋವರ ಯಾತ್ರೆ ಮಾಡಿದರೆ ಇನ್ನು ಅದರಿಂದ ಉನ್ನತವಾದ ಟ್ರೆಕ್ಕಿಂಗೇ ಇರ. ವಿಶ್ವದ ಸರ್ವಶ್ರೇಷ್ಠ ಯಾತ್ರೆಯ ಸೌಭಾಗ್ಯವ, ಕಾಲ ಕಳುದು ಹೋಗಿ ವೃದ್ಧಾಪ್ಯ ಪಾದಾರ್ಪಣೆ ಮಾಡುವ ಮದಲೇ ಪಡಕ್ಕೊಳ್ಳಿ- ಹೇ ಜವ್ವನಿಗರೇ! ಈ ಮಹಾ ಅದ್ಭುತ ಅಮೃತಘಳಿಗೆಗಳ ರೋಮಾಂಚಕಾರೀ ಅನುಭವಂಗಳ ನಿಂಗಳ ವಶಮಾಡಿಕೊಳ್ಳಿ. “ಇಂಥ ಕೈಲಾಸ ಮಾನಸಯಾತ್ರೆ ಸಿಕ್ಕಿತ್ತಿಲ್ಲೆನ್ನೇ” ಹೇಳಿ ಹಳಹಳಿಸುವೊರಲ್ಲಿ ಆನೂ ಒಬ್ಬ°. ಆದರೆ ಇದೀಗ ಅಂಥ ಯಾತ್ರೆ ಮಾಡಿದೊರ ಲೇಖನಿಯ ಸಾರಸರ್ವಸ್ವವ ಓದಿ ಅನುಭವಿಸಿ ನಿಂಗಳ ಜತೆ ಅದರ ಹಂಚಿಗೊಳ್ಳೆಕ್ಕು, ನಿಂಗೊಗೂ ಆ ರಸಾನುಭವವ ಎನ್ನ ಬೊಗಸೆಲಿ ಹಿಡಿವಷ್ಟಾದರೂ ಕುಡಿಶೆಕ್ಕು ಹೇಳಿ ಎನ್ನದಿದೊಂದು ಪ್ರಯತ್ನ. ಅವಗ ನಿಂಗಳೇ ಆ ಯಾತ್ರೆ ಮಾಡ್ತಾ ಇಪ್ಪ ಹಾಂಗೆ ಅನುಭವ ಆದರೆ ಅದುವೇ ಎನ್ನ ಸೌಭಾಗ್ಯ. ಕೈಲಾಸ ಯಾತ್ರೆಯ ಅನುಭವವೇ ಬೇರೆ. ಯಾವ್ಯಾವದೋ ಬೆಟ್ಟ ಹತ್ತುವ ಬದಲಾಗಿ ಕೈಲಾಸಯಾತ್ರೆ ಮಾಡಿ ಆತ್ಮಾನಂದ ಪಡೆವ ಪುಣ್ಯಕ್ಕೆ ಭಾಜನರಾಗಿ, ಹೊಸ ಮನುಷ್ಯರಾಗಿ. ಬನ್ನಿ! ಹೋಯ್ಕೊಂಡು ಬನ್ನಿ! ಶುಭವಾಗಲಿ! ಶುಭಾಸ್ತೇ ಪಂಥಾನಸ್ಸಂತು

***                                                        ****                                                      ****

ಅದು ಹಿಮಾಲಯ! ಮನೋಹರ! ಸಮ್ಮೋಹಕ! ಇಡೀ ವಿಶ್ವಲ್ಲೇ ತೀರ್ಥ ಯಾತ್ರಿಕರ ಅತಿ ಹೆಚ್ಚು ಆಕರ್ಷಿಸುವ ಪರಮ ಶ್ರೇಶ್ಠ ಪುಣ್ಯ ಕ್ಷೇತ್ರವೊಂದಿದ್ದು ಹೇಳಿ ಆದರೆ, ಅದುವೇ ಪರಮಪಾವನ ಕೈಲಾಸ ಮಾನಸ ಸರೋವರ!
***                                ****                                                                  ****                                                                                                                          ****

(…………… ಈ ಲೇಖನದ ಮುಂದಿನ ಭಾಗವ ನಿರೀಕ್ಷಿಸಿ)

***

ಶಿವರಾತ್ರಿಯ ಈ ಶುಭ ದಿನದಂದು ಶ್ರೀ ಶಂಕರಾಚಾರ್ಯ ವಿರಚಿತ ನಿರ್ವಾಣ ಷಟ್ಕಂ ಇದರ ಓದಿ, ಶಿವಾನುಗ್ರಹಕ್ಕೆ ಪಾತ್ರರಾಗಿ.

ನಿರ್ವಾಣ ಷಟ್ಕಂ:

ಮನೋಬುದ್ಧ್ಯಹಂಕಾರ-ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ |
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೧||

ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ
ನ ವಾ ಸಪ್ತಧಾತುರ್ನ ವಾ ಪಂಚಕೋಶಃ |
ನ ವಾಕ್ಪಾಣಿ-ಪಾದೌ ನ ಚೋಪಸ್ಥಪಾಯೂ
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೨||

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯ ಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೩||

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞಾಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||೪||

ನ ಮೃತ್ಯುರ್ನಶಂಕಾ ನ ಮೇ ಜಾತಿಭೇದಃ
ಪಿತಾನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||೫||

ಅಹಂ ನಿರ್ವಿಕಲ್ಪೋ ನಿರಾಕಾರ-ರೂಪೋ
ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಂ |
ನ ಚಾsಸಂಗತಂ ನೈವ ಮುಕ್ತಿರ್ನ ಮೇಯಃ
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೬||

~~~~***~~~

 

ನಿರ್ವಾಣ ಷಟ್ಕವ ಈ ಮೊದಲು ಇಲ್ಲಿ ಬ್ಬೈಲಿನ  ಶ್ರೀ ಅಕ್ಕ ಒದಗಿಸಿದ್ದವು. ಅದರ ಕೊಂಡಿ ಇಲ್ಲಿದ್ದು

ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್”


ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ,
ನಂ: 1566, 19th ಕ್ರಾಸ್
ರೂಪಾನಗರ
ಭೋಗಾದಿ ಪೋಸ್ಟ್
ಮೈಸೂರು 570026
9019274678

ಶರ್ಮಪ್ಪಚ್ಚಿ

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *