ಆರೋಗ್ಯದ ಅಭಾವ

July 26, 2010 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣ ಹೇಳಿದಹೇಳಿ ಬರವಲೆ ಶುರು ಮಾಡಿದ ಅಜ್ಜಕಾನ ಭಾವ |
ಕೆಪ್ಪಣ್ಣ ಬರವಲೆ ಶುರು ಮಾಡಿರು ಬರೆತ್ತಾ ಇಲ್ಲೆ ಅಭಾವ ||

ಹೇಳಿ ನೀರ್ಕಜೆ ಅಪ್ಪಚ್ಚಿ ಚಿಕ್ಕಮ್ಮನತ್ರೆ ಹೇಳಿದ್ದವಡ ಹೇಳಿ ಪೆರ್ಲದಣ್ಣ ಮನೆಗೆ ಹೋಗಿಪ್ಪಗ ಹೇಳಿದ.
ಎಂತ ಮಾಡುದು ಭಾವ, ಈ ಜೆಂಬ್ರಂಗ, ಒಟ್ಟಿಂಗೆ ಜಾಸ್ತಿ ಇತ್ತಿದಾ. ಮದ್ದು ಬಿಡುಲೂ ಜನ ಸಿಕ್ಕುದು ಕಷ್ಟ. ಬಟ್ಯ ಬತ್ತೆ ಹೇಳಿರೆ ಕೊರಗ್ಗ ತಪ್ಪುಸುತ್ತು. ಹಾಂಗೆ ಗಾಳಿ ಹಾಕುವ ಕೆಲಸವೂ ನವಗೆ ಬಂತಿದಾ.

ಪೆರ್ಲದಣ್ಣನ ಬೇಟಿಗೆ ಬಂದರೆ ಎಡಪ್ಪಾಡಿ ಅಣ್ಣನ ಮಾತಾಡ್ಸಿಯೆ ಹೋಯೆಕ್ಕು.
ಇಲ್ಲದ್ರೆ ಬೈಲಿಲಿ ಸಿಕ್ಕಿಯಪ್ಪಗ ಕೇಳುಗು. ಒಪ್ಪಣ್ಣ ಎರಡು ಸರ್ತಿ ಹಾಂಗೆ ಆಯಿದು.
ನಾವು ಹೆರಟತ್ತು ಮಠಕ್ಕೆ. ತಲುಪಿಯಪ್ಪಗ ಅವ ಇಲ್ಲೆ. ಎಂತದೋ ಸಾಮನು ತಪ್ಪಲೆ ಕಳುಸಿದ್ದಡ ಅತ್ತಿಗೆ. ಮನೆಗೆ ಬಂದು ಹೋಯೆಕ್ಕು ಹೇಳಿದ್ದ, ನವಗೆ ದಾರಿ ಗೊಂತಿದ್ದ. ಕಣ್ಯಾರಲ್ಲಿ ಆದ್ರೆ ಹುಡುಕುಲಕ್ಕು ಅಲ್ಲಿ ಎಡಿಗೊ. ಹಾಂಗೆ ತಲೆಬೆಶಿ ಮಾಡಿಯೊಂಡಿಪ್ಪಗ ಅಲ್ಲಿ ’ಗವ್ಯಚಿಕಿತ್ಸೆ’ ಹೇಳಿ ಬೋರ್ಡ್ ಕಂಡತ್ತು. ಅಲ್ಲಿ ಹೋದರೆ ನಮ್ಮ ಉಡುಪಮೂಲೆ ಡಾಗುಟ್ರ ಬಾವ ಸಿಕ್ಕಿದವು. ಅವರ ಹೆಂಡತಿಯು ಡಾಗುಟ್ರೆ. ನಮ್ಮ ಡಾಗುಟ್ರಕ್ಕಂದ್ರಿಗೆ ಅವರ ಗೊಂತಿಕ್ಕು – ಲೋಕಾಭಿರಾಮ ಮಾತಾಡಿತ್ತು.
ನವಗೂ ವಿಷ್ಯವೂ ಸಿಕ್ಕಿತ್ತು. ಅದುವೇ  ’ಆರೋಗ್ಯದ ಅಭಾವ’.

ಡಾಗುಟ್ರ ಕ್ಲಿನಿಕ್ಕು

ಉಡುಪಮೂಲೆ ಬಾವ ‘ಎಂತ  ಹೇಳುದು ಮಾರಾಯ, ಇಲ್ಲಿ ಊರಿನಾಂಗೆ ಆವುತ್ತಿಲ್ಲೆ. ಊರಿಲಿ ನೀರು ಹರದು ಹೋವುತ್ತು. ಇಲ್ಲಿಯೋ ಅಲ್ಲಲ್ಲಿ ನಿಲ್ಲುತ್ತು. ಅಲ್ಲಿ ನಿಸಿ ಹುಟ್ಟಿ ಜ್ವರ ಶುರು ಆವುತ್ತು. ಈಗ ಎಲ್ಲಿ ಹೋದರೂಜ್ವರದ್ದೇ ಕತೆ. ನಮ್ಮ ಅಹಾರ ಕ್ರಮಂಗಳೂ ವೆತ್ಯಾಸ ಆಯಿದು. ಅದಕ್ಕೆ ನಮ್ಮ ಶರೀರಲ್ಲಿ ವೈರಾಣು ವಿರುದ್ಧ ಹೋರಾಡುವ ಶಕ್ತಿ ಇಲ್ಲೆ. ಅಷ್ಟಪ್ಪಗ ಅಲ್ಲೆ ಆಚೆ ಮಾತ್ರೆ ಕಟ್ಟಿಯೊಂಡಿತ್ತಿದ್ದ ಡಾಗುಟ್ರಕ್ಕ ಎಂತದೋ ಹೇಳಿದವು ಅದು ಕಡಿಮೆ ಆವುತ್ತಡಾ’.
ಎಂತದೋ ಇಂಗ್ಲೀಷ್ ಶಬ್ದ ನವಗೆ ಅರ್ಥ ಆಗ. ಬೈಲಿನ ಡಾಗುಟ್ರಕ್ಕಂಗ ಹೇಳುಗು. ಅದು ಕಮ್ಮಿ ಆದ್ರೆ ಶರೀರಲ್ಲಿ ಶಕ್ತಿ ಕಡಮ್ಮೆ ಆವುತ್ತಡ. ಅವು ಕೊಡ್ತ ಇದ್ದ ಮದ್ದು ನೋಡುವಾಗ ಡಾಗುಟ್ರಕ್ಕ ಕೊಡ್ತ ಮದ್ದಿನ ಹಾಂಗೆ ಕಂಡತ್ತಿಲ್ಲೆ. ಎಂತಪ್ಪ ಹೇಳುತ್ತ ಕುತೂಹಲ ನವಗೆ. ಕೇಳಿತ್ತು. ಅದು ಗವ್ಯೋತ್ಪನ್ನಡ. ಅದರಿಂದ ಕಾನ್ಸರ್ ಕೂಡ ಕಮ್ಮಿ ಆಯಿದು ಹೇಳಿದವು. ಮಠಲ್ಲಿ ಮಾಡುದಡ.

ಅಂತು ಎಡಪ್ಪಾಡಿ ಅಣ್ಣ ಬಪ್ಪಲ್ಲಿವರೆಗೆ ಸುದ್ದಿ ಮಾತಾಡಿತ್ತು.
ಬಂದವೆ ಹೇಳಿದವು, ನಮ್ಮ ಪೆರ್ಮುಖ ಡಾಗುಟ್ರ ಇದ್ದವಲ್ಲದೊ ಅದೇ ಕಾಸ್ರೋಡಿಲಿ – ಸ್ವಾಶಕೋಶ ಡಾಗುಟ್ರು, ಅವರ ಅಪ್ಪಚ್ಚಿ ಮಗಂಗೆ ಅದೇವದೋ ಜ್ವರ ಬಂದು ಮಠದ ಕೆಳಾಣ ಹೊಡೆಲಿ ಇಪ್ಪ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಕಮ್ಮಿ ಆಗದ್ದೇ ಊರಿಂಗೆ ಹೆರಡುತ್ತ ಇದ್ದವು ಹೇಳಿ. ಅಲ್ಲಿ ಡಾಗುಟ್ರಿಂಗೆ ಎಂತ ಜ್ವರ ಹೇಳಿಯೆ ಗೊಂತಾಯಿದಿಲ್ಲೆಡ. ಬಿಲ್ಲು ಮಾತ್ರ ದೊಡ್ಡದಿತ್ತಿದ್ದಡ.
ಎಡಪ್ಪಾಡಿ ಅಣ್ಣಂಗೆ ನೋಡಿಯೆ ತಲೆ ತಿರುಗಿತ್ತಡ. ಮತ್ತೆ ಅವಂಗೆ ಕೊಡೆಯಾಲಲ್ಲಿ ಮದ್ದು ಮಾಡಿ ಕಮ್ಮಿ ಆಯಿದಡ (ದೊಡ್ಡಣ್ಣ ಸಮೋಸ ಮಾಡಿದ್ದವಿದಾ).

ಮೈಲಿ ಮಡಗಿ ಕೆಮಿಲಿ ಕೇಳುದು

ಇನ್ನು ಎಲ್ಲಿ ಕೇಳಿರೂ ಬಿ.ಪಿ, ಡಯಾಬಿಟಿಸ್, ಸೈನಸ್, ಮೈಕೈಬೇನೆ ಹೇಳ್ತವು ಜಾಸ್ತಿ ಆವುತ್ತ ಇದ್ದವು.
ನಾವು ಯೋಚನೆ ಮಾಡಿತ್ತು ಎಂತಕೆ ಹೀಂಗೆಲ್ಲ ಅಪ್ಪದು ಹೇಳಿ.
ಇದಕ್ಕೆಲ್ಲ ಕಾರಣ ನಮ್ಮ ಆಹಾರ ತೆಕ್ಕೊಂಬ ಸಮಯ, ಸರಿ ನಿದ್ದೆ ಮಾಡದ್ದಿಪ್ಪದು. ಒಟ್ಟಿಂಗೆ ಸರಿ ಜೀರ್ಣ ಆಗದ್ದ ಕುರೆ ಆಹಾರ ತಿಂದದು ಕಾರಣ ಆದಿಕ್ಕು.
ಹೀಂಗಿಪ್ಪಗ ಆರೋಗ್ಯದ ಅಭಾವ ಆಗದ್ದೆ ಇಕ್ಕೊ.

ನಮ್ಮ ಆರೋಗ್ಯ ನಮ್ಮ ಕೈಲೆ ಇದ್ದು.ಸರಿಯಾದ ಸಮಯಕ್ಕೆ ಸರಿಯಾದ ಆಹಾರ ತೆಕ್ಕೊಂಬದು, ಒಳ್ಳೆ ನಿದ್ದೆ ಮಾಡುದು.
ರಜಾ ವ್ಯಾಯಮ ಮಾಡಿರೆ ಆರೋಗ್ಯ ಅಭಾವ ಆಗ. ಇನ್ನು ಎಂತೆಲ್ಲ ಮಾಡೆಕ್ಕು ಹೇಳಿ ಡಾಗುಟ್ರಕ್ಕಂಗ ಹೇಳುತ್ತಾ ಇದ್ದವು. ನಾವು ಅದಷ್ಟು ಜಾಗ್ರತೆ ಮಾಡಿ ಆರೋಗ್ಯ ಅಭಾವ ಆಗದ್ದ ಹಾಂಗೆ ನೋಡಿಕೊಂಬ ಆಗದೋ!
ಚಿತ್ರ ಕೃಪೆ : ಅಂತರ್ಜಾಲ


ನಿಂಗಳ
ಅಜ್ಜಕಾನ ಭಾವ

ಆರೋಗ್ಯದ ಅಭಾವ, 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಡೈಮಂಡು ಭಾವ
  ಕೆಪ್ಪಣ್ಣ

  ಚೆಲಾ!! ಅಜ್ಜಕಾನ ಬಾವಂದೆ ದ್ವಿಪದಿಂದಲೇ ಲೇಖನ ಸುರು ಮಾಡಿದ್ದನ್ನೇ. ಕೊಶಿ ಆತು. ಕಂಡಿತ ಬಾವ ನೀನಿ ಹೇಳಿದಾಂಗೆ ನಮ್ಮ ಆರೋಗ್ಯ ನಮ್ಮ ಕೈಲಿ ಇದ್ದು. ಆದರೆ ನಮ್ಮವಕ್ಕೆ ಅರಡಿಯಕ್ಕನ್ನೇ ಆರೋಗ್ಯವ ಹಾಳು ಮಾಡಿಕೊಳ್ತವು..

  ಧನ್ಯವಾದ ಬಾವಾ..
  ಅಭಾವಂಗ ಹೀಂಗೆ ಬತ್ತಾನೇ ಇರಲಿ

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಎಂತ ಮಾ
  ಡುದು ಬಾವ ದ್ವಿಪದಿ ಶುರು ಮಾಡಿದ ನೀರ್ಕಜೆ ಅಪ್ಪಚ್ಚಿ ಬೈಲು ಬಿಟ್ಟು ಹೋದಾಂಗಿದ್ದು.. ಮುಂದುವರೆಸೆಡದೋ!

  [Reply]

  VN:F [1.9.22_1171]
  Rating: 0 (from 0 votes)
 2. ಸುವರ್ಣಿನೀ ಕೊಣಲೆ

  ಸಮಯೋಚಿತ ಲೇಖನ :) ಜೀವನದ ಬಗ್ಗೆ, ಆರೋಗ್ಯದ ಬಗ್ಗೆ ಎಲ್ಲೋರಿಂಗೂ ಜ್ಞಾನ ಇರೆಕಾದ್ದು ತುಂಬಾ ಅಗತ್ಯ. ಕೆಲವು ಜೆನ ಇದ್ದವು, ಅವ್ವು ಯಾವುದೇ ಪಥ್ಯ ಮಾಡ್ಲೆ ತಯಾರಿರ್ತವಿಲ್ಲೆ, ಅಥವಾ ಅವರ ಜೀವನ ಶೈಲಿಯ ರಜ್ಜವೂ ಬದಲ್ಸುಲೆ ಅವರಿಂದ ಎಡಿಯ, ಆದರೆ ಡಾಕ್ಟ್ರಕ್ಕೊ ಅವರ ಸಮಸ್ಯೆಯ ಸರಿ ಮಾಡೆಕ್ಕು !!! ಅವ್ವು ಸರಿ ಆಗದ್ರೆ ತಪ್ಪು ವೈದ್ಯರಿಂದು!!
  ಇನ್ನು ಕೆಲವು ಸರ್ತಿ ಎಂತ ಅಪ್ಪದು ಹೇಳಿರೆ ಜೆನಕ್ಕೆ ಸಮಸ್ಯೆ ಎಂತರ ಹೇಳಿಯೇ ಗೊಂತಿರ್ತಿಲ್ಲೆ!! ತಿಳ್ಕೊಂಬ ಪ್ರಯತ್ನವೂ ಮಾಡ್ತವಿಲ್ಲೆ..ಇದರಿಂದಾಗಿ ತೊಂದರೆ ಹೆಚ್ಚಪ್ಪದಲ್ಲದಾ? ಎನ್ನ ಅಭಿಪ್ರಾಯ ಎಂತ ಹೇಳಿರೆ…ಪ್ರತಿಯೊಬ್ಬಂಗೂ ನಮ್ಮ ನಮ್ಮ ಶರೀರದ ಬಗ್ಗೆ ರಜ್ಜ ಆದರೂ ಗೊಂತಿರೆಕ್ಕು :) ಒಟ್ಟಿಂಗೇ, ಎಂತಾರು ಆರೋಗ್ಯದ ತೊಂದರೆ ಇದ್ದರೆ..ಆ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಪಡಕ್ಕೊಳ್ಳೆಕು. ಅಂಬಗ ಶುರು ಆದ ಸಮಸ್ಯೆ ದೊಡ್ಡ ಅಪ್ಪದರ ತಡವಲೆ ಎಡಿಗು.

  [Reply]

  ನೆಗೆಗಾರ°

  ನೆಗೆಗಾರ° Reply:

  { ಸಮಸ್ಯೆ ದೊಡ್ಡ ಅಪ್ಪದರ ತಡವಲೆ ಎಡಿಗು }

  ಬೆಂಗುಳೂರಿನ ಕೆಲವು ಆಸ್ಪತ್ರೆಗೊ ಬಯಂಕರ ಅಪಾಯ ಅಡ್ಡ!
  ಅವಕ್ಕೆ ನಾವು ದೊಡ್ಡ ಅಪ್ಪದನ್ನೂ ತಡವಲೆ ಎಡಿಗಡ..!!

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ನೆಗೆ ಬಾವ ಎಂತ ಮಾಡುದು ನಮ್ಮ ಬೈಲಿಂದ ಹೋದ ಮಾಣಿಗೆ ಹೀಂಗೆ ಮಾಡಿದವನ್ನೇ ಹೇಳಿ ಆವುತ್ತು..

  [Reply]

  VN:F [1.9.22_1171]
  Rating: 0 (from 0 votes)
  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ನಿಂಗೊ ಹೇಳಿದ್ದು ಸರಿ ಡಾಗುಟ್ರಕ್ಕ.. ಪಠ್ಯ ಹೇಳುಲೆ ನವಗರಡಿಯ. ಹೇಳಿರೆ ಸರಿಯೂ ಆಗ. ಅದರ ಬಗ್ಗೆ ಡಾಗುಟ್ರಕ್ಕಂಗಲೇ ಹೇಳೆಕ್ಕಷ್ಟ್ಟೆ..

  [Reply]

  VN:F [1.9.22_1171]
  Rating: 0 (from 0 votes)
 3. ನೀರ್ಕಜೆ ಚಿಕ್ಕಮ್ಮ
  ನೀರ್ಕಜೆ ಚಿಕ್ಕಮ್ಮ

  ಅಕ್ಕಾತ ಅಜ್ಜಕಾನ ಭಾವ ನಿಂಗೊ ಸಾಧಾರಣ ಅಲ್ಲನ್ನೇ ….. ಸೂಪರ್ ಆಯಿದು ಲೇಖನ…..

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಇಲ್ಲದ್ರೇ ಬೈಲಿನವರ ಸೋಪ್ಟ್ವೇರುಗೊ ಬಿಡುಗೋ…

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಈ ಭಾವ ಬೈಲುವಾರಿಧಿ ಚಂದ್ರನ ಹಾಂಗೆ.. ಬೈಲು ಹೇಳುತ್ತ ಸಮುದ್ರದ ಅಲೆ ಉಕ್ಕಿ ಹರಿವ ಹಾಂಗೆ ಮಾಡುತ್ತಾ ಹುಣ್ಣಿಮೆಯ ಚಂದ್ರನೊ ಹೇಳಿ.ಒಪ್ಪದ ಸುರಿಮಳೆ ಕಾಣುತ್ತಾ ಇದ್ದು ಆಟಿ ತಿಂಗಳಿಲಿ. ಲೇಖನ ಲಾಯಿಕ್ಕಿದ್ದು .ಶೈಲಿ ಒಳ್ಳೆದಿದ್ದು.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಯೇ ಮುಳಿಯ ಬಾವ ನಿಂಗೊ ಒಪ್ಪ ಬರೆದಪ್ಪಗ ಉತ್ತರ ಕೊಡದ್ರೆ ಆವುತ್ತೊ.. ಆಟಿಲಿ ಮಳೆ ಜೋರಿಪ್ಪ ಹಾಂಗೆ ಬೈಲಿಲಿ ಕ್ಪ್ಳೆ ರೋಗದೇ ಜಾಸ್ತಿ ಅನ್ನೆ.. ಮದ್ದು ಬಿಡುಲೆ ಬತ್ತೆ ಹೇಳಿದ ಬಟ್ಯನು ಇಲ್ಲೆ, ಬೆಶಿಲು ಕಾಂಬಗ ಮತ್ತೆ ಎಂತ ಮಾಡುದು.. ಪುಣ್ಯಕ್ಕೆ ಇಂದು ಕರೆಂಟು ಇದ್ದು.. ಒಪ್ಪ ಕೊಡುಲಾತು.. ಎಂತ ಹೇಳ್ತಿ..

  ಮುಳಿಯ ಭಾವ

  ರಘು ಮುಳಿಯ Reply:

  ಈಗ ಗಾಳಿ ಹಾಕುಲೆ ಜೆನ ಬೇಡಡ,ಶುದ್ದಿ ಎತ್ತಿದ್ದೋ ಭಾವಾ. ಹೊಸ ಪಂಪು ಬೈನ್ದಡ,ಒಳ್ಳೆ ಫೋರ್ಸಿಲಿ ಮದ್ದು ರಟ್ಟುತ್ತದ ,ಗೋಪಣ್ಣ ಹೇಳಿದ.ಇನ್ನು ಮರ ಹತ್ತುಲೆ ಒಂದು ವ್ಯವಸ್ಥೆ ಮಾಡಿರೆ,ಬಟ್ಯನ ನಂಬಿಗೊಂಡು ಕೂರೆಕ್ಕಾಗಿ ಇಲ್ಲೆ.

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಅಪ್ಪಡಾ ಬಾವಾ ನಿನ್ನೆ ಮಾಡಾವು ಜೋಯಿಸಜ್ಜನಲ್ಲಿ ಕಲ್ಮಡ್ಕ ಅನಂತ ಸಿಕ್ಕಿ ಹೇಳಿದಾ. ಅವಂಗೆ ಅದೆಲ್ಲ ಅರಡಿಗು.. ನಮ್ಮ ಬೈಲಿ ಈಗ ಬಪ್ಪಲೆ ಶುರು ಆಯಿದಷ್ಟೆ ಅಡಾ..

  VN:F [1.9.22_1171]
  Rating: 0 (from 0 votes)
  ಡಾಮಹೇಶಣ್ಣ

  ಮಹೇಶ Reply:

  {ಬೈಲುವಾರಿಧಿ ಚಂದ್ರನ ಹಾಂಗೆ}
  ವ್ಹಾ ! ಎಂಥಾ ಉಪಮೆ!!

  ಉಪಮಾ ರಘುಭಾವಸ್ಯ!! :)

  ಒಪ್ಪಣ್ಣ

  ಒಪ್ಪಣ್ಣ Reply:

  ಡಾಮಹೇಶಣ್ಣಾ ಸಂತಿಃ ತ್ರಯೋಗುಣಾಃ …? :-)

  ಡಾಮಹೇಶಣ್ಣ

  ಮಹೇಶ Reply:

  ಆನು ಪೂರ್ತಿ ಹೇಳಿ ಆಯಿದಿಲ್ಲೆ, ಇದಾ,

  ಉಪಮಾ ರಘುಭಾವಸ್ಯ!
  ಅಭಾವಸ್ಯೋಪ್ಪವರ್ಷಣಂ | (ಒಪ್ಪದ ಸುರಿಮಳೆ ಅಜ್ಜಕಾನ ಭಾವಂದು!)
  ಹಸನಂ ನೆಗೆಗಾರಸ್ಯ !! (ಈ ವಾರಿಧಿಲ್ಲಿ ನೆಗೆಯ ಅಲೆಗಳ ಕಿತಾಪತಿ ನೆಗೆಗಾರಂದಲ್ಲದೋ?)
  ಒಪ್ಪಣ್ಣೇsಸ್ತಿ ಗುಣತ್ರಯಂ || (ಮೂರು ಹೇಳಿ ಹೇಳಿದ್ದಷ್ಟೇ, ಒಪ್ಪಣ್ಣನಲ್ಲಿ ಸಾವಿರಾರು ಗುಣಂಗ ಇದ್ದವು!) :)

  ಶ್ರೀಅಕ್ಕ°

  ಶ್ರೀದೇವಿ ವಿಶ್ವನಾಥ್ Reply:

  ಡಾಮಹೇಶಣ್ಣಾ..,.{ಒಪ್ಪಣ್ಣೇsಸ್ತಿ ಗುಣತ್ರಯಂ || (ಮೂರು ಹೇಳಿ ಹೇಳಿದ್ದಷ್ಟೇ, ಒಪ್ಪಣ್ಣನಲ್ಲಿ ಸಾವಿರಾರು ಗುಣಂಗ ಇದ್ದವು!)} ಆಹೋ … ಬಹು ಸಮ್ಯಕ್ ಉಕ್ತವಾನ್…!!!!

  ಡಾಮಹೇಶಣ್ಣ

  ಮಹೇಶ Reply:

  ಆಹಾ!
  ಒಪ್ಪಣ್ಣ-ಜಾಲಪುಟೇ ಸಂಸ್ಕೃತ ತರಂಗಾಃ !! :)

  ಬಟ್ಯ Reply:

  ಪಂಡಿತೆರು ಪಂಡಿನ ಎನ್ನ ಮಂಡೆಗು ಪೋಪಜ್ಜಿ..

  VA:F [1.9.22_1171]
  Rating: 0 (from 0 votes)
  ಡಾಮಹೇಶಣ್ಣ

  ಮಹೇಶ, ಕೂಳಕ್ಕೋಡ್ಲು Reply:

  ಅಪ್ಪೋ ಬಟ್ಯಾ, ನೀನು ಎಂಗಳ ಭಾಷೆ ಕಲ್ತದು ಹೇಂಗೆ? ಮೊದ್ಲು “ಗೊಂತಾವ್ತಿಲ್ಲೇ” ಹೇಳಿಯೊಂಡಿತ್ತೆ? ಮತ್ತೆ ಕೇಳಿ ಕೇಳಿ ಈಗ ನೀನೆ ಮಾತಾಡ್ಲೆ ಸುರು ಮಾಡಿದ್ದೆ, ಅಲ್ಲದ?
  ಹಾಂಗೆ ಸಂಸ್ಕೃತವುದೇ ಕೇಳಿ ಕೇಳಿ ಮಾತಾಡಿ ಮಾತಾಡಿ ಬಕ್ಕು, ಅರ್ಥ ಆತೋ?

  VA:F [1.9.22_1171]
  Rating: 0 (from 0 votes)
 4. Rajanarayana Halumajalu

  appa bhava? Bangulurili Shitajwara bandare 4dina aspatreli admit madtavada ??

  Monne aru bailinda bangaluringe hodavu helyondittiddavappa………….

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ವಿಷ್ಯ ಅಭಾವಲ್ಲಿ ಬರೆದ್ದೆ ಬಾವಾ.. ದಿನ ಎಷ್ಟು ಹೇಳಿ ಬರದ್ದಿಲ್ಲೆ .. ಎಡಪ್ಪಾಡಿ ಬಾವಾ ಆಸ್ಪತ್ರೆಗೆ ಹೋದ್ದು ನಾಲ್ಕನೆ ದಿನಾ ಹೇಳಿದ್ದ..

  [Reply]

  VN:F [1.9.22_1171]
  Rating: 0 (from 0 votes)
 5. ಬಟ್ಯ

  { ಹಾಂಗೆ ಸಂಸ್ಕೃತವುದೇ ಕೇಳಿ ಕೇಳಿ ಮಾತಾಡಿ ಮಾತಾಡಿ ಬಕ್ಕು, ಅರ್ಥ ಆತೋ? }

  ಎಣಗೆ ಒಂದಾಣೆಲಿ ಪಂಡೀತ ಬಾಣಾರ್ ಹೇಲಿದ್ದು ಗೊಂತಿದ್ದು. “ಪತಟು ಸಸ್ಕ್ರುತಮ್ ವತಟು ಸಸ್ಕ್ರುತಮ್” ಸರಿ ಉಂಡೊ

  [Reply]

  ಶ್ರೀಶಣ್ಣ

  ಶ್ರೀಶ. ಹೊಸಬೆಟ್ಟು Reply:

  ಹೀಗಂಗೆ ಹಿಸ್ಟೆ ಸಾಕು. ದುಂಬಗು ನೋಡುವ. ಹಾಗದೊ? :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುಪವನಜಮಾವಕೇಜಿಮಾವ°ಚೆನ್ನಬೆಟ್ಟಣ್ಣಚೆನ್ನೈ ಬಾವ°ಜಯಶ್ರೀ ನೀರಮೂಲೆದೀಪಿಕಾಎರುಂಬು ಅಪ್ಪಚ್ಚಿಕಜೆವಸಂತ°ಡಾಮಹೇಶಣ್ಣತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°ಶ್ರೀಅಕ್ಕ°ನೆಗೆಗಾರ°ಯೇನಂಕೂಡ್ಳು ಅಣ್ಣಒಪ್ಪಕ್ಕಪಟಿಕಲ್ಲಪ್ಪಚ್ಚಿಶರ್ಮಪ್ಪಚ್ಚಿಸಂಪಾದಕ°ಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಅನಿತಾ ನರೇಶ್, ಮಂಚಿಡಾಗುಟ್ರಕ್ಕ°ದೇವಸ್ಯ ಮಾಣಿಮುಳಿಯ ಭಾವದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ